ಚೆಂಡು ವಿಕೆಟ್ಗೆ ತಾಗದಿದ್ದರೂ ಔಟ್ ನೀಡಿದ್ದೇಕೆ? ಇಲ್ಲಿದೆ ಐಪಿಎಲ್ ನಿಯಮ – Kannada News | IPL 2026: Angkrish Raghuvanshi Run out explained
ಐಪಿಎಲ್ 2026ರ ಕೊಲ್ಕತ್ತಾ ನೈಟ್ ರೈಡರ್ಸ್ (KKR) ಮತ್ತು ಲಕ್ನೋ ಸೂಪರ್ ಜೈಂಟ್ಸ್ (LSG) ನಡುವಿನ ಪಂದ್ಯವು ಒಂದು ಅಪರೂಪದ ಮತ್ತು ವಿವಾದಾತ್ಮಕ ರನೌಟ್ಗೆ ಸಾಕ್ಷಿಯಾಯಿತು. ಕೆಕೆಆರ್ ತಂಡದ ಯುವ ಬ್ಯಾಟರ್ ಅಂಗ್ಕ್ರಿಶ್ ರಘುವಂಶಿ ಅವರು ‘ಅಬ್‌ಸ್ಟ್ರಕ್ಟಿಂಗ್ ದ ಫೀಲ್ಡ್’ (ಫೀಲ್ಡಿಂಗ್‌ಗೆ ಅಡ್ಡಿಪಡಿಸುವುದು) ನಿಯಮದಡಿ ಔಟ್ ಆಗುವ ಮೂಲಕ ಕ್ರಿಕೆಟ್ ಅಭಿಮಾನಿಗಳಲ್ಲಿ ಭಾರಿ ಚರ್ಚೆ ಹುಟ್ಟುಹಾಕಿದ್ದಾರೆ. ಪಂದ್ಯದ 5ನೇ ಓವರ್‌ನಲ್ಲಿ ಪ್ರಿನ್ಸ್ ಯಾದವ್ ಎಸೆದ ಚೆಂಡನ್ನು ಬಾರಿಸಿದ ರಘುವಂಶಿ, ಒಂದು ರನ್ ಪಡೆಯಲು ಓಡಿದರು. ಆದರೆ ಅತ್ತ…