Headlines

ದೆಹಲಿಯಲ್ಲಿ ಟೇಕ್ ಆಫ್ ವೇಳೆ ಸ್ವಿಸ್ ಏರ್ ವಿಮಾನದ ಎಂಜಿನ್ ವಿಫಲ, ಕಾಣಿಸಿಕೊಂಡ ಬೆಂಕಿ, ಆರು ಪ್ರಯಾಣಿಕರಿಗೆ ಗಾಯ – Kannada News | Engine Failure Sparks Fire on Swiss Air Flight at Delhi Airport

ನವದೆಹಲಿ, ಏಪ್ರಿಲ್ 26: ನವದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾನುವಾರ ಮುಂಜಾನೆ ಸಂಭವಿಸಬಹುದಾಗಿದ್ದ ಭಾರಿ ವಿಮಾನ(Flight) ದುರಂತವೊಂದು ಪೈಲಟ್‌ಗಳ ಸಮಯಪ್ರಜ್ಞೆಯಿಂದ ತಪ್ಪಿದೆ. ಜ್ಯೂರಿಚ್‌ಗೆ ಹೊರಟಿದ್ದ ಸ್ವಿಸ್ ಏರ್ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ಪ್ರಯಾಣಿಕರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ. ದೆಹಲಿಯಿಂದ ಜ್ಯೂರಿಚ್‌ಗೆ ಹೊರಟಿದ್ದ ಸ್ವಿಸ್ ಇಂಟರ್‌ನ್ಯಾಷನಲ್ ಏರ್ ಲೈನ್ಸ್ (LX147) ವಿಮಾನವು ಭಾನುವಾರ ಮುಂಜಾನೆ ರನ್‌ವೇಯಲ್ಲಿ ಓಡುತ್ತಿದ್ದಾಗ ತಾಂತ್ರಿಕ ಸಂಕಷ್ಟಕ್ಕೆ ಸಿಲುಕಿತು. ಎಂಜಿನ್‌ನಲ್ಲಿ ಕಾಣಿಸಿಕೊಂಡ ದೋಷದಿಂದಾಗಿ ವಿಮಾನ ನಿಲ್ದಾಣದಲ್ಲಿ ಸಂಪೂರ್ಣ ತುರ್ತು ಪರಿಸ್ಥಿತಿ ಘೋಷಿಸಲಾಯಿತು. ವಿಮಾನವು…

Read More

ನಡುರಸ್ತೆಯಲ್ಲಿ ಒಂಟಿ‌ ಕೋರೆ‌ ಸಲಗದ ಬಿಂದಾಸ್ ವಾಕ್!

ಚಿಕ್ಕಮಗಳೂರು, ಏಪ್ರಿಲ್ 26: ಮಲೆನಾಡು ಪ್ರದೇಶದಲ್ಲಿ ಕಾಡಾನೆಗಳ ಉಪಟಳ ದಿನೇದಿನೇ ಹೆಚ್ಚುತ್ತಿದ್ದು, ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಗಡಿ ಭಾಗದಲ್ಲಿ ಮತ್ತೊಮ್ಮೆ ಆತಂಕದ ವಾತಾವರಣ ನಿರ್ಮಾಣವಾಗಿದೆ. ವಗಡೆ ಶಾಲೆ ಸಮೀಪ ಒಂಟಿ ಕೋರೆ ಸಲಗ ರಸ್ತೆ ಮೇಲೆ ಬಿಂದಾಸ್ ಸಂಚಾರ ನಡೆಸಿ, ಜನರಲ್ಲಿ ಭೀತಿ ಉಂಟುಮಾಡಿದೆ. ದೇವನಗೂಲ್ ಹಾಗೂ ವಗಡೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಈ ಆನೆ ಓಡಾಡುತ್ತಿರುವುದು ಸ್ಥಳೀಯರ ನಿದ್ರೆ ಕೆಡಿಸಿದೆ. ಅಲ್ಲದೆ ಆನೆ ಜನವಸತಿ ಪ್ರದೇಶಗಳತ್ತ ಬರುತ್ತಿರುವ ಹಿನ್ನೆಲೆಯಲ್ಲಿ ಜೀವಭಯ ಹೆಚ್ಚಾಗಿದೆ. ಕೂಡಲೇ ಈ ಕೋರೆ…

Read More

ಬರಿದಾದ ಹಿರೇಹಳ್ಳ ಜಲಾಶಯ: ಖಾಲಿ ಡ್ಯಾಂ ಮಕ್ಕಳಿಗೀಗ ಕ್ರಿಕೆಟ್​​ ಮೈದಾನ! – Kannada News | Dry Hirehalla Reservoir Turns into Cricket Ground for Children in Koppal

ಕೊಪ್ಪಳ, ಏಪ್ರಿಲ್​​ 26: ಮುದ್ಲಾಪೂರ ಬಳಿಯ ಹಿರೇಹಳ್ಳ ಜಲಾಶಯ ಸಂಪೂರ್ಣವಾಗಿ ಬತ್ತಿದ್ದು, ನೀರಿಲ್ಲದೆ ಭಣಗುಡುತ್ತಿದೆ. ಬರಿದಾಗಿರುವ 1.67 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯದ ಜಲಾಶಯ‌ವನ್ನೇ ಮಕ್ಕಳು, ಯುವಕರು ಆಟದ ಮೈದಾನ ಮಾಡಿಕೊಂಡು ಕ್ರಿಕೆಟ್​​ ಆಡುತ್ತಿದ್ದಾರೆ. ಹತ್ತು ವರ್ಷಗಳ ನಂತರ ಜಲಾಶಯ ಬರಿದಾಗಿದ್ದು, ಕೇವಲ ಶೇ.20ರಷ್ಟು ನೀರು ಮಾತ್ರ ಉಳಿದಿದೆ. ಇನ್ನೊಂದು ತಿಂಗಳು‌ ಕಳೆದರೆ ಹನಿ ನೀರು ಕೂಡ ಜಲಾಶಯದಲ್ಲಿ ಸಿಗದ ಸ್ಥಿತಿ ತಲುಪಲಿದೆ. ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ. Source link

Read More

VIDEO: ಅಭಿಷೇಕ್ ಶರ್ಮಾ ಕೈ ಹಿಡಿದು ಎಳೆದ ಯುವತಿ! – Kannada News | IPL 2026: Abhishek Sharma Hand Held by Girl at Jaipur Hotel

ಐಪಿಎಲ್ ಕ್ರೇಝ್ ಎಷ್ಟೋ ಬಾರಿ ಅಭಿಮಾನದ ಗಡಿ ಮೀರಿ ಅತಿರೇಕಕ್ಕೆ ಸಾಕ್ಷಿಯಾಗುತ್ತದೆ. ಇದಕ್ಕೆ ಲೇಟೆಸ್ಟ್ ಉದಾಹರಣೆ ಎಂಬಂತೆ, ಸನ್ ರೈಸರ್ಸ್ ಹೈದರಾಬಾದ್ ತಂಡದ ಸ್ಟಾರ್ ಆಲ್ ರೌಂಡರ್ ಅಭಿಷೇಕ್ ಶರ್ಮಾ ಅವರು ಜೈಪುರದ ಹೋಟೆಲ್‌ನಲ್ಲಿ ಅಭಿಮಾನಿಯೊಬ್ಬರ ಅನಿರೀಕ್ಷಿತ ವರ್ತನೆಯಿಂದ ಮುಜುಗರಕ್ಕೊಳಗಾಗಿದ್ದಾರೆ. ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯಕ್ಕೂ ಮುನ್ನ ನಡೆದ ಈ ಘಟನೆ ಈಗ ಕ್ರಿಕೆಟ್ ವಲಯದಲ್ಲಿ ಆಟಗಾರರ ಭದ್ರತೆಯ ಬಗ್ಗೆ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ. ನಡೆದಿದ್ದೇನು? ಏಪ್ರಿಲ್ 25ರಂದು ಸವಾಯಿ ಮಾನ್​ಸಿಂಗ್ ಸ್ಟೇಡಿಯಂನಲ್ಲಿ ರಾಜಸ್ಥಾನ್ ರಾಯಲ್ಸ್ ಹಾಗೂ…

Read More

Vaibhav Suryavamshi: ಮೈದಾನದಲ್ಲೇ ಕಣ್ಣೀರಿಟ್ಟ ವೈಭವ್ ಸೂರ್ಯವಂಶಿ – Kannada News | Vaibhav Suryavanshi burst into tears on the field after scoring a century against Sunrisers Hyderabad

ಬೆಂಗಳೂರು (ಏ. 26): ಇಂಡಿಯನ್ ಪ್ರೀಮಿಯರ್ ಲೀಗ್ 2026 ರಲ್ಲಿ (Indian Premier League) ಶನಿವಾರ ನಡೆದ ಎರಡೂ ಪಂದ್ಯವು ರಣರೋಚಕವಾಗಿತ್ತು. ಸವಾಯಿ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ನಡೆದ ದ್ವಿತೀಯ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಊಹಿಸಲೂ ಸಾಧ್ಯವಿಲ್ಲದ ಘಟನೆ ನಡೆಯಿತು. ರಾಜಸ್ಥಾನ ರಾಯಲ್ಸ್ ತಂಡದ 15 ವರ್ಷದ ಓಪನರ್ ವೈಭವ್ ಸೂರ್ಯವಂಶಿ ತಮ್ಮ ಬ್ಯಾಟಿಂಗ್ ಮೂಲಕ ಶತಕ ಗಳಿಸಿ, ಇಡೀ ಕ್ರಿಕೆಟ್ ಜಗತ್ತಿಗೇ ಶಾಕ್ ಕೊಟ್ಟರು. ಇದರ ಜೊತೆಗೆ ಇವರು ಮೈದಾನದಲ್ಲೇ ಕಣ್ಣೀರಿಟ್ಟ ಘಟನೆಯೂ ನಡೆಯಿತು. ಮೈದಾನದಲ್ಲಿ…

Read More

ಡ್ರಗ್ಸ್ ಪ್ರಕರಣದಲ್ಲಿ ಶ್ರದ್ಧಾ ಕಪೂರ್, ನೋರಾ ಫತೇಹಿಗೆ ಬಿಗ್ ರಿಲೀಫ್; ಪೊಲೀಸರಿಗೆ ಸಿಗಲೇ ಇಲ್ಲ ಸಾಕ್ಷಿ – Kannada News | Police find no evidence against Shraddha Kapoor Nora Fatehi in 2022 drugs case

ಬಾಲಿವುಡ್ ನಟಿಯರಾದ ಶ್ರದ್ಧಾ ಕಪೂರ್ (Shraddha Kapoor) ಮತ್ತು ನೋರಾ ಫತೇಹಿ ಅವರಿಗೆ ಬಹುದಿನಗಳ ಕಾಲ ತಲೆನೋವಾಗಿದ್ದ 2022ರ ಡ್ರಗ್ಸ್ ಪ್ರಕರಣದಲ್ಲಿ ಬಿಗ್ ರಿಲೀಫ್ ಸಿಕ್ಕಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇವರ ವಿರುದ್ಧ ಯಾವುದೇ ಸಾಕ್ಷ್ಯಾಧಾರಗಳು ಲಭ್ಯವಾಗಿಲ್ಲ ಎನ್ನಲಾಗುತ್ತಿದೆ. ಮುಂಬೈ ಪೊಲೀಸರು ಸಿದ್ಧಪಡಿಸುತ್ತಿರುವ ಪೂರಕ ದೋಷಾರೋಪ ಪಟ್ಟಿಯಲ್ಲಿ ಕೇವಲ ನಟಿಯರಷ್ಟೇ ಅಲ್ಲದೆ, ಸೋಷಿಯಲ್ ಮೀಡಿಯಾ ಸ್ಟಾರ್ ಓರಿ, ನಟ ಸಿದ್ದಾಂತ್ ಕಪೂರ್ ಮತ್ತು ರಾಜಕಾರಣಿ ಜೀಶನ್ ಸಿದ್ದಿಕಿ ಅವರಿಗೂ ಕ್ಲೀನ್ ಚಿಟ್ (Clean Chit) ಸಿಗುವ ಸಾಧ್ಯತೆಯಿದೆ…

Read More

ಫ್ಲೈ 91 ವಿಮಾನಕ್ಕೆ ಮತ್ತೆ ಲ್ಯಾಂಡಿಂಗ್​​ ಸಮಸ್ಯೆ: ವಾರ ಕಳೆಯುವುದರ ಒಳಗೆ ಹುಬ್ಬಳ್ಳಿಯಲ್ಲಿ ಮೂರನೇ ಘಟನೆ – Kannada News | Fly91 Hubballi Landing Problems: Third Incident in a Week Raises Safety Concerns

ಹುಬ್ಬಳ್ಳಿ, ಏಪ್ರಿಲ್​​ 26: ಕಳೆದ ಒಂದು ವಾರದ ಅವಧಿಯಲ್ಲಿ ಮೂರನೇ ಬಾರಿಗೆ ಫ್ಲೈ 91 ವಿಮಾನಕ್ಕೆ ಹುಬ್ಬಳ್ಳಿಯಲ್ಲಿ ಲ್ಯಾಂಡಿಂಗ್​​ ಸಮಸ್ಯೆ ಉಂಟಾಗಿದೆ. ನಿನ್ನೆ ಮಧ್ಯಾಹ್ನ 3.13ಕ್ಕೆ ಹೈದರಾಬಾದ್​​ನಿಂಗ ಹೊರಟಿದ್ದ ವಿಮಾನ ಸಂಜೆ 4.30ಕ್ಕೆ ಹುಬ್ಬಳ್ಳಿಯಲ್ಲಿ ಲ್ಯಾಂಡ್ ಆಗಬೇಕಿತ್ತು. ಆದರೆ ಹವಾಮಾನ ವೈಪರಿತ್ಯ ಹಿನ್ನೆಲೆಯಲ್ಲಿ ಆಗಸದಲ್ಲಿಯೇ ಕೆಲ ಸಮಯ ವಿಮಾನ ಸುತ್ತುಹೊಡೆದಿದೆ. ಅಂತಿಮವಾಗಿ ನಲವತ್ತು ನಿಮಿಷಗಳ ಕಾಲ ಆಕಾಶದಲ್ಲಿ ಹಾರಾಡಿ ಸಂಜೆ 5.09ಕ್ಕೆ ಫ್ಲೈ 91 ಸಂಸ್ಥೆಯ ಜಿಒಎ 3401 ಪ್ಲೈಟ್ ಲ್ಯಾಂಡ್​​ ಆಗಿದೆ. ಅಷ್ಟಕ್ಕೂ ಫ್ಲೈ 91…

Read More

ಬೀದಿ ನಾಯಿಯ ಮೇಲೆ ಮಚ್ಚಿನಿಂದ ಹಲ್ಲೆ! ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆ – Kannada News | Cruelty in Bengaluru: Coconut Seller Attacks Stray Dog with Machete in K.R. Puram; Brutal Act Caught on CCTV

ಬೆಂಗಳೂರು, ಏಪ್ರಿಲ್ 26: ನಗರದ ಕೆ.ಆರ್. ಪುರಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬೀದಿ ನಾಯಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆದ ಘಟನೆ ಬೆಳಕಿಗೆ ಬಂದಿದೆ. ನಿನ್ನೆ(ಏ.25) ಬೆಳಿಗ್ಗೆ 8.30ರ ಸುಮಾರಿಗೆ ಎಳೆನೀರು ವ್ಯಾಪಾರಿಯೊಬ್ಬನು ಮಚ್ಚಿನಿಂದ ನಾಯಿಯ ಮೇಲೆ ದಾಳಿ ಮಾಡಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಹಿರಿಯ ನಾಗರಿಕರೊಬ್ಬರು ಸಾಕಿಕೊಂಡಿದ್ದ ಈ ಬೀದಿ ನಾಯಿಯಿಂದ ತೊಂದರೆ ಉಂಟಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ವ್ಯಾಪಾರಿ, ಎಳೆನೀರು ಕೊಚ್ಚುವ ಮಚ್ಚಿನಿಂದ ಕ್ರೂರವಾಗಿ ಹಲ್ಲೆ ನಡೆಸಿದ್ದಾನೆ. ಘಟನೆಯಿಂದ ಸ್ಥಳೀಯರಲ್ಲಿ ಆಕ್ರೋಶ ವ್ಯಕ್ತವಾಗಿದೆ. ವಿಕಾಸ್…

Read More

ನಾವು ಸೋಲಲು ಅರ್ಹರಾಗಿದ್ದೆವು… ಅಕ್ಷರ್ ಪಟೇಲ್ ಅಚ್ಚರಿಯ ಹೇಳಿಕೆ – Kannada News | Axar patel post match interview after Dc vs Pbks match 2026

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​​ನ 35ನೇ ಪಂದ್ಯವು ಐತಿಹಾಸಿಕ ಚೇಸಿಂಗ್​ಗೆ ಸಾಕ್ಷಿಯಾಗಿತ್ತು. ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು 20 ಓವರ್​ಗಳಲ್ಲಿ 264 ರನ್ ಕಲೆಹಾಕಿದ್ದರು. ಈ ಕಠಿಣ ಗುರಿಯನ್ನು ಪಂಜಾಬ್ ಕಿಂಗ್ಸ್ 18.5 ಓವರ್​ಗಳಲ್ಲಿ ಚೇಸ್ ಮಾಡಿ ಅಮೋಘ ಜಯ ಸಾಧಿಸಿತು. ಈ ಸೋಲಿನ ಬಳಿಕ ಮಾತನಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ಅಕ್ಷರ್ ಪಟೇಲ್, ತಂಡದ ಕಳಪೆ ಫೀಲ್ಡಿಂಗ್ ಮತ್ತು ಬೌಲಿಂಗ್…

Read More

Gold Rates: ಚಿನ್ನದ ಬೆಲೆ 10 ದಿನದಲ್ಲಿ 140 ರೂ ಇಳಿಕೆ; ಇಲ್ಲಿದೆ ದರಪಟ್ಟಿ – Kannada News | Gold Price Today on 26th April 2026, Gold And Silver Rates In Bengaluru, Delhi, Mumbai | Latest News in Kannada

ಬೆಂಗಳೂರು, ಏಪ್ರಿಲ್ 26: ಚಿನ್ನ ಮತ್ತು ಬೆಳ್ಳಿ ಬೆಲೆಗಳು ಕಳೆದ ಕೆಲ ವಾರಗಳಿಂದ ಬಾರಿ ಬಾರಿ ಏರಿಳಿತಗಳನ್ನು ಕಾಣುತ್ತಿವೆ. ಚಿನ್ನದ ಬೆಲೆ (Gold Rates) ಈ ವಾರಾಂತ್ಯದಲ್ಲಿ 100 ರೂ ಏರಿಕೆಯಾದರೂ ಕಳೆದ 10 ದಿನದಲ್ಲಿ ಗ್ರಾಮ್​ಗೆ 140 ರೂನಷ್ಟು ಕಡಿಮೆ ಆಗಿದೆ. 14,260 ರೂನಿಂದ 14,120 ರೂಗೆ ಇಳಿದಿದೆ. ಬೆಳ್ಳಿ ಬೆಲೆ ಗ್ರಾಮ್​ಗೆ 5 ರೂ ಮಾತ್ರ ಕಡಿಮೆ ಆಗಿದೆ. ವಿದೇಶಗಳಲ್ಲೂ ಇದೇ ಟ್ರೆಂಡ್ ಇದೆ. ಕಳೆದ ಕೆಲ ವಾರಗಳ ಹಿಂದಕ್ಕೆ ಹೋಲಿಸಿದರೆ ಅಲ್ಲಿ ಚಿನ್ನ,…

Read More