ಟಿವಿ9 ಡಿಜಿಟಲ್ ವಾಹಿನಿಯಲ್ಲಿ ಪ್ರಸಾರವಾದ ದಿನಭವಿಷ್ಯ ಕಾರ್ಯಕ್ರಮದಲ್ಲಿ ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು ಏಪ್ರಿಲ್ 27, ಸೋಮವಾರದ ದ್ವಾದಶ ರಾಶಿಗಳ ಫಲಾಫಲಗಳನ್ನು ವಿವರಿಸಿದ್ದಾರೆ. ಇದು ಪರಾಭವನಾಮ ಸಂವತ್ಸರ, ಉತ್ತರಾಯಣ, ವೈಶಾಖ ಮಾಸ, ವಸಂತ ಋತು, ಶುಕ್ಲ ಪಕ್ಷ, ದಶಮಿ ತಿಥಿ ಇರುವ ಈ ಶುಭ ದಿನದ ಕುರಿತು ಗುರೂಜಿ ವಿವರಣೆ ನೀಡಿದ್ದಾರೆ.
ಡಾ. ಗುರೂಜಿ ಅವರು ಮೇಷದಿಂದ ಮೀನದವರೆಗಿನ ದ್ವಾದಶ ರಾಶಿಗಳ ಫಲಾಫಲಗಳನ್ನು ವಿವರಿಸಿದ್ದಾರೆ. ಪ್ರತಿ ರಾಶಿಯವರಿಗೆ ನಿರ್ದಿಷ್ಟ ಗ್ರಹಗಳ ಶುಭಫಲ, ಆದಾಯ, ವ್ಯವಹಾರ, ಕೌಟುಂಬಿಕ ಜೀವನ ಮತ್ತು ಆರೋಗ್ಯದ ಕುರಿತು ಮಾರ್ಗದರ್ಶನ ನೀಡಲಾಗಿದೆ. ರೈತರು, ವಿದ್ಯಾರ್ಥಿಗಳು, ಉದ್ಯೋಗಿಗಳು ಮತ್ತು ವ್ಯಾಪಾರಸ್ಥರಿಗೆ ಇಂದಿನ ದಿನದ ವಿಶೇಷತೆಗಳನ್ನು ತಿಳಿಸಲಾಗಿದೆ.
ಬೆಂಗಳೂರು, ಏಪ್ರಿಲ್ 27: ಕರ್ನಾಟಕವೂ ಒಳಗೊಂಡಂತೆ ಭಾರತ ಈಗ ಅಕ್ಷರಶಃ ಕೆಂಡದಂತಾಗಿದೆ. ಜಗತ್ತಿನಲ್ಲೇ ಅತಿ ಹೆಚ್ಚು ಬಿಸಿಲು ಇರುವ 100 ನಗರಗಳ ಪೈಕಿ 95 ನಗರಗಳು ಭಾರತದಲ್ಲೇ ಇರುವುದು ಈಗ ಇಡೀ ದೇಶವನ್ನು ಬೆಚ್ಚಿಬೀಳಿಸಿದೆ. ಅಂದಹಾಗೆ, ಈ 95 ರಲ್ಲಿ ಕರ್ನಾಟಕದಲ್ಲೂ (Karnataka) 3 ಹಾಟ್ಸ್ಪಾಟ್ಗಳಿವೆ. ರಿಯಲ್ ಟೈಮ್ ಗ್ಲೋಬಲ್ ಟೆಂಪರೇಚರ್ (Real-time Global Temperature) ಅಂಕಿಅಂಶಗಳ ಪ್ರಕಾರ, ಏಪ್ರಿಲ್ ಅಂತ್ಯಕ್ಕೆ ಭಾರತವು ಜಗತ್ತಿನ ‘ಹಾಟ್ ಸೆಂಟರ್’ ಆಗಿ ಬದಲಾಗಿದೆ.
ಕರ್ನಾಟಕದ ಮೂರು ಜಿಲ್ಲೆಗಳಿಗೆ ಸ್ಥಾನ
ವಿಶ್ವದ ಅತ್ಯಂತ ಬಿಸಿಯಾದ 100 ನಗರಗಳ ಪಟ್ಟಿಯಲ್ಲಿ ಕರ್ನಾಟಕದ ಮೂರು ಜಿಲ್ಲೆಗಳು ಸ್ಥಾನ ಪಡೆದಿದೆ. ಇದು ರಾಜ್ಯದಲ್ಲಿ ತಾಪಮಾನ ಏರುತ್ತಿರುವುದಕ್ಕೆ ಸಾಕ್ಷಿಯಾಗಿದೆ:
ರಾಯಚೂರು: ಜಗತ್ತಿನಲ್ಲೇ 54ನೇ ಸ್ಥಾನ
ಬಾಗಲಕೋಟೆ: ಜಗತ್ತಿನಲ್ಲೇ 74ನೇ ಸ್ಥಾನ
ಯಾದಗಿರಿ: ಜಗತ್ತಿನಲ್ಲೇ 88ನೇ ಸ್ಥಾನ
ಉತ್ತರ ಕರ್ನಾಟಕದ ಈ ಭಾಗಗಳಲ್ಲಿ ಸೂರ್ಯನ ಪ್ರತಾಪ ಅತಿಯಾಗಿದ್ದು, ಜನರು ಮನೆಯಿಂದ ಹೊರಬರಲು ಭಯಪಡುವಂತಾಗಿದೆ.
ಕಾದ ಕೆಂಡವಾದ ಉತ್ತರ ಭಾರತ
ದೆಹಲಿಯಲ್ಲಿ ಭಾನುವಾರ ತಾಪಮಾನವು 44 ಡಿಗ್ರಿ ಸೆಲ್ಸಿಯಸ್‌ಗೆ ಏರಿಕೆಯಾಗಿದೆ. ಬಿಸಿಲ ಅಲೆಯ ತೀವ್ರತೆ (Heatwave) ಹೆಚ್ಚಾಗುತ್ತಿರುವ ಕಾರಣ ಹವಾಮಾನ ಇಲಾಖೆ ದೆಹಲಿಯಲ್ಲಿ ಆರೆಂಜ್ ಅಲರ್ಟ್ (Orange Alert) ಘೋಷಿಸಿದೆ. ಕೇವಲ ಬಿಸಿಲು ಮಾತ್ರವಲ್ಲದೆ, ವಾಯು ಗುಣಮಟ್ಟವೂ ಕಳಪೆ ಮಟ್ಟಕ್ಕೆ ಕುಸಿದಿರುವುದು ಸಾರ್ವಜನಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ.
ದೇಶಾದ್ಯಂತ ಉಷ್ಣ ಅಲೆಯ ತಾಂಡವ
ದೆಹಲಿ ಮಾತ್ರವಲ್ಲದೆ ಉತ್ತರ ಪ್ರದೇಶದ ಲಕ್ನೋ, ಮಹಾರಾಷ್ಟ್ರದ ನಾಗ್ಪುರ ಮತ್ತು ಅಕೋಲಾ, ಒಡಿಶಾದ ಭುವನೇಶ್ವರ ಹಾಗೂ ಮಧ್ಯಪ್ರದೇಶದ ಭೋಪಾಲ್ ಸೇರಿದಂತೆ ಹಲವು ನಗರಗಳಲ್ಲಿ ತಾಪಮಾನವು ಸಾಮಾನ್ಯಕ್ಕಿಂತ 4 ರಿಂದ 5 ಡಿಗ್ರಿ ಹೆಚ್ಚಾಗಿದೆ. ಡಜನ್‌ಗಟ್ಟಲೆ ನಗರಗಳಲ್ಲಿ ತಾಪಮಾನ 40ರ ಗಡಿ ದಾಟಿದೆ. ಸಾರ್ವಜನಿಕರು ಅನಗತ್ಯವಾಗಿ ಮಧ್ಯಾಹ್ನ ವೇಳೆ ಹೊರಬರದಂತೆ ಮತ್ತು ಹೆಚ್ಚಿನ ಪ್ರಮಾಣದಲ್ಲಿ ನೀರು ಕುಡಿಯುವಂತೆ ವೈದ್ಯಕೀಯ ಇಲಾಖೆ ಸಲಹೆ ನೀಡಿದೆ.
ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ಉತ್ತರಾಯಣ, ಋತು : ವಸಂತ, ಚಾಂದ್ರಮಾಸ : ವೈಶಾಖ, ಸೌರ ಮಾಸ : ಮೇಷ, ಮಹಾನಕ್ಷತ್ರ : ಅಶ್ವಿನೀ, ವಾರ : ಸೋಮ, ಪಕ್ಷ : ಶುಕ್ಲ, ತಿಥಿ : ದಶಮೀ ನಿತ್ಯನಕ್ಷತ್ರ : ಪೂರ್ವಾಫಲ್ಗುಣೀ, ಯೋಗ : ಶೂಲಿ, ಕರಣ : ಕೌಲವ, ಸೂರ್ಯೋದಯ – 06 – 05 am, ಸೂರ್ಯಾಸ್ತ – 06 – 38 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 07:40 – 09:14, ಯಮಗಂಡ ಕಾಲ 10:48 – 12:22, ಗುಳಿಕ ಕಾಲ 13:56 – 15:30.
ಮೇಷ ರಾಶಿ: ನೀವು ಎಲ್ಲರಿಗಿಂತ ಉತ್ತಮವಾದ ಮಾರ್ಗದ ಅನ್ವೇಷಣೆಯಲ್ಲಿ ಇರುವಿರಿ. ಮುಖ್ಯಸ್ಥರನ್ನು ಖುಷಿಪಡಿಸಲು ಧಾರಾಳ ಖರ್ಚು ಮಾಡಬಹುದು. ಹಳೆಯ ಕೌಟುಂಬಿಕ ಸಮಸ್ಯೆಗಳಿಗೆ ನ್ಯಾಯ ವ್ಯವಸ್ಥೆಯ ದಾರಿ ಉಪಯುಕ್ತವಾಗಬಹುದು. ಇತರರ ಅಭಿಪ್ರಾಯವನ್ನೂ ಪರಿಗಣಿಸಿ. ಕೆಲಸಕ್ಕಾಗಿ ನೀವು ಹಾಕಿಕೊಂಡ ಸಮಯವು ವ್ಯತ್ಯಸವಾಗುವುದು. ಒಂಟಿಯಾಗಿ ಎಲ್ಲಿಗಾದರೂ ಹೋಗುವ ಮನಸ್ಸಾಗುವುದು.
ವೃಷಭ ರಾಶಿ: ಇಂದು ತಂದೆಯ ಅನಾರೋಗ್ಯದ ಬಗ್ಗೆ ನಿಮ್ಮ ಅಧಿಕಾರದ ಗರ್ವವನ್ನು ಪಕ್ಕಕ್ಕಿರಿಸಿ. ಸಂಬಂಧ ಬಲವಾಗಿಸಲು ಪ್ರೀತಿಯವರಿಗೆ ಸಮಯ ಮೀಸಲಿಡಿ. ಕೆಲಸದ ಒತ್ತಡದಲ್ಲಿ ಸಹಜವಾಗಿ ದೂಡಲ್ಪಡುವಿರಿ. ಸಮಾರಂಭಗಳಿಗೆ ಆಹ್ವಾನ ಸಿಕ್ಕಿ ಸಂತಸ. ವಿದ್ಯಾರ್ಥಿಗಳು ಕೌಶಲಕ್ಕೆ ಪ್ರಶಂಸೆ ಲಭ್ಯವಾಗುವುದು. ಸಹೋದರರ ನಡುವೆ ಸೌಹಾರ್ದತೆ ಇರಲಿದೆ. ನಿಮ್ಮ ಮೇಲಿಟ್ಟ ನಂಬಿಕೆಯನ್ನು ಕಷ್ಟಪಟ್ಟು ಉಳಿಸಿಕೊಳ್ಳಬೇಕಾದೀತು.
ಮಿಥುನ ರಾಶಿ: ನಿಮಗೆ ಎಂತಹ ಆರೋಪವನ್ನೂ ಗೆಲ್ಲುವುದೂ ಗೊತ್ತಾಗಲಿದೆ. ಉದ್ಯೋಗದಲ್ಲಿ ತೊಂದರೆ ಬಂದರೂ ನಿರೀಕ್ಷೆಯ ಬೆಳಕು ಕಾಣುವಿರಿ. ಸುತ್ತಲಿರುವ ಜನರಿಂದ ದೂರವಿರಿ, ಅವರ ಮಾತುಗಳಿಗೆ ಕಿವಿಗೊಡಬೇಡಿ. ಮೋಸದ ಆಟದಿಂದ ಎಚ್ಚರಿಕೆಯಿಂದಿರಿ. ಧಾರ್ಮಿಕ ಕಾರ್ಯವನ್ನು ನಿರ್ಮಲ ಮನಸ್ಸಿನಿಂದ ಮಾಡುವಿರಿ. ಯಾರ ಜೊತೆಯೂ ಮಿತಿಮೀರಿದ ಸಲುಗೆ ಬೇಡ. ಆಪ್ತರು ನಿಮ್ಮನ್ನು ಬಿಡಬಹುದು. ಕೆಲವು ಔದ್ಯೋಗಿಕ ಸಮಸ್ಯೆಯನ್ನು ಮೇಲಧಿಕಾರಿಗಳ ಮೂಲಕ ಬಗೆ ಹರಿಸಿಕೊಳ್ಳಿ.
ಕರ್ಕಾಟಕ ರಾಶಿ: ಫಲವನ್ನು ನಿರೀಕ್ಷಿಸದೇ ಕಾರ್ಯವನ್ನು ಮಾಡಿ. ಹಳೆಯ ವ್ಯಕ್ತಿಯೊಂದಿಗೆ ಮತ್ತೆ ಸಂಪರ್ಕ ಆಗಬಹುದು. ಈ ಬದಲಾವಣೆ ನಿಮ್ಮ ಜೀವನದಲ್ಲಿ ಹೊಸ ಬೆಳಕು ತರುತ್ತದೆ. ಅದೃಷ್ಟ ಸಹಾಯ ಮಾಡಲಿದೆ. ವಿಘ್ನನಿವಾರಕನಿಗೆ ನಮಸಿ ಹೊಸ ಕಾರ್ಯವನ್ನು ಆರಂಭಿಸಿ. ವ್ಯಾವಹಾರಿಕ ಜಂಜಾಟವು ನಿಮ್ಮ ಉದ್ವೇಗಕ್ಕೆ ಕಾರಣವಾಗುವುದು. ನೀವು ಇಂದು ಯಾವುದೇ ಅಪೇಕ್ಷೆ ಇಲ್ಲದೇ ಕೆಲಸವನ್ನು ಮಾಡಲಾರಿರಿ. ಸ್ಥಿರಾಸ್ತಿಯ ಭಾಗವನ್ನು ಉಳಿಸಿಕೊಳ್ಳುವುದು ಕಷ್ಟವಾಗುವುದು.
ಸಿಂಹ ರಾಶಿ: ಆಪ್ತರ ಜೊತೆ ವಿದೇಶದ ವ್ಯಾಪಾರದ ಕುರಿತು ಚರ್ಚಿಸುವಿರಿ. ಮಕ್ಕಳೊಂದಿಗೆ ಹೆಚ್ಚಿನ ಸಮಯ ಕಳೆಯುವುದು ಉತ್ತಮ. ನಿಮ್ಮ ಕಷ್ಟಕ್ಕೆ ಆದವರೇ ಜೊತೆಯಲ್ಲಿ ಇರುವರು. ಸಂಬಂಧಗಳಲ್ಲಿ ನಿಷ್ಠೆ ಹಾಗೂ ಪ್ರಾಮಾಣಿಕತೆ ಇತರರ ನಂಬಿಕೆಗೆ ಕಾರಣವಾಗುತ್ತದೆ. ನಿಮ್ಮ ಆತ್ಮಸಾಕ್ಷಿಯಂತೆ ನಡೆದುಕೊಳ್ಳಿ. ನಿಮ್ಮ ಸ್ವಭಾವವನ್ನು ದುರುಪಯೋಗ ಮಾಡಿಕೊಳ್ಳಬಹುದು. ನಿಮ್ಮ ಮೌನವು ಕುಟುಂಬದಲ್ಲಿ ಭಯವನ್ನು ಉಂಟುಮಾಡೀತು. ನಿರಂತರ ಕಾರ್ಯದಿಂದ ದೇಹಕ್ಕೆ ಆಯಾಸವಾಗಬಹುದು. ಸುಖಜೀವನದ ನಿರೀಕ್ಷೆಯಲ್ಲಿ ಇರುವಿರಿ.
ಕನ್ಯಾ ರಾಶಿ: ಹಿರಿಯರಿಂದ ಅವಮಾನವಾಗುವ ಸಾಧ್ಯತೆ ಇದೆ. ಹಣದ ವ್ಯವಹಾರ ಶುಭವಾಗುವ ದಿನ. ನಿಮ್ಮ ಮಾತುಗಳು ಗುಣಮಟ್ಟದ್ದಾಗಿರಲಿ. ಸಂಗಾತಿಯೊಂದಿಗೆ ಗೌಪ್ಯ ವಿಷಯ ಹಂಚಿಕೆ ವೇಳೆ ಎಚ್ಚರಿಕೆ ಇರಲಿ. ಪ್ರೇಮ ನಿಖರತೆ ನೀಡುತ್ತದೆ. ಸ್ನೇಹಿತರಿಂದ ವೃತ್ತಿಯಲ್ಲಿ ಬೆಂಬಲ ಸಿಗಲಿದೆ. ಸಂಗಾತಿಯೊಂದಿಗೆ ಸಮಯ ಕಳೆಯುವುದು ಸಂತೋಷ ತಂದೀತು. ಅತಿಯಾದ ಕೋಪದ ಕಾರಣ ನೀವು ಒಂಟಿಯಾಗಬೇಕಾದೀತು. ಕಹಿ ಘಟನೆಯನ್ನು ಮರೆಯಲು ಬಹಳ ಶ್ರಮ ಪಡುವಿರಿ. ವಿದ್ಯಾಭ್ಯಾಸದಲ್ಲಿ ಹಿನ್ನಡೆಯನ್ನು ಕಾಣಲಿದ್ದು ಕುಟುಂಬದಲ್ಲಿ ಅಸಮಾಧಾನ ಇರಲಿದೆ.
ತುಲಾ ರಾಶಿ: ಅಮೂಲ್ಯವಾದ ವಸ್ತುವೊಂದು ನಿಮ್ಮ ಸ್ನೇಹಿತರಿಂದ ಕೊಡುಗೆಯಾಗಿ ಸಿಗಲಿದೆ. ನಿಮ್ಮ ಸುತ್ತಮುತ್ತಲಿನವರ ಪ್ರಗತಿ ನಿಮಗೆ ಆಹ್ಲಾದವಾಗದು. ನಿಮ್ಮ ಕಲ್ಪನೆಯ ಪ್ರಪಂಚದಿಂದ ಹೊರಬರಲು ನಿಮಗೆ ನುರಿತ ವ್ಯಕ್ತಿಯ ಮಾರ್ಗದರ್ಶನ ಅಗತ್ಯವಿದೆ. ನಿಮ್ಮ ಹಿಂದೆ ಆಡುವ ಮಾತುಗಳಿಗೆ ಹೆಚ್ಚು ಬೆಲೆ ಕೊಡುವುದು ಬೇಡ. ಹಣದ ಹೂಡಿಕೆಯನ್ನು ಮಾಡುವ ಯೋಚನೆ ಇರಲಿದೆ. ಆಕಸ್ಮಿಕವಾಗಿ ಪ್ರೇಮದಲ್ಲಿ ಬೀಳುವಿರಿ. ವ್ಯಕ್ತಿಯ ಬಗ್ಗೆ ನಿಮಗೆ ಪೂರ್ಣ ವಿಶ್ವಾಸವಿರದು.
ವೃಶ್ಚಿಕ ರಾಶಿ: ತಪ್ಪುಗಳು ನಿಮ್ಮ ಸ್ವಭಾವವನ್ನು ತೋರಿಸುವುದು. ರಚನಾತ್ಮಕ ನಿಮ್ಮ ಶೈಲಿ ಪ್ರೇರಣೆಯುಂಟುಮಾಡುತ್ತದೆ. ಹೊಸ ಯೋಜನೆಗಳಲ್ಲಿ ಶಕ್ತಿ ಹೂಡಲು ಇದು ಸೂಕ್ತ ಸಮಯ. ನೀವು ಮಾಡಿದ ತಪ್ಪುಗಳನ್ನು ಒಪ್ಪಿಕೊಳ್ಳಿ ಮತ್ತು ಕ್ಷಮೆ ಕೇಳಿ. ಸತಿ ತಪ್ಪುಗಳ ಗೊಂದಲಕ್ಕೆ ಸಿಲುಕುವಿರಿ. ಇದು ನಿಮಗೆ ಸಮಾಧಾನ ಮತ್ತು ಸ್ವೀಕಾರ ನೀಡುತ್ತದೆ. ನಿಮ್ಮ ವರ್ತನೆಗಳು ತಂದೆಯ ಅಸಮಾಧಾನಕ್ಕೆ ಕಾರಣವಾಗಬಹುದು. ಮನಶ್ಚಾಂಚಲ್ಯದಿಂದ ಕೆಲವು ಕಹಿಯಾದ ಅನುಭವಗಳು ಆಗಬಹುದು.
ಧನು ರಾಶಿ: ಮಕ್ಕಳಿಂದ ಬಂದ ಅಶುಭವಾರ್ತೆಯನ್ನು ಸಹಿಸಲಾಗದು. ನಿಮ್ಮ ನಿಷ್ಠೆಯಿಂದ ಬಂಧುಗಳು ಬೆಂಬಲ ನೀಡುತ್ತಾರೆ. ಅವರಿಂದ ಪ್ರೀತಿ ಹಾಗೂ ಸಹಾಯ ದೊರೆಯಲಿದೆ. ನಿಜವಾಗಿಯೂ ನೀವು ಬೆಲೆಬಾಳುವವರಾಗಿದ್ದೀರಿ ಎಂಬ ಅನುಭವ ಬರುವುದು. ಹೊಸ ವ್ಯಕ್ತಿಯ ಪರಿಚಯ ನಿಮ್ಮ ಜೀವನಶೈಲಿಯಲ್ಲಿ ಬದಲಾವಣೆ ತರಬಹುದು. ಯಾರನ್ನೂ ತಾರತಮ್ಯ ಭಾವದಿಂದ ನೋಡುವುದು ಬೇಡ. ಕಛೇರಿಯ ಕೆಲಸದಿಂದ ಸ್ವಲ್ಪ ವಿಶ್ರಾಂತಿಯನ್ನು ಪಡೆಯುವಿರಿ. ಮನೆಯಿಂದ ಹೊರ ಹೋಗುವುದು ನಿಮಗೆ ಇಷ್ಟವಾಗದು.
ಮಕರ ರಾಶಿ: ಹಣಕಾಸಿನ ಕುರಿತು ಅತಿಯಾದ ಆಲೋಚನೆಯು ನಿಮ್ಮನ್ನು ಅತಿಯಾಗಿ ಕಾಡಬಹುದು. ಕೌಶಲ್ಯಕ್ಕೆ ಯೋಗ್ಯವಾದ ಸ್ಥಳ ಸಿಗುವುದು. ಗಡುವಿಗೆ ಮುನ್ನ ಕೆಲಸ ಪೂರ್ಣಗೊಳಿಸುವ ಸಾಧ್ಯತೆ ಇದೆ. ಹೂಡಿಕೆಯಲ್ಲಿ ಸರಿಯಾದ ಸಮಯವನ್ನು ನೋಡಿಕೊಳ್ಳಿ. ಸಮಯೋಚಿತವಾಗಿ ಕಾರ್ಯವನ್ನು ಮಾಡಿ. ದೂರಪ್ರಯಾಣವನ್ನು ಮೊಟಕುಗೊಳಿಸಿ. ವ್ಯಾಪರದಲ್ಲಿ ಲಾಭವಿದೆ. ನಿಮ್ಮ ಊಹೆಗಳು ಎಲ್ಲವೂ ವಾಸ್ತವಕ್ಕೆ ದೂರವಾದುದಾಗಿದೆ.
ಕುಂಭ ರಾಶಿ: ಕಳೆದ ವಸ್ತುಗಳ ಬಗ್ಗೆ ಅಧಿಕ ಚಿಂತೆ ಉಂಟಾಗಲಿದೆ. ಎಷ್ಟೋ ದಿನದ ಸಾಲಗಳು ಇಂದು ಮುಕ್ತಾಯಗೊಳ್ಳುವುದು. ಯಶಸ್ಸಿಲ್ಲದ ಯೋಜನೆಯ ನೆನೆಪು ದಣಿವನ್ನು ಉಂಟುಮಾಡಬಹುದು. ನಿಮ್ಮ ಶಕ್ತಿಯನ್ನು ಹೊಸದಾಗಿ ಪ್ರೇರಣೆಯಾದ ಕೆಲಸಗಳಿಗೆ ತಿರುಗಿಸಿ. ರಾಜಕೀಯದ ಒತ್ತಡವು ಅಧಿಕಾರದಲ್ಲಿ ಇದ್ದವರಿಗೆ ಬರಲಿದೆ. ಆದಷ್ಟು ಸ್ವಂತಿಕೆಯನ್ನು ಇಟ್ಟುಕೊಂಡು ಕೆಲಸ ಮಾಡಿ. ಕಾರ್ಯದಲ್ಲಿ ಆಗುವ ತೊಂದರೆಗಳಿಗೆ ಹಿರಿಯರ ಮಾರ್ಗದರ್ಶನವನ್ನು ಪಡೆಯಿರಿ.
ಮೀನ ರಾಶಿ: ನಿಮ್ಮ ತಮಾಷೆಯಿಂದ ಇನ್ನೊಬ್ಬರಿಗೆ ನೋವಾಂಟಾಗಬಹುದು. ಹಿರಿಯ ಹಾಗೂ ಪ್ರಮುಖವ್ಯಕ್ತಿಗಳನ್ನು ಇಂದು ಭೇಟಿಯಾಗುತ್ತೀರಿ. ಉದ್ಯೋಗದಲ್ಲಿ ಅಡಚಣೆಗಳಿರಬಹುದು, ಆದರೆ ಇವು ತಾತ್ಕಾಲಿಕ. ನಿಮ್ಮ ಸುತ್ತಲಿರುವ ಜನರಿಂದ ದೂರವಿರುವುದು ಒಳಿತು. ನಿಮ್ಮ ಹತ್ತಿರದರನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ. ಜಾಣ್ಮೆಯಿಂದ ಅದನ್ನು ಬಗೆಹರಿಸಬೇಕಾಗುವುದು. ಮಕ್ಕಳ ವಿದ್ಯಾಭ್ಯಾಸಕ್ಕೆ ಸ್ಥಳವನ್ನು ಬದಲಿಸುವಿರಿ. ಇಂದು ಭೂಮಿಯ ಮಾರಾಟದಿಂದ ಕಲಹವಾಗುವುದು.
ಐಪಿಎಲ್ 2026 ಟೂರ್ನಮೆಂಟ್‌ನ 38 ನೇ ಪಂದ್ಯ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ನಡುವೆ ನಡೆಯಿತು. ಈ ಆವೃತ್ತಿಯ ಐಪಿಎಲ್‌ನಲ್ಲಿ ಮೊದಲ ಸೂಪರ್ ಓವರ್ಗೆ ಸಾಕ್ಷಿಯಾದ ಈ ಪಂದ್ಯವನ್ನು ಗೆದ್ದುಕೊಳ್ಳುವಲ್ಲಿ ಕೆಕೆಆರ್ ತಂಡ ಯಶಸ್ವಿಯಾಯಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್ 155 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಲಕ್ನೋ ಕೂಡ ವೇಗಿ ಮೊಹಮ್ಮದ್ ಶಮಿ 20ನೇ ಓವರ್‌ನ ಕೊನೆಯ ಎಸೆತದಲ್ಲಿ ಸಿಕ್ಸರ್ ಬಾರಿಸುವ ಮೂಲಕ ಪಂದ್ಯವನ್ನು ಟೈನಲ್ಲಿ ಅಂತ್ಯಗೊಳಿಸಿದರು. ಹೀಗಾಗಿ ಪಂದ್ಯ ಸೂಪರ್ ಓವರ್ಗೆ ಹೋಯಿತು. ಇಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ ಕೇವಲ 1 ರನ್ ಕಲೆಹಾಕಿ ಕೆಕೆಆರ್ ಗೆಲುವಿನ 2 ರನ್ ಗುರಿ ನೀಡಿತು. ಈ ಗುರಿಯನ್ನು ಕೆಕೆಆರ್ ತಂಡ ಸುಲಭವಾಗಿ ಬೆನ್ನಟ್ಟಿತು.
ಕನ್ನಡದಲ್ಲಿ ವೆಬ್ ಸರಣಿಗಳು (web series) ಬಹಳ ಕಡಿಮೆ. ಎಲ್ಲೋ ಅಲ್ಲೊಂದು ಇಲ್ಲೊಂದು ಅಷ್ಟೆ ನಿರ್ಮಾಣಗೊಂಡು ಬಿಡುಗಡೆ ಆಗುತ್ತವೆ. ಈ ಹಿಂದೆ ‘ಅಯ್ಯನ ಮನೆ’ ವೆಬ್ ಸರಣಿ ಬಿಡುಗಡೆ ಆಗಿ ಸೂಪರ್ ಹಿಟ್ ಆಗಿತ್ತು. ಇದೀಗ ‘ಜೆರಾಕ್ಸ್’ ಹೆಸರಿನ ವೆಬ್ ಸರಣಿ ಬಿಡುಗಡೆ ಆಗಿದೆ. ನಾಗಭೂಷಣ್, ಪಾಯಲ್ ಚೆಂಗಪ್ಪ ನಟನೆಯ ಈ ವೆಬ್ ಸರಣಿ ಗಮನ ಸೆಳೆದಿದ್ದು, ಈ ವೆಬ್ ಸರಣಿಯ ವಿಶೇಷತೆಗಳು ಏನೇನು ಎಂದು ಚಿತ್ರತಂಡ ವಿವರಿಸಿದೆ. ಅಂದಹಾಗೆ ಈ ವೆಬ್ ಸರಣಿಯನ್ನು ಡಾಲಿ ಧನಂಜಯ್ ನಿರ್ಮಾಣ ಮಾಡಿದ್ದಾರೆ. ವಿಡಿಯೋ ನೋಡಿ…
ಬೆಂಗಳೂರು, ಏ.26: ಸಿಲಿಕಾನ್ ಸಿಟಿಯಲ್ಲಿ ಸಂಚಾರ ಮಾಡುವುದು ಅಂದರೆ ಅದೊಂದು ದೊಡ್ಡ ಸಾಹಸವೇ ಸರಿ. ಈಗಾಗಲೇ ವಿಶ್ವದ ಅತಿಹೆಚ್ಚು ಟ್ರಾಫಿಕ್ ಇರುವ ನಗರಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಬೆಂಗಳೂರಿನಲ್ಲಿ ವಾಹನಗಳ ಸಂಖ್ಯೆ ಈಗ ಆತಂಕಕಾರಿ ಮಟ್ಟಕ್ಕೆ ಏರಿಕೆಯಾಗುತ್ತಿದೆ. ನಗರದ ಸಂಚಾರ ದಟ್ಟಣೆಗೆ ತುಪ್ಪ ಸುರಿಯುವಂತೆ ಪ್ರತಿದಿನ ಸಾವಿರಾರು ಹೊಸ ವಾಹನಗಳು ನೋಂದಣಿಯಾಗುತ್ತಿವೆ. ಇತ್ತೀಚಿನ ಅಂಕಿಅಂಶಗಳ ಪ್ರಕಾರ ಪ್ರತಿದಿನ 2,866 ಹೊಸ ವಾಹನಗಳ ಸೇರ್ಪಡೆಯಾಗುತ್ತಿದೆ.
ಪ್ರತಿದಿನ 1,910 ಹೊಸ ದ್ವಿಚಕ್ರ ವಾಹನಗಳು ರಸ್ತೆಗೆ ಇಳಿಯುತ್ತಿದೆ. ಪ್ರತಿದಿನ 564 ಹೊಸ ಕಾರುಗಳು ಬರುತ್ತಿದೆ. ಕಳೆದ 7 ತಿಂಗಳಲ್ಲಿ 5 ಲಕ್ಷಕ್ಕೂ ಹೆಚ್ಚು ವಾಹನಗಳು ನೋಂದಣಿಯಾಗುತ್ತಿದೆ.
ರಾಜ್ಯದಲ್ಲಿ ಒಟ್ಟು 3.40 ಕೋಟಿ ವಾಹನಗಳಿದ್ದರೆ, ಅದರಲ್ಲಿ ಸಿಂಹಪಾಲು ಅಂದರೆ ಬರೋಬ್ಬರಿ 1 ಕೋಟಿ 22 ಲಕ್ಷ ವಾಹನಗಳು ಬೆಂಗಳೂರಿನಲ್ಲಿಯೇ ಇವೆ. ಅಕ್ಕಪಕ್ಕದ ಜಿಲ್ಲೆ ಹಾಗೂ ಹೊರರಾಜ್ಯದ ವಾಹನಗಳನ್ನು ಸೇರಿಸಿದರೆ ಪ್ರತಿದಿನ ನಗರದ ರಸ್ತೆಗಳಲ್ಲಿ ಸುಮಾರು ಒಂದೂವರೆ ಕೋಟಿ ವಾಹನಗಳು ಸಂಚರಿಸುತ್ತಿವೆ. ಕೇವಲ 40 ಸಾವಿರ ವಾಹನಗಳು ಓಡಾಡಬೇಕಾದ ಸಾಮರ್ಥ್ಯವಿರುವ ರಸ್ತೆಗಳಲ್ಲಿ ಕೋಟಿಗೂ ಅಧಿಕ ವಾಹನಗಳು ಜಿಗಿಯುತ್ತಿರುವುದು ಟ್ರಾಫಿಕ್ ಸಮಸ್ಯೆಯನ್ನು ಜಟಿಲಗೊಳಿಸಿದೆ.
“ಇದೇ ವೇಗದಲ್ಲಿ ವಾಹನಗಳ ಸಂಖ್ಯೆ ಹೆಚ್ಚಾದರೆ ಮುಂದಿನ ಮೂರು ವರ್ಷಗಳಲ್ಲಿ ಕೇವಲ ದ್ವಿಚಕ್ರ ವಾಹನಗಳ ಸಂಖ್ಯೆಯೇ ಒಂದು ಕೋಟಿ ದಾಟಲಿದೆ” ಎಂದು ಟ್ರಾಫಿಕ್ ತಜ್ಞರು ಎಚ್ಚರಿಸಿದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕೆಂದರೆ ಸಾರ್ವಜನಿಕರು ಖಾಸಗಿ ವಾಹನಗಳ ಬಳಕೆಯನ್ನು ಕಡಿಮೆ ಮಾಡಿ, ಹೆಚ್ಚಿನ ಸಂಖ್ಯೆಯಲ್ಲಿ ಬಿಎಂಟಿಸಿ (BMTC) ಮತ್ತು ಮೆಟ್ರೋ (Namma Metro) ಬಳಸಬೇಕು ಎಂದು ಸಲಹೆ ನೀಡಿದ್ದಾರೆ.ಈಗಾಗಲೇ ಟ್ರಾಫಿಕ್ ಕಿರಿಕಿಯಿಂದ ಹೈರಾಣಾಗಿರುವ ಬೆಂಗಳೂರಿಗರಿಗೆ ಪ್ರತಿದಿನ ರಸ್ತೆಗಿಳಿಯುವ ಈ 3 ಸಾವಿರ ಹೊಸ ವಾಹನಗಳು ನಿದ್ದೆಗೆಡುವಂತೆ ಮಾಡಿರುವುದಂತೂ ಸತ್ಯ.
ಚಿತ್ರಮಂದಿರಗಳು (Theater) ಸಂಕಷ್ಟದಲ್ಲಿವೆ. ಇದು ಒಂದು ರಾಜ್ಯದ ಸಮಸ್ಯೆಯಲ್ಲ, ಭಾರತದ ಬಹುತೇಕ ರಾಜ್ಯಗಳಲ್ಲಿ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳು ಸಂಕಷ್ಟದಲ್ಲಿವೆ. ಯಾವುದೇ ದೊಡ್ಡ ಸಿನಿಮಾಗಳು ಬಂದಾಗ ಮಾತ್ರ ಚಿತ್ರಮಂದಿರಗಳಲ್ಲಿ ತುಸು ಜೀವ ಬರುತ್ತದೆ. ಆ ನಂತರ ಮತ್ತೆ ಅದೇ ಸ್ಥಿತಿ. ಸಣ್ಣ ಮತ್ತು ಮಧ್ಯಮ ಬಜೆಟ್ನ ಸಿನಿಮಾಗಳು ಪ್ರೇಕ್ಷಕರನ್ನು ಸೆಳೆಯಲು ವಿಫಲವಾಗುತ್ತಿವೆ. ಕೇವಲ ಮಲಯಾಳಂ ಚಿತ್ರರಂಗದಲ್ಲಿ ಮಾತ್ರವೇ ಸ್ಟಾರ್ ಅಲ್ಲದವರ ಸಿನಿಮಾಗಳು ಸಹ ಆಗೊಮ್ಮೆ ಈಗೊಮ್ಮೆ ಹಿಟ್ ಆಗುತ್ತಿವೆ. ಇದೇ ಕಾರಣಕ್ಕೆ ಸಿನಿಮಾ ನಿರ್ಮಾಪಕರು, ಪ್ರದರ್ಶಕರು, ಸ್ಟಾರ್ ನಟರುಗಳು ಹೆಚ್ಚು ಸಿನಿಮಾ ಮಾಡಬೇಕು ಎಂದು ಗೋಗರೆಯುತ್ತಿದ್ದಾರೆ. ಆದರೆ ಸ್ಟಾರ್ ನಟರುಗಳು ಎರಡು ವರ್ಷಕ್ಕೊಂದು ಸಿನಿಮಾ ಮಾಡುತ್ತಿದ್ದಾರೆ. ಆದರೆ ಅಲ್ಲು ಅರ್ಜುನ್ ಇದೀಗ ನಿರ್ಧಾರವೊಂದನ್ನು ತಳೆದಿದ್ದು, ಚಿತ್ರರಂಗದ ಉಳಿವಿಗೆ, ವಿಶೇಷವಾಗಿ ಚಿತ್ರಮಂದಿರಗಳ ಉಳಿವಿಗೆ ಈ ನಿರ್ಧಾರ ನೆರವಾಗಲಿದೆ.
ಸ್ಟಾರ್ ನಟರುಗಳು ಒಂದು ಸಿನಿಮಾ ಮಾಡಲು ವರ್ಷಾನುಗಟ್ಟಲೆ ಸಮಯ ತೆಗೆದುಕೊಳ್ಳುತ್ತಿದ್ದಾರೆ. ಹೀಗಾಗಿ ಸ್ಟಾರ್ ನಟರ ಸಿನಿಮಾಗಳು ಚಿತ್ರಮಂದಿರಕ್ಕೆ ಬರುವುದು ಆಗೊಮ್ಮೆ-ಈಗೊಮ್ಮೆ ಎಂಬಂತಾಗಿದೆ. ಅಲ್ಲು ಅರ್ಜುನ್ ಸಹ ಇದಕ್ಕೆ ಹೊರತಾಗಿರಲಿಲ್ಲ. ಆದರೆ ಈಗ ಅಲ್ಲು ಅರ್ಜುನ್ ತಮ್ಮ ಶೈಲಿ ಬದಲಿಸಿದ್ದು, ಇನ್ನು ಮುಂದೆ ಒಂದು ಸಿನಿಮಾಕ್ಕೆ ಕೇವಲ 200 ದಿನಗಳ ಕಾಲ್ಶೀಟ್ ಮಾತ್ರವೇ ಕೊಡುವ ನಿರ್ಧಾರ ಮಾಡಿದ್ದಾರೆ.
ತೆಲುಗು ಮಾಧ್ಯಮಗಳು ಈ ಬಗ್ಗೆ ವರದಿ ಮಾಡಿದ್ದು, ಇನ್ನು ಮುಂದೆ ಅಲ್ಲು ಅರ್ಜುನ್ ಅವರು ನಿರ್ಮಾಪಕರಿಗೆ 200 ದಿನಗಳ ಕಾಲ್ಶೀಟ್ ಮಾತ್ರವೇ ನೀಡಲಿದ್ದು, ಅಷ್ಟರಲ್ಲಿ ಸಿನಿಮಾ ಮುಗಿಸುವ ಷರತ್ತು ಹಾಕಲಿದ್ದಾರಂತೆ. ಅದು ಮಾತ್ರವೇ ಅಲ್ಲದೆ, ಒಂದು ಸಮಯದಲ್ಲಿ ಎರಡು ಸಿನಿಮಾಗಳಲ್ಲಿ ನಟಿಸುವ ತೀರ್ಮಾನವನ್ನು ಸಹ ಅಲ್ಲು ಅರ್ಜುನ್ ಮಾಡಿದ್ದಾರಂತೆ. ಈ ಮೊದಲೆಲ್ಲ ಒಂದು ಸಿನಿಮಾ ಮುಗಿದ ಬಳಿಕವಷ್ಟೆ ಅಲ್ಲು ಅರ್ಜುನ್ ಮತ್ತೊಂದು ಸಿನಿಮಾ ಒಪ್ಪಿಕೊಳ್ಳುತ್ತಿದ್ದರು. ಆದರೆ ಆ ನಿಯಮವನ್ನು ಸಹ ಮುರಿಯಲಿದ್ದು, ಅದೂ ಸಹ ಚಿತ್ರಮಂದಿರದ ಒಳಿತಿಗಾಗಿಯೇ ಆಗಿದೆ.
ಪ್ರಸ್ತುತ ನಟ ಪ್ರಭಾಸ್ ಸಹ ಈ ನಿಯಮ ಅನುಸರಿಸುತ್ತಿದ್ದಾರೆ. ಎರಡೆರಡು ಸಿನಿಮಾಗಳಲ್ಲಿ ಒಟ್ಟಿಗೆ ನಟಿಸುತ್ತಿದ್ದಾರೆ ಪ್ರಭಾಸ್. ಒಂದು ಸಿನಿಮಾದ ಶೆಡ್ಯೂಲ್ ಬ್ರೇಕ್ ಇದ್ದಾಗ ಮತ್ತೊಂದು ಸಿನಿಮಾನಲ್ಲಿ ಹೀಗೆ ಕಾಲ್ ಶೀಟ್ ಅನ್ನು ಸಹ ಒಟ್ಟಿಗೆ ಎರಡು ಸಿನಿಮಾಗಳಿಗೆ ನೀಡುತ್ತಿದ್ದಾರೆ ಅದೂ ಶೂಟಿಂಗ್ಗೆ ಸಮಸ್ಯೆ ಆಗದಂತೆ. ಇದರಿಂದ ಕಡಿಮೆ ಅವಧಿಯಲ್ಲಿ ಸಿನಿಮಾ ಮಾಡಿದಂತಾಗುತ್ತದೆ. ಮತ್ತು ಸಿನಿಮಾಗಳಿಂದ ಸಿನಿಮಾಕ್ಕೆ ದೊಡ್ಡ ಗ್ಯಾಪ್ ಸಹ ಆಗುವುದಿಲ್ಲ.
ಅಲ್ಲು ಅರ್ಜುನ್ ಪ್ರಸ್ತುತ ಬರೋಬ್ಬರಿ ನಾಲ್ಕು ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ. ಪ್ರಸ್ತುತ ಅಟ್ಲಿ ಜೊತೆಗೆ ‘ರಾಕಾ’ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಅದರ ಬಳಿಕ ಲೋಕೇಶ್ ಕನಗರಾಜ್ ಜೊತೆಗೆ ಹೊಸ ಸಿನಿಮಾ ಆರಂಭವಾಗಲಿದೆ. ಅದರ ಜೊತೆಗೆ ಮಲಯಾಳಂನ ಬಾಸಿಲ್ ಜೋಸೆಫ್ ನಿರ್ದೇಶನದ ಸಿನಿಮಾನಲ್ಲಿ ನಟಿಸಲಿದ್ದಾರೆ. ಅದಾದ ಬಳಿಕ ಸಂದೀಪ್ ರೆಡ್ಡಿ ಜೊತೆಗೆ ಒಂದು ಸಿನಿಮಾ ಬಳಿಕ ಮತ್ತೆ ಸುಕುಮಾರ್ ಜೊತೆಗೆ ಮತ್ತೊಂದು ಸಿನಿಮಾನಲ್ಲಿ ನಟಿಸಲಿದ್ದಾರೆ. ಲೈನ್ ಅಪ್ ಹೆಚ್ಚಾಗಿರುವ ಕಾರಣ ಒಟ್ಟಿಗೆ ಎರಡು ಸಿನಿಮಾನಲ್ಲಿ ಅಲ್ಲು ಅರ್ಜುನ್ ನಟಿಸಲಿದ್ದಾರೆ ಮತ್ತು ಬೇಗ ಬೇಗನೆ ಸಿನಿಮಾಗಳನ್ನು ಮುಗಿಸಲು ನಿರ್ಮಾಪಕ ಹಾಗೂ ನಿರ್ದೇಶಕರಿಗೆ ಅವರು ಸೂಚಿಸಿದ್ದಾರೆ.
ಐಪಿಎಲ್ 2026 ಟೂರ್ನಮೆಂಟ್‌ನ 38 ನೇ ಪಂದ್ಯ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ನಡುವೆ ನಡೆಯಿತು. ಈ ಪಂದ್ಯ ಐಪಿಎಲ್ ಇತಿಹಾಸದಲ್ಲಿ ಹಿಂದೆಂದೂ ನಡೆಯದ ಘಟನೆಗೆ ಸಾಕ್ಷಿಯಾಗಿದೆ. ಎದುರಾಳಿ ತಂಡದ ಫಿಲ್ಡಿಂಗ್ಗೆ ಅಡ್ಡಿಪಡಿಸಿದ್ದಕ್ಕಾಗಿ ಕೆಕೆಆರ್ ತಂಡದ ಬ್ಯಾಟರ್ ಅಂಗ್‌ಕ್ರಿಶ್ ರಘುವಂಶಿ ತಮ್ಮ ವಿಕೆಟ್ ಕಳೆದುಕೊಳ್ಳಬೇಕಾಯಿತು. ಈ ಮೂಲಕ ಐಪಿಎಲ್ ಇತಿಹಾಸದಲ್ಲಿ ಫಿಲ್ಡಿಂಗ್ಗೆ ಅಡ್ಡಿಪಡಿಸಿದ್ದಕ್ಕಾಗಿ ಔಟಾದ ಮೊದಲ ಬ್ಯಾಟರ್ ಎಂಬ ಅನಗತ್ಯ ದಾಖಲೆ ಅಂಗ್‌ಕ್ರಿಶ್ ರಘುವಂಶಿ ಪಾಲಾಗಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್ಗೆ ಉತ್ತಮ ಆರಂಭ ಸಿಗಲಿಲ್ಲ. ಕೇವಲ 16 ರನ್‌ಗಳಿಗೆ ಎರಡು ವಿಕೆಟ್‌ಗಳನ್ನು ಕಳೆದುಕೊಂಡು ತಂಡವು ಒತ್ತಡಕ್ಕೆ ಒಳಗಾಯಿತು. ಹೀಗಾಗಿ ಇನ್ನಿಂಗ್ಸ್ ನಿಭಾಯಿಸುವ ಜವಾಬ್ದಾರಿ ಅಂಗ್‌ಕ್ರಿಶ್ ರಘುವಂಶಿ ಮತ್ತು ಕ್ಯಾಮರೂನ್ ಗ್ರೀನ್ ಮೇಲೆ ಉತ್ತು. ಕೆಕೆಆರ್ ಅಭಿಮಾನಿಗಳು ಈ ಜೋಡಿಯಿಂದ ಹೆಚ್ಚಿನ ನಿರೀಕ್ಷೆಗಳನ್ನು ಹೊಂದಿದ್ದರು. ಇಬ್ಬರೂ ಇನ್ನಿಂಗ್ಸ್ ಅನ್ನು ಮುಂದಕ್ಕೆ ಕೊಂಡೊಯ್ಯಲು ಪ್ರಯತ್ನಿಸಿದರು. ಆದರೆ ತಂಡದ ಮೊತ್ತ 27 ರನ್‌ಗಳಿದ್ದಾಗ, ಅಂಗ್‌ಕ್ರಿಶ್ ಫೀಲ್ಡಿಂಗ್‌ಗೆ ಅಡ್ಡಿಪಡಿಸಿದ ಕಾರಣದಿಂದಾಗಿ ಔಟಾದರು.
ಪ್ರಿನ್ಸ್ ಯಾದವ್ ಬೌಲ್ ಮಾಡಿದ ಐದನೇ ಓವರ್‌ನ ಕೊನೆಯ ಎಸೆತವನ್ನು ಅಂಗ್‌ಕ್ರಿಶ್ ರಘುವಂಶಿ ಮಿಡ್-ಆನ್ ಕಡೆಗೆ ಹೊಡೆದು ರನ್ ಮಾಡಲು ಮುಂದಾದರು. ಆದರೆ ನಾನ್-ಸ್ಟ್ರೈಕ್‌ನಲ್ಲಿರುವ ಕ್ಯಾಮರೂನ್ ಗ್ರೀನ್ ಅದಕ್ಕೆ ನಿರಾಕರಿಸಿದರು. ಆದ್ದರಿಂದ ಅರ್ಧದಾರಿಯಲ್ಲೇ ಹಿಂತಿರುಗುವುದನ್ನು ಬಿಟ್ಟು ಅಂಗ್ಕ್ರಿಶ್ಗೆ ಬೇರೆ ದಾರಿ ಇರಲಿಲ್ಲ. ಹೀಗಾಗಿ ಅಂಗ್‌ಕ್ರಿಶ್ ಸ್ಟ್ರೈಕ್‌ಗೆ ಹಿಂತಿರುಗುವ ಯತ್ನ ಮಾಡಿದರು. ಇತ್ತ ಚೆಂಡನ್ನು ಹಿಡಿದ ಶಮಿ, ಚೆಂಡನ್ನು ವಿಕೆಟ್ನತ್ತ ಎಸೆದರು. ಈ ಹಂತದಲ್ಲಿ ಚೆಂಡು ಅಂಗ್‌ಕ್ರಿಶ್ ಅವರ ದೇಹಕ್ಕೆ ಬಡಿಯಿತು. ಇದನ್ನು ಗಮನಿಸಿದ ಶಮಿ, ಅಂಗ್‌ಕ್ರಿಶ್ ಫೀಲ್ಡಿಂಗ್‌ಗೆ ಅಡ್ಡಿಪಡಿಸಿದ್ದಾರೆ ಎಂದು ಅಂಪೈರ್ ಬಳಿ ಮನವಿ ಮಾಡಿದರು. ಹೀಗಾಗಿ ಅಂಪೈರ್‌ಗಳು ಕೂಡ ಮೂರನೇ ಅಂಪೈರ್ಗೆ ಮೇಲ್ಮನವಿ ಸಲ್ಲಿಸಿದರು. ಇದನ್ನು ಮರುಪರಿಶೀಲನೆ ಮಾಡಿದ ಮೂರನೇ ಅಂಪೈರ್, ಅಂಗ್‌ಕ್ರಿಶ್ ಔಟೆಂದು ತೀರ್ಪು ನೀಡಿದರು. ಇದರಿಂದ ಅಂಗ್‌ಕ್ರಿಶ್ ತುಂಬಾ ಅಸಮಾಧಾನಗೊಂಡು ತಮ್ಮ ಆಕ್ರೋಶ ಹೊರಹಾಕಿದರು.
ಲಕ್ಷ್ಮಿ ಹೆಬ್ಬಾಳ್ಕರ್ (lakshmi Hebbalkar) ಕರ್ನಾಟಕದ ಜನಪ್ರಿಯ ಮಹಿಳಾ ರಾಜಕಾರಣಿಗಳಲ್ಲಿ ಒಬ್ಬರು. ಪ್ರಸ್ತುತ ಸರ್ಕಾರದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆಯೂ ಆಗಿರುವ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಹಲವು ವರ್ಷಗಳಿಂದಲೂ ಸಕ್ರಿಯ ರಾಜಕೀಯದಲ್ಲಿದ್ದಾರೆ. ಇದೀಗ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸಿನಿಮಾ ನಿರ್ಮಾಪಕಿಯೂ ಆಗುತ್ತಿದ್ದಾರೆ. ಮೊಮ್ಮಗಳ ಹೆಸರಲ್ಲಿ ಸಿನಿಮಾ ನಿರ್ಮಾಣ ಪ್ರಾರಂಭಿಸಿರುವ ಲಕ್ಷ್ಮಿ ಹೆಬ್ಬಾಳ್ಕರ್ ನಿರ್ಮಾಣ ಸಂಸ್ಥೆಗೆ ಐರಾ ಫಿಲಮ್ಸ್ ಎಂದು ಹೆಸರಿಟ್ಟಿದ್ದಾರೆ. ನಿರ್ಮಾಪಕಿಯಾಗಿ ‘ಅಣ್ಣಾ ಫ್ರಂ ಮೆಕ್ಸಿಕೊ’ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಮೊದಲ ಸಿನಿಮಾ ಆಗಿದ್ದು, ಇತ್ತೀಚೆಗಷ್ಟೆ ಸಿನಿಮಾದ ಟೀಸರ್ ಅನಾವರಣ ಆಗಿದೆ.
‘ಅಣ್ಣಾ ಫ್ರಂ ಮೆಕ್ಸಿಕೊ’ ಸಿನಿಮಾನಲ್ಲಿ ಡಾಲಿ ಧನಂಜಯ್ ನಾಯಕ ಆಗಿದ್ದು, ಈ ಹಿಂದೆ ಡಾಲಿಯ ‘ಬಡವ ರಾಸ್ಕಲ್’ ಸಿನಿಮಾ ನಿರ್ದೇಶಿಸಿದ್ದ ಶಂಕರ್ ಗುರು ಅವರು ಈ ಸಿನಿಮಾವನ್ನೂ ನಿರ್ದೇಶಿಸಲಿದ್ದಾರೆ. ಸಿನಿಮಾದ ಟೀಸರ್ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಲಕ್ಷ್ಮಿ ಹೆಬ್ಬಾಳ್ಕರ್ ಅವರು ತಾವು ಸಿನಿಮಾ ನಿರ್ಮಾಣಕ್ಕೆ ಬಂದಿದ್ದೇಕೆ ಎಂಬುದನ್ನು ಚುಟುಕಾಗಿ ವಿವರಿಸಿದರು.
ಸಿನಿಮಾದ ಟೀಸರ್ ಬಗ್ಗೆ ಮಾತನಾಡಿದ ಲಕ್ಷ್ಮಿ ಹೆಬ್ಬಾಳ್ಕರ್, ‘ಟೀಸರ್ ಬಹಳ ಚೆನ್ನಾಗಿತ್ತು, ಬಹಳ ರಿಚ್ ಆಗಿತ್ತು. ಅದರಲ್ಲೂ ಧನಂಜಯ್ ಅವರ ಕೊರಳಿನಲ್ಲಿದ್ದ ಕರ್ನಾಟಕದ ಲಾಕೆಟ್ ನೋಡಿ ಬಹಳ ಖುಷಿ ಆಯ್ತು. ಟೀಸರ್ ನೋಡಿದರೆ ಸಿನಿಮಾ ಎಷ್ಟು ರಿಚ್ ಆಗಿರಬಹುದು ಎಂಬ ಅಂದಾಜು ಸಿಗುತ್ತಿದೆ. ಡಾಲಿ ಪ್ರತಿಬಾರಿಯಂತೂ ಅದ್ಭುತವಾಗಿ ನಟಿಸಿದ್ದಾರೆ’ ಎಂದರು.
‘ಚಿತ್ರರಂಗ ಹೊಸದು ನನಗೆ, ಚಿಕ್ಕಂದಿನಿಂದಲೂ ಚಿತ್ರರಂಗದ ಬಗ್ಗೆ ಆಸೆ, ಕುತೂಹಲ ಇದ್ದೇ ಇದೆ. ಬಹಳ ದೊಡ್ಡ ದೊಡ್ಡ ನಟರನ್ನು ನೋಡಿಕೊಂಡು ಬೆಳೆದು ಬಂದವಳು. ರಾಜ್ಕುಮಾರ್, ವಿಷ್ಣುವರ್ಧನ್, ಅನಂತ್ನಾಗ್, ಶಂಕರ್ನಾಗ್, ಜಯಮಾಲ, ಜಯಪ್ರಧಾ ಇನ್ನೂ ಹಲವರನ್ನು ನೋಡಿ ಬೆಳೆದವಳು. ನಾನೂ ಸಹ ಎಲ್ಲರಂತೆ ಮಧ್ಯಮ ವರ್ಗದಿಂದ ಬಂದವಳು, ಕನ್ನಡ ಚಿತ್ರರಂಗಕ್ಕೆ ಏನಾದರೂ ಮಾಡಬೇಕು, ಅಲ್ಲಿಯೂ ಕೆಲಸ ಮಾಡಬೇಕು ಎಂಬ ಆಸೆ ಮೊದಲಿನಿಂದಲೂ ನನಗೆ ಇತ್ತು. ಈಗ ಡಾಲಿ ಧನಂಜಯ್ ಅವರು ಒಳ್ಳೆಯ ಕತೆ ಹಿಡಿದುಕೊಂಡು ಬಂದರು. ನೀವು ನಿರ್ಮಾಣ ಮಾಡಲೇ ಬೇಕು ಎಂದಾಗ ಇಲ್ಲ ಎನ್ನಲಾಗಲಿಲ್ಲ’ ಎಂದಿದ್ದಾರೆ ಲಕ್ಷ್ಮಿ ಹೆಬ್ಬಾಳ್ಕರ್.
‘ಕನ್ನಡ ಚಿತ್ರರಂಗದ ಬಹಳ ಎತ್ತರಕ್ಕೆ ಬೆಳೆಯುತ್ತಿದೆ. ವಿಶ್ವಮಟ್ಟದಲ್ಲಿ ಕನ್ನಡ ಪ್ರೇಕ್ಷಕರು ಇದ್ದಾರೆ. ಹಾಗಾಗಿ ಇದು ಒಳ್ಳೆಯ ಸಂದರ್ಭ ಎಂಬ ಕಾರಣಕ್ಕೆ ನಾವು ಇನ್ನು ಕೆಲವರೊಟ್ಟಿಗೆ ಸೇರಿಕೊಂಡು ಸಿನಿಮಾ ಮಾಡುತ್ತಿದ್ದೇವೆ. ನನ್ನ ಸಹೋದರ ಚನ್ನರಾಜ್ ಹಟ್ಟಿಜೋಳಿ ಅವರು ಎಲ್ಲವನ್ನೂ ನಿಭಾಯಿಸಲಿದ್ದಾರೆ. ನಮ್ಮ ನಿರ್ಮಾಣ ಸಂಸ್ಥೆಯಿಂದ ಗೋಲ್ಡನ್ ಸ್ಟಾರ್ ಗಣೇಶ್ ಅವರೊಟ್ಟಿಗೆ ಇನ್ನೊಂದು ಸಿನಿಮಾ ಅನ್ನೂ ಸಹ ಮಾಡಲಿದ್ದೇವೆ’ ಎಂದರು.
ಕೊಡಗು, ಏಪ್ರಿಲ್26: ಸಾವಿರಾರು ವಿದ್ಯಾರ್ಥಿಗಳಿಗೆ ದಾರಿದೀಪವಾಗಿದ್ದ ಶಿಕ್ಷಕಿಯೊಬ್ಬರ (Teacher) ದುಡುಕಿನ ನಿರ್ಧಾರ ಸದ್ಯ ಸಾಕಷ್ಟು ಅಚ್ಚರಿಗೆ ಕಾರಣವಾಗಿದೆ. ಗುಂಡು ಹಾರಿಸಿಕೊಂಡು ಆತ್ಮಹತ್ಯೆ(death) ಮಾಡಿಕೊಂಡಿರುವಂತಹ ಘಟನೆ ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಚೇರಂಬಾಣೆ ಗ್ರಾಮದಲ್ಲಿ ನಡೆದಿದೆ. ಚೇರಂಬಾಣೆ ಸರ್ಕಾರಿ ಪ್ರಾಥಮಿಕ ಶಾಲೆಯ ಎ.ರೋಹಿಣಿ(51) ಆತ್ಮಹತ್ಯೆ ಮಾಡಿಕೊಂಡ ಶಿಕ್ಷಕಿ. ಸ್ಥಳಕ್ಕೆ ಮಡಿಕೇರಿ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ನಡೆದಿದ್ದೇನು?
ಎ.ರೋಹಿಣಿ ಅವರು ಎಲ್ಲರ ಅಚ್ಚುಮೆಚ್ಚಿನ ಶಿಕ್ಷಕಿ ಆಗಿದ್ದರು. 25 ವರ್ಷ ತಮ್ಮ ವೃತ್ತಿ ಜೀವನದಲ್ಲಿ ಸಾವಿರಾರು ಮಕ್ಕಳಿಗೆ ದಾರಿದೀಪವಾಗಿದ್ದರು. ಆದರೆ ಏನಾಯಿತೋ ಏನೋ, ಒಂಟಿ ನಳಿಗೆ ಕೋವಿಯಿಂದ ತಮ್ಮ ಮನೆಯಲ್ಲೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿದ್ದಾರೆ. ನಿನ್ನೆ ರಾತ್ರಿ 12 ಗಂಟೆಯವರೆಗೆ ಕೆಲಸ ಮಾಡಿ ಮಲಗಿದ್ದ ಅವರು ಮುಂಜಾನೆ 5 ಗಂಟೆ ವೇಳೆಗೆ ತಮ್ಮ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಗುಂಡು ಸಿಡಿದ ಶಬ್ಧ ಕೇಳುತ್ತಿದ್ದಂತೆ ಪಕ್ಕದ ಕೊಠಡಿಯಲ್ಲಿ ಮಲಗಿದ್ದ ಅವರ ಪತಿ ಕರುಂಬಯ್ಯ ಹಾಗೂ ಮಗಳು ಎದ್ದು ಹೋಗಿ ನೋಡಿದಾಗ ರೋಹಿಣಿ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಕೂಡಲೇ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಭಾಗಮಂಡಲ ಠಾಣೆ ಪೊಲೀಸರು ಮೃತದೇಹವನ್ನು ಕೊಡಗು ಜಿಲ್ಲಾಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.
ಜನಗಣತಿ ಕೆಸಲ ಒತ್ತಡ: ಪತಿ ಹೇಳಿದ್ದೇನು?
ಇನ್ನು ಈ ಬಗ್ಗೆ ಮೃತ ರೋಹಿಣಿ ಪತಿ ಕರುಂಬಯ್ಯ ಮಾತನಾಡಿದ್ದು, ಯಾವಗಲೂ ಟೆನ್ಷನ್ ಎಂದು ಹೇಳುತ್ತಿದ್ದರು. ಜನಗಣತಿ ಆರಂಭವಾದ ಬಳಿಕ ಎಲ್ಲಾ ಕೆಲಸ ಮುಗಿಸಿ ಮಲಗುವುದು ರಾತ್ರಿ 12 ಗಂಟೆಯಾಗುತ್ತಿತ್ತು. ಇವರಿಗೆ 250ಕ್ಕೂ ಹೆಚ್ಚು ಮನೆಗಳ ಜನಗಣತಿ ಮಾಡಲು ಕೊಟ್ಟಿದ್ದರು. ಅದು ಸಾಧ್ಯವಾಗದೆ ಮತ್ತೊಬ್ಬ ಸಹಾಯಕರನ್ನು ಕೊಡುವಂತೆ ತಹಶೀಲ್ದಾರ್ಗೆ ಮನವಿ ಮಾಡಿದ್ದರೂ ಯಾವುದೇ ಸ್ಪಂದನೆ ಸಿಕ್ಕಿರಲಿಲ್ಲ. ಈ ಒತ್ತಡದಿಂದ ಅವರು ಸಾವನ್ನಪ್ಪಿರಬಹುದು ಎಂದಿದ್ದಾರೆ.
ರೋಹಿಣಿ ಅವರು ತುಂಬಾ ಧೈರ್ಯವಂತೆಯಾಗಿದ್ದರು: ಮೋಹನ್ ಪೆರಾಜೆ
ಇನ್ನು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮಡಿಕೇರಿ ತಾಲ್ಲೂಕು ಅಧ್ಯಕ್ಷ ಮೋಹನ್ ಪೆರಾಜೆ ಮಾತನಾಡಿದ್ದು, ಇಲಾಖೆ ಎಂದ ಮೇಲೆ ಒತ್ತಡಗಳು ಇರುತ್ತವೆ. ಆದರೆ ಆತ್ಮಹತ್ಯೆ ಮಾಡಿಕೊಳ್ಳುವಂತಹ ಯಾವುದೇ ಒತ್ತಡಗಳು ಇರಲಿಲ್ಲ. ರೋಹಿಣಿ ಅವರು ತುಂಬಾ ಧೈರ್ಯವಂತೆಯಾಗಿದ್ದವರು. ಎಂತಹದ್ಧೇ ಕೆಲಸಗಳನ್ನು ವಹಿಸಿದ್ದರೂ ಕೆಲಸದಿಂದ ಹಿಂದೆ ಸರಿಯುತ್ತಿರಲಿಲ್ಲ. ಹೀಗಾಗಿ ಜನಗಣತಿ ಕಾರ್ಯದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವುದನ್ನು ನಂಬಲಾಗುತ್ತಿಲ್ಲ ಎಂದು ಹೇಳಿದ್ದಾರೆ.
ಸದ್ಯ ಶಿಕ್ಷಕಿ ರೋಹಿಣಿ ಅವರ ಪತಿ ಠಾಣೆಗೆ ದೂರು ನೀಡಿದ್ದು, ಪೊಲೀಸರು ತನಿಖೆ ನಡೆಸಿದ್ದಾರೆ.