ತಾಳ್ಮೆ ಕಳೆದುಕೊಂಡ ರಘುವಂಶಿಗೆ 4.28 ಲಕ್ಷ ರೂ. ದಂಡ! – Kannada News | IPL 2026: KKR’s Angkrish Raghuvanshi Fined

ಕೋಲ್ಕತ್ತಾ ನೈಟ್ ರೈಡರ್ಸ್ (KKR) ತಂಡದ ಉದಯೋನ್ಮುಖ ಬ್ಯಾಟರ್ ಅಂಗ್​ಕ್ರಿಶ್ ರಘುವಂಶಿ ಅವರಿಗೆ ಐಪಿಎಲ್ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಕ್ಕಾಗಿ ಪಂದ್ಯದ ಸಂಭಾವನೆಯಲ್ಲಿ ಶೇ. 20 ರಷ್ಟು ದಂಡ ವಿಧಿಸಲಾಗಿದೆ. ಇದರೊಂದಿಗೆ ಅವರ ಶಿಸ್ತಿನ ದಾಖಲೆಗೆ ಒಂದು ಡಿಮೆರಿಟ್ ಪಾಯಿಂಟ್ ಅನ್ನು ಸೇರಿಸಲಾಗಿದೆ.

ಏಪ್ರಿಲ್ 26 ರಂದು ಲಕ್ನೋ ಸೂಪರ್ ಜೈಂಟ್ಸ್ (LSG) ವಿರುದ್ಧ ನಡೆದ ಪಂದ್ಯದಲ್ಲಿ ಅಂಗ್​ಕ್ರಿಶ್ ರಘುವಂಶಿ ಅವರು ‘ಫೀಲ್ಡಿಂಗ್‌ಗೆ ಅಡ್ಡಿಪಡಿಸಿದ’ (Obstructing the field) ಕಾರಣಕ್ಕಾಗಿ ಔಟ್ ಎಂದು ಘೋಷಿಸಲಾಯಿತು. ಅಂಪೈರ್ ತೀರ್ಪಿನಿಂದ ತೀವ್ರ ಅಸಮಾಧಾನಗೊಂಡ ರಘುವಂಶಿ, ಮೈದಾನದಿಂದ ಹೊರಹೋಗುವಾಗ ಬೌಂಡರಿ ಲೈನ್‌ನಲ್ಲಿದ್ದ ಕುಶನ್‌ಗಳನ್ನು ಬ್ಯಾಟ್‌ನಿಂದ ಜೋರಾಗಿ ಹೊಡೆದರು. ಅಷ್ಟೇ ಅಲ್ಲದೆ, ಡಗೌಟ್ ತಲುಪಿದ ನಂತರ ಸಿಟ್ಟಿನಿಂದ ತಮ್ಮ ಹೆಲ್ಮೆಟ್ ಅನ್ನು ಎಸೆದಿದ್ದರು.

ನಿಯಮದ ಉಲ್ಲಂಘನೆ:

ಐಪಿಎಲ್ ನೀತಿ ಸಂಹಿತೆಯ ಆರ್ಟಿಕಲ್ 2.2 ರ ಅಡಿಯಲ್ಲಿ (ಕ್ರಿಕೆಟ್ ಉಪಕರಣಗಳು ಅಥವಾ ಮೈದಾನದ ವಸ್ತುಗಳ ದುರ್ಬಳಕೆ) ರಘುವಂಶಿ ಅವರ ಈ ವರ್ತನೆಯನ್ನು ‘ಲೆವೆಲ್ 1’ ಅಪರಾಧ ಎಂದು ಪರಿಗಣಿಸಲಾಗಿದೆ. ರಘುವಂಶಿ ಅವರು ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದು, ಮ್ಯಾಚ್ ರೆಫರಿ ವಿಧಿಸಿದ ಶಿಕ್ಷೆಯನ್ನು ಅಂಗೀಕರಿಸಿದ್ದಾರೆ.

4.28 ಲಕ್ಷ ರೂ. ದಂಡ!

ಅಂಗ್​ಕ್ರಿಶ್ ರಘುವಂಶಿ ಅವರಿಗೆ ಕೆಕೆಆರ್ 3 ಕೋಟಿ ರೂ. ಸಂಭಾವನೆ ನೀಡುತ್ತಿದೆ. ಅದರಂತೆ ಲೀಗ್​ ಹಂತದ ಪ್ರತಿ ಪಂದ್ಯಕ್ಕೆ ಅವರ ಪಡೆಯುತ್ತಿರುವ ಶುಲ್ಕ 21,42857. ಈ  ಪಂದ್ಯ ಶುಲ್ಕದ ಶೇ.20 ರಷ್ಟು ದಂಡ ಕಟ್ಟಬೇಕಾಗುತ್ತದೆ. ಅದರಂತೆ ಅಂಗ್​ಕ್ರಿಶ್ ರಘುವಂಶಿ 4.28 ಲಕ್ಷ ರೂ. ದಂಡ ಪಾವತಿಸಬೇಕು.

ವಿವಾದಾತ್ಮಕ ಔಟ್:

ಈ ಪಂದ್ಯದ 5ನೇ ಓವರ್‌ನಲ್ಲಿ ರನ್ ಓಡುವಾಗ ರಘುವಂಶಿ ಅವರು ತಮ್ಮ ದಿಕ್ಕನ್ನು ಬದಲಿಸಿ ಫೀಲ್ಡರ್ ಎಸೆದ ಚೆಂಡಿಗೆ ಅಡ್ಡಿಪಡಿಸಿದರು ಎಂಬ ಕಾರಣಕ್ಕೆ ಲಕ್ನೋ ತಂಡ ಅಪೀಲ್ ಮಾಡಿತ್ತು. ಮೂರನೇ ಅಂಪೈರ್ ಇದನ್ನು ಪರಿಶೀಲಿಸಿ ‘ಔಟ್’ ಎಂದು ತೀರ್ಪು ನೀಡಿದ್ದರು. ಐಪಿಎಲ್ ಇತಿಹಾಸದಲ್ಲಿ ‘ಫೀಲ್ಡಿಂಗ್‌ಗೆ ಅಡ್ಡಿಪಡಿಸಿದ’ ಕಾರಣಕ್ಕೆ ಔಟ್ ಆದ ನಾಲ್ಕನೇ ಆಟಗಾರ ಎಂಬ ಕುಖ್ಯಾತಿಗೆ ರಘುವಂಶಿ ಪಾತ್ರರಾದರು.

ಇದನ್ನೂ ಓದಿ: ಧೋನಿಯ 15 ವರ್ಷಗಳ ಹಳೆಯ ದಾಖಲೆ ಮುರಿದ ರಿಂಕು ಸಿಂಗ್

ಕೆಕೆಆರ್​ಗೆ ಸೂಪರ್ ಗೆಲುವು:

ಇಂಡಿಯನ್ ಪ್ರೀಮಿಯರ್ ಲೀಗ್​ನ 38ನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು 20 ಓವರ್​ಗಳಲ್ಲಿ 155 ರನ್ ಬಾರಿಸಿದ್ದು. ಈ ಗುರಿಯನ್ನು ಬೆನ್ನತ್ತಿದ ಲಕ್ನೋ ಸೂಪರ್ ಜೈಂಟ್ಸ್ 20 ಓವರ್​ಗಳಲ್ಲಿ 155 ರನ್​ ಗಳಿಸಿ ಪಂದ್ಯವನ್ನು ಟೈನಲ್ಲಿ ಅಂತ್ಯಗೊಳಿಸಿದ್ದರು. ಇದಾದ ಬಳಿಕ ನಡೆದ ಸೂಪರ್ ಓವರ್​ನಲ್ಲಿ ಎಲ್​ಎಸ್​ಜಿ ಕೇವಲ 1 ರನ್​ಗಳಿಸಿತು. ಸೂಪರ್ ಓವರ್​ನಲ್ಲಿ 2 ರನ್​ಗಳ ಗುರಿ ಪಡೆದ ಕೆಕೆಆರ್ ಮೊದಲ ಎಸೆತದಲ್ಲಿ ಫೋರ್ ಬಾರಿಸಿ ಗೆಲುವು ದಾಖಲಿಸಿದೆ.

Source link

ಬೆಂಗಳೂರಿನ ರಾಜಕುಮಾರ್ ಸ್ಮಾರಕದ ಬಳಿ ಫ್ಲೆಕ್ಸ್ ಗೋಡೌನ್‌ನಲ್ಲಿ ಭೀಕರ ಅಗ್ನಿ ಅವಘಡ – Kannada News | Massive Fire Engulfs LED Godown Near Rajkumar Memorial in Bengalurus Nandini Layout

ಬೆಂಗಳೂರು, ಏಪ್ರಿಲ್​​ 27: ನಂದಿನಿ ಲೇಔಟ್‌ನಲ್ಲಿರುವ ರಾಜಕುಮಾರ್ ಸ್ಮಾರಕದ ಸಮೀಪದ ಬ್ಲೂ ಲೀಫ್ ಎಲ್‌ಇಡಿ ಗೋಡೌನ್‌ನಲ್ಲಿ ಮಧ್ಯರಾತ್ರಿ ಭೀಕರ ಅಗ್ನಿ ಅವಘಡ ನಡೆದಿದೆ. ಬ್ಯಾನರ್‌ಗಳು ಮತ್ತು ಎಲ್‌ಇಡಿ ಸ್ಕ್ರೀನ್‌ಗಳನ್ನು ಸಂಗ್ರಹಿಸಿ ವಿತರಿಸುತ್ತಿದ್ದ ಈ ಗೋಡೌನ್ ಬೆಂಕಿಗೆ ಆಹುತಿಯಾಗಿದ್ದು, ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಅಗ್ನಿ ಅನಾಹುತ ನಡೆದಿರಬಹುದೆಂದು ಪ್ರಾಥಮಿಕವಾಗಿ ಶಂಕಿಸಲಾಗಿದೆ. ಗೋಡೌನ್ ಮುಂಭಾಗ ನಿಲ್ಲಿಸಿದ್ದ ಬುಲೆಟ್ ಮತ್ತು ಬೊಲೆರೊ ಪಿಕಪ್ ವಾಹನಗಳು ಕೂಡ ಸುಟ್ಟು ಹೋಗಿವೆ. ಅಗ್ನಿಶಾಮಕ ದಳದ ಸಿಬ್ಬಂದಿಗಳು ತಕ್ಷಣ ಕಾರ್ಯಪ್ರವೃತ್ತರಾಗಿ ಬೆಂಕಿಯನ್ನು ನಂದಿಸುವ ಕಾರ್ಯಾಚರಣೆ ನಡೆಸಿದ್ದಾರೆ. ಬೆಂಕಿಯ ಕೆನ್ನಾಲಿಗೆ ಪಕ್ಕದಲ್ಲಿದ್ದ ನಾಲ್ಕು ಅಂತಸ್ತಿನ ಲೇಡಿಸ್ ಪಿಜಿ ಕಟ್ಟಡ ಹಾಗೂ ಸುತ್ತಮುತ್ತಲಿನ ಮನೆಗಳಿಗೂ ವ್ಯಾಪಿಸಿದ ಪರಿಣಾಮ, ಅಪಾರ ಹಾನಿಯಾಗಿದೆ. ಪಿಜಿಯಲ್ಲಿದ್ದ ಸುಮಾರು 50 ಮಹಿಳೆಯರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದ್ದು, ಬೆಂಕಿಯಿಂದ ಮನೆಗಳ ಗೋಡೆಗಳು ಬಿರುಕು ಬಿಟ್ಟಿವೆ ಮತ್ತು ಕಿಟಕಿ ಗಾಜುಗಳು ಪುಡಿ ಪುಡಿಯಾಗಿವೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಬೆಂಗಳೂರು: ಅಕ್ರಮದ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಿದ್ದ ಮಹಿಳೆ ವಿರುದ್ಧವೇ ಅವಹೇಳನ! – Kannada News | Bengaluru: Woman Whistleblower Satyavathi Targeted with Defamatory Banners After Lokayukta Complaint

ಬೆಂಗಳೂರು, ಏಪ್ರಿಲ್ 27: ಬೆಂಗಳೂರಿನ ಎಚ್‌ಎಎಲ್‌ನ ವಿಭೂತಿಪುರದಲ್ಲಿ ರಾಜಕಾಲುವೆ ಒತ್ತುವರಿ ಹಾಗೂ ಅಕ್ರಮ ಬ್ಯಾನರ್‌ಗಳ ಕುರಿತು ಲೋಕಾಯುಕ್ತಕ್ಕೆ ದೂರು ನೀಡಿದ್ದ ಮಹಿಳೆ ಸತ್ಯವತಿ ಎಂಬವರಿಗೆ ಬಿಗ್ ಶಾಕ್ ಎದುರಾಗಿದೆ. ಅಕ್ರಮ ಬ್ಯಾನರ್‌ಗಳನ್ನು ತೆರವುಗೊಳಿಸಿದ ನಂತರ, ಅವರ ವಿರುದ್ಧವೇ ಅವಹೇಳನಕಾರಿ ಬ್ಯಾನರ್‌ಗಳನ್ನು ತಲಕಾವೇರಿ ಲೇಔಟ್‌ನ ಗಲ್ಲಿಗಲ್ಲಿಯಲ್ಲಿ ಅಳವಡಿಸಲಾಗಿದೆ. ಈ ಬ್ಯಾನರ್‌ಗಳಲ್ಲಿ, ಅಧಿಕಾರಿಗಳಿಗೆ ಹೆದರಿಸಿ ಸತ್ಯವತಿ ಹಣ ವಸೂಲಿ ಮಾಡುತ್ತಿದ್ದಾರೆಂದು ಆರೋಪಿಸಲಾಗಿದೆ. ಸತ್ಯವತಿ ಜಿಬಿಎ ಟಿಕೆಟ್ ಆಕಾಂಕ್ಷಿಯೂ ಆಗಿದ್ದಾರೆ. ಅವರು ಜಿಬಿಎ ಕಮಿಷನರ್ ವಿರುದ್ಧವೂ ದೂರು ನೀಡಿದ್ದರು. ಸದ್ಯ ಸತ್ಯವತಿ ಎಚ್‌ಎಎಲ್ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ. ಲೋಕಾಯುಕ್ತಕ್ಕೆ ದೂರು ನೀಡಿದ ಮಹಿಳೆಗೆ ಇಂತಹ ಅವಹೇಳನಕಾರಿ ಬ್ಯಾನರ್‌ಗಳ ಮೂಲಕ ಆಕ್ರೋಶ ವ್ಯಕ್ತಪಡಿಸಲಾಗಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಜರ್ಮನ್ ಒಪೆರಾ ಹಾಡಿದ ಸರೆಗಮಪ ಸ್ಪರ್ಧಿ; ಜಡ್ಜ್​​ಗಳೇ ಶಾಕ್  – Kannada News | Anushka Shocks Judges with German Opera on Sa Re Ga Ma Pa Zee Kannada

‘ಸರೆಗಮಪ’ ಶೋ ಆರಂಭ ಆಗಿದೆ. ಇದಕ್ಕೆ ಆಡಿಷನ್ ನಡೆಯುತ್ತಿದೆ. ವಿವಿಧ ರೀತಿಯ ಸ್ಪರ್ಧಿಗಳು ಇದಕ್ಕೆ ಆಗಮಿಸಿದ್ದಾರೆ. ಅನುಷ್ಕಾ ಎಂಬ ಸ್ಪರ್ಧಿ ಜರ್ಮನ್ ಒಪೆರಾ ಹಾಡಿದ್ದಾರೆ. ಇದನ್ನು ಕೇಳಿ ಜಡ್ಜ್​​ಗಳು ಕೂಡ ಒಮ್ಮೆ ಶಾಕ್ ಆದರು. ಅರ್ಜುನ್ ಜನ್ಯ ಅವರು ತಲೆಬಾಗಿದರು. ಈ ವಿಡಿಯೋನ ಜೀ ಕನ್ನಡ ವಾಹಿನಿ ಹಂಚಿಕೊಂಡಿದೆ. ಆ ಸಂದರ್ಭದ ವಿಡಿಯೋ ಮೇಲಿದೆ ನೋಡಿ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ತೆಲಂಗಾಣದಲ್ಲಿ ಭೀಕರ ಕೃತ್ಯ, ಮಾಂಸದ ಅಡುಗೆ ವಿಚಾರಕ್ಕೆ ದಂಪತಿ ನಡುವೆ ವಾಗ್ವಾದ, ಪತಿಯನ್ನೇ ಕೊಂದ ಪತ್ನಿ – Kannada News | Telangana: Wife Kills Husband Over Non Veg Food Dispute in Kamareddy

ಕಾಮರೆಡ್ಡಿ, ಏಪ್ರಿಲ್ 27: ಮಾಂಸದಡುಗೆ ವಿಚಾರವಾಗಿ ಆರಂಭವಾದ ಜಗಳ ಕೊಲೆ(Murder)ಯಲ್ಲಿ ಅಂತ್ಯಗೊಂಡಿರುವ ಘಟನೆ ತೆಲಂಗಾಣದ ಕಾಮರೆಡ್ಡಿಯಲ್ಲಿ ನಡೆದಿದೆ.ಸಣ್ಣ ಕೋಪ ಮನುಷ್ಯನ ವಿವೇಚನೆಯನ್ನು ಹೇಗೆ ನಾಶಪಡಿಸುತ್ತದೆ ಎಂಬುದಕ್ಕೆ ಈ ಘಟನೆ ಸಾಕ್ಷಿ. ಕೇವಲ ಮಾಂಸದ ಅಡುಗೆ ಮಾಡಿಲ್ಲ ಎಂಬ ಕಾರಣಕ್ಕೆ ದಂಪತಿ ನಡುವೆ ನಡೆದ ವಾಗ್ವಾದವು ಪತಿಯ ಸಾವಿನಲ್ಲಿ ಅಂತ್ಯವಾಗಿದೆ.

ಕೋದಂಡ ಶಿವಾಜಿ ಮತ್ತು ಲಕ್ಷ್ಮಿ ದಂಪತಿ ತಮ್ಮ ಇಬ್ಬರು ಪುಟ್ಟ ಹೆಣ್ಣುಮಕ್ಕಳೊಂದಿಗೆ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಕಳೆದ ಕೆಲವು ತಿಂಗಳುಗಳಿಂದ ಈ ಕುಟುಂಬವು ತೀವ್ರ ಆರ್ಥಿಕ ಒತ್ತಡಕ್ಕೆ ಸಿಲುಕಿತ್ತು. ಹಣಕಾಸಿನ ತೊಂದರೆಯಿಂದಾಗಿ ದಂಪತಿಗಳ ನಡುವೆ ಪ್ರತಿದಿನ ಕಿತ್ತಾಟ ನಡೆಯುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಯ ರಾತ್ರಿ, ಶಿವಾಜಿ ಮನೆಯಲ್ಲಿ ಮಾಂಸಾಹಾರದ ಅಡುಗೆ ಮಾಡದಿರುವ ಬಗ್ಗೆ ಲಕ್ಷ್ಮಿಯನ್ನು ಪ್ರಶ್ನಿಸಿದ್ದಾರೆ. ಈಗಾಗಲೇ ಆರ್ಥಿಕ ಸಮಸ್ಯೆ ಮತ್ತು ಜೀವನಶೈಲಿಯ ಬಗ್ಗೆ ಬೇಸತ್ತಿದ್ದ ಲಕ್ಷ್ಮಿ ಮತ್ತು ಶಿವಾಜಿ ನಡುವೆ ಈ ವಿಚಾರವಾಗಿ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಕೋಪದ ಭರದಲ್ಲಿ ವಿವೇಚನೆ ಕಳೆದುಕೊಂಡ ಲಕ್ಷ್ಮಿ, ಮನೆಯಲ್ಲಿದ್ದ ಮಚ್ಚಿನಿಂದ ಪತಿ ಶಿವಾಜಿಯ ಕುತ್ತಿಗೆಗೆ ಬಲವಾಗಿ ಹೊಡೆದಿದ್ದಾಳೆ.

ಮತ್ತಷ್ಟು ಓದಿ: ಸಿನಿಮಾ ಸ್ಟೈಲ್​​ ಕೊಲೆ ಕೇಸ್​ ಭೇದಿಸಿದ ಖಾಕಿ: ಆಸ್ತಿ ವಿವಾದಕ್ಕೆ ನಡೆದಿದ್ದು ಡೆಡ್ಲಿ ಮರ್ಡರ್​!

ದಾಳಿಯ ತೀವ್ರತೆಗೆ ಶಿವಾಜಿ ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ. ಮನೆಯೊಳಗೆ ಕಿರುಚಾಟ ಕೇಳಿ ನೆರೆಹೊರೆಯವರು ಸ್ಥಳಕ್ಕೆ ಧಾವಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಾಯಿ ಜೈಲು ಪಾಲಾಗಿ, ತಂದೆ ಇಹಲೋಕ ತ್ಯಜಿಸಿದ್ದರಿಂದ ಕೇವಲ ಎರಡು ಮತ್ತು ಒಂದು ವರ್ಷದ ಇಬ್ಬರು ಹೆಣ್ಣುಮಕ್ಕಳು ಈಗ ಅನಾಥರಾಗಿದ್ದಾರೆ.

ಸ್ಥಳಕ್ಕೆ ಧಾವಿಸಿದ ಪೊಲೀಸ್ ವೃತ್ತ ನಿರೀಕ್ಷಕ ನರಹರಿ ನೇತೃತ್ವದ ತಂಡವು ಲಕ್ಷ್ಮಿಯನ್ನು ವಶಕ್ಕೆ ಪಡೆದಿದೆ. ದಂಪತಿ ನಡುವೆ ಇದ್ದ ದೀರ್ಘಕಾಲದ ಆರ್ಥಿಕ ಸಮಸ್ಯೆಗಳೇ ಈ ಹಿಂಸಾತ್ಮಕ ಕೃತ್ಯಕ್ಕೆ ಪ್ರೇರಣೆಯಾಗಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ ಎಂದು ಅವರು ತಿಳಿಸಿದ್ದಾರೆ. ಸದ್ಯ ಕೊಲೆ ಪ್ರಕರಣ ದಾಖಲಾಗಿದ್ದು, ಮರಣೋತ್ತರ ಪರೀಕ್ಷೆಯ ವರದಿಗಾಗಿ ಪೊಲೀಸರು ಕಾಯುತ್ತಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

SSLC ಫಲಿತಾಂಶದ ವೇಳೆ ಮೌಲ್ಯಮಾಪಕರಿಂದ ಭಾರಿ ಯಡವಟ್ಟು: 92ರ ಬದಲು ವಿದ್ಯಾರ್ಥಿಗೆ ಬಂದಿದ್ದು 48 ಅಂಕ! – Kannada News | SSLC Mark Entry Error: Student Ramadatta Sharma Receives 48 Instead of 92 Marks

ಚಿಕ್ಕಮಗಳೂರು, ಏಪ್ರಿಲ್​​ 27: ಎಸ್ಎಸ್ಎಲ್ಸಿ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ಮೌಲ್ಯಮಾಪಕರಿಂದ ಆಗಿರುವ ದೊಡ್ಡ ಯಡವಟ್ಟೊಂದು ಬೆಳಕಿಗೆ ಬಂದಿದೆ. ಇದರಿಂದಾಗಿ ಶೃಂಗೇರಿಯ ರಾಮಕೃಷ್ಣ ಇಂಗ್ಲೀಷ್ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಮದತ್ತ ಶರ್ಮಾ ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ಇಂಗ್ಲಿಷ್ ಭಾಷೆಯಲ್ಲಿ ರಾಮದತ್ತ ಶರ್ಮ ಅವರಿಗೆ ಬರಬೇಕಿದ್ದ ಅಂಕ 92 ಆಗಿತ್ತು. ಆದರೆ, ಫಲಿತಾಂಶದಲ್ಲಿ ಕೇವಲ 48 ಅಂಕಗಳು ನಮೂದಾಗಿವೆ. ಇಂಟರ್ನಲ್‌ನಲ್ಲಿ 20 ಅಂಕಗಳು ಹಾಗೂ ಉತ್ತರ ಪತ್ರಿಕೆಯ ಫೋಟೋಕಾಪಿಯಲ್ಲಿ 72 ಅಂಕಗಳು (80ಕ್ಕೆ) ಸ್ಪಷ್ಟವಾಗಿ ದಾಖಲಾಗಿದ್ದು, ಒಟ್ಟು 92 ಅಂಕಗಳು ಬರಬೇಕಿತ್ತು. ಆದರೆ, ಕಂಪ್ಯೂಟರ್‌ನಲ್ಲಿ ಅಂಕಗಳನ್ನು ನಮೂದಿಸುವ ವೇಳೆ ಮೌಲ್ಯಮಾಪಕರು ಮಹಾ ಎಡವಟ್ಟು ಮಾಡಿದ್ದಾರೆ. ಇದರಿಂದಾಗಿ 20 ಇಂಟರ್ನಲ್ ಅಂಕಗಳ ಜೊತೆಗೆ ಬಾಹ್ಯ ಪರೀಕ್ಷೆಯಲ್ಲಿ 28 ಅಂಕಗಳನ್ನು ಮಾತ್ರ ನಮೂದಿಸಿ, ಒಟ್ಟು 48 ಅಂಕಗಳನ್ನು ನೀಡಲಾಗಿದೆ. ಇದು ವಿದ್ಯಾರ್ಥಿಯ ಭವಿಷ್ಯದೊಂದಿಗೆ ಚೆಲ್ಲಾಟವಾಡಿದಂತಾಗಿದೆ ಎಂದು ವಿದ್ಯಾರ್ಥಿ ಮತ್ತು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ತಪ್ಪನ್ನು ಸರಿಪಡಿಸುವಂತೆ ರಾಮದತ್ತ ಶರ್ಮಾ ಪರೀಕ್ಷಾ ಮಂಡಳಿಗೆ ಮನವಿ ಮಾಡಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಧೋನಿಯ 15 ವರ್ಷಗಳ ಹಳೆಯ ದಾಖಲೆ ಮುರಿದ ರಿಂಕು ಸಿಂಗ್ – Kannada News | Rinku Singh Breaks MS Dhoni’s Record

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ರಿಂಕು ಸಿಂಗ್ (Rinku Singh) ಹೊಸ ಇತಿಹಾಸ ನಿರ್ಮಿಸಿದ್ದಾರೆ. ಅದು ಸಹ ಮಹೇಂದ್ರ ಸಿಂಗ್ ಧೋನಿ (MS Dhoni) ಹೆಸರಿನಲ್ಲಿದ್ದ 15 ವರ್ಷಗಳ ಹಳೆಯ ದಾಖಲೆಯನ್ನು ಮುರಿಯುವ ಮೂಲಕ ಎಂಬುದು ವಿಶೇಷ. 

Source link

ಸಿಇಟಿ ವೇಳೆ ವಿದ್ಯಾರ್ಥಿಗಳಿಗೆ ಜನಿವಾರ ತೆಗೆಸಿದ ಪ್ರಕರಣ: ಕೃಪಾನಿಧಿ ಕಾಲೇಜಿಗೆ ಬಿಗ್​​ ಶಾಕ್​ – Kannada News | Krupanidhi College May Face Ban; DC Recommends No Government Exams After CET Janivara Row

ಸಿಇಟಿ ವೇಳೆ ವಿದ್ಯಾರ್ಥಿಗಳಿಗೆ ಜನಿವಾರ ತೆಗೆಸಿದ್ದ ಕಾಲೇಜಿಗೆ ಬಿಗ್​​ ಶಾಕ್​

ಬೆಂಗಳೂರು, ಏಪ್ರಿಲ್​​ 27: ಸಿಇಟಿ ಕೇಂದ್ರದಲ್ಲಿ ವಿದ್ಯಾರ್ಥಿಗಳ ಜನಿವಾರ ತೆಗೆಸಿದ ವಿಚಾರ ಭಾರಿ ವಿವಾದಕ್ಕೆ ಕಾರಣವಾಗುತ್ತಿದ್ದಂತೆ ಬೆಂಗಳೂರಿನ (Bengaluru) ಮಡಿವಾಳದಲ್ಲಿರುವ ಕೃಪಾನಿಧಿ ಕಾಲೇಜಿನ ಮೂವರು ಸಿಬ್ಬಂದಿ ಅಮಾನತು ಮಾಡಲಾಗಿತ್ತು. ಈ ನಡುವೆ ಇದು ಧಾರ್ಮಿಕ ಸ್ವಾತಂತ್ರ್ಯದ ಉಲ್ಲಂಘನೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ, ಕಾಲೇಜು ಪರವಾನಗಿ ರದ್ದುಪಡಿಸಿ 25 ಲಕ್ಷ ರೂ.ದಂಡ ವಿಧಿಸುವಂತೆ ಮುಖ್ಯಮಂತ್ರಿಗಳಿಗೆ ದೂರು ನೀಡಿ ಆಗ್ರಹಿಸಿತ್ತು. ಆ ಬೆನ್ನಲ್ಲೇ ಕೃಪಾನಿಧಿ ಕಾಲೇಜಿಗೆ ಬಿಗ್​​ ಶಾಕ್​​ ಸಿಕ್ಕಿದೆ. ಈ ಕಾಲೇಜಿನಲ್ಲಿ ಇನ್ಮುಂದೆ ಸರ್ಕಾರಿ ಪರೀಕ್ಷೆ ನಡೆಸದಂತೆ ಸರ್ಕಾರಕ್ಕೆ ವರದಿ ಸಲ್ಲಿಸೋದಾಗಿ ಬೆಂಗಳೂರು ನಗರ ಡಿಸಿ ಜಗದೀಶ್ ತಿಳಿಸಿದ್ದಾರೆ.

ನಗರ ಡಿಸಿ ಜಗದೀಶ್​​ ಹೇಳಿದ್ದೇನು?

ಸಿಇಟಿ ಪರೀಕ್ಷೆ ವೇಳೆ ಜನಿವಾರ ತೆಗೆಸಿದ ವಿಚಾರ ಸಂಬಂಧ ಕೃತ್ಯ ಎಸಗಿರೋದು ಯಾರು ಎಂಬ ಬಗ್ಗೆ ತನಿಖೆ ಮಾಡಲಾಗಿದೆ. ವಸ್ತ್ರಸಂಹಿತೆ ಬಗ್ಗೆ ತರಬೇತಿ ನೀಡಿದ್ದರೂ ಇಷ್ಟೆಲ್ಲ ಸಮಸ್ಯೆಯಾಗಿದೆ. ಜನಿವಾರ ಘಟನೆಯಲ್ಲಿ ಕರ್ತವ್ಯ ಲೋಪವಾಗಿರುವ ಕಾರಣ ಕೃಪಾನಿಧಿ ಕಾಲೇಜಿನಲ್ಲಿ ಇನ್ಮುಮುಂದೆ ಸರ್ಕಾರಿ ಪರೀಕ್ಷೆಗಳನ್ನು ನಡೆಸದಂತೆ ಸರ್ಕಾರಕ್ಕೆ ವರದಿ ಸಲ್ಲಿಕೆ ಮಾಡುತ್ತೇವೆ. ಪರೀಕ್ಷಾರ್ಥಿಗಳ ಜನಿವಾರvನ್ನು ಉದ್ದೇಶಪೂರ್ವಕವಾಗಿ ತೆಗಿಸಲಾಗಿರುವ ಕಾರಣ ಕೃಪಾನಿಧಿ ಕಾಲೇಜಿನಲ್ಲಿ ಇನ್ನು ಮುಂದೆ ಪರೀಕ್ಷಾ ಕೇಂದ್ರ ನೀಡದಂತೆ ವರದಿ ನೀಡುತ್ತೇವೆ ಎಂದು ಬೆಂಗಳೂರು ನಗರ ಡಿಸಿ ಜಗದೀಶ್ ತಿಳಿಸಿದ್ದಾರೆ.

ಇದನ್ನೂ ಓದಿ: ಸಿಇಟಿ ಕೇಂದ್ರದಲ್ಲಿ ವಿದ್ಯಾರ್ಥಿ ಜನಿವಾರ ತೆಗೆಸಿದ ಆರೋಪ: ಕೃಪಾನಿಧಿ ಕಾಲೇಜಿನ ಮೂವರು ಸಿಬ್ಬಂದಿ ಅಮಾನತು

ತನಿಖೆಗೆ ಆಗ್ರಹಿಸಿದ್ದ KEA

2026ನೇ ಸಾಲಿನ ಸಿಇಟಿ ಪರೀಕ್ಷೆ ವೇಳೆ ಬೆಂಗಳೂರು ಕೇಂದ್ರದಲ್ಲಿ ಏಪ್ರಿಲ್​​ 23ರ ಭೌತಶಾಸ್ತ್ರ ವಿಷಯದ ಪರೀಕ್ಷೆಗೆ ಹಾಜರಾಗಲು ಬಂದಿದ್ದ ಕೆಲವು ಅಭ್ಯರ್ಥಿಗಳ ಜನಿವಾರವನ್ನು ತೆಗೆಸಲು ಅಲ್ಲಿಯ ಸಿಬ್ಬಂದಿಗಳು ಸೂಚಿಸಿರುತ್ತಾರೆಂದು, ನಂತರ ಪರೀಕ್ಷೆಗೆ ಹಾಜರಾಗಲು ಅನುಮತಿ ನೀಡಿರುತ್ತಾರೆ ಎಂದು ಮಾಧ್ಯಮಗಳ ಮೂಲಕ ತಿಳಿದುಬಂದಿದೆ. ಇದೊಂದು ಸೂಕ್ಷ್ಮ ವಿಚಾರವಾಗಿದ್ದು, ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಬಹಳ ಸ್ಪಷ್ಟವಾಗಿ ವಸ್ತ್ರ ಸಂಹಿತೆಯ ಬಗ್ಗೆ ವಿವರಿಸಿದೆ. ಕಳೆದ ವರ್ಷದಲ್ಲಿ ನಡೆದ ಇದೇ ತರಹದ ಘಟನೆ ಉಲ್ಲೇಖಿಸಿ ಜನಿವಾರ, ಲಿಂಗ ಇತ್ಯಾದಿ ಧಾರ್ಮಿಕ ದಿರಿಸುಗಳನ್ನು ತೆಗೆಯಬಾರದೆಂದು ಸ್ಪಷ್ಟವಾಗಿ ತರಬೇತಿಯಲ್ಲಿ ತಿಳಿಸಲಾಗಿದೆ. ಆದರೂ ಇಂತಹ ಘಟನೆ ನಡೆದಿದ್ದರೆ ಯಾರೋ ಉದ್ದೇಶ ಪೂರ್ವಕವಾಗಿ ಮಾಡಿದಂತೆ ಮೇಲ್ನೋಟಕ್ಕೆ ಕಂಡುಬರುತ್ತಿದೆ. ಹೀಗಾಗಿ ಈ ಬಗ್ಗೆ ಹಿರಿಯ ಅಧಿಕಾರಿಗಳಿಂದ ವಿಚಾರಣೆ ನಡೆಸಿ ನಿಯಮಾನುಸಾರ ತಕ್ಷಣ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಪೂರ್ಣ ವರದಿ ಸಲ್ಲಿಸುವಂತೆ ಬೆಂಗಳೂರು ನಗರ ಡಿಸಿಗೆ ಪತ್ರ ಬರೆದು KEA ಕೂಡ ಆಗ್ರಹಿಸಿತ್ತು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಭೀಮಗಢ ಅಭಯಾರಣ್ಯದಲ್ಲಿ ಬದುಕು ಅಸ್ತವ್ಯಸ್ತ: ಕಾಡು ಬಿಡಲು ಕಾಯುತ್ತಿವೆ 450 ಕುಟುಂಬಗಳು! – Kannada News | Bhimgad Wildlife Sanctuary Relocation: 450 Families Wait for Better Compensation Package

ಭೀಮಗಢ ಅಭಯಾರಣ್ಯದಲ್ಲಿರುವ ಕುಗ್ರಾಮImage Credit source: Deccan herald

ಬೆಳಗಾವಿ, ಏಪ್ರಿಲ್ 27: ಪಶ್ಚಿಮ ಘಟ್ಟದ ಸೂಕ್ಷ್ಮ ಪ್ರದೇಶ ಹಾಗೂ ಹುಲಿ-ಆನೆಗಳ ಪ್ರಮುಖ ಸಂಚಾರಿ ಪಥವಾಗಿರುವ ಬೆಳಗಾವಿಯ (Belagavi) ಭೀಮಗಢ ವನ್ಯಜೀವಿ ಅಭಯಾರಣ್ಯದಿಂದ ಸ್ವಯಂಪ್ರೇರಿತವಾಗಿ ಹೊರಬರಲು ಅರ್ಜಿ ಸಲ್ಲಿಸಿರುವ 450ಕ್ಕೂ ಹೆಚ್ಚು ಕುಟುಂಬಗಳು ಕಳೆದ ಒಂದು ವರ್ಷದಿಂದ ಸರ್ಕಾರದ ಮುಂದಿನ ಕ್ರಮಕ್ಕಾಗಿ ಕಾಯುತ್ತಿವೆ.

ವಿಳಂಬಕ್ಕೆ ಕಾರಣವೇನು?

ಕಳೆದ ಮೇ ತಿಂಗಳಿನಲ್ಲಿ ತಾಳೇವಾಡಿ ಗ್ರಾಮದ 27 ಕುಟುಂಬಗಳಿಗೆ ತಲಾ 10 ಲಕ್ಷ ರೂಪಾಯಿಗಳ ಮೊದಲ ಕಂತಿನ ಚೆಕ್ ವಿತರಿಸಲಾಗಿತ್ತು. ಆದರೆ, ಉಳಿದ ಕುಟುಂಬಗಳ ಅರ್ಜಿ ಪ್ರಕ್ರಿಯೆ ಇನ್ನೂ ಕುಂಟುತ್ತಾ ಸಾಗಿದೆ. ಅರಣ್ಯ ಇಲಾಖೆಯ ಪ್ರಕಾರ, ಸ್ಥಳಾಂತರಗೊಳ್ಳುವ ಕುಟುಂಬಗಳ ಸಾಮಾಜಿಕ ಮತ್ತು ಸಾಂಸ್ಕೃತಿಕ ಹಿನ್ನೆಲೆಗೆ ಹೊಂದಿಕೆಯಾಗುವ ಸೂಕ್ತ ಭೂಮಿಯನ್ನು ಪತ್ತೆ ಹಚ್ಚುವುದು ದೊಡ್ಡ ಸವಾಲಾಗಿದೆ.

ಪರಿಹಾರದ ಮೊತ್ತಕ್ಕೆ ಹೆಚ್ಚುವರಿ ಬೇಡಿಕೆ

ಅಭಯಾರಣ್ಯದ ಒಟ್ಟು 13 ಹಳ್ಳಿಗಳ ಪೈಕಿ 9 ಹಳ್ಳಿಗಳ ಜನರು ತಕ್ಷಣ ಸ್ಥಳಾಂತರಗೊಳ್ಳಲು ಸಿದ್ಧರಿದ್ದಾರೆ. ಆದರೆ, ಪ್ರಸ್ತುತ ನೀಡಲಾಗುತ್ತಿರುವ 15 ಲಕ್ಷ ರೂಪಾಯಿಗಳ ಪರಿಹಾರ ಮೊತ್ತ ಸಾಲುತ್ತಿಲ್ಲ ಎಂಬುದು ಇವರ ವಾದ. ಬದುಕನ್ನು ಕಟ್ಟಿಕೊಳ್ಳಲು ಕೃಷಿ ಭೂಮಿ ಮತ್ತು ಮನೆಯನ್ನು ನೀಡಬೇಕೆಂದು ಅವರು ಒತ್ತಾಯಿಸುತ್ತಿದ್ದಾರೆ. ಆದರೆ ಸರ್ಕಾರವು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (NTCA) ನಿಗದಿಪಡಿಸಿದ 15 ಲಕ್ಷ ರೂ.ಗಳ ಪ್ಯಾಕೇಜ್‌ನ್ನೇ ಪರಿಗಣಿಸಿದೆ.

ಕಾಡಿನ ಕಠಿಣ ಬದುಕು

ಅಭಯಾರಣ್ಯದ ಒಳಗಿನ ಬದುಕು ಸುಲಭವಲ್ಲ. ತುರ್ತು ಚಿಕಿತ್ಸೆಗೆ ಸುಮಾರು 25 ಕಿ.ಮೀ ದೂರ ಕ್ರಮಿಸಬೇಕು. ಮಳೆಗಾಲದಲ್ಲಂತೂ ಇಲ್ಲಿನ 11 ಹಳ್ಳಿಗಳಲ್ಲಿನ ಹಳ್ಳ-ಕೊಳ್ಳಗಳು ತುಂಬಿ ಹರಿಯುವುದರಿಂದ ಓಡಾಟಕ್ಕೆ ಅಡೆತಡೆ ಉಂಟಾಗುತ್ತದೆ. ನಮ್ಮ ಬೇಡಿಕೆ ಈಡೇರುವವರೆಗೂ ನಾವು ಕಾಡು ಬಿಟ್ಟು ಕದಲುವುದಿಲ್ಲ ಎಂದು ಪಾಸ್ಟೋಲಿ ಗ್ರಾಮದ ಸುಮಿತ್ರಾ ಗೌಡ ಹೇಳಿದ್ದಾರೆ.

ಕಾನೂನು ತೊಡಕು

ಇನ್ನೊಂದೆಡೆ, ಗವಳಿ ಗ್ರಾಮದಂತಹ ಕೆಲವು ಹಳ್ಳಿಗಳಲ್ಲಿ ಸ್ಥಳಾಂತರಕ್ಕೆ ವಿರೋಧ ವ್ಯಕ್ತವಾಗಿದೆ. ನಮ್ಮ ದೇವತೆಯನ್ನು ಬಿಟ್ಟು ಹೋಗಲಾರೆವು ಎಂದು ಅರ್ಚಕರು ಹೇಳುತ್ತಿದ್ದು, ಸ್ಥಳಾಂತರ ಮಾಡುವ ಬದಲು ಸೇತುವೆಗಳನ್ನು ನಿರ್ಮಿಸಿಕೊಡಿ ಎಂದು ಆಗ್ರಹಿಸುತ್ತಿದ್ದಾರೆ. ಇದರ ನಡುವೆ, ಈ ಸ್ಥಳಾಂತರ ಪ್ರಕ್ರಿಯೆಯು ಕಾನೂನುಬದ್ಧವಾಗಿ ನಡೆಯುತ್ತಿಲ್ಲ ಎಂಬ ಆರೋಪಗಳು ಕೇಳಿಬಂದಿದ್ದು, ಸಾಮಾಜಿಕ ಕಾರ್ಯಕರ್ತರ ದೂರಿನ ಹಿನ್ನೆಲೆಯಲ್ಲಿ ದಾಖಲೆಗಳ ಮರುಪರಿಶೀಲನೆ ಪ್ರಕ್ರಿಯೆಯೂ ನಡೆದಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪ್ರವಾಸಿಗರೇ ಎಚ್ಚರ! 2000ಕ್ಕೂ ಹೆಚ್ಚು ಅಕ್ರಮ ಹೋಂಸ್ಟೇಗಳ ಕಪಿಮುಷ್ಠಿಯಲ್ಲಿ ಕೊಡಗು; ಕಠಿಣ ಕ್ರಮಕ್ಕೆ ಆಗ್ರಹ – Kannada News | Over 2,000 Illegal Homestays in Kodagu: Association Demands Action After US Tourist Assault

2000ಕ್ಕೂ ಹೆಚ್ಚು ಅಕ್ರಮ ಹೋಂಸ್ಟೇಗಳ ಕಪಿಮುಷ್ಠಿಯಲ್ಲಿ ಕೊಡಗುImage Credit source: MediaForge AI

ಮಡಿಕೇರಿ, ಏಪ್ರಿಲ್ 27: ಕೊಡಗು ಜಿಲ್ಲೆಯ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರು 2000 ಅಕ್ರಮ ಹೋಂಸ್ಟೇಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಹೋಂಸ್ಟೇ ಮಾಲೀಕರು ಸರ್ಕಾರವನ್ನು ಒತ್ತಾಯಿಸಿದ್ದಾರೆ. ಇತ್ತೀಚೆಗೆ ಕುಟ್ಟದಲ್ಲಿ ನೋಂದಾಯಿತ ಹೋಂಸ್ಟೇಯೊಂದರಲ್ಲಿ ಪ್ರವಾಸಕ್ಕೆಂದು ಬಂದಿದ್ದ ಅಮೆರಿಕನ್ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ (US woman assault) ನಡೆದ ಘಟನೆ ಬಳಿಕ ಈ ಬೇಡಿಕೆ ತೀವ್ರಗೊಂಡಿದೆ.

ಅಕ್ರಮ ಚಟುವಟಿಕೆಗಳಿಗೆ ಪ್ರಚೋದನೆ ಏನು?

ಭಾನುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಸಂಘದ ಅಧ್ಯಕ್ಷೆ ಮೊಂತಿ ಗಣೇಶ್, ಪ್ರವಾಸೋದ್ಯಮ ಇಲಾಖೆಯಲ್ಲಿ ಉಪನಿರ್ದೇಶಕರ ಹುದ್ದೆ ಹಲವು ತಿಂಗಳುಗಳಿಂದ ಖಾಲಿ ಇರುವುದೇ ಅಕ್ರಮ ಚಟುವಟಿಕೆಗಳಿಗೆ ಪ್ರಚೋದನೆ ನೀಡುತ್ತಿದೆ. ಸರಿಯಾದ ಆಡಳಿತ ವ್ಯವಸ್ಥೆ ಇಲ್ಲದ ಕಾರಣ ಪ್ರವಾಸಿ ಉದ್ಯಮಿಗಳಿಗೆ ಮಾರ್ಗದರ್ಶನ ಸಿಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಂಘದ ಸದಸ್ಯ ಕೆ.ಎಂ. ಕರುಂಬಯ್ಯ ಮಾಹಿತಿ ನೀಡಿ, ಜಿಲ್ಲೆಯಲ್ಲಿ 2,470 ಹೋಂಸ್ಟೇಗಳು ಅಧಿಕೃತವಾಗಿ ನೋಂದಾಯಿತವಾಗಿವೆ. ಆದರೆ, ಇನ್ನೂ 2,000ಕ್ಕೂ ಹೆಚ್ಚು ಹೋಂಸ್ಟೇಗಳು ಯಾವುದೇ ಅನುಮತಿ ಇಲ್ಲದೆ ನಡೆಯುತ್ತಿವೆ. ಬಸ್ ನಿಲ್ದಾಣದ ಬಳಿ ಬ್ರೋಕರ್‌ಗಳು ಪ್ರವಾಸಿಗರನ್ನು ದಾರಿ ತಪ್ಪಿಸಿ ಇಂತಹ ಅಕ್ರಮ ತಾಣಗಳಿಗೆ ಕರೆದೊಯ್ಯುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ ಕೊಡಗು: ವಿದೇಶಿ ಮಹಿಳೆ ಮೇಲೆ ಅತ್ಯಾಚಾರ ಆರೋಪ, ಕುಟ್ಟ ಖಾಸಗಿ ಹೋಂಸ್ಟೇ ಪರವಾನಗಿ ರದ್ದು

ಈ ಮಧ್ಯೆ, ಕೊಡಗು ಎಸ್‌ಪಿ ಕೆ. ಬಿಂದು ಮಣಿ ಅವರು ಹೋಟೆಲ್ ಮತ್ತು ಹೋಂಸ್ಟೇ ಮಾಲೀಕರ ಸಭೆ ನಡೆಸಿ, ಪ್ರವಾಸಿಗರ ಸುರಕ್ಷತೆಗೆ ಆದ್ಯತೆ ನೀಡುವಂತೆ ಮತ್ತು ಕಾನೂನುಬಾಹಿರ ಚಟುವಟಿಕೆ ನಡೆದರೆ ಮಾಲೀಕರನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version