‘ಧುರಂಧರ್’ ಚಿತ್ರಕ್ಕೆ ತಿರುಗೇಟು ನೀಡಲು ‘ಮೇರಾ ಲಿಯಾರಿ’ ಸಿನಿಮಾ ಮಾಡಿದ ಪಾಕಿಸ್ತಾನ – Kannada News | Dhurandhar Vs Mera Lyari controversy Pakistan reaction to Ranveer Singh movie

ಬಾಲಿವುಡ್ ನಟ ರಣವೀರ್ ಸಿಂಗ್ ಅಭಿನಯದ, ಆದಿತ್ಯ ಧರ್ ನಿರ್ದೇಶನದ ‘ಧುರಂಧರ್’ (Dhurandhar) ಫ್ರಾಂಚೈಸಿ ಎರಡು ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲಿ 3000 ಕೋಟಿ ರೂಪಾಯಿಗೂ ಅಧಿಕ ಹಣ ಲೂಟಿ ಮಾಡಿ ದಾಖಲೆ ಬರೆದಿವೆ. ಆದರೆ, ಈ ಚಿತ್ರದಲ್ಲಿ ತೋರಿಸಲಾದ ಪಾಕಿಸ್ತಾನದ ಲಿಯಾರಿ (Lyari) ಪಟ್ಟಣದ ಚಿತ್ರಣ ಈಗ ಎರಡು ದೇಶಗಳ ನಡುವೆ ಸಿನಿಮಾ ಸಮರಕ್ಕೆ ನಾಂದಿ ಹಾಡಿದೆ. ‘ಧುರಂಧರ್’ ಸಿನಿಮಾಗೆ ತಿರುಗೇಟು ನೀಡಲು ಪಾಕಿಸ್ತಾನದಲ್ಲಿ ‘ಮೇರಾ ಲಿಯಾರಿ’ (Mera Lyari) ಎಂಬ ಹೊಸ ಸಿನಿಮಾ ಮಾಡಲಾಗಿದೆ.

ನಿರ್ದೇಶಕ ಆದಿತ್ಯ ಧರ್ ಅವರ ಈ ಸ್ಪೈ ಥ್ರಿಲ್ಲರ್‌ನಲ್ಲಿ ರಣವೀರ್ ಸಿಂಗ್ ಅವರು ಭಾರತೀಯ ಗೂಢಚಾರನಾಗಿ ಕಾಣಿಸಿಕೊಂಡಿದ್ದಾರೆ. 2005ರಿಂದ 2022ರ ಕಾಲಘಟ್ಟದಲ್ಲಿ ಲಿಯಾರಿಯಲ್ಲಿ ನಡೆದ ಗ್ಯಾಂಗ್ ವಾರ್, ಭೂಗತ ಲೋಕದ ಚಟುವಟಿಕೆಗಳು ಮತ್ತು ಉಗ್ರರ ಜಾಲವನ್ನು ಧ್ವಂಸ ಮಾಡುವ ಕಥೆಯನ್ನು ಈ ಸಿನಿಮಾ ಒಳಗೊಂಡಿದೆ. ರೆಹಮಾನ್ ಬಲೋಚ್, ಉಜೈರ್ ಬಲೋಚ್ ಮತ್ತು ದಾವೂದ್ ಇಬ್ರಾಹಿಂ ಮುಂತಾದ ನೈಜ ಪಾತ್ರಗಳನ್ನು ಆಧರಿಸಿದ ಈ ಚಿತ್ರವು ಭಾರತದಲ್ಲಿ ಭರ್ಜರಿ ಯಶಸ್ಸು ಕಂಡಿದೆ. ಆದರೆ ಈ ಕಥೆ ಬಗ್ಗೆ ಪಾಕಿಸ್ತಾನಕ್ಕೆ ಅಸಮಾಧಾನ ಇದೆ.

ಲಿಯಾರಿ ಪಟ್ಟಣವನ್ನು ಕೇವಲ ಅಪರಾಧದ ತಾಣವಾಗಿ, ಅರಾಜಕತೆಯಿಂದ ಕೂಡಿದ ಪ್ರದೇಶವಾಗಿ ಭಾರತೀಯ ಸಿನಿಮಾಗಳು ಬಿಂಬಿಸುತ್ತಿವೆ ಎಂದು ಪಾಕಿಸ್ತಾನ ಆಕ್ಷೇಪ ವ್ಯಕ್ತಪಡಿಸಿದೆ. ಸಿಂಧ್ ಪ್ರಾಂತ್ಯದ ಮಾಹಿತಿ ಸಚಿವ ಶರ್ಜೀಲ್ ಮೆಮನ್, ‘ಧುರಂಧರ್ ಸಿನಿಮಾವು ಪಾಕಿಸ್ತಾನದ ವಿರುದ್ಧ ಭಾರತ ಮಾಡುತ್ತಿರುವ ಅಪಪ್ರಚಾರ. ಇದಕ್ಕೆ ನಾವು ಸಿನಿಮಾ ಮೂಲಕವೇ ಉತ್ತರ ನೀಡುತ್ತೇವೆ’ ಎಂದು ಗುಡುಗಿದ್ದಾರೆ.

ಭಾರತದ ‘ಧುರಂಧರ್’ ಸಿನಿಮಾಗೆ ತಿರುಗೇಟು ನೀಡಲು ಪಾಕಿಸ್ತಾನ ಈಗ ‘ಮೇರಾ ಲಿಯಾರಿ’ ಸಿನಿಮಾವನ್ನು ಸಿದ್ಧಪಡಿಸಿದೆ. ಅಬು ಅಲೀಹಾ ನಿರ್ದೇಶನದ ಈ ಚಿತ್ರವು ಕ್ರೀಡಾ ಆಧಾರಿತ ಸಿನಿಮಾವಾಗಿದ್ದು, ಲಿಯಾರಿಯ ಹೆಣ್ಣುಮಕ್ಕಳ ಫುಟ್‌ಬಾಲ್ ಕ್ರೇಜ್ ಹೇಗಿದೆ ಎಂಬುದನ್ನು ತೋರಿಸಲಿದೆ. ಆಯೆಷಾ ಒಮರ್, ದನಾನೀರ್ ಮೊಬೀನ್ ಮುಂತಾದವರು ಇದರಲ್ಲಿ ಮುಖ್ಯ ಭೂಮಿಕೆ ನಿಭಾಯಿಸಿದ್ದಾರೆ.

ಇದನ್ನೂ ಓದಿ: ‘ಧುರಂಧರ್’ ತಯಾರಾಗಿದ್ದು ಹೇಗೆ ಗೊತ್ತಾ? ಚಿತ್ರಮಂದಿರದಲ್ಲೇ ನೋಡಿ ಮೇಕಿಂಗ್ ವಿಡಿಯೋ

‘ಮೇರಾ ಲಿಯಾರಿ’ ಚಿತ್ರವು ಮೊದಲು ಯುಕೆ ಏಷ್ಯನ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಪ್ರದರ್ಶನಗೊಳ್ಳಲಿದ್ದು, ಮೇ 8ರಂದು ಪಾಕಿಸ್ತಾನದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಒಟ್ಟಿನಲ್ಲಿ ಸಿನಿಮಾದ ಮೂಲಕ ಶುರುವಾದ ಈ ಲಿಯಾರಿ ಸಂಘರ್ಷ ಈಗ ಅಂತರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯುತ್ತಿದೆ. ಈ ಚಿತ್ರಕ್ಕೆ ಬಾಕ್ಸ್ ಆಫೀಸ್​ನಲ್ಲಿ ಯಶಸ್ಸು ಸಿಗತ್ತಾ ಎಂಬುದನ್ನು ಕಾದು ನೋಡಬೇಕು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ರಾಹುಲ್ ಗಾಂಧಿ, ಅಖಿಲೇಶ್ ಯಾದವ್ ಪ್ರತಿಕೃತಿ ಸುಡುವಾಗ ಬಿಜೆಪಿ ಶಾಸಕಿ ಸೀರೆಗೆ ಹೊತ್ತಿದ ಬೆಂಕಿ – Kannada News | BJP MLA Anupama Jaiswal Injured During Effigy Protest in UP

ಬಹ್ರೈಚ್, ಏಪ್ರಿಲ್ 26: ಬಹ್ರೈಚ್​ನಲ್ಲಿ ನಡೆದ ಪ್ರತಿಭಟನೆ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ಅಖಿಲೇಶ್ ಯಾದವ್ ಪ್ರತಿಕೃತಿಯನ್ನು ದಹಿಸಲು ಹೋದಾಗ ಬಿಜೆಪಿ ಶಾಸಕಿ ಅನುಪಮಾ ಜೈಶ್ವಾಲ್ ಬಟ್ಟೆಗೆ ಬೆಂಕಿ ತಗುಲಿರುವ ವಿಡಿಯೋ ವೈರಲ್ ಆಗಿದೆ. ಶನಿವಾರ ಜಿಲ್ಲಾ ಮ್ಯಾಜಿಸ್ಟ್ರೇಟ್ ನಿವಾಸದ ಬಳಿ ಬಿಜೆಪಿ ನಡೆಸಿದ ಮಹಿಳಾ ಜನಾಕ್ರೋಶ ಮೆರವಣಿಗೆಯ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ.ಹಣೆ ಹಾಗೂ ಕೂದಲಿಗೆ ಕೂಡ ಬೆಂಕಿ ತಗುಲಿತ್ತು.

 

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಕನಕಪುರದಲ್ಲಿ ಕಾಡಾನೆ ದಾಳಿಗೆ ರಸ್ತೆಯಲ್ಲಿ ತೆರಳುತ್ತಿದ್ದ ವ್ಯಕ್ತಿ ದಾರುಣ ಸಾವು: ಅತ್ತ ಚಾಮರಾಜನಗರದಲ್ಲಿಯೂ ಮುಂದುವರಿದ ಒಂಟಿ ಸಲಗದ ಕಾಟ – Kannada News | Elephant Attack Kills Man in Cheelandawadi Village, Kanakapura

ರಾಮನಗರ/ ಚಾಮರಾಜನಗರ, ಏಪ್ರಿಲ್​​ 26: ರಾಜ್ಯದಲ್ಲಿ ಮಾನವ ಮತ್ತು ಕಾಡು ಪ್ರಾಣಿಗಳ ನಡುವಿನ ಸಂಘರ್ಷ ಮುಂದುವರಿದಿದ್ದು, ಕನಕಪುರದ ಪ್ರವಾಸಿ ಸ್ಥಳ ಸಂಗಮದಲ್ಲಿ ಮಹಿಳೆಯೋರ್ವರ ಮೇಲೆ ಕಾಡಾನೆ ಇತ್ತೀಚೆಗಷ್ಟೇ ದಾಳಿ ನಡೆಸಿತ್ತು. ಏಕಾಏಕಿ ಬಂದ ಕಾಡಾನೆ ಕಂಡು ಪ್ರಾಣ ಭೀತಿಯಿಂದ ಜನರು ದಿಕ್ಕಾಪಾಲಾಗಿ ಓಡುವ ವಿಡಿಯೋ ವೈರಲ್​​ ಆಗಿತ್ತು. ಆ ಬೆನ್ನಲ್ಲೇ ಬೆಂಗಳೂರು ದಕ್ಷಿಣ ಜಿಲ್ಲೆ ಕನಕಪುರ ‌ತಾಲೂಕಿನ ಚೀಲಂದವಾಡಿ ಗ್ರಾಮದಲ್ಲಿ ಒಂಟಿ ಸಲಗ ದಾಳಿಗೆ ವ್ಯಕ್ತಿಯೋರ್ವರ ಬಲಿಯಾಗಿದೆ. ರಸ್ತೆಯಲ್ಲಿ ಹೋಗುತ್ತಿದ್ದ ವೇಳೆ ಕಾಡಾನೆ ದಾಳಿ ನಡೆಸಿದ ಪರಿಣಾಮ ಕರಿಗುಂಡ(55) ಎಂಬವರು ಮೃತಪಟ್ಟಿದ್ದಾರೆ. ಸಂಗಮ ಅರಣ್ಯ ವಲಯ ಪ್ರದೇಶ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಕರಿಗುಂಡ ಅವರ ಮೃತದೇಹವನ್ನು ಕನಕಪುರ ತಾಲೂಕು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ಮೆಕ್ಕೆಜೋಳ ಬೆಳೆ ನಾಶಪಡಿಸಿದ ಒಂಟಿ ಸಲಗ

ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬರಗಿ ಕಾಲೋನಿಯ ನಾಗಪಟ್ಟಣ ಬಳಿ ಕಾಡಾನೆ ಹಾವಳಿಯಿಂದ ಮಹೇಶ್ ಎಂಬುವರಿಗೆ ಸೇರಿದ ಬೆಳೆ ಹಾನಿಯಾಗಿದೆ. ಬಂಡೀಪುರ ಟೈಗರ್ ರಿಸರ್ವ್ ಫಾರೆಸ್ಟ್​ಗೆ ಅಂಟಿಕೊಂಡಂತಿರುವ ನಾಗಪಟ್ಟಣ ಗ್ರಾಮಕ್ಕೆ ಲಗ್ಗೆ ಇಟ್ಟ ಒಂಟಿ ಸಲಗ ಮೆಕ್ಕೆಜೋಳ ಬೆಳೆಯನ್ನ ಸಂಪೂರ್ಣ ನಾಶ ಮಾಡಿ ತೆರಳಿದೆ.

ಇದನ್ನೂ ಓದಿ: ಸುಟ್ಟಘಟ್ಟ ಗ್ರಾಮದ ತೋಟದಲ್ಲಿ ಪ್ರತ್ಯಕ್ಷವಾಯಿತು ಕಾಡಾನೆಗಳ ಹಿಂಡು!

ಕೆರೆಯಲ್ಲಿ ಕಂಡ ಕಾಡಾನೆಗಳ ಹಿಂಡು

ಮತ್ತೊಂದೆಡೆ ಹನೂರು ತಾಲೂಕಿನ ಪಿಜಿ ಪಾಳ್ಯದಲ್ಲಿ ಮರಿಗಳ ಜೊತೆ ಕಾಡಾನೆಗಳ ಹಿಂಡು ಕಾಣಿಸಿಕೊಂಡಿದೆ. ತನ್ನ ಮರಿಗಳ ಜೊತೆ ಕೆರೆಯ ನೀರಿಗಿಳಿದಿರುವ 10ಕ್ಕೂ ಹೆಚ್ಚು ಆನೆಗಳು, ಗಂಟಗಟ್ಟಲೆ ಕೆರೆಯಲ್ಲೆ ರಿಲ್ಯಾಕ್ಸ್ ಮಾಡಿರುವ ದೃಶ್ಯ ಕಂಡುಬಂದಿದೆ. ಬಿಸಿಲ ಧಗೆಗೆ ಕಾಡು ಪ್ರಾಣಿಗಳೂ ತತ್ತರಿಸುತ್ತಿದ್ದು, ಚಾಮರಾಜನಗರ ಜಿಲ್ಲೆಯಲ್ಲಿರುವ 36ರಿಂದ 37 ಡಿಗ್ರಿ ಸೆಲ್ಸಿಯಸ್​​​ನಷ್ಟು ತಾಪಮಾನದಿಂದ ರಕ್ಷಣೆ ಪಡೆಯಲು ನೀರಿನ ಮೂಲಗಳತ್ತ ಹೆಜ್ಜೆ ಹಾಕುತ್ತಿರೋದು ಕಂಡುಬಂದಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಎಂಗೇಜ್ಮೆಂಟ್ ಆದ ರಾತ್ರಿಯೇ ಯುವತಿ ಪ್ರಿಯತಮನೊಂದಿಗೆ ಪರಾರಿ! ಲವ್ ಜಿಹಾದ್ ಶಂಕೆ – Kannada News | Haveri: Girl Goes Missing After Engagement; Love Jihad Allegations Spark Protests in Hanagal

ಎಂಗೇಜ್ಮೆಂಟ್ ಆದ ರಾತ್ರಿಯೇ ಯುವತಿ ಪ್ರಿಯತಮನೊಂದಿಗೆ ಪರಾರಿ!

ಹಾವೇರಿ, ಏಪ್ರಿಲ್ 26: ಜಿಲ್ಲೆಯ ಹಾನಗಲ್ ತಾಲೂಕಿನ ಶಂಕ್ರಿಕೊಪ್ಪ ಗ್ರಾಮದಲ್ಲಿ ವಿವಾಹ ನಿಶ್ಚಿತಾರ್ಥ ನಡೆದ ಬೆನ್ನಲ್ಲೇ ಯುವತಿಯೊಬ್ಬಳು ನಾಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಯುವತಿಯನ್ನು ಫುಸಲಾಯಿಸಿ ಲವ್ ಜಿಹಾದ್​ಗೆ (Love Jihad) ಯತ್ನಿಸಲಾಗಿದೆ ಎಂಬ ಆರೋಪವೂ ಕೇಳಿಬಂದಿದ್ದು, ಆಕ್ರೋಶಕ್ಕೆ ಕಾರಣವಾಗಿದೆ.

ನಡೆದಿದ್ದೇನು?

ಗ್ರಾಮದ 24 ವರ್ಷದ ಬಿ.ಕಾಂ ಪದವೀಧರೆ ಶಂಕ್ರಮ್ಮ ಕೆರಿಮತ್ತಿಹಳ್ಳಿ ನಾಪತ್ತೆಯಾದ ಯುವತಿ. ಶಂಕ್ರಮ್ಮನಿಗೆ ಇತ್ತೀಚೆಗಷ್ಟೇ ನಿಶ್ಚಿತಾರ್ಥ ನೆರವೇರಿತ್ತು. ಮೇ 11ಕ್ಕೆ ಮದುವೆಯೂ ನಿಶ್ಚಯವಾಗಿತ್ತು. ನಿಶ್ಚಿತಾರ್ಥ ನಡೆದ ರಾತ್ರಿ ಭಾವಿ ಪತಿಯೊಂದಿಗೆ ಫೋನ್‌ನಲ್ಲಿ ಮಾತನಾಡಿದ್ದ ಯುವತಿ, ತಡರಾತ್ರಿ ಮನೆಯ ಹಿಂಬದಿಯ ಬಾಗಿಲಿನಿಂದ ನಾಪತ್ತೆಯಾಗಿದ್ದಾಳೆ ಎನ್ನಲಾಗಿದೆ. ನರೇಗಲ್ ಗ್ರಾಮದ ಇಬ್ರಾಹಿಂ ನೆಗಳೂರು ಎಂಬ ಯುವಕ ಈಕೆಯನ್ನು ಪುಸಲಾಯಿಸಿ ಕರೆದೊಯ್ದಿದ್ದಾನೆ. ಇದು ಲವ್ ಜಿಹಾದ್ ಪ್ರಯತ್ನ ಎಂದು ಕುಟುಂಬಸ್ಥರು ಹಾಗೂ ಹಿಂದೂಪರ ಸಂಘಟನೆಗಳು ಗಂಭೀರವಾಗಿ ಆರೋಪಿಸಿವೆ.

ಅಕ್ಕಿಆಲೂರಿನಲ್ಲಿ ಕೆಲಸಕ್ಕೆ ಹೋಗುತ್ತಿದ್ದ ವೇಳೆ ಯುವತಿಯ ಪರಿಚಯ ಮಾಡಿಕೊಂಡಿದ್ದ ಆರೋಪಿ ಇಬ್ರಾಹಿಂ, ಮದುವೆಯ ಸಿದ್ಧತೆ ನಡೆಯುತ್ತಿದ್ದಾಗಲೇ ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ. ಮಗಳ ನಾಪತ್ತೆಯಿಂದ ಕಂಗೆಟ್ಟ ತಾಯಿ, ನನ್ನ ಮಗಳನ್ನು ಹೇಗಾದರೂ ಮಾಡಿ ಮರಳಿ ಕರೆತನ್ನಿ ಎಂದು ಅಡೂರು ಪೊಲೀಸ್ ಠಾಣೆಯ ಮುಂದೆ ಕಣ್ಣೀರು ಹಾಕಿದ್ದಾರೆ.

ಹಿಂದೂಪರ ಸಂಘಟನೆಗಳ ಆಕ್ರೋಶ

ಘಟನೆಯ ಸುದ್ದಿ ತಿಳಿಯುತ್ತಿದ್ದಂತೆಯೇ ಹಿಂದೂಪರ ಸಂಘಟನೆಗಳು ಜಿಲ್ಲೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದು, ಇದು ವ್ಯವಸ್ಥಿತ ‘ಲವ್ ಜಿಹಾದ್’ ಎಂದು ಕಿಡಿಕಾರಿವೆ. ಸದ್ಯ ಅಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನಾಪತ್ತೆಯಾದ ಯುವತಿ ಹಾಗೂ ಆರೋಪಿಗಾಗಿ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ.

ವರದಿ: ಅಣ್ಣಪ್ಪ ಬಾರ್ಕಿ, ಟಿವಿ9 ಹಾವೇರಿ

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Health Tips: ಕ್ಯಾಲ್ಸಿಯಂ ಕಾರ್ಬೈಡ್; ಹಣ್ಣಿನಲ್ಲಿ ಅಡಗಿರುವ ವಿಷದ ಬಗ್ಗೆ ಇರಲಿ ಎಚ್ಚರ! – Kannada News | Artificial Fruit Ripening Dangers: Avoid Carbide Treated Fruits

ಬೇಸಿಗೆಯ ಬಿಸಿಲಿನೊಂದಿಗೆ ಮಾವಿನ ಹಣ್ಣಿನ ಹಂಗಾಮು ಆರಂಭವಾಗುತ್ತಿದ್ದಂತೆಯೇ ಎಲ್ಲರಲ್ಲೂ ಸಿಹಿಯಾದ ಹಣ್ಣುಗಳನ್ನು ಸವಿಯುವ ತವಕ ಹೆಚ್ಚಾಗುತ್ತದೆ. ಆದರೆ, ಹಣ್ಣುಗಳು ಬೇಗ ಮಾಗಲಿ ಎಂಬ ಗ್ರಾಹಕರ ಆಸೆಯನ್ನು ಕೆಲವರು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಹಣ್ಣುಗಳನ್ನು ಕೃತಕವಾಗಿ, ಅತೀ ವೇಗವಾಗಿ ಮಾಗಿಸಲು ‘ಕ್ಯಾಲ್ಸಿಯಂ ಕಾರ್ಬೈಡ್’ ಎಂಬ ಅಪಾಯಕಾರಿ ರಾಸಾಯನಿಕವನ್ನು ಬಳಸಲಾಗುತ್ತಿದೆ. ವ್ಯಾಪಾರಿಗಳ ವಲಯದಲ್ಲಿ ‘ಮಸಾಲಾ’ ಎಂದೇ ಕರೆಯಲ್ಪಡುವ ಈ ವಿಷಕಾರಿ ಅಂಶವನ್ನು ಮಾವು, ಬಾಳೆ, ಪಪ್ಪಾಯಿ ಮತ್ತು ಚಿಕ್ಕು ಹಣ್ಣುಗಳಿಗೆ ಹೆಚ್ಚಾಗಿ ಬಳಸಲಾಗುತ್ತಿದೆ. ಕಡಿಮೆ ವೆಚ್ಚದಲ್ಲಿ ಹಣ್ಣುಗಳನ್ನು ಮಾಗಿಸಿ ಮಾರುಕಟ್ಟೆಗೆ ತಲುಪಿಸುವ ಇವರ ಲಾಭದ ಆಸೆ ಗ್ರಾಹಕರ ಆರೋಗ್ಯಕ್ಕೆ ಸಂಚಕಾರ ತರುತ್ತಿದೆ.

ಸಾಮಾನ್ಯವಾಗಿ ಗಿಡದ ಮೇಲೆಯೇ ಸಹಜವಾಗಿ ಮಾಗಿದ ಹಣ್ಣುಗಳು ವಿಟಮಿನ್ A, C ಹಾಗೂ ಅನೇಕ ಪೋಷಕಾಂಶಗಳ ಸಮೃದ್ಧ ಮೂಲವಾಗಿರುತ್ತವೆ. ಇವು ನೈಸರ್ಗಿಕ ಸುವಾಸನೆ, ಸಮತೋಲಿತ ರುಚಿ ಮತ್ತು ಸಂಪೂರ್ಣ ಪೋಷಕಾಂಶಗಳನ್ನು ಹೊಂದಿರುತ್ತವೆ. ಆದರೆ ಕೃತಕವಾಗಿ ಮಾಗಿಸಿದ ಹಣ್ಣುಗಳು ಕೇವಲ ಹೊರಗಿನ ಬಣ್ಣವನ್ನು ಮಾತ್ರ ಬದಲಿಸುತ್ತವೆಯೇ ಹೊರತು ಒಳಗಿನ ಗುಣಮಟ್ಟವನ್ನಲ್ಲ. ಈ ಪ್ರಕ್ರಿಯೆಯಲ್ಲಿ ಬಳಕೆಯಾಗುವ ಕ್ಯಾಲ್ಸಿಯಂ ಕಾರ್ಬೈಡ್‌ನಲ್ಲಿ ಆರ್ಸೆನಿಕ್ ಮತ್ತು ಫಾಸ್ಫರಸ್‌ನಂತಹ ತೀವ್ರ ವಿಷಕಾರಿ ಅಂಶಗಳಿದ್ದು, ಇವು ಮಾನವ ದೇಹಕ್ಕೆ ಅತ್ಯಂತ ಹಾನಿಕಾರಕವಾಗಿವೆ.

ಈ ವಿಷಕಾರಿ ಹಣ್ಣುಗಳ ಸೇವನೆಯಿಂದ ಆರೋಗ್ಯದ ಮೇಲೆ ತಕ್ಷಣದ ಮತ್ತು ದೀರ್ಘಕಾಲೀನ ದುಷ್ಪರಿಣಾಮಗಳು ಉಂಟಾಗುತ್ತವೆ. ಸೇವಿಸಿದ ತಕ್ಷಣ ವಾಂತಿ, ಎದೆ ಹಾಗೂ ಹೊಟ್ಟೆ ಉರಿ, ಅತಿಯಾದ ಬಾಯಾರಿಕೆ ಮತ್ತು ಚರ್ಮದ ಉರಿ ಕಾಣಿಸಿಕೊಳ್ಳಬಹುದು. ಉಸಿರಾಟದ ವ್ಯವಸ್ಥೆಯ ಮೇಲೆ ಇದು ಕೆಮ್ಮು, ಉಬ್ಬಸ ಮತ್ತು ಶ್ವಾಸಕೋಶದ ತೊಂದರೆಗಳನ್ನು ಉಂಟುಮಾಡಿದರೆ, ನರಮಂಡಲದ ಮೇಲೆ ತಲೆನೋವು, ತಲೆತಿರುಗುವಿಕೆ, ನಿದ್ರಾಹೀನತೆ ಮತ್ತು ನೆನಪಿನ ಶಕ್ತಿ ಕುಂಠಿತಗೊಳ್ಳುವಂತಹ ಪರಿಣಾಮಗಳನ್ನು ಬೀರುತ್ತದೆ. ದೀರ್ಘಕಾಲದವರೆಗೆ ಇಂತಹ ಹಣ್ಣುಗಳನ್ನು ಸೇವಿಸುವುದರಿಂದ ಅಲ್ಸರ್ ಮತ್ತು ಜೀರ್ಣಾಂಗ ಸಂಬಂಧಿ ಸಮಸ್ಯೆಗಳು ಕಾಡಬಹುದು. ವಿಶೇಷವಾಗಿ ಗರ್ಭಿಣಿಯರು ಇಂತಹ ಹಣ್ಣುಗಳಿಂದ ದೂರವಿರುವುದು ಅತ್ಯಗತ್ಯ.

ಇದನ್ನೂ ಓದಿ: ಋತುಚಕ್ರದ ಸಮಯದಲ್ಲಿ ಈ ಆಹಾರಗಳನ್ನು ಕಡ್ಡಾಯವಾಗಿ ಸೇವಿಸಬೇಕು!

ಈ ಅಪಾಯವನ್ನು ಮನಗಂಡು ಭಾರತ ಸರ್ಕಾರವು ಕ್ಯಾಲ್ಸಿಯಂ ಕಾರ್ಬೈಡ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಿದೆ. ಈ ಕಾನೂನನ್ನು ಉಲ್ಲಂಘಿಸುವವರಿಗೆ ದಂಡ ಮಾತ್ರವಲ್ಲದೆ, ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸುವ ಅವಕಾಶವಿದೆ. ಆದರೂ ಮಾರುಕಟ್ಟೆಯಲ್ಲಿ ಇಂತಹ ಹಣ್ಣುಗಳು ಲಭ್ಯವಿರುವುದರಿಂದ ಗ್ರಾಹಕರು ಎಚ್ಚರಿಕೆ ವಹಿಸಬೇಕು. ಕೃತಕವಾಗಿ ಮಾಗಿಸಿದ ಹಣ್ಣುಗಳು ಹೊರನೋಟಕ್ಕೆ ಅತಿಯಾದ ಹಳದಿ ಅಥವಾ ಕೆಂಪು ಬಣ್ಣದಿಂದ ಕೂಡಿದ್ದರೂ, ಒಳಗೆ ಕಚ್ಚಾ ಸ್ಥಿತಿಯಲ್ಲಿರುತ್ತವೆ ಮತ್ತು ಇವುಗಳಲ್ಲಿ ಹಣ್ಣಿನ ನೈಸರ್ಗಿಕ ಪರಿಮಳವಿರುವುದಿಲ್ಲ. ಬಾಳೆಹಣ್ಣಿನ ಸಂದರ್ಭದಲ್ಲಿ ಹಣ್ಣು ಹಳದಿಯಾಗಿದ್ದರೂ ಕಾಂಡ ಮಾತ್ರ ಹಸಿರಾಗಿಯೇ ಇರುವುದು ಇವುಗಳನ್ನು ಗುರುತಿಸುವ ಸುಲಭ ಮಾರ್ಗವಾಗಿದೆ.

ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಹಣ್ಣುಗಳನ್ನು ಖರೀದಿಸುವಾಗ ಮತ್ತು ಸೇವಿಸುವಾಗ ಕೆಲವು ಮುನ್ನೆಚ್ಚರಿಕೆಗಳನ್ನು ವಹಿಸುವುದು ಜಾಣತನ. ಹಣ್ಣುಗಳನ್ನು ತಿನ್ನುವ ಮೊದಲು ನೀರಿನಲ್ಲಿ ಚೆನ್ನಾಗಿ ತೊಳೆಯಬೇಕು ಮತ್ತು ಸಾಧ್ಯವಾದಷ್ಟು ಸಿಪ್ಪೆಯನ್ನು ತೆಗೆದು ಬಳಸುವುದು ಉತ್ತಮ. ಹಂಗಾಮಿಗಿಂತ ಮೊದಲೇ ಮಾರುಕಟ್ಟೆಗೆ ಬರುವ ಹಣ್ಣುಗಳ ಬಗ್ಗೆ ಸಂಶಯವಿರಲಿ ಹಾಗೂ ವಿಶ್ವಾಸಾರ್ಹ ಮಾರಾಟಗಾರರಿಂದ ಮಾತ್ರ ಖರೀದಿ ಮಾಡಿ. ನೆನಪಿಡಿ, ಸ್ವಲ್ಪ ಜಾಗೃತಿ ಮತ್ತು ವಿವೇಚನೆಯಿಂದ ಮಾತ್ರ ನಾವು ವಿಷಕಾರಿ ಹಣ್ಣುಗಳಿಂದ ದೂರವಿದ್ದು, ಆರೋಗ್ಯಕರ ಜೀವನವನ್ನು ನಡೆಸಲು ಸಾಧ್ಯ.

ಲೇಖನ: ಡಾ ರವಿಕಿರಣ ಪಟವರ್ಧನ, ಪಟವರ್ಧನ ಆಯುರ್ವೇದ ಕ್ಲಿನಿಕ್, ಶಿರಸಿ (9242122874)

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಡಾ. ರಾಜ್ ಸಮಾಧಿ ವಿವಾದ: ನಾನು ಹೇಳಿದ ವಿಚಾರ ಸುಳ್ಳಲ್ಲ, ದಬ್ಬಾಳಿಕೆ ಒಪ್ಪಲ್ಲ ಎಂದ ಚೇತನ್ – Kannada News | Chetan Kumar Ahimsa press meet on Dr Rajkumar Samadhi controversy

ನಟ ಚೇತನ್ ಅಹಿಂಸಾ ಅವರು ಡಾ. ರಾಜ್​ಕುಮಾರ್ ಸಮಾಧಿ (Dr Rajkumar Samadhi) ಬಗ್ಗೆ ಹೇಳಿಕೆ ನೀಡಿ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ. ಅಣ್ಣಾವ್ರ ಸಮಾಧಿ ಸಲುವಾಗಿ ಸರ್ಕಾರ ಎರಡೂವರೆ ಜಾಗವನ್ನು ನೀಡಿದ್ದು ಸರಿಯಲ್ಲ ಎಂದು ಅವರು ಹೇಳಿದ್ದರು. ಆ ಹೇಳಿಕೆಗೆ ರಾಜ್ ಅಭಿಮಾನಿಗಳು ಮತ್ತು ಕನ್ನಡಪರ ಹೋರಾಟಗಾರರು ವಿರೋಧ ವ್ಯಕ್ತಪಡಿಸಿದ್ದರು. ಅಲ್ಲದೇ ಚೇತನ್ (Chetan Kumar Ahimsa) ಕ್ಷಮೆ ಕೇಳಬೇಕು ಎಂದು ಎಲ್ಲರೂ ಒತ್ತಾಯಿಸಿದ್ದರು. ಆದರೆ ಕ್ಷಮೆ ಕೇಳಿಸಲು ಬಂದವರು ತಮ್ಮ ಮೇಲೆ ದಬ್ಬಾಳಿಕೆ ಮಾಡಿದ್ದಾರೆ ಎಂದು ಚೇತನ್ ಈಗ ಗರಂ ಆಗಿದ್ದಾರೆ. ಈ ಬಗ್ಗೆ ಅವರು ಸುದ್ದಿಗೋಷ್ಠಿ ನಡೆಸಿದ್ದಾರೆ.

‘ನನ್ನ ಹೇಳಿಕೆಯಿಂದ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ. ನಾನು ಯಾರ ಭಾವನೆಗೂ ಧಕ್ಕೆ ತಂದಿಲ್ಲ. ಒಂದು ವೇಳೆ ಧಕ್ಕೆ ತಂದಿದ್ದರೆ ಕಾನೂನಿನ ಪ್ರಕಾರ ಕ್ರಮ ತೆಗೆದುಕೊಳ್ಳಿ. ಅದನ್ನು ಎದುರಿಸಲು ನಾನು ಸಿದ್ಧ. ಯಾರೇ ಬಂದು ದಬ್ಬಾಳಿಕೆ ಮಾಡುವುದು ಪ್ರಜಾಪ್ರಭುತ್ವ ಅಲ್ಲ. ನಾನು ವಿಷಾದ ವ್ಯಕ್ತಪಡಿಸಿದ್ದೇನೆ. ಹಾಗಂತ ನಾನು ಹೇಳಿದ ವಿಚಾರ ಸುಳ್ಳಲ್ಲ, ದಬ್ಬಾಳಿಕೆಯನ್ನು ನಾನು ಒಪ್ಪಲ್ಲ’ ಎಂದು ಚೇತನ್ ಅವರು ಹೇಳಿದ್ದಾರೆ.

‘ನಾನು ವಿವಾಷ ವ್ಯಕ್ತಪಡಿಸಿದ ಮಾತ್ರಕ್ಕೆ ನಾನು ಹೇಳಿದ ವಿಚಾರ ಸುಳ್ಳಾಗಲ್ಲ. ನಾನು ಹೇಳಿದ್ದರಲ್ಲಿ ಸತ್ಯ ಇದೆ. ಈಗಲೂ ನಾನು ನನ್ನ ಹೇಳಿಕೆಗೆ ಬದ್ಧನಾಗಿದ್ದೇನೆ. ಅಣ್ಣಾವ್ರು ಬದುಕಿದ್ದಾಗ ಎರಡೂವರೆ ಎಕರೆ ಜಾಗವನ್ನು ನಿಮ್ಮ ಸ್ಮಾರಕಕ್ಕೆ ನೀಡುತ್ತೇವೆ ಎಂದಿದ್ದರೆ ಅವರೇ ಬೇಡ ಅಂತ ಹೇಳುತ್ತಿದ್ದರು. ನಾನು ಪ್ರಚಾರಕ್ಕೋಸ್ಕರ ಈ ರೀತಿ ಹೇಳಿಲ್ಲ. ಇದು ವಿಚಾರಕ್ಕೋಸ್ಕರ ಮಾತ್ರ’ ಎಂದು ಚೇತನ್ ಹೇಳಿದ್ದಾರೆ.

‘ನಮಗೆ ಅಣ್ಣಾವ್ರ ಕುಟುಂಬಕ್ಕೆ ಬಗ್ಗೆ ಏನೂ ತಕರಾರು ಇಲ್ಲ. ಅವರ ಅಭಿಮಾನಿ ಬಳಗದ ಬಗ್ಗೆಯೂ ತಕರಾರು ಇಲ್ಲ. ಸರ್ಕಾರದ ಯೋಜನೆಗಳಲ್ಲಿ ಒಬ್ಬರಿಗೆ ಜಾಗ ಕೊಟ್ಟು, ಇನ್ನುಳಿದವರಿಗೆ ಕೊಟ್ಟಿಲ್ಲ ಎಂದರೆ ಚಿತ್ರರಂಗದಲ್ಲಿ ಬೇರೆ ಬೇರೆ ಸಮಸ್ಯೆಗಳು ಆಗುತ್ತವೆ. ಇರುವ ಸಮಸ್ಯೆಗೆ ಪರಿಹಾರ ಸಿಗಲ್ಲ. ಸ್ಟಾರ್ ಸಂಸ್ಕೃತಿಯನ್ನು ನಾನು ವಿರೋಧಿಸುತ್ತೇನೆ’ ಎಂದಿದ್ದಾರೆ ಚೇತನ್ ಅಹಿಂಸಾ.

ಇದನ್ನೂ ಓದಿ: ಡಾ. ರಾಜ್​ಕುಮಾರ್ ಸಮಾಧಿ ವಿವಾದ: ಕ್ಷಮೆ ಕೇಳುವಾಗ ಸತಾಯಿಸಿದ್ರಾ ನಟ ಚೇತನ್? ವಿಡಿಯೋ ನೋಡಿ

‘ಸೌಜನ್ಯದಿಂದ ಮಾತನಾಡಿದರೆ ಮಾತ್ರ ನಾನು ಬದ್ಧನಾಗಿರುತ್ತೇನೆ. ಆದರೆ ಗೂಂಡಾ ವರ್ತನೆ ಮಾಡಿದರೆ, ಮಹಿಳೆ ಬಗ್ಗೆ ನಿಂದನಾತ್ಮಕವಾಗಿ ಮಾತನಾಡಿದರೆ ಅದಕ್ಕೆ ಕಾನೂನಿನ ಕ್ರಮ ತೆಗೆದುಕೊಳ್ಳಬೇಕು. ಪೊಲೀಸರು ಇದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ನನಗೆ ಯಾರ ಮೇಲೂ ವೈಯಕ್ತಿಕ ಸೇಡು ಇಲ್ಲ. ಪ್ರಜಾಪ್ರಭುತ್ವ ಎತ್ತಿ ಹಿಡಿಯುತ್ತೇನೆ’ ಎಂದು ಚೇತನ್ ಅಹಿಂಸಾ ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Riyan Parag: ನಮ್ಮ ಸೋಲಿಗೆ ಇದೊಂದೇ ಕಾರಣ..! – Kannada News | Riyan Parag Post match interview after RR vs SRH Match

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನ 36ನೇ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ (SRH) ವಿರುದ್ಧ ರಾಜಸ್ಥಾನ್ ರಾಯಲ್ಸ್ (RR) ಸೋಲನುಭವಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ್ ರಾಯಲ್ಸ್ 228 ರನ್‌ಗಳ ಬೃಹತ್ ಮೊತ್ತವನ್ನು ಪೇರಿಸಿದರೂ ಈ ಗುರಿಯನ್ನು ಸನ್​ರೈಸರ್ಸ್ ಹೈದರಾಬಾದ್ ಸುಲಭವಾಗಿ ಚೇಸ್ ಮಾಡಿತು. ಪರಿಣಾಮ ಆರ್​ಆರ್​ ಪಡೆ 5 ವಿಕೆಟ್​ಗಳಿಂದ ಸೋಲೊಪ್ಪಿಕೊಳ್ಳಬೇಕಾಯಿತು.

ಈ ಸೋಲಿನ ಬಳಿಕ ಮಾತನಾಡಿದ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ರಿಯಾನ್ ಪರಾಗ್, ನಮ್ಮ ಪ್ರದರ್ಶನ ಚೆನ್ನಾಗಿತ್ತು, ಆದರೆ ನಾವು ಅನೇಕ ಕ್ಯಾಚ್‌ಗಳನ್ನು ಕೈಚೆಲ್ಲಿದೆವು. ಅಭಿಷೇಕ್ ಶರ್ಮಾ ಅವರಂತಹ ಗುಣಮಟ್ಟದ ಆಟಗಾರರಿಗೆ ನೀವು ಎರಡನೇ ಅವಕಾಶ ನೀಡಿದರೆ ಅವರು ಪಂದ್ಯವನ್ನು ನಮ್ಮಿಂದ ಕಸಿದುಕೊಳ್ಳುತ್ತಾರೆ.  ಮುಂದಿನ ಪಂದ್ಯಗಳಲ್ಲಿ ನಾವು ಫೀಲ್ಡಿಂಗ್‌ನಲ್ಲಿ ಹೆಚ್ಚು ಶಿಸ್ತು ಪ್ರದರ್ಶಿಸಬೇಕಿದೆ.

ನಮ್ಮ ಸೋಲಿಗೆ ಕಳಪೆ ಫೀಲ್ಡಿಂಗ್​ ಒಂದೇ ಕಾರಣ. ಈ ತಪ್ಪುಗಳನ್ನು ಸರಿ ಪಡಿಸಿಕೊಳ್ಳದಿದ್ದರೆ ಮ್ಯಾಚ್ ಗೆಲ್ಲಲು ಸಾಧ್ಯವಿಲ್ಲ.  ತಂಡದ ಫೀಲ್ಡಿಂಗ್ ತರಬೇತುದಾರ ಟ್ರೆವರ್ ಪೆನ್ನಿ ಮುಂದಿನ ಅಭ್ಯಾಸ ಅವಧಿಯಲ್ಲಿ ಆಟಗಾರರಿಗೆ ಕಠಿಣ ಸೂಚನೆ ನೀಡುವ ಸಾಧ್ಯತೆ ಇದೆ ಎಂದು ರಿಯಾನ್ ಪರಾಗ್ ಮಾರ್ಮಿಕವಾಗಿ ನುಡಿದಿದ್ದಾರೆ.

ಇನ್ನು ರಾಜಸ್ಥಾನ್ ರಾಯಲ್ಸ್  ತಂಡವು 228 ರನ್ ಗಳಿಸಿದರೂ, ಅದು ಗೆಲುವಿಗೆ ಸಾಲದು ಎಂಬುದು ಗೊತ್ತಿತ್ತು.  ನಾವು ಕನಿಷ್ಠ 10-15 ರನ್ ಕಡಿಮೆ ಗಳಿಸಿದ್ದೆವು. ಎಸ್‌ಆರ್‌ಹೆಚ್ ಬೌಲರ್‌ಗಳು 18 ಮತ್ತು 19ನೇ ಓವರ್‌ಗಳಲ್ಲಿ ಅದ್ಭುತವಾಗಿ ಯಾರ್ಕರ್ ಎಸೆದರು. ಅಲ್ಲಿ ನಾವು ರನ್ ಗಳಿಸಲು ಕಷ್ಟಪಟ್ಟೆವು. ಒಂದು ವೇಳೆ ಸ್ಕೋರ್ 240 ದಾಟಿದ್ದರೆ ಫಲಿತಾಂಶ ಬೇರೆಯೇ ಇರುತ್ತಿತ್ತು ಎಂದು ಪರಾಗ್ ಅಭಿಪ್ರಾಯಪಟ್ಟಿದ್ದಾರೆ.

ಬೌಲಿಂಗ್ ಬದಲಾವಣೆ ಮತ್ತು ಸ್ಪಿನ್ನರ್‌ಗಳ ಬಳಕೆ:

ರವಿ ಬಿಷ್ಣೋಯ್ ಅವರನ್ನು ತಡವಾಗಿ ಬೌಲಿಂಗ್‌ಗೆ ತಂದ ಬಗ್ಗೆ ಸ್ಪಷ್ಟನೆ ನೀಡಿದ ರಿಯಾನ್ ಪರಾಗ್, ಕ್ರೀಸ್‌ನಲ್ಲಿ ಎಡಗೈ ಬ್ಯಾಟರ್‌ಗಳಿದ್ದ ಕಾರಣ ನಾನು ಮತ್ತು ಡೊನೊವನ್ ಫೆರೇರಾ ವಿಕೆಟ್ ಪಡೆಯುವ ಪ್ರಯತ್ನ ಮಾಡಿದೆವು. ಅಲ್ಲದೆ ಪಿಚ್​ ಸ್ಪಿನ್ನರ್‌ಗಳಿಗೆ ಹೆಚ್ಚು ಸಹಕಾರಿಯಾಗಿರಲಿಲ್ಲ. ವೇಗಿಗಳು ವಿಕೆಟ್ ಪಡೆಯಬೇಕಾದ ಮತ್ತು ಸ್ಪಿನ್ನರ್‌ಗಳು ರನ್ ನಿಯಂತ್ರಿಸಬೇಕಾದ ಅನಿವಾರ್ಯತೆ ಇತ್ತು. ಇದು ನಾವು ಅಂದುಕೊಂಡಂತೆ ನಡೆಯದಿದ್ದರೂ, ಸನ್ನಿವೇಶಕ್ಕೆ ತಕ್ಕಂತೆ ಆ ನಿರ್ಧಾರ ಸರಿಯಾಗಿತ್ತು ಎಂದು ಸಮರ್ಥಿಸಿಕೊಂಡಿದ್ದಾರೆ.

ಇದೇ ವೇಳೆ ವೇಗಿ ಜೋಫ್ರಾ ಆರ್ಚರ್ ಅವರ ಪ್ರದರ್ಶನವನ್ನು ಶ್ಲಾಘಿಸಿದ ಪರಾಗ್, “ಈ ಇಡೀ ಸೀಸನ್‌ನಲ್ಲಿ ಆರ್ಚರ್ ಅದ್ಭುತವಾಗಿ ಬೌಲಿಂಗ್ ಮಾಡುತ್ತಿದ್ದಾರೆ.  ದುರದೃಷ್ಟವಶಾತ್ ಕೆಲವು ಟಾಪ್-ಎಡ್ಜ್‌ಗಳು ಫೀಲ್ಡರ್‌ಗಳಿಲ್ಲದ ಜಾಗದಲ್ಲಿ ಬಿದ್ದವು. ಇಲ್ಲದಿದ್ದರೆ ಅವರ ಅಂಕಿಅಂಶ ಇನ್ನು ಉತ್ತಮವಾಗಿರುತ್ತಿತ್ತು ಎಂದರು.

ಇದನ್ನೂ ಓದಿ:  RCB ತಂಡದ ಮುಂದಿನ ಪಂದ್ಯಕ್ಕೆ ಇಬ್ಬರು ಅಲಭ್ಯ?

ಮುಂದಿನ ಸವಾಲು:

ಪಂಜಾಬ್ ಕಿಂಗ್ಸ್ ವಿರುದ್ಧ ಚಂಡೀಗಢದಲ್ಲಿ ನಡೆಯಲಿರುವ ಮುಂದಿನ ಪಂದ್ಯದ ಬಗ್ಗೆ ಮಾತನಾಡುತ್ತಾ, ಪ್ರತಿ ಮೈದಾನವೂ ಹೊಸ ಸವಾಲುಗಳನ್ನು ನೀಡುತ್ತದೆ. ಚಂಡೀಗಢದ ಹೊಸ ಮಣ್ಣು ಮತ್ತು ಪಿಚ್ ಹೇಗಿರಲಿದೆ ಎಂದು ನಮಗೆ ತಿಳಿದಿಲ್ಲ. ಈ ಸೋಲಿನಿಂದ ಪಾಠ ಕಲಿತು, ಮಾನಸಿಕವಾಗಿ ರಿಫ್ರೆಶ್ ಆಗಿ ಮುಂದಿನ ಪಂದ್ಯದಲ್ಲಿ ಪುಟಿದೇಳುತ್ತೇವೆ ಎಂದು ರಿಯಾನ್  ಪರಾಗ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Published On – 1:18 pm, Sun, 26 April 26

Source link

ನೀತಿ ಆಯೋಗಕ್ಕೆ ಹೊಸ ಉಪಾಧ್ಯಕ್ಷರು; ಅಶೋಕ್ ಕುಮಾರ್ ಲಾಹಿರಿ ಯಾರು? – Kannada News | Ashok Lahiri NITI Aayog Vice Chairman: Eminent Economist to Lead Think Tank

ಪ್ರಧಾನಿ ಮೋದಿ ಜೊತೆ ನೀತಿ ಆಯೋಗ್ ನೂತನ ಉಪಾಧ್ಯಕ್ಷ ಅಶೋಕ್ ಲಾಹಿರಿImage Credit source: PTI

ನವದೆಹಲಿ, ಏಪ್ರಿಲ್ 26: ನೀತಿ ಆಯೋಗಕ್ಕೆ ಹೊಸ ಉಪಾಧ್ಯಕ್ಷರಾಗಿ (ವೈಸ್ ಛೇರ್ಮನ್) ಅಶೋಕ್ ಕುಮಾರ್ ಲಾಹಿರಿಯವರು (Ashok Kumar Lahiri) ನೇಮಕವಾಗಿದ್ದಾರೆ. ಹಾಲಿ ಉಪಾಧ್ಯಕ್ಷರಾಗಿರುವ ಸುಮನ್ ಬೆರಿ (Suman Bery) ಅವರ ಸ್ಥಾನವನ್ನು ಲಾಹಿರಿ ತುಂಬಲಿದ್ದಾರೆ. ಭಾರತ ಸರ್ಕಾರದ ನೀತಿಯನ್ನು ರೂಪಿಸುವ ಚಿಂತನ ವೇದಿಕೆಯಂತಿರುವ ನೀತಿ ಆಯೋಗ್​ನಲ್ಲಿ ಉಪಾಧ್ಯಕ್ಷ ಸ್ಥಾನ ಮಹತ್ವದ್ದು. ಪ್ರಧಾನಿಗಳು ಪದನಿಮಿತ್ತ ಅಧ್ಯಕ್ಷರಾಗಿರುತ್ತಾರೆ. ಆದರೆ, ಚಿಂತನ ಮಂಥನ, ನೀತಿ ಶಿಫಾರಸು ಇವೆಲ್ಲವೂ ಉಪಾಧ್ಯಕ್ಷರ ಕೈಯಲ್ಲಿರುತ್ತದೆ.

ಅಶೋಕ್ ಕುಮಾರ್ ಲಾಹಿರಿ ಯಾರು?

ಅಶೋಕ್ ಕುಮಾರ್ ಲಾಹಿರಿ ಅವರು ಖ್ಯಾತ ಅರ್ಥಶಾಸ್ತ್ರಜ್ಞರಾಗಿದ್ದು, ಆಡಳಿತ ಕ್ಷೇತ್ರದಲ್ಲಿ ಅಪಾರ ಅನುಭವ ಹೊಂದಿದ್ದಾರೆ. ಇವರು ಈ ಹಿಂದೆ ಭಾರತ ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರರಾಗಿ (CEA) ಸೇವೆ ಸಲ್ಲಿಸಿದ್ದಾರೆ. ಅಲ್ಲದೆ, ಪಶ್ಚಿಮ ಬಂಗಾಳದ ಬಾಲೂರಘಾಟ್ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿಯೂ ಆಯ್ಕೆಯಾಗಿದ್ದರು.

ಇದನ್ನೂ ಓದಿ: ಭಾರತದ ಫಾರೆಕ್ಸ್ ರಿಸರ್ವ್ಸ್ ಸತತ 3 ವಾರ ಏರಿಕೆ; ಒಟ್ಟು ರಿಸರ್ವ್ಸ್ 703 ಬಿಲಿಯನ್ ಡಾಲರ್

ಅವರ ಹಿನ್ನೆಲೆ ಮತ್ತು ಸಾಧನೆಗಳು

2002 ರಿಂದ 2007 ರವರೆಗೆ ವಾಜಪೇಯಿ ಮತ್ತು ಮನಮೋಹನ್ ಸಿಂಗ್ ನೇತೃತ್ವದ ಸರ್ಕಾರಗಳಲ್ಲಿ ಮುಖ್ಯ ಆರ್ಥಿಕ ಸಲಹೆಗಾರರಾಗಿ ಕಾರ್ಯನಿರ್ವಹಿಸಿದ್ದಾರೆ.

ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್ (ADB) ನಲ್ಲಿ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ. ಇವರು 15ನೇ ಹಣಕಾಸು ಆಯೋಗದ ಸದಸ್ಯರಾಗಿಯೂ ಪ್ರಮುಖ ಪಾತ್ರ ವಹಿಸಿದ್ದರು.

ದೆಹಲಿ ಸ್ಕೂಲ್ ಆಫ್ ಎಕನಾಮಿಕ್ಸ್‌ನಿಂದ ಸ್ನಾತಕೋತ್ತರ ಪದವಿ ಮತ್ತು ಪಿಎಚ್‌ಡಿ ಪಡೆದಿರುವ ಇವರು, ಆರ್ಥಿಕ ನೀತಿ ನಿರೂಪಣೆಯಲ್ಲಿ ತಜ್ಞರೆಂದು ಪರಿಗಣಿಸಲ್ಪಟ್ಟಿದ್ದಾರೆ.

ನೀತಿ ಆಯೋಗದ ಹಿಂದಿನ ಉಪಾಧ್ಯಕ್ಷರು

ನೀತಿ ಆಯೋಗವು 2015 ರಲ್ಲಿ ಸ್ಥಾಪನೆಯಾದ ನಂತರ ಈ ಕೆಳಗಿನ ಪ್ರಮುಖರು ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ:

  1. ಅರವಿಂದ್ ಪನಗರಿಯಾ: ನೀತಿ ಆಯೋಗದ ಮೊದಲ ಉಪಾಧ್ಯಕ್ಷರು (2015-2017).
  2. ರಾಜೀವ್ ಕುಮಾರ್: ಎರಡನೇ ಉಪಾಧ್ಯಕ್ಷರಾಗಿ ಸುದೀರ್ಘ ಕಾಲ ಸೇವೆ ಸಲ್ಲಿಸಿದರು (2017-2022).
  3. ಸುಮನ್ ಬೆರಿ: ಇವರು ಅಶೋಕ್ ಕುಮಾರ್ ಲಾಹಿರಿ ಅವರಿಗಿಂತ ಮೊದಲು ಈ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದರು.

ಇದನ್ನೂ ಓದಿ: ರುಪಾಯಿ ಮೌಲ್ಯ ಕುಸಿತ; ಆತಂಕ ಪಡಬೇಕಿಲ್ಲ; ದೀರ್ಘಾವಧಿ ಹೂಡಿಕೆಗೆ ಒಳ್ಳೆಯ ಅವಕಾಶ: ಸಿಇಎ ಅನಂತನಾಗೇಶ್ವರನ್

ನೀತಿ ಆಯೋಗದ ಬಗ್ಗೆ

ನೀತಿ ಆಯೋಗವು (National Institution for Transforming India) ಭಾರತ ಸರ್ಕಾರದ ನೀತಿ ನಿರೂಪಣೆಯ ‘ಥಿಂಕ್ ಟ್ಯಾಂಕ್’ ಆಗಿ ಕಾರ್ಯನಿರ್ವಹಿಸುತ್ತದೆ. ಪ್ರಧಾನಮಂತ್ರಿಯವರು ಇದರ ಪದನಿಮಿತ್ತ ಅಧ್ಯಕ್ಷರಾಗಿರುತ್ತಾರೆ ಮತ್ತು ಉಪಾಧ್ಯಕ್ಷರನ್ನು ಪ್ರಧಾನಮಂತ್ರಿಯವರೇ ನೇಮಕ ಮಾಡುತ್ತಾರೆ.

ಅಶೋಕ್ ಕುಮಾರ್ ಲಾಹಿರಿಯವರ ನೇಮಕವು ದೇಶದ ಆರ್ಥಿಕ ಯೋಜನೆಗಳು ಮತ್ತು ಸುಧಾರಣೆಗಳಿಗೆ ಹೊಸ ವೇಗ ನೀಡುವ ನಿರೀಕ್ಷೆಯಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Mann Ki Baat: ಭಾರತದ ಅಭಿವೃದ್ಧಿಗೆ ಸೌರ ಹಾಗೂ ಪವನ ಶಕ್ತಿ ಬಹಳ ಮುಖ್ಯ: ಪ್ರಧಾನಿ ಮೋದಿ – Kannada News | Mann Ki Baat Focuses on Census Drive and Buddha’s Teachings

ನವದೆಹಲಿ, ಏಪ್ರಿಲ್ 26: ಭಾರತದ ಅಭಿವೃದ್ಧಿಗೆ ಸೌರಶಕ್ತಿ ಮತ್ತು ಪವನ ಶಕ್ತಿ ಅತ್ಯಗತ್ಯ ಎಂದು ಪ್ರಧಾನಿ ನರೇಂದ್ರ ಮೋದಿ(Narendra Modi) ಹೇಳಿದ್ದಾರೆ. ನಾವು ವಿದ್ಯುತ್ ಅನ್ನು ಸಂರಕ್ಷಿಸಬೇಕು ಮತ್ತು ಸೌರ, ಪವನ ಶಕ್ತಿಯನ್ನು ಅಳವಡಿಸಿಕೊಳ್ಳಬೇಕು ಎಂದು ಮನ್​ಕಿ ಬಾತ್​ನಲ್ಲಿ ಹೇಳಿದ್ದಾರೆ.

ದಕ್ಷಿಣ ಅಮೆರಿಕದ ಚಿಲಿಯಲ್ಲಿರುವ ಒಂದು ಸಂಸ್ಥೆಯು ಭಗವಾನ್ ಬುದ್ಧನ ಬೋಧನೆಗಳನ್ನು ಪ್ರಚಾರ ಮಾಡುತ್ತಿದೆ. ಲಡಾಖ್ ಮೂಲದ ಡ್ರುಬ್ಬನ್ ಓಟ್ಜರ್ ರಿನ್‌ಪೋಚೆ ಅವರ ಮಾರ್ಗದರ್ಶನದಲ್ಲಿ ಈ ಕಾರ್ಯವನ್ನು ನಡೆಸಲಾಗುತ್ತಿದೆ ಎಂದರು. 2027ರ ಜನಗಣತಿಯನ್ನು ದೇಶದ ಅಭಿವೃದ್ಧಿಯ ದಿಕ್ಸೂಚಿ ಎಂದು ಕರೆದ ಪ್ರಧಾನಿ, ಇದು ಕೇವಲ ಸರ್ಕಾರಿ ಕೆಲಸವಲ್ಲ, ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿ ಎಂದು ಒತ್ತಿ ಹೇಳಿದರು.

ಈ ಬಾರಿ ಗಣತಿದಾರರು ಮೊಬೈಲ್ ಆಪ್ ಮೂಲಕ ಮನೆ ಮನೆಗೆ ಭೇಟಿ ನೀಡಲಿದ್ದಾರೆ.ಗಣತಿದಾರರು ಮನೆಗೆ ಬರುವ 15 ದಿನಗಳ ಮೊದಲೇ ನಾಗರಿಕರು ತಮ್ಮ ಮಾಹಿತಿಯನ್ನು ಸ್ವತಃ ಆನ್‌ಲೈನ್‌ನಲ್ಲಿ ದಾಖಲಿಸಬಹುದು. ಪ್ರಕ್ರಿಯೆ ಮುಗಿದ ನಂತರ ಸಿಗುವ ವಿಶೇಷ ಐಡಿಯನ್ನು ಸಿಬ್ಬಂದಿಗೆ ತೋರಿಸಿದರೆ ಸಾಕು.

ಅಮೆರಿಕ-ಇರಾನ್ ಯುದ್ಧದಂತಹ ಜಾಗತಿಕ ಅನಿಶ್ಚಿತತೆಗಳ ನಡುವೆ, ಪ್ರಧಾನಿ ಮೋದಿ ಅವರು ಭಗವಾನ್ ಬುದ್ಧನ ಆದರ್ಶಗಳನ್ನು ಸ್ಮರಿಸಿದರು. ಇದು ಯುದ್ಧದ ಯುಗವಲ್ಲ ಎಂದು ಪುನರುಚ್ಚರಿಸಿದ ಅವರು, ಶಾಂತಿ ಮತ್ತು ಅಹಿಂಸೆಯ ಮೂಲಕವೇ ಜಗತ್ತಿನ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು ಎಂದರು.

ಮತ್ತಷ್ಟು ಓದಿ:ಮೊದಲ ಹಂತದ ಚುನಾವಣೆ ಬಂಗಾಳದಲ್ಲಿ ಜಂಗಲ್ ರಾಜ್​ನ ಅಂತ್ಯದ ಆರಂಭ; ಪ್ರಧಾನಿ ಮೋದಿ ವಾಗ್ದಾಳಿ

ತಮಿಳುನಾಡಿನ ಕಲ್ಪಾಕಂನಲ್ಲಿರುವ ‘ಫಾಸ್ಟ್ ಬ್ರೀಡರ್ ರಿಯಾಕ್ಟರ್’ ನಿರ್ಣಾಯಕ ಹಂತವನ್ನು ತಲುಪಿರುವುದನ್ನು ಪ್ರಧಾನಿ ಶ್ಲಾಘಿಸಿದರು.”ನಮ್ಮ ಪರಮಾಣು ವಿಜ್ಞಾನಿಗಳು ಭಾರತಕ್ಕೆ ಜಾಗತಿಕ ಮಟ್ಟದಲ್ಲಿ ಕೀರ್ತಿ ತಂದಿದ್ದಾರೆ. ಇದು ನಾಗರಿಕ ಪರಮಾಣು ಪ್ರೋಗ್ರಾಮ್​ನ ಅತ್ಯಂತ ಐತಿಹಾಸಿಕ ಮೈಲಿಗಲ್ಲು ಎಂದು ವಿಜ್ಞಾನಿಗಳನ್ನು ಅಭಿನಂದಿಸಿದರು.

ನಾವು ತಂತ್ರಜ್ಞಾನದ ಅದ್ಭುತವನ್ನು ವೀಕ್ಷಿಸುತ್ತಿದ್ದೇವೆ; ಇದು ನಮ್ಮ ಭೂತಕಾಲವನ್ನು ವರ್ತಮಾನದೊಂದಿಗೆ ಸರಾಗವಾಗಿ ಸಂಪರ್ಕಿಸುತ್ತದೆ. ಈ ತಿಂಗಳ ಆರಂಭದಲ್ಲಿ ಫ್ರಾನ್ಸ್‌ನ ಬೋರ್ಡೆಕ್ಸ್‌ನಲ್ಲಿ ಯುರೋಪಿಯನ್ ಬಾಲಕಿಯರ ಗಣಿತ ಒಲಿಂಪಿಯಾಡ್ ನಡೆದಿತ್ತು, ಅಲ್ಲಿ ಭಾರತೀಯ ವಿದ್ಯಾರ್ಥಿಗಳು ಅಸಾಧಾರಣ ಪ್ರದರ್ಶನ ನೀಡಿದರು ಎಂದು ಪ್ರಧಾನಿ ಮೋದಿ ಹೇಳಿದರು. ಈ ಸ್ಪರ್ಧೆಯಲ್ಲಿ ಭಾರತೀಯ ತಂಡವು ವಿಶ್ವದಲ್ಲಿ ಆರನೇ ಸ್ಥಾನ ಪಡೆದಿದ್ದು, ಇದು ದೇಶಕ್ಕೆ ಹೆಮ್ಮೆಯ ವಿಷಯವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ‘ಬೆಂಗಳೂರು ಸೋಲ್’ ಅನಾವರಣ: ಕಲಾಪ್ರೇಮಿಗಳ ಮನಗೆದ್ದ ಜೌಮ್ ಪ್ಲೆನ್ಸಾ ಶಿಲ್ಪಕಲೆ – Kannada News | ‘Bengaluru’s Soul’: Jaume Plensa’s Stunning 16ft Sculpture Unveiled at KIA Terminal 2, Art at Bangalore Airport

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ‘ಬೆಂಗಳೂರು ಸೋಲ್’ ಅನಾವರಣ

ಬೆಂಗಳೂರು, ಏಪ್ರಿಲ್ 26: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2 (T2) ಈಗ ಮತ್ತೊಂದು ಜಾಗತಿಕ ಆಕರ್ಷಣೆಗೆ ಸಾಕ್ಷಿಯಾಗಿದೆ. ವಿಶ್ವಪ್ರಸಿದ್ಧ ಸ್ಪ್ಯಾನಿಷ್ ಕಲಾವಿದ ಜೌಮ್ ಪ್ಲೆನ್ಸಾ ಅವರು ಕೆತ್ತಿರುವ 16 ಅಡಿ ಎತ್ತರದ ‘ಬೆಂಗಳೂರಿನ ಆತ್ಮ’ (Bengaluru’s Soul) ಎಂಬ ಭವ್ಯ ಶಿಲ್ಪಕಲೆಯು ಶನಿವಾರ ಸಂಜೆ ಅನಾವರಣಗೊಂಡಿದ್ದು, ಪ್ರಯಾಣಿಕರ ಪಾಲಿಗೆ ಹೊಸ ‘ಇನ್‌ಸ್ಟಾಗ್ರಾಮ್ ಸ್ಪಾಟ್’ ಆಗಿ ಹೊರಹೊಮ್ಮಿದೆ.

ವೈವಿಧ್ಯತೆಯ ಪ್ರತಿಬಿಂಬ

ಈ ಬೃಹತ್ ಕಲಾಕೃತಿಯು ಕನ್ನಡ, ಅರೇಬಿಕ್, ಚೈನೀಸ್, ತಮಿಳು, ಕೊರಿಯನ್, ಗ್ರೀಕ್, ಹಿಂದಿ ಮತ್ತು ಲ್ಯಾಟಿನ್ ಸೇರಿದಂತೆ ವಿಶ್ವದ ವಿವಿಧ ಭಾಷೆಗಳ ಅಕ್ಷರಗಳನ್ನು ಹಾಗೂ ಗಣಿತದ ಚಿಹ್ನೆಗಳನ್ನು ಒಳಗೊಂಡಿದೆ. ಬೆಂಗಳೂರಿನ ಸಾಂಸ್ಕೃತಿಕ ವೈವಿಧ್ಯತೆ, ಸೃಜನಶೀಲತೆ ಮತ್ತು ಜಾಗತಿಕ ದೃಷ್ಟಿಕೋನಕ್ಕೆ ಈ ಶಿಲ್ಪಕಲೆಯು ಗೌರವ ಸಲ್ಲಿಸುತ್ತದೆ. ಅಕ್ಷರಗಳನ್ನು ಹೆಣೆದು ಸಿದ್ಧಪಡಿಸಿದ ಈ ವಿನ್ಯಾಸವು ನಗರದ ವೈವಿಧ್ಯತೆಯನ್ನು ಸಾರುತ್ತದೆ.

ಬಯೋಕಾನ್ ಫೌಂಡೇಶನ್ ಸಹಯೋಗ

ಬಯೋಕಾನ್ ಗ್ರೂಪ್ ಅಧ್ಯಕ್ಷೆ ಕಿರಣ್ ಮಜುಂದಾರ್-ಶಾ ಅವರ ಆಮಂತ್ರಣದ ಮೇರೆಗೆ ಜೌಮ್ ಪ್ಲೆನ್ಸಾ ಅವರು ಈ ಕಲಾಕೃತಿಯನ್ನು ರಚಿಸಿದ್ದಾರೆ. ಸಾರ್ವಜನಿಕ ಕಲೆಗಳು ನಾಗರಿಕ ಸ್ಥಳಗಳಿಗೆ ಮಾನವೀಯ ಸ್ಪರ್ಶ ನೀಡುತ್ತವೆ ಮತ್ತು ಹಂಚಿಕೆಯ ಗುರುತನ್ನು ಬೆಳೆಸುತ್ತವೆ ಎಂದು ಶಾ ಅಭಿಪ್ರಾಯಪಟ್ಟಿದ್ದಾರೆ. ಭಾರತಕ್ಕೆ ಸ್ಪೇನ್ ರಾಯಭಾರಿಯಾದ ಜುವಾನ್ ಆಂಟೋನಿಯೊ ಮಾರ್ಚ್ ಪುಜೋಲ್ ಅವರು ಈ ಕಲಾಕೃತಿಯನ್ನು ಲೋಕಾರ್ಪಣೆಗೊಳಿಸಿದರು.

ಕಲಾವಿದ ಹೇಳಿದ್ದೇನು?

ಗ್ಯಾಲರಿಗಳಿಗೆ ಭೇಟಿ ನೀಡಲು ಸಾಧ್ಯವಾಗದ ಜನಸಾಮಾನ್ಯರ ದೈನಂದಿನ ಜೀವನದಲ್ಲಿ ಸೌಂದರ್ಯವನ್ನು ತರುವ ಹಂಬಲ ನನ್ನದು ಎಂದು ಕಲಾವಿದ ಪ್ಲೆನ್ಸಾ ಹೇಳಿದ್ದಾರೆ. ಚಿಕಾಗೋ, ನ್ಯೂಯಾರ್ಕ್ ಮತ್ತು ಲಂಡನ್‌ನಂತಹ ಮಹಾನಗರಗಳಲ್ಲಿ ಕಲಾಕೃತಿಗಳನ್ನು ರಚಿಸಿರುವ ಪ್ಲೆನ್ಸಾ, ಈಗ ಬೆಂಗಳೂರಿನ ಹೆಮ್ಮೆಯ ವಿಮಾನ ನಿಲ್ದಾಣಕ್ಕೆ ತಮ್ಮ ಅದ್ಭುತ ಕೊಡುಗೆ ನೀಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 12:53 pm, Sun, 26 April 26

Source link

Exit mobile version