ಧರ್ಮಸ್ಥಳದಲ್ಲಿ ಮದುವೆ ಮುಗಿಸಿಕೊಂಡು ಬರುತ್ತಿರುವಾಗ ಚಾರ್ಮಾಡಿ ಘಾಟಿಯಲ್ಲಿ ಬಸ್​​​ ಪಲ್ಟಿ – Kannada News | Belthangady: 25 Injured in Charmadi Ghat Bus Overturn; Major Tragedy Averted

ಬೆಳ್ತಂಗಡಿ, ಏ.26: ದಕ್ಷಿಣ ಕನ್ನಡ ಜಿಲ್ಲೆಯ ಚಾರ್ಮಾಡಿ ಘಾಟಿಯ ಅಪಾಯಕಾರಿ ತಿರುವಿನಲ್ಲಿ ಖಾಸಗಿ ಬಸ್ಸು ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ನಡೆದಿದೆ. ಧರ್ಮಸ್ಥಳದಲ್ಲಿ ಮದುವೆ ಮುಗಿಸಿಕೊಂಡು ಮೂಡಿಗೆರೆಯತ್ತ ಸಾಗುತ್ತಿದ್ದ ಬಸ್ ಅಪಘಾತಕ್ಕೀಡಾಗಿದ್ದು, ಬಸ್ಸಿನಲ್ಲಿದ್ದ 25 ಪ್ರಯಾಣಿಕರು ಗಾಯಗೊಂಡಿದ್ದಾರೆ. ಧರ್ಮಸ್ಥಳದಲ್ಲಿ ನಡೆದ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಿ, ಅಲ್ಲಿಂದ ಪ್ರಯಾಣಿಕರನ್ನು ಹೊತ್ತು ಮೂಡಿಗೆರೆಯತ್ತ ಖಾಸಗಿ ಬಸ್ಸು ಹೊರಟಿತ್ತು. ಚಾರ್ಮಾಡಿ ಘಾಟಿಯ ನಾಲ್ಕನೇ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಬಸ್ಸು ರಸ್ತೆಯಲ್ಲೇ ಪಲ್ಟಿಯಾಗಿದೆ. ಘಾಟಿ ಪ್ರದೇಶವಾದ್ದರಿಂದ ಬಸ್ ಪ್ರಪಾತಕ್ಕೆ ಬೀಳುವ ಅಪಾಯವಿತ್ತಾದರೂ, ರಸ್ತೆಯಲ್ಲೇ ಪಲ್ಟಿಯಾಗಿರುವುದರಿಂದ ಭೀಕರ ದುರಂತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದಂತಾಗಿದೆ.

ಬಸ್ಸಿನಲ್ಲಿ ಸುಮಾರು 25 ಮಂದಿ ಪ್ರಯಾಣಿಕರಿದ್ದರು. ಅಪಘಾತದ ರಭಸಕ್ಕೆ ಎಲ್ಲರಿಗೂ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಾಯಾಳುಗಳನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಗಳಿಗೆ ಮತ್ತು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದನ್ನೂ ಓದಿ: ಸಾಂಬಾರ್ ಮಾಡಿಲ್ಲವೆಂದು ಬೈದ ತಂದೆ: ಅಷ್ಟಕ್ಕೇ ಸಾವಿನ ಕದ ತಟ್ಟಿದ ಮಗಳು

ಘಟನೆ ನಡೆದ ತಕ್ಷಣ ಬೆಳ್ತಂಗಡಿ ಸಂಚಾರಿ ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಪಲ್ಟಿಯಾದ ಬಸ್ಸನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಘಾಟಿ ಪ್ರದೇಶದ ಕಡಿದಾದ ತಿರುವುಗಳಲ್ಲಿ ಚಾಲಕರು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಲಿಸುವುದೇ ಇಂತಹ ಅಪಘಾತಗಳಿಗೆ ಕಾರಣ ಎಂದು ಶಂಕಿಸಲಾಗಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸಾಯಿ ಪಲ್ಲವಿ ನಟಿಸಬೇಕಿದ್ದ ಬಯೋಪಿಕ್ ಸಿನಿಮಾ ರುಕ್ಮಿಣಿ ವಸಂತ್ ಪಾಲು? – Kannada News | Rukmini Vasanth replaced Sai Pallavi in MS Subbulakshmi biopic movie

ರುಕ್ಮಿಣಿ ವಸಂತ್ (Rukmini Vasanth), ಸೌಂದರ್ಯ, ನಟನಾ ಪ್ರತಿಭೆ, ಸುಂದರ ವ್ಯಕ್ತಿತ್ವ, ಗಾಂಭೀರ್ಯ ಎಲ್ಲವೂ ಸಮನಾಗಿ ಉಳ್ಳ ಕೆಲವೇ ನಟಿಯರಲ್ಲಿ ಒಬ್ಬರು. ‘ಸಪ್ತ ಸಾಗರದಾಚೆ ಎಲ್ಲೊ’ ಸಿನಿಮಾದ ಭಾರಿ ಯಶಸ್ವಿನ ಬಳಿಕ ರುಕ್ಮಿಣಿ ವಸಂತ್ ಅವರಿಗೆ ಪರಭಾಷೆಗಳಲ್ಲಿ ಬೇಡಿಕೆ ಹೆಚ್ಚಾಗಿದೆ. ಈಗಂತೂ ರುಕ್ಮಿಣಿ ವಸಂತ್ ಬಾಲಿವುಡ್ನ ನಿರ್ಮಾಣ ಸಂಸ್ಥೆಯೊಂದರ ಜೊತೆಗೂ ಕೆಲಸ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ. ಇವುಗಳ ನಡುವೆ, ಖ್ಯಾತ ನಟಿ ಸಾಯಿ ಪಲ್ಲವಿ ನಟಿಸಬೇಕಿದ್ದ ಪ್ರಮುಖ ಸಿನಿಮಾ ಒಂದು ಈಗ ರುಕ್ಮಿಣಿ ವಸಂತ್ ಪಾಲಾಗಿದೆ ಎನ್ನಲಾಗುತ್ತಿದೆ.

ಸಾಯಿ ಪಲ್ಲವಿ ಪ್ರಸ್ತುತ ಹಲವಾರು ಬಿಗ್ ಬಜೆಟ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಅಮೀರ್ ಖಾನ್ ಪುತ್ರ ಜುನೈದ್ ಖಾನ್ ಜೊತೆಗಿನ ಚಿತ್ರ, ರಣಬೀರ್ ಕಪೂರ್ ಅಭಿನಯದ ‘ರಾಮಾಯಣ’ ಸೇರಿದಂತೆ ಸಾಲು ಸಾಲು ಚಿತ್ರಗಳು ಅವರ ಕೈಯಲ್ಲಿವೆ. ಇವುಗಳ ಜೊತೆಗೆ ಮಣಿರತ್ನಂ ಅವರ ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ. ತೆಲುಗಿನಲ್ಲಿ ಒಂದು ಹೊಸ ಸಿನಿಮಾನಲ್ಲಿ ನಟಿಸಲಿದ್ದಾರೆ. ಶಿವಕಾರ್ತಿಕೇಯನ್ ಜೊತೆಗೊಂದು ಸಿನಿಮಾಕ್ಕೂ ಓಕೆ ಹೇಳಿದ್ದಾರೆ. ಈ ಸಿನಿಮಾಗಳ ಜೊತೆಗೆ ಖ್ಯಾತ ಗಾಯಕಿ ಎಂಎಸ್ ಸುಬ್ಬಲಕ್ಷ್ಮಿ ಜೀವನ ಆಧರಿಸಿದ ಸಿನಿಮಾನಲ್ಲೂ ಸಾಯಿ ಪಲ್ಲವಿ ನಟಿಸುತ್ತಾರೆ ಎನ್ನಲಾಗಿತ್ತು.

ಆದರೆ ಈಗ ಹೊರಬಿದ್ದಿರುವ ಕೆಲವು ಸುದ್ದಿಗಳ ಪ್ರಕಾರ, ಸಾಯಿ ಪಲ್ಲವಿ ಅವರು ನಟಿಸಬೇಕಿದ್ದ ಎಂಎಸ್ ಸುಬ್ಬಲಕ್ಷ್ಮಿ ಅವರ ಪಾತ್ರದಲ್ಲಿ ರುಕ್ಮಿಣಿ ವಸಂತ್ ಅವರು ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಸಾಯಿ ಪಲ್ಲವಿ ಅವರು ಡೇಟ್ಸ್ ಸಮಸ್ಯೆಯಿಂದಾಗಿ ಆ ಸಿನಿಮಾನಿಂದ ಹೊರ ನಡೆದಿದ್ದು, ಆ ಪಾತ್ರ ಈಗ ರುಕ್ಮಿಣಿ ವಸಂತ್ ಅವರ ಪಾಲಾಗಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ:ಎಷ್ಟು ಸಖತ್ ಆಗಿ ರೆಡಿ ಆಗ್ತಾರೆ ನೋಡಿ ರುಕ್ಮಿಣಿ ವಸಂತ್

ಸಾಯಿ ಪಲ್ಲವಿಯಂತೆ ರುಕ್ಮಿಣಿ ವಸಂತ್ ಕೂಡ ಸಹಜ ಅಭಿನಯಕ್ಕೆ ಹೆಸರಾದವರು. ಅವರ ಮುಗ್ಧ ನೋಟ ಮತ್ತು ಶಾಸ್ತ್ರೀಯ ನೃತ್ಯದ ಹಿನ್ನೆಲೆ ಎಂ.ಎಸ್. ಸುಬ್ಬುಲಕ್ಷ್ಮಿ ಅವರ ಪಾತ್ರಕ್ಕೆ ಪೂರಕವಾಗಲಿದೆ ಎಂದು ಚಿತ್ರತಂಡ ಭಾವಿಸಿದೆ ಎನ್ನಲಾಗಿದೆ. ‘ಜೆರ್ಸಿ’ ಖ್ಯಾತಿಯ ಗೌತಮ್ ತಿನ್ನನೂರಿ ಅವರು ಎಂಎಸ್ ಸುಬ್ಬಲಕ್ಷ್ಮಿ ಅವರ ಈ ಬಯೋಪಿಕ್ ಅನ್ನು ನಿರ್ದೇಶಿಸುತ್ತಿದ್ದು, ಸಂಗೀತ ಮಾಂತ್ರಿಕ ಅನಿರುದ್ಧ್ ರವಿಚಂದರ್ ಸಂಗೀತ ನೀಡಲಿದ್ದಾರೆ.

ಎಂ.ಎಸ್. ಸುಬ್ಬುಲಕ್ಷ್ಮಿ ಅವರಂತಹ ಐತಿಹಾಸಿಕ ವ್ಯಕ್ತಿತ್ವದ ಪಾತ್ರ ರುಕ್ಮಿಣಿ ವಸಂತ್ ಅವರಿಗೆ ಸಿಕ್ಕರೆ. ಅದು ಅವರ ವೃತ್ತಿಜೀವನಕ್ಕೆ ದೊಡ್ಡ ಮೈಲಿಗಲ್ಲಾಗುವುದರಲ್ಲಿ ಸಂಶಯವಿಲ್ಲ. ಆದರೆ ಇದಿನ್ನೂ ಖಾತ್ರಿ ಆಗಿಲ್ಲ. ಕೆಲ ಮಾಧ್ಯಮಗಳು ಸಾಯಿ ಪಲ್ಲವಿ ಸ್ಥಾನಕ್ಕೆ ರುಕ್ಮಿಣಿ ವಸಂತ್ ಬಂದಿದ್ದಾರೆ ಎಂದು ಬರೆದಿದ್ದರೆ, ಇನ್ನು ಕೆಲವು ಇದು ಸುಳ್ಳು ಸುದ್ದಿ ಎಂದು ಸಹ ಬರೆದಿವೆ. ಚಿತ್ರತಂಡದಿಂದ ಅಧಿಕೃತ ಘೋಷಣೆ ಹೊರಬೀಳುವವರೆಗೆ ಈ ಬಗ್ಗೆ ಖಾತ್ರಿ ಇಲ್ಲ.

ಪ್ರಸ್ತುತ ರುಕ್ಮಿಣಿ ವಸಂತ್ ಬೇರೆ ಬೇರೆ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಜೂ ಎನ್​​ಟಿಆರ್ ನಟಿಸಿ ಪ್ರಶಾಂತ್ ನೀಲ್ ನಿರ್ದೇಶಿಸುತ್ತಿರುವ ಹೊಸ ಸಿನಿಮಾಕ್ಕೆ ಅವರೇ ನಾಯಕಿ. ಅದರ ಹೊರತಾಗಿ ಒಂದು ಹಿಂದಿ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾನಲ್ಲಿ ನಟಿಸಿದ್ದಾರೆ ಆ ಸಿನಿಮಾ ಶೀಘ್ರವೇ ಬಿಡುಗಡೆ ಆಗಲಿದೆ. ತಮಿಳಿನಲ್ಲಿ ಒಂದು ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

SBI Recruitment 2026: ಎಸ್‌ಬಿಐನಲ್ಲಿ ಬಂಪರ್ ನೇಮಕಾತಿ; 45 ಲಕ್ಷ ರೂ. ವೇತನದ ಹುದ್ದೆಗೆ ಅರ್ಜಿ ಆಹ್ವಾನ! – Kannada News | SBI Recruitment 2026: Apply for Lead Business Analyst Posts Up to 45 Lakhs Salary

ಭಾರತದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI), ದೇಶಾದ್ಯಂತ ಇರುವ ತನ್ನ ವಿವಿಧ ಶಾಖೆಗಳಲ್ಲಿ ಗುತ್ತಿಗೆ ಆಧಾರದ ಮೇಲೆ ‘ಸ್ಪೆಷಲಿಸ್ಟ್ ಕೇಡರ್’ ಆಫೀಸರ್ ಹುದ್ದೆಗಳನ್ನು ಭರ್ತಿ ಮಾಡಲು ಅಧಿಕೃತ ಅಧಿಸೂಚನೆ ಹೊರಡಿಸಿದೆ. ಈ ನೇಮಕಾತಿ ಅಡಿಯಲ್ಲಿ ಒಟ್ಟು 8 ಲೀಡ್ ಬಿಸಿನೆಸ್ ಅನಾಲಿಸ್ಟ್ (Lead Business Analyst) ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದ್ದು, ಪ್ರತಿಭಾವಂತ ವೃತ್ತಿಪರರಿಗೆ ಇದು ಸುವರ್ಣಾವಕಾಶವಾಗಿದೆ.

ಶೈಕ್ಷಣಿಕ ಅರ್ಹತೆ ಮತ್ತು ಅನುಭವ:

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಸಂಬಂಧಿತ ವಿಭಾಗದಲ್ಲಿ ಬಿಇ/ಬಿಟೆಕ್ (BE/B.Tech) ಅಥವಾ ಎಂಸಿಎ (MCA), ಎಂಟೆಕ್ (M.Tech/M.Sc) ಅಥವಾ ಎಂಬಿಎ (MBA) ಪದವಿ ಪಡೆದಿರಬೇಕು. ಶೈಕ್ಷಣಿಕ ಅರ್ಹತೆಯ ಜೊತೆಗೆ, ಅಭ್ಯರ್ಥಿಗಳು ಸಂಬಂಧಿತ ಕ್ಷೇತ್ರದಲ್ಲಿ ಕೆಲಸದ ಅನುಭವವನ್ನು ಹೊಂದಿರುವುದು ಕಡ್ಡಾಯವಾಗಿದೆ. ಮಾರ್ಚ್ 31, 2026ಕ್ಕೆ ಅನ್ವಯವಾಗುವಂತೆ ಅಭ್ಯರ್ಥಿಗಳ ವಯಸ್ಸು 30 ರಿಂದ 40 ವರ್ಷಗಳ ನಡುವೆ ಇರಬೇಕು.

ಅರ್ಜಿ ಶುಲ್ಕದ ವಿವರ:

ಅರ್ಜಿ ಸಲ್ಲಿಸುವ ಸಾಮಾನ್ಯ (General), ಒಬಿಸಿ (OBC) ಮತ್ತು ಇಡಬ್ಲ್ಯೂಎಸ್ (EWS) ವರ್ಗದ ಅಭ್ಯರ್ಥಿಗಳು 750 ರೂ. ಅರ್ಜಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಆದರೆ, ಎಸ್‌ಸಿ (SC), ಎಸ್‌ಟಿ (ST) ಮತ್ತು ವಿಕಲಚೇತನ (PwBD) ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕವಿರುವುದಿಲ್ಲ. ಆಸಕ್ತರು ಮೇ 4, 2026ರೊಳಗೆ ಎಸ್‌ಬಿಐನ ಅಧಿಕೃತ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.

ಇದನ್ನೂ ಓದಿ: ಕೆಲಸಕ್ಕೆ ಸೇರಿದ ಮೊದಲ ದಿನವೇ ವೈದ್ಯೆ ರಾಜೀನಾಮೆ; ವೈದ್ಯಕೀಯ ಲೋಕದ ಕರಾಳ ಮುಖ ಅನಾವರಣ!

ಆಯ್ಕೆ ಪ್ರಕ್ರಿಯೆ ಮತ್ತು ವೇತನ ಶ್ರೇಣಿ:

ಈ ನೇಮಕಾತಿಯ ವಿಶೇಷತೆಯೆಂದರೆ ಅಭ್ಯರ್ಥಿಗಳಿಗೆ ಯಾವುದೇ ಲಿಖಿತ ಪರೀಕ್ಷೆ ಇರುವುದಿಲ್ಲ. ಬದಲಾಗಿ, ಅಭ್ಯರ್ಥಿಗಳ ಅರ್ಜಿಯನ್ನು ಆಧರಿಸಿ ‘ಶಾರ್ಟ್‌ಲಿಸ್ಟ್’ ಮಾಡಲಾಗುತ್ತದೆ. ನಂತರ ಸಂದರ್ಶನ ಮತ್ತು ಮೂಲ ದಾಖಲೆಗಳ ಪರಿಶೀಲನೆಯ ಮೂಲಕ ಅಂತಿಮ ಆಯ್ಕೆ ನಡೆಯಲಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ವಾರ್ಷಿಕ ಸುಮಾರು 45 ಲಕ್ಷ ರೂಪಾಯಿಗಳ ಆಕರ್ಷಕ ವೇತನ ಪ್ಯಾಕೇಜ್ ನೀಡಲಾಗುವುದು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉನ್ನತ ಹುದ್ದೆ ಮತ್ತು ಉತ್ತಮ ಸಂಬಳದ ನಿರೀಕ್ಷೆಯಲ್ಲಿರುವ ಎಂಜಿನಿಯರಿಂಗ್ ಹಾಗೂ ಮ್ಯಾನೇಜ್‌ಮೆಂಟ್ ಪದವೀಧರರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಎಸ್‌ಬಿಐನ ಅಧಿಕೃತ ಕೆರಿಯರ್ ಪೋರ್ಟಲ್‌ಗೆ ಭೇಟಿ ನೀಡಿ.

ಉದ್ಯೋಗಕ್ಕೆ ಸಂಬಂಧಿಸಿದ ಮತ್ತಷ್ಟು  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಗಲ್ಫ್ ರಾಷ್ಟ್ರಗಳಲ್ಲಿನ ಅಮೆರಿಕದ ಮಿಲಿಟರಿ ನೆಲೆಗಳಿಗೆ ನಿರೀಕ್ಷೆಮೀರಿದ ಹಾನಿ: ವರದಿ – Kannada News | Iran strikes caused US bases suffer severe damage than what was reported

ಅಮೆರಿಕನ್ ಮಿಲಿಟರಿ ನೆಲೆgeImage Credit source: AI/Mediaforge/TV9

ವಾಷಿಂಗ್ಟನ್, ಏಪ್ರಿಲ್ 26: ಮಧ್ಯಪ್ರಾಚ್ಯದಲ್ಲಿ ಅಮೆರಿಕದ ಮಿಲಿಟರಿ ನೆಲೆಗಳ (US military bases) ಮೇಲೆ ಇರಾನ್ ನಡೆಸಿದ ದಾಳಿಗಳು ಈ ಹಿಂದೆ ವರದಿಯಾದದ್ದಕ್ಕಿಂತಲೂ ಭೀಕರವಾಗಿದ್ದು, ಭಾರಿ ಪ್ರಮಾಣದ ಹಾನಿ ಉಂಟುಮಾಡಿವೆ ಎಂದು ವರದಿಗಳು ತಿಳಿಸಿವೆ. ಇತ್ತೀಚಿನ ಮಾಧ್ಯಮ ವರದಿಗಳ ಪ್ರಕಾರ (NBC ನ್ಯೂಸ್ ಉಲ್ಲೇಖಿಸಿ), ಫೆಬ್ರವರಿ 28 ರಿಂದ ಅಮೆರಿಕ ಮತ್ತು ಇರಾನ್ ನಡುವೆ ಸಂಘರ್ಷ ಆರಂಭವಾದಾಗಿನಿಂದ ಇರಾನ್ ನಡೆಸಿದ ಪ್ರತಿದಾಳಿಗಳಲ್ಲಿ ಅಮೆರಿಕದ ಮಿಲಿಟರಿ ನೆಲೆಗಳಿಗೆ ಆಗಿರುವ ಹಾನಿ “ಸಾರ್ವಜನಿಕವಾಗಿ ಒಪ್ಪಿಕೊಂಡಿರುವುದಕ್ಕಿಂತಲೂ ಅಧಿಕ”ವಾಗಿದೆ.

ಕನಿಷ್ಠ ಏಳು ದೇಶಗಳಲ್ಲಿ ಹರಡಿರುವ ಅಮೆರಿಕದ ಸೇನಾ ನೆಲೆಗಳು ಇರಾನ್ ದಾಳಿಗೆ ತುತ್ತಾಗಿವೆ. ಇದರಲ್ಲಿ ಗೋದಾಮುಗಳು, ಕಮಾಂಡ್ ಕೇಂದ್ರಗಳು, ವಿಮಾನ ಹ್ಯಾಂಗರ್‌ಗಳು ಮತ್ತು ಉಪಗ್ರಹ ಸಂವಹನ ಮೂಲಸೌಕರ್ಯಗಳು ಸೇರಿವೆ.

ರನ್‌ವೇಗಳು, ಅತ್ಯಾಧುನಿಕ ರಾಡಾರ್ ಸಿಸ್ಟಂಗಳು ಮತ್ತು ಹತ್ತಾರು ಯುದ್ಧ ವಿಮಾನಗಳು ಹಾನಿಗೊಳಗಾಗಿವೆ ಅಥವಾ ನಾಶವಾಗಿವೆ ಎಂದು ವರದಿಯಾಗಿದೆ. ಈ ಹಾನಿಯನ್ನು ಸರಿಪಡಿಸಲು ಮತ್ತು ಮರುನಿರ್ಮಾಣ ಮಾಡಲು ಅಮೆರಿಕಕ್ಕೆ ಬಿಲಿಯನ್ ಡಾಲರ್‌ಗಳಷ್ಟು ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ.

ಇದನ್ನೂ ಓದಿ: ವೈಟ್​ಹೌಸ್​ನಲ್ಲಿ ಗುಂಡಿನ ದಾಳಿ ನಡೆಸಿದ ವ್ಯಕ್ತಿಯ ಫೋಟೊ ಬಿಡುಗಡೆ ಮಾಡಿದ ಟ್ರಂಪ್

ರಾಜಕೀಯ ಮತ್ತು ಪಾರದರ್ಶಕತೆಯ ವಿವಾದ

ಅಮೆರಿಕದ ರಕ್ಷಣಾ ಇಲಾಖೆ (ಪೆಂಟಗನ್) ಮತ್ತು ಸೆಂಟ್ರಲ್ ಕಮಾಂಡ್ ಹಾನಿಯ ನಿಖರ ವಿವರಗಳನ್ನು ಬಹಿರಂಗಪಡಿಸಲು ನಿರಾಕರಿಸುತ್ತಿವೆ. ಇದು ಅಲ್ಲಿನ ರಿಪಬ್ಲಿಕನ್ ಸಂಸದರ ಆಕ್ರೋಶಕ್ಕೆ ಕಾರಣವಾಗಿದೆ.

ಒಂದೆಡೆ ಹಾನಿಯ ಬಗ್ಗೆ ನಿಖರ ಮಾಹಿತಿ ನೀಡದ ಪೆಂಟಗನ್, ಮತ್ತೊಂದೆಡೆ ಇರಾನ್ ಕಾರ್ಯಾಚರಣೆಗಳಿಗಾಗಿ ಹೆಚ್ಚುವರಿ $200 ಬಿಲಿಯನ್ ಹಣವನ್ನು ಕಾಂಗ್ರೆಸ್‌ನಿಂದ ಕೇಳುತ್ತಿರುವುದು ವಿವಾದಕ್ಕೆ ದಾರಿ ಮಾಡಿಕೊಟ್ಟಿದೆ.

ಮಹತ್ವದ ಬೆಳವಣಿಗೆ

ಇರಾನ್‌ನ ಹಳೆಯ ತಲೆಮಾರಿನ ಎಫ್-5 (F-5) ಯುದ್ಧ ವಿಮಾನವೊಂದು ಅಮೆರಿಕದ ಅತ್ಯಾಧುನಿಕ ವಾಯು ರಕ್ಷಣಾ ವ್ಯವಸ್ಥೆಯನ್ನು ಭೇದಿಸಿ ದಾಳಿ ನಡೆಸಿರುವುದು ಅಮೆರಿಕದ ಮಿಲಿಟರಿ ಮೂಲಸೌಕರ್ಯದ ಅಸುರಕ್ಷಿತತೆಯನ್ನು ಎತ್ತಿ ತೋರಿಸಿದೆ ಎಂದು ಈ ವರದಿಗಳು ವಿಶ್ಲೇಷಿಸಿವೆ.

ಇದನ್ನೂ ಓದಿ: ಶ್ವೇತಭವನದ ಔತಣಕೂಟದಲ್ಲಿ ಗುಂಡಿನ ಸದ್ದು: ಭಾಷಣ ನಿಲ್ಲಿಸಿ ಬಂಕರ್‌ನತ್ತ ಓಡಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್

ಪ್ರಸ್ತುತ ಏಪ್ರಿಲ್ 8 ರಿಂದ ಅಮೆರಿಕ ಮತ್ತು ಇರಾನ್ ನಡುವೆ ತಾತ್ಕಾಲಿಕ ಕದನ ವಿರಾಮ ಜಾರಿಯಲ್ಲಿದ್ದರೂ, ಈ ಆಂತರಿಕ ವರದಿಗಳು ಅಮೆರಿಕದ ಮಿಲಿಟರಿ ಸಾಮರ್ಥ್ಯದ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತಿವೆ.

ಇನ್ನಷ್ಟು ಅಂತರರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಪಂಚಮಸಾಲಿ ಪೀಠ ಸಂಘರ್ಷ: ಮೂವರು ಟ್ರಸ್ಟಿಗಳ ಉಚ್ಚಾಟನೆ; ಸೋಮನಗೌಡ ಸ್ಫೋಟಕ ಹೇಳಿಕೆ – Kannada News | Harihara Panchamasali Gurupeeth conflict: three Trustees Expelled

ದಾವಣಗೆರೆ, ಏಪ್ರಿಲ್​ 26: ಪಂಚಮಸಾಲಿ ಗುರುಪೀಠ ಟ್ರಸ್ಟ್‌ನ ಪ್ರಧಾನ ಧರ್ಮದರ್ಶಿ ಬಿ.ಸಿ. ಉಮಾಪತಿ, ಧರ್ಮದರ್ಶಿ ಚಂದ್ರಶೇಖರ್ ಪೂಜಾರ್ ಮತ್ತು ಕಾರ್ಯದರ್ಶಿ ಜ್ಯೋತಿ ಪ್ರಕಾಶ್ ಅವರನ್ನು ಟ್ರಸ್ಟ್‌ನಿಂದ ಉಚ್ಚಾಟನೆ ಮಾಡಲಾಗಿದೆ. ಲೆಕ್ಕಪತ್ರ ನೀಡುವಂತೆ ಸಾರ್ವಜನಿಕ ಮತ್ತು ಸಂಘದ ವತಿಯಿಂದ ನಿರಂತರವಾಗಿ ಕೇಳಲಾಗಿದ್ದರೂ ಸಹ, ಅವರು ಸ್ಪಂದಿಸದ ಕಾರಣ ಈ ಕ್ರಮ ಕೈಗೊಳ್ಳಲಾಗಿದೆ. ಏಪ್ರಿಲ್ 13ರಿಂದ ಈ ಮೂವರು ಟ್ರಸ್ಟಿಗಳಿಗೆ ಯಾವುದೇ ಹಣಕಾಸು ವ್ಯವಹಾರ ಅಥವಾ ನಿರ್ಧಾರ ಕೈಗೊಳ್ಳುವ ಅಧಿಕಾರ ಇರುವುದಿಲ್ಲ ಎಂದು ಪಂಚಮಸಾಲಿ ರಾಜ್ಯ ಸಂಘದ ಅಧ್ಯಕ್ಷ ಸೋಮನಗೌಡ ಮಾಲಿ ಪಾಟೀಲ್ ಹೇಳಿದ್ದಾರೆ.

ಸಂಘವು ಸುಪ್ರೀಂ ಆಗಿದ್ದು, ಸುಮಾರು 13,600 ಸದಸ್ಯರನ್ನು ಹೊಂದಿದೆ. ಟ್ರಸ್ಟ್‌ನಲ್ಲಿನ ಅವ್ಯವಹಾರ ತಡೆಯುವ ಮತ್ತು ಸಮಾಜದ ಒಳಿತಿಗಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಜೂನ್ ತಿಂಗಳಲ್ಲಿ ಲೆಕ್ಕ ಕೊಡಿ ಅಭಿಯಾನ ಸಮಿತಿ ಅಧ್ಯಕ್ಷರೊಂದಿಗೆ ರಾಜ್ಯ ಪ್ರವಾಸ ಕೈಗೊಂಡು 2008ರಿಂದ ಮಠಕ್ಕೆ ದಾನ ನೀಡಿದವರ ಕುರಿತು ಮಾಹಿತಿ ಸಂಗ್ರಹಿಸಿ, ಜೂನ್‌ನಲ್ಲಿ ಪೂರ್ಣ ಮಾಹಿತಿ ಬಹಿರಂಗಪಡಿಸಲಾಗುವುದು ಎಂದು ತಿಳಿಸಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ನನ್ನ ಅಕ್ಕ ಲಕ್ಷ್ಮಿ ಹೆಬ್ಬಾಳ್ಕರ್ ಕರ್ನಾಟಕದ ಐರನ್ ಲೇಡಿ: ಹಾಡಿ ಹೊಗಳಿದ ಚನ್ನರಾಜ್ ಹತ್ತಿಹೊಳಿ – Kannada News | Ayra Films Anna From Mexico: Social Message and Kannada Cinema Vision

ಬೆಳಗಾವಿ, ಏ.26: ಅಣ್ಣ ಫ್ರಮ್ ಮೆಕ್ಸಿಕೋ ಚಿತ್ರದ ಟೀಸರ್ ಬಿಡುಗಡೆ ಸಮಾರಂಭದಲ್ಲಿ ಐರಾ ಫಿಲ್ಮ್ಸ್‌ನ ನಿರ್ಮಾಪಕ ಚನ್ನರಾಜ್ ಹತ್ತಿಹೊಳಿ ಅವರು ಚಿತ್ರ ನಿರ್ಮಾಣದ ಸವಾಲುಗಳು ಮತ್ತು ಚಿತ್ರದ ಕುರಿತು ವಿವರವಾಗಿ ಮಾತನಾಡಿದರು. ಐರಾ ಫಿಲ್ಮ್ಸ್ ಸಂಸ್ಥೆಗೆ ಅಣ್ಣ ಫ್ರಮ್ ಮೆಕ್ಸಿಕೋ ಒಂದು ವಿಶೇಷ ಚಿತ್ರವಾಗಿದೆ. ಇದು ಸಂಸ್ಥೆಯ ಮೊದಲ ನಿರ್ಮಾಣವಾಗಿದ್ದು, ನೂರಾರು ಸಿನಿಮಾಗಳನ್ನು ಮಾಡಿದರೂ ಮೊದಲ ಚಿತ್ರ ಯಾವಾಗಲೂ ಸ್ಮರಣೀಯವಾಗಿರುತ್ತದೆ ಎಂದು ಅವರು ಹೇಳಿದರು. ಈ ಸಂಸ್ಥೆಯು ಕರ್ನಾಟಕದ ಐರನ್ ಲೇಡಿ ಹಾಗೂ ಮಿನಿಸ್ಟರ್ ಸಹೋದರಿ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಆಶೀರ್ವಾದದಿಂದ ಪ್ರಾರಂಭವಾಯಿತು. ಕನ್ನಡಿಗರಿಗೆ ಮತ್ತು ಕರ್ನಾಟಕಕ್ಕೆ ಉತ್ತಮ ಕಥೆಗಳನ್ನು ಹಾಗೂ ಗುಣಮಟ್ಟದ ಸಿನಿಮಾಗಳನ್ನು ನೀಡಬೇಕೆಂಬ ದೊಡ್ಡ ಆಸೆಯನ್ನು ಐರಾ ಫಿಲ್ಮ್ಸ್ ಹೊಂದಿದೆ ಎಂದು ಚನ್ನರಾಜ್ ಹತ್ತಿಹೊಳಿ ತಿಳಿಸಿದರು. ಅಣ್ಣ ಫ್ರಮ್ ಮೆಕ್ಸಿಕೋ ಚಿತ್ರದ ಟೀಸರ್‌ನಲ್ಲಿ ದೊಡ್ಡದಾದ ಮಾಸ್ ಹೀರೋಯಿಸಂ ಮತ್ತು ಫೈಟ್ ದೃಶ್ಯಗಳು ಕಂಡುಬಂದರೂ, ಈ ಕಥೆಯನ್ನು ಒಪ್ಪಿಕೊಳ್ಳಲು ಪ್ರಮುಖ ಕಾರಣವೆಂದರೆ ಅದರಲ್ಲಿರುವ ಸಾಮಾಜಿಕ ಕಳಕಳಿ ಮತ್ತು ಯುವ ಜನತೆಗೆ ನೀಡುವ ಒಳ್ಳೆಯ ಸಂದೇಶ. ಕಥೆಯ ಆಳವಾದ ಅಂಶಗಳನ್ನು ಪರಿಗಣಿಸಿ ನಿರ್ಮಾಪಕರಾಗಿ ಕಾರ್ಯನಿರ್ವಹಿಸಲು ನಿರ್ಧರಿಸಲಾಯಿತು ಎಂದು ಹತ್ತಿಹೊಳಿ ವಿವರಿಸಿದರು.

ಈ ಚಿತ್ರಕ್ಕೆ ಅನೇಕರು ಬೆಂಬಲ ನೀಡಿದ್ದಾರೆ. ಶಂಕರ್ ಗುರು ಅವರು ಕಥೆಯನ್ನು ಪರಿಚಯಿಸಿದರು. ನಟ ಧನಂಜಯ್ ಹಾಗೂ ಇನ್ನೊಬ್ಬ ಮಿತ್ರರಾದ ಸತ್ಯ ಅವರ ಸಹಕಾರವೂ ಇದೆ. ಕನ್ನಡ ಚಿತ್ರರಂಗಕ್ಕೆ ಹಿಂದೆ ಸಾಕಷ್ಟು ಕೊಡುಗೆಗಳನ್ನು ನೀಡಿದ ಜೀ ಸ್ಟುಡಿಯೋಸ್ ಕೂಡ ಈ ಯೋಜನೆಯಲ್ಲಿ ಕುಟುಂಬದ ಸದಸ್ಯರಂತೆ ಕೈಜೋಡಿಸಿದೆ ಎಂದು ಚನ್ನರಾಜ್ ಹತ್ತಿಹೊಳಿ ಜಿ ಸ್ಟುಡಿಯೋಸ್‌ಗೆ ಧನ್ಯವಾದ ಅರ್ಪಿಸಿದರು. ಚಿತ್ರದ ಸಂಗೀತ ನಿರ್ದೇಶಕರು, ನಾಯಕಿ ಹಾಗೂ ಆನಂದ್ ಆಡಿಯೋ ಕೂಡ ಮಹತ್ವದ ಪಾತ್ರ ವಹಿಸಿದ್ದಾರೆ. ಆನಂದ್ ಆಡಿಯೋದಿಂದ ಶ್ಯಾಮ್ ಅವರು ಈ ಚಿತ್ರವನ್ನು ನಿರ್ಮಿಸಲು ಸಾಕಷ್ಟು ಪ್ರೇರಣೆ ನೀಡಿದ್ದಾರೆ ಎಂದು ಅವರು ಶ್ಲಾಘಿಸಿದರು. ಒಟ್ಟಾರೆಯಾಗಿ, ಒಂದು ಉತ್ತಮ ಸಿನಿಮಾ ಮಾಡುವಲ್ಲಿ ಎಲ್ಲರ ಬೆಂಬಲ ಮತ್ತು ಆಶೀರ್ವಾದ ಅಗತ್ಯ ಎಂದು ಚನ್ನರಾಜ್ ಹತ್ತಿಹೊಳಿ ಹೇಳಿದರು. ಕನ್ನಡ ಚಿತ್ರರಂಗವು ಈಗ ಬಹಳ ದೊಡ್ಡದಾಗಿ ಬೆಳೆದಿದ್ದು, ಮತ್ತಷ್ಟು ಉತ್ತಮ ಸಿನಿಮಾಗಳನ್ನು ನೀಡಲು ಐರಾ ಫಿಲ್ಮ್ಸ್ ಬದ್ಧವಾಗಿದೆ. ಇದಕ್ಕೆ ಪ್ರೇಕ್ಷಕರ ಪ್ರೀತಿ, ಪ್ರೋತ್ಸಾಹ ಮತ್ತು ಆಶೀರ್ವಾದ ಬೇಕು ಎಂದು ಅವರು ಮನವಿ ಮಾಡಿದರು. ಉತ್ತಮ ಗುಣಮಟ್ಟದ ಸಿನಿಮಾವನ್ನು ನೀಡಿರುವುದಾಗಿ ಹೇಳಿದ ಅವರು, ಮುಂಬರುವ ದಿನಗಳಲ್ಲಿ ಪ್ರೇಕ್ಷಕರು ಚಿತ್ರವನ್ನು ಹೇಗೆ ಆಶೀರ್ವದಿಸುತ್ತಾರೆ ಎಂದು ಕಾದು ನೋಡಬೇಕು ಎಂದು ಮಾತು ಮುಗಿಸಿದರು.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

RBI Recruitment 2026: RBIನಲ್ಲಿ ನೇಮಕಾತಿ; ದೇಶದ ಅತ್ಯುನ್ನತ ಬ್ಯಾಂಕಿಂಗ್ ಸಂಸ್ಥೆಯಲ್ಲಿ ಕೆಲಸ ಪಡೆಯಲು ಇಲ್ಲಿದೆ ಸುವರ್ಣವಕಾಶ – Kannada News | RBI Junior Engineer Recruitment 2026: Civil/Electrical Engineer Vacancies

ಭಾರತೀಯ ರಿಸರ್ವ್ ಬ್ಯಾಂಕ್ (RBI) ದೇಶಾದ್ಯಂತ ಇರುವ ತನ್ನ ವಿವಿಧ ಶಾಖೆಗಳಲ್ಲಿ ಖಾಲಿ ಇರುವ ಜೂನಿಯರ್ ಎಂಜಿನಿಯರ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಈ ನೇಮಕಾತಿ ಪ್ರಕ್ರಿಯೆಯ ಮೂಲಕ ಒಟ್ಟು 11 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದ್ದು, ಇದರಲ್ಲಿ 7 ಜೂನಿಯರ್ ಎಂಜಿನಿಯರ್ (ಸಿವಿಲ್) ಮತ್ತು 4 ಜೂನಿಯರ್ ಎಂಜಿನಿಯರ್ (ಎಲೆಕ್ಟ್ರಿಕಲ್) ಹುದ್ದೆಗಳು ಸೇರಿವೆ. ಎಂಜಿನಿಯರಿಂಗ್ ಪದವೀಧರರಿಗೆ ಕೇಂದ್ರ ಬ್ಯಾಂಕ್‌ನಲ್ಲಿ ವೃತ್ತಿಜೀವನ ಆರಂಭಿಸಲು ಇದೊಂದು ಉತ್ತಮ ಅವಕಾಶವಾಗಿದೆ.

ಶೈಕ್ಷಣಿಕ ಅರ್ಹತೆ ಮತ್ತು ವಯೋಮಿತಿ:

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸಂಬಂಧಿತ ಎಂಜಿನಿಯರಿಂಗ್ ವಿಭಾಗದಲ್ಲಿ (ಸಿವಿಲ್ ಅಥವಾ ಎಲೆಕ್ಟ್ರಿಕಲ್) ಕನಿಷ್ಠ ಶೇ.65 ಅಂಕಗಳೊಂದಿಗೆ ಡಿಪ್ಲೊಮಾ ಅಥವಾ ಪದವಿಯನ್ನು ಪೂರ್ಣಗೊಳಿಸಿರಬೇಕು. ಅರ್ಜಿದಾರರ ವಯಸ್ಸು ಏಪ್ರಿಲ್ 1, 2026ಕ್ಕೆ ಅನ್ವಯವಾಗುವಂತೆ 20 ರಿಂದ 30 ವರ್ಷಗಳ ನಡುವೆ ಇರಬೇಕು. ಸರ್ಕಾರದ ನಿಯಮಾನುಸಾರ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗಿದ್ದು, ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷಗಳ ವಿನಾಯಿತಿ ಇರುತ್ತದೆ. ವಿಕಲಚೇತನ ಅಭ್ಯರ್ಥಿಗಳಿಗೆ (PwBD) ಅವರ ವರ್ಗಕ್ಕೆ ಅನುಗುಣವಾಗಿ 10 ರಿಂದ 15 ವರ್ಷಗಳವರೆಗೆ ವಯೋಮಿತಿ ಸಡಿಲಿಕೆ ಲಭ್ಯವಿದೆ.

ಆಯ್ಕೆ ಪ್ರಕ್ರಿಯೆ ಮತ್ತು ಪರೀಕ್ಷಾ ದಿನಾಂಕ:

ಅರ್ಹ ಅಭ್ಯರ್ಥಿಗಳ ಅಂತಿಮ ಆಯ್ಕೆಯು ಮೂರು ಹಂತಗಳಲ್ಲಿ ನಡೆಯಲಿದೆ. ಆನ್‌ಲೈನ್ ಲಿಖಿತ ಪರೀಕ್ಷೆ, ಭಾಷಾ ಪ್ರಾವೀಣ್ಯತೆಯ ಪರೀಕ್ಷೆ (LPT) ಮತ್ತು ಮೂಲ ದಾಖಲೆಗಳ ಪರಿಶೀಲನೆ. ನಿಗದಿತ ವೇಳಾಪಟ್ಟಿಯಂತೆ ಆನ್‌ಲೈನ್ ಲಿಖಿತ ಪರೀಕ್ಷೆಯು ಜೂನ್ ನಲ್ಲಿ ನಡೆಯಲಿದ್ದು, ಅಭ್ಯರ್ಥಿಗಳು ಮೇ 6ರೊಳಗೆ ಅಧಿಕೃತ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕಾಗುತ್ತದೆ.

ಇದನ್ನೂ ಓದಿ: ಕೆಲಸಕ್ಕೆ ಸೇರಿದ ಮೊದಲ ದಿನವೇ ವೈದ್ಯೆ ರಾಜೀನಾಮೆ; ವೈದ್ಯಕೀಯ ಲೋಕದ ಕರಾಳ ಮುಖ ಅನಾವರಣ!

ಲಿಖಿತ ಪರೀಕ್ಷೆಯ ವಿಧಾನ:

ಲಿಖಿತ ಪರೀಕ್ಷೆಯನ್ನು ಒಟ್ಟು 300 ಅಂಕಗಳಿಗಾಗಿ ನಡೆಸಲಾಗುತ್ತಿದ್ದು, ಇದರಲ್ಲಿ 180 ಪ್ರಶ್ನೆಗಳಿರುತ್ತವೆ. ಪರೀಕ್ಷೆಯು ನಾಲ್ಕು ವಿಭಾಗಗಳನ್ನು ಒಳಗೊಂಡಿರುತ್ತದೆ:

  • ಇಂಗ್ಲಿಷ್ ಭಾಷೆ: 50 ಪ್ರಶ್ನೆಗಳು (50 ಅಂಕಗಳು).
  • ಎಂಜಿನಿಯರಿಂಗ್ ಪೇಪರ್ – 1 : 40 ಪ್ರಶ್ನೆಗಳು (100 ಅಂಕಗಳು).
  • ಎಂಜಿನಿಯರಿಂಗ್ ಪೇಪರ್ – 2 : 40 ಪ್ರಶ್ನೆಗಳು (100 ಅಂಕಗಳು).
  • ಸಾಮಾನ್ಯ ಬುದ್ಧಿಮತ್ತೆ ಮತ್ತು ತಾರ್ಕಿಕ ಸಾಮರ್ಥ್ಯ : 50 ಪ್ರಶ್ನೆಗಳು (50 ಅಂಕಗಳು).

ಆಸಕ್ತ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿ ಮತ್ತು ಆನ್‌ಲೈನ್ ಅರ್ಜಿ ಸಲ್ಲಿಕೆಗಾಗಿ ಆರ್‌ಬಿಐನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬಹುದು. ಸರಿಯಾದ ಸಮಯಕ್ಕೆ ಅರ್ಜಿ ಸಲ್ಲಿಸಿ, ದೇಶದ ಅತ್ಯುನ್ನತ ಬ್ಯಾಂಕಿಂಗ್ ಸಂಸ್ಥೆಯಲ್ಲಿ ಕೆಲಸ ಮಾಡುವ ಅವಕಾಶವನ್ನು ಪಡೆದುಕೊಳ್ಳಿ.

ಉದ್ಯೋಗಕ್ಕೆ ಸಂಬಂಧಿಸಿದ ಮತ್ತಷ್ಟು  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 5:36 pm, Sun, 26 April 26

Source link

CSK vs GT: 8 ಎಸೆತಗಳಲ್ಲಿ 3 ವಿಕೆಟ್‌; ಪರಿಣಾಮ ಬೀರದ ಇಂಪ್ಯಾಕ್ಟ್ ಪ್ಲೇಯರ್ – Kannada News | IPL 2026: CSK’s Batting Collapse vs GT Triggers Early Impact Player Use in Match 37

ಐಪಿಎಲ್ 2026 (IPL 2026) ರ 37 ನೇ ಪಂದ್ಯದಲ್ಲಿ, ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಗುಜರಾತ್ ಟೈಟಾನ್ಸ್ (CSK vs GT) ತಂಡಗಳು MA ಚಿದಂಬರಂ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಿದ್ದವು. ತವರಿನಲ್ಲಿ ಟಾಸ್ ಸೋತ ಸಿಎಸ್​​ಕೆ ಮೊದಲು ಬ್ಯಾಟಿಂಗ್‌ ಮಾಡಬೇಕಾಯಿತು. ತವರು ಮೈದಾನವಾಗಿದ್ದರಿಂದ ಸಿಎಸ್​ಕೆ ಉತ್ತಮ ಆರಂಭ ಪಡೆಯುವ ನಿರೀಕ್ಷೆ ಇತ್ತು. ಆದರೆ ಗುಜರಾತ್​​ನ ಸಾಂಘಿಕ ದಾಳಿಗೆ ತತ್ತರಿಸಿದ ಸಿಎಸ್​​ಕೆ ಬ್ಯಾಟಿಂಗ್‌ ವಿಭಾಗ ಪವರ್‌ಪ್ಲೇನಲ್ಲಿಯೇ ಪವರ್ ಕಳೆದುಕೊಂಡಿತು. ಪರಿಣಾಮವಾಗಿ, ತಂಡವು ಪಂದ್ಯದ ಆರಂಭದಲ್ಲಿಯೇ ಅಂದರೆ 4 ಓವರ್​ಗಳ ಒಳಗೆಯೇ ಇಂಪ್ಯಾಕ್ಟ್ ಪ್ಲೇಯರ್ ನಿಯಮವನ್ನು ಬಳಸಬೇಕಾಯಿತು.

8 ಎಸೆತಗಳಲ್ಲಿ 3 ವಿಕೆಟ್‌

ಎಂದಿನಂತೆ ಸಿಎಸ್​ಕೆ ತಂಡ ಉತ್ತಮ ಆರಂಭ ಪಡೆಯುವಲ್ಲಿ ಮತ್ತೊಮ್ಮೆ ಎಡವಿತು. ಫಾರ್ಮ್‌ನಲ್ಲಿರುವ ಸಂಜು ಸ್ಯಾಮ್ಸನ್ ಕೇವಲ 15 ಎಸೆತಗಳಲ್ಲಿ 11 ರನ್‌ಗಳಿಸಿ ವಿಕೆಟ್ ಒಪ್ಪಿಸಿದರು. ಹೀಗಾಗಿ ಚೆನ್ನೈ ಸೂಪರ್ ಕಿಂಗ್ಸ್ ನಾಲ್ಕನೇ ಓವರ್‌ನಲ್ಲಿ ತನ್ನ ಮೊದಲ ವಿಕೆಟ್ ಕಳೆದುಕೊಂಡಿತು. ಅದೇ ಓವರ್‌ನ ಕೊನೆಯ ಎಸೆತದಲ್ಲಿ ಉರ್ವಿಲ್ ಪಟೇಲ್ ಕೂಡ ರಬಾಡಗೆ ಬಲಿಯಾದರು. ಹೀಗಾಗಿ ಸಿಎಸ್​ಕೆ ಒಂದೇ ಓವರ್​​ನಲ್ಲಿ ಎರಡು ವಿಕೆಟ್ ಕಳೆದುಕೊಂಡಿತು. ಹೀಗಾಗಿ ಸಿಎಸ್​​ಕೆ ಐದನೇ ಓವರ್​ನಲ್ಲಿಯೇ ಇಂಪ್ಯಾಕ್ಟ್ ಪ್ಲೇಯರ್ ಆಗಿ ಉರ್ವಿಲ್ ಪಟೇಲ್ ಅವರನ್ನು ಕಣಕ್ಕಿಳಿಸಬೇಕಾಯಿತು.

ಪರಿಣಾಮಕಾರಿಯಾಗದ ಇಂಪ್ಯಾಕ್ಟ್ ಪ್ಲೇಯರ್

ಆದರೆ ಇಂಪ್ಯಾಕ್ಟ್ ಪ್ಲೇಯರ್ ಆಗಿ ಬಂದ ಉರ್ವಿಲ್ ಪಟೇಲ್ ಕೂಡ ತಂಡಕ್ಕೆ ನೆರವಾಗಲಿಲ್ಲ. ಸಿರಾಜ್ ಬೌಲ್ ಮಾಡಿದ ಐದನೇ ಓವರ್​ನಲ್ಲಿ ಸರ್ಫರಾಜ್ ಖಾನ್ ಶೂನ್ಯಕ್ಕೆ ಔಟಾದರು. ಹೀಗಾಗಿ, ಸಿಎಸ್‌ಕೆ ಕೇವಲ 8 ಎಸೆತಗಳಲ್ಲಿ ತನ್ನ ಮೊದಲ ಮೂರು ವಿಕೆಟ್‌ಗಳನ್ನು ಕಳೆದುಕೊಂಡಿತು. ಹೀಗಾಗಿ ಶೂನ್ಯಕ್ಕೆ ಔಟಾದ ಸರ್ಫರಾಜ್ ಬದಲಿಗೆ ಇಂಪ್ಯಾಕ್ಟ್ ಪ್ಲೇಯರ್ ಆಗಿ ಉರ್ವಿಲ್ ಪಟೇಲ್ ಅವರನ್ನು ಸಿಎಸ್​​ಕೆ ಬ್ಯಾಟಿಂಗ್​ಗೆ ಇಳಿಸಿತು. ಗಮನಿಸಬೇಕಾದ ಸಂಗತಿಯೆಂದರೆ, ಸಿಎಸ್​ಕೆ ಇಂಪ್ಯಾಕ್ಟ್ ಪ್ಲೇಯರ್ ಅನ್ನು ಇಷ್ಟು ಬೇಗ ಕಣಕ್ಕಿಳಿಸಿದ್ದು, ಈ ಆವೃತ್ತಿಯಲ್ಲಿ ಇದು ಎರಡನೇ ಬಾರಿ.

CSK vs GT IPL 2026 Live Score: ಗುಜರಾತ್​ಗೆ 159 ರನ್ ಗುರಿ

ಇದಕ್ಕೂ ಮೊದಲು, ಗುವಾಹಟಿಯಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಆಯುಷ್ ಮ್ಹಾತ್ರೆ ಬದಲಿಗೆ ಸರ್ಫರಾಜ್ ಖಾನ್ ಅವರನ್ನು ಇಂಪ್ಯಾಕ್ಟ್ ಪ್ಲೇಯರ್ ಆಗಿ ಆಡಿಸಲಾಗಿತ್ತು. ಆಗಲೂ ತಂಡವು ನಾಲ್ಕನೇ ಓವರ್‌ನಲ್ಲಿ ಇಂಪ್ಯಾಕ್ಟ್ ಪ್ಲೇಯರ್ ಅನ್ನು ಕಣಕ್ಕಿಳಿಸಿತ್ತು. ಆದರೆ, ಚೆನ್ನೈ ಸೂಪರ್ ಕಿಂಗ್ಸ್ ಆ ಪಂದ್ಯವನ್ನು ಸೋತಿತ್ತು. ಇನ್ನು ಈ ಪಂದ್ಯದಲ್ಲಿ ಇಂಪ್ಯಾಕ್ಟ್ ಪ್ಲೇಯರ್ ಆಗಿ ಆಡಿದ ಉರ್ವಿಲ್ ಪಟೇಲ್ ಕೂಡ ಯಾವುದೇ ಪರಿಣಾಮ ಬೀರದೆ ಪೆವಿಲಿಯನ್ ಸೇರಿಕೊಂಡರು. ಉರ್ವಿಲ್ ಪಟೇಲ್ 3 ಎಸೆತಗಳಲ್ಲಿ ಒಂದು ಬೌಂಡರಿ ಸಹಿತ 4 ರನ್ ಗಳಿಸಲಷ್ಟೇ ಶಕ್ತರಾಗಿ ವಿಕೆಟ್ ಒಪ್ಪಿಸಿದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಚಿಕ್ಕಬಳ್ಳಾಪುರ ಜನಿವಾರ ಜಟಾಪಟಿ: ಪೊಲೀಸರು ಮನವಿ ಮಾಡಿದ್ರೂ ದೂರು ನೀಡಲು ಪರೀಕ್ಷಾರ್ಥಿ ಹಿಂದೇಟು – Kannada News | Chikkaballapur Janivara Row: Examinee Yet to File Complaint

ಪರೀಕ್ಷಾರ್ಥಿ ಕೆ.ಆರ್.ಸುಪ್ರೀತ್Image Credit source: tv9 kannada

ಚಿಕ್ಕಬಳ್ಳಾಪುರ, ಏಪ್ರಿಲ್​ 26: ಸಿಇಟಿ ಪರೀಕ್ಷೆ ವೇಳೆ ಪರೀಕ್ಷಾರ್ಥಿಯ ಜನಿವಾರ (janivara) ಕತ್ತರಿಸಿದ ವಿಚಾರ ಜಿಲ್ಲೆಯಲ್ಲಿ ಸದ್ಯ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಆದರೆ, ಈ ಸಂಬಂಧ ದೂರು ನೀಡಲು ಪರೀಕ್ಷಾರ್ಥಿ ಕೆ.ಆರ್.ಸುಪ್ರೀತ್ ಮತ್ತು ಆತನ ಪೋಷಕರು ಹಿಂದೇಟು ಹಾಕುತ್ತಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ದೂರು ದಾಖಲಿಸುವಂತೆ ಪೊಲೀಸರು ಮನವಿ ಮಾಡಿದರೂ, ಸುಪ್ರೀತ್ ಮತ್ತು ಆತನ ಪೋಷಕರು ದೂರು ನೀಡಲು ಮುಂದೆ ಬರುತ್ತಿಲ್ಲ. ಪರೀಕ್ಷೆ ನಡೆದ ನಾಗಾರ್ಜುನ ಪಿ.ಯು ಕಾಲೇಜಿನ ಆಡಳಿತ ಮಂಡಳಿಯು ಸುಪ್ರೀತ್ ಮೇಲೆ ಪ್ರಭಾವ ಬೀರಿರುವ ಸಾಧ್ಯತೆ ಇದೆ ಎಂಬ ಆರೋಪಗಳು ಕೇಳಿಬರುತ್ತಿವೆ. ಸದ್ಯ ನಂದಿಗಿರಿಧಾಮ ಪೊಲೀಸರಿಗೆ ಪ್ರಕರಣ ಗೊಂದಲ ಸೃಷ್ಟಿಸಿದೆ.

ವೈಯಕ್ತಿಕವಾಗಿ ದೂರು ನೀಡಿದರೆ ದಾಖಲು ಮಾಡಬಹುದು. ಆದರೆ ಬ್ರಾಹ್ಮಣ ಮಹಾಸಭಾದಿಂದ ಮನವಿ ನೀಡಿದ್ದಾರೆ ಮನವಿಯನ್ನು ದೂರು ಎಂದು ಪರಿಗಣಿಸಲು ಆಗಲ್ಲ. ಮನವಿ ಪತ್ರದಲ್ಲಿ ಹತ್ತಾರು ಜನ ಸಹಿ ಮಾಡಿದ್ದಾರೆ, ಯಾರನ್ನು ದೂರುದಾರರೆಂದು ಪರಿಗಣಿಸುವುದು ಎಂದು ಟಿವಿ9ಗೆ ಪೊಲೀಸ್ ಇಲಾಖೆಯ ಉನ್ನತ ಮೂಲಗಳಿಂದ ಮಾಹಿತಿ ನೀಡಲಾಗಿದೆ.

ಜನಿವಾರ ತಾನೇ ಮರಕ್ಕೆ ನೇತು ಹಾಕಿದ ಪರೀಕ್ಷಾರ್ಥಿ: ಸಿಸಿಟಿವಿಯಲ್ಲಿ ಸತ್ಯ ಬಯಲು

ಆರಂಭದಲ್ಲಿ ಸುಪ್ರೀತ್, “ತನ್ನ ಜನಿವಾರವನ್ನು ಕತ್ತರಿಸಿ ಕಸದ ಬುಟ್ಟಿಗೆ ಎಸೆಯಲಾಗಿತ್ತು, ಅದನ್ನು ತಾನು ಹುಡುಕಿ ತಂದೆ” ಎಂದು ಹೇಳಿಕೆ ನೀಡಿದ್ದ. ಆದರೆ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಸತ್ಯಾಂಶ ಬೇರೆಯೇ ಇದೆ. ಜನಿವಾರವನ್ನು ಕತ್ತರಿಸಿದ ನಂತರ ಸುಪ್ರೀತ್ ಅದನ್ನು ತಾನೇ ಮರಕ್ಕೆ ನೇತು ಹಾಕುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಇದನ್ನೂ ಓದಿ: ಜನಿವಾರ ಕತ್ತರಿಸಿ ಕಸದ ಬುಟ್ಟಿಗೆ ಹಾಕಿದ್ರು: ಅಳಲು ತೋಡಿಕೊಂಡ ವಿದ್ಯಾರ್ಥಿ

ಈ ಹಿನ್ನೆಲೆಯಲ್ಲಿ ಪೊಲೀಸರು ಸುಪ್ರೀತ್ ಕಡೆಯಿಂದ ವಿಡಿಯೋ ಮತ್ತು ಲಿಖಿತ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ. ಭವಿಷ್ಯದಲ್ಲಿ ಯಾರಾದರೂ ಪ್ರಶ್ನಿಸಿದರೆ ಉತ್ತರಿಸಲು ಈ ದಾಖಲೆಯನ್ನು ಸಂಗ್ರಹಿಸಲಾಗಿದೆ.

ಇಡೀ ಘಟನೆ ಮರುಸೃಷ್ಟಿ

ಇನ್ನು ನಂದಿಗಿರಿಧಾಮ ಪೊಲೀಸರು ಪರೀಕ್ಷಾರ್ಥಿ ಸುಪ್ರೀತ್​​ನನ್ನು ನಾಗಾರ್ಜುನ ಪಿ.ಯು. ಕಾಲೇಜ್​​ಗೆ ಕರೆಸಿ ಇಡೀ ಘಟನೆಯನ್ನು ಮರುಸೃಷ್ಟಿ ಮಾಡಿದ್ದಾರೆ. ಹೇಗೆ ಬಂದೆ, ಎಲ್ಲಿಗೆ ಬಂದೆ, ಯಾರು ಇದ್ದರು, ಹೇಗೆ ಜನಿವಾರ ತೆಗೆದೆ, ಯಾರು ಕತ್ತರಿಸಿದರು, ಹೇಗೆ ಮರದ ಮೇಲೆ ಹಾಕಿದೆ ಎಂದು ಮರು ಸೃಷ್ಟಿ ಮಾಡಿದ್ದಾರೆ.

ಸೂಕ್ತ ಕ್ರಮಕೈಗೊಳ್ಳುವಂತೆ ಪೊಲೀಸರಿಗೆ ಸೂಚಿಸಿದ್ದೇನೆ: ಸಚಿವ ಡಾ.ಎಂ.ಸಿ.ಸುಧಾಕರ್

ಇನ್ನು ಈ ವಿಚಾರವಾಗಿ ಸಚಿವ ಡಾ.ಎಂ.ಸಿ.ಸುಧಾಕರ್ ಬೇಸರ ವ್ಯಕ್ತಪಡಿಸಿದ್ದಾರೆ. ಜನಿವಾರದಲ್ಲಿ ಏನು ಇರುತ್ತೆ, ಸಿಬ್ಬಂದಿ ಯಾಕೆ ಅದನ್ನು ತೆಗೆಸಬೇಕಿತ್ತು. ಇದೇ ಕಾರಣಕ್ಕೆ ಸಮವಸ್ತ್ರ ಸಂಹಿತಾಧಿಕಾರಿ ನೇಮಕ ಮಾಡಲಾಗಿತ್ತು. ಮನಸ್ಥಿತಿ ಸರಿಯಿಲ್ಲದಿರುವವರು ಈ ರೀತಿ ಮಾಡಿರುವ ಸಾಧ್ಯತೆಯಿದೆ. ತನಿಖೆ ನಡೆಸಿ ಸೂಕ್ತ ಕ್ರಮಕೈಗೊಳ್ಳುವಂತೆ ಪೊಲೀಸರಿಗೆ ಸೂಚಿಸಿದ್ದೇನೆ. ಆದರೆ ಪರೀಕ್ಷಾರ್ಥಿ ಪೊಲೀಸರಿಗೆ ದೂರು ನೀಡಿಲ್ಲವೆನ್ನುವ ಮಾಹಿತಿಯಿದೆ ಎಂದು ಹೇಳಿದ್ದಾರೆ.

ಘಟನೆ ಹಿನ್ನೆಲೆ

ಚಿಕ್ಕಬಳ್ಳಾಪುರ ಚಿಂತಾಮಣಿ ನಿವಾಸಿ ಸುಪ್ರೀತ್​ ಮೊನ್ನೆ ಪ್ರತಿಷ್ಠಿತ ನಾಗಾರ್ಜುನ ಪಿ.ಯು ಕಾಲೇಜಿನಲ್ಲಿ ಸಿಇಟಿ ಪರೀಕ್ಷೆ ಬರೆಯಲು ಪರೀಕ್ಷಾ ಕೇಂದ್ರ ಹೋಗಿದ್ದ. ಆ ವೇಳೆ ಕಾಲೇಜಿನ ಸಿಬ್ಬಂದಿ, ಪರಿಶೀಲನೆ ವೇಳೆ ವಿದ್ಯಾರ್ಥಿ ಧರಿಸಿದ್ದ ಜನಿವಾರ ಕತ್ತರಿಸಿ ಕಸದ ಬುಟ್ಟಿಗೆ ಎಸೆದಿದ್ದಾರಂತೆ. ಹೀಗಂತ ವಿದ್ಯಾರ್ಥಿಯೇ ಆರೋಪ ಮಾಡಿದ್ದ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ  ಕ್ಲಿಕ್ ಮಾಡಿ.

Source link

ಉಲ್ಟಾ ಹೊಡೆದ ಚೇತನ್ ಅಹಿಂಸ ವಿರುದ್ಧ ಸಾರಾ ಗೋವಿಂದು ವಾಗ್ದಾಳಿ – Kannada News | Sa Ra Govindu lashes out on Chetan Ahimsa for his duel personality

ನಟ ಚೇತನ್ ಅಹಿಂಸ, ಡಾ ರಾಜ್​ಕುಮಾರ್ (Dr Rajkumar) ಅವರ ಸಮಾಧಿ ಕುರಿತು ಮಾಡಿದ್ದ ಟೀಕೆಗೆ ಭಾರಿ ಆಕ್ರೋಶ ಎದುರಾಗಿತ್ತು. ನಿನ್ನೆ ಹಲವು ಕನ್ನಡಪರ ಸಂಘಟನೆಗಳು ಚೇತನ್ ಮನೆಗೆ ಮುತ್ತಿಗೆ ಹಾಕಿದ್ದವು. ಈ ವೇಳೆ ನಟ ಚೇತನ್ ಅಹಿಂಸ ಅವರು, ಕರವೇ ಅಧ್ಯಕ್ಷ ಶಿವರಾಮೇಗೌಡ ಎದುರು ಬಹಿರಂಗವಾಗಿ ಕ್ಷಮೆ ಕೇಳಿದ್ದರು. ಆದರೆ ಇಂದು (ಏಪ್ರಿಲ್ 26) ಮತ್ತೆ ತಮ್ಮ ಮಾತಿಗೆ ಉಲ್ಟಾ ಹೊಡೆದಿದ್ದು, ರಾಜ್​ಕುಮಾರ್ ಸಮಾಧಿ ಕುರಿತು ತಾವು ಆಡಿರುವ ಮಾತಿಗೆ ಬದ್ಧ ಎಂದಿದ್ದಾರೆ. ಅಲ್ಲದೆ, ನಿನ್ನೆ ತಮ್ಮಿಂದ ಒತ್ತಾಯಪೂರ್ವಕ ಕ್ಷಮಾಪಣೆ ಕೇಳಿಸಲಾಗಿದೆ’ ಎಂದಿದ್ದಾರೆ. ಚೇತನ್ ಅವರ ಈ ಇಬ್ಬಂದಿತನವನ್ನು ಕಟು ಪದಗಳಲ್ಲಿ ಸಾರಾ ಗೋವಿಂದು ಟೀಕೆ ಮಾಡಿದ್ದಾರೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Exit mobile version