DC vs RCB: ದೆಹಲಿಯಲ್ಲಿ ಇತಿಹಾಸ ರಚಿಸಲು ಸಿದ್ಧವಾದ ವಿರಾಟ್ ಕೊಹ್ಲಿ – Kannada News | Virat Kohli all set to create history in Delhi in DC vc RCB IPL 2026 Match

ಏಪ್ರಿಲ್ 27, ಸೋಮವಾರ ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯಲಿರುವ ಐಪಿಎಲ್ 2026 ರ ದೊಡ್ಡ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗಲಿದ್ದು, ರನ್‌ಗಳ ಮಳೆ ಮತ್ತು ದಾಖಲೆಗಳ ಸುರಿಮಳೆಯಾಗುವ ಸಾಧ್ಯತೆಯಿದೆ. ಈ ಪಂದ್ಯದಲ್ಲಿ ಅನೇಕ ವೈಯಕ್ತಿಕ ಸಾಧನೆಗಳು ಪಣಕ್ಕಿಡಲಾಗಿದೆ, ಈ ಪೈಕಿ ದೊಡ್ಡ ಆಕರ್ಷಣೆ ಕಿಂಗ್ ಕೊಹ್ಲಿ. ಪ್ರಸಿದ್ಧ ದೆಹಲಿ ಪಿಚ್‌ನಲ್ಲಿ ವಿರಾಟ್ ಕೊಹ್ಲಿ (Virat Kohli) ಐಪಿಎಲ್ ಇತಿಹಾಸದಲ್ಲೇ ಶಾಶ್ವತವಾಗಿಡಲು ಕೆಲವು ದಾಖಲೆಗಳನ್ನು ಸ್ಥಾಪಿಸುವ ಹೊಸ್ತಿಲಲ್ಲಿದ್ದಾರೆ.

ವಿರಾಟ್ ಐಪಿಎಲ್‌ನಲ್ಲಿ 9,000 ರನ್‌ಗಳ ಸಮೀಪದಲ್ಲಿದ್ದಾರೆ

ಐಪಿಎಲ್ ಇತಿಹಾಸದಲ್ಲಿ ವಿರಾಟ್ ಕೊಹ್ಲಿ ಅತಿ ದೊಡ್ಡ ಮೈಲಿಗಲ್ಲು ತಲುಪುವ ಸನಿಹದಲ್ಲಿದ್ದಾರೆ. ಐಪಿಎಲ್‌ನಲ್ಲಿ 9,000 ರನ್‌ಗಳನ್ನು ತಲುಪಿದ ವಿಶ್ವದ ಮೊದಲ ಆಟಗಾರನಾಗಲು ಕೊಹ್ಲಿಗೆ ಕೇವಲ 111 ರನ್‌ಗಳು ಬೇಕಾಗಿವೆ. ಬೇರೆ ಯಾವುದೇ ಬ್ಯಾಟ್ಸ್‌ಮನ್ ಈ ಅಂಕಿ ಅಂಶದ ಹತ್ತಿರವೂ ಬಂದಿಲ್ಲ. ಕೊಹ್ಲಿ ದೆಹಲಿ ವಿರುದ್ಧ ದೊಡ್ಡ ಇನ್ನಿಂಗ್ಸ್ ಆಡುವಲ್ಲಿ ಯಶಸ್ವಿಯಾದರೆ, ಲೀಗ್‌ನಲ್ಲಿ 9,000 ರನ್‌ಗಳನ್ನು ದಾಟಿದ ಏಕೈಕ ಬ್ಯಾಟ್ಸ್‌ಮನ್ ಆಗುವ ಸಾಧ್ಯತೆ ಇದೆ.

ಒಂದೇ ದೇಶದ ಪರ 10,000 ಟಿ20 ರನ್ ಗಳಿಸಿದ ಅಪರೂಪದ ದಾಖಲೆ

ಕೊಹ್ಲಿ ಐಪಿಎಲ್‌ನಲ್ಲಿ ಮಾತ್ರವಲ್ಲದೆ ಒಟ್ಟಾರೆ ಟಿ20 ಕ್ರಿಕೆಟ್‌ನಲ್ಲಿಯೂ ಐತಿಹಾಸಿಕ ಮೈಲಿಗಲ್ಲು ಸಾಧಿಸುವ ಹಾದಿಯಲ್ಲಿದ್ದಾರೆ. ಭಾರತದಲ್ಲಿ 10,000 ಟಿ20 ರನ್‌ಗಳನ್ನು ತಲುಪಲು ಅವರಿಗೆ ಕೇವಲ 68 ರನ್‌ಗಳು ಬೇಕಾಗಿವೆ. ದೆಹಲಿ ಕೊಹ್ಲಿಯ ತವರು ಮೈದಾನವಾಗಿದೆ, ಆದ್ದರಿಂದ ಇಲ್ಲಿ 68 ರನ್‌ಗಳನ್ನು ಗಳಿಸುವುದು ಇವರಿಗೆ ದೊಡ್ಡ ಕಷ್ಟವೇನಲ್ಲ.

Abhishek Sharma: ಹೋಟೆಲ್​ನಲ್ಲಿ ಅಭಿಷೇಕ್ ಶರ್ಮಾ ಅವರ ಕೈ ಹಿಡಿದು ತನ್ನತ್ತ ಎಳೆದ ಅಪರಿಚಿತ ಹುಡುಗಿ: ವಿಡಿಯೋ ವೈರಲ್

ದಾಖಲೆಗಳ ಸುನಾಮಿ ಮತ್ತು ದೈತ್ಯರ ಮೇಲೆ ಕಣ್ಣುಗಳು

ವಿರಾಟ್ ಕೊಹ್ಲಿ ಮಾತ್ರವಲ್ಲದೆ, ಎರಡೂ ತಂಡಗಳ ಹಲವಾರು ಆಟಗಾರರು ಸಹ ಈ ಪಂದ್ಯದಲ್ಲಿ ಮಹತ್ವದ ಮೈಲಿಗಲ್ಲುಗಳನ್ನು ತಲುಪುವ ಸನಿಹದಲ್ಲಿದ್ದಾರೆ. ಅರುಣ್ ಜೇಟ್ಲಿ ಕ್ರೀಡಾಂಗಣದ ಸಣ್ಣ ಬೌಂಡರಿಗಳು ಮತ್ತು ಸಮತಟ್ಟಾದ ಪಿಚ್ ಅನ್ನು ಗಮನಿಸಿದರೆ, ಪಂದ್ಯವು ಅನೇಕ ಐತಿಹಾಸಿಕ ಸಾಧನೆಗಳಿಗೆ ಸಾಕ್ಷಿಯಾಗುವ ನಿರೀಕ್ಷೆಯಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 10:23 am, Mon, 27 April 26

Source link

ಕೊಪ್ಪಳದಲ್ಲಿ ನಿಲ್ಲದ ಅನ್ನಭಾಗ್ಯ ಅಕ್ಕಿ ಅಕ್ರಮ ಸಾಗಾಟ ದಂಧೆ: ತಡರಾತ್ರಿ ಪೊಲೀಸರ ದಾಳಿ, ನೂರಾರು ಅಕ್ಕಿ ಮೂಟೆಗಳು ಜಪ್ತಿ! – Kannada News | Koppal Rice Seizure: Rural Police Raid Near Dadegal; Hundreds of Anna Bhagya Rice Bags Seized

ಕೊಪ್ಪಳ, ಏಪ್ರಿಲ್ 27: ಜಿಲ್ಲೆಯಲ್ಲಿ ಅಕ್ರಮವಾಗಿ ಅನ್ನಭಾಗ್ಯ ಅಕ್ಕಿ ಸಾಗಾಟ ಮಾಡುವ ದಂಧೆ ಎಗ್ಗಿಲ್ಲದೆ ಸಾಗುತ್ತಿದ್ದು, ಇದೀಗ ಕೊಪ್ಪಳ ಗ್ರಾಮೀಣ ಠಾಣೆಯ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸುವ ಮೂಲಕ ಖದೀಮರಿಗೆ ಶಾಕ್ ನೀಡಿದ್ದಾರೆ. ಕೊಪ್ಪಳ ತಾಲೂಕಿನ ದದೇಗಲ್ ಬಳಿ ತಡರಾತ್ರಿ ಟ್ರ್ಯಾಕ್ಟರ್‌ನಲ್ಲಿ ಅಕ್ರಮವಾಗಿ ಅನ್ನಭಾಗ್ಯ ಅಕ್ಕಿಯನ್ನು ಸಾಗಿಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಪೊಲೀಸರಿಗೆ ಲಭಿಸಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಕೊಪ್ಪಳ ಗ್ರಾಮೀಣ ಪೊಲೀಸರು ದಾಳಿ ನಡೆಸಿ, ನೂರಾರು ಅನ್ನಭಾಗ್ಯ ಅಕ್ಕಿ ಮೂಟೆಗಳನ್ನು ವಶಪಡಿಸಿಕೊಂಡಿದ್ದಾರೆ. ಬಡವರ ಹೊಟ್ಟೆ ಸೇರಬೇಕಿದ್ದ ಅಕ್ಕಿಯನ್ನು ಅಕ್ರಮವಾಗಿ ಕಾಳಸಂತೆಗೆ ಸಾಗಿಸುತ್ತಿದ್ದ ಟ್ರ್ಯಾಕ್ಟರ್ ಹಾಗೂ ಅಕ್ಕಿ ಸಂಗ್ರಹವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

ಕೊಪ್ಪಳ ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಪಡಿತರ ಅಕ್ಕಿ ದಂಧೆ ಹೆಚ್ಚಾಗುತ್ತಿದ್ದು, ಪೊಲೀಸರು ಮತ್ತು ಆಹಾರ ಇಲಾಖೆ ಅಧಿಕಾರಿಗಳು ನಿರಂತರ ನಿಗಾ ವಹಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹತ್ಯೆ ಯತ್ನವೋ ಅಥವಾ ರಾಜಕೀಯ ಸ್ಕಿಟ್? ಅಮೆರಿಕ ಘಟನೆಯ ಸುತ್ತ ಹರಿದಾಡುತ್ತಿದೆ ಆಧಾರರಹಿತ ಊಹೆಗಳ ಮಹಾಪೂರ – Kannada News | White House Incident: Assassination Attempt or Political Stunt? Washington Rumors Explored

ವಾಷಿಂಗ್ಟನ್, ಏಪ್ರಿಲ್ 27: ಅಮೆರಿಕದ ಶ್ವೇತಭವನ(WhiteHouse)ದಲ್ಲಿ ನಡೆದ ವರದಿಗಾರರ ಔತಣಕೂಟದ ಹೊರಗೆ ಗುಂಡಿನ ಸದ್ದು ಕೇಳಿಬಂದ ಎರಡನೇ ನಿಮಿಷಗಳಲ್ಲಿ ಅಮೆರಿಕದಲ್ಲಿ ಎರಡು ವಿಧವಾದ ಚರ್ಚೆ ಆರಂಭಗೊಂಡಿತ್ತು. ಒಂದು ಕಡೆ ಭದ್ರತಾ ಲೋಪದ ಬಗ್ಗೆ ಆತಂಕ ವ್ಯಕ್ತವಾದರೆ, ಮತ್ತೊಂದು ಕಡೆ ಇದು ಅವರೇ ಸೃಷ್ಟಿಸಿದ ನಾಟಕ ಎಂಬ ಮಾತುಗಳು ಕೇಳಿಬಂದಿತ್ತು. ಸಾಮಾಜಿಕ ಮಾಧ್ಯಮದ ಬಳಕೆದಾರರು ಪ್ರತಿಯೊಂದು ಚಲನವಲನವನ್ನೂ ಸೂಕ್ಷ್ಮವಾಗಿ ಗಮನಿಸಲು ಆರಂಭಿಸಿದರು. ಪ್ರಥಮ ಮಹಿಳೆ ಮೆಲಾನಿಯಾ ಟ್ರಂಪ್ ಅವರ ಮುಖಭಾವದಿಂದ ಹಿಡಿದು, ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಅವರನ್ನು ಅಧ್ಯಕ್ಷರಿಗಿಂತ ಮೊದಲು ಸುರಕ್ಷಿತ ಸ್ಥಳಕ್ಕೆ ಕರೆದೊಯ್ದಿದ್ದರ ಬಗ್ಗೆ ತೀವ್ರ ಚರ್ಚೆಗಳು ನಡೆದವು.

ಘಟನೆಗೆ ಕೆಲವೇ ಕ್ಷಣಗಳ ಮೊದಲು ಅಧ್ಯಕ್ಷರ ಜೊತೆಗಿದ್ದ ಪ್ರಸಿದ್ಧ ಮಾನಸಿಕ ತಜ್ಞ ಓಜ್ ಪರ್ಲ್‌ಮನ್ ಅವರ ಉಪಸ್ಥಿತಿಯೂ ಅನುಮಾನದ ಸುಳಿಗೆ ಸಿಲುಕಿತು. ಅವರು ಹಿಡಿದಿದ್ದ ಕಾಗದದ ತುಣುಕು ಏನೋ ರಹಸ್ಯ ಸಂಕೇತವಾಗಿತ್ತು ಎಂಬ ಸುಳ್ಳು ಸುದ್ದಿಗಳು ಹರಿದಾಡಿದವು.

ಆರೋಪಿ ಅಲೆನ್‌ನನ್ನು ಗುಂಡು ಹಾರಿಸದೆ ಜೀವಂತವಾಗಿ ಸೆರೆಹಿಡಿದಿದ್ದು ಹೇಗೆ ಎಂಬ ಪ್ರಶ್ನೆ ಆನ್‌ಲೈನ್‌ನಲ್ಲಿ ಕೇಳಿಬಂತು. ಆತನನ್ನು ಶರ್ಟ್ ಇಲ್ಲದ ಸ್ಥಿತಿಯಲ್ಲಿ ಬಂಧಿಸಿರುವ ಚಿತ್ರಗಳು ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟವು. ಆತ ಕಮಲಾ ಹ್ಯಾರಿಸ್ ಅವರ ಪ್ರಚಾರಕ್ಕೆ ಸಣ್ಣ ದೇಣಿಗೆ ನೀಡಿದ್ದ ಎಂಬ ವರದಿಗಳು ರಿಪಬ್ಲಿಕನ್ ಬೆಂಬಲಿಗರಿಗೆ ಅಸ್ತ್ರವಾದರೆ, ಆತ ಯಾವ ಪಕ್ಷಕ್ಕೂ ಸೇರಿಲ್ಲ ಎಂಬ ಅಧಿಕೃತ ದಾಖಲೆಗಳು ಗೊಂದಲವನ್ನು ಮತ್ತಷ್ಟು ಹೆಚ್ಚಿಸಿದವು.

ಮತ್ತಷ್ಟು ಓದಿ: ಶ್ವೇತಭವನದ ಔತಣಕೂಟದಲ್ಲಿ ಗುಂಡಿನ ಸದ್ದು: ಭಾಷಣ ನಿಲ್ಲಿಸಿ ಬಂಕರ್‌ನತ್ತ ಓಡಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್

ಕೆಲವು ರಾಜಕೀಯ ವಿಮರ್ಶಕರು ಈ ಘಟನೆಯನ್ನು ಬೇರೆ ಆಯಾಮದಲ್ಲಿ ನೋಡಿದರು. ಇರಾನ್ ಜೊತೆಗಿನ ಉದ್ವಿಗ್ನತೆಯಿಂದ ಜನರ ಗಮನ ಬೇರೆಡೆಗೆ ಸೆಳೆಯಲು ಈ ನಾಟಕವಾಡಲಾಗಿದೆ ಎಂಬ ಗಂಭೀರ ಆರೋಪಗಳು ಕೇಳಿಬಂದವು. ಇನ್ನು ಕೆಲವರು, ಹಳೆಯ ಹಿಲ್ಟನ್ ಹೋಟೆಲ್ ಬದಲಿಗೆ ಶ್ವೇತಭವನದಲ್ಲಿ ಹೊಸದಾದ, ಸುರಕ್ಷಿತವಾದ ‘ಬಾಲ್ ರೂಂ’ ನಿರ್ಮಿಸುವ ಟ್ರಂಪ್ ಅವರ ದೀರ್ಘಕಾಲದ ಹಠಕ್ಕೆ ಈ ಘಟನೆ ಬಲ ನೀಡಲಿದೆ ಎಂದು ವಿಶ್ಲೇಷಿಸಿದರು.

ಅಧಿಕೃತ ಸಂಸ್ಥೆಗಳು ಮತ್ತು ಸುದ್ದಿಗಳಿಗಿಂತ ಸೋಶಿಯಲ್ ಮೀಡಿಯಾ ಊಹೆಗಳಿಗೆ ಜನ ಮಾರುಹೋಗುತ್ತಿದ್ದಾರೆ.ಒಂದೇ ಘಟನೆಯನ್ನು ಎರಡು ಪಕ್ಷಗಳು ತಮ್ಮ ಲಾಭಕ್ಕೆ ತಕ್ಕಂತೆ ವಿಶ್ಲೇಷಿಸುತ್ತಿವೆ. ಸತ್ಯಾಂಶಗಳು ದೃಢೀಕರಣಗೊಳ್ಳುವ ಮೊದಲೇ ಸುಳ್ಳು ಸುದ್ದಿಗಳು ಜಾಗತಿಕ ಮಟ್ಟದಲ್ಲಿ ತಲುಪುತ್ತಿವೆ.

ವಾಷಿಂಗ್ಟನ್‌ನ ಈ ಘಟನೆಯು ಕೇವಲ ಒಬ್ಬ ವ್ಯಕ್ತಿಯ ಹತ್ಯೆ ಯತ್ನವಾಗಿ ಉಳಿಯದೆ, ಆಧುನಿಕ ಜಗತ್ತಿನಲ್ಲಿ ಮಾಹಿತಿ ಮತ್ತು ಸಂವಹನವು ಎದುರಿಸುತ್ತಿರುವ ಅತಿದೊಡ್ಡ ಸವಾಲಾಗಿ ಪರಿಣಮಿಸಿದೆ. ಸತ್ಯಾಂಶಗಳಿಗಿಂತ ಸಿದ್ಧಾಂತಗಳೇ ಮೇಲುಗೈ ಸಾಧಿಸುತ್ತಿರುವ ಈ ಕಾಲದಲ್ಲಿ ಜಾಗರೂಕತೆ ಅತ್ಯಗತ್ಯ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಬದಲಾದ ಕರಣ್ ಜೋಹರ್; ಬಾಲಿವುಡ್ ನೆಪೋ ಕಿಡ್ಸ್ ಕಳ್ಳಾಟ ಬಯಲು ಮಾಡಿದ ನಿರ್ಮಾಪಕ – Kannada News | Karan Johar Slams Bollywood Paid PR: KJo Exposes Fake Promotions and Actress Authenticity

ಕರಣ್ ಜೋಹರ್ ಅವರು (Karan Johar) ಬಾಲಿವುಡ್​​ನ ಖ್ಯಾತ ನಿರ್ಮಾಪಕರಲ್ಲಿ ಒಬ್ಬರು. ಅವರು ಹಲವು ಸೂಪರ್ ಹಿಟ್ ಚಿತ್ರಗಳನ್ನು ನಿರ್ಮಾಣ ಮಾಡಿದ್ದಾರೆ. ಹೊಸ ಮುಖಗಳಿಗೆ ಮಣೆ ಹಾಕುವುದು ಎಂದರೆ ಅವರಿಗೆ ಎಲ್ಲಿಲ್ಲದ ಉತ್ಸಾಹ. ಆದರೆ, ಇತ್ತೀಚೆಗೆ ಅವರು ನಿರ್ಮಾಣದಲ್ಲಿ ಅಷ್ಟು ಆ್ಯಕ್ಟೀವ್ ಆಗಿಲ್ಲ. ಈಗ ಬಾಲಿವುಡ್ ಯುವ ನಟಿಯರು ಸೇರಿದಂತೆ ಬಾಲಿವುಡ್ ಪಿಆರ್ ವ್ಯವಸ್ಥೆ ಬಗ್ಗೆ ಅವರು ನೀಡಿದ ಹೇಳಿಕೆ ಸೆನ್ಸೇಷನ್ ಸೃಷ್ಟಿ ಮಾಡಿದೆ. ಕರಣ್ ನೆಪೋ ಕಿಡ್​​ಗಳ ಬಗ್ಗೆ ತೋರಿಸುತ್ತಿದ್ದ ಒಲವು ಕಡಿಮೆ ಆದಂತೆ ಕಾಣಿಸುತ್ತಿದೆ.

ನಟನೆ ಬರದೆ ಇದ್ದರೂ ತೊಂದರೆ ಇಲ್ಲ, ಪಿಆರ್ ಕೆಲಸ ಮಾಡೋದನ್ನು ಮಾತ್ರ ಯುವ ನಟಿಯರು ಚೆನ್ನಾಗಿ ಮಾಡುತ್ತಾರೆ ಎಂಬುದು ಅನೇಕರ ಆರೋಪ. ಅದು ಮಿತಿಮೀರಿದೆ ಎಂಬ ಅಭಿಪ್ರಾಯವನ್ನು ಕರಣ್ ಜೋಹರ್ ಹೊರಹಾಕಿದ್ದಾರೆ. ತಿಳಿಸುವ ಎಲ್ಲಾ ಅಭಿನಂದನೆಗಳಿಗೂ ಬೆಲೆ ಕಟ್ಟಲಾಗುತ್ತಿದೆ ಎಂದು ಅವರು ಹೇಳಿದ್ದಾರೆ. ನಿಜ ಹೊಗಳಿಕೆ ಯಾವದು ಹಾಗೂ ಕೃತಕ ಹೊಗಳಿಕೆ ಯಾವುದು ಎಂಬುದು ಗೊತ್ತಾಗದಂತೆ ಮಾಡುತ್ತದೆ ಎಂದು ಅವರು ಹೇಳಿದ್ದಾರೆ.

‘ಬಾಲಿವುಡ್ ಸದ್ಯ ನಡೆಯುತ್ತಿರುವ ಪ್ರಚಾರದ ಆರ್ಭಟ ನಿಲ್ಲಬೇಕು. ಅಬ್ಬರದ ಪ್ರಚಾರಕ್ಕಿಂತ ಸಾಧನೆಗಳು ತಾವಾಗಿಯೇ ಮಾತನಾಡಬೇಕು. ಇಂದಿನ ದಿನಗಳಲ್ಲಿ ಪ್ರಚಾರ ಎಂಬುದು ಸಂಪೂರ್ಣವಾಗಿ ಹಣದ ಮೇಲೆ ಅವಲಂಬಿತವಾಗಿದೆ. ನೀವು ಸುಂದರವಾಗಿ ಕಾಣುತ್ತಿದ್ದೀರಿ ಎಂದು ಯಾರಾದರೂ ಹೇಳಬೇಕೆಂದರೆ ಅಥವಾ ನೀವು ಭೂಮಿಯ ಮೇಲಿನ ಅತ್ಯುತ್ತಮ ನಟ ಎಂದು ಕರೆಸಿಕೊಳ್ಳಬೇಕೆಂದರೆ ಅದಕ್ಕೆ ಹಣ ನೀಡಬೇಕಾದ ಪರಿಸ್ಥಿತಿ ಇದೆ. ಪ್ರಚಾರವು ಈಗ ಕೇವಲ ‘ಪೇಯ್ಡ್‌’ (Paid PR) ಆಗಿರುವುದರಿಂದ ಅದರಲ್ಲಿ ನೈಜತೆ ಇಲ್ಲ’ ಎಂದು ಕರಣ್ ಮುಕ್ತವಾಗಿ ತಮ್ಮ ಅಭಿಪ್ರಾಯ ಹೇಳಿದ್ದಾರೆ.

‘ನಾನು ನೀಡಿದ ಈ ಹೇಳಿಕೆ ಜಾನ್ವಿ ಕಪೂರ್ ಅಥವಾ ಶನಾಯ ಕಪೂರ್ ಅವರನ್ನೇ ಉದ್ದೇಶಿಸಿ ಹೇಳಿದ್ದಲ್ಲ. ಇದು ಇಡೀ ಚಿತ್ರರಂಗದ ಪ್ರಸ್ತುತ ಪರಿಸ್ಥಿತಿಯ ಬಗ್ಗೆ ಹೇಳುತ್ತಿರುವುದಾಗಿ’ ಕರಣ್ ವಿಶೇಷವಾಗಿ ಉಲ್ಲೇಖಿಸಿದರು.‘ಪ್ರಚಾರದ (PR) ಅಬ್ಬರ ಈಗ ಮಿತಿಮೀರಿದೆ . ಪ್ರಚಾರ ಮತ್ತು ಮಾರ್ಕೆಟಿಂಗ್ ಎಂಬುದು ಬಹಳ ಮುಖ್ಯವಾದ ಕೆಲಸಗಳು. ಅವುಗಳನ್ನು ಸರಿಯಾದ ರೀತಿಯಲ್ಲಿ ಮತ್ತು ಘನತೆಯಿಂದ ನಿರ್ವಹಿಸಬೇಕೇ ಹೊರತು ಅತಿರೇಕಕ್ಕೆ ಹೋಗಬಾರದು’ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ರಾಣಾ ದಗ್ಗುಬಾಟಿ, ಕರಣ್ ಜೋಹರ್ ಸಿನಿಮಾನಲ್ಲಿ ನಟಿಸಲ್ಲ ಅಕ್ಷಯ್ ಕುಮಾರ್

‘ಇಂದು ಪ್ರತಿಯೊಂದೂ ಹಣಕ್ಕೆ ಲಭ್ಯವಿದೆ. ಪ್ರೇಕ್ಷಕರಿಗೆ ನಿಜವಾಗಿಯೂ ಯಾವುದು ಇಷ್ಟವಾಗುತ್ತಿದೆ ಮತ್ತು ಯಾವುದು ಇಲ್ಲ ಎಂಬುದನ್ನು ಅಳೆಯುವುದು ಅಸಾಧ್ಯವಾಗಿದೆ. ಜನರು ಯಾವುದನ್ನಾದರೂ ಮೆಚ್ಚುತ್ತಿದ್ದರೆ, ಅದು ನಿಜವಾದ ಮೆಚ್ಚುಗೆಯೋ ಅಥವಾ ಮೆಚ್ಚಲು ಹಣ ನೀಡಲಾಗಿದೆಯೇ? ಎಂಬ ಗೊಂದಲ ಸೃಷ್ಟಿಯಾಗಿದೆ. ಈ ಗೊಂದಲ ಕೇವಲ ಜನರಿಗಷ್ಟೇ ಅಲ್ಲ, ನನಗೂ ಆಗುತ್ತಿದೆ. ನಾನು ಕೆಲವೊಮ್ಮೆ ಇದಕ್ಕೆ ಹಣ ಪಾವತಿಸುತ್ತೇನೆ’ ಎಂದು ಕರಣ್ ಒಪ್ಪಿಕೊಂಡಿದ್ದಾರೆ. ಅವರು ಇಷ್ಟು ಮುಕ್ತವಾಗಿ ಮಾತನಾಡಿದ್ದು ಇದೇ ಮೊದಲು. ಈ ಬೆಳವಣಿಗೆ ಅಚ್ಚರಿ ಮೂಡಿಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಬೆಳ್ಳಂಬೆಳಗ್ಗೆ ಸಫಾರಿ ತೆರಳಿದವರಿಗೆ ದರ್ಶನ ಕೊಟ್ಟ ಅಪರೂಪದ ಕರಿಚಿರತೆ! – Kannada News | Rare Black Leopard Sighted by Early Morning Safari Goers in Chamarajanagar

ಚಾಮರಾಜನಗರ, ಏಪ್ರಿಲ್ 27: ಜಿಲ್ಲೆಯ ಹನೂರು ತಾಲೂಕಿನ ಪಿ.ಜಿ.ಪಾಳ್ಯ ಸಫಾರಿ ವಲಯದಲ್ಲಿ ಅಪರೂಪದ ಕಪ್ಪು ಚಿರತೆಯೊಂದು ಪ್ರತ್ಯಕ್ಷವಾಗಿ ಪ್ರವಾಸಿಗರನ್ನು ಆಕರ್ಷಿಸಿದೆ. ಬೆಳ್ಳಂಬೆಳಗ್ಗೆ ಸಫಾರಿಗೆ ತೆರಳಿದ್ದ ಪ್ರವಾಸಿಗರಿಗೆ ಈ ವಿಶಿಷ್ಟ ಕರಿಚಿರತೆಯ ದರ್ಶನವಾಗಿದೆ. ಅಪರೂಪದ ಕರಿಚಿರತೆಯನ್ನು ನೋಡಿದ ಪ್ರವಾಸಿಗರು ಅತೀವ ಸಂತಸ ವ್ಯಕ್ತಪಡಿಸಿದ್ದಾರೆ. ಈ ಘಟನೆಯು ಪಿ.ಜಿ.ಪಾಳ್ಯ ಸಫಾರಿ ವಲಯದ ವನ್ಯಜೀವಿ ವೈವಿಧ್ಯತೆಗೆ ಮತ್ತಷ್ಟು ಮೆರಗು ನೀಡಿದೆ. ನಾಗರಹೊಳೆ ಮತ್ತು ಬಂಡೀಪುರ ಅರಣ್ಯ ಪ್ರದೇಶಗಳ ಭಾಗವಾಗಿರುವ ಈ ವಲಯವು ಅನೇಕ ಅಪರೂಪದ ಪ್ರಾಣಿಗಳಿಗೆ ನೆಲೆಯಾಗಿದೆ. ಕರಿಚಿರತೆಯು ಮೆಲನಿಸ್ಟಿಕ್ ಗುಣಲಕ್ಷಣಗಳನ್ನು ಹೊಂದಿರುವ ಚಿರತೆಯಾಗಿದ್ದು, ಅದರ ಗಾಢವಾದ ಕಪ್ಪು ಬಣ್ಣದಿಂದಾಗಿ ಇದು ಹೆಚ್ಚು ಆಕರ್ಷಕವಾಗಿ ಕಾಣುತ್ತದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

RCB ಪ್ಲೇಯಿಂಗ್ ಇಲೆವೆನ್​ನಲ್ಲಿ 2 ಬದಲಾವಣೆ ಬಹುತೇಕ ಖಚಿತ! – Kannada News | IPL 2026: RCB Playing XI against Delhi Capitals

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನ 39ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗಲಿವೆ. ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಜರುಗಲಿರುವ ಈ ಪಂದ್ಯಕ್ಕಾಗಿ ಆರ್​ಸಿಬಿ ತನ್ನ ಪ್ಲೇಯಿಂಗ್ ಇಲೆವೆನ್​ನಲ್ಲಿ ಎರಡು ಬದಲಾವಣೆ ಮಾಡಿಕೊಳ್ಳುವುದು ಬಹುತೇಕ ಖಚಿತ. ಏಕೆಂದರೆ ಆರ್​ಸಿಬಿ ತಂಡದ ಇಬ್ಬರು ಆಟಗಾರರು ಫಿಟ್​ನೆಸ್ ಸಮಸ್ಯೆಯಿಂದ ಬಳಲುತ್ತಿದ್ದಾರೆ.

  • ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಫೋಟಕ ದಾಂಡಿಗ ಫಿಲ್ ಸಾಲ್ಟ್ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದು, ಹೀಗಾಗಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಿಂದ ಹೊರಗುಳಿಯಲಿದ್ದಾರೆ.
  • ಆರ್​ಸಿಬಿ ವೇಗಿ ರಾಸಿಖ್ ದಾರ್ ಸ್ನಾಯು ಸೆಳೆತದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಹೀಗಾಗಿ ಅವರು ಸಹ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯಕ್ಕೆ ಅಲಭ್ಯರಾಗಲಿದ್ದಾರೆ ಎಂದು ವರದಿಯಾಗಿದೆ.

ಇಲ್ಲಿ ಫಿಲ್ ಸಾಲ್ಟ್ ಬದಲಿಗೆ ಆರ್​ಸಿಬಿ ಪರ ಜೇಕಬ್ ಬೆಥೆಲ್ ಕಣಕ್ಕಿಳಿಯುವುದು ಖಚಿತ. ಏಕೆಂದರೆ ಕಳೆದ ಮ್ಯಾಚ್​ನಲ್ಲಿ ಬೆಥೆಲ್ ಆರಂಭಿಕನಾಗಿ ಕಾಣಿಸಿಕೊಂಡಿದ್ದರು. ಹೀಗಾಗಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ವಿರಾಟ್ ಕೊಹ್ಲಿ ಹಾಗೂ ಜೇಕಬ್ ಬೆಥೆಲ್ ಇನಿಂಗ್ಸ್ ಆರಂಭಿಸಲಿದ್ದಾರೆ.

ಆದರೆ ರಾಸಿಖ್ ದಾರ್ ಬದಲಿಗೆ ಈ ಮ್ಯಾಚ್​ನಲ್ಲಿ ಯಾರು ಆಡಲಿದ್ದಾರೆ ಎಂಬುದೇ ಪ್ರಶ್ನೆ. ಏಕೆಂದರೆ ಆರ್​ಸಿಬಿ ತಂಡದಲ್ಲಿ ಹೆಚ್ಚುವರಿ ಅನುಭವಿ ವೇಗಿಗಳ ಕೊರತೆ ಇದೆ. ಈಗಾಗಲೇ ಅಭಿನಂದನ್ ಸಿಂಗ್ ಅವರಿಗೆ ಚಾನ್ಸ್ ನೀಡಿದರೂ ಅವರಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿರಲಿಲ್ಲ. ಇನ್ನು ಉಳಿದಿರುವುದು ಮಂಗೇಶ್ ಯಾದವ್. ಹೀಗಾಗಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಯುವ ವೇಗಿ ಮಂಗೇಶ್ ಪಾದಾರ್ಪಣೆ  ಮಾಡಿದರೂ ಅಚ್ಚರಿಪಡಬೇಕಿಲ್ಲ. ಅದರಂತೆ ಆರ್​ಸಿಬಿ ತಂಡದ ಸಂಭಾವ್ಯ ಪ್ಲೇಯಿಂಗ್ ಇಲೆವೆನ್ ಈ ಕೆಳಗಿನಂತಿರಲಿದೆ…

  1. ವಿರಾಟ್ ಕೊಹ್ಲಿ
  2. ಜೇಕಬ್ ಬೆಥೆಲ್
  3. ದೇವದತ್ ಪಡಿಕ್ಕಲ್
  4. ರಜತ್ ಪಾಟಿದಾರ್ (ನಾಯಕ)
  5. ಟಿಮ್ ಡೇವಿಡ್
  6. ಜಿತೇಶ್ ಶರ್ಮಾ
  7. ಕೃನಾಲ್ ಪಾಂಡ್ಯ
  8. ರೊಮಾರಿಯೊ ಶೆಫರ್ಡ್
  9. ಜೋಶ್ ಹೇಝಲ್​ವುಡ್
  10. ಭುವನೇಶ್ವರ್ ಕುಮಾರ್
  11. ಮಂಗೇಶ್ ಯಾದವ್.
  12. ಸುಯಶ್ ಶರ್ಮಾ (ಇಂಪ್ಯಾಕ್ಟ್ ಪ್ಲೇಯರ್).

ಇದನ್ನೂ ಓದಿ: ಚೆಂಡು ವಿಕೆಟ್​ಗೆ ತಾಗದಿದ್ದರೂ ಔಟ್ ನೀಡಿದ್ದೇಕೆ? ಇಲ್ಲಿದೆ ಐಪಿಎಲ್ ನಿಯಮ

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ: ರಜತ್ ಪಾಟಿದಾರ್ (ನಾಯಕ), ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ಫಿಲ್ ಸಾಲ್ಟ್, ಜಿತೇಶ್ ಶರ್ಮಾ, ಕೃನಾಲ್ ಪಾಂಡ್ಯ, ಸ್ವಪ್ನಿಲ್ ಸಿಂಗ್, ಟಿಮ್ ಡೇವಿಡ್, ರೊಮಾರಿಯೊ ಶೆಫರ್ಡ್, ಜೇಕಬ್ ಬೆಥೆಲ್, ಜೋಶ್ ಹೇಝಲ್​ವುಡ್,  ಭುವನೇಶ್ವರ್ ಕುಮಾರ್, ನುವಾನ್ ತುಷಾರ, ಯಶ್ ದಯಾಳ್, ರಾಸಿಖ್ ಸಲಾಂ, ವೆಂಕಟೇಶ್ ಅಯ್ಯರ್, ಅಭಿನಂದನ್ ಸಿಂಗ್, ಸುಯಶ್ ಶರ್ಮಾ, ಜೇಕಬ್ ಡಫಿ, ಸಾತ್ವಿಕ್ ದೇಸ್ವಾಲ್, ಮಂಗೇಶ್ ಯಾದವ್, ಜೋರ್ಡನ್ ಕಾಕ್ಸ್, ವಿಕಿ ಓಸ್ತ್ವಾಲ್, ವಿಹಾನ್ ಮಲ್ಹೋತ್ರಾ, ಕಾನಿಷ್ಕ್ ಚೌಹಾನ್, ಯಶ್ ದಯಾಲ್ (ಅಲಭ್ಯ).

Source link

ಡೋಲು ಬಾರಿಸುತ್ತಾ ಭರ್ಜರಿ ಡ್ಯಾನ್ಸ್ ಮಾಡಿದ ಶಾಸಕ ಶಿವಲಿಂಗೇಗೌಡ: ಶಿಳ್ಳೆ, ಚಪ್ಪಾಳೆಗಳ ಮಹಾಪೂರ, ವಿಡಿಯೋ ನೋಡಿ – Kannada News | Arsikere MLA KM Shivalinge Gowda Dances at Vasavi Jayanti Procession; Video Goes Viral

ಹಾಸನ, ಏಪ್ರಿಲ್ 27: ಹಾಸನ ಜಿಲ್ಲೆಯ ಅರಸೀಕೆರೆ ನಗರದಲ್ಲಿ ನಡೆದ ಶ್ರೀ ವಾಸವಿ ಜಯಂತಿ ಹಾಗೂ ಗಿರಿಜಾ ಕಲ್ಯಾಣ ಮಹೋತ್ಸವದ ಮೆರವಣಿಗೆಯಲ್ಲಿ ಶಾಸಕ ಕೆಎಂ ಶಿವಲಿಂಗೇಗೌಡ ಸಾರ್ವಜನಿಕರೊಂದಿಗೆ ಭರ್ಜರಿ ಸ್ಟೆಪ್ ಹಾಕುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ನಗರದ ಬಿ.ಎಚ್. ರಸ್ತೆಯಲ್ಲಿ ಆಯೋಜಿಸಲಾಗಿದ್ದ ವಿವಿಧ ಕಲಾ ತಂಡಗಳ ಭವ್ಯ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಶಾಸಕ ಹಾಗೂ ಗೃಹಮಂಡಳಿ ಅಧ್ಯಕ್ಷ ಕೆ.ಎಂ. ಶಿವಲಿಂಗೇಗೌಡ, ಮೆರವಣಿಗೆಯ ರಂಗನ್ನು ಇಮ್ಮಡಿಗೊಳಿಸಿದರು. ಸ್ಥಳೀಯ ಕಲಾವಿದರೊಂದಿಗೆ ತಾವೂ ಸಹ ಡೋಲು ಬಾರಿಸುತ್ತಾ, ಲಯಬದ್ಧವಾಗಿ ಕುಣಿದು ಕುಪ್ಪಳಿಸಿದರು. ಶಾಸಕರ ಈ ಉತ್ಸಾಹಭರಿತ ನೃತ್ಯವನ್ನು ಕಂಡು ನೆರೆದಿದ್ದ ನೂರಾರು ಜನರು ಶಿಳ್ಳೆ, ಚಪ್ಪಾಳೆ ತಟ್ಟುವ ಮೂಲಕ ಸಾಥ್ ನೀಡಿದರು. ಶಾಸಕರ ಜೊತೆ ಸ್ಥಳೀಯ ಮುಖಂಡರು ಹಾಗೂ ನೂರಾರು ಸಾರ್ವಜನಿಕರು ಕೂಡ ಹೆಜ್ಜೆ ಹಾಕಿ ಸಂಭ್ರಮಿಸಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸೋಲಿಗೆ ಕಾರಣವೇನು? ನಮಗೆ ವಿಶ್ರಾಂತಿಯ ಅಗತ್ಯವಿದೆ ಎಂದ ರಿಷಭ್ ಪಂತ್! – Kannada News | Rishabh pant post match interview after lsg vs kkr match

ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-19 ರಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ಸೋಲಿನ ಸರಮಾಲೆ ಮುಂದುವರೆದಿದೆ. ಲಕ್ನೋನ ಏಕಾನ ಸ್ಟೇಡಿಯಂನಲ್ಲಿ ನಡೆದ ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಎಲ್​ಎಸ್​ಜಿ ಪಡೆ ಸೂಪರ್ ಓವರ್​ನಲ್ಲಿ ಸೋಲೊಪ್ಪಿಕೊಂಡಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕೆಕೆಆರ್ 20 ಓವರ್​ಗಳಲ್ಲಿ 155 ರನ್​​ ಕಲೆಹಾಕಿದ್ದರು. ಈ ಸುಲಭ ಗುರಿಯನ್ನು ಬೆನ್ನತ್ತಿದ ಎಲ್​ಎಸ್​ಜಿ 20 ಓವರ್​ಗಳಲ್ಲಿ 155 ರನ್​ ಗಳಿಸಿ ಪಂದ್ಯವನ್ನು ಟೈ ಮಾಡಿ ಕೊಂಡಿದ್ದರು. ಆ ಬಳಿಕ ನಡೆದ ಸೂಪರ್ ಓವರ್​ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡ ಕೇವಲ 1 ರನ್​ಗಳಿಸಿದರೆ, ಈ ಗುರಿಯನ್ನು ಮೊದಲ ಎಸೆತದಲ್ಲೇ ಬೆನ್ನತ್ತಿ ಕೆಕೆಆರ್ ತಂಡ ಜಯ ಸಾಧಿಸಿತು.

ಈ ಸೋಲಿನ ಬಳಿಕ ಮಾತನಾಡಿದ ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕ ರಿಷಭ್ ಪಂತ್, ನಾವು ಸತತವಾಗಿ ಸೋಲುತ್ತಿದ್ದೇವೆ. ಹೀಗಾಗಿ ನಮಗೆ ವಿಶ್ರಾಂತಿಯ ಅಗತ್ಯವಿದೆ ಎಂದಿದ್ದಾರೆ. ಈ ಸೋಲುಗಳಿಗೆ ಒಬ್ಬರು ಅಥವಾ ಇಬ್ಬರು ವ್ಯಕ್ತಿಗಳು ಕಾರಣರಲ್ಲ.  ಇದರ ಹೊಣೆಗಾರಿಕೆಯನ್ನು ಇಡೀ ತಂಡ ಹೊರಬೇಕು.

ಸತತ ಸೋಲುಗಳಿಂದ ಉಂಟಾದ ಮಾನಸಿಕ ಒತ್ತಡವನ್ನು ಹೋಗಲಾಡಿಸಲು ತಂಡಕ್ಕೆ ಒಂದು “ವಿರಾಮ” ಬೇಕು. ವಿಶ್ರಾಂತಿ ಪಡೆದ ಬಳಿಕ ಸೋಲಿಗೆ ಕಾರಣಗಳೇನು ಎಂಬುದನ್ನು ವಿಮರ್ಶಿಸಬೇಕಿದೆ ಎಂದಿದ್ದಾರೆ.

ಇದೇ ವೇಳೆ ಫಾರ್ಮ್‌ನಲ್ಲಿಲ್ಲದ ನಿಕೋಲಸ್ ಪೂರನ್ ಅವರನ್ನು ಸೂಪರ್ ಓವರ್‌ಗೆ ಕಳುಹಿಸಿದ ನಿರ್ಧಾರದ ಬಗ್ಗೆ ಮಾತನಾಡಿದ ಪಂತ್, ಕಷ್ಟದ ಸಮಯದಲ್ಲಿ ಆಟಗಾರನನ್ನು ಬೆಂಬಲಿಸುವುದು ಮುಖ್ಯ. ಅಂಕಿ ಅಂಶಗಳಿಗಿಂತ ಆಟಗಾರನ ಸಾಮರ್ಥ್ಯದ ಮೇಲೆ ನಂಬಿಕೆ ಇಡುವ ಮುಖ್ಯವಾಗುತ್ತದೆ. ಹೀಗಾಗಿ ಇಂತಹದೊಂದು ನಿರ್ಧಾರ ತೆಗೆದುಕೊಂಡಿರುವುದಾಗಿ ತಿಳಿಸಿದ್ದಾರೆ.

ಇನ್ನು ಕೊನೆಯ ಓವರ್​ ಅನ್ನು ದಿಗ್ವೇಶ್ ರಾಠಿಗೆ ನೀಡಿದ ಬಗ್ಗೆ ಮಾತನಾಡಿದ ರಿಷಭ್ ಪಂತ್, ತುಂಬಾ ಯೋಚಿಸುವುದು ಮೈದಾನದಲ್ಲಿನ ಕೆಲಸಗಳನ್ನು ಸುಲಭಗೊಳಿಸುವುದಿಲ್ಲ. ಮೈದಾನದ ಒಳಗೆ ಹೊರಗಿನ ಸಲಹೆಗಳಿಗಿಂತ ತನ್ನ ಆಲೋಚನೆಗಳು ಕೂಡ ಮುಖ್ಯವಾಗುತ್ತದೆ. ಹೀಗಾಗಿ ಅಂತಿಮ ಓವರ್​ನಲ್ಲಿ ಯಶಸ್ಸು ಸಾಧಿಸಬಹುದು ಎಂದು ದಿಗ್ವೇಶ್​ಗೆ ಚೆಂಡು ನೀಡಿರುವುದಾಗಿ ತಿಳಿಸಿದ್ದಾರೆ.

ರಿಷಭ್ ಪಂತ್ ಅವರ ಪ್ರಸ್ತುತ ಹಾದಿಯು ಭಾವನಾತ್ಮಕವಾಗಿ ಮತ್ತು ನಾಯಕತ್ವದ ದೃಷ್ಟಿಯಿಂದ ಪ್ರಬಲವಾಗಿ ಕಂಡರೂ, ಐಪಿಎಲ್‌ನಂತಹ ವೇಗದ ಟೂರ್ನಿಯಲ್ಲಿ ಫಲಿತಾಂಶಗಳು ಶೀಘ್ರವಾಗಿ ಬಾರದಿದ್ದರೆ ಟೀಕೆಗಳು ಹೆಚ್ಚಾಗುವುದು ಸಹಜ. ಮುಂಬರುವ ಪಂದ್ಯಗಳಲ್ಲಿ ಲಕ್ನೋ ಸೂಪರ್ ಜೈಂಟ್ಸ್​ ಈ ‘ವಿರಾಮ’ವನ್ನು ಹೇಗೆ ಬಳಸಿಕೊಳ್ಳುತ್ತದೆ ಎಂಬುದು ಪಂತ್ ಅವರ ಈ ತತ್ವಗಳ ಯಶಸ್ಸನ್ನು ನಿರ್ಧರಿಸಲಿದೆ.

ಇದನ್ನೂ ಓದಿ: ಚೆಂಡು ವಿಕೆಟ್​ಗೆ ತಾಗದಿದ್ದರೂ ಔಟ್ ನೀಡಿದ್ದೇಕೆ? ಇಲ್ಲಿದೆ ಐಪಿಎಲ್ ನಿಯಮ

ಅಲ್ಲದೆ ಈಗಾಗಲೇ 8 ಪಂದ್ಯಗಳಲ್ಲಿ 6 ಮ್ಯಾಚ್ ಸೋತಿರುವ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಮುಂದಿನ ಆರು ಪಂದ್ಯಗಳೂ ಕೂಡ ನಿರ್ಣಾಯಕ. ಈ ಮ್ಯಾಚ್​ಗಳಲ್ಲಿ ಕೆಲ ಪಂದ್ಯಗಳಲ್ಲಿ ಸೋತರೂ ಟೂರ್ನಿಯಿಂದ ಹೊರಬೀಳುವುದು ಖಚಿತ ಎಂದೇ ಹೇಳಬಹುದು.

Source link

Abhishek Sharma: ಹೋಟೆಲ್​ನಲ್ಲಿ ಅಭಿಷೇಕ್ ಶರ್ಮಾ ಅವರ ಕೈ ಹಿಡಿದು ತನ್ನತ್ತ ಎಳೆದ ಅಪರಿಚಿತ ಹುಡುಗಿ: ವಿಡಿಯೋ ವೈರಲ್ – Kannada News | IPL 2026 Viral Video Unknown girl grabs Abhishek Sharma’s hand and pulls him towards her in hotel

ಬೆಂಗಳೂರು (ಏ. 27): ಸನ್‌ರೈಸರ್ಸ್ ಹೈದರಾಬಾದ್ ತಂಡದ ಸ್ಫೋಟಕ ಆರಂಭಿಕ ಬ್ಯಾಟರ್ ಅಭಿಷೇಕ್ ಶರ್ಮಾ (Abhishek Sharma) ಐಪಿಎಲ್ 2026 ರಲ್ಲಿ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ. ಅಭಿಷೇಕ್ ಬ್ಯಾಟಿಂಗ್​ಗೆ ಬಂದರೆ ಸಾಕು ಎದುರಾಳಿ ಬೌಲರ್​ಗೆ ನಡುಕ ಶುರುವಾಗುತ್ತದೆ. ಅವರ ಬ್ಯಾಟಿಂಗ್‌ಗೆ ಅಪಾರ ಅಭಿಮಾನಿಗಳಿದ್ದಾರೆ. ಸನ್‌ರೈಸರ್ಸ್ ಹೈದರಾಬಾದ್ ತಂಡವು ಏಪ್ರಿಲ್ 25 ರಂದು ಜೈಪುರದ ಸವಾಯ್ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಆಡಿತು, ಆ ಪಂದ್ಯವನ್ನು ಅವರು 5 ವಿಕೆಟ್‌ಗಳಿಂದ ಸುಲಭವಾಗಿ ಗೆದ್ದರು. ಇದೀಗ ಈ ಪಂದ್ಯಕ್ಕೂ ಮುನ್ನ ನಡೆದ ಘಟನೆಯ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಎಸ್‌ಆರ್‌ಎಚ್ ತಂಡವು ತಮ್ಮ ಹೋಟೆಲ್‌ನಿಂದ ಜೈಪುರದ ಸವಾಯ್ ಮಾನ್ಸಿಂಗ್ ಕ್ರೀಡಾಂಗಣಕ್ಕೆ ಪ್ರಯಾಣಿಸುವ ಸಂದರ್ಭ, ಅಭಿಷೇಕ್ ಶರ್ಮಾ ಅವರಿಗೆ ಆಘಾತವೊಂದು ಕಾದಿತ್ತು.

ಅಭಿಷೇಕ್ ಶರ್ಮಾರ ಕೈ ಹಿಡಿದು ತನ್ನ ಕಡೆಗೆ ಎಳೆದುಕೊಂಡ ಹುಡುಗಿ

ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯಕ್ಕಾಗಿ ಅಭಿಷೇಕ್ ಶರ್ಮಾ ತಮ್ಮ ತಂಡದೊಂದಿಗೆ ಜೈಪುರದಲ್ಲಿ ಹೋಟೆಲ್‌ನಿಂದ ಹೊರಡುತ್ತಿದ್ದಾಗ, ಅಭಿಮಾನಿಗಳಲ್ಲಿ ಒಬ್ಬ ಹುಡುಗಿ ಇದ್ದಕ್ಕಿದ್ದಂತೆ ಅವರ ಕೈ ಹಿಡಿದು ತನ್ನ ಕಡೆಗೆ ಎಳೆದಿದ್ದಾರೆ. ಕೈ ಹಿಡಿದು ಎಳೆದಾಗ ಅಭಿಷೇಕ್ ಶರ್ಮಾ ಆಶ್ಚರ್ಯಚಕಿತರಾದರು. ಭದ್ರತಾ ಸಿಬ್ಬಂದಿ ತಕ್ಷಣ ಮಧ್ಯಪ್ರವೇಶಿಸಿ ಅವರ ಕೈಯನ್ನು ಬಿಡಿಸಿದರು. ಘಟನೆಯ ನಂತರ ಅಭಿಷೇಕ್ ನಗುತ್ತಿರುವುದು ಕಂಡುಬಂದಿತು.

ಸ್ಫೋಟಕ ಫಾರ್ಮ್​ನಲ್ಲಿ ಅಭಿಷೇಕ್ ಶರ್ಮಾ

ಐಪಿಎಲ್ 19 ನೇ ಸೀಸನ್‌ನಲ್ಲಿ, ಅಭಿಷೇಕ್ ಶರ್ಮಾ ಅವರ ಮೊದಲ ಕೆಲವು ಪಂದ್ಯಗಳಲ್ಲಿ ಅವರ ಪ್ರದರ್ಶನ ನಿರೀಕ್ಷೆಯಷ್ಟು ಇರಲಿಲ್ಲ, ಆದರೆ ಇದಾದ ನಂತರ, ಏಪ್ರಿಲ್ 21 ರಂದು, ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ, ಅಭಿಷೇಕ್ ಶರ್ಮಾ ಅವರ ಬ್ಯಾಟ್ 135 ರನ್‌ಗಳ ಅದ್ಭುತ ಅಜೇಯ ಶತಕ ಮೂಡಿಬಂತು. ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲೂ ಅಭಿಷೇಕ್ ಶರ್ಮಾ 57 ರನ್‌ಗಳ ನಿರ್ಣಾಯಕ ಇನ್ನಿಂಗ್ಸ್ ಆಡಿದರು. ಈ ಸೀಸನ್‌ನಲ್ಲಿ ಇಲ್ಲಿಯವರೆಗೆ, ಅಭಿಷೇಕ್ ಶರ್ಮಾ ಅವರ ಬ್ಯಾಟ್ ಮೂರು ಅರ್ಧಶತಕಗಳು ಮತ್ತು ಒಂದು ಶತಕವನ್ನು ಕಂಡಿದೆ, ಅವರು ಈ ಐಪಿಎಲ್ ಋತುವಿನಲ್ಲಿ 54.29 ಸರಾಸರಿಯಲ್ಲಿ 380 ರನ್ ಗಳಿಸಿದ್ದಾರೆ, ಇದರಲ್ಲಿ ಅವರು ಪ್ರಸ್ತುತ ಆರೆಂಜ್ ಕ್ಯಾಪ್ ಅನ್ನು ಸಹ ಹೊಂದಿದ್ದಾರೆ.

LSG vs KKR, IPL 2026: ಲಕ್ನೋವನ್ನು ಸೋಲಿಸಿದ ನಂತರ ರಿಂಕು ಸಿಂಗ್ ಆಡಿದ ಮಾತಿಗೆ ಇಡೀ ಸ್ಟೇಡಿಯಂ ಫಿದಾ

ಸನ್‌ರೈಸರ್ಸ್ ಹೈದರಾಬಾದ್ ತಂಡವು ಆಡಿರುವ ಎಂಟು ಪಂದ್ಯಗಳಲ್ಲಿ ಐದು ಪಂದ್ಯಗಳನ್ನು ಗೆದ್ದು 10 ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಸನ್‌ರೈಸರ್ಸ್ ಹೈದರಾಬಾದ್ ತಂಡವು ಐಪಿಎಲ್‌ನ 19 ನೇ ಸೀಸನ್‌ನಲ್ಲಿ ತನ್ನ ಮುಂದಿನ ಪಂದ್ಯವನ್ನು ಮುಂಬೈ ಇಂಡಿಯನ್ಸ್ ವಿರುದ್ಧ ಏಪ್ರಿಲ್ 29 ರಂದು ವಾಂಖೆಡೆ ಕ್ರೀಡಾಂಗಣದಲ್ಲಿ ಆಡಲಿದ್ದು, ಈ ಋತುವಿನಲ್ಲಿ ಉಭಯ ತಂಡಗಳ ನಡುವಿನ ಮೊದಲ ಮುಖಾಮುಖಿಯಾಗಲಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 9:31 am, Mon, 27 April 26

Source link

ಚೆಂಡು ವಿಕೆಟ್​ಗೆ ತಾಗದಿದ್ದರೂ ಔಟ್ ನೀಡಿದ್ದೇಕೆ? ಇಲ್ಲಿದೆ ಐಪಿಎಲ್ ನಿಯಮ – Kannada News | IPL 2026: Angkrish Raghuvanshi Run out explained

ಐಪಿಎಲ್ 2026ರ ಕೊಲ್ಕತ್ತಾ ನೈಟ್ ರೈಡರ್ಸ್ (KKR) ಮತ್ತು ಲಕ್ನೋ ಸೂಪರ್ ಜೈಂಟ್ಸ್ (LSG) ನಡುವಿನ ಪಂದ್ಯವು ಒಂದು ಅಪರೂಪದ ಮತ್ತು ವಿವಾದಾತ್ಮಕ ರನೌಟ್​​ಗೆ ಸಾಕ್ಷಿಯಾಯಿತು. ಕೆಕೆಆರ್ ತಂಡದ ಯುವ ಬ್ಯಾಟರ್ ಅಂಗ್​​ಕ್ರಿಶ್​ ರಘುವಂಶಿ ಅವರು ‘ಅಬ್‌ಸ್ಟ್ರಕ್ಟಿಂಗ್ ದ ಫೀಲ್ಡ್’ (ಫೀಲ್ಡಿಂಗ್‌ಗೆ ಅಡ್ಡಿಪಡಿಸುವುದು) ನಿಯಮದಡಿ ಔಟ್ ಆಗುವ ಮೂಲಕ ಕ್ರಿಕೆಟ್ ಅಭಿಮಾನಿಗಳಲ್ಲಿ ಭಾರಿ ಚರ್ಚೆ ಹುಟ್ಟುಹಾಕಿದ್ದಾರೆ.

ಪಂದ್ಯದ 5ನೇ ಓವರ್‌ನಲ್ಲಿ ಪ್ರಿನ್ಸ್ ಯಾದವ್ ಎಸೆದ ಚೆಂಡನ್ನು ಬಾರಿಸಿದ ರಘುವಂಶಿ, ಒಂದು ರನ್ ಪಡೆಯಲು ಓಡಿದರು. ಆದರೆ ಅತ್ತ ಕಡೆಯಿದ್ದ ಕ್ಯಾಮರೋನ್ ಗ್ರೀನ್ ರನ್ ಬೇಡವೆಂದು ನಿರಾಕರಿಸಿದರು. ತಕ್ಷಣ ಕ್ರೀಸ್‌ಗೆ ಮರಳಲು ಪ್ರಯತ್ನಿಸುತ್ತಿದ್ದಾಗ ಮೊಹಮ್ಮದ್ ಶಮಿ ವಿಕೆಟ್ ಕೀಪರ್​ನತ್ತ ಚೆಂಡೆಸೆದರು. ಆದರೆ ಚೆಂಡು ವಿಕೆಟ್‌ಗೆ ತಗುಲುವ ಬದಲು ರಘುವಂಶಿ ಅವರ ಪ್ಯಾಡ್‌ಗೆ ಬಡಿಯಿತು.

ಅಂಪೈರ್​ಗೆ ಮನವಿ:

ಲಕ್ನೋ ಸೂಪರ್ ಜೈಂಟ್ಸ್​​ ತಂಡದ ನಾಯಕ ರಿಷಭ್ ಪಂತ್, ಕೆಕೆಆರ್ ಆಟಗಾರ ಅಂಗ್​ಕ್ರಿಶ್​ ರಘುವಂಶಿ ಉದ್ದೇಶಪೂರ್ವಕವಾಗಿ ಚೆಂಡಿಗೆ ಅಡ್ಡ ಬಂದಿದ್ದಾರೆ ಎಂದು ಔಟ್‌ಗಾಗಿ ಮನವಿ ಮಾಡಿದರು.

ಮೂರನೇ ಅಂಪೈರ್ ರೋಹನ್ ಪಂಡಿತ್ ಅವರು ವಿಡಿಯೋ ಮರುಪರಿಶೀಲಿಸಿದಾಗ, ರಘುವಂಶಿ ಅವರು ಕ್ರೀಸ್‌ಗೆ ಮರಳುವಾಗ ತಮ್ಮ ಓಡುವ ಹಾದಿಯನ್ನು (Running Line) ಬದಲಾಯಿಸಿರುವುದು ಕಂಡುಬಂದಿದೆ. ಐಪಿಎಲ್ ನಿಯಮ 37.1.4ರ ಪ್ರಕಾರ, ಒಬ್ಬ ಬ್ಯಾಟರ್ ಫೀಲ್ಡರ್ ಎಸೆಯುವ ಚೆಂಡು ವಿಕೆಟ್‌ಗೆ ತಗುಲದಂತೆ ತಡೆಯಲು ತನ್ನ ಹಾದಿಯನ್ನು ಬದಲಾಯಿಸಿದರೆ ಅದನ್ನು ‘ಅಡ್ಡಿ’ ಎಂದು ಪರಿಗಣಿಸಲಾಗುತ್ತದೆ. ಇದೇ ಕಾರಣಕ್ಕೆ ರಘುವಂಶಿ ಅವರನ್ನು ಔಟ್ ಎಂದು ಘೋಷಿಸಲಾಯಿತು.

ಕೆಕೆಆರ್ ಅಸಮಾಧಾನ:

ಮೂರನೇ ಅಂಪೈರ್​​​ನ ಈ ತೀರ್ಪಿಗೆ ಕೆಕೆಆರ್ ಕೋಚ್ ಅಭಿಷೇಕ್ ನಾಯರ್ ಅಸಮಾಧಾನ ವ್ಯಕ್ತಪಡಿಸಿ ಲೈನ್​ ಅಂಪೈರ್‌ಗಳೊಂದಿಗೆ ಚರ್ಚೆ ನಡೆಸಿದರು. ಇತ್ತ ಕೆಕೆಆರ್​ ಅಭಿಮಾನಿಗಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಈ ತೀರ್ಪಿಗೆ ಅಸಮಾಧಾನವನ್ನು ಹೊರಹಾಕುತ್ತಿದ್ದಾರೆ.

ನಿಯಮ ಏನು ಹೇಳುತ್ತೆ?

ಕ್ರಿಕೆಟ್‌ನಲ್ಲಿ ಬ್ಯಾಟರ್ ಒಬ್ಬರು ಉದ್ದೇಶಪೂರ್ವಕವಾಗಿ ಎದುರಾಳಿ ತಂಡದ ಫೀಲ್ಡಿಂಗ್‌ಗೆ ಅಡ್ಡಿಪಡಿಸಿದರೆ, ಅವರನ್ನು ಈ ನಿಯಮದಡಿ ಔಟ್ ಎಂದು ಘೋಷಿಸಲಾಗುತ್ತದೆ. ಇದು ಕ್ರಿಕೆಟ್‌ನ 37ನೇ ನಿಯಮವಾಗಿದೆ. ಈ ನಿಯಮದ ಪ್ರಮುಖ ಅಂಶಗಳು ಈ ಕೆಳಗಿನಂತಿವೆ…

ಉದ್ದೇಶಪೂರ್ವಕ ಅಡ್ಡಿ: ರನ್ ಓಡುವಾಗ ಫೀಲ್ಡರ್ ಎಸೆದ ಚೆಂಡು ಸ್ಟಂಪ್‌ಗೆ ತಗುಲದಂತೆ ಬ್ಯಾಟರ್ ಬೇಕೆಂದೇ ಅಡ್ಡ ಬಂದಲ್ಲಿ ಅಥವಾ ತನ್ನ ಹಾದಿಯನ್ನು ಬದಲಿಸಿದರೆ ಈ ನಿಯಮ ಅನ್ವಯವಾಗುತ್ತದೆ.

ಕೈಯಿಂದ ಚೆಂಡನ್ನು ಮುಟ್ಟುವುದು: ಈ ಹಿಂದೆ ‘ಹ್ಯಾಂಡ್ಲ್ಡ್ ದ ಬಾಲ್’ (Handled the ball) ಎಂಬ ಪ್ರತ್ಯೇಕ ನಿಯಮವಿತ್ತು. ಆದರೆ 2017ರಲ್ಲಿ ಇದನ್ನು ‘ಫೀಲ್ಡಿಂಗ್‌ಗೆ ಅಡ್ಡಿಪಡಿಸುವಿಕೆ’ ನಿಯಮದ ಅಡಿಯಲ್ಲಿ ತರಲಾಯಿತು. ಬ್ಯಾಟರ್ ಚೆಂಡನ್ನು ಉದ್ದೇಶಪೂರ್ವಕವಾಗಿ ಕೈಯಿಂದ ಮುಟ್ಟಿದರೆ ಔಟ್ ನೀಡಲಾಗುತ್ತದೆ. ಅಂದರೆ ಚೆಂಡು ವಿಕೆಟ್​ನತ್ತ ಸಾಗುತ್ತಿರುವಾಗ ಮುಟ್ಟಿದರೆ ಅಥವಾ ಗಾಳಿಯಲ್ಲಿರುವಾಗ ಮುಟ್ಟಿದರೆ ಔಟ್ ಎಂದು ಎಂದು ಪರಿಗಣಿಸಲಾಗುತ್ತದೆ.

ಹಾದಿ ಬದಲಿಸುವುದು: ಬ್ಯಾಟರ್ ರನ್ ಓಡುವಾಗ ಫೀಲ್ಡರ್ ಎಸೆಯುವ ಚೆಂಡು ವಿಕೆಟ್‌ಗೆ ತಗುಲದಂತೆ ತಡೆಯಲು ಉದ್ದೇಶಪೂರ್ವಕವಾಗಿ ತಮ್ಮ ಓಡುವ ಹಾದಿಯನ್ನು ಬದಲಿಸಿ (ಚೆಂಡಿಗೆ ಅಡ್ಡವಾಗಿ ಬರುವುದು) ಚೆಂಡು ತಮ್ಮ ದೇಹಕ್ಕೆ ತಗುಲುವಂತೆ ಮಾಡಿದರೆ ಅದು ಔಟ್ ಎಂದು ಪರಿಗಣಿಸಲ್ಪಡುತ್ತದೆ.

ಕ್ಯಾಚ್‌ಗೆ ಅಡ್ಡಿ: ಫೀಲ್ಡರ್ ಕ್ಯಾಚ್ ಹಿಡಿಯುವಾಗ ಬ್ಯಾಟರ್ ಅಡ್ಡ ಬಂದರೆ ಅಥವಾ ಫೀಲ್ಡರ್ ಗಮನ ಸೆಳೆಯಲು ಪ್ರಯತ್ನಿಸಿದರೆ ಔಟ್ ನೀಡಬಹುದು.

ವಿನಾಯಿತಿಗಳು:

  • ತಮಗೆ ಏಟು ಬೀಳದಂತೆ ರಕ್ಷಿಸಿಕೊಳ್ಳಲು ಬ್ಯಾಟರ್ ಪ್ರಯತ್ನಿಸಿದಾಗ ಅದು ಅಡ್ಡಿ ಎಂದು ಪರಿಗಣಿಸಲ್ಪಡುವುದಿಲ್ಲ.
  •  ಅಚಾತುರ್ಯದಿಂದ ಅಥವಾ ಆಕಸ್ಮಿಕವಾಗಿ ಫೀಲ್ಡರ್‌ಗೆ ಅಡ್ಡಿಯಾದರೆ ಅದನ್ನು ಔಟ್ ಎಂದು ಪರಿಗಣಿಸುವುದಿಲ್ಲ.

ಅಂಗ್​​ಕ್ರಿಶ್ ರಘುವಂಶಿದು ಔಟ್ ನೀಡಿದ್ದೇಕೆ?

ರಘುವಂಶಿ ಅವರು ಸಿಂಗಲ್ ರನ್ ಓಡಲು ಹೋಗಿ, ತಮ್ಮ ಪಾರ್ಟ್‌ನರ್ ಕ್ಯಾಮರೋನ್ ಗ್ರೀನ್ ನಿರಾಕರಿಸಿದಾಗ ವಾಪಸ್ ಕ್ರೀಸ್‌ಗೆ ಬಂದರು. ಈ ವೇಳೆ ಅವರು ನೇರವಾದ ಹಾದಿಯಲ್ಲಿ ಬರುವ ಬದಲು, ಉದ್ದೇಶಪೂರ್ವಕವಾಗಿ ತಮ್ಮ ಹಾದಿಯನ್ನು ಬದಲಿಸಿ ಫೀಲ್ಡರ್ ಮೊಹಮ್ಮದ್ ಶಮಿ ಎಸೆದ ಚೆಂಡಿಗೆ ಅಡ್ಡ ಬಂದಿದ್ದರು.

ಅಂಪೈರ್ ಅವರು ರೀಪ್ಲೇಗಳನ್ನು ಪರಿಶೀಲಿಸಿದಾಗ, ರಘುವಂಶಿ ಅವರು ಶಮಿ ಚೆಂಡನ್ನು ಎಸೆಯುವುದನ್ನು ಗಮನಿಸುತ್ತಿದ್ದರು ಮತ್ತು ಅದರ ಪಥವನ್ನು ಅರಿತೇ ಅಡ್ಡ ಬಂದರು ಎಂದು ನಿರ್ಧರಿಸಿದ್ದಾರೆ. ಅಂದರೆ ಇಲ್ಲಿ ರಘುವಂಶಿ ಬೇಕೆಂದೇ ಹಾದಿ ಬದಲಿಸಿರುವುದು ಸ್ಪಷ್ಟವಾಗಿ ಕಾಣಿಸಿದೆ.

ಇದನ್ನೂ ಓದಿ: RCB vs DC ಪಂದ್ಯಕ್ಕೆ 6 ಆಟಗಾರರು ಅಲಭ್ಯ..!

IPL ನಿಯಮ​ 37.1.4 ಪ್ರಕಾರ, ರನ್ ಓಡುವಾಗ ಬ್ಯಾಟರ್ ಯಾವುದೇ ಸರಿಯಾದ ಕಾರಣವಿಲ್ಲದೆ ಫೀಲ್ಡರ್‌ನ ರನ್-ಔಟ್ ಪ್ರಯತ್ನಕ್ಕೆ ಅಡ್ಡಿಯಾಗುವಂತೆ ತನ್ನ ಹಾದಿಯನ್ನು ಬದಲಿಸಿದರೆ, ಅವರನ್ನು ಔಟ್ ಎಂದು ಘೋಷಿಸಲಾಗುತ್ತದೆ. ಹೀಗಾಗಿ ಅಂಗ್​ಕ್ರೀಶ್ ರಘುವಂಶಿಯನ್ನು ಔಟ್ ಎಂದು ತೀರ್ಪು ನೀಡಿದ್ದಾರೆ.

Published On – 8:52 am, Mon, 27 April 26

Source link

Exit mobile version