ಬೆಳಗ್ಗೆ ಅಥವಾ ಸಂಜೆ; ಬೇಸಿಗೆಯಲ್ಲಿ ಗಿಡಗಳಿಗೆ ಯಾವ ಸಮಯದಲ್ಲಿ ನೀರು ಹಾಕಬೇಕು? – Kannada News | When is the best time to water plants in summer?
ಈ ಬೇಸಿಗೆಯ (summer) ತಾಪಕ್ಕೆ ಮನುಷ್ಯರಾದ ನಾವು, ಪ್ರಾಣಿ ಪಕ್ಷಿಗಳು ಮಾತ್ರವಲ್ಲ ಮರಗಿಡಗಳು ಸಹ ಬಸವಳಿದು ಹೋಗುತ್ತವೆ. ಆದ್ದರಿಂದ ಈ ಸುಡು ಬೇಸಿಗೆಯಲ್ಲಿ ಮನೆಯಲ್ಲಿರುವ ಗಿಡಗಳ ಬಗ್ಗೆ ತುಸು ಹೆಚ್ಚೇ ಕಾಳಜಿ ವಹಿಸಬೇಕಾಗುತ್ತದೆ. ಇಲ್ಲದಿದ್ದರೆ ಈ ಶಾಖಕ್ಕೆ ಗಿಡಗಳು ಒಣಗುವ, ಸತ್ತು ಹೋಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಇಂತಹ ಸಮಯದಲ್ಲಿ ಗಿಡಗಳನ್ನು ರಕ್ಷಿಸಲು ಹೆಚ್ಚಿನವರು ಬೆಳಗ್ಗೆ ಮತ್ತು ಸಂಜೆ ಗಿಡಗಳಿಗೆ ಅತಿಯಾಗಿ ನೀರು ಹಾಕಿ ಪೋಷಿಸುತ್ತಲೇ ಇರುತ್ತಾರೆ. ಆದ್ರೆ ಅತಿಯಾಗಿ ನೀರು ಹಾಕುತ್ತಲೇ ಇರುತ್ತಾರೆ. ಹೀಗೆ ಅತಿಯಾಗಿ…