IND vs NAM: 6,6,6,6,6.. 24 ಎಸೆತಗಳಲ್ಲಿ 61 ಚಚ್ಚಿದ ಇಶಾನ್ ಕಿಶನ್
ನಮೀಬಿಯಾ ವಿರುದ್ಧ ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆದ 2026 ರ ಟಿ20 ವಿಶ್ವಕಪ್ನ 18ನೇ ಪಂದ್ಯದಲ್ಲಿ ಟಾಸ್ ಸೋತ ಭಾರತ ಮೊದಲು ಬ್ಯಾಟಿಂಗ್ ಮಾಡಿತು. ಅದರಂತೆ ತಂಡದ ಪರ ಸಂಜು ಸ್ಯಾಮ್ಸನ್ ಹಾಗೂ ಇಶಾನ್ ಕಿಶನ್ ಆರಂಭಿಕರಾಗಿ ಇನ್ನಿಂಗ್ಸ್ ಆರಂಭಿಸಿದರು. ಅಭಿಷೇಕ್ ಬದಲಿಯಾಗಿ ಬಂದಿದ್ದ ಸಂಜು 22 ರನ್ ಬಾರಿಸಿ ಔಟಾದರು. ಸಂಜು ವಿಕೆಟ್ ಪತನದ ಬಳಿಕ ತಂಡದ ಇನ್ನಿಂಗ್ಸ್ ನಿಭಾಯಿಸುವ ಜವಾಬ್ದಾರಿ ಹೊತ್ತ ಇಶಾನ್ ಕಿಶನ್ ಸಿಕ್ಸರ್ಗಳ ಮಳೆ ಸುರಿಸಲಾರಂಭಿಸಿದರು. ಇದರ ಪರಿಣಾಮವಾಗಿ ಕಿಶನ್…