ಬೆಂಗಳೂರು ವಿಮಾನ ನಿಲ್ದಾಣದಲ್ಲಿ ‘ಬೆಂಗಳೂರು ಸೋಲ್’ ಅನಾವರಣ: ಕಲಾಪ್ರೇಮಿಗಳ ಮನಗೆದ್ದ ಜೌಮ್ ಪ್ಲೆನ್ಸಾ ಶಿಲ್ಪಕಲೆ – Kannada News | ‘Bengaluru’s Soul’: Jaume Plensa’s Stunning 16ft Sculpture Unveiled at KIA Terminal 2, Art at Bangalore Airport
ಬೆಂಗಳೂರು ವಿಮಾನ ನಿಲ್ದಾಣದಲ್ಲಿ ‘ಬೆಂಗಳೂರು ಸೋಲ್’ ಅನಾವರಣ ಬೆಂಗಳೂರು, ಏಪ್ರಿಲ್ 26: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2 (T2) ಈಗ ಮತ್ತೊಂದು ಜಾಗತಿಕ ಆಕರ್ಷಣೆಗೆ ಸಾಕ್ಷಿಯಾಗಿದೆ. ವಿಶ್ವಪ್ರಸಿದ್ಧ ಸ್ಪ್ಯಾನಿಷ್ ಕಲಾವಿದ ಜೌಮ್ ಪ್ಲೆನ್ಸಾ ಅವರು ಕೆತ್ತಿರುವ 16 ಅಡಿ ಎತ್ತರದ ‘ಬೆಂಗಳೂರಿನ ಆತ್ಮ’ (Bengaluru’s Soul) ಎಂಬ ಭವ್ಯ ಶಿಲ್ಪಕಲೆಯು ಶನಿವಾರ ಸಂಜೆ ಅನಾವರಣಗೊಂಡಿದ್ದು, ಪ್ರಯಾಣಿಕರ ಪಾಲಿಗೆ ಹೊಸ ‘ಇನ್‌ಸ್ಟಾಗ್ರಾಮ್ ಸ್ಪಾಟ್’ ಆಗಿ ಹೊರಹೊಮ್ಮಿದೆ. ವೈವಿಧ್ಯತೆಯ ಪ್ರತಿಬಿಂಬ ಈ ಬೃಹತ್ ಕಲಾಕೃತಿಯು ಕನ್ನಡ, ಅರೇಬಿಕ್,…