ಏಪ್ರಿಲ್​​​​​​​ ತಿಂಗಳ ಕೊನೆಯಲ್ಲಿ ಈ ರಾಶಿಗೆ ಅದ್ಭುತ ಅದೃಷ್ಟ! ಎಚ್ಚರ ಈ ಮೂವರಿಂದ ಅದೆಲ್ಲವನ್ನು ಕಳೆದುಕೊಳ್ಳಬಹುದು – Kannada News | Karkataka Rashi April 2026 Forecast: Astrological Insights for Finance, Health and Career

2026ರ ಏಪ್ರಿಲ್ ತಿಂಗಳಲ್ಲಿ ಗ್ರಹಗತಿಗಳ ಆಧಾರದ ಮೇಲೆ ಕರ್ಕಾಟಕ ರಾಶಿಯವರಿಗೆ ಅಂದರೆ ಪುನರ್ವಸು ನಾಲ್ಕನೇ ಪಾದ, ಪುಷ್ಯ, ಆಶ್ಲೇಷ ನಕ್ಷತ್ರಗಳ ನಾಲ್ಕೂ ಪಾದಗಳು ಇರಲಿದ್ದು ಅತಿ ಹೆಚ್ಚು ನಿಖರವಾದ ಮತ್ತು ವಿವರವಾದ ವಿಶ್ಲೇಷಣೆ ಇಲ್ಲಿದೆ. ​ಪ್ರಸ್ತುತ ಗ್ರಹಗಳ ಸ್ಥಿತಿ ಗಮನಿಸಿದರೆ, ನಿಮಗೆ ಸವಾಲುಗಳಿದ್ದರೂ ಕೆಲವು ಗ್ರಹಗಳು ರಕ್ಷಣಾತ್ಮಕವಾಗಿ ಕೆಲಸ ಮಾಡುತ್ತಿವೆ.

​ಅಶುಭ ಫಲ ನೀಡುವ ಗ್ರಹಗಳು

​ಗುರು ದ್ವಾದಶ ಸ್ಥಾನದಲ್ಲಿ ಅಂದರೆ ವ್ಯಯ ಸ್ಥಾನ ಮಿಥುನ ರಾಶಿಯಲ್ಲಿದ್ದಾನೆ. ಇದು ಕರ್ಕಾಟಕಕ್ಕೆ 12ನೇ ಮನೆ. ಇದರಿಂದಾಗಿ ಶುಭ ಕಾರ್ಯಗಳಿಗಾಗಿ ಮದುವೆ, ಮನೆ ರಿಪೇರಿ, ಪ್ರವಾಹಗಳಿಗೆ ಹಣದ ವ್ಯಯ ಹೆಚ್ಚಾಗಲಿದೆ. ಆರೋಗ್ಯಕ್ಕಾಗಿ ಅನಿರೀಕ್ಷಿತ ಖರ್ಚುಗಳು ಬರಬಹುದು. ನಿದ್ರಾಹೀನತೆ ಉಂಟಾಗುವ ಸಂಭವವಿದೆ.

​ಶನಿ ದಶೆ :

ಶನಿಯು ಮೀನ ರಾಶಿಯಲ್ಲಿ ಸಂಚರಿಸುತ್ತಿದ್ದು, ಇದು ನಿಮಗೆ ನವಮ ಸ್ಥಾನ. ಇದು ಈ ತಿಂಗಳ ಪ್ರಮುಖ ಸವಾಲು. ಕೆಲಸ ಕಾರ್ಯಗಳಲ್ಲಿ ಅಡೆತಡೆ, ಮಂದಗತಿ, ಮತ್ತು ಮಾನಸಿಕ ಅಶಾಂತಿ ನೀಡಬಹುದು. ಶನಿಯು ನಿಮ್ಮ ರಾಶಿಯ ಮೂರನೇ ರಾಶಿಯ ಮೇಲೆ ದೃಷ್ಟಿ ಬೀರುವುದರಿಂದ ಮಾತು ಕಠಿಣವಾಗಬಹುದು, ಇದರಿಂದ ಕುಟುಂಬದಲ್ಲಿ ಕಿರಿಕಿರಿ ಉಂಟಾಗದಂತೆ ನೋಡಿಕೊಳ್ಳಿ.

​ರಾಹು ದಶೆ :

ಅಷ್ಟಮದ ಸ್ಥಾನದಲ್ಲಿರುವ ರಾಹು ಚಿಕಿತ್ಸೆ ಮತ್ತು ರೋಗಕ್ಕೆ ಸಂಬಂಧದಲ್ಲಿ ಸಣ್ಣಪುಟ್ಟ ವ್ಯತ್ಯಾಸ ಸೃಷ್ಟಿ ಆಗಲಿದೆ. ವಿದೇಶ ಪ್ರಯಾಣದ ಪ್ರಯತ್ನದಲ್ಲಿದ್ದರೆ ಅಡೆತಡೆಗಳು ಎದುರಾಗಬಹುದು.

​ಶುಭ ಫಲ ನೀಡುವ ಗ್ರಹಗಳು

​ಕೇತು :

ಸಿಂಹ ರಾಶಿಯಲ್ಲಿರುವ ಕೇತು ನಿಮಗೆ ಅತ್ಯಂತ ಶುಭ ಫಲ ನೀಡುತ್ತಿದ್ದಾನೆ. ಇದು ನಿಮಗೆ ಧೈರ್ಯ, ಸ್ಥಿರತೆ ಮತ್ತು ಶತ್ರುಗಳ ಮೇಲೆ ಜಯ ನೀಡುತ್ತದೆ. ಕಿರಿಯ ಸಹೋದರರಿಂದ ಅಥವಾ ಮಿತ್ರರಿಂದ ಸಹಕಾರ ದೊರೆಯಲಿದೆ.

​ಕುಜ ದಶೆ :

ಮಂಗಳನು ನಿಮ್ಮ ರಾಶಿಯ ಹತ್ತನೇ ಅಥವಾ ಹನ್ನೊಂದನೇ ಮನೆಯ ಸ್ಥಿತಿಗತಿಗಳನ್ನು ಅವಲಂಬಿಸಿ ವೃತ್ತಿಯಲ್ಲಿ ಅಧಿಕಾರ ನೀಡುತ್ತಾನೆ. ಭೂಮಿ ಅಥವಾ ಕೃಷಿ ಸಂಬಂಧಿತ ಕೆಲಸಗಳಲ್ಲಿ ತೊಡಗಿಕೊಂಡವರಿಗೆ ಲಾಭದ ಸೂಚನೆ ಇದೆ.

​ಸೂರ್ಯ ದಶೆ :

ಸೂರ್ಯನು ಉಚ್ಚ ಮೇಷ ರಾಶಿಯಲ್ಲಿ ಇರುವುದರಿಂದ ಸರ್ಕಾರಿ ಕೆಲಸಗಳು ಅಥವಾ ಗೌರವ ಪ್ರಾಪ್ತಿಯಾಗುವ ಸಾಧ್ಯತೆ ಇದೆ. ಸಮಾಜದಲ್ಲಿ ನಿಮ್ಮ ಮೌಲ್ಯ ಹೆಚ್ಚಲಿದೆ.

​ಜೀವನದ ವಿವಿಧ ಆಯಾಮಗಳ ಮೇಲೆ ಪ್ರಭಾವ

ಆರ್ಥಿಕತೆ ಸಾಧಾರಣ ಹಣ ಬರುತ್ತದೆ, ಆದರೆ ಬಂದಷ್ಟೇ ವೇಗವಾಗಿ ವ್ಯಯವಾಗುತ್ತದೆ. ಹೂಡಿಕೆ ಮಾಡುವಾಗ ಎಚ್ಚರ.

ಆರೋಗ್ಯ ಗಮನ ಅಗತ್ಯ ನವಮ ಶನಿಯ ಪ್ರಭಾವವಿರುವುದರಿಂದ ಕಾಲು ಅಥವಾ ಬೆನ್ನು ನೋವು ಕಾಣಿಸಿಕೊಳ್ಳಬಹುದು. ಮಾನಸಿಕ ಒತ್ತಡ ಕಡಿಮೆ ಮಾಡಿಕೊಳ್ಳಿ. ಕೆಲಸದ ಸ್ಥಳದಲ್ಲಿ ಹೊಸ ಜವಾಬ್ದಾರಿ ಸಿಗಬಹುದು. ನಿಮ್ಮ ಶ್ರಮಕ್ಕೆ ಅಧಿಕಾರಿಗಳಿಂದ ಮನ್ನಣೆ ಸಿಗಲಿದೆ.
ಕುಟುಂಬದ ಹಿರಿಯರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ದಾಂಪತ್ಯದಲ್ಲಿ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಬಂದು ಹೋಗುತ್ತವೆ.

ಗುರುವು ವ್ಯಯದಲ್ಲಿರುವುದರಿಂದ ಅಶಕ್ತರಿಗೆ ಪುಸ್ತಕ ಅಥವಾ ಲೇಖನಿ ದಾನ ಮಾಡಿ. ಇದು ವ್ಯಯ ಸ್ಥಾನದ ದೋಷ ಕಡಿಮೆ ಮಾಡುತ್ತದೆ. ಗಣಪತಿಯ ಆರಾಧನೆ ಮಾಡುವುದರಿಂದ ಕೆಲಸದಲ್ಲಿನ ಅಡೆತಡೆಗಳು ನಿವಾರಣೆಯಾಗುತ್ತವೆ.

– ಲೋಹಿತ ಹೆಬ್ಬಾರ್

Source link

IPL 2026: ಆರ್​​ಸಿಬಿಗೆ ಆಘಾತ; ಡೆಲ್ಲಿ ವಿರುದ್ಧದ ಪಂದ್ಯಕ್ಕೆ ಫಿಲ್ ಸಾಲ್ಟ್ ಅಲಭ್ಯ – Kannada News | RCB’s IPL 2026 Injury Woes Continue: Phil Salt Out for Delhi Match

2026 ರ ಐಪಿಎಲ್​ನಲ್ಲಿ (IPL 2026) ಆಟಗಾರರ ಗಾಯದಿಂದ ಹೆಚ್ಚು ತೊಂದರಿಗೀಡಾಗಾದ ತಂಡವೆಂದರೆ ಅದು ಆರ್​ಸಿಬಿ (RCB) ಎಂಬ ಮಾತಿತ್ತು. ಏಕೆಂದರೆ ಟೂರ್ನಿ ಆರಂಭಕ್ಕೂ ಮುನ್ನವೇ ಗಾಯಗೊಂಡಿದ್ದ ಜೋಶ್ ಹೇಜಲ್‌ವುಡ್ ಇಂಜುರಿಯಿಂದ ಚೇತರಿಸಿಕೊಂಡು ತಂಡವನ್ನು ಸೇರಿಕೊಂಡಿದ್ದರು. ಅಂದಿನಿಂದ ತಂಡದಲ್ಲಿ ಯಾವುದೇ ಸಮಸ್ಯೆಗಳಿರಲಿಲ್ಲ. ಆದರೀಗ ತಂಡಕ್ಕೆ ದೊಡ್ಡ ಆಘಾತ ಎದುರಾಗಿದೆ. ತಂಡದ ಸ್ಟಾರ್ ಓಪನರ್ ಫಿಲ್ ಸಾಲ್ಟ್ (Phil Salt ) ಇಂಜುರಿಗೆ ತುತ್ತಾಗಿದ್ದಾರೆ. ಹೀಗಾಗಿ ಅವರು ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ಆಡಲಿರಲಿಲ್ಲ. ಆದರೆ ಅವರು ಡೆಲ್ಲಿ ವಿರುದ್ಧದ ಪಂದ್ಯದ ವೇಳೆಗೆ ಚೇತರಿಸಿಕೊಳ್ಳುತ್ತಾರೆ ಎಂಬ ನಿರೀಕ್ಷೆ ಇತ್ತು. ಆದರೀಗ ಅದು ಸುಳ್ಳಾಗಿದೆ. ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ಫಿಲ್ ಸಾಲ್ಟ್ ಆಡುವುದಿಲ್ಲ ಎಂದು ವರದಿಯಾಗಿದೆ.

ಸತತ 2ನೇ ಪಂದ್ಯಕ್ಕೆ ಸಾಲ್ಟ್ ಅಲಭ್ಯ

ಆರ್‌ಸಿಬಿ ತನ್ನ ಮುಂದಿನ ಪಂದ್ಯವನ್ನು ಏಪ್ರಿಲ್ 27, ಸೋಮವಾರ ರಾಜಧಾನಿ ನವದೆಹಲಿಯಲ್ಲಿ ಆಡಲಿದೆ. ಈ ಪಂದ್ಯದಲ್ಲಿ, ರಜತ್ ಪಾಟಿದಾರ್ ನಾಯಕತ್ವದ ಬೆಂಗಳೂರು, ಆತಿಥೇಯ ದೆಹಲಿ ಕ್ಯಾಪಿಟಲ್ಸ್ ತಂಡವನ್ನು ಎದುರಿಸಲಿದೆ. ಬೆಂಗಳೂರು ತಂಡ ಈ ಪಂದ್ಯಕ್ಕಾಗಿ ದೆಹಲಿಗೆ ಆಗಮಿಸಿದೆ. ಆದರೆ ಮೈದಾನಕ್ಕಿಳಿಯುವ ಮುನ್ನವೇ ತಂಡಕ್ಕೆ ಆಘಾತ ಎದುರಾಗಿದ್ದು, ಈ ಪಂದ್ಯದಲ್ಲಿ ಸಾಲ್ಟ್ ಆಡದಿರುವುದು ಖಚಿತವಾಗಿದೆ. ತಂಡದ ಬ್ಯಾಟಿಂಗ್ ಕೋಚ್ ದಿನೇಶ್ ಕಾರ್ತಿಕ್ ಇದನ್ನು ದೃಢಪಡಿಸಿದ್ದಾರೆ.

ಆರ್‌ಸಿಬಿ ತಂಡದ ಸ್ಫೋಟಕ ಆರಂಭಿಕ ಆಟಗಾರ ಫಿಲ್ ಸಾಲ್ಟ್ ಅವರ ಪ್ರದರ್ಶನ ಈ ಆವೃತ್ತಿಯಲ್ಲಿ ಏರಿಳಿತಗಳಿಂದ ಕೂಡಿದೆ. ಆಡಿರುವ ಆರು ಇನ್ನಿಂಗ್ಸ್‌ಗಳಲ್ಲಿ ಮೊದಲ ಮೂರು ಇನ್ನಿಂಗ್ಸ್‌ಗಳಲ್ಲಿ ವಿಫಲರಾಗಿದ್ದ ಸಾಲ್ಟ್, ಎರಡು ಪಂದ್ಯಗಳಲ್ಲಿ ಅರ್ಧಶತಕಗಳ ಇನ್ನಿಂಗ್ಸ್ ಆಡಿದ್ದಾರೆ. ಉಳಿದಂತೆ ಒಂದು ಪಂದ್ಯದಲ್ಲಿ 40 ಕ್ಕೂ ಹೆಚ್ಚು ರನ್‌ ಗಳಿಸಿದ್ದಾರೆ. ಒಟ್ಟಾರೆಯಾಗಿ, ಅವರು ಆರು ಇನ್ನಿಂಗ್ಸ್‌ಗಳಲ್ಲಿ 168 ರ ಸ್ಟ್ರೈಕ್ ರೇಟ್​ನಲ್ಲಿ 202 ರನ್‌ಗಳಿಸಿದ್ದಾರೆ. ಇದರಲ್ಲಿ 16 ಬೌಂಡರಿಗಳು ಮತ್ತು 11 ಸಿಕ್ಸರ್‌ಗಳು ಸೇರಿವೆ.

IPL 2026: ತವರಿನ ಹೊರಗೆ ಸೇಡಿನ ಸಮರಕ್ಕೆ ಸಜ್ಜಾದ ಆರ್​​ಸಿಬಿ; ಎದುರಾಳಿ ಯಾರು?

 ಯಾರಿಗೆ ಅವಕಾಶ?

ಫಿಲ್ ಸಾಲ್ಟ್ ಅಲಭ್ಯತೆ ಆರ್‌ಸಿಬಿಗೆ ದೊಡ್ಡ ಹಿನ್ನಡೆಯಾಗಿದ್ದರೂ, ವಿರಾಟ್ ಕೊಹ್ಲಿ ತಂಡದಲ್ಲಿರುವುದು ತಂಡವನ್ನು ಕೊಂಚ ನಿರಾಳವಾಗಿಸಿದೆ. ಕಳೆದ ಪಂದ್ಯದಂತೆ ಈ ಪಂದ್ಯದಲ್ಲೂ ಜಾಕೋಬ್ ಬೆಥೆಲ್,ಕೊಹ್ಲಿ ಜೊತೆ ಇನ್ನಿಂಗ್ಸ್ ಆರಂಭಿಸುವುದು ಖಚಿತ. ಕಳೆದ ಪಂದ್ಯದಲ್ಲಿ ಅವರು ವಿಫಲರಾಗಿದ್ದರೂ, ಬೆಥೆಲ್​ಗೆ ಈ ಪಂದ್ಯದಲ್ಲಿ ಆಡುವ ಅವಕಾಶ ಸಿಗಲಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ರಜನೀಕಾಂತ್ ಜೊತೆ ನಟಿಸಿದ ಅನುಭವ ಹಂಚಿಕೊಂಡ ನಟಿ ಮೇಘನಾ ರಾಜ್ – Kannada News | Meghana Raj talks about experience working with Rajinikanth

ಗೀತಪ್ರಿಯಾ ಅವರ ‘ಅಪರಿಚಿತೆ’ ಸಿನಿಮಾದ ಕಾರ್ಯಕ್ರಮಕ್ಕೆ ಆಗಮಿಸಿದ್ದ ನಟಿ ಮೇಘನಾ ರಾಜ್ (Meghana Raj), ಮಹಿಳೆಯರ ಪ್ರಯತ್ನದ ಬಗ್ಗೆ ಮೆಚ್ಚುಗೆ ಮಾತನಾಡಿದರು. ಬಳಿಕ ಅವರು ರಜನೀಕಾಂತ್ ಜೊತೆಗೆ ನಟಿಸುತ್ತಿರುವ ಅನುಭವದ ಬಗ್ಗೆಯೂ ಮಾಧ್ಯಗಳ ಜೊತೆಗೆ ಹಂಚಿಕೊಂಡರು. ಮೇಘನಾ ರಾಜ್ ಅವರು ‘ಜೈಲರ್ 2’ ಸಿನಿಮಾನಲ್ಲಿ ರಜನೀಕಾಂತ್ ಅವರೊಟ್ಟಿಗೆ ನಟಿಸುತ್ತಿದ್ದಾರೆ. ಸಿನಿಮಾದ ಬಗ್ಗೆ ಈಗಲೇ ಎಲ್ಲವನ್ನೂ ಹೇಳಲಾಗುವುದಿಲ್ಲ ಎಂದ ಮೇಘನಾ, ರಜನೀಕಾಂತ್ ಅವರೊಟ್ಟಿಗೆ ನಟಿಸಿದ ಅನುಭವದ ಬಗ್ಗೆ ಚುಟುಕಾಗಿ ಮಾತನಾಡಿದ್ದಾರೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

IPL 2026: ತವರಿನ ಹೊರಗೆ ಸೇಡಿನ ಸಮರಕ್ಕೆ ಸಜ್ಜಾದ ಆರ್​​ಸಿಬಿ; ಎದುರಾಳಿ ಯಾರು? – Kannada News | IPL 2026: DC vs RCB Match 39 Preview – Date, Time, Venue and Where to Watch Live

ಐಪಿಎಲ್ 2026 ರ 39 ನೇ ಪಂದ್ಯವು ಡೆಲ್ಲಿ ಕ್ಯಾಪಿಟಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ನಡೆಯಲಿದೆ. ಉಭಯ ತಂಡಗಳ ನಡುವಿನ ಎರಡನೇ ಮುಖಾಮುಖಿ ಇದಾಗಿದೆ. ಈ ಮೊದಲು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿದ್ದ ಮೊದಲ ಮುಖಾಮುಖಿಯಲ್ಲಿ ಆತಿಥೇಯ ಆರ್​​ಸಿಬಿಯನ್ನು ಡೆಲ್ಲಿ ಕ್ಯಾಪಿಟಲ್ಸ್ ಮಣಿಸಿತ್ತು. ಹೀಗಾಗಿ ಎರಡನೇ ಮುಖಾಮುಖಿ ಆರ್​​ಸಿಬಿಗೆ ಸೇಡಿನ ಸಮರವಾಗಿದೆ. ಇದಕ್ಕೆ ಪೂರಕವಾಗಿ ಕಳೆದ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಮಣಿಸಿರುವ ಆರ್​​ಸಿಬಿ, ಪಂಜಾಬ್ ಕಿಂಗ್ಸ್ ವಿರುದ್ಧ ಸೋತಿರುವ ಡೆಲ್ಲಿ ತಂಡವನ್ನು ಮಣಿಸಲು ಸಜ್ಜಾಗಿದೆ.

ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಆರ್​​ಸಿಬಿ ನಡುವಿನ ಐಪಿಎಲ್ 2026 ರ 39 ನೇ ಪಂದ್ಯ ಯಾವಾಗ ನಡೆಯಲಿದೆ?

ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಆರ್​​ಸಿಬಿ ನಡುವಿನ ಐಪಿಎಲ್ 2026 ರ 39 ನೇ ಪಂದ್ಯ ಏಪ್ರಿಲ್ 27 ರಂದು ನಡೆಯಲಿದೆ.

ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಆರ್​​ಸಿಬಿ ನಡುವಿನ ಐಪಿಎಲ್ 2026 ರ 39 ನೇ ಪಂದ್ಯ ಎಲ್ಲಿ ನಡೆಯಲಿದೆ?

ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಆರ್​​ಸಿಬಿ ನಡುವಿನ ಐಪಿಎಲ್ 2026 ರ 39 ನೇ ಪಂದ್ಯ ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯಲಿದೆ.

ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಆರ್​​ಸಿಬಿ ನಡುವಿನ ಐಪಿಎಲ್ 2026 ರ 39 ನೇ ಪಂದ್ಯ ಎಷ್ಟು ಗಂಟೆಗೆ ಆರಂಭವಾಗಲಿದೆ?

ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಆರ್​​ಸಿಬಿ ನಡುವಿನ ಐಪಿಎಲ್ 2026 ರ 39 ನೇ ಪಂದ್ಯ ಸಂಜೆ 7:30 ಕ್ಕೆ ಪ್ರಾರಂಭವಾಗಲಿದ್ದು, ಟಾಸ್ ಸಂಜೆ 7 ಗಂಟೆಗೆ ನಡೆಯಲಿದೆ.

ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಆರ್​​ಸಿಬಿ ನಡುವಿನ ಐಪಿಎಲ್ 2026 ರ 39 ನೇ ಪಂದ್ಯವನ್ನು ಉಚಿತವಾಗಿ ವೀಕ್ಷಿಸುವುದು ಹೇಗೆ?

ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಆರ್​​ಸಿಬಿ ನಡುವಿನ ಐಪಿಎಲ್ 2026 ರ 39 ನೇ ಪಂದ್ಯವನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್​ವರ್ಕ್​ನ ವಿವಿದ ಚಾನೆಲ್​ಗಳಲ್ಲಿ ವೀಕ್ಷಿಸಬಹುದು.

ಉಭಯ ತಂಡಗಳು

ಆರ್​ಸಿಬಿ ಪೂರ್ಣ ತಂಡ: ರಜತ್ ಪಾಟಿದಾರ್, ವಿರಾಟ್ ಕೊಹ್ಲಿ, ದೇವದತ್ತ್ ಪಡಿಕ್ಕಲ್, ರಜತ್ ಪಾಟಿದಾರ್, ಫಿಲ್ ಸಾಲ್ಟ್, ಜಿತೇಶ್ ಶರ್ಮಾ, ಜೋರ್ಡಾನ್ ಕಾಕ್ಸ್, ಕೃನಾಲ್ ಪಾಂಡ್ಯ, ಸ್ವಪ್ನಿಲ್ ಸಿಂಗ್, ಟಿಮ್ ಡೇವಿಡ್, ರೊಮಾರಿಯೋ ಶೆಫರ್ಡ್, ಜಾಕೋಬ್ ಬೆಥೆಲ್, ವೆಂಕಟೇಶ್ ಅಯ್ಯರ್, ಸಾತ್ವಿಕ್ ದೇಸ್ವಾಲ್, ಮಂಗೇಶ್ ಯಾದವ್, ವಿಕ್ಕಿ ಓಸ್ತ್ವಾಲ್, ವಿಹಾನ್ ಮಲ್ಹೋತ್ರಾ, ಕಾನಿಷ್ಕ್ ಚೌಹಾಣ್, ಜೋಶ್ ಹೇಜಲ್​ವುಡ್, ರಸಿಖ್ ದಾರ್, ಸುಯಶ್ ಶರ್ಮಾ, ಭುವನೇಶ್ವರ್ ಕುಮಾರ್, ನುವಾನ್ ತುಷಾರ, ಅಭಿನಂದನ್ ಸಿಂಗ್, ಜಾಕೋಬ್ ಡಫಿ,

ಡೆಲ್ಲಿ ಕ್ಯಾಪಿಟಲ್ಸ್ ತಂಡ: ಪಾತುಮ್ ನಿಸ್ಸಾಂಕ, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಸಮೀರ್ ರಿಜ್ವಿ, ಡೇವಿಡ್ ಮಿಲ್ಲರ್, ಅಕ್ಸರ್ ಪಟೇಲ್ (ನಾಯಕ), ಟ್ರಿಸ್ಟಾನ್ ಸ್ಟಬ್ಸ್, ಅಕಿಬ್ ನಬಿ ದಾರ್, ಲುಂಗಿ ಎನ್‌ಗಿಡಿ, ಕುಲ್ದೀಪ್ ಯಾದವ್, ಟಿ ನಟರಾಜನ್, ಮುಖೇಶ್ ಕುಮಾರ್, ವಿಪ್ರಜ್ ನಿಗಮ್, ಅಶುತೋಷ್ ಶರ್ಮಾ, ಕರುಣ್ ನಾಯರ್, ಎಂ. ಅಜಯ್ ಜಾದವ್ ಮಂಡಲ್, ಪೃಥ್ವಿ ಶಾ, ತ್ರಿಪುರ ವಿಜಯ್, ಅಭಿಷೇಕ್ ಪೊರೆಲ್, ಸಾಹಿಲ್ ಪರಾಖ್, ಮಾಧವ್ ತಿವಾರಿ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ರಾಮಾಯಣ’ ಜಪಾನಿಗೆ ಹೋದ ಆಸಕ್ತಿಕರ ಕತೆ ಗೊತ್ತೆ? – Kannada News | The Story behind Animated movie Ramayana: The Legend of Prince Rama

ರಣ್​ಬೀರ್ ಕಪೂರ್, ಯಶ್ (Yash) ನಟಿಸಿರುವ ‘ರಾಮಾಯಣ’ ಸಿನಿಮಾ ವಿಶ್ವ ಬಾಕ್ಸ್ ಆಫೀಸ್​​ನಲ್ಲಿ ಭಾರಿ ಸದ್ದು ಮಾಡುತ್ತಿದೆ. ಸಿನಿಮಾ ನಿರ್ಮಾಣ ಮಾಡಿರುವ ನಮಿತ್ ಮಲ್ಹೋತ್ರಾ, ‘ಭಾರತದ ಸಂಸ್ಕೃತಿಯನ್ನು, ಭಾರತದ ಧರ್ಮವನ್ನು ನಾವು ವಿಶ್ವಕ್ಕೆ ತಲುಪಿಸುತ್ತಿದ್ದೇವೆ’ ಎಂದಿದ್ದಾರೆ. ಅಸಲಿಗೆ ‘ರಾಮಾಯಣ’ ಕತೆಯನ್ನು ದಶಗಳ ಹಿಂದಿನಿಂದಲೂ ಹಲವು ರಾಷ್ಟ್ರಗಳಿಗೆ ಭಾರತೀಯರು ಪರಿಚಯಿಸಿದ್ದಾರೆ. ಹಲವಾರು ದೇಶಗಳಲ್ಲಿ ರಾಮಾಯಣದ ನಾಟಕ ಪ್ರದರ್ಶನಗಳಾಗಿವೆ. ರಾಮಾಯಣ ಕತೆಯ ತರ್ಜುಮೆಗಳನ್ನು ಮಾಡಲಾಗಿದೆ. ಆಸಕ್ತಿಕರ ಕತೆಯೆಂದರೆ ‘ರಾಮಾಯಣ’ ಕತೆ ಸಿನಿಮಾ ಆಗಿ ಜಪಾನ್​​ಗೆ ಹೋದ ಕತೆ.

ಜಪಾನಿಗೆ ‘ರಾಮಾಯಣ’ ಸಿನಿಮಾ ಆಗಿ ಹೋಗಿದ್ದು ಯುಗೊ ಸಾಕೊ ಎಂಬುವರ ಸತತ ಪ್ರಯತ್ನದಿಂದ. ಯುಗೊ ಸಾಕೊ ಜಪಾನಿನ ಜನಪ್ರಿಯ ಸಿನಿಮಾ ನಿರ್ದೇಶಕ, ಚಿತ್ರಕತೆ ಬರಹಗಾರ ಮತ್ತು ನಿರ್ಮಾಪಕ. 1970 ರಲ್ಲಿ ಮೊದಲ ಬಾರಿ ಭಾರತಕ್ಕೆ ಬಂದ ಯುಗೊ ಸಾಕೊ, ಭಾರತವನ್ನು ಬಹಳ ಇಷ್ಟಪಡುತ್ತಾರೆ. ಅದಾದ ಬಳಿಕ ಸುಮಾರು 40 ಬಾರಿ ಬೇರೆ ಬೇರೆ ಕಾರಣಗಳಿಗೆ ಅವರು ಭಾರತಕ್ಕೆ ಬರುತ್ತಾರೆ. ಆದರೆ 1983 ರಲ್ಲಿ ಅವರು ಭಾರತದ ಖ್ಯಾತ ಪುರಾತತ್ವ ಶಾಸ್ತ್ರಜ್ಞ ಡಾ ಬಿಬಿ ಲಾಲ್ ಅವರನ್ನು ಭೇಟಿ ಆಗುತ್ತಾರೆ. ಅವರೊಟ್ಟಿಗೆ ಸೇರಿ ರಾಮಾಯಣ ಕುರಿತಾದ ಡಾಕ್ಯುಮೆಂಟರಿ ಒಂದಕ್ಕೆ ಕೆಲಸ ಮಾಡುತ್ತಾರೆ. ಅವರ ಮೇಲೆ ‘ರಾಮಾಯಣ’ ಕತೆ ಬಹಳ ಪರಿಣಾಮ ಬೀರುತ್ತದೆ. ಅದನ್ನು ಜಪಾನಿನಲ್ಲಿ ಸಿನಿಮಾ ಮಾಡುವ ಆಸೆಯನ್ನು ಅವರು ವ್ಯಕ್ತಪಡಿಸುತ್ತಾರೆ.

ಜಪಾನಿನ ಅನಿಮೇಟೆಡ್ ಮಾದರಿ ಬಳಸಿ ‘ರಾಮಾಯಣ’ ಕತೆಯನ್ನು ಸಿನಿಮಾ ಮಾಡುವುದು ಅವರ ಆಸೆ ಆಗಿರುತ್ತದೆ. ಆದರೆ ‘ರಾಮಾಯಣ’ ದೇವರ ಕತೆಯಾಗಿದ್ದು ಅದನ್ನು ಕಾರ್ಟೂನ್ ಮಾದರಿಯಲ್ಲಿ ನಿರ್ಮಿಸಲು ಇಲ್ಲಿನ ಸಂಪ್ರದಾಯವಾದಿಗಳು ಒಪ್ಪುವುದಿಲ್ಲ. ವಿಶ್ವ ಹಿಂದೂ ಪರಿಷತ್ ಅಂದೂ ದೆಹಲಿಯ ಜಪಾನಿನ ರಾಯಭಾರಿ ಕಚೇರಿ ಮುಂದೆ ಪ್ರತಿಭಟನೆ ಸಹ ನಡೆಸುತ್ತದೆ. ಆದರೆ ಯುಗೊ ಸಾಕೊ ತಮ್ಮ ಪ್ರಯತ್ನ ಬಿಡುವುದಿಲ್ಲ, ಅನಿಮೇಷನ್ ಎಂಬುದು ಜಪಾನಿನ ಬಹಳ ಪ್ರಬುದ್ಧ ಮತ್ತು ಜನಪ್ರಿಯ ಕಲೆ ಎಂಬುದನ್ನು ಮನದಟ್ಟು ಮಾಡಿ ಸರ್ಕಾರದಿಂದಲೂ ಅನುಮತಿ ಪಡೆದೇ ಬಿಡುತ್ತಾರೆ.

ಇದನ್ನೂ ಓದಿ:ಎರಡು ಭಿನ್ನ ಆರ್ಕೆಸ್ಟ್ರಾ, ‘ರಾಮಾಯಣ’ಕ್ಕಾಗಿ ರೆಹಮಾನ್ ಸಾಹಸ ನೋಡಿ

ಬಳಿಕ ಹಲವು ವರ್ಷಗಳ ಕಾಲ ‘ರಾಮಾಯಣ: ದಿ ಲೆಜೆಂಡ್ ಆಫ್ ಪ್ರಿನ್ಸ್ ರಾಮ’ ಕತೆಯನ್ನು ಅನಿಮೇಷನ್ ಸಿನಿಮಾ ಮೇಲೆ ಕೆಲಸ ಮಾಡುತ್ತಾರೆ. ಈ ಸಿನಿಮಾಕ್ಕಾಗಿ ಹಲವು ಕಲಾವಿದರು ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಡ್ರಾಯಿಂಗ್​​ಗಳನ್ನು ಮಾಡುತ್ತಾರೆ. ಈ ಡ್ರಾಯಿಂಗ್​​ಗಳನ್ನು ಪ್ರತಿದಿನ ಭಾರತಕ್ಕೆ ಕಳಿಸಿ ಅಭಿಪ್ರಾಯಗಳನ್ನು ಸಹ ಸಂಗ್ರಹಿಸಲಾಗುತ್ತಿರುತ್ತದೆ. ಹೀಗಾಗಿ ಸಿನಿಮಾದ ನಿರ್ಮಾಣಕ್ಕೆ ವರ್ಷಗಳೇ ಬೇಕಾಗುತ್ತದೆ. ಆದರೆ ಸಿನಿಮಾ ಮುಗಿಯುವ ವೇಳೆಗೆ ಭಾರತದಲ್ಲಿ ಬಾಬ್ರಿ ಮಸೀದಿ ಕುರಿತು ಹೋರಾಟ ಶುರು ಆಗಿರುತ್ತದೆ. ಮೊದಲು ಸಿನಿಮಾದ ಇಂಗ್ಲೀಷ್ ಆವೃತ್ತಿಯನ್ನು ಕೆಲ ಆಯ್ದ ಚಿತ್ರೋತ್ಸವಗಳಲ್ಲಿ ಪ್ರದರ್ಶಿಸಲಾಗುತ್ತದೆ. ಬಳಿಕ ಧೈರ್ಯ ಮಾಡಿ ಕಮಲ್ ಹಾಸನ್ ಅವರು ಸಿನಿಮಾದ ಬಿಡುಗಡೆ ಹಕ್ಕು ಖರೀದಿಸಿ ಬಿಡುಗಡೆ ಮಾಡುತ್ತಾರೆ. ಆದರೆ ರಾಮ ಜನ್ಮಭೂಮಿ ಚಳವಳಿ ಉತ್ಕೃಷ್ಟ ಸ್ಥಿತಿಯಲ್ಲಿದ್ದ ಆ ಸಮಯದಲ್ಲಿ ಸಿನಿಮಾ ಅಷ್ಟೇನೂ ಉತ್ತಮ ಪ್ರದರ್ಶನ ಕಾಣುವುದಿಲ್ಲ. ಹಲವು ಚಿತ್ರಮಂದಿರಗಳು ಸಿನಿಮಾವನ್ನು ಪ್ರದರ್ಶನ ಸಹ ಮಾಡುವುದಿಲ್ಲ, ಕೆಲವೆಡೆ ಸರ್ಕಾರಗಳೇ ಅನುಮತಿ ಕೊಟ್ಟಿರುವುದಿಲ್ಲ.

1997 ರಲ್ಲಿ ಜಪಾನಿನ ಯೊಕೊಹಾಮಾನಲ್ಲಿ ಈ ಸಿನಿಮಾ ಜಪಾನಿ ಭಾಷೆಯಲ್ಲಿ ಪ್ರದರ್ಶನ ಆಗುತ್ತದೆ. ಅಲ್ಲಿ ಅತ್ಯುತ್ತಮ ಪ್ರತಿಕ್ರಿಯೆಯನ್ನು ಸಿನಿಮಾ ಪಡೆಯುತ್ತದೆ. 97ರ ಬಳಿಕ ಭಾರತದಲ್ಲಿ ಟಿವಿ ಬಳಕೆ ಹಾಗೂ ಸಿಡಿ ಪ್ಲೇಯರ್ ಬಳಕೆ ಹೆಚ್ಚಾದ ಸಮಯದಲ್ಲಿ ‘ರಾಮಾಯಣ’ ಅನಿಮೇಷನ್ ಸಿನಿಮಾಕ್ಕೆ ಮತ್ತೆ ಬೇಡಿಕೆ ಬರುತ್ತದೆ. ಸಿನಿಮಾವನ್ನು ಮಕ್ಕಳ ಚಾನೆಲ್​​ಗಳು ಪದೇ ಪದೇ ಪ್ರದರ್ಶಿಸುತ್ತವೆ, ಸಿಡಿ, ಡಿವಿಡಿಗಳು ಭಾರಿ ಸಂಖ್ಯೆಯಲ್ಲಿ ಮಾರಾಟ ಆಗುತ್ತವೆ. ಅತ್ತ ಜಪಾನಿನಲ್ಲೂ ಸಹ ಈ ಸಿನಿಮಾ ಬ್ಲಾಕ್ ಬಸ್ಟರ್ ಆಗಿಬಿಡುತ್ತದೆ. ತೀರ ಇತ್ತೀಚೆಗೆ 2018 ರಿಂದ 2019 ರ ವರೆಗೆ ಬರೋಬ್ಬರಿ ಒಂದು ವರ್ಷಗಳ ಕಾಲ ಈ ಸಿನಿಮಾ ಜಪಾನಿನ ಮಿನಿ ಥಿಯೇಟರ್ ಸಿನಿಮಾ ನೊವ್​​ಸೆಂಟೊ ನಲ್ಲಿ ಪ್ರದರ್ಶನ ಕಾಣುತ್ತದೆ.

2022 ರಲ್ಲಿ ಭಾರತ ಮತ್ತು ಜಪಾನಿನ ಗೆಳೆತನದ 70ನೇ ವಾರ್ಷಿಕೋತ್ಸವ ಆಚರಣೆಯಾಯ್ತು. ಭಾರತದಲ್ಲಿ ಜಪಾನಿ ಸಿನಿಮಾ ಫೆಸ್ಟಿವಲ್ ಆಯೋಜಿಸಲಾಗಿತ್ತು. ಇದರಲ್ಲಿ ಮೊದಲು ಪ್ರದರ್ಶನವಾದ ಸಿನಿಮಾ ‘ರಾಮಾಯಣ: ದಿ ಲೆಜೆಂಡ್ ಆಫ್ ಪ್ರಿನ್ಸ್ ರಾಮ’. ಈ ಸಿನಿಮಾದ ಡಿಜಿಟಲ್ ಆವೃತ್ತಿಯನ್ನು ನರೇಂದ್ರ ಮೋದಿ ಅವರೇ ಬಿಡುಗಡೆ ಮಾಡಿದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 8:36 pm, Sun, 26 April 26

Source link

ನಾಳೆ ‌ಲೆಕ್ಕ ಕೊಡುತ್ತೇವೆ ಎಂದ ಟ್ರಸ್ಟ: ಲೆಕ್ಕ ಪಡೆದು ಮಠ ಖಾಲಿ‌ ಮಾಡುವಂತೆ ಸ್ವಾಮೀಜಿಗೆ ತಾಕೀತು – Kannada News | Harihara Panchamasali Gurupeeth Conflict: Trustee Warns vachananda swamiji to Vacate Math

ಪಂಚಮಸಾಲಿ ಮಠದಲ್ಲಿ ಧರ್ಮದರ್ಶಿ ಸಮಿತಿ ಸುದ್ದಿಗೋಷ್ಠಿ
Image Credit source: tv9 kannada

ದಾವಣಗೆರೆ, ಏಪ್ರಿಲ್​ 26: ಹರಿಹರದ ಪಂಚಮಸಾಲಿ ಮಠದ ಆಡಳಿತ ಮಂಡಳಿ (ಟ್ರಸ್ಟ್) ಹಾಗೂ ವಚನಾನಂದ ಸ್ವಾಮೀಜಿ (Vachananda Swamiji) ನಡುವಿನ ಶೀತಲ ಸಮರ ಈಗ ಬಹಿರಂಗ ಸಂಘರ್ಷಕ್ಕೆ ತಿರುಗಿದೆ. ಧರ್ಮದರ್ಶಿ ಸಮಿತಿಯ ಮುಖಂಡರು ಸ್ವಾಮೀಜಿಯ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ನಾಳೆ ಲೆಕ್ಕ ಕೊಡುತ್ತೇವೆ. ಲೆಕ್ಕ ಪಡೆದು ಮಠ ಖಾಲಿ‌ ಮಾಡುವಂತೆ ಸ್ವಾಮೀಜಿಗೆ ಟ್ರಸ್ಟಿ ಹೆಚ್​.ಎಸ್.ನಾಗರಾಜ್ ತಾಕೀತು ಮಾಡಿದ್ದಾರೆ.

ವಚನಾನಂದ ಸ್ವಾಮೀಜಿಗೆ ತಾಕೀತು 

ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಹನಗವಾಡಿ ಗ್ರಾಮದ ಬಳಿಯ ಪಂಚಮಸಾಲಿ ಮಠದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿದ ಪಂಚಮಸಾಲಿ ಟ್ರಸ್ಟಿ ಹೆಚ್​.ಎಸ್.ನಾಗರಾಜ್, ನಮಗೆ ಲೆಕ್ಕ ಕೊಡಿ ಎಂದು ಕೇಳಿದ್ದಾರೆ, ನಾಳೆ ‌ಲೆಕ್ಕ ಕೊಡುತ್ತೇವೆ. ಈಗಾಗಲೇ ಎಲ್ಲ ದಾಖಲೆಗಳು ನಮ್ಮ ಬಳಿ ಇವೆ. ಲೆಕ್ಕ ಪಡೆದು ಮಠ ಖಾಲಿ‌ ಮಾಡುವಂತೆ ವಚನಾನಂದ ಸ್ವಾಮೀಜಿಗೆ ತಾಕೀತು ಮಾಡಿದರು.

ಇದನ್ನೂ ಓದಿ: ಪಂಚಮಸಾಲಿ ಪೀಠ ಸಂಘರ್ಷ: ಮೂವರು ಟ್ರಸ್ಟಿಗಳ ಉಚ್ಚಾಟನೆ; ಸೋಮನಗೌಡ ಸ್ಫೋಟಕ ಹೇಳಿಕೆ

ಈಗಾಗಲೇ ಕೂಡಲಸಂಗಮ ಪಂಚಮಸಾಲಿ ಪೀಠ ಮುಗಿಸಲಾಗಿದೆ. ಈಗ ಹರಿಹರ ಪೀಠಕ್ಕೆ ಬಂದಿದ್ದಾರೆ, ನಾಳೆ ಲೆಕ್ಕ ಕೊಡುತ್ತೇವೆ. ಲೆಕ್ಕ ಕೊಡುವುದಕ್ಕಾಗಿಯೇ ವೇದಿಕೆ ಸಿದ್ಧ ಮಾಡಿದ್ದೇವೆ. ಎಲ್ಲರ ಸಮ್ಮುಖದಲ್ಲಿಯೇ ಲೆಕ್ಕ ಕೊಡುತ್ತೇವೆ ಎಂದು ಹೇಳಿದ್ದಾರೆ.

ನಮ್ಮನ್ನು ಉಚ್ಚಾಟನೆ ಮಾಡುವ ಅಧಿಕಾರ ಪಂಚಮಸಾಲಿ ಸಂಘಕ್ಕೆ ಇಲ್ಲ: ಬಿ.ಸಿ.ಉಮಾಪತಿ

ಪ್ರಧಾನ ಧರ್ಮದರ್ಶಿ ಬಿ.ಸಿ.ಉಮಾಪತಿ ಪ್ರತಿಕ್ರಿಯಿಸಿದ್ದು, ನಾವು ನಾಳೆ ಮಠದ ವ್ಯವಹಾರದ ಕುರಿತು 2008ರಿಂದ 2026ವರೆಗಿನ ಲೆಕ್ಕ ಕೊಡುತ್ತೇವೆ. ದೇಣಿಗೆ, ಆಸ್ತಿ-ಪಾಸ್ತಿ ಹಾಗೂ ಇತರ ಮಾಹಿತಿ ನೀಡುತ್ತೇವೆ ಎಂದರು. 11 ಜನ ಟ್ರಸ್ಟಿಗಳಲ್ಲಿ ಇಬ್ಬರು ಸ್ವಾಮೀಜಿಗಳು ಮತ್ತು 9 ಜನ ಮುಖಂಡರಿದ್ದಾರೆ. ಮೊನ್ನೆ 13 ಜನ ಟ್ರಸ್ಟಿ ಸದಸ್ಯರು ಸೇರಿ ಸ್ವಾಮೀಜಿ ಉಚ್ಚಾಟಿಸಲಾಗಿದೆ. ಇನ್ನು ಮೂವರು ಟ್ರಸ್ಟಿಗಳನ್ನು ಉಚ್ಚಾಟನೆ ಮಾಡಿದ್ದೇವೆಂದು ಪಂಚಮಸಾಲಿ ರಾಜ್ಯ ಸಂಘದ ಅಧ್ಯಕ್ಷ ಸೋಮನಗೌಡ ಹೇಳಿದ್ದಾರೆ. ಆದರೆ ಟ್ರಸ್ಟ್ ಹಾಗೂ ರಾಜ್ಯ ಪಂಚಮಸಾಲಿ ಸಂಘ ನಮ್ಮನ್ನು ಉಚ್ಚಾಟನೆ ಮಾಡುವ ಅಧಿಕಾರವೇ ಇಲ್ಲ. ಅವರು ನಮಗೆ ಸಲಹೆ ನೀಡಬಹುದು ಅಷ್ಟೇ ಎಂದಿದ್ದಾರೆ.

ಹರಜಾತ್ರೆ ಕೇವಲ ರಾಜಕೀಯ ಜಾತ್ರೆ

ಇನ್ನು ಹರಜಾತ್ರೆ ಈ ವರ್ಷ ಕೇವಲ ರಾಜಕೀಯ ಜಾತ್ರೆ ಆಗಿತ್ತು. ತಮಗೆ ಬೇಕಾದವರನ್ನು ವಚನಾನಂದ ಸ್ವಾಮೀಜಿ ಕರೆಸಿದ್ದಾರೆ. ನಮ್ಮ ಜೊತೆಗೆ ಮಾತಾಡುವುದನ್ನ ಬಿಟ್ಟಿದ್ದಾರೆ. ಸ್ವಾಮೀಜಿ ಹರಜಾತ್ರೆ ಲೆಕ್ಕಾ ಕೇಳುವ ಅಧಿಕಾರವೇ ಇಲ್ಲ ಅಂತಾರೆ ಎಂದು ಬಿ.ಸಿ.ಉಮಾಪತಿ ಆರೋಪಿಸಿದರು.

ಪಂಚಮಸಾಲಿ ಮಠಕ್ಕೆ ಇನ್ನೊಬ್ಬರ ಪ್ರವೇಶ: 25 ಕೋಟಿ ರೂ ಅವ್ಯವಹಾರ

ಇನ್ನು ಇಷ್ಟು ದಿನ ಸುಮ್ಮನಿದ್ದ ಪಂಚಮಸಾಲಿ ರಾಜ್ಯ ಸಂಘದ ಅಧ್ಯಕ್ಷ ಸೋಮನಗೌಡ ಮಾಲಿ ಪಾಟೀಲ್​ರ​​ ರಂಗ ಪ್ರವೇಶವಾಗಿದೆ. ಇಂದು ಇವರ ಕೂಡ ಸುದ್ದಿಗೋಷ್ಠಿ ನಡೆಸಿ ಮೂವರ ಟ್ರಸ್ಟಿಗಳನ್ನು ಉಚ್ಚಾಟನೆ ಮಾಡಲಾಗಿದೆ ಎಂದು ಹೇಳಿದರು. ಮಠದ ವ್ಯವಹಾರದಲ್ಲಿ ಅವ್ಯವಹಾರ ನಡೆದರೆ, ಸ್ವಾಮೀಜಿ ವಿಚಾರಕ್ಕೆ ಬಂದಾಗ ಪಂಚಮಸಾಲಿ ರಾಜ್ಯ ಸಂಘ ಪ್ರವೇಶ ಮಾಡಬಹುದು ಎಂದು ನಿಯಮವಿದೆ. ಅದೇ ಅಧಿಕಾರ ಬಳಸಿಕೊಂಡು ಮೂವರನ್ನು ಉಚ್ಚಾಟನೆ ಮಾಡಿದ್ದೇವೆ ಎಂದರು.

ಇದನ್ನೂ ಓದಿ: ಮತ್ತೊಂದು ತಿರುವು ಪಡೆದ ಪಂಚಮಸಾಲಿ ಗುರುಪೀಠ ಸಂಘರ್ಷ: ಶ್ರೀಗಳಿಗೆ ಭಕ್ತರ ಆನೆಬಲ

ಮೇಲ್ನೋಟಕ್ಕೆ ಮಠದ ಟ್ರಸ್ಟನಲ್ಲಿ ಅವ್ಯವಹಾರ ನಡೆದಿರುವುದು ಕಂಡುಬಂದಿದೆ. ಬಾಯಿ ಮಾತಲ್ಲಿ 27 ಕೋಟಿ ರೂ ಅವ್ಯವಹಾರ ಎನ್ನಲಾಗುತ್ತಿತ್ತು. ನಿಖರವಾದ ಲೆಕ್ಕ ನಿಗೂಢವಾಗಿತ್ತು. ಆದರೆ ಅಂದಾಜು 25 ಕೋಟಿ ರೂ ಅವ್ಯವಹಾರ ಆಗಿದೆ ಎಂದು ಲೆಕ್ಕ ಕೊಡಿ ಚುಳುವಳಿಯ ಅಧ್ಯಕ್ಷ ಪರಮೇಶ್ವರ ಗೌಡ ಸ್ಪೋಟಕ ಮಾಹಿತಿ ನೀಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಡಿಕೆ ಶಿವಕುಮಾರ್ ಹುಟ್ಟುಹಬ್ಬದಂದು ಹೈಕಮಾಂಡ್​​ ನೀಡಲಿದೆ ಬಿಗ್​​​​ ಗಿಫ್ಟ್​? ಅಂದು ಅಭಿಮಾನಿಗಳಿಗೆ ಡಿಸಿಎಂ ನೀಡಿದ ಖಡಕ್ ಸೂಚನೆ ಏನು? – Kannada News | Karnataka Cabinet Expansion: D.K. Shivakumar and Ministers Await High Commands Decision Amidst Birthday Buzz

ಬೆಂಗಳೂರು, ಏ. 26: ಮೇ 15ರಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ರಾಜ್ಯ ರಾಜಕಾರಣದಲ್ಲಿ ಕುತೂಹಲಕಾರಿ ಚರ್ಚೆಗಳು ನಡೆಯುತ್ತಿವೆ. ಅವರ ಅಭಿಮಾನಿಗಳು ಮತ್ತು ಬೆಂಬಲಿಗ ಶಾಸಕರು, ಈ ದಿನದಂದು ಯಾವುದೇ ಶುಭ ಸುದ್ದಿ ನಿರೀಕ್ಷೆಯಲ್ಲಿ ಇದ್ದಾರೆ. ನಾಯಕತ್ವ ಬದಲಾವಣೆ ಅಥವಾ ಸಚಿವ ಸಂಪುಟ ವಿಸ್ತರಣೆಗೆ ಸಂಬಂಧಿಸಿದಂತೆ ಪ್ರಮುಖ ನಿರ್ಧಾರ ಹೊರಬೀಳುವ ಸಾಧ್ಯತೆ ಬಗ್ಗೆ ಮಾಧ್ಯಮಗಳಲ್ಲಿ ಊಹಾಪೋಹಗಳು ಹರಿದಾಡುತ್ತಿವೆ. ಆದರೆ, ಡಿಕೆ ಶಿವಕುಮಾರ್ ಅವರು ಈ ಕುರಿತು ಸ್ಪಷ್ಟನೆ ನೀಡಿದ್ದು, ತಾನು ಮುಖ್ಯಮಂತ್ರಿ ಹುದ್ದೆಯ ಚರ್ಚೆಯನ್ನು ಎಂದಿಗೂ ಮಾಡಿಲ್ಲ ಎಂದು ಹೇಳಿದ್ದಾರೆ. ಹೈಕಮಾಂಡ್ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆಯೋ ಅದಕ್ಕೆ ತಾನು ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಬದ್ಧರಾಗಿರುವುದಾಗಿ ಅವರು ತಿಳಿಸಿದ್ದಾರೆ. ಪಕ್ಷದಲ್ಲಿ ಶೇಕಡಾ ನೂರರಷ್ಟು ಗೊಂದಲಗಳು ಇರುವುದು ನಿಜ ಎಂದು ಒಪ್ಪಿಕೊಂಡಿರುವ ಡಿಕೆ ಶಿವಕುಮಾರ್, ಅದನ್ನು ಬಗೆಹರಿಸುವುದು ಹೈಕಮಾಂಡ್‌ಗೆ ಬಿಟ್ಟ ವಿಚಾರ ಎಂದು ಹೇಳಿದ್ದಾರೆ. ಪಕ್ಷದ ಮೇಲೆ ಸಂಪೂರ್ಣ ವಿಶ್ವಾಸವಿದ್ದು, ಹೈಕಮಾಂಡ್ ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ.

ಈ ನಡುವೆ, ತಮ್ಮ ಹುಟ್ಟುಹಬ್ಬವನ್ನು ಆಚರಿಸುವ ಸಂದರ್ಭದಲ್ಲಿ ಫ್ಲೆಕ್ಸ್‌ಗಳು ಮತ್ತು ಜಾಹೀರಾತುಗಳನ್ನು ಹಾಕದಂತೆ ಕಾರ್ಯಕರ್ತರಿಗೆ ಮತ್ತು ಅಭಿಮಾನಿಗಳಿಗೆ ಡಿಕೆ ಶಿವಕುಮಾರ್ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ರಸ್ತೆಗಳಲ್ಲಿ ಫ್ಲೆಕ್ಸ್‌ಗಳನ್ನು ಅಳವಡಿಸಿದರೆ ಅಂತಹ ಕಾರ್ಯಕರ್ತರ ವಿರುದ್ಧ ಕೇಸ್ ದಾಖಲಿಸುವುದಾಗಿ ಮತ್ತು ದಂಡ ವಿಧಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಜಾಹೀರಾತು ನೀಡಲು ಇಚ್ಛಿಸುವವರು ಹಣ ಪಾವತಿಸಿ ಮಾಡಬಹುದು ಹೊರತು ರಸ್ತೆಗಳಲ್ಲಿ ಅನಧಿಕೃತವಾಗಿ ಪ್ರದರ್ಶಿಸಬಾರದು ಎಂದು ಮನವಿ ಮಾಡಿದ್ದಾರೆ. ಈ ಕುರಿತು ಕಾರ್ಪೊರೇಷನ್ ಕಮಿಷನರ್‌ಗಳಿಗೂ ಮೊದಲು ಕೇಸ್ ದಾಖಲಿಸಲು ಸೂಚಿಸಿರುವುದಾಗಿ ತಿಳಿಸಿದ್ದಾರೆ. ಸಚಿವ ಸತೀಶ್ ಜಾರ್ಕಿಹೊಳಿ ಅವರು ಹುಬ್ಬಳ್ಳಿಯಲ್ಲಿ ಮಾತನಾಡಿ, ತಾವು ಸಿಎಂ ವಿಚಾರದಲ್ಲಿ ಭಾಗಿಯಾದವರಲ್ಲ, ಸರ್ಕಾರದ ಭಾಗಿದಾರರಷ್ಟೇ ಎಂದು ಸ್ಪಷ್ಟಪಡಿಸಿದ್ದಾರೆ. ಮುಖ್ಯಮಂತ್ರಿಯಾಗುವವರ ಬಳಿ ಈ ಕುರಿತು ಕೇಳಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. ಸಚಿವ ಎಂ ಬಿ ಪಾಟೀಲ್ ಸಹ ಇದೇ ನಿಲುವನ್ನು ಪುನರುಚ್ಚರಿಸಿದ್ದಾರೆ. ಡಿಕೆ ಶಿವಕುಮಾರ್ ಅವರು ವಿವಿಧ ರಾಜ್ಯಗಳ ಚುನಾವಣಾ ಸಮಿತಿಯಲ್ಲಿದ್ದು, ಕೆಪಿಸಿಸಿ ಅಧ್ಯಕ್ಷರೂ ಆಗಿರುವುದರಿಂದ ಅವರ ದೆಹಲಿ ಪ್ರವಾಸ ಸಹಜ ಎಂದು ಎಂ ಬಿ ಪಾಟೀಲ್ ಹೇಳಿದ್ದಾರೆ. ನಾಯಕತ್ವ ಬದಲಾವಣೆ, ಮಂತ್ರಿಮಂಡಲ ವಿಸ್ತರಣೆಯಂತಹ ಯಾವುದೇ ವಿಚಾರಗಳು ಹೈಕಮಾಂಡ್‌ಗೆ ಬಿಟ್ಟಂತಹ ನಿರ್ಣಯಗಳಾಗಿವೆ ಎಂದು ಅವರು ತಿಳಿಸಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಹೈಕಮಾಂಡ್‌ನ ನಿರ್ಧಾರವೇ ಅಂತಿಮ ಎಂದು ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಸೇರಿದಂತೆ ಎಲ್ಲ ನಾಯಕರು ಒಪ್ಪಿಕೊಂಡಿದ್ದಾರೆ ಎಂದು ಎಂ ಬಿ ಪಾಟೀಲ್ ಉಲ್ಲೇಖಿಸಿದ್ದಾರೆ.

ಬಳ್ಳಾರಿ ಜಿಲ್ಲೆಯ ಸಂಡೂರಿನಲ್ಲಿ ಸಚಿವ ಸಂತೋಷ್ ಲಾಡ್ ಸಹ ಸಿಎಂ ಬದಲಾವಣೆ ಬಗ್ಗೆ ಮಾತನಾಡಲು ನಿರಾಕರಿಸಿದ್ದಾರೆ. ಅನೇಕ ಶಾಸಕರಿಗೆ ಸಚಿವರಾಗುವ ಆಕಾಂಕ್ಷೆ ಇದೆ, ಆದರೆ ಯಾರು ಸಚಿವರಾಗಬೇಕು ಎಂಬುದನ್ನು ಹೈಕಮಾಂಡ್, ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನಿರ್ಧರಿಸುತ್ತಾರೆ ಎಂದು ಹೇಳಿದ್ದಾರೆ. ಸಚಿವ ಸಂಪುಟ ವಿಸ್ತರಣೆಯ ಸಾಧ್ಯತೆ ಇದೆ, ಆದರೆ ಯಾವಾಗ ಎಂಬುದು ತಿಳಿದಿಲ್ಲ ಎಂದು ಸಂತೋಷ್ ಲಾಡ್ ತಮ್ಮ ವೈಯಕ್ತಿಕ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಮೇ 15ರಂದು ರಾಜ್ಯ ರಾಜಕಾರಣದಲ್ಲಿ ದೊಡ್ಡ ಬದಲಾವಣೆ ಆಗಲಿದೆ ಎಂಬ ಮಾಧ್ಯಮಗಳ ಊಹಾಪೋಹಗಳನ್ನು ಅವರು ತಳ್ಳಿಹಾಕಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರಿನಲ್ಲಿ ಕೇರಳ Vs ತಮಿಳುನಾಡು ವಿದ್ಯಾರ್ಥಿಗಳ ಗ್ಯಾಂಗ್ ವಾರ್; ಬರೀ ಹೊಡೆಯುವುದು ಮಾತ್ರವಲ್ಲ ಎಲ್ಲವನ್ನೂ ದೋಚೋಣ – Kannada News | Konanakunte Student Crime: Out of State College Students Arrested for Robbery, Assault

ಬೆಂಗಳೂರಿನಲ್ಲಿ ವಿದ್ಯಾರ್ಥಿಗಳ ಗಲಾಟೆ

ಬೆಂಗಳೂರು, ಏ,26: ರಾಜ್ಯ ರಾಜಧಾನಿಯಲ್ಲಿ ವಿದ್ಯಾರ್ಥಿಗಳ ಗಲಾಟೆ ಹೆಚ್ಚಾಗುತ್ತಿದೆ. ಯಾರು ಹೇಳುವವರು – ಕೇಳುವವರು ಇಲ್ಲದ್ದಂತಾಗಿದೆ. ಇದೀಗ ಸಿಲಿಕಾನ್ ಸಿಟಿಯಲ್ಲಿ ವ್ಯಾಸಂಗ ಮಾಡುತ್ತಿರುವ ಹೊರರಾಜ್ಯದ ವಿದ್ಯಾರ್ಥಿಗಳ ನಡುವಿನ ಸಣ್ಣ ಕಿರಿಕ್, ಭೀಕರ ದರೋಡೆ ಮತ್ತು ಹಲ್ಲೆಯಲ್ಲಿ ಅಂತ್ಯವಾಗಿರುವ ಘಟನೆ ಕೋಣನಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕೇರಳ ಮೂಲದ ವಿದ್ಯಾರ್ಥಿಗಳ ಮೇಲೆ ತಮಿಳುನಾಡು ಮೂಲದ ವಿದ್ಯಾರ್ಥಿಗಳ ತಂಡ ಚಾಕುವಿನಿಂದ ಹಲ್ಲೆ ನಡೆಸಿ ದರೋಡೆ ಮಾಡಿದೆ ಎಂದು ಹೇಳಲಾಗಿದೆ.

ಬೆಂಗಳೂರಿನ ಟಿ.ಜಾನ್ (T. John) ಕಾಲೇಜಿನಲ್ಲಿ ವಿವಿಧ ಕೋರ್ಸ್‌ಗಳಲ್ಲಿ 4ನೇ ಸೆಮಿಸ್ಟರ್ ವ್ಯಾಸಂಗ ಮಾಡುತ್ತಿರುವ ಕೇರಳದ ಇರ್ಫಾನ್ ಮೊಹಮ್ಮದ್ ಮತ್ತು ಅವರ ಸ್ನೇಹಿತರು ಕೋಣನಕುಂಟೆಯ ಪವಮಾನ ನಗರದಲ್ಲಿ ಬಾಡಿಗೆ ಮನೆ ಮಾಡಿಕೊಂಡಿದ್ದರು. ಏಪ್ರಿಲ್ 17ರ ರಾತ್ರಿ ಇರ್ಫಾನ್, ಆದರ್ಶ್ ಮತ್ತು ಡಾರ್ವಿನ್ ಮನೆಯಲ್ಲಿದ್ದಾಗ ಈ ದಾಳಿ ನಡೆದಿದೆ.

ರಾತ್ರಿ ಸುಮಾರು 10:25ಕ್ಕೆ 6 ಜನರ ತಂಡ ಇರ್ಫಾನ್ ಅವರ ಮನೆಗೆ ನುಗ್ಗಿದ್ದಾರೆ. ಚಾಕು ತೋರಿಸಿ ಹಣಕ್ಕಾಗಿ ಬೆದರಿಸಿದ್ದಾರೆ. “ನಮ್ಮ ಬಳಿ ಹಣವಿಲ್ಲ” ಎಂದು ಹೇಳಿದ್ದಕ್ಕೆ ಆಕ್ರೋಶಗೊಂಡ ತಂಡವು ಚಾಕುವಿನಿಂದ ಮೂವರ ಮೇಲೂ ಹಲ್ಲೆ ನಡೆಸಿದೆ. ಅಷ್ಟೇ ಅಲ್ಲದೆ, ಅವರ ಬಳಿ ಇದ್ದ 4 ಮೊಬೈಲ್ ಫೋನ್‌ಗಳು ಮತ್ತು ಒಂದು ದ್ವಿಚಕ್ರ ವಾಹನವನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ.

ಕೋಣನಕುಂಟೆ ಪೊಲೀಸರು ಕಾರ್ಯಾಚರಣೆ ನಡೆಸಿ ತಮಿಳುನಾಡು ಮೂಲದ ನವೀನ್ ಕುಮಾರ್, ಕುಮಾರನ್, ವಿಮಲ್ ರಾಜ್, ಅಭಿನೇಶ್, ಕಲೈವೆಂದನ್ ಮತ್ತು ಪ್ರೇಮ್ ಕುಮಾರ್ ಎಂಬ ಆರು ಜನರನ್ನು ಬಂಧಿಸಿದ್ದಾರೆ. ಇವರ ವಿಚಾರಣೆ ನಡೆಸಿದಾಗ ಸ್ಫೋಟಕ ಸತ್ಯ ಬಯಲಾಗಿದೆ. ದೂರುದಾರ ಇರ್ಫಾನ್ ಮತ್ತು ಆರೋಪಿ ಅಭಿನೇಶ್ ಒಂದೇ ಕಾಲೇಜಿನವರು ಎಂಬುದು ಗೊತ್ತಾಗಿದೆ. ಈ ಹಿಂದೆ ಕಾಲೇಜಿನಲ್ಲಿ ಸಣ್ಣ ವಿಚಾರಕ್ಕೆ ಗಲಾಟೆ ನಡೆದಾಗ ಕೇರಳ ಮೂಲದ ವಿದ್ಯಾರ್ಥಿಗಳು ಅಭಿನೇಶ್‌ಗೆ ಥಳಿಸಿದ್ದರು. ಇದರ ಸೇಡು ತೀರಿಸಿಕೊಳ್ಳಲು ಅಭಿನೇಶ್ ತಮಿಳುನಾಡಿನಿಂದ ತನ್ನ ಸ್ನೇಹಿತರನ್ನು ಬೆಂಗಳೂರಿಗೆ ಕರೆಸಿಕೊಂಡಿದ್ದ, ಕೇರಳ ವಿದ್ಯಾರ್ಥಿಗಳ ಮೇಲೆ ದಾಳಿ ಮಾಡಬೇಕು ಎಂದು ಈ ಪ್ಲಾನ್​ ಮಾಡಿಕೊಂಡಿದ್ದರು ಎಂದು ಹೇಳಲಾಗಿದೆ.

ಇದನ್ನೂ ಓದಿ: ಜಮೀರ್ ದರ್ಗಾವಾಲೆ ಕೊಲೆ ಕೇಸ್: ಪ್ರಮುಖ ಆರೋಪಿ ಸೇರಿ ಐವರು ಅರೆಸ್ಟ್​; ಹತ್ಯೆಗೆ ಅದೇ ಕಾರಣ

“ಬರುವುದು ಬಂದಿದ್ದೇವೆ, ಬರೀ ಹೊಡೆಯುವುದು ಮಾತ್ರವಲ್ಲ ಎಲ್ಲವನ್ನೂ ದೋಚೋಣ” ಎಂದು ಪ್ಲಾನ್ ಮಾಡಿ ದರೋಡೆ ನಡೆಸಿದ್ದರು. ಬಂಧಿತ ಆರೋಪಿಗಳಿಂದ ದರೋಡೆ ಮಾಡಿದ್ದ ವಸ್ತುಗಳನ್ನು ವಶಪಡಿಸಿಕೊಂಡಿರುವ ಕೋಣನಕುಂಟೆ ಪೊಲೀಸರು, ಆರೋಪಿಗಳನ್ನು ಜೈಲಿಗಟ್ಟಿದ್ದಾರೆ. ಕ್ಷುಲ್ಲಕ ಕಾರಣಕ್ಕೆ ಆರಂಭವಾದ ಗಲಾಟೆ ಈಗ ವಿದ್ಯಾರ್ಥಿಗಳ ಭವಿಷ್ಯವನ್ನೇ ಅಂಧಕಾರಕ್ಕೆ ತಳ್ಳಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಅಸ್ವಸ್ಥ ಪ್ರಯಾಣಿಕನಿಗೆ ಸೀಟು ನೀಡದೆ ಬೇಜವಾಬ್ದಾರಿತನ; ಕೆಎಸ್ಸಾರ್ಟಿಸಿಗೆ 30,000 ರೂ ದಂಡ – Kannada News | Kerala KSRTC Fined Rs 30K for Denying Seat to Sick Passenger; Missed Stop Ruled ‘Service Deficiency’

ಕೇರಳ ಕೆಎಸ್ಸಾರ್ಟಿಸಿ ಬಸ್​ನ ಎಐ ಸೃಷ್ಟಿತ ಚಿತ್ರImage Credit source: AI/Mediaforge/TV9

ತ್ರಿಶೂರ್, ಏಪ್ರಿಲ್ 26: ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (Kerala KSRTC) ಅನಾರೋಗ್ಯ ಪೀಡಿತ ಪ್ರಯಾಣಿಕರೊಬ್ಬರಿಗೆ ಸೀಟು ನೀಡಲು ನಿರಾಕರಿಸಿದ ಮತ್ತು ನಿಗದಿತ ನಿಲ್ದಾಣದಲ್ಲಿ ಬಸ್ ನಿಲ್ಲಿಸದ ಕಾರಣಕ್ಕಾಗಿ ಜಿಲ್ಲಾ ಗ್ರಾಹಕ ಆಯೋಗವು 30,000 ರೂ ದಂಡ ವಿಧಿಸಿದೆ. ಮಲಪ್ಪುರಂ ಮೂಲದ ಮೊಹಮ್ಮದ್ ಜೈನುದ್ದೀನ್ ಕೋರ್ಮತ್ ಎಂಬುವವರು ಇತ್ತೀಚೆಗೆ ತ್ರಿಶೂರ್‌ನ ಅಂಬಲ್ಲೂರ್‌ನಿಂದ ಮಲಪ್ಪುರಂನ ಕೊಳಪ್ಪುರಂಗೆ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದರು. ಬಸ್ ಹತ್ತಿದಾಗ ಸೀಟುಗಳು ಖಾಲಿ ಇರಲಿಲ್ಲ. ತಮಗೆ ಆರೋಗ್ಯ ಸರಿಯಿಲ್ಲದ ಕಾರಣ ಹೆಚ್ಚು ಹೊತ್ತು ನಿಲ್ಲಲು ಸಾಧ್ಯವಿಲ್ಲ ಎಂದು ಅವರು ಬಸ್ ನಿರ್ವಾಹಕನಿಗೆ ತಿಳಿಸಿದ್ದರು. ತ್ರಿಶೂರ್ ತಲುಪಿದ ನಂತರ ಸೀಟು ಕೊಡಿಸುವುದಾಗಿ ನಿರ್ವಾಹಕರು ಭರವಸೆ ನೀಡಿದ್ದರು.

ತ್ರಿಶೂರ್‌ನಲ್ಲಿ ಕೆಲವು ಸೀಟುಗಳು ಖಾಲಿಯಾದಾಗ ಜೈನುದ್ದೀನ್ ಅವರು ಸೀಟೊಂದರಲ್ಲಿ ಕುಳಿತರು. ಆದರೆ, ಸ್ವಲ್ಪ ಸಮಯದ ನಂತರ ಆ ಸೀಟು ಮೊದಲೇ ಕಾಯ್ದಿರಿಸಲ್ಪಟ್ಟಿದೆ (Reserved) ಎಂದು ಹೇಳಿ ನಿರ್ವಾಹಕರು ಅವರನ್ನು ಎಬ್ಬಿಸಿದರು. ಬೇರೆ ಸೀಟು ಇಲ್ಲದ ಕಾರಣ ಅನಿವಾರ್ಯವಾಗಿ ಅವರು ಇಡೀ ಪ್ರಯಾಣವನ್ನು ನಿಂತುಕೊಂಡೇ ಮಾಡಬೇಕಾಯಿತು.

ಇದನ್ನೂ ಓದಿ: ದೆಹಲಿಯಲ್ಲಿ ಟೇಕ್ ಆಫ್ ವೇಳೆ ಸ್ವಿಸ್ ಏರ್ ವಿಮಾನದ ಎಂಜಿನ್ ವಿಫಲ, ಕಾಣಿಸಿಕೊಂಡ ಬೆಂಕಿ, ಆರು ಪ್ರಯಾಣಿಕರಿಗೆ ಗಾಯ

ಅಷ್ಟೇ ಅಲ್ಲದೆ, ಜೈನುದ್ದೀನ್ ಅವರು ಇಳಿಯಬೇಕಿದ್ದ ‘ಕಾಕ್ಕಾಡ್’ ನಿಲ್ದಾಣದಲ್ಲಿ ಬಸ್ ನಿಲ್ಲಿಸಲಿಲ್ಲ. ಬದಲಾಗಿ ಸರ್ವಿಸ್ ರಸ್ತೆಗೆ ಹೋಗದೆ ರಾಷ್ಟ್ರೀಯ ಹೆದ್ದಾರಿಯಲ್ಲೇ ಸಾಗಿ ಮುಂದಿನ ನಿಲ್ದಾಣದಲ್ಲಿ ಅವರನ್ನು ಇಳಿಸಲಾಯಿತು. ಇದರಿಂದ ಅವರು ಮತ್ತಷ್ಟು ತೊಂದರೆ ಅನುಭವಿಸಬೇಕಾಯಿತು.

ಗ್ರಾಹಕ ಆಯೋಗದ ತೀರ್ಪು

ಈ ಬಗ್ಗೆ ಜೈನುದ್ದೀನ್ ಅವರು ಮಲಪ್ಪುರಂ ಜಿಲ್ಲಾ ಗ್ರಾಹಕ ಆಯೋಗಕ್ಕೆ ದೂರು ನೀಡಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಆಯೋಗವು ಈ ಕೆಳಗಿನ ತೀರ್ಪು ನೀಡಿದೆ:

ಪ್ರಯಾಣಿಕರಿಗೆ ಕಾಯ್ದಿರಿಸಿದ ಸೀಟುಗಳ ಬಗ್ಗೆ ಮೊದಲೇ ಮಾಹಿತಿ ನೀಡದಿರುವುದು ಮತ್ತು ನಿಗದಿತ ನಿಲ್ದಾಣದಲ್ಲಿ ಬಸ್ ನಿಲ್ಲಿಸದಿರುವುದು “ಸೇವೆಯಲ್ಲಿನ ನ್ಯೂನತೆ” ಎಂದು ಆಯೋಗ ಅಭಿಪ್ರಾಯಪಟ್ಟಿದೆ. ಈ ಹಿನ್ನೆಲೆಯಲ್ಲಿ, ಪ್ರಯಾಣಿಕರಿಗೆ ಆದ ತೊಂದರೆಗೆ ಪರಿಹಾರವಾಗಿ 25,000 ರೂ ಮತ್ತು ಕಾನೂನು ಹೋರಾಟದ ವೆಚ್ಚವಾಗಿ 5,000 ರೂ ಸೇರಿ ಒಟ್ಟು 30,000 ರೂ ಅನ್ನು 45 ದಿನಗಳೊಳಗೆ ಪಾವತಿಸಲು ಕೆಎಸ್‌ಆರ್‌ಟಿಸಿಗೆ ಸೂಚಿಸಿದೆ. ನಿಗದಿತ ಅವಧಿಯಲ್ಲಿ ಹಣ ಪಾವತಿಸದಿದ್ದರೆ ಶೇ. 9 ರಷ್ಟು ಬಡ್ಡಿ ವಿಧಿಸುವುದಾಗಿಯೂ ಆಯೋಗ ಎಚ್ಚರಿಸಿದೆ.

ಇದನ್ನೂ ಓದಿ: 2 ತಿಂಗಳಿಂದ ಮುಚ್ಚಿದ್ದ ಇರಾನ್​ನ ಟೆಹ್ರಾನ್ ವಿಮಾನ ನಿಲ್ದಾಣದಿಂದ ವಿಮಾನಗಳ ಹಾರಾಟ ಆರಂಭ

ಗ್ರಾಹಕರ ಹಕ್ಕುಗಳು ಮತ್ತು ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣಿಕರಿಗೆ ನೀಡಬೇಕಾದ ಕನಿಷ್ಠ ಸೌಜನ್ಯದ ದೃಷ್ಟಿಯಿಂದ ಈ ತೀರ್ಪು ಮಹತ್ವದ್ದಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಜಮೀರ್ ದರ್ಗಾವಾಲೆ ಕೊಲೆ ಕೇಸ್: ಪ್ರಮುಖ ಆರೋಪಿ ಸೇರಿ ಐವರು ಅರೆಸ್ಟ್​; ಹತ್ಯೆಗೆ ಅದೇ ಕಾರಣ – Kannada News | Mundgod Meter Baddi Kingpin Zameer Durgawale Murder: 5 Arrested

ಕಾರವಾರ, ಏಪ್ರಿಲ್​​ 26: ಮೀಟರ್ ಬಡ್ಡಿ ದಂಧೆ ಕಿಂಗ್​ಪಿನ್ ಜಮೀರ್ ಅಹ್ಮದ್ ದರ್ಗಾವಾಲೆ (Zameer Durgawale) ಕೊಲೆ (kill) ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಡಗೋಡ ಪೊಲೀಸರು ಪ್ರಮುಖ ಆರೋಪಿ ಸೇರಿದಂತೆ ಐವರನ್ನು ಬಂಧಿಸಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದಲ್ಲಿ ಕಾರ್ಯಾಚರಣೆ ನಡೆಸಿ, ಮಂಜುನಾಥ ನಾಗೇಂದ್ರ ಕಾಜಗಾರ(35), ಶ್ರೀಕಾಂತ್ ಕಿರಣ್ಣನವರ್(22), ಮಲ್ಲಿಕಾರ್ಜುನ ಬಡಶೆಟ್ಟಿ(22), ಮಂಜುನಾಥ್ ವಿಷ್ಣು ಬೆಳಗಾಂವ(20) ಮತ್ತು ದೀಪಕ ನಾಗರಾಜ ನವಲೆ(22) ಬಂಧಿಸಲಾಗಿದೆ. ಸದ್ಯ ಬಂಧಿತರಿಂದ 2 ಕಂಟ್ರಿಮೇಡ್ ಪಿಸ್ತೂಲ್‌ಗಳನ್ನು ಜಪ್ತಿ ಮಾಡಲಾಗಿದೆ.

4 ವರ್ಷಗಳ ಹಿಂದೆ ಹರ್ಷ ಕೊಲೆ ಪ್ರಕರಣದ ಆರೋಪಿ, ಮುಂಡಗೋಡ ನಿವಾಸಿ ಮಂಜುನಾಥ್ ಕಾಜಗಾರನ ಮೀಟರ್ ಬಡ್ಡಿ ದಂಧೆಗೆ ಜಮೀರ್ ದರ್ಗಾವಾಲೆ ಅಡ್ಡಿಯಾಗಿದ್ದ. ಮಂಜುನಾಥ್ ಜತೆ ಕೆಲಸ ಮಾಡುತ್ತಿದ್ದವರನ್ನು ಜಮೀರ್ ಸೇರಿಸಿಕೊಂಡಿದ್ದ. ಇದರಿಂದ ಮಂಜುನಾಥ್ ಕುಪಿತಗೊಂಡಿದ್ದ. ಅಷ್ಟೇ ಅಲ್ಲದೆ ಜಮೀರ್ ನೀಡುತ್ತಿದ್ದ ಕಿರುಕುಳ ತಾಳಲಾರದೆ ಮುಂಡಗೋಡ ಬಿಟ್ಟು ಹುಬ್ಬಳ್ಳಿಗೆ ಶಿಫ್ಟ್ ಆಗಿದ್ದ.

ಹುಬ್ಬಳ್ಳಿ ಹಂತಕರಿಗೆ ಸುಪಾರಿ

ಇನ್ನು ಮುಂಡಗೋಡದಲ್ಲಿ ಮೀಟರ್ ಬಡ್ಡಿ ದಂಧೆಕೋರರ ಹಾವಳಿ ಹೆಚ್ಚಾಗಿತ್ತು. ಜಮೀರ್ ದರ್ಗಾವಾಲೆ 300ಕ್ಕೂ ಹೆಚ್ಚು ಜನರ ಮೇಲೆ ಚೆಕ್​ಬೌನ್ಸ್ ಕೇಸ್ ದಾಖಲಿಸಿದ್ದ. ಜಮೀರ್​ ಸಿಕ್ಕಾಪಟ್ಟೆ ಹಣ ಮಾಡುತ್ತಿರುವದನ್ನು ಸಹಿಸದ ಆರೋಪಿ ಮಂಜುನಾಥ್, ಹುಬ್ಬಳ್ಳಿ ಮೂಲದ ಹಂತಕರಿಗೆ ಸುಪಾರಿ ಕೊಟ್ಟು ಕೊಲೆ ಮಾಡಿಸಿದ್ದಾನೆ.

ಕೊಲೆಗೆ ಮೀಟರ್ ಬಡ್ಡಿ ದಂಧೆಯೇ ಕಾರಣ

ಇನ್ನು ಜಮೀರ್ ದರ್ಗಾವಾಲೆ ಕೊಲೆಗೆ ಮೀಟರ್ ಬಡ್ಡಿ ದಂಧೆಯೇ ಕಾರಣ ಎಂದು ಮುಂಡಗೋಡ ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿದೆ. ಈ ಹಿಂದೆ ಟಿವಿ9 ವರದಿಯನ್ನು ಗಂಭೀರವಾಗಿ ಪರಿಗಣಿಸಿದ್ದ ಎಸ್​​ಪಿ ಎಂ ನಾರಾಯಣ ಜಮೀರ್​ ದರ್ಗಾವಾಲೆ ಬಂಧಿಸಿ ಖಡಕ್ ವಾರ್ನ್ ಮಾಡಿದ್ದರು.

ಇದನ್ನೂ ಓದಿ: ಕಲಬುರಗಿಯಲ್ಲಿ ಗುಂಡಿನ ಸದ್ದು: ಫೈರಿಂಗ್​ ಮಾಡಿ ಮಚ್ಚಿನಿಂದ ಕೊಚ್ಚಿ ವ್ಯಕ್ತಿಯ ಹತ್ಯೆ

ಆ ಬಳಿಕ ದರ್ಗಾವಾಲೆ ಸೈಲೆಂಟ್​ ಆಗಿದ್ದ. ಆದರೆ ನಾರಾಯಣ ವರ್ಗಾವಣೆ ಬಳಿಕ ಮತ್ತೆ ಮೀಟರ್ ಬಡ್ಡಿ ದಂಧೆ ಶುರು ಆಗಿತ್ತು. ಮೀಟರ್ ಬಡ್ಡಿ ದಂಧೆಯಿಂದ ಜಮೀರ್ ಕೋಟಿ ಕೋಟಿ ಹಣ ಮಾಡಿದ್ದ. ಈತನ ಕಾಟಕ್ಕೆ ಬಹಳಷ್ಟು ಜನರು ಊರು ಬಿಟ್ಟಿದ್ದಾರೆ. ಇದೀಗ ಮೀಟರ್ ಬಡ್ಡಿ ದಂಧೆಯಿಂದಲೇ ದರ್ಗಾವಾಲೆ ಕೊಲೆಗೀಡಾಗಿದ್ದಾನೆ ಎಂಬುವುದು ತನಿಖೆಯಲ್ಲಿ ಬಯಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Exit mobile version