35 ವರ್ಷಕ್ಕಿಂತ ಕಡಿಮೆ ವಯಸ್ಸಿನವರಲ್ಲಿ ಮಾನಸಿಕ ಕಾಯಿಲೆ ಹೆಚ್ಚಾಗುತ್ತಿರುವುದಕ್ಕೆ ಕಾರಣವೇನು? – Kannada News | Youth Mental Health: 60% of Disorders Diagnosed in India

ದೇಹಕ್ಕೆ ಬಂದ ರೋಗವನ್ನು ಗುಣಪಡಿಸಬಹುದು ಆದರೆ ಮನಸ್ಸಿಗಾದ ನೋವನ್ನು ವಾಸಿ ಮಾಡಲು ಮಾತ್ರೆ, ಔಷಧಗಳಿಂದ ಸಾಧ್ಯವಿಲ್ಲ. ಅದರಲ್ಲಿಯೂ ಇತ್ತೀಚಿನ ದಿನಗಳಲ್ಲಿ ಮಾನಸಿಕ ಕಾಯಿಲೆಗಳಿಗೆ ಸಂಬಂಧ ಪಟ್ಟ ಪ್ರಕರಣಗಳು ಹೆಚ್ಚಾಗುತ್ತಿದ್ದು, ಜನ ಎಚ್ಛೆತ್ತುಕೊಳ್ಳುವುದು ಬಹಳ ಅನಿವಾರ್ಯವಾಗಿದೆ. ಈ ಬಗ್ಗೆ ಅನೇಕ ರೀತಿಯ ಸಂಶೋಧನೆಗಳು ಕೂಡ ನಡೆದಿದ್ದು, ಭಾರತೀಯ ಮನೋವೈದ್ಯಕೀಯ ಸಂಘದ ದತ್ತಾಂಶದ ಪ್ರಕಾರ, ಭಾರತದಲ್ಲಿ ಶೇಕಡ 60 ರಷ್ಟು ಮಾನಸಿಕ ಕಾಯಿಲೆಗಳು 35 ವರ್ಷಕ್ಕಿಂತ ಕಡಿಮೆ ವಯಸ್ಸಿನವರಲ್ಲಿ ಕಂಡುಬರುತ್ತಿದೆ ಎಂಬ ಆಘಾತಕಾರಿ ಅಂಶವನ್ನು ಹೊರಹಾಕಿದೆ. ಅದರ ಡೇಟಾವನ್ನು ಮಾಲಿಕ್ಯುಲರ್ ಸೈಕಿಯಾಟ್ರಿ ಜರ್ನಲ್‌ನಲ್ಲಿ ಪ್ರಕಟಿಸಲಾಗಿದೆ. ಹಾಗಾದರೆ ಚಿಕ್ಕ ವಯಸ್ಸಿನಲ್ಲಿಯೇ ಮಾನಸಿಕ ಆರೋಗ್ಯ (Mental Health) ಕ್ಷೀಣಿಸುವುದಕ್ಕೆ ಕಾರಣವೇನು, ಮಾನಸಿಕ ಆರೋಗ್ಯವನ್ನು ಸುಧಾರಿಸಿಕೊಳ್ಳಲು ಏನು ಮಾಡಬಹುದು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಸಂಶೋಧನೆಯಿಂದ ತಿಳಿದು ಬಂದ ಮಾಹಿತಿ ಪ್ರಕಾರ, ಶೇಕಡ 34.6 ರಷ್ಟು ಮಾನಸಿಕ ಅಸ್ವಸ್ಥತೆಗಳು 14 ವರ್ಷಕ್ಕಿಂತ ಮೊದಲು, ಶೇಕಡ 48.4 ರಷ್ಟು 18 ವರ್ಷಕ್ಕಿಂತ ಮೊದಲು ಮತ್ತು ಶೇಕಡ 62.5 ರಷ್ಟು 25 ವರ್ಷ ವಯಸ್ಸಿನೊಳಗೆ ಪ್ರಾರಂಭವಾಗುತ್ತವೆ. ಇನ್ನು, ಹೆಚ್ಚಿನ ರೋಗಿಗಳಿಗೆ ಮಾನಸಿಕ ಅಸ್ವಸ್ಥತೆಯು ಪ್ರೌಢಾವಸ್ಥೆಗೆ ಮುಂಚೆಯೇ ಪ್ರಾರಂಭವಾಗುತ್ತದೆ ಮತ್ತು ಕ್ರಮೇಣ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಜೊತೆಗೆ 25 ವರ್ಷ ವಯಸ್ಸಿನವರಲ್ಲಿ ಗಮನ ಕೊರತೆಯ ಹೈಪರ್ಆಕ್ಟಿವಿಟಿ ಡಿಸಾರ್ಡರ್ (ADHD), ಆತಂಕ ಮತ್ತು ಅಸ್ವಸ್ಥತೆ ಕಂಡುಬಂದಿರುವ ಹೆಚ್ಚಿನ ಪ್ರಕರಣಗಳು ವರದಿಯಾಗಿವೆ ಎಂದು ತಜ್ಞರು ಹೇಳಿದ್ದಾರೆ. ಖಿನ್ನತೆಯ ಪ್ರಕರಣಗಳು ಸಹ ಮೊದಲಿಗಿಂತ ಚಿಕ್ಕ ವಯಸ್ಸಿನಲ್ಲಿಯೇ ಪ್ರಾರಂಭವಾಗುತ್ತಿದ್ದು ಸರಿಯಾಗಿ ಚಿಕಿತ್ಸೆ ಪಡೆಯದಿದ್ದರೆ ಅವು ಗಂಭೀರ ಸಮಸ್ಯೆಯಾಗಬಹುದು.

ಚಿಕ್ಕ ವಯಸ್ಸಿನಲ್ಲಿಯೇ ಮಾನಸಿಕ ಆರೋಗ್ಯ ಕ್ಷೀಣಿಸುವುದಕ್ಕೆ ಕಾರಣವೇನು?

ಸಾಮಾನ್ಯವಾಗಿ ನಮ್ಮ ದೇಶದಲ್ಲಿ ಚಿಕ್ಕ ವಯಸ್ಸಿನಲ್ಲಿಯೇ ಮಾನಸಿಕ ಕಾಯಿಲೆಗಳು ಹೆಚ್ಚಾಗುವುದಕ್ಕೆ ಸಕಾಲಿಕ ಚಿಕಿತ್ಸೆಯ ಕೊರತೆ ಮತ್ತು ಈ ಪರಿಸ್ಥಿತಿಗಳ ಬಗ್ಗೆ ಸಾಕಷ್ಟು ಅರಿವು ಇಲ್ಲದಿರುವುದೇ ಮುಖ್ಯ ಕಾರಣವಾಗಿದೆ. ಹದಿಹರೆಯದಲ್ಲಿ ಪ್ರಾರಂಭವಾಗುವ ಮಾನಸಿಕ ಅಸ್ವಸ್ಥತೆಗಳಿಗೆ ಚಿಕಿತ್ಸೆ ನೀಡದಿದ್ದರೆ, ಜೀವನದುದ್ದಕ್ಕೂ ಇದು ಮಹಾಮಾರಿಯಾಗಿ ಬೆನ್ನಿಗಿರುತ್ತದೆ. ಇದು ವ್ಯಕ್ತಿಯ ಮೇಲೆ ಮಾತ್ರವಲ್ಲದೆ ಅವರ ಕುಟುಂಬದ ಮೇಲೂ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಾಗಿರುತ್ತದೆ.

ಇದನ್ನೂ ಓದಿ: 30 ರಿಂದ 35 ನೇ ವಯಸ್ಸಿನಲ್ಲಿ ಬಿಪಿ ಬರುವುದನ್ನು ತಡೆಯಲು ಈ ಟ್ರಿಕ್ಸ್ ಪಾಲಿಸಿ ನೋಡಿ!

ಮಾನಸಿಕ ಆರೋಗ್ಯ ಹಾಳಾಗದಂತೆ ನೋಡಿಕೊಳ್ಳುವುದು ಹೇಗೆ?

  • ಪ್ರತಿದಿನ ಒಂದೇ ಸಮಯಕ್ಕೆ ಮಲಗಿ ಏಳುವ ಅಭ್ಯಾಸವನ್ನು ಪ್ರಾರಂಭಿಸಿಕೊಳ್ಳಬೇಕು.
  • ಪ್ರತಿದಿನ ವ್ಯಾಯಾಮ ಮತ್ತು ಯೋಗಾಭ್ಯಾಸ ಮಾಡಿ.
  • ಆದಷ್ಟು ಸಾಮಾಜಿಕ ಮಾಧ್ಯಮಗಳ ಬಳಕೆಯನ್ನು ಕಡಿಮೆ ಮಾಡಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

CBI Recruitment 2026: ಸೆಂಟ್ರಲ್ ಬ್ಯಾಂಕ್​ನಲ್ಲಿ 350 ಹುದ್ದೆಗೆ ನೇಮಕಾತಿ; ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ – Kannada News | Central Bank of India SO Recruitment 2026: Last Date Extended for 350 Posts!

ಬ್ಯಾಂಕಿಂಗ್ ವಲಯದಲ್ಲಿ ವೃತ್ತಿಜೀವನ ಆರಂಭಿಸಲು ಬಯಸುವ ಯುವಜನರಿಗೆ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಉತ್ತಮ ಅವಕಾಶವನ್ನು ಒದಗಿಸಿದೆ. 2026ರ ಸ್ಪೆಷಲಿಸ್ಟ್ ಆಫೀಸರ್ (SO) ನೇಮಕಾತಿ ಪ್ರಕ್ರಿಯೆಯಡಿಯಲ್ಲಿ ಒಟ್ಟು 350 ಹುದ್ದೆಗಳಿಗಾಗಿ ಅರ್ಜಿ ಸಲ್ಲಿಸುವ ಅಂತಿಮ ದಿನಾಂಕವನ್ನು ಬ್ಯಾಂಕ್ ವಿಸ್ತರಿಸಿದೆ. ಮೊದಲಿಗೆ ಫೆಬ್ರವರಿ 3ಕ್ಕೆ ನಿಗದಿಯಾಗಿದ್ದ ಅರ್ಜಿ ಸಲ್ಲಿಕೆಯ ಗಡುವನ್ನು ಇದೀಗ ಫೆಬ್ರವರಿ 15 ರವರೆಗೆ ಮುಂದೂಡಲಾಗಿದೆ. ಇದರಿಂದ ಇನ್ನೂ ಅರ್ಜಿ ಸಲ್ಲಿಸದ ಅಭ್ಯರ್ಥಿಗಳಿಗೆ ಮತ್ತೊಂದು ಅವಕಾಶ ದೊರಕಿದೆ.

ಈ ನೇಮಕಾತಿ ಅಭಿಯಾನದಡಿಯಲ್ಲಿ ಮಾರ್ಕೆಟಿಂಗ್ ಮತ್ತು ವಿದೇಶಿ ವಿನಿಮಯ (ಫಾರಿನ್ ಎಕ್ಸ್‌ಚೇಂಜ್) ವಿಭಾಗಗಳಲ್ಲಿ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಮಾರ್ಕೆಟಿಂಗ್ ಆಫೀಸರ್ (ಸ್ಕೇಲ್–I) ಹುದ್ದೆಗಳಿಗೆ 300 ಸ್ಥಾನಗಳು ಲಭ್ಯವಿದ್ದು, ವಿದೇಶಿ ವಿನಿಮಯ ಅಧಿಕಾರಿ (ಸ್ಕೇಲ್–III) ಹುದ್ದೆಗಳಿಗೆ 50 ಸ್ಥಾನಗಳು ಮೀಸಲಾಗಿವೆ. ಈ ಎಲ್ಲಾ ನೇಮಕಾತಿಗಳು ನಿಯಮಿತವಾಗಿದ್ದು, ಆಯ್ಕೆಯಾದ ಅಭ್ಯರ್ಥಿಗಳಿಗೆ ಬ್ಯಾಂಕಿನ ನಿಯಮಾನುಸಾರ ವೇತನ ಮತ್ತು ಇತರೆ ಭತ್ಯೆಗಳು ಲಭ್ಯವಾಗುತ್ತವೆ.

ಮಾರ್ಕೆಟಿಂಗ್ ಆಫೀಸರ್ ಹುದ್ದೆಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಯಾವುದೇ ವಿಷಯದಲ್ಲಿ ಪದವಿ ಹೊಂದಿರಬೇಕು ಹಾಗೂ ಮಾರ್ಕೆಟಿಂಗ್‌ನಲ್ಲಿ MBA ಅಥವಾ PGDM ಪದವಿ ಪಡೆದಿರಬೇಕು. ಜೊತೆಗೆ ಕನಿಷ್ಠ ಎರಡು ವರ್ಷಗಳ ಸಂಬಂಧಿತ ಕೆಲಸದ ಅನುಭವ ಅಗತ್ಯವಿದೆ. ಈ ಹುದ್ದೆಗೆ ವಯಸ್ಸಿನ ಮಿತಿ 22 ರಿಂದ 30 ವರ್ಷಗಳ ನಡುವೆ ಇರಬೇಕು. ವಿದೇಶಿ ವಿನಿಮಯ ಅಧಿಕಾರಿ ಹುದ್ದೆಗೆ ಪದವಿ ಜೊತೆಗೆ IIBF ನೀಡುವ ವಿದೇಶಿ ವಿನಿಮಯ ಪ್ರಮಾಣಪತ್ರ ಮತ್ತು ಕನಿಷ್ಠ ಐದು ವರ್ಷಗಳ ಅನುಭವ ಅಗತ್ಯವಿದ್ದು, ವಯಸ್ಸಿನ ಮಿತಿ 25 ರಿಂದ 35 ವರ್ಷಗಳವರೆಗೆ ನಿಗದಿಪಡಿಸಲಾಗಿದೆ. ಮೀಸಲು ವರ್ಗಗಳ ಅಭ್ಯರ್ಥಿಗಳಿಗೆ ಸರ್ಕಾರದ ನಿಯಮಗಳ ಪ್ರಕಾರ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.

ಇದನ್ನೂ ಓದಿ: ಎಕ್ಸಿಮ್ ಬ್ಯಾಂಕ್​ನಲ್ಲಿ 40 ಮ್ಯಾನೇಜ್ಮೆಂಟ್ ಟ್ರೈನಿ ಹುದ್ದೆಗೆ ನೇಮಕಾತಿ; ತಿಂಗಳಿಗೆ 65,000ರೂ. ಸ್ಟೈಫಂಡ್

ಅಭ್ಯರ್ಥಿಗಳು ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದ ಅಧಿಕೃತ ವೆಬ್‌ಸೈಟ್ ಅಥವಾ ಐಬಿಪಿಎಸ್ ಪೋರ್ಟಲ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಸಾಮಾನ್ಯ, ಒಬಿಸಿ ಮತ್ತು ಇಡಬ್ಲ್ಯೂಎಸ್ ವರ್ಗದ ಅಭ್ಯರ್ಥಿಗಳಿಗೆ ರೂ. 850 ಜೊತೆಗೆ ಜಿಎಸ್ಟಿ ಅರ್ಜಿ ಶುಲ್ಕವಿದ್ದು, ಎಸ್‌ಸಿ, ಎಸ್‌ಟಿ, ದಿವ್ಯಾಂಗ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ರೂ. 175 ಜೊತೆಗೆ ಜಿಎಸ್ಟಿ ನಿಗದಿಪಡಿಸಲಾಗಿದೆ.

ಆಯ್ಕೆ ಪ್ರಕ್ರಿಯೆ ಆನ್‌ಲೈನ್ ಲಿಖಿತ ಪರೀಕ್ಷೆ ಮತ್ತು ಸಂದರ್ಶನ ಎಂಬ ಎರಡು ಹಂತಗಳಲ್ಲಿ ನಡೆಯಲಿದೆ. ಪರೀಕ್ಷೆಯನ್ನು ಫೆಬ್ರವರಿ–ಮಾರ್ಚ್ ನಲ್ಲಿ ನಡೆಸುವ ನಿರೀಕ್ಷೆಯಿದೆ. ವೇತನದ ವಿಚಾರದಲ್ಲಿ, ಮಾರ್ಕೆಟಿಂಗ್ ಆಫೀಸರ್ ಹುದ್ದೆಗೆ ಸುಮಾರು 48,480 ರಿಂದ 85,920 ರೂ. ವರೆಗೆ ಹಾಗೂ ವಿದೇಶಿ ವಿನಿಮಯ ಅಧಿಕಾರಿ ಹುದ್ದೆಗೆ 85,920 ರಿಂದ 1,05,280 ರೂ. ವರೆಗೆ ಮಾಸಿಕ ವೇತನ ಲಭ್ಯವಾಗಲಿದೆ. ಅರ್ಹ ಅಭ್ಯರ್ಥಿಗಳು ಕೊನೆಯ ದಿನಾಂಕದವರೆಗೆ ಕಾಯದೆ ಸಾಧ್ಯವಾದಷ್ಟು ಬೇಗ ಅರ್ಜಿ ಸಲ್ಲಿಸುವಂತೆ ಬ್ಯಾಂಕ್ ಸಲಹೆ ನೀಡಿದೆ. ಬ್ಯಾಂಕಿಂಗ್ ವಲಯದಲ್ಲಿ ಭದ್ರ ಮತ್ತು ಗೌರವಯುತ ವೃತ್ತಿಜೀವನವನ್ನು ಕಟ್ಟಿಕೊಳ್ಳಲು ಇದು ಒಳ್ಳೆಯ ಅವಕಾಶವಾಗಿದೆ.

ಮತ್ತಷ್ಟು ಉದ್ಯೋಗಕ್ಕೆ ಸಂಬಂಧಿಸಿದ  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮಾಲೂರು ಶಾಸಕರಾಗಿ ನಂಜೇಗೌಡ ಮುಂದುವರಿಕೆ: ಮರು ಎಣಿಕೆಯಲ್ಲೂ ‘ಕೈ’ ನಾಯಕನದ್ದೇ ಮೇಲುಗೈ – Kannada News | Malur MLA Nanjegowda Wins Vote Recount: Supreme Court Confirms Victory

ಕೋಲಾರ, ಫೆಬ್ರವರಿ 05: ಮಾಲೂರು ವಿಧಾನಸಭಾ ಕ್ಷೇತ್ರದ ಮತ ಮರುಎಣಿಕೆ ಕಾರ್ಯದಲ್ಲಿಯೂ ಕಾಂಗ್ರೆಸ್​​ನ ಹಾಲಿ ಶಾಸಕ ಕೆ.ವೈ. ನಂಜೇಗೌಡ ಮೇಲುಗೈ ಸಾಧಿಸಿದ್ದಾರೆ. ಮರುಎಣಿಕೆ ನಡೆಸಿ ಸುಪ್ರೀಂಕೋರ್ಟ್​ಗೆ ಅಧಿಕಾರಿಗಳು ಸಲ್ಲಿಸಿದ್ದ ಮಾಹಿತಿಯೀಗ ಬಹಿರಂಗಗೊಂಡಿದ್ದು ಮರು ಎಣಿಕೆಯಲ್ಲಿ ಕಾಂಗ್ರೆಸ್​ನ ನಂಜೇಗೌಡಗೆ 50,957 ಮತಗಳು ಬಂದಿದ್ದರೆ, ಬಿಜೆಪಿ ಅಭ್ಯರ್ಥಿಯಾಗಿದ್ದ ಮಂಜುನಾಥಗೌಡಗೆ 50,707  ಮತಗಳು ಬಂದಿವೆ. ಹೀಗಾಗಿ ನಂಜೇಗೌಡ ಅವರೇ ಮಾಲೂರು ಕ್ಷೇತ್ರದ ಶಾಸಕರಾಗಿ ಮುಂದುವರಿಯುತ್ತಾರೆ ಎಂದು ಸುಪ್ರೀಂಕೋರ್ಟ್ ತಿಳಿಸಿದೆ.

2023ರಲ್ಲಿ ನಡೆದಿದ್ದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮಂಜುನಾಥಗೌಡ ವಿರುದ್ಧ ಕಾಂಗ್ರೆಸ್​​ನ ಕೆ.ವೈ.ನಂಜೇಗೌಡ 248 ಮತಗಳ ಅಂತರದಲ್ಲಿ ಗೆದ್ದಿದ್ದರು. ಆದ್ರೆ, ಮತ ಎಣಿಕೆಯಲ್ಲಿ ಲೋಪವಾಗಿದೆ ಎಂದು ಆರೋಪಿಸಿದ್ದ ಮಂಜುನಾಥ್ ಗೌಡ ನಂಜೇಗೌಡ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಬೇಕೆಂದು ಕೋರ್ಟ್​​ ಮೆಟ್ಟಿಲೇರಿದ್ದರು. ಆ ಬಳಿಕ ಕೋರ್ಟ್​​ ಸೂಚನೆಯಂತೆ ಕೋಲಾರದ ತೋಟಗಾರಿಕೆ ವಿಶ್ವವಿದ್ಯಾಲಯದಲ್ಲಿ ನವೆಂಬರ್ 11ರಂದು ಒಟ್ಟು 18 ಸುತ್ತು ಮರುಮತ ಎಣಿಕೆ ಕಾರ್ಯ ನಡೆದಿತ್ತು. ಬಳಿಕ ಫಲಿತಾಂಶವನ್ನು ಚುನಾವಣಾ ಆಯೋಗ ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಿತ್ತು.

ಇದನ್ನೂ ಓದಿ: ಮಾಲೂರು ಕ್ಷೇತ್ರದ ಮರುಮತ ಎಣಿಕೆ ಕಾರ್ಯ ಅಂತ್ಯ; ಆದರೂ ತೃಪ್ತಿಯಾಗಿಲ್ಲ ಎಂದ ಬಿಜೆಪಿ ಪರಾಜಿತ ಅಭ್ಯರ್ಥಿ

ಆದರೆ ಮಾಜಿ ಶಾಸಕ ಮಂಜುನಾಥಗೌಡ ಮರು ಎಣಿಕೆಯ ಬಗ್ಗೆಯೂ ಅಸಮಾಧಾನ ಹೊರಹಾಕಿದ್ದರು. ಇನ್ನೂ ಕೆಲವೊಂದು ಪ್ರಶ್ನೆಗಳಿಗೆ ನನಗೆ ಉತ್ತರ ಸಿಕ್ಕಿಲ್ಲ. ಅಧಿಕಾರಿಗಳ ಪ್ರೊಸಿಜರ್ ಲ್ಯಾಪ್ಸ್ ಇದೆ. ಸಂಪೂರ್ಣ ವಿವಿ ಪ್ಯಾಟ್ ಗಳನ್ನು ಎಣಿಸಬೇಕಿತ್ತು. ಆದರೆ ಕೇವಲ ಐದು ವಿವಿ ಪ್ಯಾಟ್ ಮಾತ್ರ ಎಣಿಕೆ ಮಾಡಲಾಗಿದೆ. ಚುನಾವಣೆ ಮರುಎಣಿಕೆ ವಿರುದ್ದ ನನ್ನ ಕಾನೂನು ಹೋರಾಟ ಮುಂದುವರೆಯಲಿದೆ. ಸುಪ್ರೀಂ ಕೋರ್ಟ್ ಅರ್ಜಿದಾರರ ಮನವಿಯನ್ನು ಪರಿಗಣಿಸಿ ಎಂದು ಹೇಳಿತ್ತು. ಆದರೆ ನನ್ನ ಕೆಲವೊಂದು ಮನವಿಗೆ ಪ್ರಾಧಾನ್ಯತೆ ಸಿಕ್ಕಿಲ್ಲ ಎಂದು ಆರೋಪಿಸಿದ್ದರು. ಇತ್ತ ನಂಜೇಗೌಡ ಮಾತ್ರ ಮರು ಎಣಿಕೆಯಲ್ಲಿಯೂ ತಾವೇ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದರು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 3:56 pm, Thu, 5 February 26

Source link

ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿದ ಭಾರತದ ಶ್ರೀಮಂತ ಕುಟುಂಬದ ಕುಡಿ: ಯಾರೀಕೆ? – Kannada News | Ananya Birla started new movie production house Birla studios

ಸಿನಿಮಾ (Cinema) ನಿರ್ಮಾಣ ಎಂಬುದು ಬಹಳ ರಿಸ್ಕಿ ಉದ್ಯಮ. ಇಲ್ಲಿ ಸಣ್ಣ-ಪುಟ್ಟ ಜೇಬಿನವರು ಉಳಿಯುವುದು, ಬೆಳೆಯುವುದು ಬಹಳ ಕಷ್ಟ. ಈಗಂತೂ ಸಿನಿಮಾಗಳ ಸರಾಸರಿ ಬಜೆಟ್ 500 ಕೋಟಿ ದಾಟಿರುವ ಸಂದರ್ಭದಲ್ಲಿ ಎಲ್ಲ ನಿರ್ಮಾಪಕರು ಸಿನಿಮಾಗಳನ್ನು ಮಾಡಿ ಗೆಲ್ಲಲು ಸಾಧ್ಯವಾಗುತ್ತಿಲ್ಲ. ಅಲ್ಲದೆ, ಮುಂಚೆ ಎಲ್ಲ ಸಿನಿಮಾ ನಿರ್ಮಾಣ ಎಂಬುದು ವ್ಯವಹಾರದ ಜೊತೆಗೆ ಕಲಾಸಕ್ತಿ ಸಹ ಆಗಿತ್ತು. ಆದರೆ ಈಗ ಕಾರ್ಪೊರೇಟ್ ವ್ಯವಹಾರವಾಗಿದೆ, ಕೆಲವು ದೊಡ್ಡ ಕಾರ್ಪೊರೇಟ್ ಸಂಸ್ಥೆಗಳು ವ್ಯವಸ್ಥಿತ ಉದ್ಯಮವಾಗಿ ಸಿನಿಮಾ ನಿರ್ಮಾಣವನ್ನು ನಡೆಸುತ್ತಿವೆ. ಈಗಾಗಲೇ ಅಂಥಹ ಹಲವು ಸಂಸ್ಥೆಗಳು ಭಾರತದಲ್ಲಿ ಸಕ್ರಿಯವಾಗಿದ್ದು, ಇದೀಗ ಭಾರತದ ಅತಿ ದೊಡ್ಡ ಸಮೂಹ ಸಂಸ್ಥೆ ಮತ್ತು ಶ್ರೀಮಂತ ಕುಟುಂಬಗಳಲ್ಲಿ ಒಂದೆನಿಸಿಕೊಂಡಿರುವ ಬಿರ್ಲಾ ಕುಟುಂಬವೂ ಸಹ ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿದೆ.

ಅಂಬಾನಿ, ಟಾಟಾ, ಜಿಂದಾಲ್, ಅದಾನಿ ಗ್ರೂಪ್​​ಗಳ ರೀತಿಯೇ ಬಿರ್ಲಾ ಗ್ರೂಪ್ ಭಾರತದ ಅತ್ಯಂತ ಶ್ರೀಮಂತ ಮತ್ತು ಜನಪ್ರಿಯ ಸಮೂಹ ಸಂಸ್ಥೆ. ಫ್ಯಾಷನ್, ಕನ್​​ಸ್ಟ್ರಕ್ಷನ್, ಐಟಿ, ಫಾರ್ಮಸಿ, ಆಯಿಲ್ ಇನ್ನೂ ಹಲವಾರು ಕ್ಷೇತ್ರಗಳಲ್ಲಿ ಉದ್ಯಮಗಳನ್ನು ಹೊಂದಿರುವ ಆದಿತ್ಯ ಬಿರ್ಲಾ ಸಂಸ್ಥೆ ಇದೀಗ ಮನೊರಂಜನಾ ಕ್ಷೇತ್ರಕ್ಕೂ ಕಾಲಿರಿಸಿದೆ. ಈ ಮೊದಲು ಮತ್ತೊಂದು ಸಂಸ್ಥೆಯ ಅಡಿಯಲ್ಲಿ ತೀರ ಸಣ್ಣ-ಪುಟ್ಟ ಎಂಟರ್ಟೈನ್​​ಮೆಂಟ್ ಪ್ರಾಜೆಕ್ಟ್​ಗಳನ್ನು ನಾಮ್​ ಕೆ ವಾಸ್ತೆ ಮಾಡಿದ್ದ ಬಿರ್ಲಾ ಸಂಸ್ಥೆ ಇದೀಗ ತನ್ನ ಹೆಸರಿನೊಂದಿಗೆ ಸಿನಿಮಾ ರಂಗಕ್ಕೆ ಇಳಿದಿದೆ.

ಇದನ್ನೂ ಓದಿ:ಸಿನಿಮಾ ನಿರ್ಮಾಣ ತ್ಯಜಿಸಿದ ವೆಟ್ರಿಮಾರನ್, ಕಾರಣ ಏನು?

ಆದಿತ್ಯ ಬಿರ್ಲಾ ಗ್ರೂಪ್​​ನ ಹಾಲಿ ಚೇರ್​​ಮ್ಯಾನ್​ ಆಗಿರುವ ಕುಮಾರ ಮಂಗಲಮ್ ಬಿರ್ಲಾ ಅವರ ಪುತ್ರಿ, ಉದ್ಯಮಿ ಅನನ್ಯಾ ಬಿರ್ಲಾ ಅವರು ಬಿರ್ಲಾ ಸ್ಟುಡಿಯೋಸ್ ಪ್ರಾರಂಭ ಮಾಡಿದ್ದು, ಸಿನಿಮಾ ನಿರ್ಮಾಣ, ವಿತರಣೆಗೆ ಇಳಿದಿದ್ದಾರೆ. ಅನನ್ಯಾ ಬಿರ್ಲಾ ಅವರು ಈ ಹಿಂದೆ ಬಿರ್ಲಾದ ಫ್ಯಾಷನ್ ಸೇರಿದಂತೆ ಇನ್ನೂ ಕೆಲವು ಉದ್ಯಮಗಳನ್ನು ನಿರ್ವಹಿಸಿದ ಅನುಭವ ಉಳ್ಳವರಾಗಿದ್ದು, ಇದೀಗ ಬಿರ್ಲಾ ಸ್ಟುಡಿಯೋಸ್​​ನ ಜವಾಬ್ದಾರಿಯನ್ನು ಅವರೇ ವಹಿಸಿಕೊಂಡಿದ್ದಾರೆ.

ಸ್ಟುಡಿಯೋ ಬಗ್ಗೆ ಹೊರಡಿಸಿರು ಪ್ರಕಟಣೆಯಲ್ಲಿ ಹೇಳಿರುವಂತೆ, ‘ಬಿರ್ಲಾ ಸ್ಟುಡಿಯೋಸ್ ಒಂದು ಉನ್ನತ ಪರಿಕಲ್ಪನೆಯ, ಕಮರ್ಶಿಯಲ್ ಸಿನಿಮಾಗಳನ್ನು ನಿರ್ಮಿಸುವತ್ತ ಗಮನಹರಿಸುವ ಚಲನಚಿತ್ರ ಸ್ಟುಡಿಯೋ ಆಗಿದೆ. ಕರಕುಶಲತೆ ಮತ್ತು ದೀರ್ಘಕಾಲದ ಪ್ರಸ್ತುತತೆಗೆ ಆದ್ಯತೆ ನೀಡುವ, ಬಹು ಸಮಯ ನೆನಪಿಡಬಹುದಾದ ಕಥೆಗಳು ಸ್ಟುಡಿಯೋದ ಆಯ್ಕೆ ಆಗಿರಲಿದೆ. ಬಿರ್ಲಾ ಸ್ಟುಡಿಯೋಸ್ ಗಟ್ಟಿ ಕತೆಗಳನ್ನು ಹೊಂದಿರುವ ವಾಣಿಜ್ಯ ಚಲನಚಿತ್ರಗಳನ್ನು ನಿರ್ಮಿಸಲು ಯೋಜಿಸಿದೆ. ಅತ್ಯುತ್ತಮ ಪ್ರತಿಭೆ, ಉದಯೋನ್ಮುಖ ಪ್ರತಿಭಾವಂತರು ಮತ್ತು ದಿಟ್ಟ ವಿಚಾರಗಳಿಗೆ ಬೆಂಬಲ ನೀಡುತ್ತದೆ ಎಂದಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 3:58 pm, Thu, 5 February 26

Source link

WPL 2026 Final: ಡೆಲ್ಲಿ ವಿರುದ್ಧ ಆರ್​ಸಿಬಿ ದಾಖಲೆ ಹೇಗಿದೆ? ಇತಿಹಾಸ ಬದಲಿಸುತ್ತಾ ಸ್ಮೃತಿ ಪಡೆ? – Kannada News | WPL 2026 Final: RCB vs DC in Vadodara – Battle for Glory and History

ಇನ್ನು ಈ ಫೈನಲ್‌ ಪಂದ್ಯಕ್ಕೂ ಮೊದಲು ಆರ್​ಸಿಬಿ ಮತ್ತು ಡೆಲ್ಲಿ ತಂಡಗಳ ನಡುವಿನ ಮುಖಾಮುಖಿ ದಾಖಲೆಯನ್ನು ನೋಡಿದರೆ, ಡೆಲ್ಲಿ ಕ್ಯಾಪಿಟಲ್ಸ್, ಆರ್​ಸಿಬಿ ಮೇಲೆ ಮೇಲುಗೈ ಸಾಧಿಸಿದೆ. ಇದುವರೆಗೆ ಎರಡು ತಂಡಗಳು ಒಂಬತ್ತು ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಡೆಲ್ಲಿ ಕ್ಯಾಪಿಟಲ್ಸ್ ಆರರಲ್ಲಿ ಗೆದ್ದಿದ್ದರೆ, ಆರ್​ಸಿಬಿ ಉಳಿದ ಪಂದ್ಯಗಳನ್ನು ಗೆದ್ದಕೊಂಡಿದೆ.

Source link

ಮದುವೆಗೆ ಕೆಲವೇ ದಿನ ಬಾಕಿ ಇರುವಾಗಲೂ ಶೂಟಿಂಗ್ ನಿಲ್ಲಿಸಿಲ್ಲ ರಶ್ಮಿಕಾ ಮಂದಣ್ಣ – Kannada News | Rashmika Mandanna shooting for Allu Arjun new movie AA22XA6 in Mumbai ahead of marriage

ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರು ಶೀಘ್ರದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ವಿಜಯ್ ದೇವರಕೊಂಡ ಜೊತೆ ಅವರು ಹಸೆಮಣೆ ಏರಲಿದ್ದಾರೆ. ಮದುವೆಗೆ ಕೆಲವೇ ದಿನಗಳು ಬಾಕಿ ಇವೆ. ಹಾಗಿದ್ದರೂ ಕೂಡ ರಶ್ಮಿಕಾ ಮಂದಣ್ಣ ಅವರು ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಅಲ್ಲು ಅರ್ಜುನ್ (Allu Arjun) ಜೊತೆಗಿನ ಹೊಸ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ನಟಿಸುತ್ತಿದ್​ದಾರೆ. ಮುಂಬೈನಲ್ಲಿ ಈ ಚಿತ್ರಕ್ಕೆ ಶೂಟಿಂಗ್ ನಡೆಯುತ್ತಿದೆ. ಅದರಲ್ಲಿ ರಶ್ಮಿಕಾ ಮಂದಣ್ಣ ಅವರು ಭಾಗಿಯಾಗಿದ್ದಾರೆ. ಈ ಸಿನಿಮಾಗೆ ಅಟ್ಲಿ ಅವರು ನಿರ್ದೇಶನ ಮಾಡುತ್ತಿದ್ದಾರೆ.

ಈ ಸಿನಿಮಾಗೆ ಇನ್ನೂ ಶೀರ್ಷಿಕೆ ಅಂತಿಮವಾಗಿಲ್ಲ. ಸದ್ಯಕ್ಕೆ ಇದನ್ನು ‘AA22xA6’ ಎಂದು ಕರೆಯಲಾಗುತ್ತಿದೆ. ಈ ಸಿನಿಮಾದಲ್ಲಿನ ರಶ್ಮಿಕಾ ಮಂದಣ್ಣ ಅವರ ಪಾತ್ರದ ಬಗ್ಗೆ ಅಚ್ಚರಿಯ ಮಾಹಿತಿ ಕೇಳಿಬರುತ್ತಿದೆ. ಈ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಅವರು ನೆಗೆಟಿವ್ ರೋಲ್ ಮಾಡುತ್ತಿದ್ದಾರೆ ಎನ್ನಲಾಗಿದೆ. ಆ ಕಾರಣದಿಂದ ಅಭಿಮಾನಿಗಳಿಗೆ ಹೆಚ್ಚು ನಿರೀಕ್ಷೆ ಮೂಡಿದೆ.

ಮುಂಬೈನಲ್ಲಿ ‘AA22xA6’ ಚಿತ್ರಕ್ಕೆ ಶೂಟಿಂಗ್ ಮಾಡಲಾಗುತ್ತಿದೆ. ಸದ್ಯಕ್ಕೆ ರಶ್ಮಿಕಾ ಮಾತ್ರ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಈ ಹಂತದ ಶೂಟಿಂಗ್ ಮುಗಿದ ಬಳಿಕ ರಶ್ಮಿಕಾ ಅವರು ಮದುವೆಗಾಗಿ ಬ್ರೇಕ್ ಪಡೆದುಕೊಳ್ಳಲಿದ್ದಾರೆ. ಇನ್ನುಳಿದ ಪಾತ್ರಧಾರಿಗಳಾದ ಅಲ್ಲು ಅರ್ಜುನ್ ಮತ್ತು ಜಾನ್ವಿ ಕಪೂರ್ ಅವರು ಮುಂದಿನ ಹಂತದ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದ್ದಾರೆ.

ಸೆಲೆಬ್ರಿಟಿ ಮದುವೆ ಎಂದರೆ ಬಹಳ ಅದ್ದೂರಿಯಾಗಿ ಇರುತ್ತದೆ. ಅದಕ್ಕೆ ತಯಾರಿ ಕೂಡ ಅಷ್ಟೇ ಜೋರಾಗಿರುತ್ತದೆ. ರಶ್ಮಿಕಾ ಮಂದಣ್ಣ ಅವರು ಪ್ಯಾನ್ ಇಂಡಿಯಾ ಸ್ಟಾರ್. ಅದೇ ರೀತಿ ವಿಜಯ್ ದೇವರಕೊಂಡ ಕೂಡ ಸಖತ್ ಜನಪ್ರಿಯತೆ ಹೊಂದಿದ್ದಾರೆ. ಅವರಿಬ್ಬರ ಮದುವೆ ತಯಾರಿಗೆ ಹೆಚ್ಚು ಸಮಯ ಬೇಕಾಗುತ್ತದೆ. ಹಾಗಿದ್ದರೂ ಕೂಡ ರಶ್ಮಿಕಾ ಮಂದಣ್ಣ ಅವರು ಇನ್ನೂ ಚಿತ್ರೀಕರಣದಲ್ಲಿ ಬ್ಯುಸಿ ಆಗಿದ್ದಾರೆ.

ಇದನ್ನೂ ಓದಿ: ಮದುವೆಗೂ ಮುನ್ನ ಗುಡ್ ನ್ಯೂಸ್ ನೀಡಿದ ರಶ್ಮಿಕಾ ಮಂದಣ್ಣ, ವಿಜಯ್ ದೇವರಕೊಂಡ

ಹಲವು ವರ್ಷಗಳಿಂದ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರು ಆಪ್ತವಾಗಿದ್ದಾರೆ. ಅವರಿಬ್ಬರ ನಡುವೆ ಪ್ರೀತಿ ಚಿಗುರಿದೆ. ಎರಡೂ ಕುಟುಂಬದ ಒಪ್ಪಿಗೆ ಮೇರೆಗೆ ಅವರು ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಆದರೆ ಈ ಬಗ್ಗೆ ಅವರು ಇನ್ನೂ ಸಾರ್ವಜನಿಕವಾಗಿ ಮಾತನಾಡಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

42 ವರ್ಷದ ಬಳಿಕ ಸಿಕ್ಕಿತು ನ್ಯಾಯ! ಅಲಹಾಬಾದ್ ಹೈಕೋರ್ಟ್​​ನಿಂದ 100 ವರ್ಷದ ಕೊಲೆ ಆರೋಪಿ ಖುಲಾಸೆ – Kannada News | Justice after 42 years Allahabad High Court acquits 100 year old man convicted for murder

ಅಲಹಾಬಾದ್, ಫೆಬ್ರವರಿ 5: ಭಾರತದ ನ್ಯಾಯಾಂಗ ವ್ಯವಸ್ಥೆಯಲ್ಲಿ ಯಾವ ಪ್ರಕರಣವೂ ಬಹಳ ಬೇಗ ಇತ್ಯರ್ಥವಾಗುವುದಿಲ್ಲ ಎಂಬ ಕುರಿತು ಆಗಾಗ ಚರ್ಚೆಗಳು ನಡೆಯುತ್ತಿರುತ್ತವೆ. ಕೆಲವೊಮ್ಮೆ ಈ ರೀತಿಯ ವಿಳಂಬದ ನ್ಯಾಯದಿಂದಾಗಿ ತಪ್ಪು ಮಾಡಿರದ ಆರೋಪಿಗಳು ತೀವ್ರ ತೊಂದರೆ ಅನುಭವಿಸಿದ ಉದಾಹರಣೆಗಳೂ ಇವೆ. ಈ ರೀತಿಯ ನ್ಯಾಯಾಂಗದ ವಿಳಂಬದ ದೀರ್ಘಾವಧಿಯ ಪರಿಣಾಮವನ್ನು ಒತ್ತಿಹೇಳುವ ಮಹತ್ವದ ತೀರ್ಪೊಂದು ಹೊರಬಿದ್ದಿದ್ದು, ಅಲಹಾಬಾದ್ ಹೈಕೋರ್ಟ್ (Allahabad High Court) 1982ರ ಹಿಂದಿನ ಕೊಲೆ ಪ್ರಕರಣದಲ್ಲಿ 100 ವರ್ಷದ ವ್ಯಕ್ತಿಯನ್ನು ಖುಲಾಸೆಗೊಳಿಸಿದೆ.

ಅಲಹಾಬಾದ್ ಹೈಕೋರ್ಟ್ ನ್ಯಾಯಮೂರ್ತಿಗಳಾದ ಚಂದ್ರಧಾರಿ ಸಿಂಗ್ ಮತ್ತು ಸಂಜೀವ್ ಕುಮಾರ್ ಅವರ ವಿಭಾಗೀಯ ಪೀಠವು 1984ರಲ್ಲಿ ಹಮೀರ್‌ಪುರದ ಸೆಷನ್ಸ್ ನ್ಯಾಯಾಲಯದಿಂದ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಧನಿರಾಮ್ ಅವರ ಶಿಕ್ಷೆಯನ್ನು ರದ್ದುಗೊಳಿಸಿತು. ಜೀವಾವಧಿ ಶಿಕ್ಷೆಯ ವಿರುದ್ಧ ಅವರ ಮೇಲ್ಮನವಿ 40 ವರ್ಷಗಳಿಗೂ ಹೆಚ್ಚು ಕಾಲ ಹೈಕೋರ್ಟ್‌ನಲ್ಲಿ ಬಾಕಿ ಇತ್ತು ಎಂಬುದು ವಿಚಿತ್ರ ಮತ್ತು ವಿಶೇಷ. ಆದರೆ, ಧನಿರಾಮ್ ಅವರ ಕಾಯುವಿಕೆಗೆ ಕೊನೆಗೂ ಫಲ ಸಿಕ್ಕಿದೆ.

ಇದನ್ನೂ ಓದಿ: 10 ವರ್ಷ ಹಿಂದೆ ತಾಯಿ ಜತೆ ಓಡಿ ಹೋಗಿದ್ದವನನ್ನ ಕೊಲೆಗೈದ ಪುತ್ರ, ಶವದ ಮೇಲೆ ಕಾಲಿಟ್ಟು ಪೊಲೀಸರಿಗೆ ಕರೆ

ಈ ಪ್ರಕರಣ ಉತ್ತರ ಪ್ರದೇಶದ ಹಮೀರ್‌ಪುರ ಜಿಲ್ಲೆಯಲ್ಲಿ ನಡೆದಿದೆ. ಭೂ ವಿವಾದಕ್ಕೆ ಸಂಬಂಧಿಸಿದಂತೆ 1982ರಲ್ಲಿ ಕೊಲೆ ನಡೆದಿದ್ದು, ಮೈಕು, ಸತ್ತಿ ದೀನ್ ಮತ್ತು ಧನಿ ರಾಮ್ ಎಂಬ ಮೂವರು ಆರೋಪಿಗಳಾಗಿದ್ದರು. ಕೊಲೆಯ ನಂತರ ಮೈಕು ತಲೆಮರೆಸಿಕೊಂಡಿದ್ದರೆ, ಹಮೀರ್‌ಪುರ ಸೆಷನ್ಸ್ ನ್ಯಾಯಾಲಯವು 2 ವರ್ಷಗಳ ನಂತರ 1984ರಲ್ಲಿ ಸತ್ತಿ ದೀನ್ ಮತ್ತು ಧನಿ ರಾಮ್‌ಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಅದೇ ವರ್ಷ ಧನಿ ರಾಮ್ ಜಾಮೀನಿನ ಮೇಲೆ ಬಿಡುಗಡೆಯಾದರು. ಅವರ ಮೇಲ್ಮನವಿ ವಿಚಾರಣೆಯಲ್ಲಿರುವಾಗಲೇ ಸತ್ತಿ ದಿನ್ ನಿಧನರಾದರು, ಇದರಿಂದಾಗಿ ಈ ಪ್ರಕರಣದಲ್ಲಿ ಧನಿ ರಾಮ್ ಮಾತ್ರ ಬದುಕುಳಿದ ಮೇಲ್ಮನವಿದಾರರಾದರು.

ಅಂದಿನಿಂದ ಧನಿ ರಾಮ್ ಜಾಮೀನಿನ ಮೇಲೆ ಹೊರಗಿರುವುದನ್ನು ಗಮನಿಸಿದ ಅಲಹಾಬಾದ್ ಹೈಕೋರ್ಟ್, ಅವರ ಜಾಮೀನು ಬಾಂಡ್ ಅನ್ನು ರದ್ದುಗೊಳಿಸುವಂತೆ ನಿರ್ದೇಶಿಸಿತು ಮತ್ತು ಆರೋಪಿಯನ್ನು ಖುಲಾಸೆಗೊಳಿಸುವ ನಿರ್ಧಾರವು ಪ್ರಕರಣದ ಅರ್ಹತೆಯನ್ನು ಆಧರಿಸಿದೆ ಎಂದು ಹೇಳಿತು.

ಇದನ್ನೂ ಓದಿ: ಹಣಕ್ಕಾಗಿ ತ್ರಿವಳಿ ಕೊಲೆ ಶಂಕೆ: ತಂಗಿ ಗರ್ಭಿಣಿ ಎಂದು ಖಾಕಿ ಮುಂದೆ ಕತೆ ಹೇಳಿದ್ನಾ ಕಿರಾತಕ?

ತನ್ನ ತೀರ್ಪಿನಲ್ಲಿ, ಪ್ರಮುಖ ಆರೋಪಿ ಶೂಟರ್ ಮೈಕು ಅವರನ್ನು ಎಂದಿಗೂ ಬಂಧಿಸಲೇ ಇಲ್ಲ ಎಂದು ಹೈಕೋರ್ಟ್ ಗಮನಿಸಿದೆ. ಮೇಲ್ಮನವಿಯ ದೀರ್ಘಾವಧಿಯ ಬಾಕಿ ಉಳಿದಿರುವುದು ಮತ್ತು ಬದುಕುಳಿದ ಆರೋಪಿಯ ವಯಸ್ಸು ನಿರ್ಲಕ್ಷಿಸಲಾಗದ ಮಹತ್ವದ ಅಂಶಗಳಾಗಿವೆ ಎಂದು ಪೀಠ ಗಮನಿಸಿದೆ. ಹೀಗಾಗಿ, ಜೀವಾವಧಿ ಶಿಕ್ಷೆಯನ್ನು ಬದಿಗಿಟ್ಟು ಅಲಹಾಬಾದ್ ಹೈಕೋರ್ಟ್ ಧನಿರಾಮ್ ಅವರನ್ನು ಎಲ್ಲಾ ಆರೋಪಗಳಿಂದ ಖುಲಾಸೆಗೊಳಿಸಿತು ಮತ್ತು ಅವರ ಜಾಮೀನು ಬಾಂಡ್‌ಗಳನ್ನು ಬಿಡುಗಡೆ ಮಾಡುವಂತೆ ಆದೇಶಿಸಿತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

Mangaluru: ಹಸೆಮಣೆ ಏರಬೇಕಿದ್ದ ಯುವತಿ ಅಪಘಾತಕ್ಕೆ ಬಲಿ; ಭಾವಿ ಪತಿ ಜೊತೆಗಿದ್ದಾಗಲೇ ಅವಘಡ – Kannada News | Mangaluru Accident: Engaged Woman Dies, Fiancé Survives Horrific Crash at Nanthoor

ಭೀಕರ ಅಪಘಾತಕ್ಕೆ ಯುವತಿ ಬಲಿImage Credit source: Tv9 Kannada

ಮಂಗಳೂರು, ಫೆಬ್ರವರಿ 05: ಖಾಸಗಿ ಬಸ್ ಡಿಕ್ಕಿಯಾದ ಪರಿಣಾಮ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಯುವತಿ ಮೃತಪಟ್ಟಿರುವ ಘಟನೆ ಮಂಗಳೂರು ನಗರದ ನಂತೂರು ವೃತ್ತದ ಬಳಿ ನಡೆದಿದೆ. ಬಳ್ಳಾಲ್​ಬಾಗ್ ನಿವಾಸಿ ದೀಪ್ತಿ(26) ಮೃತ ದುರ್ದೈವಿಯಾಗಿದ್ದಾರೆ. ಇನ್ನು ಈಕೆಗೆ ವಿವಾಹ ನಿಶ್ಚಿಯವಾಗಿದ್ದು, ಬರ್ತ್​ಡೇ ಪಾರ್ಟಿಗೆಂದು ವಾಮಂಜೂರಿಗೆ ಭಾವಿ ಪತಿ ಜತೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ವೇಳೆ ದುರ್ಘಟನೆ ನಡೆದಿದೆ. ಅದೃಷ್ಟವಶಾತ್ ದೀಪ್ತಿ ಭಾವಿ ಪತಿ ಅಪಾಯದಿಂದ ಪಾರಾಗಿದ್ದಾರೆ.

ಕುಡುಪು ಭಾಗಕ್ಕೆ ತೆರಳುತ್ತಿದ್ದ 22ನೇ ನಂಬರ್ ಖಾಸಗಿ ಬಸ್ ದ್ವಿಚಕ್ರ ವಾಹನಕ್ಕೆ ಡಿಕ್ಕಿಯಾಗಿದ್ದು, ಈ ವೇಳೆ ರಸ್ತೆಗೆ ಬಿದ್ದ ದೀಪ್ತಿ ಹೊಟ್ಟೆ ಮೇಲೆ ಬಸ್​​ ಚಕ್ರ ಕರಿದಿದೆ. ಗಂಭೀರಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ಸಾಗಿಸುವ ವೇಳೆ ಮಾರ್ಗಮಧ್ಯೆಯೇ ಮೃತಪಟ್ಟಿದ್ದಾರೆ. ಖಾಸಗಿ ಬಸ್​ಗಳ ಆರ್ಭಟ ಖಂಡಿಸಿ ಆ್ಯಂಬುಲೆನ್ಸ್​ನಲ್ಲಿ ಮೃತದೇಹವನ್ನು ಠಾಣೆ ಬಳಿಗೆ ತಂದು ದೀಪ್ತಿ ಸಂಬಂಧಿಕರು, ಸಾರ್ವಜನಿಕರರು ಪ್ರತಿಭಟನೆ ನಡೆಸಿ ಆಕ್ರೋಶ ಹೊರ ಹಾಕಿದ್ದಾರೆ. ಅಲ್ಲದೆ, ಮಂಗಳೂರಿನ ಕದ್ರಿ ಸಂಚಾರಿ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕುವ ಯತ್ನ ಮಾಡಿದ್ದಾರೆ.

ಇದನ್ನೂ ಓದಿ: ಕೌಟುಂಬಿಕ ಕಲಹಕ್ಕೆ ಹರಿದ ನೆತ್ತರು; ಗಲಾಟೆ ವೇಳೆ ಹೋಯ್ತು ಇಬ್ಬರ ಪ್ರಾಣ!

ಕಾರುಗಳ ನಡುವೆ ಸರಣಿ ಅಪಘಾತ: ನಾಲ್ವರಿಗೆ ಗಾಯ

ರಾಕೆಟ್ ವೇಗದಲ್ಲಿ ಬಂದ ಕಾರುಗಳ ನಡುವೆ ಸರಣಿ ಅಪಘಾತ ನಡೆದು ನಾಲ್ವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಆನೇಕಲ್​​ ಸಮೀಪದ ಬನ್ನೇರುಘಟ್ಟ-ಜಿಗಣಿ ಮುಖ್ಯ ರಸ್ತೆಯ ಕೊಪ್ಪ ಗೇಟ್ ಬಳಿ ನಡೆದಿದೆ. ಜಿಗಣಿ ಕಡೆಯಿಂದ ಬರುತ್ತಿದ್ದ ಎರಡು ಕಾರು ಚಾಲಕನ ನಿಯಂತ್ರಣ ತಪ್ಪಿ ಮುಂಬದಿಯ ಕಾರಿಗೆ ಡಿಕ್ಕಿಯಾಗಿದ್ದು, ಅಪಘಾತದ ರಭಸಕ್ಕೆ ವಿರುದ್ಧ ದಿಕ್ಕಿಗೆ ತಿರುಗಿ ಮತ್ತೊಂದು ಕಾರಿಗೆ ಗುದ್ದಿದೆ. ಅಪಘಾತದಲ್ಲಿ ಕಾರುಗಳು ಸಂಪೂರ್ಣ ಜಖಂಗೊಂಡಿದ್ದು, ಬನ್ನೇರುಘಟ್ಟ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 3:22 pm, Thu, 5 February 26

Source link

ರಾಜಸ್ಥಾನದಲ್ಲಿ‌ ಶೀಘ್ರದಲ್ಲೇ ಉದ್ಘಾಟನೆಗೊಳ್ಳಲಿದೆ ಭಾರತದ ಮೊದಲ ಕ್ರಿಕೆಟ್‌ ಸ್ಟೇಡಿಯಂ ಹೋಟೆಲ್ – Kannada News | India’s first 5 star hotel linked cricket stadium; watch the video here

ರಾಡಿಸನ್‌ ಬ್ಲೂ ಮಿರಾಜ್‌ ಸ್ಟೇಡಿಯಂ Image Credit source: Social Media

ಭಾರತದ ಮೊದಲ ಫೈವ್‌ ಸ್ಟಾರ್‌ ಹೋಟೆಲ್ ಸಂಯೋಜಿತ  ಕ್ರಿಕೆಟ್ ಕ್ರೀಡಾಂಗಣವನ್ನು ರಾಜಸ್ಥಾನದ (Rajasthan) ಉದಯಪುರದ  ನಾಥದ್ವಾರದಲ್ಲಿರುವ ಮದನ್ ಪಲಿವಾಲ್ ಸ್ಪೋರ್ಟ್ಸ್ ಸಿಟಿಯಲ್ಲಿ ಮಿರಾಜ್ ಗ್ರೂಪ್‌ನ ಉಪಕ್ರಮದಡಿಯಲ್ಲಿ ಮತ್ತು ರಾಡಿಸನ್ ಹೋಟೆಲ್ ಗ್ರೂಪ್‌ನ ಸಹಯೋಗದೊಂದಿಗೆ ನಿರ್ಮಿಸಲಾಗಿದ್ದು, ಅತ್ಯಾಧುನಿಕ ಸೌಲಭ್ಯಗಳು ಮತ್ತು ಉತ್ತಮ ಗುಣಮಟ್ಟದ ಮೂಲಸೌಕರ್ಯಗಳೊಂದಿಗೆ ನಿರ್ಮಿಸಲಾದ ಈ ʼರಾಡಿಸನ್‌ ಬ್ಲೂ ಮಿರಾಜ್‌ ಸ್ಟೇಡಿಯಂʼ ಹೋಟೆಲ್‌ ಶೀಘ್ರದಲ್ಲೇ ಉದ್ಘಾಟನೆಗೊಳ್ಳಲಿದೆ. ದೇಶದ ಅತಿದೊಡ್ಡ ಹೋಟೆಲ್‌ ಕ್ರೀಡಾಂಗಣದ ಸುಂದರ ವಿಡಿಯೋವನ್ನು ರಾಡಿಸನ್ ಬ್ಲೂ ಸೋಷಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿಕೊಂಡಿದೆ.

ಭಾರತದ ಮೊಟ್ಟ ಮೊದಲ ಕ್ರಿಕೆಟ್‌ ಸ್ಟೇಡಿಯಂ ಹೋಟೆಲ್‌:

ವರದಿಗಳ ಪ್ರಕಾರ, ದೇಶದಲ್ಲಿರುವ ಈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣವು 30 ಸಾವಿರಕ್ಕೂ ಹೆಚ್ಚು ಆಸನಗಳನ್ನು ಮತ್ತು ಹೋಟೆಲ್‌  234 ಐಷಾರಾಮಿ ಕೊಠಡಿಗಳನ್ನು ಹೊಂದಿದ್ದು, ಈ ಭವ್ಯ ಹೋಟೆಲ್‌ನಲ್ಲಿ ತಂಗುವಂತಹ ಅತಿಥಿಗಳು ತಮ್ಮ ಕೊಠಡಿಗಳಿಂದಲೇ ನೇರವಾಗಿ ಕ್ರಿಕೆಟ್‌ ಪಂದ್ಯಾವಳಿಗಳನ್ನು ವೀಕ್ಷಿಸಬಹುದಾಗಿದೆ.

ರಾಡಿಸನ್ ಬ್ಲೂ ಮಿರಾಜ್ ಕ್ರೀಡಾಂಗಣದ ವೈಶಿಷ್ಟ್ಯವೆಂದರೆ ಅದು 5-ಸ್ಟಾರ್ ರಾಡಿಸನ್ ಬ್ಲೂ ಹೋಟೆಲ್‌ನೊಂದಿಗೆ ನೇರ ಸಂಪರ್ಕ ಹೊಂದಿದೆ. ಹೋಟೆಲ್ ಕೊಠಡಿಗಳು ಸುಮಾರು 75% ರಷ್ಟು ಕ್ರಿಕೆಟ್ ಮೈದಾನದತ್ತ ಮುಖ ಮಾಡಿರುವುದರಿಂದ ಹೋಟೆಲ್‌ನಲ್ಲಿ ತಂಗುವ ಅತಿಥಿಗಳು ತಮ್ಮ ಖಾಸಗಿ ಬಾಲ್ಕನಿಗಳಿಂದ ಪಂದ್ಯಗಳನ್ನು ವೀಕ್ಷಿಸಬಹುದಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ಈ ಕ್ರಿಕೆಟ್‌ ಸ್ಟೇಡಿಯಂ ಹೋಟೆಲ್‌ನ ಫಸ್ಟ್-ಲುಕ್ ವಿಡಿಯೋ ಸಖತ್‌ ವೈರಲ್‌ ಆಗುತ್ತಿವೆ. ಈ ಕುರಿತ ವಿಡಿಯೋವನ್ನು Mufaddal Vohra ಹೆಸರಿನ ಎಕ್ಸ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.

ವಿಡಿಯೋ ಇಲ್ಲಿದೆ ನೋಡಿ:‌

ರಾಡಿಸನ್ ಬ್ಲೂ ಮಿರಾಜ್ ಕ್ರೀಡಾಂಗಣದ ಅವಲೋಕನ:

ಈ ಕ್ರೀಡಾಂಗಣವು ಸುಮಾರು 50,000 ಪ್ರೇಕ್ಷಕರಿಗೆ ಸ್ಥಳಾವಕಾಶ ಕಲ್ಪಿಸುತ್ತದೆ ಮತ್ತು 5-ಸ್ಟಾರ್ ರಾಡಿಸನ್ ಬ್ಲೂ ಹೋಟೆಲ್‌ಗೆ ಸಂಪರ್ಕ ಹೊಂದಿದೆ. ಹೋಟೆಲ್ 234 ಐಷಾರಾಮಿ ಕೊಠಡಿಗಳು ಮತ್ತು ಸೂಟ್‌ಗಳನ್ನು ಹೊಂದಿದೆ, ಮತ್ತು ಈ ಕೊಠಡಿಗಳಲ್ಲಿ ಸುಮಾರು 75 ಪ್ರತಿಶತವು ಕ್ರಿಕೆಟ್ ಮೈದಾನದ ನೇರ ನೋಟವನ್ನು ನೀಡುತ್ತದೆ. ಈ ಯೋಜನೆಯನ್ನು ಮದನ್ ಪಲಿವಾಲ್ ಮಿರಾಜ್ ಸ್ಪೋರ್ಟ್ಸ್ ಸೆಂಟರ್ ಅಡಿಯಲ್ಲಿ ಮಿರಾಜ್ ಗ್ರೂಪ್ ಅಭಿವೃದ್ಧಿಪಡಿಸಿದೆ.

ಕಾರ್ಪೊರೇಟ್ ಸಭೆಗಳಿಗಾಗಿ ದೊಡ್ಡ ಹಾಲ್,  ಈಜುಕೊಳ, ದೊಡ್ಡ ಕೆಫೆಟೇರಿಯಾ, ಪಾಶ್ಚಿಮಾತ್ಯ ಶೈಲಿಯ ಸ್ನಾನಗೃಹಗಳನ್ನು ಹೊಂದಿರುವ ಐಷಾರಾಮಿ ಕೊಠಡಿಗಳು ಸೇರಿದಂತೆ ಬಹು ಸೌಲಭ್ಯಗಳನ್ನು ಹೊಂದಿರುವ ಹೋಟೆಲ್‌ ಇದಾಗಿದ್ದು, ಕ್ರೀಡಾ ಪ್ರೇಮಿಗಳು ಮತ್ತು ಟೂರಿಸ್ಟ್‌ಗಳನ್ನು ಗಮನದಲ್ಲಿಟ್ಟುಕೊಂಡು ಮಿರಾಜ್ ಗ್ರೂಪ್ ಮತ್ತು ರಾಡಿಸನ್ ಹೋಟೆಲ್ ಗ್ರೂಪ್  ಈ ವಿಶೇಷ ಉಪಕ್ರಮವನ್ನು ತೆಗೆದುಕೊಂಡಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಮುರುಡೇಶ್ವರಕ್ಕೆ ಪ್ರವಾಸ ಹೋಗುವವರಿಗೆ kstdcನಿಂದ ವಿಶೇಷ ಪ್ಯಾಕೇಜ್​​

ಕ್ರೀಡಾಂಗಣವು ಪ್ಯಾರಾಮೆಟ್ರಿಕ್ ವಾಸ್ತುಶಿಲ್ಪ, ರಾತ್ರಿಯಲ್ಲಿ ಕಣ್ಮನ ಸೆಳೆಯುವ ಬೆಳಕಿನೊಂದಿಗೆ ಆಧುನಿಕ ವಿನ್ಯಾಸವನ್ನು ಹೊಂದಿದೆ. ಈ ಅತ್ಯಾಧುನಿಕ ಹೋಟೆಲ್‌ನಲ್ಲಿ ತಂಗುವ ಅತಿಥಿಗಳು ಅರಾವಳಿ ಬೆಟ್ಟಗಳ ಸುಂದರ ಸೂರ್ಯಾಸ್ತದ ನೋಟಗಳನ್ನು ಮತ್ತು ಸಂಜೆಯ ಅತ್ಯಾಕರ್ಷಕ ಫ್ಲಡ್‌ಲೈಟ್ ಪಂದ್ಯಗಳನ್ನು ಆನಂದಿಸಬಹುದು.

ಕ್ರಿಕೆಟ್ ಸ್ಟೇಡಿಯಂ  ಹೊರತುಪಡಿಸಿ, ಈ ಪ್ರಾಪರ್ಟಿ 1,000 ಅತಿಥಿಗಳಿಗೆ ಅವಕಾಶ ಕಲ್ಪಿಸಬಹುದಾದ ದೊಡ್ಡ ಮ್ಯಾರೇಜ್‌ ಲಾನ್, ಪ್ರೀಮಿಯಂ ಊಟದ ಪ್ರದೇಶಗಳನ್ನು ಹೊಂದಿದ್ದು, ಇದು ಮದುವೆಗಳು, ಕಾರ್ಪೊರೇಟ್ ಕಾರ್ಯಕ್ರಮಗಳು ಮತ್ತು ಖಾಸಗಿ ಕಾರ್ಯಕ್ರಮಗಳನ್ನು ನಡೆಸಲು ಸೂಕ್ತವಾಗಿದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನಾಲ್ಕೈದು ದಿನದಲ್ಲಿ ವ್ಯಾಪಾರ ಒಪ್ಪಂದ ಸಂಬಂಧ ಭಾರತ-ಅಮೆರಿಕ ಜಂಟಿ ಹೇಳಿಕೆ: ಪೀಯೂಶ್ ಗೋಯಲ್ – Kannada News | Piyush Goyal says joint statement by India US on trade deal likely in few days

ನವದೆಹಲಿ, ಫೆಬ್ರುವರಿ 5: ಭಾರತ ಹಾಗೂ ಅಮೆರಿಕ ನಡುವಿನ ದ್ವಿಪಕ್ಷೀಯ ವ್ಯಾಪಾರ ಒಪ್ಪಂದದ ಮೊದಲ ಭಾಗ ಸದ್ಯದಲ್ಲೇ ಹೊರಬರಲಿದೆ. ಕೆಲವೇ ದಿನಗಳಲ್ಲಿ ಅಮೆರಿಕದ ಮಾರುಕಟ್ಟೆಯಲ್ಲಿ ಭಾರತಕ್ಕೆ ಟ್ಯಾರಿಫ್ ರಿಯಾಯಿತಿಯ ಪ್ರವೇಶ ಸಿಗುತ್ತದೆ ಎಂದು ಕೇಂದ್ರ ವಾಣಿಜ್ಯ ಮತ್ತು ಉದ್ಯಮ ಸಚಿವ ಪಿಯೂಶ್ ಗೋಯಲ್ (Piyush Goyal) ಸ್ಪಷ್ಟಪಡಿಸಿದ್ದಾರೆ. ವ್ಯಾಪಾರ ಒಪ್ಪಂದ ಸಂಬಂಧ ಮುಂದಿನ ನಾಲ್ಕೈದು ದಿನಗಳಲ್ಲಿ ಎರಡೂ ದೇಶಗಳ ಮಧ್ಯೆ ಜಂಟಿ ಹೇಳಿಕೆ ಬರಬಹುದು ಎಂದೂ ಗೋಯಲ್ ಹೇಳಿದ್ದಾರೆ.

ಭಾರತ ಮತ್ತು ಅಮೆರಿಕ ನಡುವೆ ಜಂಟಿ ಹೇಳಿಕೆ ಬಂದು ಕಾರ್ಯಕಾರಿ ಆದೇಶ (Executive Order) ಹೊರಟಾಗ ಶೇ. 18ರ ಟ್ಯಾರಿಫ್ ಕ್ರಮ ಚಾಲನೆಗೆ ಬರುತ್ತದೆ ಎಂದು ಹೇಳಿದ ಪೀಯೂಶ್ ಗೋಯಲ್, ಮುಂದಿನ 2-2.5 ತಿಂಗಳಲ್ಲಿ (ಮಾರ್ಚ್ ಮಧ್ಯೆ) ಹೆಚ್ಚು ಸಮಗ್ರವಾದ ಮತ್ತು ಅಧಿಕೃತವಾದ ಒಪ್ಪಂದಕ್ಕೆ ಎರಡೂ ದೇಶಗಳು ಸಹಿ ಹಾಕಲಿವೆ ಎಂದಿದ್ದಾರೆ.

ಇದನ್ನೂ ಓದಿ: ಅಮೆರಿಕ, ಯೂರೋಪ್ ಜೊತೆ ಭಾರತದ ವ್ಯಾಪಾರ ಸಂಬಂಧ, 1991ರ ಉದಾರ ನೀತಿಗಿಂತಲೂ ದೊಡ್ಡದು: ಅರವಿಂದ್ ಪಣಗರಿಯಾ

ಭಾರತ ಇತ್ತೀಚೆಗೆ ಸಾಲು ಸಾಲಾಗಿ ವ್ಯಾಪಾರ ಒಪ್ಪಂದಗಳನ್ನು ಮಾಡಿಕೊಳ್ಳುತ್ತಿದೆ. ದಾಖಲೆಯ ಎಂಟು ವ್ಯಾಪಾರ ಒಪ್ಪಂದಗಳಿಗೆ ಭಾರತ ಸಹಿ ಹಾಕಿದೆ. ಅಮೆರಿಕದೊಂದಿಗೆ ಒಪ್ಪಂದವಾದರೆ ಒಂಬತ್ತನೆಯದ್ದಾಗುತ್ತದೆ. ಈ ಬೆಳವಣಿಗೆಯನ್ನು ಗೋಯಲ್ ಅವರು ಮೈಲಿಗಲ್ಲೆಂದು ಬಣ್ಣಿಸಿದ್ದಾರೆ.

ಗಲ್ಫ್ ಕೋಆಪರೇಶನ್ ಕೌನ್ಸಿಲ್ ಜೊತೆಗೂ ಒಪ್ಪಂದ

ಯುಎಇ, ಸೌದಿ ಅರೇಬಿಯಾ, ಓಮನ್, ಕತಾರ್, ಕುವೇತ್ ಮತ್ತು ಬಹ್ರೇನ್ ದೇಶಗಳ ಗುಂಪಾದ ಗಲ್ಫ್ ಕೋಆಪರೇಶನ್ ಕೌನ್ಸಿಲ್ ಜೊತೆಗೂ ಭಾರತ ವ್ಯಾಪಾರ ಒಪ್ಪಂದ ಮಾಡಿಕೊಳ್ಳಲು ಮುಂದಾಗಿದೆ. ಈ ಸಂಬಂಧ ಮಾತುಕತೆಗೆ ತೊಡಗಲು ಮಾರ್ಗಸೂಚಿಗೆ (ಟರ್ಮ್ಸ್ ಆಫ್ ರೆಫರೆನ್ಸ್) ಭಾರತ ಸಹಿ ಹಾಕುತ್ತಿದೆ. ಈ ಗುಂಪಿನ ದೇಶಗಳ ಜೊತೆ ಭಾರತದ 179 ಬಿಲಿಯನ್ ಡಾಲರ್ ಮೊತ್ತದಷ್ಟು ವ್ಯಾಪಾರ ವಹಿವಾಟು ಹೊಂದಿದೆ. ಒಪ್ಪಂದದ ಬಳಿಕ ಇದು ಇನ್ನೂ ಹೆಚ್ಚಾಗುವ ನಿರೀಕ್ಷೆ ಇದೆ.

ಇದನ್ನೂ ಓದಿ: ಭಾರತ-ಅಮೆರಿಕ ಟ್ರೇಡ್ ಡೀಲ್ ಸಲೀಸಾಗಿ ಕುದುರಿದ್ದು ಹೇಗೆ? ಅಜಿತ್ ದೋವಲ್ ಅಮೆರಿಕ ಭೇಟಿಯಲ್ಲಿ ಆಗಿದ್ದೇನು?

ಯೂರೋಪಿಯನ್ ಯೂನಿಯನ್ ಮತ್ತು ಅಮೆರಿಕದೊಂದಿಗೆ ಭಾರತ ಮಾಡಿಕೊಂಡಿರುವ ಡೀಲ್​ಗಳು ಬಹಳ ದೊಡ್ಡವೆಂದು ಪರಿಗಣಿತವಾಗಿವೆ. ಬ್ರಿಟನ್, ಇಎಫ್​ಟಿಎ, ನ್ಯೂಜಿಲ್ಯಾಂಡ್ ಮೊದಲಾದ ದೇಶಗಳೊಂದಿಗೂ ಭಾರತ ಟ್ರೇಡ್ ಡೀಲ್ ಕುದುರಿಸಿದೆ. ಗಲ್ಫ್ ರಾಷ್ಟ್ರಗಳೊಂದಿಗೆ ಡೀಲ್ ಏರ್ಪಟ್ಟರೆ ಅದೂ ಒಂದು ಮೈಲಿಗಲ್ಲು ಎಂದೆನಿಸಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Exit mobile version