ಆಸ್ಪತ್ರೆಗೆ ದಾಖಲಾಗಿರುವ ಸಚಿವ ಡಿ.ಸುಧಾಕರ್ ಅವರ ಆರೋಗ್ಯ ವಿಚಾರಿಸಿ ಡಿಕೆ ಶಿವಕುಮಾರ್ – Kannada News | Minister D Sudhakar Hospitalised: DK Shivakumar Enquires About Health

ಬೆಂಗಳೂರು, ಏ.26: ಇಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಆಸ್ಪತ್ರೆಗೆ ದಾಖಲಾಗಿರುವ ಸಚಿವ ಡಿ.ಸುಧಾಕರ್ ಅವರ ಆರೋಗ್ಯವನ್ನು ವಿಚಾರಿಸಿದ್ದಾರೆ. ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಚಿವ ಸುಧಾಕರ್ ಅವರನ್ನು ಡಿಕೆ ಶಿವಕುಮಾರ್ ಭೇಟಿ ಮಾಡಿದರು. ಸಚಿವ ಡಿ.ಸುಧಾಕರ್ ಅವರು ಶ್ವಾಸಕೋಶ ಸಂಬಂಧಿ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು, ಪ್ರಸ್ತುತ ಆಸ್ಪತ್ರೆಯಲ್ಲಿ ವೆಂಟಿಲೇಟರ್ ವ್ಯವಸ್ಥೆಯಲ್ಲಿದ್ದಾರೆ. ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ಡಿಸಿಎಂ ಡಿಕೆ ಶಿವಕುಮಾರ್ ಅವರು ಸುಧಾಕರ್ ಅವರ ಆರೋಗ್ಯದ ಬಗ್ಗೆ ವೈದ್ಯರೊಂದಿಗೆ ಚರ್ಚೆ ನಡೆಸಿದರು. ವೈದ್ಯರಿಂದ ಸಚಿವ ಸುಧಾಕರ್ ಅವರ ಚಿಕಿತ್ಸೆ ಮತ್ತು ಪ್ರಸ್ತುತ ಆರೋಗ್ಯ ಪರಿಸ್ಥಿತಿಯ ಕುರಿತು ಮಾಹಿತಿ ಪಡೆದುಕೊಂಡರು. ಈ ಸಂದರ್ಭದಲ್ಲಿ ಶಾಸಕ ರಘುಮೂರ್ತಿ ಅವರು ಕೂಡ ಡಿಕೆ ಶಿವಕುಮಾರ್ ಜೊತೆ ಉಪಸ್ಥಿತರಿದ್ದರು. ಸುಧಾಕರ್ ಅವರ ಶೀಘ್ರ ಚೇತರಿಕೆಗಾಗಿ ಡಿಕೆ ಶಿವಕುಮಾರ್ ಹಾರೈಸಿದ್ದಾರೆ. ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸುವ ಮೂಲಕ ಡಿಕೆಶಿ ಅವರು ಸುಧಾಕರ್ ಅವರ ಕುಟುಂಬಕ್ಕೆ ಬೆಂಬಲ ಸೂಚಿಸಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

CSK vs GT: ತವರಿನಲ್ಲೇ ಮಂಕಾದ ಸಿಎಸ್​ಕೆ; ಗುಜರಾತ್​ಗೆ 8 ವಿಕೆಟ್​ ಜಯ

ಐಪಿಎಲ್ 2026 ರ 37 ನೇ ಪಂದ್ಯದಲ್ಲಿ, ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಗುಜರಾತ್ ಟೈಟಾನ್ಸ್ ತಂಡಗಳು MA ಚಿದಂಬರಂ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಿದ್ದವು. ಸಿಎಸ್​​ಕೆ ತನ್ನ ತವರು ಮೈದಾನದಲ್ಲಿ ಈ ಪಂದ್ಯವನ್ನು ಆಡುತ್ತಿದ್ದರಿಂದ ತವರಿನ ಲಾಭ ಪಡೆದು ಈ ಪಂದ್ಯವನ್ನು ಗೆಲ್ಲಬಹುದು ಎಂಬ ನಿರೀಕ್ಷೆ ಇತ್ತು. ಆದರೆ ಸಿಎಸ್​​ಕೆ ಲೆಕ್ಕಾಚಾರವನ್ನು ಪಂದ್ಯದ ಆರಂಭದಲ್ಲೇ ಗುಜರಾತ್ ತಂಡ ಬುಡಮೇಲು ಮಾಡಿತು. ಈ ಪಂದ್ಯದಲ್ಲಿ ಟಾಸ್ ಸೋತ ಸಿಎಸ್​ಕೆ ಮೊದಲು ಬ್ಯಾಟಿಂಗ್‌ ಮಾಡಬೇಕಾಯಿತು. ಆದರೆ ತಂಡದ ಕಳಪೆ ಬ್ಯಾಟಿಂಗ್​ನಿಂದಾಗಿ ಕೇವಲ 158 ರನ್ ಕಲೆಹಾಕಲಷ್ಟೇ ಶಕ್ತವಾಯಿತು. ಈ ಗುರಿ ಬೆನ್ನಟ್ಟಿದ ಗುಜರಾತ್ ಕೇವಲ 2 ವಿಕೆಟ್ ಕಳೆದುಕೊಂಡು ಗೆಲುವಿನ ದಡ ಮುಟ್ಟಿತು.

Source link

ಕೋಲ್ಕತಾದ ಠಂಠಣಿಯಾ ಕಾಳಿಬಾರಿ ಮಂದಿರಕ್ಕೆ ಪ್ರಧಾನಿ ಭೇಟಿ; ನಗರದ ಹುಟ್ಟಿಗೂ ಮೊದಲೇ ಇದ್ದ ಈ ಮಂದಿರದ ವಿಶೇಷತೆಗಳೇನು? – Kannada News | PM Modi took the blessings of Ma Kali at Thanthania Kalibari before his historic Roadshow in North Kolkata

ಠಂಠಣಿಯಾ ಕಾಳಿಬಾರಿ ದೇಗುಲಕ್ಕೆ ಪ್ರಧಾನಿ ಮೋದಿ ಭೇಟಿ

ಕೋಲ್ಕತಾ, ಏಪ್ರಿಲ್ 26: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಉತ್ತರ ಕೋಲ್ಕತ್ತಾದಲ್ಲಿ ತಮ್ಮ ಐತಿಹಾಸಿಕ ರೋಡ್‌ಶೋ ಆರಂಭಿಸುವ ಮುನ್ನ ಪ್ರಸಿದ್ಧ ‘ಠಣಠಣಿಯಾ ಕಾಳಿಬಾರಿ’ (Thanthania Kalibari) ದೇವಸ್ಥಾನಕ್ಕೆ ಭೇಟಿ ನೀಡಿ ಮಾ ಕಾಳಿಯ ಆಶೀರ್ವಾದ ಪಡೆದರು. ಠಣಠಣಿಯಾ ಕಾಳಿಬಾರಿ ಕೋಲ್ಕತಾದ ಅತ್ಯಂತ ಹಳೆಯ ಕಾಳಿ ಮಂದಿರಗಳಲ್ಲಿ ಒಂದು.

ಕೋಲ್ಕತ್ತಾದ ಅತ್ಯಂತ ಹಳೆಯ ಮತ್ತು ಪೂಜ್ಯ ಕಾಳಿ ದೇವಾಲಯಗಳಲ್ಲಿ ಇದೂ ಒಂದು. 1703 ರಲ್ಲಿ ಸ್ಥಾಪನೆಯಾದ ಈ ದೇವಾಲಯದ ಇತಿಹಾಸ 300 ವರ್ಷಗಳಷ್ಟು ಹಳೆಯದು. ಕೋಲ್ಕತ್ತಾ ನಗರವು ಔಪಚಾರಿಕವಾಗಿ ಅಭಿವೃದ್ಧಿ ಹೊಂದುವುದಕ್ಕಿಂತಲೂ ಹಳೆಯದಾಗಿದೆ. ಇಲ್ಲಿ ಕಾಳಿ ದೇವಿಯನ್ನು ‘ಮಾ ಸಿದ್ಧೇಶ್ವರಿ’ ರೂಪದಲ್ಲಿ ಆರಾಧಿಸಲಾಗುತ್ತದೆ. ಇಲ್ಲಿನ ದೇವತೆಯು ಅತ್ಯಂತ ಶಕ್ತಿಶಾಲಿ ಮತ್ತು ‘ಜಾಗೃತ’ ದೈವ ಎಂದು ಭಕ್ತರು ನಂಬುತ್ತಾರೆ.

ಶ್ರೀ ರಾಮಕೃಷ್ಣ ಪರಮಹಂಸರ ಸಂಬಂಧ

ಈ ದೇವಾಲಯಕ್ಕೂ ಆಧ್ಯಾತ್ಮಿಕ ಗುರು ಶ್ರೀ ರಾಮಕೃಷ್ಣ ಪರಮಹಂಸರಿಗೂ ಅವಿನಾಭಾವ ಸಂಬಂಧವಿದೆ. ಅವರು ಆಗಾಗ್ಗೆ ಈ ದೇವಾಲಯಕ್ಕೆ ಭೇಟಿ ನೀಡಿ ಮಾ ಸಿದ್ಧೇಶ್ವರಿಯ ಮುಂದೆ ಭಕ್ತಿಗೀತೆಗಳನ್ನು ಹಾಡುತ್ತಿದ್ದರು.

ಇದನ್ನೂ ಓದಿ: Mann Ki Baat: ಭಾರತದ ಅಭಿವೃದ್ಧಿಗೆ ಸೌರ ಹಾಗೂ ಪವನ ಶಕ್ತಿ ಬಹಳ ಮುಖ್ಯ: ಪ್ರಧಾನಿ ಮೋದಿ

ಅವರು ದೇವಾಲಯದ ಒಳಗೆ ಹೇಳಿದ ನುಡಿಮುತ್ತುಗಳನ್ನು ಇಂದಿಗೂ ಗೋಡೆಗಳ ಮೇಲೆ ಕೆತ್ತಲಾಗಿದೆ. ಬೆಂಗಾಲಿಯಲ್ಲಿರುವ ‘ಶಂಕರೇರ್ ಹೃದಯ ಮಾಝೆ, ಕಾಳಿ ಬಿರಾಜೆ’ (ಶಂಕರನ ಹೃದಯದಲ್ಲಿ ಕಾಳಿ ನೆಲೆಸಿದ್ದಾಳೆ) ಎಂಬ ಸಾಲುಗಳು ಇಲ್ಲಿ ಪ್ರಸಿದ್ಧವಾಗಿವೆ.

ಮಾಂಸಾಹಾರ ಪ್ರಸಾದದ ವಿಶಿಷ್ಟ ಸಂಪ್ರದಾಯ

ಭಾರತದಲ್ಲಿ ಮಾಂಸಾಹಾರ ಪ್ರಸಾದವನ್ನು ನೀಡುವ ಕೆಲವೇ ಕೆಲವು ಕಾಳಿ ದೇವಾಲಯಗಳಲ್ಲಿ ಇದೂ ಒಂದು.

ಈ ವಿಶಿಷ್ಟ ಸಂಪ್ರದಾಯವನ್ನು ಸ್ವತಃ ಶ್ರೀ ರಾಮಕೃಷ್ಣ ಪರಮಹಂಸರೇ ಆರಂಭಿಸಿದರು ಎಂದು ಹೇಳಲಾಗುತ್ತದೆ. ಒಮ್ಮೆ ಬ್ರಹ್ಮಾನಂದ ಕೇಶವ ಚಂದ್ರ ಸೇನ್ ಅವರ ಆರೋಗ್ಯ ಸುಧಾರಣೆಗಾಗಿ ಪ್ರಾರ್ಥಿಸಿದ ಪರಮಹಂಸರು, ದೇವಿಗೆ ‘ದಾಬ್-ಚಿಂಗ್ರಿ’ (ಸಿಗಡಿ ಖಾದ್ಯ) ನೈವೇದ್ಯ ಅರ್ಪಿಸಿದ್ದರು.

ಅಂದಿನಿಂದ ಇಂದಿನವರೆಗೆ ದೇವಿಗೆ ಮಾಂಸಾಹಾರ ಪ್ರಸಾದ ನೀಡುವ ಪದ್ಧತಿ ನಡೆದುಕೊಂಡು ಬಂದಿದೆ. ರಾಮಕೃಷ್ಣ ಪರಮಹಂಸರು ಶ್ಯಾಮಪುಕುರದಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದಾಗಲೂ ಅವರ ಅನುಯಾಯಿಗಳು ಮಾ ಸಿದ್ಧೇಶ್ವರಿಯ ಮುಂದೆ ಮಾಂಸಾಹಾರ ಪ್ರಸಾದ ಅರ್ಪಿಸಿ ಅವರ ಶೀಘ್ರ ಚೇತರಿಕೆಗಾಗಿ ಪ್ರಾರ್ಥಿಸಿದ್ದರು.

ಇದನ್ನೂ ಓದಿ: ಮೊದಲ ಹಂತದ ಚುನಾವಣೆ ಬಂಗಾಳದಲ್ಲಿ ಜಂಗಲ್ ರಾಜ್​ನ ಅಂತ್ಯದ ಆರಂಭ; ಪ್ರಧಾನಿ ಮೋದಿ ವಾಗ್ದಾಳಿ

ಪ್ರಧಾನಿಯವರ ಈ ಭೇಟಿಯು ಬಂಗಾಳದ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಪರಂಪರೆಯೊಂದಿಗೆ ಅವರು ಹೊಂದಿರುವ ನಿಕಟ ಸಂಬಂಧವನ್ನು ಪ್ರತಿಬಿಂಬಿಸುತ್ತದೆ. ಪ್ರಧಾನಿಗಳು ಬಂಗಾಳ ವಿಧಾನಸಭಾ ಚುನಾವಣೆ ಪ್ರಚಾರದ ಹಿನ್ನೆಲೆಯಲ್ಲಿ ಕೋಲ್ಕತಾಗೆ ತೆರಳಿದ ಹಿನ್ನೆಲೆಯಲ್ಲಿ ಈ ಐತಿಹಾಸಿಕ ದೇಗುಲಕ್ಕೂ ಭೇಟಿ ನೀಡಿ, ಸಿದ್ದೇಶ್ವರಿ ಮಾತೆಯ ದರುಶನ ಪಡೆದಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಎರಡು ಹಂತದಲ್ಲಿ ಚುನಾವಣೆ ಇದ್ದು, ಮೊದಲ ಹಂತದ ಮತದಾನವಾಗಿದೆ. ಎರಡನೇ ಹಂತದ ಮತದಾನ ಏಪ್ರಿಲ್ 29ರಂದು ನಡೆಯುತ್ತದೆ. ಮೇ 4ರಂದು ಚುನಾವಣಾ ಫಲಿತಾಂಶ ಪ್ರಕಟವಾಗುತ್ತದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

CSK vs GT: ದುಬೆಗೆ 3 ಜೀವದಾನ; 5 ಕ್ಯಾಚ್ ಕೈಚೆಲ್ಲಿದ ಗುಜರಾತ್ – Kannada News | IPL 2026: Poor Fielding & Dropped Catches Mar Matches – 20+ Catches Missed in 24 Hrs

ಇಷ್ಟು ದಿನ 2026 ರ ಐಪಿಎಲ್‌ನಲ್ಲಿ (IPL 2026) ಬರಿ ಬ್ಯಾಟ್ಸ್‌ಮನ್​ಗಳ ಅಬ್ಬರವೇ ಹೆಚ್ಚಿತ್ತು. ಹೀಗಾಗಿ ಪ್ರತಿ ಪಂದ್ಯದಲ್ಲೂ ಬೌಂಡರಿ ಹಾಗೂ ಸಿಕ್ಸರ್​ಗಳ ಮಳೆ ಹರಿಯುತ್ತಿತ್ತು. ಆದರೆ ಕಳೆದ 24 ಗಂಟೆಗಳಲ್ಲಿ ಆಟಗಾರರ ಕಳಪೆ ಫಿಲ್ಡಿಂಗ್​ನಿಂದಾಗಿ ಐಪಿಎಲ್ ಸುದ್ದಿಯಾಗಿದೆ. ಕಳದೆ 24 ಗಂಟೆಗಳ ಅವಧಿಯಲ್ಲಿ ಮೂರು ಪಂದ್ಯಗಳು ನಡೆದಿವೆ. ಈ ಮೂರು ಪಂದ್ಯಗಳಿಂದ ಸೇರಿ ಬರೋಬ್ಬರಿ 20 ಕ್ಕೂ ಹೆಚ್ಚು ಕ್ಯಾಚ್‌ಗಳನ್ನು ಕೈಬಿಡಲಾಗಿದೆ. ಗುಜರಾತ್ ಟೈಟಾನ್ಸ್-ಚೆನ್ನೈ ಸೂಪರ್ ಕಿಂಗ್ಸ್ (CSK vs GT) ಪಂದ್ಯದಂತೆಯೇ ಪಂಜಾಬ್-ದೆಹಲಿ ಮತ್ತು ರಾಜಸ್ಥಾನ-ಹೈದರಾಬಾದ್ ಪಂದ್ಯಗಳಲ್ಲಿಯೂ ಕಳಪೆ ಫಿಲ್ಡಿಂಗ್ ಕಂಡುಬಂದಿದೆ.

ಏಪ್ರಿಲ್ 26 ರ ಭಾನುವಾರದಂದು ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಚೆನ್ನೈ ಮತ್ತು ಗುಜರಾತ್ ನಡುವೆ ಪಂದ್ಯ ನಡೆಯಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಚೆನ್ನೈ ತಂಡ ಕೇವಲ 37 ರನ್‌ಗಳಿಗೆ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡಿತು. ಅಲ್ಲದೆ 50 ರನ್‌ಗಳನ್ನು ಪೂರೈಸಲು 12 ಓವರ್‌ಗಳನ್ನು ತೆಗೆದುಕೊಂಡಿತು. ಹೀಗಾಗಿ ತಂಡವು 100 ರನ್‌ ತಲುಪುವುದು ಕೂಡ ಕಷ್ಟಕರವಾಗಿತ್ತು. ಆದರೆ ಗುಜರಾತ್ ತಂಡದ ಕಳಪೆ ಫಿಲ್ಡಿಂಗ್​ ಸಿಎಸ್​​ಕೆಗೆ ವರದಾನವಾಯಿತು.

ಶಿವಂ ದುಬೆಗೆ 3 ಜೀವದಾನ

ಗುಜರಾತ್ ತಂಡದ ಫೀಲ್ಡಿಂಗ್ ತುಂಬಾ ಕಳಪೆಯಾಗಿತ್ತು. ತಂಡವು 20 ಓವರ್‌ಗಳಲ್ಲಿ ಐದು ಕ್ಯಾಚ್‌ಗಳನ್ನು ಕೈಬಿಟ್ಟಿತು. ಇವುಗಳಲ್ಲಿ ಶಿವಂ ದುಬೆ ಅವರದ್ದೇ ಮೂರು ಕ್ಯಾಚ್​ಗಳು ಸೇರಿದ್ದವು. ದುಬೆ 6 ರನ್ ಗಳಿಸಿದ್ದಾಗ ವಿಕೆಟ್ ಕೀಪರ್ ಜೋಸ್ ಬಟ್ಲರ್ ಮೊದಲ ಕ್ಯಾಚ್ ಕೈಚೆಲ್ಲಿದರು. ನಂತರ, ದುಬೆ 11 ರನ್ ಗಳಿಸಿದ್ದಾಗ ಸಾಯಿ ಸುದರ್ಶನ್ ಎರಡನೇ ಕ್ಯಾಚ್ ಬಿಟ್ಟರು. ದುಬೆ 22 ರನ್‌ಗಳಿಸಿದ್ದಾಗ ಮೊಹಮ್ಮದ್ ಸಿರಾಜ್ ಕೂಡ ಮತ್ತೊಂದು ಜೀವದಾನ ನೀಡಿದರು. ಆದಾಗ್ಯೂ, ಮೂರು ಜೀವದಾನಗಳ ಹೊರತಾಗಿಯೂ ದುಬೆ ಹೇಳಿಕೊಳ್ಳುವಂತಹ ಇನ್ನಿಂಗ್ಸ್ ಆಡಲಿಲ್ಲ.

ಕ್ಯಾಚ್ ಕೈಬಿಟ್ಟ ಗಿಲ್

ದುಬೆ ಮಾತ್ರವಲ್ಲ, ಕಾರ್ತಿಕ್ ಶರ್ಮಾ ಮತ್ತು ಜೇಮಿ ಓವರ್ಟನ್​ಗೂ ಜೀವದಾನ ಸಿಕ್ಕಿತು. 18 ನೇ ಓವರ್‌ನಲ್ಲಿ, ಕಾರ್ತಿಕ್ ಶರ್ಮಾ ಡೀಪ್ ಸ್ಕ್ವೇರ್ ಲೆಗ್‌ಗೆ ಶಾಟ್ ಆಡಿದರು. ಆದರೆ ಮಾನವ್ ಸುತಾರ್ ಮತ್ತು ರಶೀದ್ ಖಾನ್ ನಡುವಿನ ಸಂವಹನದ ಕೊರತೆಯಿಂದಾಗಿ ಈ ಕ್ಯಾಚ್ ಡ್ರಾಪ್ ಆಯಿತು. ನಂತರ, ಮುಂದಿನ ಓವರ್‌ನಲ್ಲಿ, ಜೇಮೀ ಓವರ್ಟನ್ ಮಿಡ್-ಆಫ್‌ಗೆ ಶಾಟ್ ಹೊಡೆದರು. ಗುಜರಾತ್ ನಾಯಕ ಶುಭ್ಮನ್ ಗಿಲ್ ಕ್ಯಾಚ್ ತೆಗೆದುಕೊಳ್ಳಲು ಡೈವ್ ಮಾಡಿದರು ಆದರೆ ಹಿಡಿಯುವಲ್ಲಿ ವಿಫಲರಾದರು.

CSK vs GT IPL 2026 Live Score: ಗುಜರಾತ್ ಶತಕ ಪೂರ್ಣ

ನಿನ್ನೆ 16ಕ್ಯಾಚ್ ಡ್ರಾಪ್

ಇದಕ್ಕೂ ಮೊದಲು, ಏಪ್ರಿಲ್ 25 ರ ಶನಿವಾರದಂದು ಪಂಜಾಬ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ನಡುವೆ ಎರಡು ಪಂದ್ಯಗಳು ನಡೆದವು. ಈ ಪಂದ್ಯದಲ್ಲಿ ಒಟ್ಟಾರೆಯಾಗಿ, ನಾಲ್ಕು ಇನ್ನಿಂಗ್ಸ್‌ಗಳಲ್ಲಿ 16 ಕ್ಯಾಚ್‌ಗಳನ್ನು ಕೈಚೆಲ್ಲಲಾಯಿತು. ಇದು ಪಂದ್ಯದ ಮೇಲೆ ಪರಿಣಾಮ ಬೀರಿತು. ಡೆಲ್ಲಿ ಮತ್ತು ರಾಜಸ್ಥಾನ್ ಈ ಕ್ಯಾಚ್‌ಗಳನ್ನು ಬಂಡವಾಳ ಮಾಡಿಕೊಂಡು ತಮ್ಮ ಇನ್ನಿಂಗ್ಸ್‌ಗಳಲ್ಲಿ ದೊಡ್ಡ ಸ್ಕೋರ್‌ಗಳನ್ನು ಗಳಿಸಿದರೆ, ಪಂಜಾಬ್ ಮತ್ತು ಸನ್‌ರೈಸರ್ಸ್ ಕೈಬಿಟ್ಟ ಕ್ಯಾಚ್‌ಗಳನ್ನು ಬಂಡವಾಳ ಮಾಡಿಕೊಂಡು ದೊಡ್ಡ ಸ್ಕೋರ್‌ಗಳನ್ನು ಬೆನ್ನಟ್ಟುವ ಮೂಲಕ ಗೆಲುವು ಸಾಧಿಸಿದವು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಈ ಬೇಸಿಗೆಯಲ್ಲಿ ಫ್ರಿಡ್ಜ್‌ ನೀರು ಕುಡಿಯೋದ್ರಿಂದ ಏನಾಗುತ್ತೆ ಗೊತ್ತಾ? – Kannada News | What changes happen to the body if you drinking cold water in summer?

ಈ ಸುಡು ಬೇಸಿಗೆಯಲ್ಲಿ (summer) ತಾಪಮಾನ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಈ ಋತುವಿನಲ್ಲಿ ಆರೋಗ್ಯದ ಬಗ್ಗೆ ತುಸು ಹೆಚ್ಚೇ ಕಾಳಜಿ ವಹಸಿಬೇಕಾಗುತ್ತದೆ. ಶಾಖದ ಹೊಡೆತ, ನಿರ್ಜಲೀಕರಣದಂತಹ ಸಮಸ್ಯೆಗಳು ಕಾಣಿಸಿಕೊಳ್ಳುವ ಕಾರಣ ದೇಹದಲ್ಲಿ ನೀರಿನಾಂಶ ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಅನೇಕರು ಈ ಸಮಯದಲ್ಲಿ ದೇಹದಲ್ಲಿ ನೀರಿನಾಂಶ ಕಾಪಾಡಿಕೊಳ್ಳಲು, ದೇಹವನ್ನು ತಂಪಾಗಿರಿಸಲು ಹೆಚ್ಚಿನ ಪ್ರಮಾಣದಲ್ಲಿ ಫ್ರಿಡ್ಜ್‌ ನೀರನ್ನೇ ಸೇವನೆ ಮಾಡುತ್ತಾರೆ. ಇದು ಆಹ್ಲಾದಕರವಾಗಿರುತ್ತದೆ ನಿಜ ಆದರೆ ಬೇಸಿಗೆಯಲ್ಲಿ ನಿತ್ಯವೂ ಫ್ರಿಡ್ಜ್‌ನಲ್ಲಿರುವ ಕೋಲ್ಡ್‌ ನೀರು ಸೇವನೆ ಮಾಡುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ. ಹಾಗಾದರೆ ಫ್ರಿಡ್ಜ್‌ ನೀರು ಕುಡಿಯುವುದರಿಂದ ಏನೆಲ್ಲಾ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ ಎಂಬುದನ್ನು ನೋಡೋಣ ಬನ್ನಿ.

ಬೇಸಿಗೆಯಲ್ಲಿ ಫ್ರಿಡ್ಜ್‌ ನೀರು ಕುಡಿಯುವುದರಿಂದ ಏನೆಲ್ಲಾ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ?

ಜೀರ್ಣಾಂಗ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ: ಒಬ್ಬ ವ್ಯಕ್ತಿಯು ಬಿಸಿ ವಾತಾವರಣದಿಂದ ಮನೆಯ ಒಳಗೆ ಬಂದಾಗ, ಅವನ ದೇಹವು ಈಗಾಗಲೇ ಹೆಚ್ಚಿನ ತಾಪಮಾನದಲ್ಲಿರುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಕೋಲ್ಡ್‌ ನೀರು ಕುಡಿಯುವುದು ದೇಹಕ್ಕೆ ಆಘಾತವನ್ನುಂಟು ಮಾಡುತ್ತದೆ. ಇದು ದೇಹದ ನೈಸರ್ಗಿಕ ಪ್ರಕ್ರಿಯೆಗಳ ಮೇಲೆ ಪರಿಣಾಮ ಬೀರುತ್ತದೆ ಮತ್ತು ಜೀರ್ಣಾಂಗ ವ್ಯವಸ್ಥೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಮತ್ತು ದೇಹವು ಹೊರಗಿನಿಂದ ಶೀತ ಅಂಶವನ್ನು ಸಾಮಾನ್ಯ ತಾಪಮಾನಕ್ಕೆ ತರಲು ಹೆಚ್ಚುವರಿ ಶ್ರಮ ಪಡಬೇಕಾಗುತ್ತದೆ, ಇದು ಗ್ಯಾಸ್‌, ಅಜೀರ್ಣ ಮತ್ತು ಹೊಟ್ಟೆಯಲ್ಲಿ ಸೆಳೆತದಂತಹ ಸಮಸ್ಯೆಗಳನ್ನು ಉಂಟುಮಾಡಬಹುದು. ಇದರ ಹೊರತಾಗಿ, ಗಂಟಲು ನೋವು, ಶೀತ ಮತ್ತು ತಲೆನೋವಿನಂತಹ ಸಮಸ್ಯೆಗಳನ್ನು ಸಹ ಕಾಣಬಹುದು.

ಹೃದಯ ಬಡಿತ ಕಡಿಮೆಯಾಗುತ್ತದೆ: ಬೇಸಿಗೆಯಲ್ಲಿ ಅತಿಯಾದ ಪ್ರಮಾಣದಲ್ಲಿ ರೆಫ್ರಿಜರೇಟರ್ ನೀರನ್ನು ಕುಡಿಯುವುದರಿಂದ ನಿಮ್ಮ ಹೃದಯ ಬಡಿತ ಕಡಿಮೆಯಾಗುತ್ತದೆ. ತಣ್ಣೀರು ನೇರವಾಗಿ ವೇಗಸ್ ನರದ ಮೇಲೆ ಪರಿಣಾಮ ಬೀರುತ್ತದೆ, ನಿಮ್ಮ ಹೃದಯ ಬಡಿತವನ್ನು ನಿಧಾನಗೊಳಿಸುತ್ತದೆ.

ತಲೆನೋವು ಉಂಟಾಗುತ್ತದೆ: ನೀವು ಬಿಸಿಲಿನಿಂದ ಅಥವಾ ತೀವ್ರ ಶಾಖದಿಂದ ಬಂದು ನೇರವಾಗಿ ತಣ್ಣನೆಯ ಅಥವಾ ಐಸ್ ನೀರನ್ನು ಕುಡಿದರೆ, ನಿಮಗೆ ತಲೆನೋವು ಬರಬಹುದು. ತಣ್ಣೀರು ಕುಡಿಯುವುದರಿಂದ ಬೆನ್ನುಮೂಳೆಯ ಅನೇಕ ನರಗಳು ತಂಪಾಗುತ್ತವೆ, ಇದು ಮೆದುಳಿನ ಮೇಲೆ ಪರಿಣಾಮ ಬೀರುತ್ತದೆ. ಇದು ತಲೆನೋವಿಗೆ ಕಾರಣವಾಗಬಹುದು.

ಇದನ್ನೂ ಓದಿ: ಊಟವಾದ ತಕ್ಷಣ ಮಾಡುವ ತಪ್ಪುಗಳು ಆರೋಗ್ಯದ ಮೇಲೆ ಋಣಾತ್ಮಕ ಪರಿಣಾಮ ಬೀರಬಹುದು

ಶೀತ ಮತ್ತು ಕೆಮ್ಮು: ನಿಮ್ಮ ದೇಹದ ಉಷ್ಣತೆಯು ಹೊರಗಿನ ತಾಪಮಾನಕ್ಕಿಂತ ಹೆಚ್ಚಾದಾಗ ಮತ್ತು ನೀವು ರೆಫ್ರಿಜರೇಟರ್‌ನಿಂದ ತಣ್ಣೀರು ಕುಡಿದಾಗ, ನಿಮ್ಮ ದೇಹವು ಪ್ರತಿಕ್ರಿಯಿಸುತ್ತದೆ. ಇದು ಶೀತ ಮತ್ತು ಜ್ವರಕ್ಕೆ ಕಾರಣವಾಗಬಹುದು. ಆದ್ದರಿಂದ, ರೆಫ್ರಿಜರೇಟರ್‌ ನೀರು ಕುಡಿಯುವುದು ನಿಮ್ಮ ಆರೋಗ್ಯಕ್ಕೆ ಹಾನಿಕಾರಕವಾಗಿದೆ.

ತೂಕ ಹೆಚ್ಚಾಗಬಹುದು: ನೀವು ಬೇಗನೆ ತೂಕ ಇಳಿಸಿಕೊಳ್ಳಲು ಬಯಸಿದರೆ, ನೀವು ರೆಫ್ರಿಜರೇಟರ್‌ನಲ್ಲಿಟ್ಟ ನೀರನ್ನು ಕುಡಿಯುವುದನ್ನು ತಪ್ಪಿಸಬೇಕು. ರೆಫ್ರಿಜರೇಟರ್‌ನಲ್ಲಿಟ್ಟ ನೀರನ್ನು ಕುಡಿಯುವುದರಿಂದ ದೇಹದ ಕೊಬ್ಬು ಗಟ್ಟಿಯಾಗುತ್ತದೆ ಮತ್ತು ತೂಕ ನಷ್ಟಕ್ಕೆ ಅಡ್ಡಿಯಾಗುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 5:43 pm, Sun, 26 April 26

Source link

ಉಡುಪಿ: ಸಿಟಿ ಬಸ್ ನಿಲ್ದಾಣದ ಮುಂದೆಯೇ ಹೊತ್ತಿ ಉರಿದ ಕಟ್ಟಡ; ಮೊಬೈಲ್, ಹಾರ್ಡ್‌ವೇರ್ ಮಳಿಗೆಗಳು ಸುಟ್ಟು ಭಸ್ಮ! – Kannada News | Major Fire at Udupi’s Khadar Commercial Complex: Shops Gutted, Short Circuit Suspected

ಉಡುಪಿ, ಏ.26: ನಗರದ ಪ್ರಮುಖ ವಾಣಿಜ್ಯ ಪ್ರದೇಶವಾದ ಸಿಟಿ ಬಸ್ ನಿಲ್ದಾಣದ ಸಮೀಪವಿರುವ ‘ಖಾದರ್ ಕಮರ್ಷಿಯಲ್’ ಸಂಕೀರ್ಣದಲ್ಲಿ ಇಂದು ಭಾರಿ ಅಗ್ನಿ ಅವಘಡ ಸಂಭವಿಸಿದೆ. ಆಕಸ್ಮಿಕವಾಗಿ ಕಾಣಿಸಿಕೊಂಡ ಬೆಂಕಿ ಕ್ಷಣಾರ್ಧದಲ್ಲಿ ಇಡೀ ಕಟ್ಟಡಕ್ಕೆ ವ್ಯಾಪಿಸಿದ್ದು, ವ್ಯಾಪಾರಿಗಳು ಮತ್ತು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಖಾದರ್ ಕಮರ್ಷಿಯಲ್ ಕಟ್ಟಡದಲ್ಲಿರುವ ಮೊಬೈಲ್ ಅಂಗಡಿ ಮತ್ತು ಹಾರ್ಡ್‌ವೇರ್ ಮಳಿಗೆಯಲ್ಲಿ ಮೊದಲು ಬೆಂಕಿ ಕಾಣಿಸಿಕೊಂಡಿದೆ. ಹಾರ್ಡ್‌ವೇರ್ ಅಂಗಡಿಯಲ್ಲಿದ್ದ ಸುಡುವ ಪದಾರ್ಥಗಳಿಂದಾಗಿ ಬೆಂಕಿ ತೀವ್ರವಾಗಿ ಹರಡಿದ್ದು, ದಟ್ಟವಾದ ಹೊಗೆ ಇಡೀ ಪ್ರದೇಶವನ್ನು ಆವರಿಸಿಕೊಂಡಿತ್ತು. ಪರಿಣಾಮವಾಗಿ ಮೊಬೈಲ್ ಅಂಗಡಿಯಲ್ಲಿದ್ದ ಬೆಲೆಬಾಳುವ ಹ್ಯಾಂಡ್‌ಸೆಟ್‌ಗಳು ಹಾಗೂ ಹಾರ್ಡ್‌ವೇರ್ ವಸ್ತುಗಳು ಬೆಂಕಿಯ ಕೆನ್ನಾಲಗೆಗೆ ಆಹುತಿಯಾಗಿವೆ. ಈ ಅವಘಡದಿಂದಾಗಿ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಸುಟ್ಟು ಭಸ್ಮವಾಗಿವೆ. ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಈ ಬೆಂಕಿ ಅವಘಡ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ.ಘಟನೆಯ ಬಗ್ಗೆ ಮಾಹಿತಿ ಸಿಗುತ್ತಿದ್ದಂತೆಯೇ ಉಡುಪಿ ಅಗ್ನಿಶಾಮಕ ಠಾಣೆಯ ಸಿಬ್ಬಂದಿಗಳು ಎರಡು ವಾಹನಗಳೊಂದಿಗೆ ಸ್ಥಳಕ್ಕೆ ಧಾವಿಸಿದರು. ಜನನಿಬಿಡ ಪ್ರದೇಶವಾದ್ದರಿಂದ ಬೆಂಕಿ ನಂದಿಸುವ ಕಾರ್ಯ ಸವಾಲಾಗಿತ್ತು. ಸದ್ಯ ಅಗ್ನಿಶಾಮಕ ಸಿಬ್ಬಂದಿಗಳು ಹರಸಾಹಸ ಪಟ್ಟು ಬೆಂಕಿಯನ್ನು ಹತೋಟಿಗೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Sphatika Mala: ಶುಕ್ರ ದೋಷ ನಿವಾರಣೆಗೆ ಸ್ಫಟಿಕ ಮಾಲೆ; ಲಕ್ಷ್ಮಿ ದೇವಿಯ ಅನುಗ್ರಹ ಪಡೆಯಲು ಸರಳ ಮಾರ್ಗ – Kannada News | Sphatika Mala for Venus: Enhance Love, Wealth and Marriage in Astrology

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ನವಗ್ರಹಗಳಲ್ಲಿ ಶುಕ್ರನನ್ನು ಸೌಂದರ್ಯ, ಪ್ರೀತಿ, ಸಂಪತ್ತು, ಕಲೆ ಮತ್ತು ವೈವಾಹಿಕ ಜೀವನದ ಅಧಿಪತಿ ಎಂದು ಪರಿಗಣಿಸಲಾಗುತ್ತದೆ. ಜಾತಕದಲ್ಲಿ ಶುಕ್ರನು ಬಲಶಾಲಿಯಾಗಿದ್ದಾಗ ಜೀವನವು ಭೌತಿಕ ಸೌಕರ್ಯ, ಸುಖ ಮತ್ತು ಸಂತೋಷದಿಂದ ಕೂಡಿರುತ್ತದೆ. ಒಂದು ವೇಳೆ ಶುಕ್ರನು ದುರ್ಬಲನಾಗಿದ್ದರೆ ಆರ್ಥಿಕ ಮುಗ್ಗಟ್ಟು, ವೈವಾಹಿಕ ಜೀವನದಲ್ಲಿ ಏರಿಳಿತ ಹಾಗೂ ಕೌಟುಂಬಿಕ ಸಮಸ್ಯೆಗಳು ತಲೆದೂರುವ ಸಾಧ್ಯತೆಯಿರುತ್ತದೆ. ಇಂತಹ ಸಂದರ್ಭಗಳಲ್ಲಿ ಶುಕ್ರನ ಅನುಗ್ರಹವನ್ನು ಪಡೆಯಲು ಸ್ಫಟಿಕ ಮಾಲೆಯನ್ನು ಧರಿಸುವುದು ಅತ್ಯಂತ ಪರಿಣಾಮಕಾರಿ ಆಧ್ಯಾತ್ಮಿಕ ಪರಿಹಾರವೆಂದು ನಂಬಲಾಗಿದೆ.

ಸ್ಫಟಿಕ ಮಾಲೆಯ ಮಹತ್ವ ಮತ್ತು ವೈಶಿಷ್ಟ್ಯ:

ಸ್ಫಟಿಕವು ಪ್ರಕೃತಿಯಲ್ಲಿ ಸಿಗುವ ಪಾರದರ್ಶಕ ಹಾಗೂ ಕಲ್ಮಶರಹಿತವಾದ ನೈಸರ್ಗಿಕ ಕಲ್ಲು. ಇದನ್ನು ಪವಿತ್ರತೆ ಮತ್ತು ಶುದ್ಧತೆಯ ಸಂಕೇತವೆಂದು ಜ್ಯೋತಿಷ್ಯ ಶಾಸ್ತ್ರ ಗುರುತಿಸುತ್ತದೆ. ಜಾತಕದಲ್ಲಿ ಶುಕ್ರ ದೋಷವಿದ್ದು ಮದುವೆ ವಿಳಂಬವಾಗುತ್ತಿದ್ದರೆ ಅಥವಾ ದಾಂಪತ್ಯದಲ್ಲಿ ಕಹಿ ಉಂಟಾಗಿದ್ದರೆ, ಶುದ್ಧವಾದ ಸ್ಫಟಿಕ ಮಾಲೆಯನ್ನು ಧರಿಸುವುದರಿಂದ ನಕಾರಾತ್ಮಕ ಶಕ್ತಿ ಕಡಿಮೆಯಾಗಿ ಶುಭ ಫಲಗಳು ದೊರೆಯುತ್ತವೆ. ಇದು ಮನಸ್ಸನ್ನು ಶಾಂತವಾಗಿರಿಸಲು ಮತ್ತು ಆಂತರಿಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ಆಧ್ಯಾತ್ಮಿಕ ಪಾವಿತ್ರ್ಯತೆ ಮತ್ತು ಜಪ:

ಸ್ಫಟಿಕ ಮಣಿಗಳನ್ನು ಕೇವಲ ಧರಿಸುವುದಕ್ಕೆ ಮಾತ್ರವಲ್ಲದೆ ಜಪಮಾಲೆಯಾಗಿಯೂ ಬಳಸುವುದು ಶ್ರೇಷ್ಠ. ವಿಶೇಷವಾಗಿ ಲಲಿತಾ ಸಹಸ್ರನಾಮ, ಲಕ್ಷ್ಮಿ ಅಷ್ಟೋತ್ತರ ಅಥವಾ ದೇವಿಯ ಸ್ತೋತ್ರಗಳನ್ನು ಪಠಿಸುವಾಗ ಸ್ಫಟಿಕ ಮಾಲೆಯನ್ನು ಬಳಸುವುದರಿಂದ ದೇವಿಯ ಅನುಗ್ರಹ ಶೀಘ್ರವಾಗಿ ಲಭಿಸುತ್ತದೆ. ಶುಕ್ರವಾರದಂದು ಈ ಮಾಲೆಗೆ ವಿಶೇಷ ಪೂಜೆ ಸಲ್ಲಿಸಿ, ದೇವರಿಗೆ ಅರ್ಪಿಸಿದ ನಂತರ ಧರಿಸುವುದು ಶಾಸ್ತ್ರೋಕ್ತ ವಿಧಾನವಾಗಿದೆ. ಅನೇಕರು ಇದನ್ನು ಆಧ್ಯಾತ್ಮಿಕ ಸಮತೋಲನಕ್ಕಾಗಿ ರುದ್ರಾಕ್ಷಿಯೊಂದಿಗೂ ಧರಿಸುತ್ತಾರೆ.

ಇದನ್ನೂ ಓದಿ: ದೇವರಿಗೆ ದೀಪ ಹಚ್ಚುವಾಗ ಈ ವಿಷ್ಯ ತಿಳಿದಿರಲಿ; ಇದು ನಿಮ್ಮ ಅದೃಷ್ಟವನ್ನೇ ಬದಲಿಸಲಿದೆ

ಧರಿಸುವ ಸರಿಯಾದ ವಿಧಾನ:

ಸ್ಫಟಿಕ ಮಾಲೆಯ ಪೂರ್ಣ ಫಲಿತಾಂಶ ಪಡೆಯಲು ಅದನ್ನು ವಿಧಿಬದ್ಧವಾಗಿ ಧರಿಸಬೇಕು. ಶುಕ್ರವಾರ ಮುಂಜಾನೆ ಸ್ನಾನ ಮುಗಿಸಿ, ಶುದ್ಧವಾದ ನಂತರ ಪೂಜಾ ಕೋಣೆಯಲ್ಲಿ ಮಾಲೆಯನ್ನು ಇಟ್ಟು ಪೂಜಿಸಬೇಕು. ನಂತರ “ಓಂ ಶುಂ ಶುಕ್ರಾಯ ನಮಃ” ಮಂತ್ರವನ್ನು ಪಠಿಸಿ ಅದನ್ನು ಧರಿಸುವುದರಿಂದ ಸಕಾರಾತ್ಮಕ ಬದಲಾವಣೆಗಳು ಕಂಡುಬರುತ್ತವೆ. ಇದು ಕೇವಲ ಧಾರ್ಮಿಕ ನಂಬಿಕೆಯಲ್ಲದೆ, ಮನಸ್ಸಿಗೆ ನೆಮ್ಮದಿ ನೀಡುವ ಒಂದು ಅಭ್ಯಾಸವೂ ಆಗಿದೆ.

ಸಂಪತ್ತು ಮತ್ತು ಆರೋಗ್ಯದ ಮೇಲೆ ಪ್ರಭಾವ:

ಲಕ್ಷ್ಮಿ ದೇವಿಯ ಆಶೀರ್ವಾದ ಪಡೆಯಲು ಸ್ಫಟಿಕ ಮಾಲೆಯನ್ನು ಮನೆಯ ನಗದು ಪೆಟ್ಟಿಗೆ ಅಥವಾ ತಿಜೋರಿಯಲ್ಲಿ ಇಡುವುದು ವಾಡಿಕೆ. ಇದರಿಂದ ಆರ್ಥಿಕ ಅಭಿವೃದ್ಧಿಯಾಗುತ್ತದೆ ಎಂಬ ನಂಬಿಕೆಯಿದೆ. ಇದಲ್ಲದೆ ಪೂಜೆಯಲ್ಲಿ ಸ್ಫಟಿಕ ಶಿವಲಿಂಗ ಮತ್ತು ಶ್ರೀಯಂತ್ರವನ್ನು ಬಳಸುವುದರಿಂದ ಶಿವ-ಶಕ್ತಿಯರ ಒಟ್ಟು ಅನುಗ್ರಹ ಲಭಿಸುತ್ತದೆ. ಆರೋಗ್ಯದ ದೃಷ್ಟಿಯಿಂದ ನೋಡುವುದಾದರೆ, ಇದು ರಕ್ತದೊತ್ತಡವನ್ನು ನಿಯಂತ್ರಿಸಲು ಮತ್ತು ದೇಹದ ಉಷ್ಣತೆಯನ್ನು ತಗ್ಗಿಸಲು ನೆರವಾಗುತ್ತದೆ ಎಂದು ಅನೇಕರು ತಮ್ಮ ವೈಯಕ್ತಿಕ ಅನುಭವಗಳ ಮೂಲಕ ಹೇಳುತ್ತಾರೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

CSK vs GT: ಸಿಎಸ್‌ಕೆ ಸೇರಿದ ಕೂಡಲೇ ಸುರೇಶ್ ರೈನಾ ದಾಖಲೆ ಮುರಿದ ಸಂಜು – Kannada News | Sanju Samson Reaches 5000 IPL Runs: Fastest Indian to Break Suresh Raina’s Record

ಒಟ್ಟಾರೆಯಾಗಿ ಐಪಿಎಲ್‌ನಲ್ಲಿ ವೇಗವಾಗಿ 5000 ರನ್ ಗಳಿಸಿದ ದಾಖಲೆ ಕೆರಿಬಿಯನ್ ದೈತ್ಯ ಕ್ರಿಸ್ ಗೇಲ್ ಅವರ ಹೆಸರಿನಲ್ಲಿದೆ. ಗೇಲ್ ಕೇವಲ 3288 ಎಸೆತಗಳಲ್ಲಿ ಈ ಸಾಧನೆ ಮಾಡಿದ್ದು, ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಈ ಪಟ್ಟಿಯಲ್ಲಿ ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ ಎರಡನೇ ಸ್ಥಾನದಲ್ಲಿದ್ದು, ಅವರು 3554 ಎಸೆತಗಳಲ್ಲಿ ಈ ಸಾಧನೆ ಮಾಡಿದ್ದರು.

Source link

Career Horoscope: ನಿಮ್ಮ ರಾಶಿಗನುಗುಣವಾಗಿ ಏಪ್ರಿಲ್ 26ರಿಂದ ಮೇ 02ರವರೆಗಿನ ಉದ್ಯೋಗ ಭವಿಷ್ಯ ತಿಳಿಯಿರಿ – Kannada News | Weekly Career Horoscope: April 26 May 02 – Your Path to Professional Growth

ಏಪ್ರಿಲ್ 26ರಿಂದ ಮೇ 02ರವರೆಗಿನ ಸಮಯದಲ್ಲಿ ವೃತ್ತಿ ಜೀವನದ ಹಲವು ಮಜಲುಗಳ ಪರಿಚಯವಾಗಲಿದೆ. ವೃತ್ತಿಯಲ್ಲಿ ಸುದೀರ್ಘ ಕಾಲ ಇದ್ದವರಿಗೆ ವಿಶೇಷ ಗೌರವ ಸ್ಥಾನ ಮಾನಗಳು ತಾನಾಗಿಯೇ ಬರಲಿವೆ. ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸುವಿರಿ.

​ಮೇಷ:

ರವಿ ಬಲವಾಗಿರುವುದರಿಂದ ಆಡಳಿತ ಮಂಡಳಿಯಿಂದ ಮನ್ನಣೆ ಸಿಗಲಿದೆ. ಸರ್ಕಾರಿ ಕೆಲಸಗಳಲ್ಲಿ ಲಾಭವಿದೆ. ನಿಮ್ಮ ಕಠಿಣ ನಿರ್ಧಾರಗಳು ವೃತ್ತಿಜೀವನದಲ್ಲಿ ಸಕಾರಾತ್ಮಕ ಬದಲಾವಣೆ ತರಲಿವೆ. ಹೊಸ ಜವಾಬ್ದಾರಿ ಸ್ವೀಕರಿಸಲು ಸಿದ್ಧರಾಗಿ.

ವೃಷಭ:

ಶುಕ್ರ ಮತ್ತು ಬುಧನ ಸ್ಥಿತಿಗತಿಯಿಂದಾಗಿ ಸೃಜನಶೀಲ ಕೆಲಸಗಳಲ್ಲಿ ಯಶಸ್ಸು ಸಿಗಲಿದೆ. ಸಹೋದ್ಯೋಗಿಗಳೊಂದಿಗೆ ಉತ್ತಮ ಬಾಂಧವ್ಯ ಇರಲಿ. ಹಣಕಾಸು ಕ್ಷೇತ್ರದಲ್ಲಿ ಇರುವವರಿಗೆ ಈ ವಾರ ಹೆಚ್ಚಿನ ಒತ್ತಡವಿದ್ದರೂ ಲಾಭದಾಯಕವಾಗಿರಲಿದೆ.

ಮಿಥುನ:

ಬುಧನ ಪ್ರಭಾವದಿಂದ ಸಂವಹನ ಮತ್ತು ತಾಂತ್ರಿಕ ಕ್ಷೇತ್ರದಲ್ಲಿರುವವರಿಗೆ ಉತ್ತಮ ವೇದಿಕೆ ಸಿಗಲಿದೆ. ಹೊಸ ಒಪ್ಪಂದಗಳಿಗೆ ಸಹಿ ಹಾಕಲು ಇದು ಸಕಾಲ. ನಿಮ್ಮ ಬುದ್ಧಿವಂತಿಕೆಯಿಂದ ಕಚೇರಿಯ ಜಟಿಲ ಸಮಸ್ಯೆಗಳನ್ನು ಸುಲಭವಾಗಿ ಪರಿಹರಿಸುವಿರಿ.

ಕರ್ಕಾಟಕ:

ಚಂದ್ರನ ಬಲವು ಏರಿಳಿತದಿಂದ ಕೂಡಿದೆ, ಆದ್ದರಿಂದ ಕೆಲಸದಲ್ಲಿ ಹೆಚ್ಚಿನ ಏಕಾಗ್ರತೆ ಅಗತ್ಯ. ಹಿರಿಯ ಅಧಿಕಾರಿಗಳ ಕಿರಿಕಿರಿ ಇರಬಹುದು, ತಾಳ್ಮೆ ಇರಲಿ. ವಾರದ ಮಧ್ಯಭಾಗದಲ್ಲಿ ಉದ್ಯೋಗದಲ್ಲಿ ಸ್ಥಿರತೆ ಕಂಡುಬರಲಿದೆ.

ಸಿಂಹ:

ರವಿ ಉಚ್ಚಸ್ಥಾನದಲ್ಲಿ ಇರುವುದರಿಂದ ನಾಯಕತ್ವದ ಗುಣಗಳು ಮೆಚ್ಚುಗೆ ಪಡೆಯಲಿವೆ. ಉನ್ನತ ಹುದ್ದೆಯಲ್ಲಿರುವವರಿಗೆ ಬಡ್ತಿಯ ಯೋಗವಿದೆ. ನಿಮ್ಮ ಮಾತಿಗೆ ಕಚೇರಿಯಲ್ಲಿ ಹೆಚ್ಚಿನ ಬೆಲೆ ಸಿಗಲಿದ್ದು, ಕೆಲಸದ ವೇಗ ಹೆಚ್ಚಲಿದೆ.

ಕನ್ಯಾ:

ಬುಧನ ದೃಷ್ಟಿಯಿಂದ ವ್ಯಾಪಾರ ಮತ್ತು ವಾಣಿಜ್ಯ ವ್ಯವಹಾರಗಳಲ್ಲಿ ಲಾಭ ಉಂಟಾಗಲಿದೆ. ಲೆಕ್ಕಪತ್ರ ವಿಭಾಗದಲ್ಲಿ ಇರುವವರಿಗೆ ಕೆಲಸದ ಹೊರೆ ಹೆಚ್ಚಿರಲಿದೆ. ಯೋಜಿತವಾಗಿ ಕೆಲಸ ಮಾಡುವುದರಿಂದ ಸಮಯಕ್ಕೆ ಸರಿಯಾಗಿ ಗುರಿ ತಲುಪುವಿರಿ.

ತುಲಾ:

ಶುಕ್ರನ ಶುಭ ದೃಷ್ಟಿಯಿಂದ ಕಲೆ ಮತ್ತು ಪ್ರಸಾರ ಮಾಧ್ಯಮದಲ್ಲಿರುವವರಿಗೆ ಹೊಸ ಅವಕಾಶಗಳು ಹುಡುಕಿ ಬರಲಿವೆ. ಉದ್ಯೋಗ ಬದಲಾವಣೆ ಇಚ್ಛಿಸುವವರಿಗೆ ಈ ವಾರ ಶುಭ ಸುದ್ದಿ ಸಿಗಲಿದೆ. ಆರ್ಥಿಕ ಲಾಭಗಳು ನಿರೀಕ್ಷಿತ ಮಟ್ಟದಲ್ಲಿರುತ್ತವೆ.

ವೃಶ್ಚಿಕ:

ಕುಜನ ಬಲವು ತಾಂತ್ರಿಕ ಮತ್ತು ರಕ್ಷಣಾ ಕ್ಷೇತ್ರದಲ್ಲಿರುವವರಿಗೆ ನೆರವಾಗಲಿದೆ. ಸವಾಲಿನ ಕೆಲಸಗಳನ್ನು ಸಲೀಸಾಗಿ ಮುಗಿಸುವಿರಿ. ಸ್ವಂತ ಉದ್ಯೋಗಿಗಳಿಗೆ ಆದಾಯ ಹೆಚ್ಚಲಿದೆ. ವೃತ್ತಿಯಲ್ಲಿ ಸ್ವಲ್ಪ ಕಠಿಣ ಪರಿಶ್ರಮವಿದ್ದರೂ ಯಶಸ್ಸು ಖಚಿತ.

ಧನು:

ಗುರು ಬಲವಾಗಿರುವುದರಿಂದ ಶಿಕ್ಷಣ ಮತ್ತು ಸಲಹಾ ಕ್ಷೇತ್ರದಲ್ಲಿರುವವರಿಗೆ ಗೌರವ ಹೆಚ್ಚಲಿದೆ. ಹೊಸ ಹೂಡಿಕೆಗಳಿಗೆ ಈ ವಾರ ಪೂರಕವಾಗಿದೆ. ನಿಮ್ಮ ಜ್ಞಾನಕ್ಕೆ ತಕ್ಕಂತೆ ಹೊಸ ಜವಾಬ್ದಾರಿಗಳು ಲಭಿಸಲಿವೆ, ಆತ್ಮವಿಶ್ವಾಸದಿಂದ ಮುನ್ನಡೆಯಿರಿ.

ಮಕರ:

ಶನಿಯ ಪ್ರಭಾವದಿಂದ ಕೆಲಸದಲ್ಲಿ ನಿಧಾನಗತಿ ಅನುಭವಕ್ಕೆ ಬರಬಹುದು. ಹಳೆಯ ಕೆಲಸಗಳನ್ನು ಪೂರ್ಣಗೊಳಿಸಲು ಇದು ಸೂಕ್ತ ಸಮಯ. ಹಿರಿಯರ ಮಾರ್ಗದರ್ಶನ ಪಡೆದರೆ ವೃತ್ತಿಯಲ್ಲಿನ ಗೊಂದಲಗಳು ದೂರವಾಗಲಿವೆ. ಶ್ರಮಕ್ಕೆ ತಕ್ಕ ಫಲ ಸಿಗಲಿದೆ.

ಕುಂಭ:

ತಾಂತ್ರಿಕ ವಿಭಾಗದವರಿಗೆ ವಿದೇಶಿ ಕಂಪನಿಗಳಿಂದ ಆಫರ್ ಬರುವ ಸಾಧ್ಯತೆ ಇದೆ. ಸಂಶೋಧನಾ ಕ್ಷೇತ್ರದಲ್ಲಿರುವವರಿಗೆ ಈ ವಾರ ಶುಭ ಫಲಗಳು ಸಿಗಲಿವೆ. ಸಹೋದ್ಯೋಗಿಗಳ ಸಹಕಾರದಿಂದ ದೊಡ್ಡ ಪ್ರಾಜೆಕ್ಟ್‌ಗಳನ್ನು ಯಶಸ್ವಿಯಾಗಿ ನಿರ್ವಹಿಸುವಿರಿ.

ಮೀನ:

ಗುರು ಮತ್ತು ಶುಕ್ರನ ಸಮನ್ವಯದಿಂದ ಬ್ಯಾಂಕಿಂಗ್ ಕ್ಷೇತ್ರದಲ್ಲಿರುವವರಿಗೆ ಪ್ರಗತಿ ಇರುತ್ತದೆ. ದೂರದ ಊರಿಗೆ ವರ್ಗಾವಣೆಯಾಗುವ ಸಾಧ್ಯತೆ ಇದೆ. ಹಿರಿಯ ಅಧಿಕಾರಿಗಳಿಂದ ಬೆಂಬಲ ದೊರೆಯಲಿದ್ದು, ಕೆಲಸದಲ್ಲಿ ಮಾನಸಿಕ ನೆಮ್ಮದಿ ಇರಲಿದೆ.

– ಲೋಹಿತ ಹೆಬ್ಬಾರ್ – 8762924271

Source link

ಧರ್ಮಸ್ಥಳದಲ್ಲಿ ಮದುವೆ ಮುಗಿಸಿಕೊಂಡು ಬರುತ್ತಿರುವಾಗ ಚಾರ್ಮಾಡಿ ಘಾಟಿಯಲ್ಲಿ ಬಸ್​​​ ಪಲ್ಟಿ – Kannada News | Belthangady: 25 Injured in Charmadi Ghat Bus Overturn; Major Tragedy Averted

ಬೆಳ್ತಂಗಡಿ, ಏ.26: ದಕ್ಷಿಣ ಕನ್ನಡ ಜಿಲ್ಲೆಯ ಚಾರ್ಮಾಡಿ ಘಾಟಿಯ ಅಪಾಯಕಾರಿ ತಿರುವಿನಲ್ಲಿ ಖಾಸಗಿ ಬಸ್ಸು ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ನಡೆದಿದೆ. ಧರ್ಮಸ್ಥಳದಲ್ಲಿ ಮದುವೆ ಮುಗಿಸಿಕೊಂಡು ಮೂಡಿಗೆರೆಯತ್ತ ಸಾಗುತ್ತಿದ್ದ ಬಸ್ ಅಪಘಾತಕ್ಕೀಡಾಗಿದ್ದು, ಬಸ್ಸಿನಲ್ಲಿದ್ದ 25 ಪ್ರಯಾಣಿಕರು ಗಾಯಗೊಂಡಿದ್ದಾರೆ. ಧರ್ಮಸ್ಥಳದಲ್ಲಿ ನಡೆದ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಿ, ಅಲ್ಲಿಂದ ಪ್ರಯಾಣಿಕರನ್ನು ಹೊತ್ತು ಮೂಡಿಗೆರೆಯತ್ತ ಖಾಸಗಿ ಬಸ್ಸು ಹೊರಟಿತ್ತು. ಚಾರ್ಮಾಡಿ ಘಾಟಿಯ ನಾಲ್ಕನೇ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಬಸ್ಸು ರಸ್ತೆಯಲ್ಲೇ ಪಲ್ಟಿಯಾಗಿದೆ. ಘಾಟಿ ಪ್ರದೇಶವಾದ್ದರಿಂದ ಬಸ್ ಪ್ರಪಾತಕ್ಕೆ ಬೀಳುವ ಅಪಾಯವಿತ್ತಾದರೂ, ರಸ್ತೆಯಲ್ಲೇ ಪಲ್ಟಿಯಾಗಿರುವುದರಿಂದ ಭೀಕರ ದುರಂತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದಂತಾಗಿದೆ.

ಬಸ್ಸಿನಲ್ಲಿ ಸುಮಾರು 25 ಮಂದಿ ಪ್ರಯಾಣಿಕರಿದ್ದರು. ಅಪಘಾತದ ರಭಸಕ್ಕೆ ಎಲ್ಲರಿಗೂ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಾಯಾಳುಗಳನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಗಳಿಗೆ ಮತ್ತು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದನ್ನೂ ಓದಿ: ಸಾಂಬಾರ್ ಮಾಡಿಲ್ಲವೆಂದು ಬೈದ ತಂದೆ: ಅಷ್ಟಕ್ಕೇ ಸಾವಿನ ಕದ ತಟ್ಟಿದ ಮಗಳು

ಘಟನೆ ನಡೆದ ತಕ್ಷಣ ಬೆಳ್ತಂಗಡಿ ಸಂಚಾರಿ ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಪಲ್ಟಿಯಾದ ಬಸ್ಸನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಘಾಟಿ ಪ್ರದೇಶದ ಕಡಿದಾದ ತಿರುವುಗಳಲ್ಲಿ ಚಾಲಕರು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಲಿಸುವುದೇ ಇಂತಹ ಅಪಘಾತಗಳಿಗೆ ಕಾರಣ ಎಂದು ಶಂಕಿಸಲಾಗಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version