RCB ವಿರುದ್ಧದ ಪಂದ್ಯಕ್ಕೆ ಇಬ್ಬರು ಸ್ಟಾರ್ ಆಟಗಾರರು ಡೌಟ್..!

Source link

ವಿಜಯ್ ಸರ್ಕಾರ ರಚಿಸಲಿ, ಜನಾದೇಶಕ್ಕೆ ಗೌರವ ಕೊಡೋಣ, ರಾಜಕೀಯ ಮುತ್ಸದ್ದಿತನ ಮೆರೆದ ಎಂ.ಕೆ. ಸ್ಟಾಲಿನ್ – Kannada News | Stalin Backs Actor Vijay: TVK Forms Tamil Nadu Government, Averts Crisis

ಚೆನ್ನೈ, ಮೇ 07: ತಮಿಳುನಾಡು ರಾಜಕೀಯದ ದೈತ್ಯ ಶಕ್ತಿ ಎಂ.ಕೆ. ಸ್ಟಾಲಿನ್(MK Stalin) ಅವರು ತೆಗೆದುಕೊಂಡಿರುವ ಒಂದು ದಿಟ್ಟ ನಿರ್ಧಾರ, ರಾಜ್ಯದಲ್ಲಿ ಎದುರಾಗಿದ್ದ ಸಾಂವಿಧಾನಿಕ ಬಿಕ್ಕಟ್ಟನ್ನು ಕ್ಷಣಾರ್ಧದಲ್ಲಿ ತಿಳಿಗೊಳಿಸಿದೆ. ಬಹುಮತದ ಕೊರತೆಯಿಂದ ಸರ್ಕಾರ ರಚಿಸಲು ಪರದಾಡುತ್ತಿದ್ದ ನಟ ವಿಜಯ್ ಅವರ ‘ತಮಿಳುಗ ವೆಟ್ರಿ ಕಳಗಂ’ (TVK) ಗೆ ಸ್ಟಾಲಿನ್ ಅಭಯ ನೀಡಿದ್ದು, ವಿಜಯ್ ಸರ್ಕಾರ ರಚಿಸಲಿ ಎಂದು ಹೇಳುವ ಮೂಲಕ ಎಲ್ಲರನ್ನೂ ಆಶ್ಚರ್ಯಚಕಿತಗೊಳಿಸಿದ್ದಾರೆ.

ಬಹುಮತಕ್ಕೆ 11 ಸ್ಥಾನಗಳ ಕೊರತೆಯಿದ್ದರೂ, ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದ ಟಿವಿಕೆಗೆ ಡಿಎಂಕೆ ಮುಖ್ಯಸ್ಥ ಸ್ಟಾಲಿನ್ ಬೆಂಬಲ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಯಾವುದೇ ಸಾಂವಿಧಾನಿಕ ಬಿಕ್ಕಟ್ಟು ಉಂಟಾಗುವುದು ನಮಗೆ ಇಷ್ಟವಿಲ್ಲ. ಜನರ ತೀರ್ಪನ್ನು ಗೌರವಿಸಿ ವಿಜಯ್ ಅವರು ಸರ್ಕಾರ ರಚಿಸಲಿ ಎಂದು ಸ್ಪಷ್ಟಪಡಿಸಿದರು.

ಬುಧವಾರ ರಾತ್ರಿಯವರೆಗೆ ಡಿಎಂಕೆ ಮತ್ತು ಎಐಎಡಿಎಂಕೆ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಬಹುದು ಎಂಬ ಲೆಕ್ಕಾಚಾರಗಳಿದ್ದವು. ಆದರೆ ಸ್ಟಾಲಿನ್ ಅವರ ಈ ನಡೆಯು ಆ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿದೆ.

ಮತ್ತಷ್ಟು ಓದಿ: ರಾಹುಲ್​​ ಮಾತು ಕೇಳದೆ ತಮಿಳುನಾಡಲ್ಲಿ ಕೆಟ್ಟಿತಾ ಕಾಂಗ್ರೆಸ್​​? ಅಸಲಿಗೆ ಆಗಿದ್ದೇನು?

ವಿಜಯ್ ಸರ್ಕಾರಕ್ಕೆ ಸ್ಟಾಲಿನ್ ಕಿವಿಮಾತು
ಅಧಿಕಾರ ಬಿಟ್ಟುಕೊಡಲು ಸಮ್ಮತಿಸಿರುವ ಸ್ಟಾಲಿನ್, ತಮ್ಮ ಆಡಳಿತ ಅವಧಿಯಲ್ಲಿ ಜಾರಿಗೆ ತಂದಿದ್ದ ಜನಪ್ರಿಯ ಯೋಜನೆಗಳನ್ನು ಹೊಸ ಸರ್ಕಾರವು ಮುಂದುವರಿಸಬೇಕೆಂದು ಆಶಿಸಿದ್ದಾರೆ: ಶಾಲಾ ಮಕ್ಕಳ ಹಸಿವು ನೀಗಿಸುವ ಈ ಯೋಜನೆ ನಿಲ್ಲಬಾರದು, ಮಹಿಳೆಯರಿಗೆ ನೀಡಲಾಗುತ್ತಿರುವ 1,000 ರೂ. ಮಾಸಿಕ ಆರ್ಥಿಕ ನೆರವಿನ ಯೋಜನೆಯನ್ನು ಉಳಿಸಿಕೊಳ್ಳಬೇಕು.

ವಿಜಯ್ ಅವರು ತಮ್ಮ ಪ್ರಣಾಳಿಕೆಯಲ್ಲಿ ಮಹಿಳೆಯರಿಗೆ 2,500 ರೂ. ನೀಡುವುದಾಗಿ ಭರವಸೆ ನೀಡಿರುವ ಕುರಿತು ಪ್ರತಿಕ್ರಿಯಿಸಿದ ಸ್ಟಾಲಿನ್, ಇಷ್ಟು ದೊಡ್ಡ ಮೊತ್ತವನ್ನು ನೀಡುವುದು ಆರ್ಥಿಕವಾಗಿ ಸವಾಲಿನ ಕೆಲಸ. ಆದರೆ ಕನಿಷ್ಠ ಈಗಿರುವ 1,000 ರೂ. ಯೋಜನೆಯನ್ನಾದರೂ ಹೊಸ ಸರ್ಕಾರ ಮುಂದುವರಿಸಲಿ ಎಂದು ಸಲಹೆ ನೀಡಿದರು.

ಸ್ಟಾಲಿನ್ ಅವರ ಈ ಬಹಿರಂಗ ಬೆಂಬಲದ ನಂತರ, ರಾಜ್ಯಪಾಲ ರಾಜೇಂದ್ರ ಅರ್ಲೇಕರ್ ಅವರಿಗೆ ವಿಜಯ್ ಅವರ ಸಂಖ್ಯಾಬಲದ ಬಗ್ಗೆ ಇದ್ದ ಆತಂಕ ದೂರವಾದಂತಾಗಿದೆ. ಡಿಎಂಕೆ ಬೆಂಬಲ ಸೂಚಿಸಿರುವುದರಿಂದ, ವಿಜಯ್ ಅವರು ಶೀಘ್ರದಲ್ಲೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲು ರಾಜಭವನದಿಂದ ಅಧಿಕೃತ ಆಮಂತ್ರಣ ಬರುವ ಸಾಧ್ಯತೆ ದಟ್ಟವಾಗಿದೆ.

ತಮಿಳುನಾಡಿನ ಇತಿಹಾಸದಲ್ಲಿ ಬದ್ಧ ರಾಜಕೀಯ ವೈರಿಗಳ ನಡುವೆ ಇಂತಹದೊಂದು ‘ಸಾಂವಿಧಾನಿಕ ಸೌಹಾರ್ದತೆ’ ಕಂಡುಬಂದಿರುವುದು ರಾಜಕೀಯ ಮುತ್ಸದ್ದಿತನಕ್ಕೆ ಸಾಕ್ಷಿಯಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Video: ಪಾಕಿಸ್ತಾನಿ ಭಯೋತ್ಪಾದಕರ ವಿರುದ್ಧದ ಆಪರೇಷನ್ ಸಿಂಧೂರ್​ಗೆ ಒಂದು ವರ್ಷ: ವೀಡಿಯೊ ಹಂಚಿಕೊಂಡ ಭಾರತೀಯ ಸೇನೆ – Kannada News | Indian Armed Forces Marks Anniversary of Operation Sindoor With New Video Release

ನವದೆಹಲಿ, ಮೇ 07: ಭಾರತೀಯ ಸೇನೆಯ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆಯಲ್ಪಟ್ಟ ಕ್ಷಣವೊಂದಕ್ಕೆ ಇಂದು ಒಂದು ವರ್ಷ ಸಂದಿದೆ. ಪಾಕಿಸ್ತಾನದ ರಾವಲ್ಪಿಂಡಿಯಲ್ಲಿ ಅಡಗಿದ್ದ ಉಗ್ರರು ಮತ್ತು ಅವರಿಗೆ ಬೆಂಬಲ ನೀಡುತ್ತಿದ್ದ ಶಕ್ತಿಗಳ ವಿರುದ್ಧ ನಡೆದಿದ್ದ ‘ಆಪರೇಷನ್ ಸಿಂಧೂರ್’ ಯಶಸ್ವಿಯಾಗಿ ಒಂದು ವರ್ಷ ಪೂರೈಸಿದ್ದು, ಈ ಹಿನ್ನೆಲೆಯಲ್ಲಿ ಭಾರತೀಯ ಸೇನೆಯು ಅಂದಿನ ಭೀಕರ ಕಾರ್ಯಾಚರಣೆಯ ವಿಶೇಷ ವೀಡಿಯೊವನ್ನು ಬಿಡುಗಡೆ ಮಾಡಿದೆ.

ಸರಿಯಾಗಿ ಒಂದು ವರ್ಷದ ಹಿಂದೆ, ಭಾರತದ ಭದ್ರತೆಗೆ ಸವಾಲಾಗಿದ್ದ ಭಯೋತ್ಪಾದಕ ತಾಣಗಳನ್ನು ಗುರಿಯಾಗಿಸಿಕೊಂಡು ಭಾರತೀಯ ಸೇನೆಯು ರಾವಲ್ಪಿಂಡಿಯ ಆಯಕಟ್ಟಿನ ಪ್ರದೇಶಗಳಲ್ಲಿ ಮಿಂಚಿನ ಕಾರ್ಯಾಚರಣೆ ನಡೆಸಿತ್ತು. ಅತ್ಯಂತ ರಹಸ್ಯವಾಗಿ ರೂಪಿಸಲಾಗಿದ್ದ ಈ ಪ್ಲಾನ್ ಮುಖಾಂತರ ಗಡಿಯಾಚೆಗಿನ ಉಗ್ರರ ನೆಲೆಗಳನ್ನು ಧ್ವಂಸಗೊಳಿಸಲಾಗಿತ್ತು. ಶತ್ರುಪಡೆಗಳು ಚೇತರಿಸಿಕೊಳ್ಳುವ ಮುನ್ನವೇ ಭಾರತೀಯ ವೀರರು ಕಾರ್ಯಾಚರಣೆ ಮುಗಿಸಿ ಹಿಂದಿರುಗಿದ್ದರು.

ಈ ವೀಡಿಯೊ ಬಿಡುಗಡೆ ಮಾಡುವುದರ ಹಿಂದೆ ಭಾರತೀಯ ಸೇನೆಯು ಸ್ಪಷ್ಟ ಸಂದೇಶವನ್ನು ನೀಡಿದೆ. ಭಾರತದ ಮೇಲೆ ಕಣ್ಣು ಹಾಕುವ ಅಥವಾ ಭಯೋತ್ಪಾದನೆಗೆ ನೀರೆರೆಯುವ ಶಕ್ತಿಗಳು ಜಗತ್ತಿನ ಯಾವುದೇ ಮೂಲೆಯಲ್ಲಿ ಅಡಗಿದ್ದರೂ ಸರಿ, ಭಾರತೀಯ ಸೇನೆ ಅವರನ್ನು ಹುಡುಕಿ ಶಿಕ್ಷಿಸುತ್ತದೆ ಎಂಬುದು ಈ ವೀಡಿಯೊದ ಸಾರಾಂಶವಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಈ ವೀಡಿಯೊ ಸದ್ದು ಮಾಡುತ್ತಿದ್ದು, ಭಾರತೀಯ ಸೈನಿಕರ ಧೈರ್ಯ ಮತ್ತು ಶೌರ್ಯಕ್ಕೆ ನೆಟ್ಟಿಗರು ಸಲಾಂ ಎನ್ನುತ್ತಿದ್ದಾರೆ. ದೇಶದ ಗಡಿ ಸುರಕ್ಷಿತ ಕೈಗಳಲ್ಲಿದೆ ಎಂಬುದಕ್ಕೆ ಆಪರೇಷನ್ ಸಿಂಧೂರ್ ಸಾಕ್ಷಿ ಎಂದು ರಕ್ಷಣಾ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಈ ಕಾರ್ಯಾಚರಣೆಯು ಭಾರತದ ಸೇನಾ ಶಕ್ತಿಯನ್ನು ಜಾಗತಿಕ ಮಟ್ಟದಲ್ಲಿ ಸಾಬೀತುಪಡಿಸಿದ್ದು ಮಾತ್ರವಲ್ಲದೆ, ನೆರೆಯ ರಾಷ್ಟ್ರಕ್ಕೆ ಭಯೋತ್ಪಾದನೆಯನ್ನು ಸಹಿಸುವುದಿಲ್ಲ ಎಂಬ ಕಠಿಣ ಎಚ್ಚರಿಕೆಯನ್ನೂ ನೀಡಿದೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಮಾವು, ಹಲಸು ಪ್ರಿಯರಿಗೆ ಈ ಬಾರಿ ಹಬ್ಬ! ಲಾಲ್​ಬಾಗ್, ಕಬ್ಬನ್ ಪಾರ್ಕ್​ನಲ್ಲಿ ‘ಮಾವು ಮತ್ತು ಹಲಸಿನ ಮೇಳ’ – Kannada News | Double Mango Treat: Cubbon Park to Host Mango Mela from May 8

ಬೆಂಗಳೂರು, ಮೇ 07: ಬೆಂಗಳೂರಿನ ಮಾವು (Mango) ಮತ್ತು ಹಲಸಿನ ಹಣ್ಣಿನ ಪ್ರಿಯರಿಗೆ ಈ ಬಾರಿ ಸಿಹಿ ಸುದ್ದಿ ಸಿಕ್ಕಿದೆ. ಇದೇ ಮೊದಲ ಬಾರಿಗೆ ನಗರದ ಎರಡು ಪ್ರಮುಖ ಉದ್ಯಾನವನಗಳಾದ ಕಬ್ಬನ್ ಪಾರ್ಕ್ ಮತ್ತು ಲಾಲ್‌ಬಾಗ್‌ನಲ್ಲಿ ‘ಮಾವು ಮತ್ತು ಹಲಸಿನ ಮೇಳ’ ಆಯೋಜಿಸಲು ತೋಟಗಾರಿಕೆ ಇಲಾಖೆ ನಿರ್ಧರಿಸಿದೆ. ಮೊದಲಿಗೆ ಕಬ್ಬನ್ ಪಾರ್ಕ್​ನಲ್ಲಿ ಮೇಳ ಶುರುವಾಗಲಿದ್ದು, ಮೇ 20ರ ನಂತರ ಲಾಲ್​ ಬಾಗ್​ನಲ್ಲೂ ಮೇಳ ಜರುಗಲಿದೆ. ಹೊರರಾಜ್ಯದ ಗುಣಮಟ್ಟವಿಲ್ಲದ ಮಾವಿನ ಹಣ್ಣನ್ನು ಖರೀಸುವ ಬದಲು, ನಮ್ಮ ರಾಜ್ಯದ ರೈತರನ್ನು ಪ್ರೋತ್ಸಾಹಿಸುವ ಸಲುವಾಗಿ ಈ ಮೇಳವನ್ನು ಆಯೋಜಿಸಲಾಗಿದೆ.

ಮುಖ್ಯಾಂಶಗಳು

  • ಕಬ್ಬನ್​ ಪಾರ್ಕ್​ ಮತ್ತು ಲಾಲ್ ಬಾಗ್​ನಲ್ಲಿ ಮಾವು ಮತ್ತು ಹಲಸಿನ ಮೇಳ
  • ಮೇ 8 ರಿಂದ ಮೇಳ ಆರಂಭ
  • ನಮ್ಮ ರಾಜ್ಯದ ರೈತರನ್ನು ಪ್ರೋತ್ಸಾಹಿಸುವ ಉದ್ದೇಶ

ಕಬ್ಬನ್ ಪಾರ್ಕ್‌ನಲ್ಲಿ ಮೊದಲ ಮೇಳ

ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ಟಿ.ಆರ್. ವೇದಮೂರ್ತಿ ಅವರು ನೀಡಿರುವ ಮಾಹಿತಿಯಂತೆ, ಮೇ 8ರಿಂದ ಮೇ 18ರವರೆಗೆ ಕಬ್ಬನ್ ಪಾರ್ಕ್‌ನಲ್ಲಿ ಮೊದಲ ಹಂತದ ಮೇಳ ನಡೆಯಲಿದೆ. ಈ ಮೇಳವು ಮುಖ್ಯವಾಗಿ ಧಾರವಾಡ, ಮಂಡ್ಯ, ಮೈಸೂರು, ದಕ್ಷಿಣ ಬೆಂಗಳೂರು ಮತ್ತು ದಕ್ಷಿಣ ಕರ್ನಾಟಕದ ರೈತರಿಗೆ ಅನುಕೂಲವಾಗಲಿದೆ. ಸುಮಾರು 70 ಸ್ಟಾಲ್‌ಗಳನ್ನು ಇಲ್ಲಿ ಹಾಕಲಾಗುತ್ತಿದ್ದು, ಗ್ರಾಹಕರು ನೇರವಾಗಿ ರೈತರಿಂದಲೇ ಕೆಮಿಕಲ್ ಮುಕ್ತ ಹಣ್ಣುಗಳನ್ನು ಖರೀದಿಸಬಹುದಾಗಿದೆ.

ಮತ್ತೊಂದು ಸುತ್ತಿನ ಮೇಳವು ಇದೇ ಕಬ್ಬನ್ ಪಾರ್ಕ್‌ನಲ್ಲಿ ಮೇ ತಿಂಗಳ ಅಂತ್ಯದಲ್ಲಿ ನಡೆಯಲಿದ್ದು, ಅಲ್ಲಿ 100ಕ್ಕೂ ಹೆಚ್ಚು ಮಳಿಗೆಗಳನ್ನು ಸ್ಥಾಪಿಸಲು ಯೋಜಿಸಲಾಗಿದೆ. ಇದರ ದಿನಾಂಕಗಳನ್ನು ಶೀಘ್ರದಲ್ಲೇ ಅಂತಿಮಗೊಳಿಸಲಾಗುವುದು ಎಂದು ಇಲಾಖೆ ತಿಳಿಸಿದೆ.

ಇಳುವರಿ ಕುಸಿತದ ಆತಂಕ

ಈ ಬಾರಿ ರಾಜ್ಯದಲ್ಲಿ ಮಾವಿನ ಇಳುವರಿ ಗಣನೀಯವಾಗಿ ಕುಸಿದಿದೆ. ಕಳೆದ ವರ್ಷ ಸುಮಾರು 15 ಲಕ್ಷ ಟನ್ ಇಳುವರಿ ಬಂದಿದ್ದರೆ, ಈ ಬಾರಿ ಕೇವಲ 10 ಲಕ್ಷ ಟನ್ ಇಳುವರು ಬರಬಹುದೆಂದು ಅಂದಾಜಿಸಲಾಗಿದೆ. ಅತೀವ ಶಾಖ ಮತ್ತು ವಾತಾವರಣದಲ್ಲಿನ ಕಡಿಮೆ ತೇವಾಂಶದ ಕಾರಣದಿಂದ ಹಣ್ಣುಗಳು ಗಿಡದಿಂದ ಉದುರಿರುವುದು ಇಳುವರಿ ಕುಂಠಿತಗೊಳ್ಳಲು ಪ್ರಮುಖ ಕಾರಣವಾಗಿದೆ. ಜೊತೆಗೆ ರಫ್ತು ಪ್ರಮಾಣದಲ್ಲೂ ಭಾರಿ ಇಳಿಕೆಯಾಗಿದೆ. ಕಳೆದ ವರ್ಷ 1,000 ಟನ್ ಮಾವು ರಫ್ತು ಮಾಡಲಾಗಿತ್ತು. ಆದರೆ ಈ ವರ್ಷ ಈವರೆಗೆ ಕೇವಲ 50 ರಿಂದ 100 ಟನ್ ಮಾತ್ರ ರಫ್ತು ಮಾಡಲು ಸಾಧ್ಯವಾಗಿದೆ ಎಂದು ವೇದಮೂರ್ತಿ ತಿಳಿಸಿದ್ದಾರೆ.

ಇದನ್ನೂ ಓದಿ ಮಾವು ಬೇಕೇ ಮಾವು! ಒಂದೇ ಸೂರಿನಡಿ ಬಗೆಬಗೆಯ ಮಾವಿನ ಹಣ್ಣುಗಳ ಮಾರಾಟ ಹೇಗಿದೆ ನೋಡಿ

ರೈತರಿಗೆ ಮಾರುಕಟ್ಟೆ ವ್ಯವಸ್ಥೆ

ಸದ್ಯ ಮಾರುಕಟ್ಟೆಯಲ್ಲಿ ಸಿಗುತ್ತಿರುವ ಮಾವಿನ ಹಣ್ಣುಗಳು ಹೊರ ರಾಜ್ಯಗಳಿಂದ ಬರುತ್ತಿರುವುದರಿಂದ ಅವುಗಳ ಗುಣಮಟ್ಟ ಕಡಿಮೆ ಇದೆ ಮತ್ತು ಬೆಲೆ ಹೆಚ್ಚಿದೆ. ಕೋಲಾರ ಮತ್ತು ರಾಮನಗರದ ಮಾವುಗಳು ಕ್ರಮವಾಗಿ ಮೇ 8 ಮತ್ತು ಮೇ 27ರ ವೇಳೆಗೆ ಮಾರುಕಟ್ಟೆಗೆ ಬರಲಿವೆ. ರೈತರು ತಾವು ಬೆಳೆದ ಬೆಳೆಗಳಿಗೆ ಉತ್ತಮ ಬೆಲೆ ಸಿಗುತ್ತಿಲ್ಲ ಎಂದು ಆತಂಕ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ, ಈ ಮೇಳದ ಮೂಲಕ ಅವರಿಗೆ ನೇರ ಮಾರುಕಟ್ಟೆ ಒದಗಿಸಲಾಗುತ್ತಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಸೆಟ್​​ನಲ್ಲಿ ಮೋನಿಷಾನ ಮಗಳು ಅಂತ ನಾನು ಯಾವಾಗಲೂ ನೋಡಿಲ್ಲ’; ದುನಿಯಾ ವಿಜಯ್ – Kannada News | Duniya Vijay on Directing Daughter Monisha in City Lights: Never Treated Her as a Daughter on Set

‘ಸಲಗ’ ಮತ್ತು ‘ಭೀಮ’ ಸಿನಿಮಾಗಳ ನಿರ್ದೇಶನ ಮಾಡಿದವರು ದುನಿಯಾ ವಿಜಯ್. ಅವರು ಮೂರನೇ ಬಾರಿಗೆ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾದ ಹೆಸರು ‘ಸಿಟಿ ಲೈಟ್ಸ್’. ಈ ಚಿತ್ರದಲ್ಲಿ ವಿನಯ್ ರಾಜ್​ಕುಮಾರ್ ನಾಯಕನಾದರೆ, ದುನಿಯಾ ವಿಜಿ ಅವರ ಮಗಳು ಮೋನಿಷಾ ನಾಯಕಿ. ಅವರು ಸಿನಿಮಾ ಬಗ್ಗೆ ಮಾಹಿತಿ ನೀಡಿದ್ದಾರೆ. ‘ನಾನು ಸೆಟ್​​ನಲ್ಲಿ ಮೋನಿಷಾಳ ಮಗಳು ಅಂತ ನೋಡಿಲ್ಲ’ ಎಂದಿದ್ದಾರೆ. ಅವರು ಓರ್ವ ನಿರ್ದೇಶಕನಾಗಿ ಮೋನಿಷಾನ ನೋಡುತ್ತಿದ್ದರಂತೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಸುವೇಂದು ಅಧಿಕಾರಿಯೇ ದುಷ್ಕರ್ಮಿಗಳ ಗುರಿ? ಹೆಚ್ಚಾಯ್ತು ಅನುಮಾನ – Kannada News | Was Suvendu Adhikari the Real Target? Suspicion Deepens After PA Chandranath’s Murder in West Bengal

ಕೋಲ್ಕತ್ತಾ, ಮೇ 7: ಪಶ್ಚಿಮ ಬಂಗಾಳದ ರಾಜಕೀಯ ಹಿಂಸಾಚಾರಕ್ಕೆ ಬಿಜೆಪಿ ಪ್ರಭಾವಿ ನಾಯಕ ಸುವೆಂದು ಅಧಿಕಾರಿ ಆಪ್ತ ಚಂದ್ರನಾಥ್ ರಥ್ ಹತ್ಯೆಯಾಗಿದ್ದಾರೆ. ಅವರನ್ನು ಬುಧವಾರ ರಾತ್ರಿ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಆದರೆ, ಅಸಲಿಗೆ ದುಷ್ಕರ್ಮಿಗಳ ಗುರಿ ಸುವೇಂದು ಅಧಿಕಾರಿಯೇ ಆಗಿದ್ದರೇ ಎಂಬ ಅನುಮಾನ ಇದೀಗ ಬಲವಾಗಿದೆ. ಅಲ್ಲದೆ, ಈ ಘಟನೆಯು ಪಶ್ಚಿಮ ಬಂಗಾಳದ ಕಾನೂನು ಸುವ್ಯವಸ್ಥೆಯ ಬಗ್ಗೆ ಮತ್ತೊಮ್ಮೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಉತ್ತರ 24 ಪರಗಣ ಜಿಲ್ಲೆಯ ಮಧ್ಯಗ್ರಾಮದಲ್ಲಿ ಬುಧವಾರ ತಡರಾತ್ರಿ ಚಂದ್ರನಾಥ್ ಕಾರಿನಲ್ಲಿ ಮನೆಗೆ ವಾಪಸ್ ಹೋಗುತ್ತಿದ್ದಾಗ, ಎಂಟು ಮಂದಿ ದುಷ್ಕರ್ಮಿಗಳು ಬೈಕ್‌ನಲ್ಲಿ ಹಿಂಬಾಲಿಸಿಕೊಂಡು ಬಂದಿದ್ದಾರೆ. ಏರ್ಪೋರ್ಟ್ ಬಳಿ ಕಾರನ್ನು ಅಡ್ಡಗಟ್ಟಿದ ಹಂತಕರು, ಚಂದ್ರನಾಥ್ ಅವರ ಎದೆ ಮತ್ತು ಹೊಟ್ಟೆಯ ಭಾಗಕ್ಕೆ ಗುರಿ ಇಟ್ಟು ಮನಸೋ ಇಚ್ಛೆ ಗುಂಡು ಹಾರಿಸಿದ್ದಾರೆ. ಅತಿ ಹತ್ತಿರದಿಂದ ಗುಂಡು ತಗುಲಿದ ಪರಿಣಾಮ ಚಂದ್ರನಾಥ್ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಈ ಹತ್ಯೆಯು ಪೂರ್ವಯೋಜಿತವಾಗಿದ್ದು, ಇದಕ್ಕಾಗಿ ಆಸ್ಟ್ರಿಯಾ ಮೂಲದ ಪಿಸ್ತೂಲ್ ಬಳಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಸುವೆಂದು ಅಧಿಕಾರಿ ಅವರ ಪರವಾಗಿ ಭವಾನಿಪುರದಲ್ಲಿ ಸಕ್ರಿಯವಾಗಿ ಕೆಲಸ ಮಾಡಿದ್ದ ಚಂದ್ರನಾಥ್ ಅವರನ್ನೇ ಟಾರ್ಗೆಟ್ ಮಾಡಿ ಈ ಕೃತ್ಯ ಎಸಗಲಾಗಿದೆ ಎಂದು ಬಿಜೆಪಿ ಆರೋಪಿಸಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

16 ಕ್ಯಾಚ್​ಗಳು… ಪಂಜಾಬ್ ಕಿಂಗ್ಸ್‌ನ ಫೀಲ್ಡರ್​ಗಳಿಂದ ಕಂಗೆಟ್ಟ ಚಹಲ್! – Kannada News | Yuzvendra Chahal’s Nightmare: 16 Chances Created, 8 Catches Dropped!

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನ ಮೊದಲಾರ್ಧದಲ್ಲಿ ಸೋಲಿಲ್ಲದ ಸರದಾರನಾಗಿ ಮಿಂಚಿದ್ದ ಪಂಜಾಬ್ ಕಿಂಗ್ಸ್​ ತಂಡವು ದ್ವಿತೀಯಾರ್ಧದಲ್ಲಿ ಹ್ಯಾಟ್ರಿಕ್ ಸೋಲನುಭವಿಸಿದೆ. ಈ ಸೋಲುಗಳಿಗೆ ಮುಖ್ಯ ಕಾರಣ ಪಂಜಾಬ್ ಕಿಂಗ್ಸ್​ ಫೀಲ್ಡರ್​ಗಳ ಕಳಪೆ ಪ್ರದರ್ಶನ. ಏಕೆಂದರೆ ಸನ್​ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲೇ ಪಂಜಾಬ್ ಕಿಂಗ್ಸ್ ಫೀಲ್ಡರ್​ಗಳು 4 ಕ್ಯಾಚ್​ಗಳನ್ನು ಕೈಚೆಲ್ಲಿದ್ದಾರೆ. ಹೀಗೆ ಪಂಜಾಬ್ ಕಿಂಗ್ಸ್ ಫೀಲ್ಡರ್​ಗಳು ಕ್ಯಾಚ್ ಕೈಚೆಲ್ಲುತ್ತಿರುವುದು ಯುಜ್ವೇಂದ್ರ ಚಹಲ್ ಓವರ್​ನಲ್ಲಿ ಎಂಬುದು ಇಲ್ಲಿ ವಿಶೇಷ.

ಚಹಲ್​ನ ದುರಾದೃಷ್ಟ:

ಈ ಬಾರಿಯ ಸೀಸನ್‌ನಲ್ಲಿ ಯುಜ್ವೇಂದ್ರ ಚಹಲ್ ಇದುವರೆಗೆ ಒಟ್ಟು 16 ಕ್ಯಾಚಿಂಗ್ ಅವಕಾಶಗಳನ್ನು ಸೃಷ್ಟಿಸಿದ್ದಾರೆ. ಆದರೆ ಅಚ್ಚರಿಯೆಂದರೆ, ಈ ಪೈಕಿ 8 ಕ್ಯಾಚ್‌ಗಳನ್ನು ಫೀಲ್ಡರ್‌ಗಳು ಕೈಬಿಟ್ಟಿದ್ದಾರೆ. ಅಂದರೆ ಇಲ್ಲಿ ಚಹಲ್​​ಗೆ 8 ವಿಕೆಟ್​ಗಳು ನಷ್ಟವಾಗಿವೆ. ಹೀಗೆ ಸಿಕ್ಕ ಅವಕಾಶವನ್ನು ಬಳಸಿಕೊಂಡ ಎದುರಾಳಿ ಬ್ಯಾಟರ್​ಗಳು ಪಂಜಾಬ್ ಕಿಂಗ್ಸ್ ಸೋಲಿಗೆ ಕಾರಣರಾಗಿದ್ದಾರೆ.

ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲೂ  ಯುಜ್ವೇಂದ್ರ ಚಹಲ್ ಅವರಿಗೆ ಬರಬೇಕಿದ್ದ ವಿಕೆಟ್‌ಗಳು ಕೈತಪ್ಪಿದವು. ಚಹಲ್ ಅವರ ಬೌಲಿಂಗ್‌ನಲ್ಲಿ ಪ್ರಮುಖವಾಗಿ ಈ ಕೆಳಗಿನ ಆಟಗಾರರು ಸುಲಭ ಕ್ಯಾಚ್ ಹಾಗೂ ಸ್ಟಂಪಿಂಗ್ ಕೈಬಿಟ್ಟಿದ್ದರು.

  • ಶಶಾಂಕ್ ಸಿಂಗ್: ಚಹಲ್ ಎಸೆದ 8.4ನೇ ಓವರ್‌ನಲ್ಲಿ ಹೆನ್ರಿಕ್ ಕ್ಲಾಸೆನ್ ನೀಡಿದ ಅತ್ಯಂತ ಸುಲಭವಾದ ಕ್ಯಾಚ್ ಅನ್ನು ‘ಡೀಪ್ ಬ್ಯಾಕ್‌ವರ್ಡ್ ಸ್ಕ್ವೇರ್ ಲೆಗ್’ನಲ್ಲಿ ಶಶಾಂಕ್ ಸಿಂಗ್ ಕೈಬಿಟ್ಟರು. ಈ ವೇಳೆ ಕೇವಲ 9 ರನ್ ಗಳಿಸಿದ್ದ ಕ್ಲಾಸೆನ್ ನಂತರ 69 ರನ್ ಬಾರಿಸಿ ಪಂದ್ಯದ ಗತಿಯನ್ನೇ ಬದಲಿಸಿದರು.
  • ಲಾಕಿ ಫರ್ಗುಸನ್: ಚಹಲ್ ಎಸೆದ 11ನೇ ಓವರ್‌ನಲ್ಲಿ ಇಶಾನ್ ಕಿಶನ್ ನೀಡಿದ ಕ್ಯಾಚ್ ಅನ್ನು ಫರ್ಗುಸನ್ ಕೈಚೆಲ್ಲಿದರು. ಈ ಜೀವದಾನವನ್ನು ಬಳಸಿಕೊಂಡ ಇಶಾನ್ ಕಿಶನ್ ಈ ಮ್ಯಾಚ್​ನಲ್ಲಿ 55 ರನ್​ ಚಚ್ಚಿದರು.
  • ಪ್ರಭ್‌ಸಿಮ್ರಾನ್ ಸಿಂಗ್: ಇದೇ ಪಂದ್ಯದಲ್ಲಿ ಚಹಲ್ ಎಸೆತವೊಂದರಲ್ಲಿ ಇಶಾನ್ ಕಿಶನ್ ಅವರನ್ನು ಸ್ಟಂಪಿಂಗ್ ಮಾಡುವ ಅವಕಾಶವನ್ನೂ ವಿಕೆಟ್ ಕೀಪರ್ ಪ್ರಭ್‌ಸಿಮ್ರಾನ್ ಸಿಂಗ್ ಕೈಚೆಲ್ಲಿ ಕೊಂಡರು.
  • ಕೂಪರ್ ಕೊನೊಲಿ: ಲಾಕಿ ಫರ್ಗುಸನ್ ಎಸೆತದಲ್ಲಿ ಇಶಾನ್ ಕಿಶನ್ ನೀಡಿದ ಮತ್ತೊಂದು ಕ್ಯಾಚ್​ ಅನ್ನು ಕೂಪರ್ ಕೊನೊಲಿ ಕೈಚೆಲ್ಲಿದ್ದರು.

ಹತಾಶೆಯ ಪರಾಕಾಷ್ಠೆ:

ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ವಿಕೆಟ್ ಪಡೆಯಲು ಯುಜ್ವೇಂದ್ರ ಚಹಲ್ ಹಲವು ಅವಕಾಶಗಳನ್ನು ಸೃಷ್ಟಿಸಿದರೂ ಪಂಜಾಬ್ ಕಿಂಗ್ಸ್​ ಫೀಲ್ಡರ್​ಗಳು ಈ ಅವಕಾಶಗಳನ್ನು ಕೈಚೆಲ್ಲಿದ್ದರು. ಇದರಿಂದ ಚಹಲ್ ಅವರ ಮುಖದಲ್ಲಿ ಹತಾತೆ ಎದ್ದು ಕಾಣುತ್ತಿತ್ತು.

ಇದನ್ನೂ ಓದಿ: Pat Cummins: ನಮ್ಮ ಎದುರಾಳಿಯಾಗಿದ್ದರೂ ಅಬ್ಬರಿಸಿದ್ದು ಆಸ್ಟ್ರೇಲಿಯಾದವ!

ಅಂದರೆ ಕಳೆದ 10 ಪಂದ್ಯಗಳಲ್ಲಿ ಯುಜ್ವೇಂದ್ರ ಚಹಲ್ 16 ಅವಕಾಶಗಳನ್ನು ಸೃಷ್ಟಿಸಿದರೂ ಪಂಜಾಬ್ ಕಿಂಗ್ಸ್ ಫೀಲ್ಡರ್​ಗಳು ಹಿಡಿದಿರುವುದು ಕೇವಲ 8 ಕ್ಯಾಚ್​ಗಳನ್ನು ಮಾತ್ರ. ಇನ್ನುಳಿದ 8 ಕ್ಯಾಚ್​ಗಳನ್ನು ಕೈಚೆಲ್ಲಿದ್ದಾರೆ. ಅಂದರೆ ಇಲ್ಲಿ ಚಹಲ್ ಸ್ಪಿನ್ ಮೋಡಿ ಮಾಡುತ್ತಿದ್ದರೂ ಫೀಲ್ಡರ್​ಗಳಿಂದ ಉತ್ತಮ ಬೆಂಬಲ ವ್ಯಕ್ತವಾಗುತ್ತಿಲ್ಲ.

ಯಾರು ‘ವಿಲನ್’!

ಈ ಸೀಸನ್‌ನಲ್ಲಿ ಯುಜ್ವೇಂದ್ರ ಚಹಲ್ ಬೌಲಿಂಗ್‌ನಲ್ಲಿ ಅತಿ ಹೆಚ್ಚು ಕ್ಯಾಚ್‌ಗಳನ್ನು ಕೈಬಿಟ್ಟಿರುವುದು ಶಶಾಂಕ್ ಸಿಂಗ್. ಅವರು ಈವರೆಗೆ ಒಟ್ಟು ನಾಲ್ಕು ಕ್ಯಾಚ್‌ಗಳನ್ನು ಕೈಚೆಲ್ಲುವ ಮೂಲಕ ಚಹಲ್ ಅವರ ವಿಕೆಟ್ ಸಂಖ್ಯೆ ಏರಿಕೆಯಾಗದಂತೆ ತಡೆದಿದ್ದಾರೆ.

ಇತ್ತ ಪಂಜಾಬ್ ಕಿಂಗ್ಸ್​ ಫೀಲ್ಡಿಂಗ್​ಗಳಿಂದ ಉತ್ತಮ ಬೆಂಬಲವಿಲ್ಲದಿದ್ದರೂ ಚಹಲ್ ವೈಯಕ್ತಿಕವಾಗಿ ಹೊಸ ಮೈಲಿಗಲ್ಲುಗಳನ್ನು ಸ್ಥಾಪಿಸಿದ್ದಾರೆ.  ಅಂದರೆ ಈ ಬಾರಿ ಪಡೆದ 8 ವಿಕೆಟ್​​ಗಳ ಮೂಲಕ ಭಾರತದಲ್ಲಿ 300 ಟಿ20 ವಿಕೆಟ್ ಪಡೆದ ಮೊದಲ ಬೌಲರ್ ಎನಿಸಿಕೊಂಡಿದ್ದಾರೆ.

ಹಾಗೆಯೇ ಐಪಿಎಲ್​ ಇತಿಹಾಸದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿರುವ ಯುಜ್ವೇಂದ್ರ ಚಹಲ್​ (229+ ವಿಕೆಟ್), ಫೀಲ್ಡರ್‌ಗಳ ಸಹಕಾರಯೊಂದಿಗೆ ಈ ಸಂಖ್ಯೆಯನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಬಹುದಿತ್ತು. ಆದರೆ ಕಳಪೆ ಫೀಲ್ಡಿಂಗ್ ಕಾರಣ 8 ವಿಕೆಟ್​ಗಳು ಕೈ ತಪ್ಪಿದೆ. ಈ ವಿಕೆಟ್​ಗಳ ಕೈ ತಪ್ಪುವಿಕೆಯೊಂದಿಗೆ ಪಂಜಾಬ್ ಕಿಂಗ್ಸ್​ ಸೋಲಿನತ್ತ ಮುಖ ಮಾಡುತ್ತಿರುವುದು ಮಾತ್ರ ವಿಪರ್ಯಾಸ.

Source link

ಯಾರೇ ಅಡ್ಡ ಬಂದರೂ ಮುಂದಕ್ಕೆ ಹೋಗಲ್ಲ ‘ಸ್ಪಿರಿಟ್’ ರಿಲೀಸ್ ದಿನಾಂಕ; ತಂಡದ ಗಟ್ಟಿ ನಿರ್ಧಾರ – Kannada News | Prabhas’ Spirit Movie Release Date Confirmed: Next year March 5 No Delay Rumors

ಟಾಲಿವುಡ್ ಸ್ಟಾರ್ ನಟ ಪ್ರಭಾಸ್ (Prabhas) ಮತ್ತು ‘ಅನಿಮಲ್’ ಖ್ಯಾತಿಯ ಸಂದೀಪ್ ರೆಡ್ಡಿ ವಂಗಾ ಕಾಂಬಿನೇಷನ್‌ನ ಬಹುನಿರೀಕ್ಷಿತ ಸಿನಿಮಾ ‘ಸ್ಪಿರಿಟ್’ ಸಿನಿಮಾದ ಶೂಟ್ ಭರದಿಂದ ಸಾಗುತ್ತಿದೆ. 2027ರ ಮಾರ್ಚ್ 5ರಂದು ಸಿನಿಮಾ ತೆರೆಗೆ ಬರುತ್ತಿದೆ. ಆದರೆ, ಸಲ್ಮಾನ್ ಖಾನ್ ನಟನೆಯ ದೊಡ್ಡ ಸಿನಿಮಾವೊಂದು ಇದೇ ಸಮಯದಲ್ಲಿ ಬಿಡುಗಡೆಯಾಗುತ್ತಿರುವ ಕಾರಣ, ‘ಸ್ಪಿರಿಟ್’ ತನ್ನ ರಿಲೀಸ್ ಡೇಟ್ ಬದಲಿಸಲಿದೆ ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ ಚಿತ್ರತಂಡ ಈಗ ಈ ಬಗ್ಗೆ ಅಧಿಕೃತ ಸ್ಪಷ್ಟನೆ ನೀಡಿದೆ ಎಂದು ವರದಿ ಆಗಿದೆ.

1.ಮಾರ್ಚ್ 5, 2027ರಂದೇ ‘ಸ್ಪಿರಿಟ್’ ರಿಲೀಸ್ ಅಧಿಕೃತ

2.ಸಲ್ಮಾನ್ ಖಾನ್ ಸಿನಿಮಾ ಕಾರಣಕ್ಕೆ ಸಿನಿಮಾ ಮುಂದೂಡಿಕೆ ವದಂತಿ ಸುಳ್ಳು

3.ಪೊಲೀಸ್ ಆಫೀಸರ್ ಪಾತ್ರದಲ್ಲಿ ಪ್ರಭಾಸ್ ಅಬ್ಬರ

‘ಸ್ಪಿರಿಟ್’ ಸಿನಿಮಾ ಈ ಹಿಂದೆ ಘೋಷಿಸಿದಂತೆ 2027ರ ಮಾರ್ಚ್ 5ರಂದು ವಿಶ್ವಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗಲಿದೆ. ಸದ್ಯ ಚಿತ್ರದ ಶೂಟಿಂಗ್ ಪ್ಲಾನ್ ಮಾಡಿದಂತೆಯೇ ಭರದಿಂದ ಸಾಗುತ್ತಿದ್ದು, ಯಾವುದೇ ಕಾರಣಕ್ಕೂ ಬಿಡುಗಡೆ ದಿನಾಂಕದಲ್ಲಿ ಬದಲಾವಣೆ ಇರುವುದಿಲ್ಲ ಎಂದು ತಂಡ ಸ್ಪಷ್ಟಪಡಿಸಿದೆ. ಈ ಮೂಲಕ ಸಲ್ಮಾನ್ ಖಾನ್ ಸಿನಿಮಾದಿಂದಾಗಿ ಪ್ರಭಾಸ್ ಸಿನಿಮಾ ಹಿಂದೆ ಸರಿಯಲಿದೆ ಎಂಬ ಗಾಳಿ ಸುದ್ದಿಗೆ ಬ್ರೇಕ್ ಬಿದ್ದಿದೆ.

ಪ್ರಭಾಸ್ ಅವರಿಗೆ ಬಾಲಿವುಡ್​ಗಿಂತ ಹೆಚ್ಚಿನ ಅಭಿಮಾನಿ ಬಳಗ ದಕ್ಷಿಣ ಭಾರತದಲ್ಲಿ ಇದೆ. ಟಾಲಿವುಡ್ ಅಲ್ಲಿ ಅವರನ್ನು ಆರಾಧಿಸುವವರು ಬಹಳಷ್ಟು ಮಂದಿ ಇದ್ದಾರೆ. ಹೀಗಾಗಿ, ಹಿಂದಿಯಲ್ಲಿ ರಿಲೀಸ್ ಆಗುವ ಸಿನಿಮಾ ಬಗ್ಗೆ ಅವರು ಹೆದರುವ ಅಗತ್ಯವೇ ಇಲ್ಲ ಎಂಬುದು ತಂಡದ ಅಭಿಪ್ರಾಯ.

ಇದನ್ನೂ ಓದಿ: ಮುಂಬೈನಲ್ಲಿ ಪ್ರಭಾಸ್ ಕ್ರೇಜ್ ಹೇಗಿದೆ? ಸ್ವಂತ ಅನುಭವ ವಿವರಿಸಿದ ಕರಣ್ ಜೋಹರ್

ಸಂದೀಪ್ ರೆಡ್ಡಿ ವಂಗಾ ಮತ್ತು ಪ್ರಭಾಸ್ ಮೊದಲ ಬಾರಿಗೆ ಒಂದಾಗುತ್ತಿರುವ ಈ ಚಿತ್ರದ ಮೇಲೆ ಅಭಿಮಾನಿಗಳಲ್ಲಿ ಭಾರಿ ನಿರೀಕ್ಷೆ ಇದೆ. ಇದರಲ್ಲಿ ಪ್ರಭಾಸ್ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ. ಬಾಲಿವುಡ್ ನಟಿ ತೃಪ್ತಿ ದಿಮ್ರಿ ಈ ಚಿತ್ರದ ನಾಯಕಿಯಾಗಿದ್ದು, ಮೊದಲ ಬಾರಿಗೆ ಪ್ರಭಾಸ್ ಜೊತೆ ಸ್ಕ್ರೀನ್ ಶೇರ್ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ವಿವೇಕ್ ಒಬೆರಾಯ್ ಪ್ರಮುಖ ವಿಲನ್ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಸಲ್ಮಾನ್ ಸಿನಿಮಾ ಯಾವುದು?

ಸಲ್ಮಾನ್ ಹೊಸ ಸಿನಿಮಾಗೆ ತಾತ್ಕಾಲಿಕವಾಗಿ ‘ಎಸ್​​ವಿಸಿ 63’ ಎಂದು ಹೆಸರು ಇಡಲಾಗಿದೆ. 2027ರ ಈದ್ ಪ್ರಯುಕ್ತ ಈ ಸಿನಿಮಾ ತೆರೆಗೆ ಬರಲಿದೆ. ಈ ಸಿನಿಮಾಗೆ ವಂಶಿ ಪೈಡಿಪಲ್ಲಿ ನಿರ್ದೇಶನ ಮಾಡುತ್ತಿದ್ದಾರೆ. ವಿಶೇಷ ಎಂದರೆ ಈ ಮೊದಲು ಅವರು ಪ್ರಭಾಸ್ ಜೊತೆ ಸಿನಿಮಾ ಮಾಡಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Pat Cummins: ನಮ್ಮ ಎದುರಾಳಿಯಾಗಿದ್ದರೂ ಅಬ್ಬರಿಸಿದ್ದು ಆಸ್ಟ್ರೇಲಿಯಾದವ! – Kannada News | Pat Cummins said Good to see the Aussies do well

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನ 49ನೇ ಪಂದ್ಯದಲ್ಲಿ ಸನ್​ರೈಸರ್ಸ್ ಹೈದರಾಬಾದ್ ತಂಡ ಭರ್ಜರಿ ಜಯ ಸಾಧಿಸಿದೆ. ಹೈದರಾಬಾದ್​ನ ರಾಜೀವ್ ಗಾಂಧಿ ಇಂಟರ್​ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಪಂಜಾಬ್ ಕಿಂಗ್ಸ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಸನ್​ರೈಸರ್ಸ್ ಹೈದರಾಬಾದ್ ತಂಡವು 20 ಓವರ್​ಗಳಲ್ಲಿ 235 ರನ್​ ಕಲೆಹಾಕಿತು.

ಈ ಗುರಿಯನ್ನು ಬೆನ್ನತ್ತಿದ ಪಂಜಾಬ್ ಕಿಂಗ್ಸ್ ಪರ ಕೂಪರ್ ಕೊನೊಲಿ 59 ಎಸೆತಗಳಲ್ಲಿ 8 ಭರ್ಜರಿ ಸಿಕ್ಸರ್ ಹಾಗೂ 7 ಫೋರ್​ಗಳೊಂದಿಗೆ ಅಜೇಯ 107 ರನ್ ಬಾರಿಸಿದರು. ಇದಾಗ್ಯೂ ಈ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡ 33 ರನ್​ಗಳಿಂದ ಸೋಲನುಭವಿಸಿತು.

ಈ ಗೆಲುವಿನ ಬಳಿಕ ಮಾತನಾಡಿದ ಸನ್​ರೈಸರ್ಸ್ ಹೈದರಾಬಾದ್ ತಂಡದ ನಾಯಕ ಪ್ಯಾಟ್ ಕಮಿನ್ಸ್, ಕೂಪರ್ ಕೊನೊಲಿ ಅವರ ಆಟವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

“ಇದು ಕೂಪರ್ ಕೊನೊಲಿ ಅತ್ಯುತ್ತಮವಾಗಿ ಬ್ಯಾಟಿಂಗ್ ಮಾಡಿದ್ದಾರೆ. ಇದು ಅವರಿಗೆ ಉತ್ತಮ ಫಲಿತಾಂಶ. ಒಬ್ಬ ಆಸ್ಟ್ರೇಲಿಯನ್ ಆಟಗಾರ ಇಷ್ಟು ಅದ್ಭುತವಾಗಿ ಆಡುವುದನ್ನು ನೋಡುವುದು ಖುಷಿ ನೀಡುತ್ತದೆ. ಕೂಪರ್ ಕೊನೊಲಿ ಆಟ ಆಸ್ಟ್ರೇಲಿಯಾ ತಂಡಕ್ಕೂ ಶುಭ ಸಂಕೇತ” ಎಂದು ಪ್ಯಾಟ್ ಕಮಿನ್ಸ್ ಹಾಡಿ ಹೊಗಳಿದ್ದಾರೆ.

ಇಲ್ಲಿ ಕೂಪರ್ ಕೊನೊಲಿ ಎದುರಾಳಿ ತಂಡದ ಆಟಗಾರನಾಗಿದ್ದರೂ ಆಸ್ಟ್ರೇಲಿಯಾದವ ಅತ್ಯುತ್ತಮವಾಗಿ ಆಡಿರುವುದನ್ನು ನೋಡಿ ಪ್ಯಾಟ್ ಕಮಿನ್ಸ್​ಗೆ ಖುಷಿಯಾಗಿದೆ. ಏಕೆಂದರೆ ಕೊನೊಲಿ ಆಸ್ಟ್ರೇಲಿಯಾ ತಂಡದ ಭರವಸೆಯ ದಾಂಡಿಗ. ಇದೇ ರೀತಿ ಪ್ರದರ್ಶನ ನೀಡಿದರೆ ಅದರಿಂದ ಆಸ್ಟ್ರೇಲಿಯಾ ತಂಡಕ್ಕೆ ಪ್ಲಸ್ ಪಾಯಿಂಟ್ ಆಗಲಿದೆ ಎಂಬುದು ಕಮಿನ್ಸ್ ಅವರ ಅಭಿಮತ.

ಇದನ್ನೂ ಓದಿ: ಅಭಿಷೇಕ್ ಆರ್ಭಟಕ್ಕೆ ಕ್ರಿಸ್ ಗೇಲ್ ದಾಖಲೆ ಧೂಳೀಪಟ

ಇನ್ನು ಈ ಪಂದ್ಯದಲ್ಲಿ ಶತಕ ಸಿಡಿಸುವುದರೊಂದಿಗೆ ಕೂಪರ್ ಕೊನೊಲಿ ಭರ್ಜರಿ ದಾಖಲೆಯೊಂದನ್ನು ತಮ್ಮದಾಗಿಸಿಕೊಂಡಿದ್ದಾರೆ. ಆ ದಾಖಲೆ ಯಾವುದೆಂದರೆ…

  •  ಕಿರಿಯ ಶತಕವೀರ: 22 ವರ್ಷದ ಕೊನೊಲಿ, ಐಪಿಎಲ್‌ನಲ್ಲಿ ಶತಕ ಸಿಡಿಸಿದ ಅತ್ಯಂತ ಕಿರಿಯ ಓವರ್‌ಸೀಸ್ ಆಟಗಾರ ಎನಿಸಿಕೊಂಡರು.
  • ಬ್ರಾಡ್‌ಮನ್ ಪ್ರಶಸ್ತಿ ವಿಜೇತ: ಈ ವರ್ಷದ ಆರಂಭದಲ್ಲೇ ‘ಬ್ರಾಡ್‌ಮನ್ ಯಂಗ್ ಕ್ರಿಕೆಟರ್ ಆಫ್ ದಿ ಇಯರ್’ ಪ್ರಶಸ್ತಿ ಪಡೆದಿದ್ದ ಕೊನೊಲಿ, ಈಗ ಐಪಿಎಲ್‌ನಲ್ಲೂ ತಮ್ಮ ಸಾಮರ್ಥ್ಯ ಸಾಬೀತುಪಡಿಸಿದ್ದಾರೆ.
  • ಏಕಾಂಗಿ ಹೋರಾಟ: ಹೈದರಾಬಾದ್ ನೀಡಿದ್ದ 235 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಪಂಜಾಬ್ ಕಿಂಗ್ಸ್ ಪರ ಕೊನೊಲಿ ಒಬ್ಬರೇ ಹೋರಾಟ ನಡೆಸಿದರು. ಈ ಏಕಾಂಗಿ ಹೋರಾಟಕ್ಕೆ ಪ್ಯಾಟ್ ಕಮಿನ್ಸ್ ಮೆಚ್ಚುಗೆಗಳನ್ನು ವ್ಯಕ್ತಪಡಿಸಿದ್ದಾರೆ.

ಅಗ್ರಸ್ಥಾನಕ್ಕೇರಿದ ಎಸ್​ಆರ್​​ಹೆಚ್​:

ಪಂಜಾಬ್ ಕಿಂಗ್ಸ್​ ವಿರುದ್ಧದ ಗೆಲುವಿನೊಂದಿಗೆ ಸನ್​ರೈಸರ್ಸ್ ಹೈದರಾಬಾದ್ ತಂಡವು ಅಂಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಅಲ್ಲದೆ ಮುಂದಿನ 3 ಪಂದ್ಯಗಳಲ್ಲಿ ಎಸ್​ಆರ್​​ಹೆಚ್ ತಂಡ ಒಂದು ಗೆಲುವು ಸಾಧಿಸಿದರೆ ಪ್ಲೇಆಫ್ ಆಡುವುದು ಸಹ ಖಚಿತವಾಗಲಿದೆ.

Source link

ಪಿಣರಾಯಿ ವಿಜಯನ್ ಕೇರಳ ಸಿಎಂ ಹುದ್ದೆಯಿಂದ ನಿರ್ಗಮಿಸುತ್ತಿದ್ದಂತೆಯೇ ಸಿದ್ದರಾಮಯ್ಯ ಹೆಸರಿಗೆ ಮತ್ತೊಂದು ದಾಖಲೆ! – Kannada News | CM Siddaramaiah Now India’s Oldest Chief Minister After Pinarayi Vijayan Resigns; Breaks Karnataka Records

ಬೆಂಗಳೂರು, ಮೇ 7: ಕೇರಳ ವಿಧಾನಸಭಾ ಚುನಾವಣೆಯಲ್ಲಿ ಎಲ್‌ಡಿಎಫ್ (LDF) ಪರಾಜಯಗೊಂಡ ಕಾರಣ 80 ವರ್ಷ ವಯಸ್ಸಿನ ಪಿಣರಾಯಿ ವಿಜಯನ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಪಿಣರಾಯಿ ವಿಜಯನ್ ನಿರ್ಗಮನದೊಂದಿಗೆ, ಕರ್ನಾಟಕದ ಮುಖ್ಯಮಂತ್ರಿ, 78 ವರ್ಷ ವಯಸ್ಸಿನ ಸಿದ್ದರಾಮಯ್ಯ (Siddaramaiah) ಈಗ ದೇಶದ ಅತ್ಯಂತ ಹಿರಿಯ (Oldest CM) ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇದು ಸಿದ್ದರಾಮಯ್ಯ ಅವರ ಸುದೀರ್ಘ ರಾಜಕೀಯ ಜೀವನದ ಮತ್ತೊಂದು ಮೈಲಿಗಲ್ಲು ಎನ್ನಬಹುದು.

ಮುಖ್ಯಾಂಶಗಳು

  • 78 ವರ್ಷ 9 ತಿಂಗಳ ಪ್ರಾಯದ ಸಿದ್ದರಾಮಯ್ಯ ಈಗ ಭಾರತದ ಅತ್ಯಂತ ಹಿರಿಯ ಮುಖ್ಯಮಂತ್ರಿ.
  • ಡಿ. ದೇವರಾಜ ಅರಸು ದಾಖಲೆ ಮುರಿದು ಕರ್ನಾಟಕದ ಸುದೀರ್ಘ ಕಾಲದ ಸಿಎಂ ಎಂಬ ಕೀರ್ತಿಗೆ ಈಗಾಗಲೇ ಭಾಜನರಾಗಿರುವ ಸಿದ್ದರಾಮಯ್ಯ.
  • 17 ಬಾರಿ ರಾಜ್ಯ ಬಜೆಟ್ ಮಂಡಿಸಿದ ಅಪರೂಪದ ದಾಖಲೆಯೂ ಸಿದ್ದರಾಮಯ್ಯ ಹೆಸರಿನಲ್ಲಿದೆ.

ವಯಸ್ಸಿನ ಲೆಕ್ಕಾಚಾರದಲ್ಲಿ ಸಿದ್ದರಾಮಯ್ಯ ಮೊದಲಿಗ

ಪ್ರಸ್ತುತ ದೇಶದ ಮುಖ್ಯಮಂತ್ರಿಗಳ ಪಟ್ಟಿಯನ್ನು ಗಮನಿಸಿದರೆ, ಸಿದ್ದರಾಮಯ್ಯ (78) ಅವರ ನಂತರ ಆಂಧ್ರಪ್ರದೇಶದ ಚಂದ್ರಬಾಬು ನಾಯ್ಡು (75), ಮಿಜೋರಾಂನ ಲಾಲ್ದುಹೊಮಾ (74) ಮತ್ತು ನಾಗಾಲ್ಯಾಂಡ್‌ನ ನೆಫಿಯು ರಿಯೊ (74) ಅವರು ಹಿರಿಯರ ಸಾಲಿನಲ್ಲಿ ನಿಲ್ಲುತ್ತಾರೆ. ಇನ್ನು ಅರುಣಾಚಲ ಪ್ರದೇಶದ ಪೆಮಾ ಖಂಡು (46) ದೇಶದ ಅತ್ಯಂತ ಕಿರಿಯ ಮುಖ್ಯಮಂತ್ರಿಯಾಗಿದ್ದಾರೆ.

ಸಿದ್ದರಾಮಯ್ಯ ಅವರು 1983 ರಲ್ಲಿ ತಮ್ಮ 36 ನೇ ವಯಸ್ಸಿನಲ್ಲಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದು, ಅಂದಿನಿಂದ ಸಚಿವರಾಗಿ, ವಿರೋಧ ಪಕ್ಷದ ನಾಯಕರಾಗಿ ಮತ್ತು ಈಗ ಎರಡನೇ ಬಾರಿಗೆ ಸಿಎಂ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.

ಯಡಿಯೂರಪ್ಪ ದಾಖಲೆ ಬ್ರೇಕ್

ಕರ್ನಾಟಕದ ಮಟ್ಟಿಗೆ ಹೇಳುವುದಾದರೆ, ಅತಿ ಹಿರಿಯ ವಯಸ್ಸಿನಲ್ಲಿ ಸಿಎಂ ಹುದ್ದೆ ಅಲಂಕರಿಸಿದ ದಾಖಲೆಯೂ ಈಗ ಸಿದ್ದರಾಮಯ್ಯ ಅವರ ಪಾಲಾಗಿದೆ. ಈ ಹಿಂದೆ ಬಿಜೆಪಿ ಪ್ರಭಾವಿ ನಾಯಕ ಬಿಎಸ್ ಯಡಿಯೂರಪ್ಪ 2021 ರಲ್ಲಿ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದಾಗ ಅವರಿಗೆ 78 ವರ್ಷ 5 ತಿಂಗಳು ವಯಸ್ಸಾಗಿತ್ತು. ಈಗ ಸಿದ್ದರಾಮಯ್ಯಗೆ ಅದಕ್ಕಿಂತಲೂ ಹೆಚ್ಚಿನ ವಯಸ್ಸು. ಆ ಮೂಲಕ ಕರ್ನಾಟಕದ ಅತ್ಯಂತ ಹಿರಿಯ ಸಿಎಂ ಎನಿಸಿಕೊಂಡಿದ್ದಾರೆ. ಹೋಲಿಕೆ ಮಾಡಿದರೆ, ಎಸ್.ಎಂ. ಕೃಷ್ಣ 72ನೇ ವಯಸ್ಸಿನಲ್ಲಿ ಮತ್ತು ಜೆ.ಎಚ್. ಪಟೇಲ್ 69ನೇ ವಯಸ್ಸಿನಲ್ಲಿ ಅಧಿಕಾರದಿಂದ ನಿರ್ಗಮಿಸಿದ್ದರು. ಆರ್. ಗುಂಡೂರಾವ್ ಅವರು 43 ನೇ ವಯಸ್ಸಿನಲ್ಲಿ ರಾಜ್ಯದ ಅತ್ಯಂತ ಕಿರಿಯ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ್ದರು.

ಸುದೀರ್ಘ ಕಾಲದ ಮುಖ್ಯಮಂತ್ರಿ

ಸಿದ್ದರಾಮಯ್ಯ ಅವರು ಕೇವಲ ವಯಸ್ಸಿನಲ್ಲಿ ಮಾತ್ರವಲ್ಲದೆ, ಅಧಿಕಾರಾವಧಿಯಲ್ಲೂ ದಾಖಲೆ ಬರೆದಿದ್ದಾರೆ. ಡಿ. ದೇವರಾಜ ಅರಸು ಅವರು ಒಟ್ಟು 7 ವರ್ಷ 239 ದಿನಗಳ ಕಾಲ ಸಿಎಂ ಆಗಿ ಸೇವೆ ಸಲ್ಲಿಸಿದ್ದರು. ಸಿದ್ದರಾಮಯ್ಯ ಅವರು 2013 ರಿಂದ 2018 ರವರೆಗೆ ಪೂರ್ಣ ಅವಧಿ ಮುಗಿಸಿ, ಮೇ 2023 ರಿಂದ ಮತ್ತೆ ಅಧಿಕಾರದಲ್ಲಿದ್ದಾರೆ. ಈ ಮೂಲಕ ಅರಸು ಅವರ ಸುದೀರ್ಘ ಕಾಲದ ಅಧಿಕಾರಾವಧಿಯ ದಾಖಲೆಯನ್ನು ಸಿದ್ದರಾಮಯ್ಯ ಹಿಂದಿಕ್ಕಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version