‘ಕೆಡಿ’ ಸಿನಿಮಾದಲ್ಲಿ ಕಾಲ ಭೈರವನಾಗಲು ಸುದೀಪ್ ಒಪ್ಪಿದ್ದು ಯಾಕೆ? ಸಿಕ್ತು ಉತ್ತರ – Kannada News | This is why Kichcha Sudeep agreed to do cameo in Dhruva Sarja starrer KD movie by Jogi Prem

ನಟ ಕಿಚ್ಚ ಸುದೀಪ್ (Kichcha Sudeep) ಅವರು ‘ಕೆಡಿ’ ಸಿನಿಮಾದಲ್ಲಿ ಅತಿಥಿ ಪಾತ್ರ ಮಾಡಿದ್ದಾರೆ. ಕಾಲ ಭೈರವ ಎಂಬುದು ಈ ಪಾತ್ರದ ಹೆಸರು. ಸುದೀಪ್ ನಟಿಸಿದ್ದಾರೆ ಎಂಬುದು ಗೊತ್ತಾದ ಕೂಡಲೇ ಅಭಿಮಾನಿಗಳಿಗೆ ಈ ಸಿನಿಮಾ ಮೇಲೆ ನಿರೀಕ್ಷೆ ಜಾಸ್ತಿ ಆಗಿದೆ. ಧ್ರುವ ಸರ್ಜಾ (Dhruva Sarja) ಅಭಿನಯದ ಈ ಸಿನಿಮಾದಲ್ಲಿ ಅನೇಕ ಸ್ಟಾರ್ ಕಲಾವಿದರು ಅಭಿನಯಿಸಿದ್ದಾರೆ. ಸಂಜಯ್ ದತ್, ಶಿಲ್ಪಾ ಶೆಟ್ಟಿ ಅವರಂತಹ ಪ್ಯಾನ್ ಇಂಡಿಯಾ ಸ್ಟಾರ್​ಗಳು ಕೂಡ ‘ಕೆಡಿ’ ಸಿನಿಮಾದ (KD Movie) ಪಾತ್ರವರ್ಗದಲ್ಲಿ ಇದ್ದಾರೆ. ಅಷ್ಟಕ್ಕೂ ಸುದೀಪ್ ಅವರು ಈ ಸಿನಿಮಾದಲ್ಲಿ ನಟಿಸಲು ಒಪ್ಪಿಕೊಂಡಿದ್ದು ಯಾಕೆ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಸುದ್ದಿಗೋಷ್ಠಿಯಲ್ಲಿ ಅವರು ಈ ಬಗ್ಗೆ ಮಾತನಾಡಿದ್ದಾರೆ.

ಜೋಗಿ ಪ್ರೇಮ್ ನಿರ್ದೇಶನದಲ್ಲಿ ‘ಕೆಡಿ’ ಸಿನಿಮಾ ಮೂಡಿಬಂದಿದೆ. ಸುದೀಪ್ ಅವರು ಪ್ರೇಮ್ ಬಗ್ಗೆ ಮಾತನಾಡಿದರು. ‘ಮೊದಲು ನಾನು ಪ್ರೇಮ್ ಬಗ್ಗೆ ಹೇಳಲು ಇಷ್ಟಪಡುತ್ತೇನೆ. ಅವರು ಸಿನಿಮಾ ಬಗ್ಗೆ ಅಪಾರ ಉತ್ಸಾಹ, ಪ್ರೀತಿ ಇರುವಂತಹ ನಿರ್ದೇಶಕ. ಆಗುಹೋಗುಗಳ ಮಧ್ಯೆ ಒಂದು ಒಳ್ಳೆಯ ಸಿನಿಮಾವನ್ನು ನೀಡಲು ಅವರು ಪ್ರಯತ್ನಿಸುತ್ತಾರೆ’ ಎಂದು ಸುದೀಪ್ ಮಾತು ಆರಂಭಿಸಿದರು.

‘ಪ್ರೇಮ್ ಅವರ ಪ್ರಯತ್ನವನ್ನು ನಾವು ಈಗ ನೋಡುತ್ತಿರುವುದಲ್ಲ. ಅವರ ಮೊದಲೇ ಸಿನಿಮಾದಿಂದಲೇ ನೋಡಿಕೊಂಡು ಬಂದಿದ್ದೇವೆ. ಇಂದಿನವರೆಗೂ ಅವರು ನನಗೆ ಒಬ್ಬ ವ್ಯಕ್ತಿಯಾಗಿ ಇಷ್ಟ. ವ್ಯಕ್ತಿ ಇಷ್ಟ ಆದಮೇಲೆ ಅವರಿಗಾಗಿ ನಾವು ಏನು ಬೇಕಾದರೂ ಮಾಡುತ್ತೇನೆ. ಹಾಗಿರುವಾಗ ಕಾಲ ಭೈರವ ಪಾತ್ರ ಒಂದು ಸಣ್ಣ ಸಂಗತಿ ಅಷ್ಟೇ. ಅದು ನಾವು ಅವರಿಗೆ ಮಾಡಿದ ಉಪಕಾರ ಅಲ್ಲ. ಅವರು ಸಂಪಾದಿಸಿದ ಪ್ರೀತಿ ಅದು’ ಎಂದು ಸುದೀಪ್ ಹೇಳಿದರು.

‘ಅವರು ನನಗೆ ಧನ್ಯವಾದ ಹೇಳುತ್ತಿದ್ದಾರೆ. ಆದರೆ ನಾನು ಏನೂ ಉಪಕಾರ ಮಾಡಿಲ್ಲ. ಕನ್ನಡ ಚಿತ್ರರಂಗದಲ್ಲಿ ಒಂದು ಅದ್ದೂರಿಯಾದ ಸಿನಿಮಾ ಮೂಡಿಬರುತ್ತಿದೆ. ಅದರಲ್ಲಿ ನಾನು ಕೂಡ ಭಾಗವಾಗಲು ಅವಕಾಶ ಸಿಕ್ಕಿದೆ. ನನ್ನ ಸಹೋದರ ಧ್ರುವ ಸರ್ಜಾ ನಟನೆಯ ಇಷ್ಟು ದೊಡ್ಡ ಸಿನಿಮಾ ಸಿದ್ಧವಾಗುವಾಗ ಅದರಲ್ಲಿ ನಾನು ಕೂಡ ಇರಬೇಕು ಎನಿಸಿತು’ ಎಂದಿದ್ದಾರೆ ಕಿಚ್ಚ ಸುದೀಪ್.

ಇದನ್ನೂ ಓದಿ: ಅಣ್ಣಾವ್ರ ಹುಟ್ಟೂರಲ್ಲಿ ಕಿಚ್ಚ ಸುದೀಪ್​ಗೆ ಗುಡಿ ಕಟ್ಟಿ ನಿತ್ಯ ಆರಾಧನೆ ಮಾಡ್ತಾರೆ ಈ ಅಭಿಮಾನಿ!

‘ನೀವೆಲ್ಲರೂ ಸಿನಿಮಾ ನೋಡಬೇಕು. ಚಿರು ಮತ್ತು ಧ್ರುವ ಅವರನ್ನು ಬಹಳ ವರ್ಷದಿಂದ ನಾನು ನೋಡಿಕೊಂಡು ಬಂದಿದ್ದೇನೆ. ಧ್ರುವ ಜೊತೆ ತೆರೆ ಹಂಚಿಕೊಳ್ಳಲು ನನಗೆ ಅವಕಾಶ ಸಿಕಿದ್ದು ಗ್ರೇಟ್. ಚಿರು ಜೊತೆಯೂ ನಾನು ಕೆಲಸ ಮಾಡಿದ್ದೆ. ಪ್ರೇಮ್ ಇದ್ದರೆ ಆ ಸೆಟ್​​ನಲ್ಲಿ ಅದ್ಭುತವಾದ ಎನರ್ಜಿ ಇರುತ್ತದೆ. ನಾನು ವಿಲನ್ ಸಿನಿಮಾ ಮಾಡಿದಾಗ ಅವರ ಜೊತೆ ಕೆಲಸ ಎಂಜಾಯ್ ಮಾಡಿದ್ದೆ’ ಎಂದು ಸುದೀಪ್ ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದ ಭಾರತ-ನ್ಯೂಜಿಲೆಂಡ್; ದೇಶಕ್ಕಾಗುವ ಪ್ರಯೋಜನಗಳೇನು? – Kannada News | India and New Zealand sign free trade agreement FTA How it will boost investment and opportunities

ನವದೆಹಲಿ, ಏಪ್ರಿಲ್ 27: ಭಾರತ ಮತ್ತು ನ್ಯೂಜಿಲೆಂಡ್​ ದೇಶಗಳು ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿವೆ. ಹೊಸ ರಫ್ತು ಮಾರುಕಟ್ಟೆಗಳನ್ನು ತೆರೆಯುವ ಮತ್ತು ವ್ಯಾಪಾರ ನಿಯಮಗಳನ್ನು ಸರಾಗಗೊಳಿಸುವ ಮಹತ್ವದ ಕ್ರಮದಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ಮುಕ್ತ ವ್ಯಾಪಾರ ಒಪ್ಪಂದಕ್ಕೆ (FTA) ಸಹಿ ಹಾಕಿವೆ. ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ (Piyush Goyal) ಮತ್ತು ನ್ಯೂಜಿಲೆಂಡ್‌ನ ವ್ಯಾಪಾರ ಮತ್ತು ಹೂಡಿಕೆ ಸಚಿವ ಟಾಡ್ ಮೆಕ್‌ಕ್ಲೇ ಅವರ ಸಮ್ಮುಖದಲ್ಲಿ ಈ ಒಪ್ಪಂದಕ್ಕೆ ಸಹಿ ಹಾಕಲಾಯಿತು.

ಈ ಮುಕ್ತ ವ್ಯಾಪಾರ ಒಪ್ಪಂದ ನ್ಯೂಜಿಲೆಂಡ್‌ಗೆ ಭಾರತದ ರಫ್ತಿನ ಶೇ.100ರಷ್ಟು ಸುಂಕ-ಮುಕ್ತ ಪ್ರವೇಶವನ್ನು ಒದಗಿಸುತ್ತದೆ. ಇದು ಎಲ್ಲಾ ಸುಂಕ ರೇಖೆಗಳು ಅಥವಾ ಉತ್ಪನ್ನ ವರ್ಗಗಳನ್ನು ಒಳಗೊಂಡಿದೆ. ಇದು ಜವಳಿ, ಉಡುಪು, ಚರ್ಮ, ಪಾದರಕ್ಷೆಗಳು, ರತ್ನಗಳು ಮತ್ತು ಆಭರಣಗಳು, ಎಂಜಿನಿಯರಿಂಗ್ ಸರಕುಗಳು ಮತ್ತು ಸಂಸ್ಕರಿಸಿದ ಆಹಾರಗಳಂತಹ ವಲಯಗಳಲ್ಲಿ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುವ ಮೂಲಕ ಎಂಎಸ್‌ಎಂಇಗಳು ಮತ್ತು ಉದ್ಯೋಗವನ್ನು ಗಮನಾರ್ಹವಾಗಿ ಹೆಚ್ಚಿಸುವ ನಿರೀಕ್ಷೆಯಿದೆ.

ಇದನ್ನೂ ಓದಿ: ಅಮೆರಿಕದೊಂದಿಗೆ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದ ಬಾಂಗ್ಲಾದೇಶ; ಟ್ಯಾರಿಫ್ ಶೇ. 19ಕ್ಕೆ ಇಳಿಕೆ

ಭಾರತ ಮತ್ತು ನ್ಯೂಜಿಲೆಂಡ್ ಎರಡೂ ತಮ್ಮ ನಡುವೆ ವ್ಯಾಪಾರ ಮಾಡುವ ಗರಿಷ್ಠ ಸಂಖ್ಯೆಯ ಸರಕುಗಳ ಮೇಲಿನ ಕಸ್ಟಮ್ಸ್ ಸುಂಕವನ್ನು ಕೊನೆಗೊಳಿಸಲು ಅಥವಾ ತೀವ್ರವಾಗಿ ಕಡಿಮೆ ಮಾಡಲು ಒಪ್ಪಿಕೊಂಡಿವೆ. ಭಾರತ-ನ್ಯೂಜಿಲೆಂಡ್ ವ್ಯಾಪಾರ ಒಪ್ಪಂದ ದ್ವಿಮುಖ ವಾಣಿಜ್ಯ ಮತ್ತು ಹೂಡಿಕೆಗಳಿಗೆ ಅಡ್ಡಿಯಾಗುವ ಅಥವಾ ಉತ್ತೇಜಿಸುವ ಅಡೆತಡೆಗಳನ್ನು ಕಡಿತಗೊಳಿಸಲಿದೆ.

“ಈ ಒಪ್ಪಂದವು ಭಾರತದಲ್ಲಿ 20 ಶತಕೋಟಿ ರೂ. ಹೂಡಿಕೆಯನ್ನು ಸುಗಮಗೊಳಿಸುತ್ತದೆ, ವ್ಯಾಪಾರ, ಸೇವೆಗಳು, ಹೂಡಿಕೆ, ನಾವೀನ್ಯತೆ, ಚಲನಶೀಲತೆ, ಕೃಷಿ ಉತ್ಪಾದಕತೆ ಮತ್ತು ಶಿಕ್ಷಣದಲ್ಲಿ ನಮ್ಮ ಸಹಕಾರವನ್ನು ಆಳಗೊಳಿಸುತ್ತದೆ. ಕೌಶಲ್ಯಪೂರ್ಣ ಪ್ರತಿಭೆಗಳು ಮತ್ತು ವಿದ್ಯಾರ್ಥಿಗಳಿಗೆ ಮಾರ್ಗಗಳನ್ನು ಸೃಷ್ಟಿಸುತ್ತದೆ” ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಹೇಳಿದ್ದಾರೆ.

ಇದನ್ನೂ ಓದಿ: ಜಾಗತಿಕ ರಾಜಕೀಯದಲ್ಲಿ ಬದಲಾದ ಲೆಕ್ಕಾಚಾರ, ಪಾಕಿಸ್ತಾನ ಭೇಟಿಗೆ ಇರಾನ್ ಒಪ್ಪಂದದ ಷರತ್ತು ವಿಧಿಸಿದ ಟ್ರಂಪ್

ಭಾರತಕ್ಕೆ ಮುಕ್ತ ವ್ಯಾಪಾರ ಒಪ್ಪಂದದ ಪ್ರಯೋಜನಗಳು:

– ಜವಳಿ, ಪ್ಲಾಸ್ಟಿಕ್ ವಸ್ತುಗಳು, ಚರ್ಮ ಮತ್ತು ಎಂಜಿನಿಯರಿಂಗ್ ಸರಕುಗಳಂತಹ ಕಾರ್ಮಿಕ-ತೀವ್ರ ವಲಯಗಳು ಸೇರಿದಂತೆ ಎಲ್ಲಾ ಭಾರತೀಯ ಸರಕುಗಳು ನ್ಯೂಜಿಲೆಂಡ್‌ನಲ್ಲಿ ಶೂನ್ಯ ಸುಂಕಕ್ಕೆ ಪ್ರವೇಶಿಸಲಿವೆ. ಇದರ ಸರಾಸರಿ ಆಮದು ಸುಂಕ ಕೇವಲ ಶೇ. 2.3ರಷ್ಟು ಆಗಿದೆ.

– ನ್ಯೂಜಿಲೆಂಡ್ 15 ವರ್ಷಗಳಲ್ಲಿ 20 ಶತಕೋಟಿ USD ಹೂಡಿಕೆ ಮಾಡಲು (FDI) ಬದ್ಧವಾಗಿದೆ.

-ಐಟಿ ಸೇವೆಗಳು, ವೃತ್ತಿಪರ ಸೇವೆಗಳು, ಶಿಕ್ಷಣ, ಹಣಕಾಸು ಸೇವೆಗಳು, ಪ್ರವಾಸೋದ್ಯಮ, ನಿರ್ಮಾಣ ಮತ್ತು ಇತರ ವ್ಯಾಪಾರ ಸೇವೆಗಳು ಸೇರಿದಂತೆ ವ್ಯಾಪಕ ಶ್ರೇಣಿಯ ಹೆಚ್ಚಿನ ಮೌಲ್ಯದ ಸೇವಾ ವಲಯಗಳಲ್ಲಿ ಭಾರತ ಬದ್ಧತೆಗಳನ್ನು ಪಡೆದುಕೊಳ್ಳಲಿದೆ.

-FTA ಕೌಶಲ್ಯಪೂರ್ಣ ಉದ್ಯೋಗಗಳಲ್ಲಿ ಭಾರತೀಯ ವೃತ್ತಿಪರರಿಗೆ ಹೊಸ ತಾತ್ಕಾಲಿಕ ಉದ್ಯೋಗ ಪ್ರವೇಶ ವೀಸಾ ಮಾರ್ಗದ ಮೂಲಕ ಕೌಶಲ್ಯಪೂರ್ಣ ಉದ್ಯೋಗ ಮಾರ್ಗಗಳನ್ನು ತೆರೆಯುತ್ತದೆ.

-ಭಾರತದಿಂದ ಸುಂಕ-ಮುಕ್ತ ವೈನ್ ಮತ್ತು ಸ್ಪಿರಿಟ್‌ಗಳ ರಫ್ತುಗಳು, ಓಷಿಯಾನಿಯಾ ದೇಶದ ವೈನ್‌ಗಳು ರಿಯಾಯಿತಿ ಸುಂಕದಲ್ಲಿ ದೇಶೀಯ ಮಾರುಕಟ್ಟೆಯನ್ನು ಪ್ರವೇಶಿಸುತ್ತವೆ. ಇದನ್ನು 10 ವರ್ಷಗಳ ಅವಧಿಯಲ್ಲಿ ಕಡಿಮೆ ಮಾಡಲಾಗುತ್ತದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

DC vs RCB Playing XI: ಟಾಸ್ ಗೆದ್ದ ಆರ್​ಸಿಬಿ; ಡೆಲ್ಲಿ ತಂಡದಲ್ಲಿ 3 ಬದಲಾವಣೆ – Kannada News | DC vs RCB Playing XI Delhi Capitals vs Royal Challengers Bengaluru Today IPL 2026 match Confirmed playing 11 details with name in Kannada

ಇಂದು ಐಪಿಎಲ್ 2026 (IPL 2026) ರ 39ನೇ ಪಂದ್ಯದಲ್ಲಿ ದೆಹಲಿ ಕ್ಯಾಪಿಟಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (DC vs RCB) ತಂಡವನ್ನು ಎದುರಿಸಿದೆ. ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಪಂದ್ಯ ಹಾಲಿ ಚಾಂಪಿಯನ್ ಆರ್‌ಸಿಬಿಗೆ ಸೇಡಿನ ಸಮರವಾಗಿದೆ. ಏಕೆಂದರೆ ಏಪ್ರಿಲ್ 18 ರಂದು ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿದ್ದ ಉಭಯ ತಂಡಗಳ ಮೊದಲ ಪಂದ್ಯದಲ್ಲಿ ದೆಹಲಿ 6 ವಿಕೆಟ್‌ಗಳಿಂದ ಆರ್​​ಸಿಬಿಯನ್ನು ಸೋಲಿಸಿತ್ತು. ಹೀಗಾಗಿ ತವರಿನಲ್ಲಿ ಸೋಲಿನ ದವಡೆಗೆ ತಳ್ಳಿದ ಡೆಲ್ಲಿ ತಂಡವನ್ನು ಅವರ ತವರಿನಲ್ಲಿ ಮಣಿಸಲು ಆರ್​ಸಿಬಿ ರೆಡಿಯಾಗಿದೆ.

ಟಾಸ್ ಗೆದ್ದ ಆರ್​​ಸಿಬಿ

ಈ ಪಂದ್ಯದಲ್ಲಿ ಟಾಸ್ ಗೆದ್ದ ಆರ್​​ಸಿಬಿ ನಾಯಕ ರಜತ್ ಪಾಟಿದರ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಹೀಗಾಗಿ ಡೆಲ್ಲಿ ಮೊದಲು ಬ್ಯಾಟಿಂಗ್ ಮಾಡಲಿದೆ. ಇದರ ಜೊತೆಗೆ ಉಭಯ ತಂಡಗಳ ಆಡುವ ಹನ್ನೊಂದರ ಬಳಗವೂ ಹೊರಬಿದ್ದಿದೆ. ಅದರಂತೆ ಆರ್​ಸಿಬಿ ತಂಡದಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ. ಇತ್ತ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ 3 ಬದಲಾವಣೆಗಳನ್ನು ಮಾಡಲಾಗಿದೆ.

ಮುಖಾಮುಖಿ ದಾಖಲೆ

ದೆಹಲಿ ಕ್ಯಾಪಿಟಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಇದುವರೆಗೆ 34 ಪಂದ್ಯಗಳನ್ನು ಆಡಿವೆ. ಈ ಅವಧಿಯಲ್ಲಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು 20 ಪಂದ್ಯಗಳನ್ನು ಗೆದ್ದಿದೆ. ಅದೇ ಸಮಯದಲ್ಲಿ, ಡೆಲ್ಲಿ ಕ್ಯಾಪಿಟಲ್ಸ್ ಕೇವಲ 13 ಪಂದ್ಯಗಳನ್ನು ಗೆದ್ದಿದೆ. ಇದರರ್ಥ ಈ ಮುಖಾಮುಖಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮೇಲುಗೈ ಸಾಧಿಸಿದೆ.

ಪಾಯಿಂಟ್ಸ್ ಪಟ್ಟಿಯಲ್ಲಿ ಸ್ಥಾನ

ಈ ಆವೃತ್ತಿಯಲ್ಲಿ ಆಡಿರುವ ಏಳು ಪಂದ್ಯಗಳಲ್ಲಿ ಐದು ಪಂದ್ಯಗಳನ್ನು ಗೆದ್ದಿರುವ ಆರ್​​ಸಿಬಿ 10 ಅಂಕಗಳೊಂದಿಗೆ ಪಾಯಿಂಟ್ಸ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಇತ್ತ ಡೆಲ್ಲಿ ಕ್ಯಾಪಿಟಲ್ಸ್ ಇದುವರೆಗೆ ಆಡಿರುವ ಏಳು ಪಂದ್ಯಗಳಲ್ಲಿ ಕೇವಲ ಮೂರನ್ನು (6 ಅಂಕಗಳು) ಗೆದ್ದು ಪಾಯಿಂಟ್ಸ್ ಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದೆ. ಪಂಜಾಬ್ ವಿರುದ್ಧದ ಸೋಲಿನಿಂದ ಬಳಲುತ್ತಿರುವ ಡೆಲ್ಲಿ ತಂಡವು ಮತ್ತೆ ಪುಟಿದೇಳಬೇಕಾದರೆ ತನ್ನ ಹಿಂದಿನ ಪ್ರದರ್ಶನವನ್ನು ಮರೆತು ಹೊಸದಾಗಿ ಆರಂಭಿಸಬೇಕಾಗುತ್ತದೆ.

ಡೆಲ್ಲಿ ತಂಡವು ಇಲ್ಲಿಯವರೆಗೆ ಬ್ಯಾಟಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದೆ, ಆದರೆ ಅದರ ಬೌಲರ್‌ಗಳು ನಿರೀಕ್ಷೆಗಳಿಗೆ ತಕ್ಕಂತೆ ಪ್ರದರ್ಶನ ನೀಡಿಲ್ಲ. ಮತ್ತೊಂದೆಡೆ, ಆರ್‌ಸಿಬಿ ಸಾಕಷ್ಟು ಸಮತೋಲನದಿಂದ ಕೂಡಿದೆ. ವಿರಾಟ್ ಕೊಹ್ಲಿ ನೇತೃತ್ವದಲ್ಲಿ, ಆರ್‌ಸಿಬಿಯ ಬ್ಯಾಟಿಂಗ್ ಘಟಕ ಬಲಿಷ್ಠವಾಗಿದೆ. ದೇವದತ್ ಪಡಿಕ್ಕಲ್ ಅವರ ಅತ್ಯುತ್ತಮ ಫಾರ್ಮ್ ಅದನ್ನು ಮತ್ತಷ್ಟು ಬಲಪಡಿಸಿದೆ. ಆರ್‌ಸಿಬಿಯ ಬ್ಯಾಟಿಂಗ್‌ ವಿಭಾಗದಂತೆ ಬೌಲರ್‌ಗಳು ಕೂಡ ನಿರ್ಣಾಯಕ ಕ್ಷಣಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ.

ಉಭಯ ತಂಡಗಳ ಪ್ಲೇಯಿಂಗ್ 11

ಆರ್​ಸಿಬಿ: ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ರಜತ್ ಪಾಟಿದಾರ್, ಜಿತೇಶ್ ಶರ್ಮಾ, ಟಿಮ್ ಡೇವಿಡ್, ರೊಮಾರಿಯೋ ಶೆಫರ್ಡ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಜೋಶ್ ಹ್ಯಾಜಲ್‌ವುಡ್, ಸುಯಾಶ್ ಶರ್ಮಾ, ರಸಿಖ್ ಸಲಾಂ.

ಇಂಪ್ಯಾಕ್ಟ್ ಪ್ಲೇಯರ್: ಜಾಕೋಬ್ ಬೆಥೆಲ್, ಜೋರ್ಡಾನ್ ಕಾಕ್ಸ್, ಮಂಗೇಶ್ ಯಾದವ್, ವಿಕಿ ಓಸ್ಟ್ವಾಲ್ ಮತ್ತು ವೆಂಕಟೇಶ್ ಅಯ್ಯರ್.

DC vs RCB IPL 2026 Live Score: ಟಾಸ್ ಗೆದ್ದ ಆರ್​​ಸಿಬಿ ಬೌಲಿಂಗ್ ಆಯ್ಕೆ

ಡೆಲ್ಲಿ ಕ್ಯಾಪಿಟಲ್ಸ್: ಸಾಹಿಲ್ ಪರಾಖ್, ಕೆಎಲ್ ರಾಹುಲ್(ವಿಕೆಟ್ ಕೀಪರ್), ನಿತೀಶ್ ರಾಣಾ, ಸಮೀರ್ ರಿಜ್ವಿ, ಟ್ರಿಸ್ಟಾನ್ ಸ್ಟಬ್ಸ್, ಡೇವಿಡ್ ಮಿಲ್ಲರ್, ಅಕ್ಸರ್ ಪಟೇಲ್(ನಾಯಕ), ದುಷ್ಮಂತ ಚಮೀರಾ, ಕುಲ್ದೀಪ್ ಯಾದವ್, ಟಿ ನಟರಾಜನ್, ಕೈಲ್ ಜೇಮಿಸನ್.

ಇಂಪ್ಯಾಕ್ಟ್ ಪ್ಲೇಯರ್: ಆಕಿಬ್ ನಬಿ, ಅಶುತೋಷ್ ಶರ್ಮಾ, ವಿಪ್ರಜ್ ನಿಗಮ್, ವಿಜಯ್ ಮತ್ತು ಅಭಿಷೇಕ್ ಪೊರೆಲ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 7:09 pm, Mon, 27 April 26

Source link

ಹೆಚ್ಚು ಮಾತನಾಡಬೇಡಿ, ಸುಮ್ಮನೆ ನಿಮ್ಮ ಕೆಲಸ ಮಾಡಿ: ಪಂಚಮಸಾಲಿ ಪೀಠದ ಲೆಕ್ಕ ಕೊಡುವ ವೇಳೆ ಉಮಾಪತಿಗೆ ಸೋಮಣ್ಣ ಕರೆ – Kannada News | Umapathi Exposes Panchamasali Peetha Account Details; Somanna Calls During PC

ದಾವಣಗೆರೆ, ಏ.27: ಹರಿಹರದ ಪಂಚಮಸಾಲಿ ಪೀಠದ ಅಭಿವೃದ್ಧಿ ಕಾರ್ಯಗಳ ಲೆಕ್ಕಾಚಾರದ ವಿಚಾರವಾಗಿ ಉಂಟಾಗಿರುವ ಗೊಂದಲಗಳ ನಡುವೆ, ಉದ್ಯಮಿ ಮತ್ತು ಟ್ರಸ್ಟ್ ಪ್ರಮುಖರಾದ ಬಿ.ಸಿ. ಉಮಾಪತಿ ಅವರು ಇಂದು ಸುದ್ದಿಗೋಷ್ಠಿ ನಡೆಸಿ ಪೀಠದ ಸಂಪೂರ್ಣ ಆದಾಯ ಮತ್ತು ವೆಚ್ಚದ ಲೆಕ್ಕವನ್ನು ಸಾರ್ವಜನಿಕವಾಗಿ ಮಂಡಿಸಿದರು. ವಿಶೇಷವೆಂದರೆ, ಲೆಕ್ಕ ನೀಡುವ ಸಂದರ್ಭದಲ್ಲೇ ಕೇಂದ್ರ ಸಚಿವ ವಿ. ಸೋಮಣ್ಣ ಅವರು ಉಮಾಪತಿ ಅವರಿಗೆ ಕರೆ ಮಾಡಿ ಸಂಧಾನದ ಪ್ರಯತ್ನ ನಡೆಸಿದ್ದಾರೆ ಎಂದು ಹೇಳಲಾಗಿದೆ. ಸುದ್ದಿಗೋಷ್ಠಿ ಆರಂಭವಾಗುತ್ತಿದ್ದಂತೆಯೇ ವಿ. ಸೋಮಣ್ಣ ಅವರು ಉಮಾಪತಿ ಅವರಿಗೆ ಕರೆ ಮಾಡಿದರು. “ಹೆಚ್ಚು ಮಾತನಾಡಬೇಡಿ, ಸುಮ್ಮನೆ ನಿಮ್ಮ ಕೆಲಸ ಮಾಡಿ” ಎಂದು ಸೋಮಣ್ಣ ಸಲಹೆ ನೀಡಿದ್ದಾರೆ ಎನ್ನಲಾಗಿದೆ. ಇದಕ್ಕೆ ಪ್ರತಿಕ್ರಿಯಿಸಿದ ಉಮಾಪತಿ, “ನನ್ನ ಮರ್ಯಾದೆಗಿಂತ ಸಮಾಜದ ಮರ್ಯಾದೆ ಮುಖ್ಯ. ಸಮಾಜದ ಮುಂದೆ ಸತ್ಯ ಹೇಳದಿದ್ದರೆ ನೋವಾಗುತ್ತದೆ. ಅವರು (ವಚನಾನಂದ ಶ್ರೀಗಳು) ನಾನೇನೋ ಹಣ ತಿಂದಿದ್ದೇನೆ ಎಂಬಂತೆ ಮಾತನಾಡುತ್ತಿದ್ದಾರೆ, ಹಾಗಾಗಿ ಲೆಕ್ಕ ಕೊಡುವುದು ಅನಿವಾರ್ಯ” ಎಂದು ಉತ್ತರಿಸಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕೋಟ್ಯಂತರ ಮೌಲ್ಯದ ಜಮೀನು ಕಬಳಿಕೆಗೆ ಯತ್ನ: ಬದುಕಿರುವಾಗಲೇ ನಿವೃತ್ತ ಉದ್ಯೋಗಿಯ ಚಟ್ಟ ಕಟ್ಟಿದ ಭೂಗಳ್ಳರು – Kannada News | Bengaluru Land Scam: Attempt to HAL retired employee Land Grabbed with fake death certificate

ದೇವನಹಳ್ಳಿ, ಏಪ್ರಿಲ್​ 27: ಬೆಂಗಳೂರು ಸುತ್ತಮುತ್ತ ಜಮೀನಿನ (Land Scam) ಬೆಲೆ ಕೋಟಿ ಕೋಟಿ ದಾಟುತ್ತಿದ್ದಂತೆ ಭೂಗಳ್ಳರ ಅಟ್ಟಹಾಸ ಮಿತಿಮೀರಿದೆ. ಕಷ್ಟಪಟ್ಟು ದುಡಿದ ಹಣದಲ್ಲಿ ನಿವೃತ್ತ ಜೀವನಕ್ಕೆ ಆಸರೆಯಾಗಲೆಂದು ಖರೀದಿಸಿದ್ದ ಜಮೀನಿನ ಮೇಲೆ ಕಣ್ಣಾಕಿದ ಕಿಡಿಗೇಡಿಗಳು, ಮಾಲೀಕ ಬದುಕಿರುವಾಗಲೇ ಆತ ಸತ್ತು ಹೋಗಿದ್ದಾನೆ ಎಂದು ನಕಲಿ ಮರಣ ಪತ್ರ (fake death certificate) ಸೃಷ್ಟಿಸಿದ್ದಾರೆ. ಇಷ್ಟೇ ಅಲ್ಲದೆ, ಈ ಅಕ್ರಮಕ್ಕೆ ಅಧಿಕಾರಿಗಳು ಸಾಥ್ ನೀಡಿದ್ದು, ಲಕ್ಷಾಂತರ ರೂಪಾಯಿ ಲಂಚಕ್ಕೆ ಬೇಡಿಕೆಯಿಟ್ಟಿರುವ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ.

ದೊಡ್ಡಬಳ್ಳಾಪುರ ತಾಲೂಕಿನ ಯರ್ರಮುದ್ದನಹಳ್ಳಿಯಲ್ಲಿರುವ ಈ 40 ಎಕರೆ ಕೆಂಪು ಮಣ್ಣಿನ ಭೂಮಿ ನೋಡಲು ಅತ್ಯಂತ ಫಲವತ್ತಾಗಿದೆ. ಇದೇ ಈ ಎಲ್ಲ ಅವಾಂತರಗಳಿಗೆ ಮೂಲ. ಈ ಜಮೀನಿನ ಮಾಲೀಕ ರಘುರಾಮಯ್ಯ ಅವರು ಹೆಚ್‌ಎಎಲ್ ನಿವೃತ್ತ ಉದ್ಯೋಗಿ. ಮುಂದಿನ ಜೀವನದ ಭದ್ರತೆಗಾಗಿ ಅವರು ಈ ಭೂಮಿಯನ್ನು ಖರೀದಿಸಿದ್ದರು. ಆದರೆ ಇಂದು ಇದೇ ಭೂಮಿ ಅವರ ಪಾಲಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಇದನ್ನೂ ಓದಿ: ಬೆಂಗಳೂರು: ಪ್ರತಿಷ್ಠಿತ ಕಂಪನಿಯ ಮಹಿಳಾ ಶೌಚಾಲಯದಲ್ಲಿ ಭ್ರೂಣ ಪತ್ತೆ; ಬೆಚ್ಚಿಬಿದ್ದ ಸಿಬ್ಬಂದಿ!

ಈ ಹಿಂದೆ ಜಮೀನು ಮಾರಾಟ ಮಾಡಲು ಕೆಲ ಬ್ರೋಕರ್ಗಳಿಗೆ ಜಮೀನು ದಾಖಲೆ ನೀಡಿದ್ದು, ನಂತರ ಮಾರಾಟ ಮಾಡುವುದು ಬೇಡ ಅಂತ ಕೈಬಿಟ್ಟಿದ್ದರು. ಇದೀಗ ಮಾಲೀಕ ಮಾರಾಟ ಮಾಡಲ್ಲ ಅಂದರೂ ಬೆಂಬಿಡದ ಕೆಲ ಭೂಗಳ್ಳರು ಬದುಕಿರುವ ರಘುರಾಮಯ್ಯರನ್ನ 1995ರಲ್ಲೇ ಸಾವನ್ನಪಿರುವುದಾಗಿ ನಕಲಿ ಡೆತ್ ಸರ್ಟಿಫಿಕೇಟ್ ತಯಾರಿಸಿ ಜಮೀನಿಗೆ ನಕಲಿ ದಾಖಲೆ ಮಾಡಿ ಕಿರಕುಳ ನೀಡುತ್ತಿರುವ ಆರೋಪ ಕೇಳಿಬಂದಿದೆ.

ಅಧಿಕಾರಿಗಳಿಂದ 40 ಲಕ್ಷ ರೂ ಲಂಚಕ್ಕೆ ಬೇಡಿಕೆ: ರಘುರಾಮಯ್ಯ ಗಂಭೀರ ಆರೋಪ

ಇನ್ನು ನಕಲಿ ದಾಖಲೆಗಳ ಆಧಾರದ ಮೇಲೆ ಎಸಿ (AC) ಕಚೇರಿಯಲ್ಲಿ ಮುಟೇಷನ್ ರದ್ದುಪಡಿಸಲಾಗಿದೆ.  ಇದನ್ನು ಪ್ರಶ್ನಿಸಲು ಹೋದರೆ ಅಧಿಕಾರಿಗಳು 40 ಲಕ್ಷ ರೂ ಲಂಚ ಕೇಳುತ್ತಿದ್ದಾರೆ ಎಂದು ರಘುರಾಮಯ್ಯ ಗಂಭೀರ ಆರೋಪ ಮಾಡಿದ್ದಾರೆ. ಅಲ್ಲದೆ ಒಮ್ಮೆ ಮುಟೇಷನ್ ಆದ ಮೇಲೆ ರದ್ದು ಮಾಡಲು ಹೇಗೆ ಸಾಧ್ಯ ಎಂದು ಕೇಳಿದರೆ ಸಮರ್ಪಕ ಉತ್ತರ ನೀಡದೆ ಅಲೆದಾಡಿಸುತ್ತಿದ್ದಾರೆ. ರಾತ್ರಿ ವೇಳೆ ಭೂಗಳ್ಳರು ಜಮೀನಿನ ಬಳಿ ಬಂದು ಬೆದರಿಕೆ ಹಾಕುತ್ತಿದ್ದರೂ, ಪೊಲೀಸರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸಂತ್ರಸ್ತ ಕುಟುಂಬ ಅಸಮಾಧಾನ ಹೊರಹಾಕಿದೆ.

ಇದನ್ನೂ ಓದಿ: ಬೆಂಗಳೂರು ವಿಮಾನ ನಿಲ್ದಾಣದಲ್ಲಿ ‘ಬೆಂಗಳೂರು ಸೋಲ್’ ಅನಾವರಣ: ಕಲಾಪ್ರೇಮಿಗಳ ಮನಗೆದ್ದ ಜೌಮ್ ಪ್ಲೆನ್ಸಾ ಶಿಲ್ಪಕಲೆ

ಬೆಂಗಳೂರು ಗ್ರಾಮಾಂತರದಲ್ಲಿ ಭೂ ಅಕ್ರಮಗಳು ಮಿತಿಮೀರುತ್ತಿವೆ. ನ್ಯಾಯ ಕೊಡಿಸಬೇಕಾದ ಅಧಿಕಾರಿಗಳೇ ಲಂಚಕ್ಕೆ ಕೈಯೊಡ್ಡುತ್ತಿರುವ ಆರೋಪಗಳು ಕೇಳಿಬಂದಿದ್ದು, ಈ ಕುರಿತು ಜಿಲ್ಲಾಡಳಿತ ಹಾಗೂ ಕಂದಾಯ ಸಚಿವರು ಪರಿಶೀಲಿಸಿ ನೊಂದವರಿಗೆ ನ್ಯಾಯ ಕೊಡಿಸುವ ಕೆಲಸ ಮಾಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಅತ್ತೆ- ಸೊಸೆಯ ನಡುವಿನ ಜಗಳಕ್ಕೆ ಕಾರಣಗಳೇನು? ಇವರಿಬ್ಬರ ಸಂಬಂಧವನ್ನು ಸರಿಪಡಿಸುವುದು ಹೇಗೆ? – Kannada News | Reasons for conflict between mother in law and daughter in law? How to mend their relationship?

ಅತ್ತೆ ಮತ್ತು ಸೊಸೆಯ ನಡುವಿನ ಸಂಬಂಧವು (relationship) ಅತ್ಯಂತ ಸೂಕ್ಷ್ಮ ಮತ್ತು ಸೂಕ್ಷ್ಮವಾದದದ್ದು, ಈ ಸಂಬಂಧದಲ್ಲಿ ಸಣ್ಣದೊಂದು ತಪ್ಪು ನಡೆದರೂ ಕೂಡ ಇದು ಇಡೀ ಸಂಬಂಧದ ಸಾರವನ್ನೇ ಬದಲಾಯಿಸಬಹುದು. ಇದೇ ಕಾರಣಕ್ಕೇನೋ ಅತ್ತೆ ಸೊಸೆ ಮಧ್ಯೆ ಸಣ್ಣಪುಟ್ಟ ವಿಚಾರಗಳಿಗೂ ಮನಸ್ತಾಪ ಏರ್ಪಡೋದು. ಯಾವ ಮನೆಯಲ್ಲಿ ಅತ್ತೆ ಸೊಸೆ ಜಗಳವಿರುತ್ತದೆಯೋ ಆ ಮನೆಯಲ್ಲಿ ಶಾಂತಿ, ನೆಮ್ಮದಿ ಅನ್ನೋದೇ ಇರೋದಿಲ್ಲ. ಆದ ಕಾರಣದಿಂದ ಇಬ್ಬರೂ ಹೊಂದಿಕೊಂಡು ಜೀವನ ನಡೆಸುತ್ತಾ ಹೋಗಬೇಕಾಗುತ್ತದೆ. ಹೀಗಿರುವಾಗ ಅತ್ತೆ ಮತ್ತು ಸೊಸೆಯ ನಡುವಿನ ಸಂಬಂಧವನ್ನು ಬಲಪಡಿಸಲು, ಇವರಿಬ್ಬರ ನಡುವೆ ಜಗಳಗಳಯ ನಡೆಯಲು ಕಾರಣಗಳೇನು, ಅವುಗಳನ್ನು ಯಾವ ರೀತಿ ಸರಿಪಡಿಸಬಹುದು ಎಂಬುದನ್ನು ನೋಡೋಣ ಬನ್ನಿ.

ಅತ್ತೆ-ಸೊಸೆ ಮಧ್ಯೆ ಜಗಳಗಳು ನಡೆಯಲು ಕಾರಣಗಳೇನು?

ಮಗನ ವಿಚಾರ: ಹಲವು ಬಾರಿ, ಮಗನ ವಿಚಾರವಾಗಿ ಅತ್ತೆ ಮತ್ತು ಸೊಸೆಯ ನಡುವೆ ಸಂಘರ್ಷ ನಡೆಯುತ್ತದೆ. ಮದುವೆಯ ನಂತರ ತನ್ನ ಮಗ ಬದಲಾಗಿದ್ದಾನೆ, ಯಾವಾಗಲೂ ಹೆಂಡತಿಯ ಮಾತನ್ನೇ ಕೇಳುತ್ತಾಳೆ ಎಂದು ಅತ್ತೆ ಕೋಪ ಮಾಡಿಕೊಂಡರೆ, ಸೊಸೆಯಾದವಳು ನನ್ನ ಗಂಡ ಯಾವಾಗಲು ನನಗಿಂತ ಆತನ ತಾಯಿಯ ಬಗ್ಗೆಯೇ ಹೆಚ್ಚು ಕಾಳಜಿ ವಹಿಸುತ್ತಾನೆ ಎಂದುಕೊಳ್ಳುತ್ತಾಳೆ. ಈ ವಿಚಾರವಾಗಿ ಅನೇಕ ಮನೆಗಳಲ್ಲಿ ಜಗಳಗಳು ನಡೆಯುತ್ತವೆ.

 ಮನೆಕೆಲಸದ ವಿಚಾರವಾಗಿ: ಮನೆ ಕೆಲಸದ ವಿಚಾರವಾಗಿಯೂ ಅತ್ತೆ ಸೊಸೆಯ ಮಧ್ಯೆ ಮನಸ್ತಾಪ ಏರ್ಪಡುತ್ತದೆ.  ಇತ್ತೀಚಿನ ದಿನಗಳಲ್ಲಿ ಶೇಕಡ 80 ರಷ್ಟು ಯುವತಿಯರು ಮನೆಯ ಹೊರಗಡೆ ಕೆಲಸ ಮಾಡುವವರಾಗಿರುತ್ತಾರೆ. ಇಂತಹ ಸಂದರ್ಭದಲ್ಲಿ ಅವರಿಗೆ ಮನೆಕೆಲಸದಲ್ಲಿ ಸಹಾಯ ಮಾಡಲು ಸಾಧ್ಯವಾಗುವುದಿಲ್ಲ. ಇದರಿಂದ ಅತ್ತೆ ಸೊಸೆಯ ಮೇಲೆ ಕೋಪ ಮಾಡುತ್ತಾರೆ. ಈ ಪರಿಸ್ಥಿತಿಯನ್ನು ತಕ್ಷಣ ಪರಿಹರಿಸುವುದು ಉತ್ತಮ.

ಆಗಾಗ್ಗೆ ತವರು ಮನೆಗೆ ಭೇಟಿ ನೀಡುವುದು: ಅತ್ತೆಗೆ ಸೊಸೆ ಮೇಲೆ ಎಷ್ಟೇ ಪ್ರೀತಿ ಇದ್ದರೂ, ಸೊಸೆ ಆಗಾಗ್ಗೆ ತನ್ನ ಹೆತ್ತವರ ಮನೆಗೆ ಹೋಗುವುದು ಅತ್ತೆಗೆ ಇಷ್ಟವಾಗುವುದಿಲ್ಲ. ಇದು ಕೂಡ ಅತ್ತೆ ಸೊಸೆಯ ನಡುವೆ ಅಂತರ ಹೆಚ್ಚಲು ಒಂದು ಕಾರಣ.

ಇತರರೊಂದಿಗೆ ಹೋಲಿಕೆ ಮಾಡುವುದು: ಕೆಲಸದ ವಿಚಾರದಲ್ಲಿ, ಮನೆ ನೋಡಿಕೊಳ್ಳುವ ವಿಚಾರದಲ್ಲಿ ಅತ್ತೆ ಸೊಸೆಯನ್ನು ಇತತರೊಂದಿಗೆ ಹೋಲಿಕೆ ಮಾಡುತ್ತಾರೆ. ಅದೇ ರೀತಿ ಸೊಸೆ ಕೂಡ ತನ್ನ ಅತ್ತೆಯನ್ನು ಇತರರೊಂದಿಗೆ ಹೋಲಿಕೆ ಮಾಡುತ್ತಾರೆ. ಇದು ಇವರಿಬ್ಬರ ನಡುವೆ ಸಂಘರ್ಷ ಉಂಟಾಗಲು ಕಾರಣವಾಗುತ್ತದೆ.

ಪೀಳಿಗೆಗಳ ಅಂತರ : ಹಿರಿಯರ ಜೀವನಶೈಲಿ ಮತ್ತು ಹೊಸ ಪೀಳಿಗೆಯ ಆಧುನಿಕ ಚಿಂತನೆಯ ನಡುವಿನ ಸಂಘರ್ಷವು ಆಗಾಗ್ಗೆ ಅತ್ತೆ ಸೊಸೆಯ ವಿವಾದಗಳಿಗೆ ಕಾರಣವಾಗುತ್ತದೆ. ಇದಲ್ಲದೆ ಸಂವಹನದ ಕೊರತೆ, ಹೊಂದಾಣಿಕೆ, ಪ್ರೈವೆಸಿ  ಇಲ್ಲದಿರುವುದು ಇವೆಲ್ಲವೂ ಅತ್ತೆ ಸೊಸೆಯ ಸಂಬಂಧದಲ್ಲಿ ಅಂತರ ಸೃಷ್ಟಿಯಾಗಲು ಮುಖ್ಯ ಕಾರಣ.

ಇದನ್ನೂ ಓದಿ: ಪತಿ ಪತ್ನಿಯರು ಸರಳ ಸೂತ್ರ ಪಾಲಿಸಿದರೆ ದಾಂಪತ್ಯ ಜೀವನ ಹಾಲು-ಜೇನಿನಂತೆ ಇರುವುದು ಖಂಡಿತ

ಅತ್ತೆ ಮತ್ತು ಸೊಸೆಯ ನಡುವೆ ಉತ್ತಮ ಸಂಬಂಧವನ್ನು ಹೇಗೆ ಕಾಪಾಡಿಕೊಳ್ಳುವುದು?

ಪರಸ್ಪರ ಗೌರವಿಸಿ: ಅತ್ತೆ ಮನೆಯ ಅಡಿಪಾಯ ಎಂದು ಸೊಸೆ ಅರ್ಥಮಾಡಿಕೊಳ್ಳಬೇಕು ಮತ್ತು ಸೊಸೆ ಈಗ ಆ ಮನೆಯ ಅವಿಭಾಜ್ಯ ಅಂಗ ಎಂದು ಅತ್ತೆ ಒಪ್ಪಿಕೊಳ್ಳಬೇಕು. ಈ ಹೊಂದಾಣಿಕೆ ಮತ್ತು ಪರಸ್ಪರ ಗೌರವ ಅತ್ತೆ ಸೊಸೆಯ ಬಂಧವನ್ನು ಬಿಗಿಗೊಳಿಸುತ್ತದೆ.

ತಾಳ್ಮೆ ಮತ್ತು ಸಂಯಮ: ಯಾವುದೇ ಸಮಸ್ಯೆಗೆ ಕೋಪ ಪರಿಹಾರವಲ್ಲ. ವಿವಾದ ಹೆಚ್ಚಾದರೆ ಮೌನವಾಗಿರುವುದು ಜಾಣತನ. ಮನಸ್ತಾಪ ಏರ್ಪಟ್ಟಾಗ ಮಾತಿಗೆ ಮಾತು ಬೆಳೆಸಿ ಜಗಳವನ್ನು ದೊಡ್ಡದು ಮಾಡುವ ಬದಲು ತಾಳ್ಮೆಯಿಂದ ಮೌನವಾಗಿರಿ. ಇದರಿಂದ ಸಂಬಂದ ಹಳಸುವುದಿಲ್ಲ.

ಒಟ್ಟಿಗೆ ಸಮಯ ಕಳೆಯಿರಿ: ಬ್ಯುಸಿ ಜೀವನದ ಹೊರತಾಗಿಯೂ, 15-20 ನಿಮಿಷಗಳ ಕಾಲ ಅತ್ತೆ ಸೊಸೆ ಒಟ್ಟಿಗೆ ಕುಳಿತು ಚಹಾ ಕುಡಿಯುತ್ತಾ, ಟಿವಿ ನೋಡುತ್ತಾ, ಮಾತನಾಡುತ್ತಾ ಜೊತೆಯಾಗಿ ಸಮಯ ಕಳೆಯಬೇಕು. ಅಲ್ಲದೆ ಶಾಪಿಂಗ್‌ಗೆ ಜೊತೆಯಾಗಿ ಹೋಗಬೇಕು. ಇದರಿಂದ ಅತ್ತೆ ಸೊಸೆಯ ಮಧ್ಯೆ ಹೊಂದಾಣಿಕೆ ಹೆಚ್ಚಾಗುತ್ತದೆ.

ಈ ವಿಷಯಗಳನ್ನು ಮನಸ್ಸಿನಲ್ಲಿಟ್ಟುಕೊಂಡರೆ, ಅತ್ತೆ-ಸೊಸೆ ಮಧ್ಯೆ ಜಗಳಗಳು ಏರ್ಪಡುವುದಿಲ್ಲ ಮತ್ತು ಮನೆಯಲ್ಲಿ ಶಾಂತಿ, ನೆಮ್ಮದಿ ನೆಲೆಸುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸ್ಕ್ರೀನ್ ಟೈಮ್ ಹೆಚ್ಚಾದಂತೆ ಮೈಗ್ರೇನ್ ಸಮಸ್ಯೆ ಬರುತ್ತಾ? ತಡೆಗಟ್ಟಲು ಏನು ಮಾಡಬಹುದು – Kannada News | Is Screen Time Increasing Migraine? Causes, Symptoms, and Fixes

ಇತ್ತೀಚಿನ ಡಿಜಿಟಲ್ ಯುಗದಲ್ಲಿ ಮೊಬೈಲ್, ಲ್ಯಾಪ್‌ಟಾಪ್ ಮತ್ತು ಟಿವಿ ಬಳಕೆ ಹೆಚ್ಚುತ್ತಿರುವುದರಿಂದ ಸ್ಕ್ರೀನ್ ಟೈಮ್ ಕೂಡ ಗಣನೀಯವಾಗಿ ಏರಿಕೆಯಾಗಿದೆ. ಇದರ ಪರಿಣಾಮವಾಗಿ ಕಣ್ಣು ಮತ್ತು ಮೆದುಳಿನ ಮೇಲೆ ಒತ್ತಡ ಹೆಚ್ಚಾಗಿ, ತಲೆನೋವು ಹಾಗೂ ಮೈಗ್ರೇನ್ (Migraine) ಸಮಸ್ಯೆಗಳು ಹೆಚ್ಚುತ್ತಿರುವುದು ಕಂಡುಬರುತ್ತಿದೆ. ಮಕ್ಕಳಿಂದ ದೊಡ್ಡವರ ವರೆಗೆ ಎಲ್ಲರೂ ಕೂಡ ಈ ಸಮಸ್ಯೆಗೆ ತುತ್ತಾಗುತ್ತಿದ್ದಾರೆ. ಕೆಲವರು ಟೈಮ್ ಪಾಸ್ ಮಾಡಲು ಬಳಕೆ ಮಾಡುತ್ತಿದ್ದರೆ ಇನ್ನು ಕೆಲವರು ಕೆಲಸಕ್ಕಾಗಿ ಉಪಯೋಗ ಮಾಡುತ್ತಿದ್ದಾರೆ. ಕಾರಣ ಯಾವುದೇ ಇರಲಿ ಸ್ಕ್ರೀನ್ ಟೈಮ್ ಹೆಚ್ಚುತ್ತಿದ್ದು ಇದು ಮುಂದೆ ಮೈಗ್ರೇನ್ ಸಮಸ್ಯೆ ಹೆಚ್ಚಿಸಬಹುದಾಗಿದೆ. ಹಾಗಾದರೆ ಸ್ಕ್ರೀನ್ ಟೈಮ್ ಮತ್ತು ಮೈಗ್ರೇನ್ ನಡುವೆ ಸಂಬಂಧವಿದೆಯೇ, ಯಾರು ಹೆಚ್ಚು ಅಪಾಯದಲ್ಲಿದ್ದಾರೆ ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಸ್ಕ್ರೀನ್ ಟೈಮ್ ಮತ್ತು ಮೈಗ್ರೇನ್ ನಡುವಿನ ಸಂಬಂಧ:

ತಜ್ಞರ ಪ್ರಕಾರ, ಹೆಚ್ಚು ಸಮಯ ಸ್ಕ್ರೀನ್ ಮುಂದೆ ಕಳೆದರೆ ಕಣ್ಣುಗಳಿಗೆ ನಿರಂತರ ಒತ್ತಡ ಬೀಳುತ್ತದೆ. ವಿಶೇಷವಾಗಿ ಸ್ಕ್ರೀನ್‌ನಿಂದ ಹೊರಬರುವ ಬ್ಲೂ ಲೈಟ್ ಕಣ್ಣುಗಳನ್ನು ಬೇಗನೆ ಆಯಾಸವಾಗುವಂತೆ ಮಾಡುತ್ತದೆ. ಇದರಿಂದ ಮೆದುಳಿಗೂ ಒತ್ತಡ ಹೆಚ್ಚಾಗಿ ಮೈಗ್ರೇನ್ ಟ್ರಿಗರ್ ಆಗುವ ಸಾಧ್ಯತೆ ಇದೆ. ಕೆಲವರಿಗೆ ಮೈಗ್ರೇನ್ ಆರಂಭಕ್ಕೂ ಮುನ್ನ ಕಣ್ಣಲ್ಲಿ ಮಿನುಗುವ ಬೆಳಕು, ತಲೆ ಭಾರವಾಗಿರುವ ಅನುಭವ ಹಾಗೂ ಬೆಳಕಿಗೆ ಕಣ್ಣು ಬಿಡಲು ಸಾಧ್ಯವಾಗದಿರಬಹುದು.

ಇದನ್ನೂ ಓದಿ: ಮೈಗ್ರೇನ್ ಇದ್ಯಾ? ಹಾಗಿದ್ರೆ ಅಪ್ಪಿತಪ್ಪಿಯೂ ಈ ತಪ್ಪುಗಳನ್ನು ಮಾಡಬೇಡಿ

ಯಾರು ಹೆಚ್ಚು ಅಪಾಯದಲ್ಲಿದ್ದಾರೆ?

ದಿನಪೂರ್ತಿ ಕಂಪ್ಯೂಟರ್ ಅಥವಾ ಮೊಬೈಲ್ ಬಳಕೆ ಮಾಡುವವರು ಮೈಗ್ರೇನ್ ಸಮಸ್ಯೆಗೆ ಹೆಚ್ಚು ಒಳಗಾಗುವ ಸಾಧ್ಯತೆ ಇದೆ. ಈಗಿನ ಕಾಲದಲ್ಲಿ ಮಕ್ಕಳು ಮತ್ತು ಯುವಕರಲ್ಲಿ ಈ ಸಮಸ್ಯೆ ಹೆಚ್ಚುತ್ತಿರುವುದು ಗಮನಾರ್ಹ. ಈಗಾಗಲೇ ಮೈಗ್ರೇನ್ ಇರುವವರಿಗೆ ಹೆಚ್ಚು ಸ್ಕ್ರೀನ್ ಬಳಕೆ ಸಮಸ್ಯೆಯನ್ನು ಮತ್ತಷ್ಟು ತೀವ್ರಗೊಳಿಸಬಹುದು. ಜೊತೆಗೆ ಸ್ಕ್ರೀನ್‌ನ್ನು ಹೆಚ್ಚು ಸಮಯ ನೋಡಿದರೆ ಕಣ್ಣಿನ ಒಣತನ, ಉರಿ, ದಣಿವು ಮತ್ತು ನಿದ್ರೆ ಕೊರತೆ ಉಂಟಾಗಬಹುದು. ಈ ಎಲ್ಲಾ ಕಾರಣಗಳು ಸೇರಿ ತಲೆನೋವು ಮತ್ತು ಮೈಗ್ರೇನ್ ಸಮಸ್ಯೆಯನ್ನು ಹೆಚ್ಚಿಸಬಹುದು.

ಹೇಗೆ ತಡೆಗಟ್ಟಬೇಕು?

ತಜ್ಞರು ಸೂಚಿಸುವಂತೆ, ಸ್ಕ್ರೀನ್ ಬಳಕೆಯನ್ನು ನಿಯಂತ್ರಿಸುವುದು ಅತ್ಯಂತ ಮುಖ್ಯ. ಪ್ರತಿ 20-30 ನಿಮಿಷಕ್ಕೊಮ್ಮೆ ವಿರಾಮ ತೆಗೆದುಕೊಳ್ಳಬೇಕು. ಕಣ್ಣುಗಳಿಗೆ ವಿಶ್ರಾಂತಿ ನೀಡಲು ದೂರದ ವಸ್ತುಗಳನ್ನು ನೋಡಬೇಕು. ಸ್ಕ್ರೀನ್ ಬ್ರೈಟ್ನೆಸ್ ಸರಿಯಾಗಿರಬೇಕು ಮತ್ತು ಕತ್ತಲಲ್ಲಿ ಮೊಬೈಲ್ ಬಳಸುವುದನ್ನು ತಪ್ಪಿಸಬೇಕು. ಸರಿಯಾದ ನಿದ್ರೆ, ಸಮತೋಲನ ಆಹಾರ ಮತ್ತು ನಿಯಮಿತ ವ್ಯಾಯಾಮವು ಮೈಗ್ರೇನ್ ನಿಯಂತ್ರಣಕ್ಕೆ ಸಹಕಾರಿ. ದೇಹದ ಸೂಚನೆಗಳನ್ನು ನಿರ್ಲಕ್ಷಿಸದೆ ಸಮಯಕ್ಕೆ ಸರಿಯಾಗಿ ವೈದ್ಯರ ಸಲಹೆ ಪಡೆಯುವುದು ಅಗತ್ಯ. ತಜ್ಞರ ಪ್ರಕಾರ, ಸ್ಕ್ರೀನ್ ಬಳಕೆಯನ್ನು ಸಮತೋಲನದಲ್ಲಿಡುವುದರಿಂದ ಮೈಗ್ರೇನ್ ಅಪಾಯವನ್ನು ಕಡಿಮೆ ಮಾಡಬಹುದು ಮತ್ತು ಒಟ್ಟು ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

DC vs RCB IPL 2026 Live Score: ಆರ್​​ಸಿಬಿ- ಡೆಲ್ಲಿ ನಡುವೆ 2ನೇ ಮುಖಾಮುಖಿ – Kannada News | Delhi Capitals vs Royal Challengers Bengaluru IPL 2026 Live Cricket Score DC vs RCB Match on 27th April latest news in Kannada

ಐಪಿಎಲ್ 2026ರ 39 ನೇ ಪಂದ್ಯವು ಡೆಲ್ಲಿ ಕ್ಯಾಪಿಟಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ನಡೆಯುತ್ತಿದೆ. ಉಭಯ ತಂಡಗಳ ನಡುವಿನ ಎರಡನೇ ಮುಖಾಮುಖಿ ಇದಾಗಿದೆ. ಈ ಮೊದಲು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿದ್ದ ಮೊದಲ ಮುಖಾಮುಖಿಯಲ್ಲಿ ಆತಿಥೇಯ ಆರ್​​ಸಿಬಿಯನ್ನು ಡೆಲ್ಲಿ ಕ್ಯಾಪಿಟಲ್ಸ್ ಮಣಿಸಿತ್ತು. ಹೀಗಾಗಿ ಎರಡನೇ ಮುಖಾಮುಖಿ ಆರ್​​ಸಿಬಿಗೆ ಸೇಡಿನ ಸಮರವಾಗಿದೆ. ಇದಕ್ಕೆ ಪೂರಕವಾಗಿ ಕಳೆದ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಮಣಿಸಿರುವ ಆರ್​​ಸಿಬಿ, ಪಂಜಾಬ್ ಕಿಂಗ್ಸ್ ವಿರುದ್ಧ ಸೋತಿರುವ ಡೆಲ್ಲಿ ತಂಡವನ್ನು ಮಣಿಸಲು ಸಜ್ಜಾಗಿದೆ.

Source link

ಅಕಾಲಿಕ ಮಳೆಗೆ ಬೆದರಿದ ಭದ್ರಾವತಿ: ವರುಣನ ಅಬ್ಬರಕ್ಕೆ ರೈತರ ಬದುಕು ಮೂರಾಬಟ್ಟೆ – Kannada News | Bhadravathi Unseasonal Rains Wreak Havoc: Shivamogga Farmers Face Massive Crop and Property Loss

ಶಿವಮೊಗ್ಗ ಜಿಲ್ಲೆಯಲ್ಲಿ ನಿನ್ನೆ ಸುರಿದ ಗಾಳಿ ಮಳೆ ಅವಾಂತರಗಳನ್ನೇ ಸೃಷ್ಟಿ ಮಾಡಿದೆ. ಭದ್ರಾವತಿ ತಾಲೂಕಿನಲ್ಲಿ ಸುರಿದ ಮಳೆಯು ಜನರ ಮತ್ತು ರೈತರ ಬದುಕು ಮೂರಾಬಟ್ಟೆ ಮಾಡಿದೆ. ತಾಲೂಕಿನ ಹೊಳೆಹೊನ್ನೂರು ಹೋಬಳಿ ಕೈಮರ,ನಾಗಸಮುದ್ರ, ಸನ್ಯಾಸಿಕೋಡಿಮಗ್ಗಿ, ಲಕ್ಷ್ಮಿಪುರ, ಮೈದೊಳಲು, ಮುಂಗೋಟೆ ಹೀಗೆ ಹತ್ತಾರು ಹಳ್ಳಿಯ ಜನರು ಗಾಳಿ ಮಳೆ ಮಾಡಿರುವ ಹಾನಿಯಿಂದ ಅಕ್ಷರಶಃ ಬೆಚ್ಚಿಬಿದ್ದಿದ್ದಾರೆ.

Source link

ವಾಷಿಂಗ್ ಮೆಷಿನ್ ಶಾಕ್‌ಗೆ ಮಹಿಳೆ ಬಲಿ; ಆಕಸ್ಮಿಕವೋ ಅಥವಾ ಕೊಲೆಯೋ? ಮಗಳ ಸಾವಿನ ಹಿಂದೆ ಅಳಿಯನ ಕೈವಾಡವಿದೆ ಎಂದು ಪೋಷಕರ ಆರೋಪ! – Kannada News | Gowdahalli Electrocution: Family alleges husband’s role in Sujata’s mysterious death

ವಾಷಿಂಗ್ ಮೆಷಿನ್ ಶಾಕ್‌ಗೆ ಸುಜಾತ ಬಲಿ

ಬೆಂಗಳೂರು, ಏ.27: ರಾಜ್ಯ ರಾಜಧಾನಿಯಲ್ಲಿ ಒಂದು ವಿಚಿತ್ರ ಘಟನೆಯೊಂದು ನಡೆದಿದೆ. ಇದು ಕೊಲೆಯೋ ಅಥವಾ ಆಕಸ್ಮಿಕವೋ ಎಂಬ ಅನುಮಾನಗಳು ಉಂಟಾಗಿದೆ. ಇದೀಗ ಈ ಸಾವಿನ ಸುತ್ತ ಹಲವು ಊಹಪೋಹಗಳು ಉಂಟಾಗಿದೆ. ವಾಷಿಂಗ್ ಮೆಷಿನ್ ಬಳಸುವಾಗ ವಿದ್ಯುತ್ ಸ್ಪರ್ಶಿಸಿ ಮಹಿಳೆಯೊಬ್ಬರು ಸಾವನ್ನಪ್ಪಿರುವ ಘಟನೆ ಬೆಂಗಳೂರು ಉತ್ತರ ತಾಲೂಕಿನ ಗೌಡಹಳ್ಳಿಯಲ್ಲಿ ನಡೆದಿದೆ. ಆದರೆ, ಮಗಳ ಸಾವಿನ ಹಿಂದೆ ಅಳಿಯನ ಕೈವಾಡವಿದೆ ಎಂದು ಪೋಷಕರು ಗಂಭೀರ ಶಂಕೆ ವ್ಯಕ್ತಪಡಿಸಿದ್ದಾರೆ.

ಮೃತ ಮಹಿಳೆಯನ್ನು ಸುಜಾತ (30) ಎಂದು ಗುರುತಿಸಲಾಗಿದೆ. ತುಮಕೂರಿನ ಹೆಗ್ಗೆರೆ ನಿವಾಸಿಗಳಾದ ಪಾಂಡುರಂಗಯ್ಯ ಮತ್ತು ಭಾಗ್ಯಮ್ಮ ದಂಪತಿಯ ನಾಲ್ಕನೇ ಮಗಳಾದ ಸುಜಾತ, 10 ವರ್ಷಗಳ ಹಿಂದೆ ರಿಯಲ್ ಎಸ್ಟೇಟ್ ಉದ್ಯಮಿ ಚೇತನ್ ಎಂಬುವವರನ್ನು ವಿವಾಹವಾಗಿದ್ದರು. ಇಂದು ಬೆಳಗ್ಗೆ 7:30ರ ಸುಮಾರಿಗೆ ವಾಷಿಂಗ್ ಮೆಷಿನ್ ಹಾಕಲು ಹೋದಾಗ ಕರೆಂಟ್ ಶಾಕ್ ತಗುಲಿ ಸುಜಾತ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ರಾಜಸ್ಥಾನದಲ್ಲಿ ಗಲಾಟೆ, ಬೆಂಗಳೂರಲ್ಲಿ ಬೆದರಿಕೆ: ಪಾರ್ಕ್​​ನಲ್ಲೇ ವ್ಯಕ್ತಿ ಆತ್ಮಹತ್ಯೆ ಕೇಸ್​​ಗೆ ಸ್ಫೋಟಕ ಟ್ವಿಸ್ಟ್​​

ಪೋಷಕರ ಅನುಮಾನಕ್ಕೆ ಕಾರಣವೇನು?

ಸುಜಾತ ಅವರ ಸಾವು ಕೇವಲ ಆಕಸ್ಮಿಕವಲ್ಲ, ಇದರ ಹಿಂದೆ ಅವರ ಪತಿ ಚೇತನ್ ಸಂಚು ಇರಬಹುದು ಎಂದು ಪೋಷಕರು ಆರೋಪಿಸುತ್ತಿದ್ದಾರೆ. ಅದಕ್ಕೆ ಕೆಲವೊಂದು ಕಾರಣಗಳನ್ನು ನೀಡಿದ್ದಾರೆ. ಮೊದಲಾಗಿ ಮದುವೆಯಾದಾಗಿನಿಂದಲೂ ದಂಪತಿಗಳ ನಡುವೆ ಜಗಳ ನಡೆಯುತ್ತಿತ್ತು. ಗಂಡನ ಕಿರುಕುಳ ತಾಳಲಾರದೆ ಸುಜಾತ ಒಂದು ತಿಂಗಳ ಹಿಂದೆ ತವರು ಮನೆಗೆ ಹೋಗಿದ್ದರು ಎಂದು ಹೇಳಲಾಗಿದೆ. ಚೇತನ್ ಮತ್ತು ಆತನ ತಾಯಿ ಸುಜಾತಳ ಮನವೊಲಿಸಿ ಕೇವಲ ಒಂದು ವಾರದ ಹಿಂದಷ್ಟೇ ಗೌಡಹಳ್ಳಿಗೆ ಕರೆಕೊಂಡು ಬಂದಿದ್ದರು. ಮನೆಗೆ ಬಂದ ಎಂಟೇ ದಿನದಲ್ಲಿ ಸುಜಾತ ಶವವಾಗಿರುವುದು ಪೋಷಕರಲ್ಲಿ ಭಾರಿ ಅನುಮಾನ ಮೂಡಿಸಿದೆ ಎಂದು ಆರೋಪಿಸಿದ್ದಾರೆ.

ಘಟನೆ ನಡೆದ ತಕ್ಷಣ ಸುಜಾತ ಅವರನ್ನು ವಿಪಿ ಮಾಗ್ನಸ್ ಆಸ್ಪತ್ರೆಗೆ ದಾಖಲಿಸಿದರೂ, ಅಷ್ಟರಲ್ಲೇ ಅವರು ಮೃತಪಟ್ಟಿದ್ದಾರೆ. ಸದ್ಯ ಮೃತದೇಹವನ್ನು ಹೆಚ್ಚಿನ ತನಿಖೆ ಮತ್ತು ಮರಣೋತ್ತರ ಪರೀಕ್ಷೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದು, ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರವೇ ಇದು ಆಕಸ್ಮಿಕವೋ ಅಥವಾ ವ್ಯವಸ್ಥಿತ ಕೊಲೆಯೋ ಎಂಬುದು ತಿಳಿದುಬರಬೇಕಿದೆ ಎಂದು ಪೊಲೀಸರು ಹೇಳಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version