Video: ರೈಲಿನಿಂದ ಮಗು ಬಿದ್ದೇಬಿಡ್ತು, ಚೈನ್ ಎಳೆದರೂ ನಿಲ್ಲದ ರೈಲು, ಅಸಹಾಯಕಳಾಗಿ ಕಣ್ಣೀರಿಟ್ಟ ತಾಯಿ – Kannada News | Child Falls from Train, Emergency Chain Fails to Halt Service on Jalpaiguri Route
ಕೋಲ್ಕತ್ತಾ, ಏಪ್ರಿಲ್ 27: ಕೈಜಾರಿ ಮಗು ರೈಲಿನಿಂದ ಬಿದ್ದೇ ಬಿಟ್ಟಿತ್ತು, ರೈಲಿನ ತುರ್ತು ಸರಪಳಿಯನ್ನು ಎಳೆದರೂ ಕೂಡ ರೈಲು ನಿಲ್ಲದೆ ಚಲಿಸುತ್ತಲೇ ಇದ್ದ ಘಟನೆ ಜಲ್ಪೈಗುರಿ ಮತ್ತು ರಾಮನಗರ ನಡುವಿನ ರೈಲು ಪ್ರಯಾಣದ ವೇಳೆ ಸಂಭವಿಸಿದೆ. ರೈಲಿನಿಂದ ಮಗು ಕೆಳಕ್ಕೆ ಬಿದ್ದ ತಕ್ಷಣವೇ ಗಾಬರಿಗೊಂಡ ತಾಯಿ, ಮಗುವನ್ನು ರಕ್ಷಿಸಲು ರೈಲನ್ನು ನಿಲ್ಲಿಸಲು ತುರ್ತು ಸರಪಳಿಯನ್ನು ಎಳೆದಿದ್ದಾರೆ. ಆದರೆ, ರೈಲು ನಿಲ್ಲಲೇ ಇಲ್ಲ. ಆಕೆಯ ಆಕ್ರಂದನ ಕಂಡು ಬೋಗಿಯಲ್ಲಿದ್ದ ಇತರ ಪ್ರಯಾಣಿಕರೂ ಸಹಕರಿಸಿ ಪದೇ ಪದೇ ಸರಪಳಿಯನ್ನು ಎಳೆದರೂ…