ಉಮರ್ ಖಾಲಿದ್ ಪುಸ್ತಕ ಸಂಬಂಧಿತ ಕಾರ್ಯಕ್ರಮಕ್ಕೆ ಬಿಜೆಪಿ ವಿರೋಧ: ಅನುಮತಿ ಕೊಟ್ಟರೆ ಉಗ್ರ ಹೋರಾಟದ ಎಚ್ಚರಿಕೆ – Kannada News | BJP Opposes Bengaluru Umar Khalid Book Event, Warns of Massive Protests

ನಗರ ಪೊಲೀಸ್ ಆಯುಕ್ತರಿಗೆ BJP ಮನವಿ Image Credit source: Tv9 Kannada

ಬೆಂಗಳೂರು, ಏಪ್ರಿಲ್​​ 27: ದೊಮ್ಮಲೂರಿನ ಬಿಐಸಿಯಲ್ಲಿ ನಾಳೆ ನಿಗದಿಯಾಗಿರುವ ‘ಉಮರ್ ಖಾಲಿದ್ ಆ್ಯಂಡ್​ ಹಿಸ್ ವರ್ಲ್ಡ್’ ಪುಸ್ತಕದ ಕುರಿತ ಕಾರ್ಯಕ್ರಮಕ್ಕೆ ಅನುಮತಿ ಸಂಬಂಧ ಬಿಜೆಪಿ ವಿರೋಧ ವ್ಯಕ್ತಪಡಿಸಿದೆ. ನಟ ಪ್ರಕಾಶ್ ರಾಜ್, ಇತಿಹಾಸಕಾರ ರಾಮಚಂದ್ರ ಗುಹಾ ಸೇರಿದಂತೆ ಹಲವು ಮುಖಂಡರು ನಾಳಿನ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಆದರೆ ಈ ಕಾರ್ಯಕ್ರಮಕ್ಕೆ ಅನುಮತಿ ನೀಡದಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಮನವಿ ಮಾಡಿದೆ. ಜೆಎನ್​ಯು ಮಾಜಿ ವಿದ್ಯಾರ್ಥಿ ನಾಯಕನಾಗಿದ್ದ ಉಮರ್ ಖಾಲಿದ್, 2020ರ ದೆಹಲಿ ದಂಗೆ ಪ್ರಕರಣದಲ್ಲಿ ಯುಎಪಿಎ ಕಾಯ್ದೆಯಡಿ ತಿಹಾರ್ ಜೈಲಿನಲ್ಲಿದ್ದಾನೆ ಎಂದು ಬಿಜೆಪಿ ದೂರಿದೆ.

ಬಿಜೆಪಿ ಮನವಿಯಲ್ಲಿ ಏನಿದೆ?

ಉಮರ್​​ ಖಾಲಿದ್ ಪ್ರಪಂಚ ಎಂಬ ವೇದಿಕೆಯು ಭಯೋತ್ಪಾದನೆ ಕಾಯಿದೆ ಅಡಿ ಬಂಧಿತನಾದ ವ್ಯಕ್ತಿಗೆ ಬೆಂಬಲ ಸೂಚಿಸಲು ಬೆಂಗಳೂರಿನಲ್ಲಿ ವಿಚಾರ ಸಂಕೀರ್ಣ ಏರ್ಪಡಿಸಿದೆ. ದೇಶದಲ್ಲೆಡೆ ಕೇಂದ್ರ ಸರ್ಕಾರ ನಕ್ಸಲರನ್ನು ಬಗ್ಗು ಬಡಿದಿದೆ. ಆದರೆ ನಗರ ನಕ್ಸಲರು ಮಾತ್ರ ಇನ್ನೂ ಸಕ್ರಿಯವಾಗಿದ್ದು ದೇಶದ್ರೋಹಿಗಳಿಗೆ ಪರೋಕ್ಷವಾಗಿ ಬೆಂಬಲಿಸುವ ಚಟುವಟಿಕೆಯನ್ನು ಮಾಡುತ್ತಿದ್ದಾರೆ. ಉಮರ್ ಖಾಲೀದ್ ಅತ್ಯಂತ ಗಂಭೀರ ಆರೋಪಗಳನ್ನು ಎದುರಿಸುತ್ತಿದ್ದಾನೆ. ಕಳೆದ ಮೂರು ವರ್ಷದಿಂದ ಇವನಿಗೆ ನ್ಯಾಯಲಯಗಳು ಜಾಮೀನು ನೀಡಲು ನಿರಾಕರಿಸಿರುವುದು ಇವನ ಅಪರಾಧಿ ಚಟುವಟಿಕೆಗೆ ಸಾಕ್ಷಿ. ಇವನನ್ನು ವೈಭವೀಕರಿಸುವುದು ಅಪರಾಧಿಗಳಿಗೆ ಉತ್ತೇಜನ ಕೊಡುವ ದುಷ್ಕೃತ್ಯವಾಗುತ್ತದೆ. ಇಂತಹ ಕಾರ್ಯಕ್ರಮವನ್ನು ನಮ್ಮ ನಗರದಲ್ಲಿ ನಡೆಯುತ್ತಿರುವುದು ಆಘಾತಕಾರಿ ಸಂಗತಿ. ಈಗಾಗಲೇ ನಗರದ ಗೋಡೆಗಳ ಮೇಲೆ ಉಮರ್ ಖಾಲಿದ್ ಬೆಂಬಲಿಸಿ ಗೋಡೆ ಬರಹಗಳನ್ನು ಬರೆಯುತ್ತಿರುವುದು ಇವರ ಜಾಲ ಹರಡುತ್ತಿದ್ದಾರೆ. ನಗರದ ಶಾಂತಿಯನ್ನು ಕಾಪಾಡುವ ಹಿತದೃಷ್ಟಿಯಿಂದ ಇವರ ವಿಚಾರ ಸಂಕಿರಣ ನಡೆಸಲು ನೀಡಿರುವ ಅನುಮತಿಯನ್ನು ಹಿಂದಕ್ಕೆ ಪಡೆಯಬೇಕು. ಈ ಕಾರ್ಯಕ್ರಮ ನಡೆದರೆ ಅಲ್ಲಿ ಉಂಟಾಗುವ ಕಾನೂನು ಮತ್ತು ಸುವ್ಯವಸ್ಥೆಗೆ ಭಂಗವಾದರೆ ಬಿಜೆಪಿಯು ಹೊಣೆಯಾಗುವುದಿಲ್ಲ. ನಗರದ ಹಿತದೃಷ್ಟಿಯಿಂದ ನಮ್ಮ ಮನವಿಯನ್ನು ಪರಿಗಣಿಸಿ ಕಾರ್ಯಕ್ರಮವನ್ನು ರದ್ದುಪಡಿಸಬೇಕು ಎಂದು ಒತ್ತಾಯಿಸುತ್ತಿರೋದಾಗಿ ನಗರ ಪೊಲೀಸ್ ಆಯುಕ್ತರಿಗೆ ನೀಡಿದ ಮನವಿಯಲ್ಲಿ ಬಿಜೆಪಿ ತಿಳಿಸಿದೆ.

ಇದನ್ನೂ ಓದಿ: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಿಸಿಟಿವಿ ವೈರ್ ಕಟ್ ಮಾಡಿದ್ದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್! ಅಚ್ಚರಿಯ ಕಾರಣ ಬಹಿರಂಗ

ಪ್ರತಿಭಟನೆಯ ಎಚ್ಚರಿಕೆ

ಉಮರ್ ಖಾಲಿದ್ ಆ್ಯಂಡ್ ಹಿಸ್ ವರ್ಲ್ಡ್ ಪುಸ್ತಕದ ಕುರಿತ ಕಾರ್ಯಕ್ರಮಕ್ಕೆ ಅನುಮತಿ ಕೊಟ್ಟರೆ ಬೃಹತ್ ಪ್ರತಿಭಟನೆ ಮಾಡುತ್ತೇವೆ ಎಂದು ಟಿವಿ9ಗೆ ಬೆಂಗಳೂರು ಕೇಂದ್ರ ಬಿಜೆಪಿ ಸಂಸದ ಪಿ.ಸಿ.ಮೋಹನ್ ತಿಳಿಸಿದ್ದಾರೆ. ಉಮರ್ ಖಾಲೀದ್ 2020ರ ದೆಹಲಿ ದಂಗೆಯ ಪ್ರಮುಖ ಆರೋಪಿ. ಇಂದಿನವರೆಗೂ ಉಮರ್ ಖಾಲೀದ್​ಗೆ ಕೋರ್ಟ್ ಜಾಮೀನು ಕೊಟ್ಟಿಲ್ಲ. ಆತ ದೇಶದ್ರೋಹಿ ಆಗಿದ್ದು ಅವನ ಕುರಿತಾದ ಪುಸ್ತಕ ಬಿಡುಗಡೆ ಮಾಡ್ತಿದ್ದಾರೆ. ಶಾಂತಿಯುತ ಸ್ಥಳವಾಗಿರುವ ಬೆಂಗಳೂರಿನಲ್ಲಿ ಇದಕ್ಕೆ ಅವಕಾಶ ಕೊಡಬಾರದು. ಬೇರೆ ಯಾವ ರಾಜ್ಯದಲ್ಲೂ ಈ ಕಾರ್ಯಕ್ರಮಕ್ಕೆ ಅನುಮತಿ ನೀಡಲ್ಲ. ಇಲ್ಲಿ ಕಾಂಗ್ರೆಸ್​​ ಸರ್ಕಾರ ಇರುವುದರಿಂದ ಅನುಮತಿ ಸಿಕ್ಕಿದೆ. ಪರೋಕ್ಷವಾಗಿ ಕಾಂಗ್ರೆಸ್ ಬೆಂಬಲದಿಂದಲೇ ಈ ಕಾರ್ಯಕ್ರಮ ನಡೀತಿದೆ. ಹೀಗಾಗಿ ಅನುಮತಿ ಕೊಟ್ಟರೆ ನಾವು ದೊಡ್ಡ ಪ್ರಮಾಣದಲ್ಲಿ ಪ್ರತಿಭಟನೆ ಮಾಡುತ್ತೇವೆ ಎಂದು ಪಿ.ಸಿ.ಮೋಹನ್ ಎಚ್ಚರಿಕೆ ನೀಡಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಇದು ನನ್ನ ಕೊನೆಯ ರ‍್ಯಾಲಿ, ಮೇ 4ಕ್ಕೆ ಪ್ರಮಾಣವಚನಕ್ಕೆ ಬರುವೆ, ಬಂಗಾಳದ ಮಣ್ಣಿನಲ್ಲಿ ಪ್ರಧಾನಿ ಮೋದಿ ವಿಜಯಘೋಷ – Kannada News | West Bengal: Narendra Modi Signals Final Campaign Rally, Eyes Return for Swearing In

ಕೋಲ್ಕತ್ತಾ, ಏಪ್ರಿಲ್ 27: ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಎರಡನೇ ಹಂತದ ಮತದಾನಕ್ಕೆ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ಬರಾಕ್‌ಪೋರ್‌ನಲ್ಲಿ ಬಿಜೆಪಿಯ ಬಲ ಪ್ರದರ್ಶನ ಮಾಡಿದರು. ತಮ್ಮ ಭಾಷಣದ ಉದ್ದಕ್ಕೂ ವಿಜಯದ ಆತ್ಮವಿಶ್ವಾಸವನ್ನು ಪ್ರದರ್ಶಿಸಿದ ಅವರು, ಮುಂದಿನ ಬಾರಿ ಬರುವುದು ಬಿಜೆಪಿಯ ಪ್ರಮಾಣವಚನ ಸಮಾರಂಭಕ್ಕೆ ಎಂದು ಘೋಷಿಸುವ ಮೂಲಕ ರಾಜಕೀಯ ಸಂಚಲನ ಮೂಡಿಸಿದರು.

ಈ ಚುನಾವಣೆಯಲ್ಲಿ ಇದು ನನ್ನ ಕೊನೆಯ ರ್ಯಾಲಿ, ಮೇ 4ರ ಫಲಿತಾಂಶದ ನಂತರ ಖಂಡಿತವಾಗಿಯೂ ಬಿಜೆಪಿಯ ಪ್ರಮಾಣವಚನ ಸಮಾರಂಭದಲ್ಲಿ ಭಾಗವಹಿಸಲು ನಾನು ಹಿಂತಿರುಗುತ್ತಿದ್ದೇನೆ ಎಂಬ ವಿಶ್ವಾಸ ನನಗಿದೆ, ಎಂದು ಮೋದಿ ಹೇಳಿದರು. ಬೆಳಗ್ಗೆಯಿಂದಲೇ ಕಿಲೋಮೀಟರ್‌ಗಳಷ್ಟು ಉದ್ದಕ್ಕೂ ಸಾಲುಗಟ್ಟಿ ನಿಂತಿದ್ದ ಜನಸ್ತೋಮವನ್ನು ಕಂಡು ಅವರು ಭಾವುಕರಾದರು ಮತ್ತು ಜನರ ಈ ಆಶೀರ್ವಾದವೇ ನನ್ನ ಉತ್ಸಾಹಕ್ಕೆ ಕಾರಣ ಎಂದರು.

ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (ಟಿಎಂಸಿ) ವಿರುದ್ಧ ಪ್ರಧಾನಿ ಕಿಡಿಕಾರಿದರು. ಬಂಗಾಳದ ಅಭಿವೃದ್ಧಿಗೆ ಟಿಎಂಸಿ ಬಳಿ ಯಾವುದೇ ಮಾರ್ಗಸೂಚಿ ಇಲ್ಲ. ರಾಜ್ಯಕ್ಕೆ ಈಗ ಡಬಲ್-ಎಂಜಿನ್ ಸರ್ಕಾರದ ಅಗತ್ಯವಿದೆ ಎಂದು ಅವರು ಒತ್ತಿ ಹೇಳಿದರು.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Source link

ಪತ್ನಿಯ ಕೊಂದು ಶವದ ಮೇಲೆ ಸಿಮೆಂಟ್ ಸುರಿದು, ಮರದ ಪೆಟ್ಟಿಗೆಯಲ್ಲಿ ಬಚ್ಚಿಟ್ಟ ಪತಿ – Kannada News | Surat Murder Case: Woman Found Dead, Husband Held

ಸೂರತ್, ಏಪ್ರಿಲ್ 27: ಪತ್ನಿಯ ಕೊಲೆ(Murder) ಮಾಡಿ ಶವದ ಮೇಲೆ ಸಿಮೆಂಟ್ ಸುರಿದು ಮರದ ಪೆಟ್ಟಿಗೆಯಲ್ಲಿ ಬಚ್ಚಿಟ್ಟು, ಪತ್ನಿ ಕಾಣೆಯಾಗಿದ್ದಾಳೆ ಎಂದು ದೂರು ನೀಡಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಆಹಾರ ತಜ್ಞೆ ಶಿಲ್ಪಾ ಸಾಲ್ವಿ (39) ಅವರ ಕೊಳೆತ ಶವವು ಪಾಳುಬಿದ್ದ ಮನೆಯೊಂದರಲ್ಲಿ ಪತ್ತೆಯಾಗಿದೆ. ಆರೋಪಿ ವಿಶಾಲ್ ಸಾಲ್ವಿ (40), ನಾಲ್ಕು ದಿನಗಳ ಹಿಂದೆ ತನ್ನ ಪತ್ನಿ ಶಿಲ್ಪಾ ನಾಪತ್ತೆಯಾಗಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದ. ಪೊಲೀಸರು ಮೊದಲಿಗೆ ಇದನ್ನು ಸಾಮಾನ್ಯ ನಾಪತ್ತೆ ಪ್ರಕರಣವೆಂದು ಭಾವಿಸಿ ತನಿಖೆ ಆರಂಭಿಸಿದ್ದರು. ಆದರೆ, ಮನೆಯೊಳಗೆ ಸಿಕ್ಕ ಒಂದು ಸಣ್ಣ ಸುಳಿವು ಇಡೀ ಪ್ರಕರಣದ ದಿಕ್ಕನ್ನೇ ಬದಲಿಸಿತು.

ವಿಶಾಲ್ ಮತ್ತು ಶಿಲ್ಪಾ ಅವರ ಮಗನಿಗೆ ಮನೆಯಲ್ಲಿ ತನ್ನ ತಂದೆ ಬರೆದಿದ್ದ ಕೈಬರಹದ ಟಿಪ್ಪಣಿಯೊಂದು ಸಿಕ್ಕಿತ್ತು. ಅದರಲ್ಲಿ ವಿಶಾಲ್, ನಾನು ದೊಡ್ಡ ತಪ್ಪು ಮಾಡಿದ್ದೇನೆ, ಶಿಲ್ಪಾ ಇನ್ನು ಬದುಕಿಲ್ಲ ಎಂದು ಬರೆದುಕೊಂಡಿದ್ದ. ಮಗ ಈ ಪತ್ರವನ್ನು ಪೊಲೀಸರಿಗೆ ಹಸ್ತಾಂತರಿಸಿದ ತಕ್ಷಣವೇ ವಿಶಾಲ್ ಮೇಲಿನ ಅನುಮಾನ ಬಲವಾಯಿತು.

ಪೊಲೀಸರು ತನಿಖೆ ನಡೆಸಿದಾಗ ಸೂರತ್‌ನ ಸಲಬತ್‌ಪುರದಲ್ಲಿರುವ ವಿಶಾಲ್‌ನ ಹಳೆಯ ಪಾಳುಬಿದ್ದ ಮನೆಯ ಬಗ್ಗೆ ಮಾಹಿತಿ ಸಿಕ್ಕಿತು. ಆ ಮನೆಯ ಬೀಗ ಮುರಿದು ಒಳಹೋದಾಗ ಕೊಳೆಯುತ್ತಿರುವ ವಾಸನೆ ಬಂದಿದೆ. ಅಲ್ಲಿನ ಮೂಲೆಯಲ್ಲಿದ್ದ ಮರದ ಪೆಟ್ಟಿಗೆಯನ್ನು ತಪಾಸಣೆ ಮಾಡಿದಾಗ, ಶಿಲ್ಪಾ ಅವರ ಶವ ಪತ್ತೆಯಾಯಿತು. ಸಾಕ್ಷ್ಯ ನಾಶಪಡಿಸಲು ವಿಶಾಲ್ ಶವದ ಮೇಲೆ ಕಚ್ಚಾ ಸಿಮೆಂಟ್ ಸುರಿದು ಅದನ್ನು ಪೆಟ್ಟಿಗೆಯೊಳಗೆ ಭದ್ರಪಡಿಸಿದ್ದ.

ಮತ್ತಷ್ಟು ಓದಿ: ಸಿನಿಮಾ ಸ್ಟೈಲ್​​ ಕೊಲೆ ಕೇಸ್​ ಭೇದಿಸಿದ ಖಾಕಿ: ಆಸ್ತಿ ವಿವಾದಕ್ಕೆ ನಡೆದಿದ್ದು ಡೆಡ್ಲಿ ಮರ್ಡರ್​!

ಪ್ರಾಥಮಿಕ ತನಿಖೆಯ ಪ್ರಕಾರ, ದಂಪತಿಗಳ ನಡುವೆ ದೀರ್ಘಕಾಲದ ವೈವಾಹಿಕ ಕಲಹವಿತ್ತು. ತನ್ನ ಪತ್ನಿ ವಿವಾಹೇತರ ಸಂಬಂಧ ಹೊಂದಿದ್ದಾಳೆ ಎಂದು ವಿಶಾಲ್ ಅನುಮಾನಿಸುತ್ತಿದ್ದ. ಇದೇ ದ್ವೇಷದಿಂದ ಆಕೆಯನ್ನು ಹತ್ಯೆ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಪ್ರಸ್ತುತ ವಿಶಾಲ್ ತಲೆಮರೆಸಿಕೊಂಡಿದ್ದು, ಸಿಸಿಟಿವಿ ದೃಶ್ಯಾವಳಿಗಳ ಮೂಲಕ ಪೊಲೀಸರು ಆತನ ಬೆನ್ನು ಬಿದ್ದಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಹರಿಹರ ಪಂಚಮಸಾಲಿ ಪೀಠದಲ್ಲಿ ಲೆಕ್ಕ ಸಮರ: ವಚನಾನಂದ ಶ್ರೀ V/s ಟ್ರಸ್ಟಿಗಳ ನಡುವೆ ಮಠದ ಆವರಣದಲ್ಲಿ ಹೈಡ್ರಾಮಾ! – Kannada News | Harihara Panchamasali Peetha Crisis: Vachanananda Swamy vs Trustees Over 10 Crore Fund Scam Allegations

ವಚನಾನಂದ ಶ್ರೀ V/s ಟ್ರಸ್ಟಿಗಳ ನಡುವೆ ಮಠದ ಆವರಣದಲ್ಲಿ ಹೈಡ್ರಾಮಾ!Image Credit source: tv9

ದಾವಣಗೆರೆ, ಏಪ್ರಿಲ್ 27: ಹರಿಹರದ ಪಂಚಮಸಾಲಿ ಪೀಠದಲ್ಲಿ (Harihara Panchamasali Peeth) ದಶಕಗಳಿಂದ ನಡೆಯುತ್ತಿದ್ದ ಶೀತಲ ಸಮರ ಈಗ ಬಹಿರಂಗ ಸಂಘರ್ಷಕ್ಕೆ ತಿರುಗಿದೆ. ಮಠದ ಅನುದಾನ ಮತ್ತು ಭಕ್ತರ ದೇಣಿಗೆಯ ಲೆಕ್ಕಾಚಾರದ ವಿಚಾರದಲ್ಲಿ ವಚನಾನಂದ ಸ್ವಾಮೀಜಿ (Vachanananda Swamiji) ಮತ್ತು ಟ್ರಸ್ಟಿಗಳ ನಡುವೆ ತೀವ್ರ ಗುದ್ದಾಟ ಆರಂಭವಾಗಿದೆ. ಮಠದ ಆವರಣ ಸೋಮವಾರ (ಏಪ್ರಿಲ್ 37) ಹೈಡ್ರಾಮಾ ನಡೆಯಿತು. ಮಠದ ಆವರಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಸಹ ಮಾಡಲಾಗಿದೆ.

ಏನಿದು ಲೆಕ್ಕದ ಲಡಾಯಿ?

ಮಠದ ಆಡಳಿತ ಮಂಡಳಿಯು ಭಕ್ತರ ದೇಣಿಗೆ ಮತ್ತು ಸರ್ಕಾರದ ಅನುದಾನದಲ್ಲಿ ಭಾರಿ ಅವ್ಯವಹಾರ ನಡೆಸಿದೆ ಎಂದು ವಚನಾನಂದ ಸ್ವಾಮೀಜಿ ಗಂಭೀರ ಆರೋಪ ಮಾಡಿದ್ದಾರೆ. ಮುಖ್ಯವಾಗಿ, ರಾಜ್ಯ ಸರ್ಕಾರದಿಂದ ವಸತಿಗೃಹ, ಹಾಸ್ಟೆಲ್ ಮತ್ತು ಸಮುದಾಯ ಭವನ ನಿರ್ಮಾಣಕ್ಕಾಗಿ ಬಂದಿದ್ದ 10 ಕೋಟಿ ರೂಪಾಯಿ ಅನುದಾನದಲ್ಲಿ ಗೋಲ್‌ಮಾಲ್ ನಡೆದಿದೆ ಎಂಬುದು ಶ್ರೀಗಳ ವಾದ. 2021ರಲ್ಲಿ ಟ್ರಸ್ಟಿಗಳು ಮತ್ತು ಆಡಳಿತಾಧಿಕಾರಿಗಳು ನಕಲಿ ಸಹಿ ಮಾಡಿ ಅನುದಾನ ಬಿಡುಗಡೆ ಮಾಡಿಸಿಕೊಂಡಿದ್ದಾರೆ, ಆದರೆ ಕಟ್ಟಡಗಳೇ ನಿರ್ಮಾಣವಾಗಿಲ್ಲ ಎಂದು ಭಕ್ತರು ದೂರಿದ್ದಾರೆ.

ಟ್ರಸ್ಟಿಗಳು ಹೇಳೋದೇನು?

ಶ್ರೀಗಳ ಆರೋಪಕ್ಕೆ ಪ್ರತಿಯಾಗಿ ಟ್ರಸ್ಟ್‌ನ ಪ್ರಧಾನ ಧರ್ಮದರ್ಶಿ ಬಿ.ಸಿ. ಉಮಾಪತಿ ಅವರು 2008ರಿಂದ 2026ರವರೆಗಿನ ಸಂಪೂರ್ಣ ಲೆಕ್ಕಪತ್ರಗಳ ಬ್ಯಾಗ್ ಹಿಡಿದು ಮಠಕ್ಕೆ ಆಗಮಿಸಿದರು. ‘ನಾವು ಪಾರದರ್ಶಕವಾಗಿದ್ದೇವೆ, ಶ್ರೀಗಳು ತಮ್ಮ ಉಚ್ಚಾಟನೆಯ ವಿಷಯವನ್ನು ದಾರಿ ತಪ್ಪಿಸಲು ಲೆಕ್ಕದ ನಾಟಕವಾಡುತ್ತಿದ್ದಾರೆ. ಈಗ ಲೆಕ್ಕ ನೀಡಿದ್ದೇವೆ, ಶ್ರೀಗಳು ಕೂಡಲೇ ಮಠವನ್ನು ಬಿಟ್ಟು ಹೋಗಲಿ’ ಎಂದು ಗುಡುಗಿದ್ದಾರೆ.

ಮಠದ ಆವರಣದಲ್ಲಿ ಹೈಡ್ರಾಮಾ

ಟ್ರಸ್ಟ್ ಸದಸ್ಯರು ಲೆಕ್ಕ ನೀಡಲು ಆಗಮಿಸುತ್ತಿದ್ದಂತೆಯೇ ವಚನಾನಂದ ಶ್ರೀಗಳ ಬೆಂಬಲಿಗರು ಮತ್ತು ಟ್ರಸ್ಟಿಗಳ ಬೆಂಬಲಿಗರ ನಡುವೆ ಘೋಷಣೆಗಳ ಯುದ್ಧ ನಡೆಯಿತು. ಉಭಯ ಗುಂಪುಗಳು ಮುಖಾಮುಖಿಯಾಗಿದ್ದರಿಂದ ಪರಿಸ್ಥಿತಿ ಉದ್ವಿಗ್ನಗೊಂಡಿತ್ತು. ‘ನಾನು ಮಠವನ್ನು ಬಿಟ್ಟು ಹೋಗುವುದಿಲ್ಲ, ಇಲ್ಲಿ ನಡೆದಿರುವ ಲೂಟಿಯ ತನಿಖೆಯಾಗಲಿ’ ಎಂದು ವಚನಾನಂದ ಶ್ರೀಗಳು ಪಟ್ಟು ಹಿಡಿದು ಕುಳಿತಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ರೈಲ್ವೇ ಪ್ರಯಾಣಿಕರಿಗೆ ಶುಭಸುದ್ದಿ: ಬೆಂಗಳೂರು, ಮುಂಬೈ ವಂದೇ ಭಾರತ್ ಸ್ಲೀಪರ್ ರೈಲು ಸಂಚಾರಕ್ಕೆ ಮುಹೂರ್ತ ಫಿಕ್ಸ್​ – Kannada News | Bengaluru–Mumbai Vande Bharat Sleeper to Launch on August 1: Route and Timings Revealed

ವಂದೇ ಭಾರತ್​​ ಸ್ಲೀಪರ್​​ ರೈಲುImage Credit source: alamy.com

ಬೆಂಗಳೂರು, ಏಪ್ರಿಲ್​​ 27: ಭಾರಿ ನಿರೀಕ್ಷೆ ಹೊಂದಿದ್ದ ಮತ್ತು ಬಹು ಬೇಡಿಕೆಯ ಬೆಂಗಳೂರು–ಮುಂಬೈ ನಡುವಿನ ವಂದೇ ಭಾರತ್ ಸ್ಲೀಪರ್ ರೈಲು ಸೇವೆ ಆರಂಭಕ್ಕೆ ಕೊನೆಗೂ ಮುಹೂರ್ತ ನಿಗದಿಯಾಗಿದೆ. ಆಗಸ್ಟ್ 1ರಿಂದ ಈ ರೈಲಿನ ಸಂಚಾರ ಆರಂಭವಾಗಲಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ. ಈ ಯೋಜನೆಗೆ ಏಪ್ರಿಲ್ 16ರಂದು ಅನುಮೋದನೆ ದೊರಕಿತ್ತು. ಆ ಮೂಲಕ ಬೆಂಗಳೂರು-ಮುಂಬೈ ನಡುವಿನ ರೈಲು ಪ್ರಯಾಣ ಇನ್ನಷ್ಟು ಆರಾಮದಾಯಕವಾಗಲಿದೆ.

ಈ ಸ್ಲೀಪರ್ ರೈಲು ಕೆಎಸ್‌ಆರ್ ಬೆಂಗಳೂರು ರೈಲು ನಿಲ್ದಾಣದಿಂದ ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ ಟರ್ಮಿನಸ್ (CSMT)ವರೆಗೆ ಸಂಚರಿಸಲಿದ್ದು, ಸೊಲ್ಲಾಪುರ ಮತ್ತು ಕಲಬುರಗಿ ಮಾರ್ಗವಾಗಿ ತೆರಳಲಿದೆ. ಸಂಜೆ ವೇಳೆಗೆ ಹೊರಡುವ ರೈಲು ಮರುದಿನ ಬೆಳಗ್ಗೆ ಗಮ್ಯಸ್ಥಾನ ತಲುಪುವಂತೆ ವೇಳಾಪಟ್ಟಿ ಇರಲಿದೆ ಎಂದು ಮೂಲಗಳು ತಿಳಿಸಿವೆ. ಇದೇ ದೂರವನ್ನು ಕ್ರಮಿಸಲು ಉದ್ಯಾನ್ ಎಕ್ಸ್‌ಪ್ರೆಸ್ ಪ್ರಸ್ತುತ 24 ಗಂಟೆಗಳಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತಿದೆ ಎನ್ನುವುದಿಲ್ಲಿ ಗಮನಾರ್ಹ.

ಇದನ್ನೂ ಓದಿ: ಬೆಂಗಳೂರು-ಪುಣೆಗೆ ಬರುತ್ತಿದೆ ‘ವಂದೇ ಭಾರತ್ ಸ್ಲೀಪರ್’; 18 ಗಂಟೆಯ ಪ್ರಯಾಣ ಇನ್ಮುಂದೆ ಕೇವಲ 13 ಗಂಟೆ!

ವಂದೇ ಭಾರತ್ ಸ್ಲೀಪರ್ ಸೇವೆಯಿಂದ ಪ್ರಯಾಣದ ಈ ಸಮಯ ಸುಮಾರು 15 ಗಂಟೆಗೆ ಇಳಿಕೆಯಾಗುವ ನಿರೀಕ್ಷೆಯಿದೆ. ಈ ರೈಲು 16 ಬೋಗಿಗಳನ್ನು ಹೊಂದಿದ್ದು, ದೀರ್ಘ ದೂರ ಪ್ರಯಾಣಕ್ಕೆಂದೇ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಗರಿಷ್ಠ 180 ಕಿ.ಮೀ ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ವಂದೇ ಭಾರತ್ ಸ್ಲೀಪರ್ ರೈಲಿಗಿದೆ. ಪ್ರಯಾಣಿಕರಿಗೆ ಮಲಗಲು ಉತ್ತಮ ವ್ಯವಸ್ಥೆ, ಸ್ವಚ್ಛ ಬೋಗಿಗಳು ಹಾಗೂ ಸುಧಾರಿತ ಸೌಲಭ್ಯಗಳು ಲಭ್ಯವಾಗಲಿವೆ. ಈ ರೈಲನ್ನು ಇಂಟಿಗ್ರಲ್ ಕೋಚ್ ಫ್ಯಾಕ್ಟರಿಯ ತಂತ್ರಜ್ಞಾನ ಬಳಸಿ BEML ಸಂಸ್ಥೆ ಅಭಿವೃದ್ಧಿಪಡಿಸಿದೆ. ಕಿತ್ತಳೆ ಮತ್ತು ಬೂದು ಬಣ್ಣದ ವಿನ್ಯಾಸ ಹೊಂದಿರುವ ಈ ಸ್ಲೀಪರ್ ರೈಲು ರಾತ್ರಿ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಇದು ದೇಶದ ಎರಡನೇ ವಂದೇ ಭಾರತ್ ಸ್ಲೀಪರ್ ರೈಲು ಆಗಿದ್ದು, ಮೊದಲ ರೈಲು 2026ರ ಜನವರಿಯಲ್ಲಿ ಹೌರಾ (ಕೋಲ್ಕತ್ತಾ) ಮತ್ತು ಕಾಮಾಖ್ಯ ಮಾರ್ಗದಲ್ಲಿ ಆರಂಭಗೊಂಡಿತ್ತು ಎಂದು ಬೆಂಗಳೂರು ನೌ ವರದಿ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 1:57 pm, Mon, 27 April 26

Source link

ಐಪಿಎಲ್​ನಲ್ಲಿ ಫೀಲ್ಡಿಂಗ್​ಗೆ ಅಡ್ಡಿ ಪಡಿಸಿ ಔಟಾದ ನಾಲ್ವರು ಬ್ಯಾಟರ್​ಗಳು ಇವರೇ..! – Kannada News | Batters Dismissed for Obstructing the Field in IPL

ಕ್ರಿಕೆಟ್ ಜಗತ್ತಿನಲ್ಲಿ ಬ್ಯಾಟರ್ ಒಬ್ಬರು ಔಟ್ ಆಗಲು ಹಲವಾರು ದಾರಿಗಳಿವೆ. ಆದರೆ, ಅತಿ ಹೆಚ್ಚು ಚರ್ಚೆಗೆ ಮತ್ತು ವಿವಾದಕ್ಕೆ ಕಾರಣವಾಗುವ ಒಂದು ಔಟ್ ಎಂದರೆ ಅದು ‘ಅಬ್‌ಸ್ಟ್ರಕ್ಟಿಂಗ್ ದ ಫೀಲ್ಡ್’. ಅಂದರೆ, ಫೀಲ್ಡರ್ ಚೆಂಡನ್ನು ಎಸೆಯುವಾಗ ಅಥವಾ ಹಿಡಿಯುವಾಗ ಬ್ಯಾಟರ್ ಬೇಕೆಂದೇ ಅಡ್ಡ ಬರುವುದು ಅಥವಾ ಅಡ್ಡಿಪಡಿಸುವುದು. ಹೀಗೆ ಫೀಲ್ಡಿಂಗ್​ಗೆ ಅಡ್ಡಿಪಡಿಸಿ ಐಪಿಎಲ್​ನಲ್ಲಿ ಔಟಾದ ನಾಲ್ವರು ಬ್ಯಾಟರ್​ಗಳ ಪಟ್ಟಿ ಇಲ್ಲಿದೆ…

ಯೂಸುಫ್ ಪಠಾಣ್ (2013): ಐಪಿಎಲ್ ಇತಿಹಾಸದಲ್ಲಿ ಈ ರೀತಿ ಔಟ್ ಆದ ಮೊದಲ ಆಟಗಾರ ಕೋಲ್ಕತ್ತಾ ನೈಟ್ ರೈಡರ್ಸ್‌ನ ಯೂಸುಫ್ ಪಠಾಣ್. ಪುಣೆ ವಾರಿಯರ್ಸ್ ವಿರುದ್ಧದ ಪಂದ್ಯದಲ್ಲಿ ರನ್ ಓಡುವಾಗ ಬೌಲರ್ ವೇಯ್ನ್ ಪಾರ್ನೆಲ್ ಚೆಂಡನ್ನು ಎತ್ತಿಕೊಳ್ಳಲು ಪ್ರಯತ್ನಿಸುತ್ತಿದ್ದರು. ಈ ವೇಳೆ ಪಠಾಣ್ ಕಾಲಿನಿಂದ ಚೆಂಡನ್ನು ಒದ್ದಿದ್ದರು. ಇದನ್ನು ಉದ್ದೇಶಪೂರ್ವಕ ಫೀಲ್ಡಿಂಗ್ ಅಡ್ಡಿ ಎಂದು ಪರಿಗಣಿಸಿ ಔಟ್ ನೀಡಲಾಗಿತ್ತು.

ಅಮಿತ್ ಮಿಶ್ರಾ (2019): ಡೆಲ್ಲಿ ಕ್ಯಾಪಿಟಲ್ಸ್ ಪರ ಆಡುತ್ತಿದ್ದ ಅಮಿತ್ ಮಿಶ್ರಾ, ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ರನ್ ಓಡುವಾಗ ತಮ್ಮ ಹಾದಿಯನ್ನು ಬದಲಿಸಿದ್ದರು. ಫೀಲ್ಡರ್ ಎಸೆದ ಚೆಂಡು ಸ್ಟಂಪ್‌ಗೆ ತಗುಲದಂತೆ ತಡೆಯಲು ಅವರು ಪಿಚ್‌ನ ಮಧ್ಯದಲ್ಲಿ ಓಡಿದ್ದರಿಂದ ‘ಅಬ್‌ಸ್ಟ್ರಕ್ಟಿಂಗ್ ದ ಫೀಲ್ಡ್’ ನಿಯಮದಡಿಯಲ್ಲಿ ಔಟ್ ನೀಡಲಾಗಿತ್ತು.

ರವೀಂದ್ರ ಜಡೇಜಾ (2024): ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ ಪರ ಕಣಕ್ಕಿಳಿದಿದ್ದ ರವೀಂದ್ರ ಜಡೇಜಾ ಎರಡನೇ ರನ್‌ಗಾಗಿ ಓಡುವಾಗ ಸಂಜು ಸ್ಯಾಮ್ಸನ್ ಅವರ ಎಸೆತಕ್ಕೆ ಅಡ್ಡ ಬಂದಿದ್ದರು. ರಿಪ್ಲೇನಲ್ಲಿ ಜಡೇಜಾ ಚೆಂಡು ಬರುತ್ತಿರುವುದನ್ನು ನೋಡಿ ಓಟದ ಹಾದಿ ಬದಲಿಸಿದ್ದು ಸಾಬೀತಾದ ಕಾರಣ ಅಂಪೈರ್ ಔಟ್ ನೀಡಿದ್ದರು.

ಅಂಗ್​​ಕ್ರಿಶ್ ರಘುವಂಶಿ (2026): ಕೊಲ್ಕತ್ತಾ ನೈಟ್ ರೈಡರ್ಸ್​ ತಂಡದ ಯುವ ಆಟಗಾರ ಅಂಗ್​ಕ್ರಿಶ್ ರಘುವಂಶಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಮೊಹಮ್ಮದ್ ಶಮಿ ಅವರ ಥ್ರೋಗೆ ಅಡ್ಡ ಬಂದಿದ್ದರು. ಇದನ್ನು ಪರಿಶೀಲಿಸಿದ ಮೂರನೇ ಅಂಪೈರ್ ‘ಅಬ್‌ಸ್ಟ್ರಕ್ಟಿಂಗ್ ದ ಫೀಲ್ಡ್’ ನಿಯಮದಡಿಯಲ್ಲಿ ಔಟ್ ನೀಡಿದ್ದರು.

Published On – 1:31 pm, Mon, 27 April 26

Source link

ಲಿವ್-ಇನ್ ಸಂಬಂಧದಿಂದ ಹೊರಬರುವುದು ಅಪರಾಧವಲ್ಲ, ಆದರೆ ಮಗು ಜನಿಸಿದ ನಂತರ ಅತ್ಯಾಚಾರದ ಆರೋಪ ಎಷ್ಟು ಸರಿ: ಸುಪ್ರೀಂ ಪ್ರಶ್ನೆ – Kannada News | Supreme Court of India Examines Consent in Live In Relationship Case

ನವದೆಹಲಿ, ಏಪ್ರಿಲ್ 27: ಲಿವ್-ಇನ್ ಸಂಬಂಧ(Live-In Relationship)ದಲ್ಲಿ ದೀರ್ಘಕಾಲ ಬಾಳಿ, ಮಗುವನ್ನು ಪಡೆದ ನಂತರ ಪುರುಷನ ವಿರುದ್ಧ ಅತ್ಯಾಚಾರದ ದೂರು ದಾಖಲಿಸುವ ಪ್ರವೃತ್ತಿಯ ಬಗ್ಗೆ ಸುಪ್ರೀಂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. ಮದುವೆಯ ಬಂಧವಿಲ್ಲದ ಇಂತಹ ಸಂಬಂಧಗಳಿಂದ ಹೊರನಡೆಯುವುದು ಕ್ರಿಮಿನಲ್ ಅಪರಾಧವಾಗುವುದಿಲ್ಲ ಎಂದು ನ್ಯಾಯಾಲಯವು ಸ್ಪಷ್ಟಪಡಿಸಿದೆ.

ಮದುವೆಯ ಸುಳ್ಳು ಭರವಸೆ ನೀಡಿ ಅತ್ಯಾಚಾರ ಎಸಗಲಾಗಿದೆ ಎಂಬ ಮಹಿಳೆಯ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರಿದ್ದ ಪೀಠವು, ಇದು ಲಿವ್-ಇನ್ ಸಂಬಂಧವಾಗಿದ್ದು, ಮಹಿಳೆ ಆ ವ್ಯಕ್ತಿಯೊಂದಿಗೆ ಮಗುವನ್ನು ಹೊಂದಿದ್ದಾಳೆ. ಹೀಗಿರುವಾಗ ಈಗ ಅತ್ಯಾಚಾರ ಮತ್ತು ಹಲ್ಲೆಯ ಆರೋಪ ಮಾಡುತ್ತಿರುವುದು ಆಶ್ಚರ್ಯಕರ ಎಂದು ಅಭಿಪ್ರಾಯಪಟ್ಟಿತು.

ವಯಸ್ಕರು ವಿವಾಹದ ಹೊರಗೆ ಒಟ್ಟಿಗೆ ವಾಸಿಸಲು ನಿರ್ಧರಿಸಿದಾಗ, ಅಂತಹ ಸಂಬಂಧಗಳಲ್ಲಿ ಕೆಲವು ಅಂತರ್ಗತ ಅಪಾಯಗಳಿರುತ್ತವೆ ಎಂದು ನ್ಯಾಯಾಲಯ ಗಮನಿಸಿದೆ. ಒಪ್ಪಂದದ ಅಥವಾ ಒಮ್ಮತದ ಸಂಬಂಧವಿದ್ದಾಗ ಅಲ್ಲಿ ಅಪರಾಧದ ಪ್ರಶ್ನೆ ಎಲ್ಲಿಂದ ಬರುತ್ತದೆ ವರ್ಷಗಳ ಕಾಲ ಒಟ್ಟಿಗೆ ವಾಸಿಸಿ, ಬೇರ್ಪಟ್ಟ ನಂತರ ಲೈಂಗಿಕ ದೌರ್ಜನ್ಯದ ದೂರು ದಾಖಲಿಸುವುದು ಸರಿಯಲ್ಲ ಎಂದು ನ್ಯಾಯಮೂರ್ತಿಗಳು ಹೇಳಿದರು.

ಮತ್ತಷ್ಟು ಓದಿ: ತನ್ನ ಗೆಳೆಯನ ಜೊತೆ ಸಂಬಂಧದ ಅನುಮಾನ; ಮುಂಬೈ ವಿದ್ಯಾರ್ಥಿನಿಯನ್ನು ಎಳೆದು, ಕೂದಲು ಕತ್ತರಿಸಿದ ಯುವತಿ

ಲಿವ್-ಇನ್ ಸಂಬಂಧಗಳು ಮುರಿದುಬಿದ್ದಾಗ ಮಹಿಳೆಯರು ಹೆಚ್ಚಾಗಿ ಲೈಂಗಿಕ ದೌರ್ಜನ್ಯದ ದೂರುಗಳನ್ನು ಅಸ್ತ್ರವಾಗಿ ಬಳಸುತ್ತಿದ್ದಾರೆ ಎಂದು ನ್ಯಾಯಾಲಯ ವಿಷಾದಿಸಿದೆ.ಒಪ್ಪಿಗೆಯ ಸ್ವರೂಪವನ್ನು ಪರಿಶೀಲಿಸುವುದು ನ್ಯಾಯಾಲಯದ ಜವಾಬ್ದಾರಿಯಾಗಿದೆ ಎಂದು ಅವರು ಒತ್ತಿ ಹೇಳಿದರು.

ಅರ್ಜಿದಾರರ ಪರ ವಕೀಲರು, ಆರೋಪಿಯು ಮದುವೆಯ ಭರವಸೆ ನೀಡಿ ಮಹಿಳೆಯನ್ನು ನಂಬಿಸಿದ್ದ, ಆದರೆ ಆತನಿಗೆ ಮೊದಲೇ ಮದುವೆಯಾಗಿತ್ತು ಎಂಬ ವಿಷಯ ಮಹಿಳೆಗೆ ತಿಳಿದಿರಲಿಲ್ಲ ಎಂದು ವಾದಿಸಿದರು. ಆದರೆ, ದೀರ್ಘಕಾಲದ ಲಿವ್-ಇನ್ ಸಂಬಂಧದ ನಂತರ ಇಂತಹ ದೂರುಗಳನ್ನು ದಾಖಲಿಸುವ ಕಾನೂನುಬದ್ಧತೆಯನ್ನು ನ್ಯಾಯಾಲಯ ಪ್ರಶ್ನಿಸಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 1:20 pm, Mon, 27 April 26

Source link

ಕಾರ್ಮಿಕರಿಗೆ ಸಿಹಿಸುದ್ದಿ: ಶೀಘ್ರದಲ್ಲೇ ರಾಜ್ಯದಲ್ಲಿ ಹೊಸ ಕನಿಷ್ಠ ವೇತನ ಜಾರಿ , ಸಚಿವ ಸಂತೋಷ್ ಲಾಡ್ ಘೋಷಣೆ! – Kannada News | Karnataka to Implement New Minimum Wage; Smart Cards for Drivers and New Bills for Gig Workers

ಶೀಘ್ರದಲ್ಲೇ ರಾಜ್ಯದಲ್ಲಿ ಹೊಸ ಕನಿಷ್ಠ ವೇತನ ಜಾರಿImage Credit source: MediaForge AI

ಬಳ್ಳಾರಿ, ಏಪ್ರಿಲ್ 27: ಸುಪ್ರೀಂ ಕೋರ್ಟ್‌ನ ಮಾರ್ಗಸೂಚಿಗಳಿಗೆ ಅನುಗುಣವಾಗಿ ರಾಜ್ಯದ ಕಾರ್ಮಿಕರಿಗೆ ಹೊಸ ಕನಿಷ್ಠ ವೇತನವನ್ನು (Minimum wage) ಜಾರಿಗೆ ತರಲು ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ (Santosh Lad) ತಿಳಿಸಿದ್ದಾರೆ. ಆಹಾರ, ಬಟ್ಟೆ ಮತ್ತು ವಸತಿ ಅಗತ್ಯತೆಗಳನ್ನು ಪರಿಗಣಿಸಿ ಈ ವೇತನವನ್ನು ನಿಗದಿಪಡಿಸಲಾಗುವುದು ಎಂದು ಅವರು ಹೇಳಿದರು.

ಅಸಂಘಟಿತ ವಲಯದ ಕಾರ್ಮಿಕರನ್ನು ಮುಖ್ಯವಾಹಿನಿಗೆ ತರಲು ಸರ್ಕಾರ ಬದ್ಧ

ಸಂಡೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸಚಿವರು, ಪ್ರಸ್ತುತ ಮಾಸಿಕ ಕನಿಷ್ಠ ವೇತನ ಸರಾಸರಿ 19,000 ರೂಪಾಯಿಗಳಷ್ಟಿದೆ. ಅಸಂಘಟಿತ ವಲಯದ ಕಾರ್ಮಿಕರನ್ನು ಮುಖ್ಯವಾಹಿನಿಗೆ ತರಲು ಸರ್ಕಾರ ಬದ್ಧವಾಗಿದ್ದು, ‘ಅಂಬೇಡ್ಕರ್ ಸಹಾಯ ಹಸ್ತ’ ಎಂಬಂತೆಯೆ ಹಲವು ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದೆ. ಗಿಗ್ ವರ್ಕರ್ಸ್ (ಡೆಲಿವರಿ ಸಿಬ್ಬಂದಿ) ಹಿತರಕ್ಷಣೆಗಾಗಿ ಮಸೂದೆ ಮಂಡಿಸಿದ ಮೊದಲ ರಾಜ್ಯ ಕರ್ನಾಟಕವಾಗಿದೆ ಎಂದು ಅವರು ಹೆಮ್ಮೆ ವ್ಯಕ್ತಪಡಿಸಿದರು.

ಇದನ್ನೂ ಓದಿ 8ನೇ ವೇತನ ಆಯೋಗ: ಕೇಂದ್ರ ಸರ್ಕಾರಿ ನೌಕರರ ಪ್ರಮುಖ ಬೇಡಿಕೆಗಳು – ಇಲ್ಲಿದೆ ಸಂಪೂರ್ಣ ವಿವರ

ಶೀಘ್ರದಲ್ಲೇ ಸ್ಮಾರ್ಟ್ ಕಾರ್ಡ್ ವಿತರಣೆ

ಇದೇ ವೇಳೆ ಚಾಲಕರು ಮತ್ತು ಕ್ಲೀನರ್‌ಗಳ ಕಲ್ಯಾಣಕ್ಕಾಗಿ ಶೀಘ್ರದಲ್ಲೇ ಸ್ಮಾರ್ಟ್ ಕಾರ್ಡ್ ವಿತರಿಸಲಾಗುವುದು ಹಾಗೂ ಚಲನಚಿತ್ರ ಮತ್ತು ಮನೆಗೆಲಸದ ಕಾರ್ಮಿಕರ ಸಾಮಾಜಿಕ ಭದ್ರತೆಗಾಗಿ ಹೊಸ ಶಾಸನಗಳನ್ನು ರೂಪಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಂಡೂರು ಶಾಸಕಿ ಇ. ಅನ್ನಪೂರ್ಣ ಅವರು ತಾಲೂಕಿನ 175 ಶಾಲೆಗಳ ಪೈಕಿ 65 ಶಾಲೆಗಳನ್ನು ಮಾದರಿ ಶಾಲೆಗಳಾಗಿ ಅಭಿವೃದ್ಧಿಪಡಿಸಲಾಗಿದೆ ಎಂದು ತಿಳಿಸಿದರು. ಸಂಸದ ಇ. ತುಕಾರಾಂ ಮಾತನಾಡಿ, ‘ಕ್ಲಿನಿಕ್ ಆನ್ ವೀಲ್ಸ್’ ಯೋಜನೆಯಡಿ 13 ಮೊಬೈಲ್ ಘಟಕಗಳ ಮೂಲಕ 8.3 ಲಕ್ಷ ಜನರಿಗೆ ಆರೋಗ್ಯ ಸೇವೆ ಒದಗಿಸಲಾಗಿದೆ ಎಂದು ಮಾಹಿತಿ ನೀಡಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ರಕ್ಷಿತಾ-ಧ್ರುವಂತ್ ಮಧ್ಯೆ ಎಷ್ಟು ಒಳ್ಳೆಯ ಬಾಂಧವ್ಯ ಇದೆ ನೋಡಿ

ರಕ್ಷಿತಾ ಶೆಟ್ಟಿ ಹಾಗೂ ಧ್ರುವಂತ್ ಬಿಗ್ ಬಾಸ್ ಮನೆಯಲ್ಲಿ ಒಟ್ಟಿಗೆ ಇದ್ದರು. ಇವರನ್ನು ಸೀಕ್ರೆಟ್​ ರೂಂನಲ್ಲೂ ಒಟ್ಟಿಗೆ ಇಡಲಾಗಿತ್ತು. ಈಗ ರಕ್ಷಿತಾ ಶೆಟ್ಟಿ ಅವರು ಬಿಗ್ ಬಾಸ್ ಮುಗಿದ ಬಳಿಕ ಮೊದಲ ಬಾರಿಗೆ ಭೇಟಿ ಆಗಿದ್ದಾರೆ. ಈ ಭೇಟಿಯ ವಿಡಿಯೋವನ್ನು ರಕ್ಷಿತಾ ಶೆಟ್ಟಿ ಅವರು ಹಂಚಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಇಬ್ಬರೂ ಪ್ರೀತಿಯಿಂದ ಮಾತನಾಡಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಕಾಣಿಸಿದ ದ್ವೇಷ ಇಲ್ಲಿ ಕಾಣಿಸುತ್ತಿಲ್ಲ ಎಂಬುದು ಖುಷಿಯ ವಿಷಯ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ತಾಳ್ಮೆ ಕಳೆದುಕೊಂಡ ರಘುವಂಶಿಗೆ 4.28 ಲಕ್ಷ ರೂ. ದಂಡ! – Kannada News | IPL 2026: KKR’s Angkrish Raghuvanshi Fined

ಕೋಲ್ಕತ್ತಾ ನೈಟ್ ರೈಡರ್ಸ್ (KKR) ತಂಡದ ಉದಯೋನ್ಮುಖ ಬ್ಯಾಟರ್ ಅಂಗ್​ಕ್ರಿಶ್ ರಘುವಂಶಿ ಅವರಿಗೆ ಐಪಿಎಲ್ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಕ್ಕಾಗಿ ಪಂದ್ಯದ ಸಂಭಾವನೆಯಲ್ಲಿ ಶೇ. 20 ರಷ್ಟು ದಂಡ ವಿಧಿಸಲಾಗಿದೆ. ಇದರೊಂದಿಗೆ ಅವರ ಶಿಸ್ತಿನ ದಾಖಲೆಗೆ ಒಂದು ಡಿಮೆರಿಟ್ ಪಾಯಿಂಟ್ ಅನ್ನು ಸೇರಿಸಲಾಗಿದೆ.

ಏಪ್ರಿಲ್ 26 ರಂದು ಲಕ್ನೋ ಸೂಪರ್ ಜೈಂಟ್ಸ್ (LSG) ವಿರುದ್ಧ ನಡೆದ ಪಂದ್ಯದಲ್ಲಿ ಅಂಗ್​ಕ್ರಿಶ್ ರಘುವಂಶಿ ಅವರು ‘ಫೀಲ್ಡಿಂಗ್‌ಗೆ ಅಡ್ಡಿಪಡಿಸಿದ’ (Obstructing the field) ಕಾರಣಕ್ಕಾಗಿ ಔಟ್ ಎಂದು ಘೋಷಿಸಲಾಯಿತು. ಅಂಪೈರ್ ತೀರ್ಪಿನಿಂದ ತೀವ್ರ ಅಸಮಾಧಾನಗೊಂಡ ರಘುವಂಶಿ, ಮೈದಾನದಿಂದ ಹೊರಹೋಗುವಾಗ ಬೌಂಡರಿ ಲೈನ್‌ನಲ್ಲಿದ್ದ ಕುಶನ್‌ಗಳನ್ನು ಬ್ಯಾಟ್‌ನಿಂದ ಜೋರಾಗಿ ಹೊಡೆದರು. ಅಷ್ಟೇ ಅಲ್ಲದೆ, ಡಗೌಟ್ ತಲುಪಿದ ನಂತರ ಸಿಟ್ಟಿನಿಂದ ತಮ್ಮ ಹೆಲ್ಮೆಟ್ ಅನ್ನು ಎಸೆದಿದ್ದರು.

ನಿಯಮದ ಉಲ್ಲಂಘನೆ:

ಐಪಿಎಲ್ ನೀತಿ ಸಂಹಿತೆಯ ಆರ್ಟಿಕಲ್ 2.2 ರ ಅಡಿಯಲ್ಲಿ (ಕ್ರಿಕೆಟ್ ಉಪಕರಣಗಳು ಅಥವಾ ಮೈದಾನದ ವಸ್ತುಗಳ ದುರ್ಬಳಕೆ) ರಘುವಂಶಿ ಅವರ ಈ ವರ್ತನೆಯನ್ನು ‘ಲೆವೆಲ್ 1’ ಅಪರಾಧ ಎಂದು ಪರಿಗಣಿಸಲಾಗಿದೆ. ರಘುವಂಶಿ ಅವರು ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದು, ಮ್ಯಾಚ್ ರೆಫರಿ ವಿಧಿಸಿದ ಶಿಕ್ಷೆಯನ್ನು ಅಂಗೀಕರಿಸಿದ್ದಾರೆ.

4.28 ಲಕ್ಷ ರೂ. ದಂಡ!

ಅಂಗ್​ಕ್ರಿಶ್ ರಘುವಂಶಿ ಅವರಿಗೆ ಕೆಕೆಆರ್ 3 ಕೋಟಿ ರೂ. ಸಂಭಾವನೆ ನೀಡುತ್ತಿದೆ. ಅದರಂತೆ ಲೀಗ್​ ಹಂತದ ಪ್ರತಿ ಪಂದ್ಯಕ್ಕೆ ಅವರ ಪಡೆಯುತ್ತಿರುವ ಶುಲ್ಕ 21,42857. ಈ  ಪಂದ್ಯ ಶುಲ್ಕದ ಶೇ.20 ರಷ್ಟು ದಂಡ ಕಟ್ಟಬೇಕಾಗುತ್ತದೆ. ಅದರಂತೆ ಅಂಗ್​ಕ್ರಿಶ್ ರಘುವಂಶಿ 4.28 ಲಕ್ಷ ರೂ. ದಂಡ ಪಾವತಿಸಬೇಕು.

ವಿವಾದಾತ್ಮಕ ಔಟ್:

ಈ ಪಂದ್ಯದ 5ನೇ ಓವರ್‌ನಲ್ಲಿ ರನ್ ಓಡುವಾಗ ರಘುವಂಶಿ ಅವರು ತಮ್ಮ ದಿಕ್ಕನ್ನು ಬದಲಿಸಿ ಫೀಲ್ಡರ್ ಎಸೆದ ಚೆಂಡಿಗೆ ಅಡ್ಡಿಪಡಿಸಿದರು ಎಂಬ ಕಾರಣಕ್ಕೆ ಲಕ್ನೋ ತಂಡ ಅಪೀಲ್ ಮಾಡಿತ್ತು. ಮೂರನೇ ಅಂಪೈರ್ ಇದನ್ನು ಪರಿಶೀಲಿಸಿ ‘ಔಟ್’ ಎಂದು ತೀರ್ಪು ನೀಡಿದ್ದರು. ಐಪಿಎಲ್ ಇತಿಹಾಸದಲ್ಲಿ ‘ಫೀಲ್ಡಿಂಗ್‌ಗೆ ಅಡ್ಡಿಪಡಿಸಿದ’ ಕಾರಣಕ್ಕೆ ಔಟ್ ಆದ ನಾಲ್ಕನೇ ಆಟಗಾರ ಎಂಬ ಕುಖ್ಯಾತಿಗೆ ರಘುವಂಶಿ ಪಾತ್ರರಾದರು.

ಇದನ್ನೂ ಓದಿ: ಧೋನಿಯ 15 ವರ್ಷಗಳ ಹಳೆಯ ದಾಖಲೆ ಮುರಿದ ರಿಂಕು ಸಿಂಗ್

ಕೆಕೆಆರ್​ಗೆ ಸೂಪರ್ ಗೆಲುವು:

ಇಂಡಿಯನ್ ಪ್ರೀಮಿಯರ್ ಲೀಗ್​ನ 38ನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು 20 ಓವರ್​ಗಳಲ್ಲಿ 155 ರನ್ ಬಾರಿಸಿದ್ದು. ಈ ಗುರಿಯನ್ನು ಬೆನ್ನತ್ತಿದ ಲಕ್ನೋ ಸೂಪರ್ ಜೈಂಟ್ಸ್ 20 ಓವರ್​ಗಳಲ್ಲಿ 155 ರನ್​ ಗಳಿಸಿ ಪಂದ್ಯವನ್ನು ಟೈನಲ್ಲಿ ಅಂತ್ಯಗೊಳಿಸಿದ್ದರು. ಇದಾದ ಬಳಿಕ ನಡೆದ ಸೂಪರ್ ಓವರ್​ನಲ್ಲಿ ಎಲ್​ಎಸ್​ಜಿ ಕೇವಲ 1 ರನ್​ಗಳಿಸಿತು. ಸೂಪರ್ ಓವರ್​ನಲ್ಲಿ 2 ರನ್​ಗಳ ಗುರಿ ಪಡೆದ ಕೆಕೆಆರ್ ಮೊದಲ ಎಸೆತದಲ್ಲಿ ಫೋರ್ ಬಾರಿಸಿ ಗೆಲುವು ದಾಖಲಿಸಿದೆ.

Source link

Exit mobile version