ಬಂಗಾಳ ಚುನಾವಣೆ ಎಫೆಕ್ಟ್: ಗುರುಗ್ರಾಮದಲ್ಲಿ ಕಾರ್ಮಿಕರ ಕೊರತೆ, ರೋಬೋಟ್ ವ್ಯಾಕ್ಯೂಮ್ ಕ್ಲೀನರ್‌ಗಳಿಗೆ ಭಾರಿ ಬೇಡಿಕೆ – Kannada News | Gurugram Poster Sparks Talk on Workforce Gaps During Bengal Polls

ಗುರುಗ್ರಾಮ, ಏಪ್ರಿಲ್ 27: ಪಶ್ಚಿಮ ಬಂಗಾಳ(West Bengal)ದ 2026ರ ವಿಧಾನಸಭಾ ಚುನಾವಣೆಯ ಮೊದಲ ಹಂತದ ಮತದಾನವು ಏಪ್ರಿಲ್ 23ರಂದು ನಡೆದಿದೆ. ಈ ಅಬ್ಬರದ ಮತದಾನದ ಹಿಂದೆ ಒಂದು ಕುತೂಹಲಕಾರಿ ಸಂಗತಿಯಿದೆ, ಗುರುಗ್ರಾಮದಂತಹ ನಗರಗಳಲ್ಲಿ ಕೆಲಸ ಮಾಡುತ್ತಿದ್ದ ಲಕ್ಷಾಂತರ ಕಾರ್ಮಿಕರು ಪಡಿತರ ಚೀಟಿ ಸೇರಿದಂತೆ ಸರ್ಕಾರದ ಸೌಲಭ್ಯಗಳನ್ನು ಕಳೆದುಕೊಳ್ಳುವ ಭೀತಿಯಿಂದ ಮತ ಚಲಾಯಿಸಲು ತಮ್ಮ ಗ್ರಾಮಗಳಿಗೆ ಮರಳಿದ್ದಾರೆ.

ಸುಮಾರು 2.5 ರಿಂದ 3 ಲಕ್ಷ ಬಂಗಾಳಿ ಕಾರ್ಮಿಕರಿಗೆ ನೆಲೆಯಾಗಿರುವ ಗುರುಗ್ರಾಮ್‌ನಲ್ಲಿ ಈಗ ಕೆಲಸಗಾರರ ತೀವ್ರ ಅಭಾವ ಕಂಡುಬಂದಿದೆ. ಮನೆಗೆಲಸದವರು, ಅಡುಗೆಯವರು ಮತ್ತು ವಾಹನ ಚಾಲಕರ ಕೊರತೆಯಿಂದಾಗಿ ನಿವಾಸಿಗಳು ಪರದಾಡುತ್ತಿದ್ದಾರೆ. ಯಾವುದೇ ಪರ್ಯಾಯ ವ್ಯವಸ್ಥೆ ಅಥವಾ ಹೊಸ ಕೆಲಸಗಾರರನ್ನು ಪಡೆಯಲು ಈಗ ಕನಿಷ್ಠ 48 ರಿಂದ 72 ಗಂಟೆಗಳ ಕಾಲ ಕಾಯಬೇಕಾದ ಅನಿವಾರ್ಯತೆ ಎದುರಾಗಿದೆ.

ಕೆಲಸಗಾರರು ಸಿಗದ ಹಿನ್ನೆಲೆಯಲ್ಲಿ ಗುರುಗ್ರಾಮ್ ನಿವಾಸಿಗಳು ಈಗ ತಂತ್ರಜ್ಞಾನದ ಮೊರೆ ಹೋಗಿದ್ದಾರೆ. ಮಾರುಕಟ್ಟೆಯಲ್ಲಿ ರೋಬೋಟ್ ವ್ಯಾಕ್ಯೂಮ್ ಕ್ಲೀನರ್ಗಳ ಮಾರಾಟದಲ್ಲಿ ದಿಢೀರ್ ಏರಿಕೆ ಕಂಡುಬಂದಿದೆ. ಮನುಷ್ಯರ ಸಹಾಯ ಸಿಗದಿದ್ದಾಗ ಯಂತ್ರಗಳೇ ಗತಿಯಾಗಿವೆ ಎಂಬ ಮಾತುಗಳು ಅಲ್ಲಿನ ಅಪಾರ್ಟ್‌ಮೆಂಟ್‌ಗಳಲ್ಲಿ ಕೇಳಿಬರುತ್ತಿವೆ.

ಮತ್ತಷ್ಟು ಓದಿ: ಪಶ್ಚಿಮ ಬಂಗಾಳ, ತಮಿಳುನಾಡು ವಿಧಾನಸಭಾ ಚುನಾವಣೆ, ಮತದಾನ ಶುರು, ಯಾರ್ಯಾರ ನಡುವೆ ಪೈಪೋಟಿ

ಈ ಬೆಳವಣಿಗೆಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧ ಚರ್ಚೆಗಳು ಆರಂಭವಾಗಿವೆ. ಖ್ಯಾತ ಅರ್ಥಶಾಸ್ತ್ರಜ್ಞ ಸಂಜೀವ್ ಸನ್ಯಾಲ್ ಅವರು ಬಂಗಾಳದ ಈ ಸ್ಥಿತಿಯನ್ನು ‘ಅಸಹ್ಯಕರ’ ಎಂದು ಬಣ್ಣಿಸಿದ್ದಾರೆ. 1960ರಲ್ಲಿ ಉನ್ನತ ಆರ್ಥಿಕತೆಯಾಗಿದ್ದ ಬಂಗಾಳವು ಇಂದು 21ನೇ ಸ್ಥಾನಕ್ಕೆ ಕುಸಿದಿರುವುದು ದುರಂತ. ರಾಜಕೀಯ ಅನಿವಾರ್ಯತೆಗಾಗಿ ಜನರು ಇಷ್ಟು ದೂರದಿಂದ ವಲಸೆ ಬರಬೇಕಾಗಿರುವುದು ಮತ್ತು ಸೌಲಭ್ಯಗಳಿಗಾಗಿ ಹೆದರುವುದು ಬೇಸರದ ಸಂಗತಿ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಗುರುಗ್ರಾಮ ಒಂದರಲ್ಲೇ 3 ಲಕ್ಷಕ್ಕೂ ಅಧಿಕ ಬಂಗಾಳಿ ಕಾರ್ಮಿಕರಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 9:06 am, Mon, 27 April 26

Source link

ಪ್ರದಾನಿ ಮೋದಿಗೆ ಮದುವೆ ಆಹ್ವಾನ ನೀಡಿದ ರಾಯಚೂರಿನ ಯುವಕನಿಗೆ ಸಿಕ್ತು ಗುಡ್ ನ್ಯೂಸ್! – Kannada News | PM Narendra Modi Sends Heartfelt Wedding Wishes to Rajesh Nayak from Raichur; Letter Goes Viral

ರಾಯಚೂರಿನ ನವ ವಿವಾಹಿತರಿಗೆ ಪ್ರಧಾನಿ ಮೋದಿ ಶುಭಾಶಯImage Credit source: tv9

ರಾಯಚೂರು, ಏಪ್ರಿಲ್ 27: ದೇಶದ ಪ್ರಧಾನ ಮಂತ್ರಿಯೆಂದರೆ (Prime Minister) ಬಿಡುವಿಲ್ಲದ ಚಟುವಟಿಕೆಗಳಿಂದ ಕೂಡಿರುವ ವ್ಯಕ್ತಿ. ಆದರೆ, ರಾಯಚೂರಿನ ಸಾಮಾನ್ಯ ಯುವಕನೊಬ್ಬ ಪ್ರೀತಿಯಿಂದ ಕಳುಹಿಸಿದ ಮದುವೆ ಆಹ್ವಾನ ಪತ್ರಿಕೆಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ವಿಶೇಷವಾಗಿ ಸ್ಪಂದಿಸಿದ್ದಾರೆ. ನವಜೋಡಿಗೆ ಶುಭಾಶಯ ಪತ್ರ ಕಳುಹಿಸುವ ಮೂಲಕ ಮೋದಿ ಅವರು ಸಿಂಧನೂರು ತಾಲೂಕಿನ ಕಾನಿಹಾಳ ಗ್ರಾಮದ ದಂಪತಿಯ ಸಂಭ್ರಮವನ್ನು ಇಮ್ಮಡಿಗೊಳಿಸಿದ್ದಾರೆ.

ಸಿಂಧನೂರು ತಾಲೂಕಿನ ಕಾನಿಹಾಳ ಗ್ರಾಮದ ನಿವಾಸಿ ರಾಜೇಶ್ ನಾಯಕ್ ಎಂಬ ಯುವಕನ ಮದುವೆ ಇದೇ ಏಪ್ರಿಲ್ 13 ರಂದು ಸವಿತಾ ಎಂಬುವವರ ಜೊತೆ ನಿಶ್ಚಯವಾಗಿತ್ತು. ಈ ಸಂಭ್ರಮಕ್ಕೆ ಪ್ರಧಾನಿ ಮೋದಿಯವರನ್ನೂ ಆಹ್ವಾನಿಸಬೇಕೆಂದು ಬಯಸಿದ ರಾಜೇಶ್, ದೆಹಲಿಯ ಪ್ರಧಾನಿ ಕಚೇರಿಗೆ ಮದುವೆಯ ಆಹ್ವಾನ ಪತ್ರಿಕೆಯನ್ನು ರವಾನಿಸಿದ್ದರು. ಸಾಮಾನ್ಯ ಪ್ರಜೆಯ ಈ ಆಹ್ವಾನವನ್ನು ಸ್ವೀಕರಿಸಿದ ಪ್ರಧಾನಿ ಮೋದಿ, ಪತ್ರದ ಮೂಲಕ ನವಜೋಡಿಗೆ ಶುಭ ಹಾರೈಸಿದ್ದಾರೆ.

ಪ್ರಧಾನಿ ಮೋದಿಯವರ ಪತ್ರದಲ್ಲೇನಿದೆ?

ರಾಜೇಶ್ ನಾಯಕ್ ಅವರಿಗೆ ಪತ್ರ ಬರೆದಿರುವ ಪ್ರಧಾನಿ ಮೋದಿ, ‘ನಿಮ್ಮ ವಿವಾಹ ಮಹೋತ್ಸವಕ್ಕೆ ನನ್ನನ್ನು ಆಹ್ವಾನಿಸಿದ್ದಕ್ಕಾಗಿ ಹೃತ್ಪೂರ್ವಕ ಧನ್ಯವಾದಗಳು. ಜೀವನದ ಈ ಶುಭ ಸಂದರ್ಭಕ್ಕೆ ಕಾಲಿಡುತ್ತಿರುವ ನಿಮಗೆ ಮತ್ತು ಸವಿತಾ ಅವರಿಗೆ ಸುಂದರ ಭವಿಷ್ಯಕ್ಕಾಗಿ ಶುಭಾಶೀರ್ವಾದಗಳು. ನಿಮ್ಮಿಬ್ಬರ ಹೃದಯ, ಮನಸ್ಸು ಮತ್ತು ಕ್ರಿಯೆಗಳು ಒಂದಾಗಿರಲಿ. ಜೀವನದ ಏರಿಳಿತಗಳಲ್ಲಿ ಪರಸ್ಪರ ಕೈಹಿಡಿದು, ಕನಸುಗಳನ್ನು ಸಾಕಾರಗೊಳಿಸುತ್ತಾ, ಜವಾಬ್ದಾರಿಗಳನ್ನು ಪ್ರೀತಿಯಿಂದ ನಿಭಾಯಿಸಿ. ಪರಸ್ಪರರ ದೋಷಗಳನ್ನು ಒಪ್ಪಿಕೊಂಡು, ಗುಣಗಳನ್ನು ಗೌರವಿಸುತ್ತಾ ಆದರ್ಶ ದಂಪತಿಗಳಾಗಿ ಬಾಳಿ. ನಿಮ್ಮ ದಾಂಪತ್ಯ ಜೀವನ ಸುದೀರ್ಘ, ಸುಖಮಯ ಮತ್ತು ಸುಂದರವಾಗಿರಲಿ’ ಎಂದು ಹಾರೈಸಿದ್ದಾರೆ.

ರಾಜೇಶ್ ನಾಯಕ್ ಹೇಳಿದ್ದೇನು?


‘ಇದೇ ತಿಂಗಳು (ಏಪ್ರಿಲ್ 13) ನಮ್ಮ ಮದುವೆ ನಡೆದಿತ್ತು. ಅದಕ್ಕೂ ಕೆಲವೇ ವಾರಗಳ ಮೊಡಲು ಪ್ರಧಾನಿ ಮೋದಿಯವರಿಗೆ ಮದುವೆಯ ಆಹ್ವಾನ ಪತ್ರಿಕೆ ಕಳುಹಿಸಿದ್ದೆ. ಅವರ ಕಡೆಯಿಂದ ಕನಿಷ್ಠ ಉತ್ತರವಾದರೂ ಬರಬಹುದು ಎಂದು ನಿರೀಕ್ಷಿಸಿ ಅವನ ಪತ್ರಿಕೆ ಕಳುಹಿಸಿದ್ದೆ. ಆದರೆ ಹೆಚ್ಚೇನೂ ನಿರೀಕ್ಷೆ ಇರಲಿಲ್ಲ. ಇದೀಗ ಪ್ರಧಾನಿಯವರಿಂದ ಶುಭಾಶಯ ಪತ್ರ ಬಂದಿದೆ. ಅಷ್ಟೊಂದು ದೊಡ್ಡ ಹುದ್ದೆಯಲ್ಲಿದ್ದು, ದೇಶದ ಸಾಮಾನ್ಯ ಪ್ರಜೆಯೊಬ್ಬನ ಪತ್ರವನ್ನೂ ಅವರು ಪರಿಗಣಿಸುತ್ತಾರೆ ಎಂಬುದು ನಿಜಕ್ಕೂ ಅದ್ಭುತ. ಅವರಿಗೆ ನಮ್ಮ ಕಡೆಯಿಂದ ಕೃತಜ್ಞತೆಗಳು’ ಎಂದು ರಾಜೇಶ್ ನಾಯಕ್ ಪ್ರತಿಕ್ರಿಯಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ರೂಂ ಕ್ಲೀನ್ ಮಾಡಬೇಕು ಎಂಬುದನ್ನು ನೆನಪಿಸುತ್ತದೆ’; ಇನ್​ಸ್ಟಾ ಬಯೋ ಅರ್ಥ ಹೇಳಿದ ರುಕ್ಮಿಣಿ ವಸಂತ್ – Kannada News | Rukmini Vasanth Reveals Instagram Bio’s True Meaning: It’s Not What You Think

ಎಲ್ಲಾ ಭಾಷೆಗಳಲ್ಲೂ ನಟಿಸಿ ಫೇಮಸ್ ಆದವರು ರುಕ್ಮಿಣಿ ವಸಂತ್. ಅವರಿಗೆ ‘ಕಾಂತಾರ: ಚಾಪ್ಟರ್ 1’ ಸಿನಿಮಾ ದೇಶಮಟ್ಟದಲ್ಲಿ ಜನಪ್ರಿಯರನ್ನಾಗಿ ಮಾಡಿತು. ಈಗ ರುಕ್ಮಿಣಿ ವಸಂತ್ ಅವರು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಜನಪ್ರಿಯತೆ ಪಡೆದಿದ್ದಾರೆ. ಇತ್ತೀಚೆಗೆ ಅವರು ಸಂದರ್ಶನ ಒಂದರಲ್ಲಿ ತಮ್ಮ ಇನ್​​ಸಟಾ ಬಯೋದ ಅರ್ಥವೇನು ಎಂಬುದನ್ನು ಹೇಳಿದ್ದಾರೆ. ಇದಕ್ಕೆ ಹೆಚ್ಚು ಆಳ ಅರ್ಥ ಇಲ್ಲ ಎಂಬುದನ್ನು ಅವರು ಸ್ಪಷ್ಟ ಮಾತುಗಳಲ್ಲಿ ಹೇಳಿದ್ದಾರೆ. ಅಲ್ಲದೆ ಒಂದು ಅಚ್ಚರಿಯ ಮಾಹಿತಿಯನ್ನು ಕೂಡ ರಿವೀಲ್ ಮಾಡಿದ್ದಾರೆ.

ರುಕ್ಮಿಣಿ ವಸಂತ್ ಅವರು ಇನ್​​ಸಟಾಗ್ರಾಮ್​​ನಲ್ಲಿ ‘ರುಕ್ಮಿಣಿ, ನೀನು ಈ ಲೌಕಿಕ ಅಥವಾ ಸಾಮಾನ್ಯ ಜೀವನಕ್ಕಾಗಿ ಹುಟ್ಟಿದವಳಲ್ಲ’ ಎಂದು ಬರೆದಿದೆ. ಇದಕ್ಕೆ ನಾನಾ ಅರ್ಥವನ್ನು ಜನರು ಕಲ್ಪಿಸಿದ್ದರು. ಈಗ ರುಕ್ಮಿಣಿ ವಸಂತ್ ಅವರು ಇದರ ಅರ್ಥವನ್ನು ವಿವರಿಸಿದ್ದಾರೆ.

ಇದನ್ನೂ ಓದಿ: ಸಾಯಿ ಪಲ್ಲವಿ ನಟಿಸಬೇಕಿದ್ದ ಬಯೋಪಿಕ್ ಸಿನಿಮಾ ರುಕ್ಮಿಣಿ ವಸಂತ್ ಪಾಲು?

‘ನನ್ನ ಬಯೋದಲ್ಲಿ ಬರೆದಿರುವ ವಿಷಯ ಹೆಚ್ಚು ನಾಟಿಕೀಯವಾಗಿಯೇನು ಇಲ್ಲ. ಅದೇ ರೀತಿ ಆಳ ಅರ್ಥ ಕೂಡ ಇಲ್ಲ. ಒಮ್ಮೆ ನಾನು ನಮ್ಮ ರೂಂ ಕ್ಲೀನ್ ಮಾಡಿಲ್ಲ ಎಂದು ನನ್ನ ತಂಗಿ ಕೂಗಾಡಿದಳು. ಅದಕ್ಕೆ ಹಾಗೆ ಬರೆದುಕೊಂಡಿದ್ದೇನೆ. ನನ್ನ ರೂಂ ಅನ್ನು ಕ್ಲೀನ್ ಮಾಡಿಕೊಳ್ಳಬೇಕು ಎಂಬುದನ್ನು ಆ ಸಾಲು ನೆನಪಿಸುತ್ತದೆ’ ಎಂದಿದ್ದಾರೆ ರುಕ್ಮಿಣಿ ವಸಂತ್.

r

‘Rukmini you weren’t born for real life’ ಎಂಬುದು ಅವರ ಬಯೋದಲ್ಲಿದೆ. ಇದರ ಅರ್ಥವನ್ನು ವಿವರವಾಗಿ ನೋಡೋದಾದರೆ ‘ನಿನ್ನ ವ್ಯಕ್ತಿತ್ವ, ನಿನ್ನ ಆಲೋಚನೆಗಳು ಅಥವಾ ನಿನ್ನ ಗುಣಗಳು ಈ ಸಾಮಾನ್ಯ ಪ್ರಪಂಚದ ಹದಕ್ಕೆ ಹೊಂದಿಕೆಯಾಗುತ್ತಿಲ್ಲ. ಬಹುಶಃ ನೀನು ಅದಕ್ಕಿಂತಲೂ ಮಿಗಿಲಾದ, ಅದ್ಭುತವಾದ ಅಥವಾ ಯಾವುದೋ ಒಂದು ಬೇರೆ ಲೋಕಕ್ಕೆ ಸೇರಿದವಳು. ಇಲ್ಲಿನ ಸಣ್ಣತನಗಳು ಅಥವಾ ಕಷ್ಟ-ಸುಖದ ಸಾಮಾನ್ಯ ಬದುಕು ನಿನಗಲ್ಲ’ ಎಂದು ಹೇಳುವ ವ್ಯಂಗ್ಯದ ಮಾತಾಗಿದೆ. ಸರಳವಾಗಿ ಹೇಳಬೇಕೆಂದರೆ, ‘ನೀನು ಈ ಸಾಧಾರಣ ಬದುಕಿಗಿಂತ ದೊಡ್ಡವಳು’ ಎಂಬ ಅರ್ಥ ನೀಡುತ್ತದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

LSG vs KKR, IPL 2026: ಲಕ್ನೋವನ್ನು ಸೋಲಿಸಿದ ನಂತರ ರಿಂಕು ಸಿಂಗ್ ಆಡಿದ ಮಾತಿಗೆ ಇಡೀ ಸ್ಟೇಡಿಯಂ ಫಿದಾ – Kannada News | Rinku Singh post match presentation talk after defeating LSG had the entire stadium in a frenzy

ಬೆಂಗಳೂರು (ಏ. 27): ಐಪಿಎಲ್ 2026 ರಲ್ಲಿ ಭಾನುವಾರ ನಡೆದ 38ನೇ ಪಂದ್ಯ ರಣರೋಚಕವಾಗಿತ್ತು. ಏಕಾನಾ ಕ್ರೀಡಾಂಗಣ ಈ ಸೀಸನ್​ನ ಮೊದಲ ಸೂಪರ್ ಓವರ್ ಪಂದ್ಯಕ್ಕೆ ಸಾಕ್ಷಿಯಾಯಿತು. ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಕೆಕೆಆರ್ ಗೆದ್ದು ಬೀಗಿತು. ಈ ಪಂದ್ಯದಲ್ಲಿ ಮಿಂಚಿನ ಪ್ರದರ್ಶನ ನೀಡಿದ್ದು ರಿಂಕು ಸಿಂಗ್ (Rinku Singh). ಬ್ಯಾಟಿಂಗ್‌ನಲ್ಲಿ ಅದ್ಭುತ ಆಟವಾಡಿ ಮೈದಾನದಲ್ಲಿ ಸೂಪರ್‌ಮ್ಯಾನ್​ನಂತೆ ಕಾಣಿಸಿಕೊಂಡ ರಿಂಕು ಪಂದ್ಯಶ್ರೇಷ್ಠ ಕೂಡ ತಮ್ಮದಾಗಿಸಿದರು. ಪಂದ್ಯದ ನಂತರ, ಕೆಕೆಆರ್ ತಂಡವನ್ನು ಸೋಲಿನಿಂದ ರಕ್ಷಿಸಿ ಗೆಲುವಿನತ್ತ ಕೊಂಡೊಯ್ದ ರಿಂಕು, ತಮ್ಮ ತಂತ್ರ ಮತ್ತು ಬೌಂಡರಿಯಲ್ಲಿ ತೆಗೆದುಕೊಂಡ ಅದ್ಭುತ ಕ್ಯಾಚ್ ಬಗ್ಗೆ ಮುಕ್ತವಾಗಿ ಮಾತನಾಡಿದರು.

ಪಂದ್ಯದ ನಂತರ, ರಿಂಕು ಸಿಂಗ್ ಅವರನ್ನು “ರಿಂಕು ದಿ ಟ್ರಬಲ್‌ಶೂಟರ್” ಎಂದು ಅಡ್ಡಹೆಸರಾಗಿ ಬದಲಾಯಿಸಬೇಕೇ ಎಂದು ಕೇಳಿದಾಗ, ಅವರು ನಯವಾಗಿ ನಗುತ್ತಾ, “ಇಲ್ಲ, ರಿಂಕು ಎಂಬ ಹೆಸರು ಸರಿ ಇದೆ, ಅದೇ ಇರಲಿ” ಎಂದು ಹೇಳಿದರು. ರಿಂಕುವಿನ ಈ ಮಾತು ಕೇಳಿ ಸ್ಟೇಡಿಯಂನಲ್ಲಿದ್ದ ಫ್ಯಾನ್ಸ್ ನಕ್ಕರು. ನಾನು ಬ್ಯಾಟಿಂಗ್ ಮಾಡಲು ಬಂದಾಗ ತಂಡ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡಿತ್ತು ಮತ್ತು ಪರಿಸ್ಥಿತಿ ಗಂಭೀರವಾಗಿತ್ತು ಎಂದು ರಿಂಕು ವಿವರಿಸಿದರು.

ಪಂದ್ಯವನ್ನು ಕೊನೆಯವರೆಗೂ ಹೇಗೆ ಕೊಂಡೊಯ್ಯಬೇಕು ಎಂಬುದು ನನ್ನ ಮನಸ್ಸಿನಲ್ಲಿತ್ತು ಎಂದು ರಿಂಕು ಹೇಳಿದ್ದಾರೆ. ತಮ್ಮ ತಂತ್ರವನ್ನು ಹಂಚಿಕೊಂಡ ಅವರು, ವಿಕೆಟ್‌ಗಳು ಪತನದ ನಂತರ, ಸ್ಕೋರ್‌ಬೋರ್ಡ್ ಅನ್ನು ಚಲಿಸುವಂತೆ ಮಾಡುವುದು ಮತ್ತು ಕೆಟ್ಟ ಚೆಂಡುಗಳನ್ನು ಮಿತಿಯಿಂದ ಹೊರಗೆ ಹೊಡೆಯುವುದರ ಮೇಲೆ ತಮ್ಮ ಗಮನವಿತ್ತು ಎಂದು ಹೇಳಿದರು.

LSG vs KKR: ಸುಲಭವಾಗಿ ಗೆಲ್ಲುವ ಪಂದ್ಯವನ್ನು ಸೂಪರ್ ಓವರ್​ನಲ್ಲಿ ಸೋತ ಲಕ್ನೋ

ಬ್ಯಾಟಿಂಗ್ ಜೊತೆಗೆ, ಕ್ಷೇತ್ರರಕ್ಷಣೆಯಲ್ಲೂ ರಿಂಕು ಮಿಂಚು

ಈ ಪಂದ್ಯದಲ್ಲಿ ರಿಂಕು ಸಿಂಗ್ 83 ರನ್ ಗಳಿಸಿದ್ದಲ್ಲದೆ, ನಾಲ್ಕು ಅದ್ಭುತ ಕ್ಯಾಚ್‌ಗಳನ್ನು ಸಹ ಪಡೆದರು. ಅವರ ಚುರುಕಾದ ಫೀಲ್ಡಿಂಗ್ ಬಗ್ಗೆ ಮಾತನಾಡುತ್ತಾ, “ನನಗೆ ಬಾಲ್ಯದಿಂದಲೂ ಫೀಲ್ಡಿಂಗ್ ತುಂಬಾ ಇಷ್ಟ. ನಾನು ಫಿಟ್ ಆಗಿದ್ದೇನೆ ಮತ್ತು ಫೀಲ್ಡಿಂಗ್ ಅನ್ನು ಸಂಪೂರ್ಣವಾಗಿ ಆನಂದಿಸುತ್ತೇನೆ” ಎಂದು ಹೇಳಿದರು. ರಿಂಕು ಅವರ ಫಿಟ್ನೆಸ್ ಪಂದ್ಯದುದ್ದಕ್ಕೂ ಎದ್ದುಕಂಡಿತು, ಇದು ಕೋಲ್ಕತ್ತಾಗೆ ನಿರ್ಣಾಯಕ ಕ್ಷಣಗಳಲ್ಲಿ ಪ್ರಯೋಜನವನ್ನು ನೀಡಿತು.

ಸೂಪರ್ ಓವರ್‌ನಲ್ಲಿ ರಿಂಕು ಕ್ಯಾಚ್

ಸೂಪರ್ ಓವರ್‌ನಲ್ಲಿ ರೋವ್‌ಮನ್ ಪೊವೆಲ್ ಎಸೆದ ಕ್ಯಾಚ್ ಬಗ್ಗೆ ರಿಂಕು ಆಸಕ್ತಿದಾಯಕ ವಿಚಾರ ಬಹಿರಂಗಪಡಿಸಿದರು. “ನಿಜ ಹೇಳಬೇಕೆಂದರೆ, ನಾನು ಆ ಕ್ಯಾಚ್‌ಗೆ ಸಿದ್ಧನಾಗಿರಲಿಲ್ಲ. ಪೊವೆಲ್ ಅದನ್ನು ಹಿಡಿಯುತ್ತಾರೆ ಎಂದು ನಾನು ಭಾವಿಸಿದ್ದೆ, ಆದರೆ ಅವನು ಚೆಂಡನ್ನು ಬೌಂಡರಿಯ ಬಳಿಯಿಂದ ನನ್ನ ಕಡೆಗೆ ಬಲವಾಗಿ ಎಸೆದಾಗ, ನಾನು ಚುರುಕುಗೊಂಡು ಅದನ್ನು ಹಿಡಿಯುವಲ್ಲಿ ಯಶಸ್ವಿಯಾದೆ” ಎಂದು ರಿಂಕು ಹೇಳಿದರು. ರಿಂಕು ಹಿಡಿದ ಈ ಕ್ಯಾಚ್ ಸೂಪರ್ ಓವರ್‌ನಲ್ಲಿ ಲಕ್ನೋದ ಇನ್ನಿಂಗ್ಸ್ ಅನ್ನು ಕೇವಲ 1 ರನ್‌ಗೆ ಮುಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಆರ್​ಸಿಬಿ vs ಜಿಟಿ ಪಂದ್ಯದ ವೇಳೆ ನಡೆದಿತ್ತು ಆಘಾತಕಾರಿ ಘಟನೆ: ಕಂಗೆಟ್ಟು ಕುಳಿತಿದ್ದ ಪೊಲೀಸರು! – Kannada News | Bengaluru: Major Security Breach During RCB vs GT IPL Match; 240 CCTV Feeds Cut, 2 Arrested

ಬೆಂಗಳೂರಿನ RCB ಮತ್ತು GT ಪಂದ್ಯದ ವೇಳೆ ನಡೆದಿತ್ತು ಆಘಾತಕಾರಿ ಘಟನೆ!

ಬೆಂಗಳೂರು, ಏಪ್ರಿಲ್ 27: ಶುಕ್ರವಾರ (ಏ.24) ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದ ದಿನವೇ ಭಾರೀ ಭದ್ರತಾ ಲೋಪ ಉಂಟಾಗಿದ್ದು, ಆತಂಕ ಮೂಡಿಸಿದೆ. ಆರ್​ಸಿಬಿ (Royal Challengers Bengaluru) ಮತ್ತು ಜಿಟಿ (Gujarat Titans) ನಡುವಿನ ಪಂದ್ಯಕ್ಕೂ ಮುನ್ನ ಕ್ರೀಡಾಂಗಣದ ಸುತ್ತಮುತ್ತ ಅಳವಡಿಸಲಾಗಿದ್ದ ಸುಮಾರು 240 ಸಿಸಿಟಿವಿ ಕ್ಯಾಮೆರಾಗಳ ಸಂಪರ್ಕವನ್ನು ಕಿಡಿಗೇಡಿಗಳು ಉದ್ದೇಶಪೂರ್ವಕವಾಗಿ ಕಡಿತಗೊಳಿಸಿದ್ದರು ಎಂಬುದು ತಡವಾಗಿ ಬೆಳಕಿಗೆ ಬಂದಿದೆ.

ನಡೆದಿದ್ದೇನು?

ಆ ದಿನ ಸ್ಟೇಡಿಯಂ ಸುತ್ತಮುತ್ತ ಹಾಗೂ ಪ್ರವೇಶ ದ್ವಾರಗಳಲ್ಲಿ ಅಳವಡಿಸಿದ್ದ ಕ್ಯಾಮೆರಾಗಳು ಕಾರ್ಯನಿರ್ವಹಿಸದೇ ಇದ್ದುದರಿಂದ ಪೊಲೀಸರು ಗೊಂದಲಕ್ಕೀಡಾದರು. IPL ಪಂದ್ಯದ ದಿನ ಒಮ್ಮೆಲೇ 240 ಸಿಸಿಟಿವಿ ಕ್ಯಾಮೆರಾಗಳು ಆಪ್ ಆಗಿದ್ದು, ಇದರ ಹಿಂದೆ ಯಾರ ಕೈವಾಡವಿದೆ ಎಂದು ತನಿಖೆ ನಡೆಸಿದಾಗ ಕೇಳಿ ಬಂದಿದ್ದು ಎರಡು ಹೆಸರುಗಳು. ಐವಿಎಸ್​ ಡಿಜಿಟಲ್ ಸಲ್ಯೂಷನ್ಸ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಮಂಜುನಾಥ್ ಮತ್ತು ಅಬ್ದುಲ್ ಕಲಾಂ. ಪಾಸ್ ಇಲ್ಲದೇ ನಿಷ್ಕ್ರಿಯಗೊಂಡ ಕಾರ್ಡ್ ಬಳಸಿ ಸರ್ವರ್ ರೂಂಗೆ ಅನಧಿಕೃತವಾಗಿ ಪ್ರವೇಶಿಸಿದ ಆರೋಪಿಗಳು ಎನ್‌ವಿಆರ್ ಮತ್ತು ಫೈಬರ್ ಸಂಪರ್ಕಗಳನ್ನು ಕಡಿತಗೊಳಿಸಿದ್ದರೆಂದು ವಿಚಾರಣೆಯಲ್ಲಿ ಬಹಿರಂಗವಾಗಿದೆ.

ಪೊಲೀಸರ ಸಮಯಪ್ರಜ್ಞೆ

ಪಂದ್ಯದ ದಿನ ಬೆಳಗ್ಗೆ ಸಿಸಿಟಿವಿಗಳು ಆಫ್ ಆಗಿದ್ದರಿಂದ ಭದ್ರತಾ ವ್ಯವಸ್ಥೆ ಅಲ್ಲೋಲಕಲ್ಲೋಲವಾಗಿತ್ತು. ವಿಷಯ ತಿಳಿಯುತ್ತಿದ್ದಂತೆಯೇ ಎಚ್ಚೆತ್ತ ಪೊಲೀಸರು, ಕೂಡಲೇ ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿ ಬದಲಿ ತಾಂತ್ರಿಕ ವ್ಯವಸ್ಥೆ ನಿರ್ಮಿಸಿದರು. ಭದ್ರತಾ ನ್ಯೂನತೆಗಳ ನಡುವೆಯೂ ಪೊಲೀಸರು ಚಾಣಾಕ್ಷತನದಿಂದ ಕಾರ್ಯನಿರ್ವಹಿಸಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪರಿಸ್ಥಿತಿ ನಿಭಾಯಿಸಿದ್ದಾರೆ.ಘಟನೆ ಸಂಬಂಧ ಕಬ್ಬನ್ ಪಾರ್ಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿದಿದೆ.

ಕ್ರೀಡಾಂಗಣದಲ್ಲಿ ಬ್ಲ್ಯಾಕ್ ಟಿಕೆಟ್ ಮಾರಾಟ, 10 ಮಂದಿ ಬಂಧನ!

ಆರ್‌ಸಿಬಿ ಮತ್ತು ಜಿಟಿ ನಡುವಿನ ಐಪಿಎಲ್ ಪಂದ್ಯದ ವೇಳೆ ಟಿಕೆಟ್‌ಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದ ದಂಧೆಯನ್ನು ಪೊಲೀಸರು ಭೇದಿಸಿದ್ದಾರೆ. ಈ ಸಂಬಂಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಒಟ್ಟು 7 ಎಫ್‌ಐಆರ್ (FIR) ದಾಖಲಾಗಿದ್ದು, 10 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ.

ಬಂಧಿತರಿಂದ P3 ಸ್ಟ್ಯಾಂಡ್‌ನ 6 ಮತ್ತು ರೋಜರ್ ಬಿನ್ನಿ ಸ್ಟ್ಯಾಂಡ್‌ನ 6 ಟಿಕೆಟ್ ಸೇರಿದಂತೆ ಒಟ್ಟು 19 ಟಿಕೆಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ವಿಶೇಷವೆಂದರೆ, ಕೆಎಸ್‌ಸಿಎ (KSCA) ಸದಸ್ಯರಿಗೆ ನೀಡಲಾಗಿದ್ದ ಕಾಂಪ್ಲಿಮೆಂಟರಿ ಟಿಕೆಟ್‌ಗಳೇ ಅತಿ ಹೆಚ್ಚು ಬ್ಲಾಕ್‌ನಲ್ಲಿ ಮಾರಾಟವಾಗಿವೆ. ಈ ಟಿಕೆಟ್‌ಗಳ ಮೇಲೆ ಬೆಲೆ ನಮೂದಾಗಿರುವುದಿಲ್ಲ. ಅಥವಾ ‘ಸೊನ್ನೆ’ ಎಂದು ಬರೆದಿರುತ್ತದೆ. ಇದರ ಮೌಲ್ಯದ ಅರಿವಿಲ್ಲದ ಆರೋಪಿಗಳು, 30-40 ಸಾವಿರ ರೂಪಾಯಿ ಬೆಲೆ ಬಾಳುವ P3 ಸ್ಟ್ಯಾಂಡ್ ಟಿಕೆಟ್‌ಗಳನ್ನು ಕೇವಲ 8-10 ಸಾವಿರಕ್ಕೆ ಮಾರಾಟ ಮಾಡುತ್ತಿದ್ದರು. ಇನ್ನು ಕೆಲವು ಸಾಮಾನ್ಯ ಟಿಕೆಟ್‌ಗಳನ್ನು ಎರಡು-ಮೂರು ಪಟ್ಟು ಹೆಚ್ಚು ಬೆಲೆಗೆ ಮಾರುತ್ತಿದ್ದರು ಎಂದು ತಿಳಿದು ಬಂದಿದೆ.

ಇದನ್ನೂ ಓದಿ ಐಪಿಎಲ್ ಬ್ಲ್ಯಾಕ್ ಟಿಕೆಟ್ ಮಾರಾಟ ದಂಧೆ, ಡಿಎನ್‌ಎ ಸಂಸ್ಥೆಗೆ ಸಿಸಿಬಿ ಶಾಕ್!

ಪೊಲೀಸರ ಮಫ್ತಿ ಕಾರ್ಯಾಚರಣೆ

ಟಿಕೆಟ್ ಕೊಳ್ಳುವವರ ಸೋಗಿನಲ್ಲಿ ಮಫ್ತಿಯಲ್ಲಿ ತೆರಳಿದ್ದ ಪೊಲೀಸರು ಚಾಣಾಕ್ಷತನದಿಂದ ಈ ಕಾರ್ಯಾಚರಣೆ ನಡೆಸಿದ್ದಾರೆ. ಈ ವೇಳೆ ಪ್ರದೀಪ್, ಸಾಗರ್, ಕಿರಣ್, ಜೀವನ್, ಭರತೇಶ್ ಸೇರಿದಂತೆ ಒಟ್ಟು 10 ಜನರನ್ನು ಬಂಧಿಸಲಾಗಿದೆ. ಈ ಆರೋಪಿಗಳಿಗೆ ಕಾಂಪ್ಲಿಮೆಂಟರಿ ಟಿಕೆಟ್‌ಗಳನ್ನು ನೀಡಿದ ಮೂಲ ವ್ಯಕ್ತಿಗಳು ಯಾರು ಎಂಬ ಬಗ್ಗೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಆನ್‌ಲೈನ್ ಟಿಕೆಟ್‌ಗಳನ್ನು ಮುಂಗಡವಾಗಿ ಖರೀದಿಸಿ ಸ್ಥಳದಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ತಂಡಗಳ ಮೇಲೂ ನಿಗಾ ಇಡಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Video: ರೈಲಿನಿಂದ ಮಗು ಬಿದ್ದೇಬಿಡ್ತು, ಚೈನ್ ಎಳೆದರೂ ನಿಲ್ಲದ ರೈಲು, ಅಸಹಾಯಕಳಾಗಿ ಕಣ್ಣೀರಿಟ್ಟ ತಾಯಿ – Kannada News | Child Falls from Train, Emergency Chain Fails to Halt Service on Jalpaiguri Route

ಕೋಲ್ಕತ್ತಾ, ಏಪ್ರಿಲ್ 27: ಕೈಜಾರಿ ಮಗು ರೈಲಿನಿಂದ ಬಿದ್ದೇ ಬಿಟ್ಟಿತ್ತು, ರೈಲಿನ ತುರ್ತು ಸರಪಳಿಯನ್ನು ಎಳೆದರೂ ಕೂಡ ರೈಲು ನಿಲ್ಲದೆ ಚಲಿಸುತ್ತಲೇ ಇದ್ದ ಘಟನೆ ಜಲ್ಪೈಗುರಿ ಮತ್ತು ರಾಮನಗರ ನಡುವಿನ ರೈಲು ಪ್ರಯಾಣದ ವೇಳೆ ಸಂಭವಿಸಿದೆ.

ರೈಲಿನಿಂದ ಮಗು ಕೆಳಕ್ಕೆ ಬಿದ್ದ ತಕ್ಷಣವೇ ಗಾಬರಿಗೊಂಡ ತಾಯಿ, ಮಗುವನ್ನು ರಕ್ಷಿಸಲು ರೈಲನ್ನು ನಿಲ್ಲಿಸಲು ತುರ್ತು ಸರಪಳಿಯನ್ನು ಎಳೆದಿದ್ದಾರೆ. ಆದರೆ, ರೈಲು ನಿಲ್ಲಲೇ ಇಲ್ಲ. ಆಕೆಯ ಆಕ್ರಂದನ ಕಂಡು ಬೋಗಿಯಲ್ಲಿದ್ದ ಇತರ ಪ್ರಯಾಣಿಕರೂ ಸಹಕರಿಸಿ ಪದೇ ಪದೇ ಸರಪಳಿಯನ್ನು ಎಳೆದರೂ ರೈಲ್ವೆ ಬ್ರೇಕ್ ವ್ಯವಸ್ಥೆ ಸ್ಪಂದಿಸಲಿಲ್ಲ. ಇದು ರೈಲ್ವೆ ಬೋಗಿಗಳ ನಿರ್ವಹಣೆಯ ಬಗ್ಗೆ ದೊಡ್ಡ ಪ್ರಶ್ನೆಯನ್ನು ಮೂಡಿಸಿದೆ.

ಘಟನೆಯ ವೇಳೆ ಬೋಗಿಯಲ್ಲಿದ್ದ ಯುವಕನೊಬ್ಬ ತಕ್ಷಣವೇ ಆರ್‌ಪಿಎಫ್ (RPF) ಮತ್ತು ಸ್ಥಳೀಯ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾನೆ. ಈ ಇಡೀ ಘಟನೆಯನ್ನು ಆತ ವೀಡಿಯೊದಲ್ಲಿ ಸೆರೆಹಿಡಿದಿದ್ದು, ನಾವು ಎಲ್ಲರಿಗೂ ಕರೆ ಮಾಡಿದ್ದೇವೆ, ಸರಪಳಿ ಎಳೆಯುತ್ತಿದ್ದೇವೆ, ಆದರೂ ರೈಲು ನಿಲ್ಲುತ್ತಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾನೆ. ರೈಲು ನಿಲ್ಲದ ಕಾರಣ ತಾಯಿ ಮಗುವಿನ ಹತ್ತಿರ ತಲುಪಲು ಸಾಧ್ಯವಾಗದೆ ರೈಲಿನಲ್ಲೇ ಕಣ್ಣೀರಿಡುತ್ತಾ ಕುಳಿತುಕೊಳ್ಳುವಂತಾಯಿತು.

ಮಗು ಬಿದ್ದ ನಂತರ ರೈಲು ಮುಂದಿನ ನಿಲ್ದಾಣ ತಲುಪುವವರೆಗೆ ತಾಯಿಗೆ ಯಾವುದೇ ಅಧಿಕೃತ ಸಹಾಯ ಸಿಗಲಿಲ್ಲ ಎಂದು ವರದಿಯಾಗಿದೆ. ನಂತರ ಪೊಲೀಸರು ಮತ್ತು ರೈಲ್ವೆ ಸಿಬ್ಬಂದಿ ಘಟನಾ ಸ್ಥಳಕ್ಕೆ ಧಾವಿಸಿ ಮಗುವನ್ನು ಪತ್ತೆಹಚ್ಚುವ ಕಾರ್ಯದಲ್ಲಿ ತೊಡಗಿದ್ದಾರೆ ಎನ್ನಲಾಗಿದೆ.

 

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

60ನೇ ವಯಸ್ಸಿನಲ್ಲೂ ಎಷ್ಟು ಯಂಗ್ ಆಗಿ ಕಾಣ್ತಾರೆ ನೋಡಿ ವಿಕ್ರಮ್ – Kannada News | Vikram’s Youthful Look at 60: Is it Cosmetic Surgery or Natural Diet?

ತಮಿಳಿನ ಸ್ಟಾರ್ ಹೀರೋ ವಿಕ್ರಮ್ ಅವರನ್ನು ಪರಿಚಯಿಸುವ ಅಗತ್ಯವಿಲ್ಲ. ಅವರು ತಮ್ಮ ಚಿತ್ರಗಳ ಮೂಲಕ ಅನೇಕ ಅಭಿಮಾನಿಗಳನ್ನು ಗೆದ್ದಿದ್ದಾರೆ. ತಮಿಳಿನಲ್ಲಿ ಸ್ಟಾರ್ ಹೀರೋ ಆಗಿರುವ ವಿಕ್ರಮ್, ದಕ್ಷಿಣ ಭಾರತದಲ್ಲಿ ಸಾಕಷ್ಟು ಕ್ರೇಜ್ ಹೊಂದಿದ್ದಾರೆ. ವಿಕ್ರಮ್ ಪ್ರಸ್ತುತ 60 ವರ್ಷ ವಯಸ್ಸಿನವರಾಗಿದ್ದರೂ, ಅವರು ತಮ್ಮ ಲುಕ್ನಲ್ಲಿ 20-25 ವರ್ಷದ ಹುಡುಗನಂತೆ ಕಾಣುತ್ತಾರೆ. ಇತ್ತೀಚೆಗೆ, ವಿಕ್ರಮ್‌ಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ವಿಕ್ರಮ್ ಅವರ ಲುಕ್ ನೆಟ್ಟಿಗರು ಮತ್ತು ಅವರ ಅಭಿಮಾನಿಗಳನ್ನು ಅಪಾರವಾಗಿ ಮೆಚ್ಚಿಸಿದೆ. ವಿಕ್ರಮ್ ಅವರ ಮಗ ಈಗ ನಾಯಕನಾಗಿಯೂ ನಟಿಸುತ್ತಿದ್ದಾರೆ. ವಿಕ್ರಮ್ ಅವರ ಮಗ ಧ್ರುವ ಸತತವಾಗಿ ತಮಿಳಿನಲ್ಲಿ ಸಿನಿಮಾ ಮಾಡುತ್ತಿದ್ದಾರೆ. ಇತ್ತೀಚೆಗೆ ಬೈಸನ್ ಚಿತ್ರದ ಮೂಲಕ ಅವರು ಹಿಟ್ ಗಳಿಸಿದರು. ಧ್ರುವ್ ಪ್ರಸ್ತುತ 30 ವರ್ಷ ವಯಸ್ಸಿನವರಾಗಿದ್ದರೂ ವಿಕ್ರಮ್ ಧ್ರುವ್ ಗಿಂತ ಚಿಕ್ಕವರಾಗಿ ಕಾಣುತ್ತಿದ್ದಾರೆ. ಆದಾಗ್ಯೂ, ವಿಕ್ರಮ್ ತುಂಬಾ ಸುಂದರವಾಗಿ ಕಾಣುತ್ತಿದ್ದಾರೆ ಎಂಬ ಬಗ್ಗೆ ವಿವಿಧ ಸುದ್ದಿಗಳು ಹರಿದಾಡುತ್ತಿವೆ.

ಇದನ್ನೂ ಓದಿ: ಇನ್ನೂ ಸಖತ್ ಯಂಗ್ ಆಗಿದ್ದಾರೆ ಚಿಯಾನ್ ವಿಕ್ರಮ್

ಅದರಲ್ಲೂ ಕಾಲಿವುಡ್ ನಲ್ಲಿ ಹೆಚ್ಚು ಕೇಳಿಬರುತ್ತಿರುವ ಸುದ್ದಿಗಳಲ್ಲಿ, ವಿಕ್ರಮ್ ಸುಂದರವಾಗಿ ಕಾಣಲು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ವಿಕ್ರಮ್ ಯುವಕನಂತೆ ಕಾಣಲು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ ಎಂಬ ವರದಿಗಳೂ ಇವೆ. ವಿದೇಶಗಳಲ್ಲಿ ಕಾಸ್ಮೆಟಿಕ್ ಚಿಕಿತ್ಸೆಯಿಂದಾಗಿ ವಿಕ್ರಮ್ ಯುವಕನಂತೆ ಕಾಣುತ್ತಿದ್ದಾರೆ ಎಂದು ಕೆಲವರು ಹೇಳುತ್ತಾರೆ. ಇನ್ನು ಕೆಲವರು ವಿಕ್ರಮ್ ಅವರ ಆಹಾರ ಪದ್ಧತಿ ಮತ್ತು ನೈಸರ್ಗಿಕ ಆಹಾರ ಕ್ರಮದಿಂದ ವಿಕ್ರಮ್ ಈ ರೀತಿ ಕಾಣುತ್ತಿದ್ದಾರೆ ಎಂದು ಹೇಳುತ್ತಾರೆ. ವಿಕ್ರಮ್ ಅವರ ಶಸ್ತ್ರಚಿಕಿತ್ಸೆಯ ಬಗ್ಗೆ ಯಾವುದೇ ಅಧಿಕೃತ ಘೋಷಣೆ ಇಲ್ಲ. ಆದರೆ ಈ ಸುದ್ದಿ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಇದಕ್ಕೆ ವಿಕ್ರಮ್ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂದು ನೋಡೋಣ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ರೈಲೇ ಹೆರಿಗೆ ಆಸ್ಪತ್ರೆಯಾಯ್ತು! ಮಹಿಳಾ ಪ್ರಯಾಣಿಕರ ನೆರವಿನಿಂದ ಚಲಿಸುವ ರೈಲಿನಲ್ಲೇ ಗಂಡು ಮಗುವಿಗೆ ಜನ್ಮ ನೀಡಿದ ತಾಯಿ – Kannada News | Miracle on Wheels: Passengers Turn Midwives to Help Woman Deliver Baby on Karwar Yesvantpur Express at Bantwal

ಕಾರವಾರ ಯಶವಂತಪುರ ಎಕ್ಸ್​​ಪ್ರೆಸ್ ಅನ್ನು ಬಂಟ್ವಾಳದಲ್ಲಿ ನಿಲ್ಲಿಸಿರುವುದುImage Credit source: tv9

ಮಂಗಳೂರು, ಏಪ್ರಿಲ್ 27: ಅಪರೂಪದಲ್ಲೇ ಅಪರೂಪದ ಮತ್ತು ಮಾನವೀಯತೆಯ ದೃಶ್ಯವೊಂದಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ (Dakshina Kannada) ಬಂಟ್ವಾಳ ರೈಲ್ವೇ ನಿಲ್ದಾಣ ಸಾಕ್ಷಿಯಾಗಿದೆ. ಉತ್ತರ ಕನ್ನಡ ಜಿಲ್ಲೆಯ ಕಾರವಾರದಿಂದ ಯಶವಂತಪುರಕ್ಕೆ ತೆರಳುತ್ತಿದ್ದ ಎಕ್ಸ್‌ಪ್ರೆಸ್‌ ರೈಲಿನಲ್ಲಿ (Karwar Yesvantpur Express) ತುಂಬು ಗರ್ಭಿಣಿಯೊಬ್ಬರಿಗೆ ಹೆರಿಗೆ ನೋವು ಕಾಣಿಸಿಕೊಂಡಾಗ, ಸೂಕ್ತ ವೈದ್ಯಕೀಯ ನೆರವು ಸಿಗದ ಕಾರಣ ಸಹಪ್ರಯಾಣಿಕ ಮಹಿಳೆಯರೇ ದಾದಿಯರಾಗಿ ಬದಲಾಗಿ ಯಶಸ್ವಿಯಾಗಿ ಹೆರಿಗೆ ಮಾಡಿಸಿದ್ದಾರೆ.

ಚಲಿಸುತ್ತಿರುವ ರೈಲಿನ್ಲಲೇ ಹೆರಿಗೆ ಘಟನೆಯ ವಿವರ

ಮೈಸೂರು ಮೂಲದ ಗರ್ಭಿಣಿಯೊಬ್ಬರು ಮಂಗಳೂರು ಜಂಕ್ಷನ್‌ನಿಂದ ಯಶವಂತಪುರಕ್ಕೆ ತೆರಳುವ ರೈಲನ್ನೇರಿದ್ದರು. ರೈಲು ಬಿಸಿ ರೋಡ್ ಬಳಿ ತಲುಪುತ್ತಿದ್ದಂತೆ ಮಹಿಳೆಗೆ ತೀವ್ರ ಹೆರಿಗೆ ನೋವು ಹಾಗೂ ರಕ್ತಸ್ರಾವ ಕಾಣಿಸಿಕೊಂಡಿದೆ. ಪರಿಸ್ಥಿತಿಯ ಗಂಭೀರತೆಯನ್ನು ಅರಿತ ರೈಲ್ವೇ ಸಿಬ್ಬಂದಿ ತಕ್ಷಣವೇ ರೈಲು ಸಂಚಾರವನ್ನು ಬಿಸಿ ರೋಡ್ ನಿಲ್ದಾಣದಲ್ಲಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದರು.

ಮಹಿಳಾ ಪ್ರಯಾಣಿಕರ ಸಮಯಪ್ರಜ್ಞೆ

ತುರ್ತು ವೈದ್ಯಕೀಯ ಚಿಕಿತ್ಸೆ ನೆರವಿಗಾಗಿ ಸುಮಾರು 30 ನಿಮಿಷಗಳ ಕಾಲ ಕಾಯಲಾಯಿತು. ಆದರೂ ಯಾವುದೇ ವೈದ್ಯಕೀಯ ನೆರವು ಸಕಾಲಕ್ಕೆ ಲಭ್ಯವಾಗಲಿಲ್ಲ. ಸಮಯ ವ್ಯರ್ಥವಾದರೆ ತಾಯಿ-ಮಗುವಿನ ಜೀವಕ್ಕೆ ಅಪಾಯವಿರುವುದನ್ನು ಅರಿತ ರೈಲಿನಲ್ಲಿದ್ದ ಇತರ ಮಹಿಳಾ ಪ್ರಯಾಣಿಕರು ತಕ್ಷಣ ಕಾರ್ಯಪ್ರವೃತ್ತರಾದರು. ರೈಲಿನ ಬೋಗಿಗೆ ಬೆಡ್‌ಶೀಟ್‌ಗಳ ಮೂಲಕ ಪರದೆ ಕಟ್ಟಿ, ತಾತ್ಕಾಲಿಕ ಹೆರಿಗೆ ಕೋಣೆಯನ್ನಾಗಿ ಪರಿವರ್ತಿಸಿದರು.

ಕಾರವಾರ ಯಶವಂತಪುರ ರೈಲಲ್ಲಿ ಯಶಸ್ವಿ ಹೆರಿಗೆ

ಅನುಭವಸ್ಥ ಮಹಿಳೆಯರ ಮಾರ್ಗದರ್ಶನದಲ್ಲಿ ಜತೆಸೇರಿದ ಮಹಿಳೆಯರು ಹರಸಾಹಸ ಪಟ್ಟು ಗರ್ಭಿಣಿಗೆ ಸಹಜ ಹೆರಿಗೆ ಮಾಡಿಸುವಲ್ಲಿ ಯಶಸ್ವಿಯಾದರು. ಮಹಿಳೆ ಗಂಡು ಮಗುವಿಗೆ ಜನ್ಮ ನೀಡಿದ್ದು, ಮಗುವಿನ ಮೊದಲ ಅಳು ಕೇಳುತ್ತಿದ್ದಂತೆ ರೈಲಿನಲ್ಲಿದ್ದ ಪ್ರಯಾಣಿಕರು ನಿಟ್ಟುಸಿರು ಬಿಟ್ಟರು. ನಂತರ ತಾಯಿ ಮತ್ತು ನವಜಾತ ಶಿಶುವನ್ನು ಹೆಚ್ಚಿನ ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಯಶವಂತಪುರ – ಕಾರವಾರ ನಡುವೆ ವಿಶೇಷ ಎಕ್ಸ್​ಪ್ರೆಸ್ ರೈಲು: ಇಲ್ಲಿದೆ ವೇಳಾಪಟ್ಟಿ, ನಿಲುಗಡೆ ಇತ್ಯಾದಿ ವಿವರ

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸೂಪರ್ ಓವರ್​ನಲ್ಲೂ ಹೀನಾಯ ದಾಖಲೆ ಬರೆದ LSG – Kannada News | IPL History Rewritten: LSG Crash to Lowest Ever Super Over Score

ಇಂಡಿಯನ್ ಪ್ರೀಮಿಯರ್ ಲೀಗ್ (IPL) ಅಂದಾಕ್ಷಣ ನೆನಪಿಗೆ ಬರುವುದು ಕೊನೆಯ ಎಸೆತದವರೆಗಿನ ರೋಚಕತೆ. ಪಂದ್ಯ ‘ಟೈ’ ಆದಾಗ ಫಲಿತಾಂಶ ನಿರ್ಧರಿಸುವ ‘ಸೂಪರ್ ಓವರ್’ ಪ್ರೇಕ್ಷಕರಲ್ಲಿ ಕುತೂಹಲವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಆದರೆ, 2026ರ ಏಪ್ರಿಲ್ 26ರಂದು ನಡೆದ ಪಂದ್ಯವೊಂದು ಬ್ಯಾಟಿಂಗ್ ವೈಫಲ್ಯದಿಂದಾಗಿ ಐಪಿಎಲ್ ಇತಿಹಾಸದ ಪುಟ ಸೇರಿರುವುದು ವಿಶೇಷ.

ಲಕ್ನೋದ ಏಕನಾ ಕ್ರೀಡಾಂಗಣದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (KKR) ಮತ್ತು ಲಕ್ನೋ ಸೂಪರ್ ಜೈಂಟ್ಸ್ (LSG) ನಡುವೆ ನಡೆದ ಈ ಪಂದ್ಯದಲ್ಲಿ ಉಭಯ ತಂಡಗಳು 20 ಓವರ್​ಗಳಲ್ಲಿ 155 ರನ್​ಗಳಿಸಿದ್ದರಿಂದ ಮ್ಯಾಚ್ ಟೈ ಆಯಿತು. ಇದಾದ ಬಳಿಕ ನಡೆದ ಸೂಪರ್ ಓವರ್​ನಲ್ಲಿ ಮೊದಲು ಬ್ಯಾಟ್ ಮಾಡಿದ ಲಕ್ನೋ ತಂಡ, ಸುನಿಲ್ ನರೈನ್ ಅವರ ಸ್ಪಿನ್ ಜಾಲಕ್ಕೆ ಸಿಲುಕಿ ಕೇವಲ 1 ರನ್ ಗಳಿಸಿ ತನ್ನೆರಡೂ ವಿಕೆಟ್ ಕಳೆದುಕೊಂಡಿತು. ಇದು ಐಪಿಎಲ್ ಇತಿಹಾಸದಲ್ಲೇ ಸೂಪರ್ ಓವರ್‌ನಲ್ಲಿ ದಾಖಲಾದ ಅತ್ಯಂತ ಕಡಿಮೆ ಸ್ಕೋರ್ ಆಗಿದೆ.

ಕೆಕೆಆರ್ ಪರ ಬೌಲಿಂಗ್ ಮಾಡಿದ ಅನುಭವಿ ಸುನಿಲ್ ನರೈನ್, ಲಕ್ನೋ ತಂಡದ ಬ್ಯಾಟರ್‌ಗಳಿಗೆ ರನ್ ಗಳಿಸಲು ಕಿಂಚಿತ್ತೂ ಅವಕಾಶ ನೀಡಲಿಲ್ಲ. ಮೊದಲ ಎಸೆತದಲ್ಲಿ ಸ್ಫೋಟಕ ಬ್ಯಾಟರ್ ನಿಕೋಲಸ್ ಪೂರನ್ ವಿಕೆಟ್ ಪತವಾದರೆ, ದ್ವಿತೀಯ ಎಸೆತದಲ್ಲಿ ರಿಷಭ್ ಪಂತ್ ಒಂದು ರನ್ ಕಲೆಹಾಕಿದರು. ಇನ್ನು ಮೂರನೇ ಎಸೆತದಲ್ಲಿ ಐಡೆನ್ ಮಾರ್ಕ್ರಾಮ್ ವಿಕೆಟ್ ಪಡೆದರು.

ಅಂತಿಮವಾಗಿ ಲಕ್ನೋ ಸೂಪರ್ ಜೈಂಟ್ಸ್ ತಂಡ ಸೂಪರ್ ಓವರ್​ನಲ್ಲಿ ನಿಗದಿತ 2 ವಿಕೆಟ್ ಕಳೆದುಕೊಂಡು ಕೇವಲ 1 ರನ್ ಗಳಿಸಿತು. ಗೆಲುವಿಗೆ ಕೇವಲ 2 ರನ್​ಗಳ ಗುರಿ ಪಡೆದ ಕೆಕೆಆರ್ ಪರ ರಿಂಕು ಸಿಂಗ್ ಮೊದಲ ಎಸೆತದಲ್ಲೇ ಬೌಂಡರಿ ಬಾರಿಸುವ ಮೂಲಕ ತಂಡಕ್ಕೆ ಜಯ ತಂದು ಕೊಟ್ಟರು.

ಅತೀ ಕಡಿಮೆ ಮೊತ್ತ!

ಐಪಿಎಲ್ 2020 ರಲ್ಲಿ ಕೆಕೆಆರ್ ವಿರುದ್ಧ ಸನ್‌ರೈಸರ್ಸ್ ಹೈದರಾಬಾದ್ ತಂಡ ಸೂಪರ್ ಓವರ್​​ನಲ್ಲಿ ಕೇವಲ 2 ರನ್​ಗಳಿಸಿದ್ದು ಈವರೆಗಿನ ದಾಖಲೆಯಾಗಿತ್ತು. ಇದೀಗ ಇದಕ್ಕಿಂತ ಕಳಪೆ ಪ್ರದರ್ಶನ ನೀಡುವ ಮೂಲಕ ಎಲ್​ಎಸ್​ಜಿ ಹೀನಾಯ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ಐಪಿಎಲ್ ಸೂಪರ್ ಓವರ್‌ನಲ್ಲಿ ಅತಿ ಕಡಿಮೆ ಸ್ಕೋರ್‌ಗಳು:

1. ಲಕ್ನೋ ಸೂಪರ್ ಜೈಂಟ್ಸ್: 1/2 (vs ಕೆಕೆಆರ್, 2026)
2. ಸನ್‌ರೈಸರ್ಸ್ ಹೈದರಾಬಾದ್: 2/2 (vs ಕೆಕೆಆರ್, 2020)
3. ಕಿಂಗ್ಸ್ ಇಲೆವೆನ್ ಪಂಜಾಬ್: 5/1 (vs ಮುಂಬೈ ಇಂಡಿಯನ್ಸ್, 2020)

Source link

ಧರ್ಮೇಂದ್ರ ಅಣ್ಣನ ಬಗ್ಗೆ ಗೊತ್ತೇ? ಸೆಟ್​​ನಲ್ಲೇ ಗುಂಡಿಕ್ಕಿ ಕೊಲ್ಲಲಾಗಿತ್ತು.. – Kannada News | Dharmendra’s Cousin Veerendra: The Unsolved Murder of a Punjabi Cinema Star

ಬಾಲಿವುಡ್‌ ದಿವಂಗತ ನಟ ಧರ್ಮೇಂದ್ರ (Dharmendra) ಬಗ್ಗೆ ಇಂದು ಎಲ್ಲರಿಗೂ ತಿಳಿದಿದೆ. ಧರ್ಮೇಂದ್ರ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಜನಪ್ರಿಯ ನಟನಾಗಿ, ಧರ್ಮೇಂದ್ರ ಇನ್ನೂ ತಮ್ಮ ಅಭಿಮಾನಿಗಳ ಹೃದಯದಲ್ಲಿ ಜೀವಂತವಾಗಿದ್ದಾರೆ. ಆದರೆ ಅವರ ಅಣ್ಣನ ಬಗ್ಗೆ ಹೆಚ್ಚಿನ ಜನರಿಗೆ ತಿಳಿದಿಲ್ಲ. ಧರ್ಮೇಂದ್ರ ಅವರ ಅಣ್ಣನನ್ನು ಎಲ್ಲರ ಮುಂದೆ ಗುಂಡಿಕ್ಕಿ ಕೊಲ್ಲಲಾಯಿತು. ಧರ್ಮೇಂದ್ರ ಅವರ ಅಣ್ಣನ ಹೆಸರು ವೀರೇಂದ್ರ ಸಿಂಗ್. ವೀರೇಂದ್ರ ಇಂದು ಜೀವಂತವಾಗಿದ್ದರೆ, ಅವರು ಜನಪ್ರಿಯ ಸೆಲೆಬ್ರಿಟಿಯೂ ಆಗುತ್ತಿದ್ದರು. ಧರ್ಮೇಂದ್ರ ಹಿಂದಿ ಚಲನಚಿತ್ರೋದ್ಯಮದಲ್ಲಿ ತಮ್ಮ ಛಾಪು ಮೂಡಿಸುತ್ತಿದ್ದರೆ, ವೀರೇಂದ್ರ ಪಂಜಾಬಿ ಚಲನಚಿತ್ರೋದ್ಯಮದಲ್ಲಿ ಪ್ರಬಲರಾಗಿದ್ದರು. ಆದರೆ ಒಂದು ದಿನ ವೀರೇಂದ್ರ ಅವರನ್ನು ಚಲನಚಿತ್ರದ ಚಿತ್ರೀಕರಣದ ಸಮಯದಲ್ಲಿ ಗುಂಡಿಕ್ಕಿ ಕೊಲ್ಲಲಾಯಿತು.

ವೀರೇಂದ್ರ ಅವರ ನಿಜವಾದ ಹೆಸರು ಸುಭಾಷ್ ಧಡ್ವಾಲ್. ಆದರೆ ಅವರನ್ನು ವೀರೇಂದ್ರ ಸಿಂಗ್ ಎಂದು ಕರೆಯಲಾಗುತ್ತಿತ್ತು. ಧರ್ಮೇಂದ್ರ ಮತ್ತು ವೀರೇಂದ್ರ ಬಗ್ಗೆ ಹೇಳುವುದಾದರೆ , ಇಬ್ಬರೂ ಸೋದರಸಂಬಂಧಿ ಸಹೋದರರು. ಧರ್ಮೇಂದ್ರ ವೀರೇಂದ್ರ ಸಿಂಗ್ ಅವರೊಂದಿಗೆ ಕೆಲಸ ಮಾಡಿದ್ದರು. ವೀರೇಂದ್ರ ಇಂದು ಜೀವಂತವಾಗಿದ್ದರೆ, ಬಾಲಿವುಡ್‌ನ ಹಿರಿಯ ನಟರ ಪಟ್ಟಿಯಲ್ಲಿ ಅವರ ಹೆಸರೂ ಅಗ್ರಸ್ಥಾನದಲ್ಲಿರುತ್ತಿತ್ತು.

ವೀರೇಂದ್ರ ಸಿಂಗ್ 1975 ರಲ್ಲಿ ನಟನೆಗೆ ಪಾದಾರ್ಪಣೆ ಮಾಡಿದರು. ಅವರು ಪಂಜಾಬಿ ಚಿತ್ರ ‘ತೇರಿ ಮೇರಿ ಏಕ್ ಜಿಂದಾಡಿ’ ಮೂಲಕ ನಟನೆಗೆ ಆರಂಭಿಸಿದರು. ಅದರ ನಂತರ, ಅವರು ಹಿಂತಿರುಗಿ ನೋಡಲಿಲ್ಲ. ‘ಬಂಟ್ವಾರ’, ‘ಬಲ್ಬಿರೋ ಭಾಭಿ’, ‘ದುಷ್ಮಣಿ ದಿ ಆಗ್’ ಮುಂತಾದ ಹಲವು ಚಿತ್ರಗಳಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದರು..

ಅದಾದ ನಂತರ, ವೀರೇಂದ್ರ ಹಿಂದಿ ಚಲನಚಿತ್ರೋದ್ಯಮಕ್ಕೂ ಪಾದಾರ್ಪಣೆ ಮಾಡಿದರು. ವೀರೇಂದ್ರ ಕೇವಲ ನಟನೆಗೆ ಸೀಮಿತವಾಗದೆ, ನಿರ್ದೇಶನದತ್ತಲೂ ಗಮನ ಹರಿಸಿದರು. ವೀರೇಂದ್ರ ತಮ್ಮ 12 ವರ್ಷಗಳ ವೃತ್ತಿಜೀವನದಲ್ಲಿ 25 ಚಲನಚಿತ್ರಗಳನ್ನು ಮಾಡಿದ್ದಾರೆ. ಅವರು ಕೇವಲ ಚಲನಚಿತ್ರಗಳನ್ನು ಮಾತ್ರ ಮಾಡಲಿಲ್ಲ, ಆದರೆ ಅವರ ಚಲನಚಿತ್ರಗಳು ಸಹ ಹಿಟ್ ಆದವು.

ಇದನ್ನೂ ಓದಿ: ಧರ್ಮೇಂದ್ರ ಆಸ್ಪತ್ರೆಯಲ್ಲಿದ್ದಾಗ ನಮಗೆ ಕಿರುಕುಳ ಆಗಿದೆ; ಹೇಮಾ ಮಾಲಿನಿ ಆರೋಪ

ಡಿಸೆಂಬರ್ 1988 ರಲ್ಲಿ, ವೀರೇಂದ್ರ ಲುಧಿಯಾನದಲ್ಲಿ ತಮ್ಮ ಮುಂಬರುವ ಚಿತ್ರ ‘ಜಟ್ ತೆ ಜಮೀನ್’ ಚಿತ್ರೀಕರಣದಲ್ಲಿದ್ದರು. ಇದ್ದಕ್ಕಿದ್ದಂತೆ, ಅವರ ಮೇಲೆ ಗುಂಡು ಹಾರಿಸಿ ಕೊಲ್ಲಲಾತಿತು. ವೀರೇಂದ್ರ ಅವರ ಮರಣದ ನಂತರ, ಉದ್ಯಮದಲ್ಲಿ ಶೋಕ ಕವಿದಿತ್ತು. ವೀರೇಂದ್ರ ಅವರನ್ನು ಕೊಲೆ ಮಾಡಿದಾಗ ಅವರಿಗೆ ಕೇವಲ 40 ವರ್ಷ ವಯಸ್ಸಾಗಿತ್ತು. ವೀರೇಂದ್ರ ಅವರ ಹತ್ಯೆಯ ನಿಗೂಢತೆ ಇಂದಿಗೂ ಬೆಳಕಿಗೆ ಬಂದಿಲ್ಲ. ಮೂಲಗಳ ಪ್ರಕಾರ, ಜನಪ್ರಿಯತೆಯು ವೀರೇಂದ್ರ ಅವರ ಜೀವವನ್ನು ಬಲಿ ತೆಗೆದುಕೊಂಡಿತು.

ಧರ್ಮೇಂದ್ರ ಕೂಡ ತಮ್ಮ 89 ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದರು. ಧರ್ಮೇಂದ್ರ ನವೆಂಬರ್ 24, 2025 ರಂದು ನಿಧನರಾದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Exit mobile version