Bengaluru Air Quality: ಮಂಗಳೂರಿನಲ್ಲೂ ಅನಾರೋಗ್ಯಕರವಾಗಿದೆ ವಾಯು ಗುಣಮಟ್ಟ! – Kannada News | Bangalore Air Pollution Crisis: Mangalore Air quality gets worse, Bengaluru AQI is slightly better

ಮಂಗಳೂರಿನಲ್ಲೂ ಅನಾರೋಗ್ಯಕರವಾಗಿದೆ ವಾಯು ಗುಣಮಟ್ಟ!
Image Credit source: MediaForge AI

ಬೆಂಗಳೂರು, ಏಪ್ರಿಲ್ 27: ರಾಜ್ಯದ ಏರ್ ಕ್ವಾಲಿಟಿಯಲ್ಲಿ (Bengaluru Air Quality) ಹಲವು ದಿನಗಳಿಂದ ಸುಧಾರಣೆ ಕಂಡಿತ್ತು. ಆದರೆ ಇಂದು ಮೊದಲಿನಂತೆಯೇ ಬಳ್ಳಾರಿಯ ಜೊತೆಗೆ ಮಂಗಳೂರಿನ ಏರ್ ಕ್ವಾಲಿಟಿ ಕುಸಿದಿದ್ದು, ಆತಂಕಕಾರಿ ಮಟ್ಟ ತಲುಪಿದೆ. ಜೊತೆಗೆ ಉಡುಪಿಯ ಗಾಳಿಯೂ ಉಸಿರಾಟಕ್ಕೆ ಯೋಗ್ಯವಲ್ಲದ ಹಂತದಲ್ಲಿದೆ ಎಂದು ಹೇಳಲಾಗುತ್ತಿದೆ. ಬೆಂಗಳೂರಿನ AQI ಸಧ್ಯಕ್ಕೆ ಒಳ್ಳೆಯ ಮಟ್ಟದಲ್ಲಿದ್ದು, ಆದರೂ ಬೆಂಗಳೂರಿನ ವಾಯು ಗುಣಮಟ್ಟ ಅನಾರೋಗ್ಯಕರ ಮಟ್ಟದಲ್ಲಿಯೆ ಇದೆ ಎಂದು ತಜ್ಞರು ತಿಳಿಸಿದ್ದಾರೆ.

ಮಂಗಳೂರಿನಲ್ಲಿ ಕೆಲ ತಿಂಗಳ ಹಿಂದೆ ವಾಯು ಗುಣಮಟ್ಟ ಅಪಾಯಕಾರಿ ಮಟ್ಟಕ್ಕೆ ಇಳಿದಿತ್ತು. ಹಲವು ಬಾರಿ 200ರ ಗಡಿ ತಲುಪಿತ್ತು. ಆದರೆ ಇತ್ತೀಚೆಗೆ AQI ಸುಧಾರಣೆ ಕಂಡುಬಂದಿತ್ತು. ಇದೀಗ ಮತ್ತೊಮ್ಮೆ ಜಿಲ್ಲೆಯ ವಾಯು ಗುಣಮಟ್ಟ ಕಳಪೆಯಾಗಿದ್ದು, 150ಕ್ಕೂ ಹೆಚ್ಚಿದೆ. ಕೆಲ ದಿನಗಳ ಹಿಂದೆಯಷ್ಟೇ ತೀವ್ರ ಕಳಪೆ ಮಟ್ಟಕ್ಕೆ ಇಳಿದಿದ್ದ ಬೆಂಗಳೂರಿನ ಏರ್ ಕ್ವಾಲಿಟಿ ಇಂದು 131ಕ್ಕೆ ತಲುಪಿದೆ. ಮಂಗಳೂರು ಮತ್ತು ಉಡುಪಿಯ AQI 100ಕ್ಕಿಂತ ಹೆಚ್ಚಿದ್ದು, ಅನಾರೋಗ್ಯಕರ ಮಟ್ಟದಲ್ಲಿದೆ. ಬೆಂಗಳೂರಿನ AQI ಇನ್ನೂ ಆರೋಗ್ಯಕ್ಕೆ ಮಾರಕವಾಗಿಯೇ ಇದೆ. ಕಳೆದ ಕೆಲ ದಿನಗಳಿಗೆ ಹೋಲಿಸಿದರೆ ಅಂಕೆಗಳಲ್ಲಿ ಸಣ್ಣ ಏರುಪೇರು ಕಂಡರೂ, WHO ಮಾನದಂಡಗಳ ಪ್ರಕಾರ ಈ ಮಟ್ಟದ ಗಾಳಿಯ ಗುಣಮಟ್ಟ ಆರೋಗ್ಯಕ್ಕೆ ಹಾನಿಕರವಾಗಿಯೇ ಉಳಿದಿದೆ.

ರಾಜ್ಯದ ಇತರ ನಗರದಲ್ಲಿ ಇಂದಿನ ಗಾಳಿಯ ಗುಣಮಟ್ಟ (Air Quality Index)

  • ಬೆಂಗಳೂರು – 131
  • ಮಂಗಳೂರು-142
  • ಮೈಸೂರು – 121
  • ಬೆಳಗಾವಿ – 78
  • ಕಲಬುರ್ಗಿ-121
  • ಶಿವಮೊಗ್ಗ –126
  • ಬಳ್ಳಾರಿ – 158
  • ಹುಬ್ಬಳ್ಳಿ- 94
  • ಉಡುಪಿ –133
  • ವಿಜಯಪುರ – 93

ಗಾಳಿ ಗುಣಮಟ್ಟ ತಿಳಿಯುವುದು ಹೇಗೆ?

  • ಉತ್ತಮ- 0-50
  • ಮಧ್ಯಮ – 50-100
  • ಕಳಪೆ – 100-150
  • ಅನಾರೋಗ್ಯಕರ – 150-200
  • ಗಂಭೀರ – 200 – 300
  • ಅಪಾಯಕಾರಿ – 300 -500+

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕೋರ್ಟ್​ನಲ್ಲಿ ಪತಿಯ ಅಕ್ಕನನ್ನೇ ಆತನ ಎರಡನೇ ಹೆಂಡತಿ ಎಂದು ಬಿಂಬಿಸಿ ಪತಿಗೆ ಗೊತ್ತಿಲ್ಲದಂತೆ ವಿಚ್ಛೇದನ ಪಡೆದ ಚಾಲಾಕಿ ಪತ್ನಿ – Kannada News | Shocking Gwalior Divorce: Wife Deceived Court Using Sister in Law as Second Wife

ಗ್ವಾಲಿಯರ್, ಏಪ್ರಿಲ್ 27: ಸುಮಾರು 27 ವರ್ಷಗಳ ದಾಂಪತ್ಯ ಜೀವನದ ನಂತರ ವಿಚ್ಛೇದನ(Divorce) ಪಡೆಯಲು ಮಹಿಳೆಯೊಬ್ಬಳು ಅನುಸರಿಸಿದ ದಾರಿ ಕೇಳಿದರೆ ನ್ಯಾಯಮೂರ್ತಿಗಳೇ ದಂಗಾಗುವಂತಿದೆ. ತನ್ನ ಪತಿಯ ಅಕ್ಕನನ್ನೇ (ಅತ್ತಿಗೆ) ಎರಡನೇ ಹೆಂಡತಿ ಎಂದು ಬಿಂಬಿಸಿ ಆಕೆ ಏಕಪಕ್ಷೀಯ ವಿಚ್ಛೇದನ ಪಡೆಯುವಲ್ಲಿ ಯಶಸ್ವಿಯಾಗಿದ್ದಾಳೆ. 1998ರಲ್ಲಿ ವಿವಾಹವಾಗಿದ್ದ ಈ ದಂಪತಿ ನಡುವೆ 2015ರಿಂದ ಭಿನ್ನಾಭಿಪ್ರಾಯ ಶುರುವಾಗಿತ್ತು. ಮಾರ್ಕೆಟಿಂಗ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಪತಿ ಕೆಲಸದ ನಿಮಿತ್ತ ಹೊರಗಡೆ ಇರುತ್ತಿದ್ದರಿಂದ ಜಗಳಗಳು ಹೆಚ್ಚಾಗಿ, ಪತ್ನಿ ತನ್ನ ಪತಿಯಿಂದ ದೂರ ವಾಸಿಸುತ್ತಿದ್ದರು. ಆದರೆ ಪತಿ ಮಾತ್ರ ವಿಚ್ಛೇದನ ನೀಡಲು ಒಪ್ಪಿರಲಿಲ್ಲ.

2021ರಲ್ಲಿ ವಿಚ್ಛೇದನ ಪಡೆಯಲೇಬೇಕೆಂದು ನಿರ್ಧರಿಸಿದ ಮಹಿಳೆ ಕೌಟುಂಬಿಕ ನ್ಯಾಯಾಲಯದ ಮೊರೆ ಹೋದರು. ತನ್ನ ಪತಿ ಮರುಮದುವೆಯಾಗಿದ್ದಾನೆ ಎಂದು ಸುಳ್ಳು ಆರೋಪ ಮಾಡಿದ್ದಲ್ಲದೆ, ಅದಕ್ಕೆ ಸಾಕ್ಷಿಯಾಗಿ ಒಂದು ಕೌಟುಂಬಿಕ ಫೋಟೋವನ್ನು ಸಲ್ಲಿಸಿದರು. ಆ ಫೋಟೋದಲ್ಲಿ ತನ್ನ ಪತಿಯ ಪಕ್ಕದಲ್ಲಿ ನಿಂತಿದ್ದ ಆತನ ಸ್ವಂತ ಸಹೋದರಿಯನ್ನೇ ಪತಿಯ ಎರಡನೇ ಹೆಂಡತಿ ಎಂದು ನ್ಯಾಯಾಲಯಕ್ಕೆ ಸುಳ್ಳು ಮಾಹಿತಿ ನೀಡಿದರು.

ಪತ್ನಿ ಸಲ್ಲಿಸಿದ ಫೋಟೋ ಸಾಕ್ಷ್ಯ ಮತ್ತು ಮಾಹಿತಿಯನ್ನು ನಿಜವೆಂದು ನಂಬಿದ ನ್ಯಾಯಾಲಯವು ಪತಿಯ ಅನುಪಸ್ಥಿತಿಯಲ್ಲಿ ಏಕಪಕ್ಷೀಯವಾಗಿ ವಿಚ್ಛೇದನ ಮಂಜೂರು ಮಾಡಿತು. ಪತಿಗೆ ಈ ವಿಷಯದ ಬಗ್ಗೆ ಕಿಂಚಿತ್ತೂ ಸುಳಿವಿರಲಿಲ್ಲ.

ಮತ್ತಷ್ಟು ಓದಿ: ಬೆಂಗಳೂರಿನಲ್ಲಿ ಶೂಟೌಟ್: ವಿಚ್ಛೇದನ ಕೋರ್ಟ್​​​​​ನಲ್ಲಿರುವಾಗಲೇ ಹೆಂಡ್ತಿಯನ್ನ ಗುಂಡಿಕ್ಕಿ ಕೊಂದ ಪತಿ

ಏಪ್ರಿಲ್ ಮೊದಲ ವಾರದಲ್ಲಿ ಪತಿಗೆ ತನ್ನ ವಿಚ್ಛೇದನದ ಆದೇಶದ ಪ್ರತಿ ಸಿಕ್ಕಾಗ ಆತ ಹೌಹಾರಿ ಹೋಗಿದ್ದ. ಕೂಡಲೇ ನ್ಯಾಯಾಲಯದ ದಾಖಲೆಗಳನ್ನು ಪರಿಶೀಲಿಸಿದಾಗ, ತನ್ನ ಪತ್ನಿ ತನ್ನದೇ ಅಕ್ಕನ ಫೋಟೋ ಬಳಸಿ ವಂಚಿಸಿರುವುದು ಬೆಳಕಿಗೆ ಬಂದಿದೆ. ಈ ವಂಚನೆಯ ವಿರುದ್ಧ ಈಗ ಪತಿ ಗ್ವಾಲಿಯರ್ ಹೈಕೋರ್ಟ್ ಮೆಟ್ಟಿಲೇರಿದ್ದು, ವಿಚ್ಛೇದನ ತೀರ್ಪನ್ನು ರದ್ದುಗೊಳಿಸುವಂತೆ ಮನವಿ ಮಾಡಿದ್ದಾರೆ.

ಒಟ್ಟಾರೆಯಾಗಿ, ವಿಚ್ಛೇದನಕ್ಕಾಗಿ ರಕ್ತ ಸಂಬಂಧವನ್ನೇ ದಾಳವಾಗಿ ಬಳಸಿಕೊಂಡ ಈ ಪ್ರಕರಣವು ಕಾನೂನು ವ್ಯವಸ್ಥೆಯಲ್ಲಿನ ಲೋಪದೋಷಗಳ ಮೇಲೆ ಬೆಳಕು ಚೆಲ್ಲಿದೆ. ಹೈಕೋರ್ಟ್ ಈಗ ಈ ವಂಚನೆಯನ್ನು ಹೇಗೆ ಪರಿಗಣಿಸುತ್ತದೆ ಮತ್ತು ಮಹಿಳೆಯ ವಿರುದ್ಧ ಯಾವ ಕ್ರಮ ಕೈಗೊಳ್ಳುತ್ತದೆ ಎಂಬುದು ಕುತೂಹಲ ಮೂಡಿಸಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಕನ್ನಿಡಗರೇ ಮಾಡಿದ ಸಸ್ಪೆನ್ಸ್ ಥ್ರಿಲ್ಲರ್ ಸರಣಿಯನ್ನು ಮಿಸ್ ಮಾಡಲೇಬೇಡಿ; ಪ್ರತಿ ಹಂತದಲ್ಲೂ ಟ್ವಿಸ್ಟ್ – Kannada News | Pochamma Web Series Review Ratin And Cast: Kannada Produced Telugu Suspense Thriller Hits Aha OTT

ಒಟಿಟಿ ವ್ಯಾಪ್ತಿ ಹೆಚ್ಚಿದ ಬಳಿಕ ವೆಬ್ ಸೀರಿಸ್​ಗಳ ನಿರ್ಮಾಣ ಹೆಚ್ಚಿದೆ. ಹೊಸ ಹೊಸ ಸೀರಿಸ್​​ಗಳನ್ನು ಪ್ರೇಕ್ಷಕರ ಎದುರು ತರಲಾಗುತ್ತಿದೆ. ಸಸ್ಪೆನ್ಸ್​, ಥ್ರಿಲ್ಲರ್, ರೊಮ್ಯಾಂಟಿಕ್ ಸೇರಿದಂತೆ ಅನೇಕ ವೆಬ್​ ಸೀರಿಸ್​​ಗಳ ನಿರ್ಮಾಣ ಆಗಿದೆ. ಈಗ ‘ಅಯ್ಯನ ಮನೆ’ ತಂಡದವರು ತೆಲುಗಿನಲ್ಲಿ ‘ಪೋಚಮ್ಮ’ ಹೆಸರಿನ ವೆಬ್ ಸೀರಿಸ್ ಮಾಡಿದ್ದಾರೆ. ಈ ಸೀರಿಸ್ ಗಮನ ಸೆಳೆದಿದೆ. ಇದರ ಬಗ್ಗೆ ಪಾಸಿಟಿವ್ ವಿಮರ್ಶೆ ಸಿಕ್ಕಿದೆ.

ಪೋಚಮ್ಮ ಎಂದರೆ ಆಂಧ್ರ ಹಾಗೂ ತೆಲಂಗಾಣ ಭಾಗದಲ್ಲಿ ಆರಾಧಿಸುವ ಗ್ರಾಮದೇವತೆ. ಇಡೀ ಸರಣಿ ಇದರ ಸುತ್ತವೇ ಸಾಗುತ್ತದೆ. ಈ ಸರಣಿಯನ್ನು ಶ್ರುತಿ ನಾಯ್ಡು ನಿರ್ಮಾಣ ಮಾಡಿದರೆ ರಮೇಶ್ ಇಂದಿರ ನಿರ್ದೇಶನ ಮಾಡಿದ್ದಾರೆ. ರಮೇಶ್ ಇಂದಿರ, ಅರ್ಜುನ್, ಸ್ನೇಹಲ್ ಕಾಮತ್, ಅಚ್ಯುತ್ ಕುಮಾರ್ ಮೊದಲಾದವರು ಇದರಲ್ಲಿ ನಟಿಸಿದ್ದಾರೆ.

ಅದೊಂದು ದೊಡ್ಡದಾದ ಎಸ್ಟೇಟ್. ಕಾಫಿ ಗಿಡಗಳ ಮಧ್ಯೆ ಭವ್ಯವಾದ ಮನೆ. ಇದನ್ನು ಫ್ರೆಡ್ರಿಕ್ (ರಮೇಶ್ ಇಂದಿರ) ಖರೀದಿ ಮಾಡುತ್ತಾನೆ. ಆತ ಕ್ರೈಸ್ತ ಧರ್ಮಕ್ಕೆ ಸೇರಿದವನು. ಹೀಗಾಗಿ, ಮನೆಯ ಎದುರು ಇರುವ ಪೋಚಮ್ಮ ದೇವರ ಮೂರ್ತಿಯನ್ನು ಕಿತ್ತೆಸೆಯುತ್ತಾನೆ. ಇದನ್ನು ರಘುಪತಿ (ಅಚ್ಯುತ್ ಕುಮಾರ್) ತಡೆಯಲು ಪ್ರಯತ್ನಿಸುತ್ತಾನೆ. ಆ ಬಳಿಕ ಶುರುವಾಗುತ್ತದೆ ನೋಡಿ ತೊಂದರೆಗಳು. ಫ್ರೆಡ್ರಿಕ್ ಮಗಳು ಜೆಸ್ಸಿ (ಸ್ನೇಹಲ್ ಕಾಮತ್) ಸಾಯುತ್ತಾಳೆ. ಈ ರೀತಿಯ ಅನೇಕ ಸಮಸ್ಯೆ ಎದುರಾಗುತ್ತದೆ.

ಈ ವೆಬ್ ಸೀರಿಸ್​ನ ದೊಡ್ಡ ಪ್ಲಸ್ ಪಾಯಿಂಟ್ ಎಂದರೆ ಅದು ಕಥೆ ಸಾಗುವ ವೇಗ. ನಿರ್ದೇಶಕ ರಮೇಶ್ ಇಂದಿರಾ ಅವರು ಕಥೆಯನ್ನು ಆರಂಭದಿಂದಲೇ ಬಿಗಿಯಾಗಿ ಮತ್ತು ಆಸಕ್ತಿದಾಯಕವಾಗಿ ಹೇಳುತ್ತಾ ಹೋಗುತ್ತಾರೆ. ಅನಗತ್ಯ ನಿರೂಪಣೆ ಇಲ್ಲದೆ ಸರಣಿ ಸಾಗುತ್ತದೆ. ಕೆಲವು ವೆಬ್​ ಸೀರಿಸ್​​ಗಳಲ್ಲಿ ವೆಬ್ ಸರಣಿಯ ಅವಧಿ ಹೆಚ್ಚಿಸುವ ಉದ್ದೇಶದಿಂದ ಕಥೆಯನ್ನು ಎಳೆಯಲಾಗುತ್ತದೆ. ಆದರೆ, ಇಲ್ಲಿ ಅದಕ್ಕೆ ಜಾಗ ಇಲ್ಲ. 20-25 ನಿಮಿಷಗಳ ಕೇವಲ 5 ಎಪಿಸೋಡ್​​ಗಳು ಇದರಲ್ಲಿವೆ. ಇದು ಸರಣಿಯ ದೊಡ್ಡ ಪ್ಲಸ್ ಪಾಯಿಂಟ್. ಕೊನೆಯವರೆಗೂ ಕೌತುಕ ಹಾಗೆಯೇ ಇರುತ್ತದೆ. ಚಿತ್ರದ ಕೆಲವು ತಿರುವುಗಳನ್ನು ಸುಲಭವಾಗಿ ಊಹಿಸಬಹುದು. ಕೆಲವು ದೃಶ್ಯಗಳಿಗೆ ಸರಿಯಾದ ಸಮರ್ಥನೆ ಕೊಟ್ಟಿಲ್ಲ ಎನಿಸುತ್ತದೆ.

ಇದನ್ನೂ ಓದಿ: ಜನರನ್ನೇ ಜೆರಾಕ್ಸ್ ಮಾಡುವ ಯಂತ್ರದೊಳಗೆ ಇದೆ ಸಖತ್ ಸಸ್ಪೆನ್ಸ್

ಅಂತಿಮವಾಗಿ ತಪ್ಪಿತಸ್ಥ ಯಾರು? ಈ ಪ್ರಕರಣದ ಕ್ಲೈಮ್ಯಾಕ್ಸ್​​ನಲ್ಲಿ ಏನಾಗುತ್ತದೆ ಎಂಬುದನ್ನು ನೋಡಲು ‘ಪೋಚಮ್ಮ’ ಸರಣಿ ನೋಡಿ. ‘ಆಹ’ ಒಟಿಟಿಯಲ್ಲಿ ಈ ಸರಣಿ ವೀಕ್ಷಣೆಗೆ ಲಭ್ಯ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

RCB vs DC ಪಂದ್ಯಕ್ಕೆ 6 ಆಟಗಾರರು ಅಲಭ್ಯ..! – Kannada News | Ipl 2026 unavailable players for rcb vs dc match

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನ 39ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಹಾಗೂ ಡೆಲ್ಲಿ ಕ್ಯಾಪಿಟಲ್ಸ್ (DC) ತಂಡಗಳು ಮುಖಾಮುಖಿಯಾಗಲಿವೆ. ದೆಹಲಿಯ ಅರುಣ ಜೇಟ್ಲಿ ಮೈದಾನದಲ್ಲಿ ನಡೆಯಲಿರುವ ಈ ಪಂದ್ಯಕ್ಕೆ 6 ಆಟಗಾರರು ಅಲಭ್ಯರಾಗಲಿದ್ದಾರೆ. ಅವರೆಂದರೆ…

Source link

ಕನ್ನಡಕ್ಕೆ ಎಂಟ್ರಿ ಕೊಡೋದಕ್ಕೂ ಮೊದಲೇ ಮದುವೆಯಾದ ನಟಿ ಮೆಹ್ರೀನ್ ಫಿರ್ಜಾದಾ – Kannada News | Mehreen Pirzada Married! Tollywood Actress Ties Knot with Weds Arsh Aulakh Before Kannada Film Debut

ಪಂಜಾಬ್ ಮೂಲದ ಮೆಹ್ರೀನ್, ನಾನಿ ನಾಯಕನಾಗಿ ನಟಿಸಿದ ‘ಕೃಷ್ಣಗಡಿ ವೀರಪ್ರೇಮಗಧ’ ಚಿತ್ರದ ಮೂಲಕ ದೊಡ್ಡ ಪರದೆಗೆ ಕಾಲಿಟ್ಟರು. ‘ಮಹಾನುಭಾವಡು’, ‘ರಾಜಾ ದಿ ಗ್ರೇಟ್’, ‘ಎಫ್2’, ‘ಎಫ್3’ ನಂತಹ ಹಿಟ್ ಚಿತ್ರಗಳಲ್ಲಿ ನಟಿಸುವ ಮೂಲಕ ತಮ್ಮದೇ ಆದ ಛಾಪು ಮೂಡಿಸಿದರು.

Source link

ಸಿಇಟಿ ಪರೀಕ್ಷೆ: ಜನಿವಾರ ತೆಗೆಸಿದ ವಿದ್ಯಾರ್ಥಿಗಳಿಗೆ ಗ್ರೇಸ್ ಮಾರ್ಕ್ಸ್ ನೀಡಲು ಒತ್ತಾಯ – Kannada News | Karnataka CET Row: Brahmin Mahasabha Demands Grace Marks for Students Forced to Remove Sacred Thread Janivara

ಜನಿವಾರ ವಿವಾದ (ಸಾಂದರ್ಭಿಕ ಚಿತ್ರ)Image Credit source: tv9

ಬೆಂಗಳೂರು, ಏಪ್ರಿಲ್ 27: ರಾಜ್ಯದಲ್ಲಿ ಸಿಇಟಿ (KCET) ಪರೀಕ್ಷೆಯ ವೇಳೆ ವಿದ್ಯಾರ್ಥಿಗಳ ಜನಿವಾರ (Janivara) ತೆಗೆಸಿರುವುದು ಈಗ ದೊಡ್ಡ ಮಟ್ಟದ ವಿವಾದಕ್ಕೆ ಕಾರಣವಾಗಿದೆ. ಈ ಘಟನೆಯಿಂದ ವಿದ್ಯಾರ್ಥಿಗಳು ಪರೀಕ್ಷೆ ಸಮಯದಲ್ಲಿ ಮಾನಸಿಕವಾಗಿ ಆಘಾತಕ್ಕೊಳಗಾಗಿದ್ದು, ಅವರಿಗೆ ನ್ಯಾಯ ಒದಗಿಸಲು ‘ಗ್ರೇಸ್ ಮಾರ್ಕ್ಸ್’ ನೀಡಬೇಕು ಅಥವಾ ‘ಮರು ಪರೀಕ್ಷೆ’ ನಡೆಸಬೇಕು ಎಂಬ ಒತ್ತಾಯ ಕೇಳಿಬಂದಿದೆ. ಸಿಇಟಿ ಪರೀಕ್ಷೆಯ ಮೊದಲ ದಿನವೇ ಭೌತಶಾಸ್ತ್ರ (Physics) ಪರೀಕ್ಷೆಯ ವೇಳೆ ಹಲವು ಕೇಂದ್ರಗಳಲ್ಲಿ ವಿದ್ಯಾರ್ಥಿಗಳ ಜನಿವಾರವನ್ನು ಬಲವಂತವಾಗಿ ತೆಗೆಸಲಾಗಿದೆ. ಈ ಕೃತ್ಯವು ವಿದ್ಯಾರ್ಥಿಗಳ ಮನಸ್ಸಿನ ಮೇಲೆ ತೀವ್ರ ಪ್ರಭಾವ ಬೀರಿದೆ ಎಂದು ಬ್ರಾಹ್ಮಣ ಮಹಾಸಭಾ ಹೇಳಿದೆ.

ಜನಿವಾರ ತೆಗೆಸಿದ ಆಘಾತ ಮತ್ತು ಒತ್ತಡದಲ್ಲಿ ವಿದ್ಯಾರ್ಥಿಗಳು ಪರೀಕ್ಷೆಯನ್ನು ಸರಿಯಾಗಿ ಬರೆಯಲು ಸಾಧ್ಯವಾಗಿಲ್ಲ. ಇದು ಅವರ ರ್ಯಾಂಕಿಂಗ್ ಮೇಲೆ ಹೊಡೆತ ಬೀಳಲಿದೆ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ರಘುನಾಥ್ ಆತಂಕ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಸರ್ಕಾರ ಮತ್ತು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ (KEA) ಮನವಿ ಸಲ್ಲಿಸಲಾಗಿದೆ.

ಶಾಸಕ ಸುರೇಶ್ ಕುಮಾರ್ ಬೇಸರ

ಘಟನೆ ಕುರಿತು ಪ್ರತಿಕ್ರಿಯಿಸಿರುವ ರಾಜಾಜಿನಗರ ಶಾಸಕ ಸುರೇಶ್ ಕುಮಾರ್, ಪರೀಕ್ಷಾ ಕೇಂದ್ರಗಳಲ್ಲಿ ಸಿಬ್ಬಂದಿ ದೌರ್ಜನ್ಯ ಎಸಗುತ್ತಿದ್ದಾರೆ. ಜನಿವಾರ ಕತ್ತರಿಸುವುದು, ಕಿವಿಯೋಲೆ ತೆಗೆಸುವುದು ಮಕ್ಕಳ ಮೇಲೆ ಅನಗತ್ಯ ಒತ್ತಡ ಹೇರುತ್ತದೆ. ಕಳೆದ ವರ್ಷವೇ ಹೈಕೋರ್ಟ್‌ನಲ್ಲಿ ಇಂತಹ ಘಟನೆ ಮರುಕಳಿಸದಂತೆ ಸರ್ಕಾರ ಭರವಸೆ ನೀಡಿತ್ತು. ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ಅವರು ಈ ಕೂಡಲೇ ಮಧ್ಯಪ್ರವೇಶಿಸಿ ಜನಿವಾರದ ಬಗ್ಗೆ ಸ್ಪಷ್ಟವಾದ ಎಸ್‌ಒಪಿ (SOP) ರೂಪಿಸಬೇಕು ಎಂದು ಆಗ್ರಹಿಸಿದ್ದಾರೆ.

ಪ್ರತಿಭಟನೆಗೆ ಸಜ್ಜಾದ ಬ್ರಾಹ್ಮಣ ಮಹಾಸಂಘ

ಜನಿವಾರ ತೆಗೆಸಿರುವುದು ಬ್ರಾಹ್ಮಣ ಸಮುದಾಯದ ಧಾರ್ಮಿಕ ಹಕ್ಕು ಮತ್ತು ಸಂಸ್ಕೃತಿಗೆ ಧಕ್ಕೆ ತಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ಅಖಿಲ ಭಾರತೀಯ ಬ್ರಾಹ್ಮಣ ಮಹಾಸಂಘ, ನಾಳೆ ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನೆಗೆ ಮುಂದಾಗಿದೆ. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಸಂತ್ರಸ್ತ ವಿದ್ಯಾರ್ಥಿಗಳಿಗೆ ಕೃಪಾಂಕ (Grace Marks) ನೀಡಬೇಕು ಎಂಬುದು ಅವರ ಪ್ರಮುಖ ಬೇಡಿಕೆಯಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕರ್ನಾಟಕ ಹವಾಮಾನ ವರದಿ: ಕರಾವಳಿಯಲ್ಲಿ ಉಷ್ಣ ಅಲೆಯ ಜೊತೆಗೆ ಗುಡುಗು ಸಹಿತ ಮಳೆಯ ಅಬ್ಬರ! – Kannada News | Karnataka Weather Forecast: Heatwave in Coastal and Thunderstorm in North interior Karnataka

ಕರಾವಳಿಯಲ್ಲಿ ಉಷ್ಣ ಅಲೆಯ ಜೊತೆಗೆ ಗುಡುಗು ಸಹಿತ ಮಳೆಯ ಅಬ್ಬರ!
Image Credit source: MediaForge AI

ಬೆಂಗಳೂರು, ಏಪ್ರಿಲ್ 27: ಇಂದು ಕರಾವಳಿಯಲ್ಲಿ ಎಂದಿನಂತೆ ಉಷ್ಣ ಅಲೆಯ ಆರ್ಭಟವಿರಲಿದ್ದು (Karnataka Weather)  ಜೊತೆಗೆ ರಾಜ್ಯದ ಹಲವೆಡೆ ಗುಡುಗು ಸಹಿತ ಆಲಿಕಲ್ಲು ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮುಂಬರುವ ದಿನಗಳಲ್ಲಿ ರಾಜ್ಯದಲ್ಲಿ ತಾಪಮಾನ 45 ಡಿಗ್ರಿ ಸೆಲ್ಸಿಯಸ್​ಗೆ ಏರುವ ಸಾಧ್ಯತೆಯಿದೆ. ಹೀಗಾಗಿ ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ ಅನಗತ್ಯವಾಗಿ ಹೊರಗೆ ಬರಬೇಡಿ, ಹೆಚ್ಚು ನೀರು ಸೇವಿಸಿ ಎಂದು ವೈದ್ಯರು ಸಲಹೆ ನೀಡಿದ್ದಾರೆ.

ರಾಜ್ಯದಲ್ಲಿ ಗುಡುಗು ಸಹಿತ ಮಳೆ

ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ, ಹಾವೇರಿ, ಗದಗ, ಕಲಬುರ್ಗಿ, ಯಾದಗಿರಿ, ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗಲಿದೆ. ಉಳಿದೆಡೆ ಒಣ ಹವೆಯಿರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಜೊತೆಗೆ 30-40 ಕಿ. ಮೀ ವೇಗದಲ್ಲಿ ಗಾಳಿಯೂ ಬೀಸಲಿದೆ ಎಂದು ಇಲಾಖೆ ತಿಳಿಸಿದೆ. ದಕ್ಷಿಣ ಒಳನಾಡಿನ ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು, ಹಾಸನ ಮತ್ತು ಮೈಸೂರು ಜಿಲ್ಲೆ ಸೇರಿದಂತೆ ಉಳಿದೆಲ್ಲ ಜಿಲ್ಲೆಗಳಲ್ಲಿಯೂ ಗುಡುಗು, ಸಿಡಿಲು ಸಹಿತ ಮಳೆಯಾಗಲಿದೆ ಎಂದು ಇಲಾಖೆ ಮುನ್ಸೂಚನೆ ನೀಡಿದೆ.

ಉಷ್ಣ ಅಲೆ

ಕರಾವಳಿಯ ತಾಪಮಾನದಲ್ಲಿ ಏರುಪೇರಾಗುತ್ತಿದ್ದು, ಬಿಸಿಲ ಬೇಗೆಗೆ ಜನರು ತತ್ತರಿಸಿಹೋಗಿದ್ದಾರೆ. ಇಂದು ಉಡುಪಿ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಹೀಟ್​ ವೇವ್ ಅಲರ್ಟ್​ ಘೋಷಿಸಲಾಗಿದೆ. ಅದರ ಜೊತೆಗೆ ಗುಡುಗು ಸಹಿತ ಗಾಳಿ-ಮಳೆಯಾಗುವ ಸಂಭವವೂ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಮುಂದಿನ 5 ದಿನದವರೆಗೂ ಕರಾವಳಿಯಲ್ಲಿ ಇದೇ ರೀತಿಯ ವಾತಾವರಣವಿರಲಿದೆ ಎಂದು ಇಲಾಖೆ ತಿಳಿಸಿದೆ.

ಉಷ್ಣಾಘಾತದಿಂದ ರಕ್ಷಣೆ ಹೇಗೆ?

ಮುಂಬರುವ ದಿನಗಳಲ್ಲಿ ರಾಜ್ಯದೆಲ್ಲೆಡೆ ತಾಪಮಾನ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಮುನ್ನೆಚ್ಚರಿಕಾ ಕ್ರಮ ವಹಿಸುವಂತೆ ಹವಾಮಾನ ಇಲಾಖೆ ಸೂಚಿಸಿದೆ. ಅವಶ್ಯಕತೆ ಇಲ್ಲದೆ ಮನೆಯಿಂದ ಹೊರಬರುವುದನ್ನು ತಪ್ಪಿಸುಂತೆ ಹೇಳಲಾಗಿದೆ. ಬೇಸಿಗೆ ರಜೆಯಲ್ಲಿ ಮಕ್ಕಳು ಬಿಸಿಲಲ್ಲಿ ಆಟವಾಡುವುದನ್ನು ಆದಷ್ಟು ನಿಯಂತ್ರಿಸುವಂತೆ ಸೂಚಿಸಲಾಗಿದೆ.

ಉಷ್ಣ ಅಲೆ ಹಾಗೂ ಉಷ್ಣಾಘಾತದಿಂದ (ಹೀಟ್ ಸ್ಟ್ರೋಕ್) ರಕ್ಷಿಸಿಕೊಳ್ಳಲು ಆರೋಗ್ಯ ಇಲಾಖೆ ಕೆಲವು ಸಲಹೆ ಸೂಚನೆಗಳನ್ನು ನೀಡಿದೆ. ಮಧ್ಯಾಹ್ನ 12 ರಿಂದ 4 ಗಂಟೆಯವರೆಗೆ ಸೂರ್ಯನ ಬೆಳಕಿಗೆ ನೇರ ಮೈಯೊಡ್ಡುವುದನ್ನು ಆದಷ್ಟು ತಪ್ಪಿಸಿ. ನಿಯಮಿತವಾಗಿ ನೀರು ಕುಡಿಯಿರಿ. ಎಳನೀರು, ಮಜ್ಜಿಗೆ ಅಥವಾ ಮನೆಯಲ್ಲಿ ತಯಾರಿಸಿದ ಹಣ್ಣಿನ ರಸಗಳನ್ನು ಸೇವಿಸಿ. ತಿಳಿ ಬಣ್ಣದ, ಸಡಿಲವಾದ ಹತ್ತಿ ಬಟ್ಟೆಗಳನ್ನು ಧರಿಸಿ. ಹೊರಗೆ ಹೋಗುವಾಗ ಛತ್ರಿ ಅಥವಾ ಟೋಪಿಯನ್ನು ಬಳಸಿ. ಕೆಫೀನ್ (ಕಾಫಿ/ಟೀ) ಮತ್ತು ಹೆಚ್ಚಿನ ಸಕ್ಕರೆಯುಕ್ತ ಪಾನೀಯಗಳ ಸೇವನೆ ಕಡಿಮೆ ಮಾಡಿ, ಇವು ದೇಹವನ್ನು ನಿರ್ಜಲೀಕರಣಗೊಳಿಸುತ್ತವೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅಮೆರಿಕ ಅಧ್ಯಕ್ಷರ ಮೇಲೆ ಭೀಕರ ದಾಳಿಗೆ ಸ್ಕೆಚ್: ‘ಪ್ರಣಾಳಿಕೆ’ ಮೂಲಕ ಹೊರಬಿತ್ತು ಭಯಾನಕ ಸಂಚು – Kannada News | Trump Assassination Plot Foiled: White House Attack Plan Revealed in Manifesto

ವಾಷಿಂಗ್ಟನ್,ಏಪ್ರಿಲ್ 27: ಶ್ವೇತಭವನದ ವರದಿಗಾರರ ಭೋಜನಕೂಟ ನಡೆಯುತ್ತಿದ್ದ ವಾಷಿಂಗ್ಟನ್ ಹಿಲ್ಟನ್ ಹೋಟೆಲ್‌ನಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ಸೇರಿದಂತೆ 2,500ಕ್ಕೂ ಹೆಚ್ಚು ಗಣ್ಯರನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದ ಆರೋಪಿಯನ್ನು ಭದ್ರತಾ ಪಡೆಗಳು ಬಂಧಿಸಿವೆ. ಕ್ಯಾಲಿಫೋರ್ನಿಯಾ ಮೂಲದ 31 ವರ್ಷದ ಕೋಲ್ ಥಾಮಸ್ ಅಲೆನ್ ಎಂಬಾತನೇ ಈ ಸಂಚಿನ ರೂವಾರಿ. ದಾಳಿ ನಡೆಸುವ ಕೇವಲ 10 ನಿಮಿಷಗಳ ಮೊದಲು ಆರೋಪಿ ಅಲೆನ್ ತನ್ನ ಕುಟುಂಬದವರಿಗೆ ಟ್ರಂಪ್ ವಿರೋಧಿ ಪ್ರಣಾಳಿಕೆ ಎಂಬ ದಾಖಲೆಯನ್ನು ಕಳುಹಿಸಿದ್ದ. ಇದರಲ್ಲಿ ಆತ ಅಧ್ಯಕ್ಷ ಟ್ರಂಪ್ ಮತ್ತು ಅವರ ಆಡಳಿತದ ಹಿರಿಯ ಅಧಿಕಾರಿಗಳನ್ನು ಕ್ರಮಾನುಗತವಾಗಿ ಹತ್ಯೆ ಮಾಡುವ ಪಟ್ಟಿಯನ್ನು ಸಿದ್ಧಪಡಿಸಿದ್ದ. ಈ ದಾಖಲೆಯನ್ನು ಕಂಡ ತಕ್ಷಣವೇ ಆತನ ಸಹೋದರ ಪೊಲೀಸರಿಗೆ ಮಾಹಿತಿ ನೀಡುವ ಮೂಲಕ ದೊಡ್ಡ ಅನಾಹುತವನ್ನು ತಪ್ಪಿಸಿದ್ದಾರೆ.

ಅಲೆನ್ ತನ್ನ ಪ್ರಣಾಳಿಕೆಯಲ್ಲಿ ಅತ್ಯಂತ ಕ್ರೂರವಾದ ಮಾತುಗಳನ್ನು ಬರೆದಿದ್ದಾನೆ. ನಾನು ಹೋಟೆಲ್‌ಗೆ ಹಲವಾರು ಶಸ್ತ್ರಾಸ್ತ್ರಗಳೊಂದಿಗೆ ಪ್ರವೇಶಿಸಿದ್ದೀನಿ. ನನ್ನ ಗುರಿಯನ್ನು ತಲುಪಲು ನಾನು ಯಾರನ್ನು ಬೇಕಾದರೂ ಕೊಲ್ಲಲು ಸಿದ್ಧನಿದ್ದೇನೆ ಎಂದು ಅದರಲ್ಲಿ ಬರೆದಿದ್ದ.

ದಾಳಿಕೋರ ಅಲೆನ್ ಹೋಟೆಲ್‌ನ ಭದ್ರತಾ ವ್ಯವಸ್ಥೆಯ ಬಗ್ಗೆಯೂ ಲೇವಡಿ ಮಾಡಿದ್ದಾನೆ. ನಾನು ಶಸ್ತ್ರಾಸ್ತ್ರಗಳೊಂದಿಗೆ ಒಳಗೆ ಬಂದಾಗ ಯಾರೂ ನನ್ನನ್ನು ಪ್ರಶ್ನಿಸಲಿಲ್ಲ. ಭದ್ರತಾ ಸಿಬ್ಬಂದಿಯ ಗಮನವೆಲ್ಲಾ ಹೊರಗಿನ ಪ್ರತಿಭಟನಾಕಾರರ ಮೇಲಿತ್ತೇ ಹೊರತು ಒಳಗಿರುವವರ ಮೇಲಲ್ಲ ಎಂದು ಆತ ತನ್ನ ಪ್ರಣಾಳಿಕೆಯಲ್ಲಿ ಬರೆದಿದ್ದ. ಒಂದು ದಿನ ಮುಂಚಿತವಾಗಿ ಹೋಟೆಲ್‌ಗೆ ಪ್ರವೇಶಿಸಿ ಸಂಚು ರೂಪಿಸಿದ್ದಾಗಿ ಆತ ಒಪ್ಪಿಕೊಂಡಿದ್ದಾನೆ. ಟ್ರಂಪ್ ಮತ್ತು ಅವರ ತಂಡವನ್ನು ಪಟ್ಟಿಯಲ್ಲಿ ಸೇರಿಸಿದ್ದ ಆತ, ಎಫ್‌ಬಿಐ ನಿರ್ದೇಶಕ ಕಾಶ್ ಪಟೇಲ್ ಅವರನ್ನು ಮಾತ್ರ ಗುರಿಯಿಂದ ಹೊರಗಿಟ್ಟಿದ್ದ.

ಮತ್ತಷ್ಟು ಓದಿ: ಟ್ರಂಪ್ ಕಾರ್ಯಕ್ರಮದಲ್ಲಿ ಗುಂಡಿನ ದಾಳಿ, ಪ್ರಜಾಪ್ರಭುತ್ವದಲ್ಲಿ ಹಿಂಸಾಚಾರಕ್ಕೆ ಜಾಗವಿಲ್ಲ: ಪ್ರಧಾನಿ ಮೋದಿ

ಆರೋಪಿಯ ಸಹೋದರ ಕನೆಕ್ಟಿಕಟ್ ಪೊಲೀಸರಿಗೆ ಮಾಹಿತಿ ನೀಡಿದ್ದರಿಂದ ಸೀಕ್ರೆಟ್ ಸರ್ವಿಸ್ ಕ್ಷಿಪ್ರ ಕಾರ್ಯಾಚರಣೆ ನಡೆಸಿತು. ಅಧ್ಯಕ್ಷರು ಕುಳಿತಿದ್ದ ಬಾಲ್ ರೂಂ ತಲುಪುವ ಮೊದಲೇ ಭದ್ರತಾ ತಪಾಸಣಾ ಕೇಂದ್ರದಲ್ಲಿ ಅಲೆನ್‌ನನ್ನು ಸೆರೆಹಿಡಿಯಲಾಯಿತು. ಅದೃಷ್ಟವಶಾತ್ ಒಬ್ಬ ವ್ಯಕ್ತಿಯ ಕ್ರೂರ ಮನಸ್ಥಿತಿಯ ಫಲವಾಗಬೇಕಿದ್ದ ಭೀಕರ ದುರಂತವು ಸಮಯಕ್ಕೆ ಸರಿಯಾದ ಮಾಹಿತಿಯಿಂದ ತಪ್ಪಿದೆ. ಅಮೆರಿಕದ ಉನ್ನತ ನಾಯಕತ್ವದ ಭದ್ರತೆಯ ಬಗ್ಗೆ ಇದು ದೊಡ್ಡ ಎಚ್ಚರಿಕೆಯ ಗಂಟೆಯಾಗಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Daily Devotional: ಎಂಗೇಜ್​ಮೆಂಟ್ ಆದ ಮೇಲೆ ಮದುವೆ ಮುರಿದ್ರೆ ಏನರ್ಥ! – Kannada News | Spiritual: consequences of Breaking Engagement

ಎಂಗೇಜ್​ಮೆಂಟ್ ಆಗಿ ಮದುವೆಯಾಗದಿದ್ರೆ ಯಾವ ದೋಷ ಉಂಟಾಗುತ್ತೆ ಎಂದು ಟಿವಿ9​​ ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ಡಾ. ಬಸವರಾಜ ಗುರೂಜಿ ವಿವರಿಸಿದ್ದಾರೆ.ನಾತನ ಸಂಸ್ಕೃತಿಯಲ್ಲಿ ವಿವಾಹವನ್ನು ಕೇವಲ ಎರಡು ವ್ಯಕ್ತಿಗಳ ನಡುವಿನ ಒಪ್ಪಂದವಾಗಿ ನೋಡಲಾಗುವುದಿಲ್ಲ, ಬದಲಿಗೆ ಎರಡು ಕುಟುಂಬಗಳನ್ನು, ಆತ್ಮಗಳನ್ನು ಬೆಸೆಯುವ ಪವಿತ್ರ ಸಂಸ್ಕಾರವಾಗಿ ಪರಿಗಣಿಸಲಾಗುತ್ತದೆ. ವಿವಾಹದ ಮೊದಲ ಹೆಜ್ಜೆಯಾದ ನಿಶ್ಚಿತಾರ್ಥ ಅಥವಾ ನಿಶ್ಚಯ ತಾಂಬೂಲಕ್ಕೆ ಅತೀವ ಮಹತ್ವವಿದೆ. ಈ ಸಮಯದಲ್ಲಿ ಭಗವಂತನನ್ನು, ಸರ್ವ ದೇವತೆಗಳನ್ನು, ಮಂಗಳಕರ ವಸ್ತುಗಳಾದ ವೀಳ್ಯದೆಲೆ, ಅಡಿಕೆ, ಬಾಳೆಹಣ್ಣು, ತೆಂಗಿನಕಾಯಿ, ಅರಿಶಿನ, ಕುಂಕುಮಗಳನ್ನು ಸಾಕ್ಷಿಯಾಗಿಟ್ಟು ವಾಗ್ದಾನ ಮಾಡಲಾಗುತ್ತದೆ. ಒಮ್ಮೆ ನಿಶ್ಚಯ ತಾಂಬೂಲವನ್ನು ಸ್ವೀಕರಿಸಿ, ನಂತರ ವಿವಿಧ ಕಾರಣಗಳಿಂದ ಅದನ್ನು ತಿರಸ್ಕರಿಸಿದರೆ, ಅದು ಮಹಾಪಾಪ ಎಂದು ಶಾಸ್ತ್ರಗಳು ಹೇಳುತ್ತವೆ ಎಂದು ಡಾ. ಬಸವರಾಜ ಗುರೂಜಿ ತಿಳಿಸಿದ್ದಾರೆ.

 

 

 

Source link

Horoscope Today: ಇಂದು ಈ ರಾಶಿಯವರು ದುಂದು ವೆಚ್ಚ ಮಾಡಬೇಡಿ

ಟಿವಿ9​​ ಡಿಜಿಟಲ್ ವಾಹಿನಿಯಲ್ಲಿ ಪ್ರಸಾರವಾದ ದಿನಭವಿಷ್ಯ ಕಾರ್ಯಕ್ರಮದಲ್ಲಿ ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು ಏಪ್ರಿಲ್ 27, ಸೋಮವಾರದ ದ್ವಾದಶ ರಾಶಿಗಳ ಫಲಾಫಲಗಳನ್ನು ವಿವರಿಸಿದ್ದಾರೆ. ಇದು ಪರಾಭವನಾಮ ಸಂವತ್ಸರ, ಉತ್ತರಾಯಣ, ವೈಶಾಖ ಮಾಸ, ವಸಂತ ಋತು, ಶುಕ್ಲ ಪಕ್ಷ, ದಶಮಿ ತಿಥಿ ಇರುವ ಈ ಶುಭ ದಿನದ ಕುರಿತು ಗುರೂಜಿ ವಿವರಣೆ ನೀಡಿದ್ದಾರೆ.

ಡಾ. ಗುರೂಜಿ ಅವರು ಮೇಷದಿಂದ ಮೀನದವರೆಗಿನ ದ್ವಾದಶ ರಾಶಿಗಳ ಫಲಾಫಲಗಳನ್ನು ವಿವರಿಸಿದ್ದಾರೆ. ಪ್ರತಿ ರಾಶಿಯವರಿಗೆ ನಿರ್ದಿಷ್ಟ ಗ್ರಹಗಳ ಶುಭಫಲ, ಆದಾಯ, ವ್ಯವಹಾರ, ಕೌಟುಂಬಿಕ ಜೀವನ ಮತ್ತು ಆರೋಗ್ಯದ ಕುರಿತು ಮಾರ್ಗದರ್ಶನ ನೀಡಲಾಗಿದೆ. ರೈತರು, ವಿದ್ಯಾರ್ಥಿಗಳು, ಉದ್ಯೋಗಿಗಳು ಮತ್ತು ವ್ಯಾಪಾರಸ್ಥರಿಗೆ ಇಂದಿನ ದಿನದ ವಿಶೇಷತೆಗಳನ್ನು ತಿಳಿಸಲಾಗಿದೆ.

 

 

 

Source link

Exit mobile version