Delhi Capitlas: ಪವರ್ ಪ್ಲೇನಲ್ಲಿ ನೋ ಪವರ್: ಮೊದಲ ಆರು ಓವರ್‌ಗಳಲ್ಲೇ ಪಂದ್ಯ ಸೋಲುತ್ತಿರುವ ಡೆಲ್ಲಿ ಕ್ಯಾಪಿಟಲ್ಸ್‌ – Kannada News | Delhi Capitals lose the match in the first six overs No power in the power play

ಬೆಂಗಳೂರು (ಮೇ. 06): ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ತಂಡವು ಐಪಿಎಲ್ 2026 ರ ಪ್ಲೇಆಫ್ ತಲುಪುವ ಸಾಧ್ಯತೆಗಳು ಮತ್ತಷ್ಟು ಕ್ಷೀಣಿಸಿದೆ. ಡೆಲ್ಲಿ ತಂಡವು ಈ ಋತುವಿನ 48 ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ತನ್ನ ತವರು ಮೈದಾನದಲ್ಲೇ ಸೋತಿತು. ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಡೆಲ್ಲಿ ತಂಡದ ಬ್ಯಾಟಿಂಗ್ ಸಂಪೂರ್ಣವಾಗಿ ವಿಫಲವಾಯಿತು. ಮೊದಲು ಬ್ಯಾಟ್ ಮಾಡಿದ ಡೆಲ್ಲಿ ತಂಡವು ಬಿಗಿಯಾದ ಸಿಎಸ್‌ಕೆ ಬೌಲಿಂಗ್ ದಾಳಿಯ ವಿರುದ್ಧ ಕೇವಲ 155 ರನ್ ಗಳಿಸಿತಷ್ಟೆ. ಪಿಚ್ ಸ್ಪಿನ್ನರ್‌ಗಳಿಗೆ ಸಾಕಷ್ಟು ಅನುಕೂಲಕರವಾಗಿತ್ತು.

ಪವರ್‌ಪ್ಲೇನಲ್ಲಿ ಪವರ್ ಕಳೆದುಕೊಂಡ ಡೆಲ್ಲಿ

ಐಪಿಎಲ್ 2026 ರಲ್ಲಿ ಪವರ್‌ಪ್ಲೇನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಕಳಪೆ ದಾಖಲೆಯನ್ನು ಹೊಂದಿದೆ. ಟಿ20 ಕ್ರಿಕೆಟ್‌ನಲ್ಲಿ ಮೊದಲ ಆರು ಓವರ್ ಬ್ಯಾಟಿಂಗ್ ತಂಡವು ಎದುರಾಳಿಗಳ ಮೇಲೆ ಒತ್ತಡ ಹೇರುವ ಹಂತವಾಗಿದೆ. ಆದರೆ, ಈ ಋತುವಿನಲ್ಲಿ ಡೆಲ್ಲಿ ಪವರ್‌ಪ್ಲೇನಲ್ಲಿ ಅತಿ ಹೆಚ್ಚು ವಿಕೆಟ್‌ಗಳನ್ನು ಕಳೆದುಕೊಂಡಿದೆ, ಅದು ಬರೋಬ್ಬರಿ 21 ವಿಕೆಟ್‌ಗಳು. ಸಿಎಸ್‌ಕೆ ವಿರುದ್ಧ, ಆರಂಭಿಕ ಆಟಗಾರರಾದ ಪಾಥುಮ್ ನಿಸ್ಸಂಕಾ ಮತ್ತು ಕೆಎಲ್ ರಾಹುಲ್ ಇಬ್ಬರೂ ಪವರ್‌ಪ್ಲೇನಲ್ಲಿ ಔಟಾದರು. ಇದಲ್ಲದೆ, ಪವರ್‌ಪ್ಲೇನಲ್ಲಿ ಡೆಲ್ಲಿಯ ಸರಾಸರಿ ಮತ್ತು ರನ್ ರೇಟ್ ಕೂಡ ಹೆಚ್ಚಿನ ತಂಡಗಳಿಗಿಂತ ಕೆಟ್ಟದಾಗಿದೆ.

ಐಪಿಎಲ್ 2026 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪವರ್‌ಪ್ಲೇ ದಾಖಲೆ

  • ವಿಕೆಟ್ ಪತನ: 21
  • ಪ್ರತಿ ವಿಕೆಟ್‌ಗೆ ಸರಾಸರಿ ರನ್‌ಗಳು: 23.85
  • ರನ್ ರೇಟ್: 8.35
  • ಡಾಟ್-ಬಾಲ್ ಶೇಕಡಾವಾರು: 46.4%

Nitish Rana Out: ಒಂದೇ ಚೆಂಡಿನಲ್ಲಿ ಎರಡು ಬಾರಿ ಔಟಾದ ನಿತೀಶ್ ರಾಣ: ಕ್ರಿಕೆಟ್‌ನಲ್ಲಿ ಅಪರೂಪದ ಘಟನೆ

ಸಾಕಷ್ಟು ಅನುಭವಿಗಳಿಂದ ಕೂಡಿರುವ ಡೆಲ್ಲಿ ಅಗ್ರ ಕ್ರಮಾಂಕ

ಈ ಋತುವಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಅಗ್ರ ಕ್ರಮಾಂಕ ಸಾಕಷ್ಟು ಅನುಭವಿಗಳಿಂದ ಕೂಡಿದೆ. ಕೆಎಲ್ ರಾಹುಲ್ ಆರೆಂಜ್ ಕ್ಯಾಪ್ ಹೊಂದಿದ್ದಾರೆ, ಆದರೆ ತಂಡ ಪವರ್‌ಪ್ಲೇನಲ್ಲಿ ಉತ್ತಮ ಪ್ರದರ್ಶನ ನೀಡಿಲ್ಲ. ಪಾಥಮ್ ನಿಸ್ಸಂಕಾ ಕೂಡ ಇನ್ನಿಂಗ್ಸ್ ಪ್ರಾರಂಭಿಸುತ್ತಾರೆ. ಅವರು ಶ್ರೀಲಂಕಾದ ಪ್ರಮುಖ ಬ್ಯಾಟ್ಸ್‌ಮನ್ ಆಗಿದ್ದು, ಟಿ20 ವಿಶ್ವಕಪ್‌ನಲ್ಲಿ ಶತಕ ಗಳಿಸಿದ್ದರು. ಅದಕ್ಕೂ ಮೊದಲು, ನಿಸ್ಸಂಕಾ 2025 ರ ಏಷ್ಯಾ ಕಪ್‌ನಲ್ಲಿ ಭಾರತ ವಿರುದ್ಧ ಶತಕ ಗಳಿಸಿದ್ದರು. ಆದರೆ, ಡೆಲ್ಲಿ ಪರ ಮಾತ್ರ ಇವರ ಮ್ಯಾಜಿಕ್ ನಡೆಯುತ್ತಿಲ್ಲ.

ಆಡಿರುವ 10 ಪಂದ್ಯಗಳಲ್ಲಿ 6ರಲ್ಲಿ ಸೋಲು

ಡೆಲ್ಲಿ ಕ್ಯಾಪಿಟಲ್ಸ್ ತಂಡವು ಐಪಿಎಲ್ 2026 ಅನ್ನು ಸತತ ಎರಡು ಗೆಲುವಿನೊಂದಿಗೆ ಆರಂಭಿಸಿತು. ಗುಜರಾತ್ ಟೈಟಾನ್ಸ್ ವಿರುದ್ಧ ಒಂದು ರನ್ ಸೋಲಿನ ನಂತರ ಆ ವೇಗ ಕುಗ್ಗಿತು. ಆ ಪಂದ್ಯದ ನಂತರ, ಡೆಲ್ಲಿ ತಂಡವು ತಮ್ಮ ಎಂಟು ಪಂದ್ಯಗಳಲ್ಲಿ ಎರಡನ್ನು ಮಾತ್ರ ಗೆದ್ದಿದೆ. ಆರ್‌ಸಿಬಿ ಮತ್ತು ರಾಜಸ್ಥಾನವನ್ನು ರನ್ ಚೇಸ್ ಮಾಡುವ ಮೂಲಕ ಸೋಲಿಸಿದರು. ಪಂಜಾಬ್ ವಿರುದ್ಧ 264 ರನ್ ಗಳಿಸಿದ್ದರೂ, ಅಕ್ಷರ್ ಪಡೆ ಸೋತಿತು. ಸದ್ಯ ಡೆಲ್ಲಿಯ ಮುಂದಿನ ಹಾದಿ ಬಹುತೇಕ ಮುಚ್ಚಿದಂತಾಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪಶ್ಚಿಮ ಬಂಗಾಳ: ಬಿಜೆಪಿ-ಟಿಎಂಸಿ ಕಾರ್ಯಕರ್ತರ ಮಧ್ಯೆ ಭಾರೀ ಸಂಘರ್ಷ, ನಾಲ್ವರು ಸಾವು, ಉದ್ವಿಗ್ನ ಪರಿಸ್ಥಿತಿ – Kannada News | West Bengal Post Election Violence Escalates Between BJP and TMC Workers

ಕೋಲ್ಕತ್ತಾ, ಮೇ 06: ಪಶ್ಚಿಮ ಬಂಗಾಳ(West Bengal)ದಲ್ಲಿ ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC) ಮತ್ತು ಇತಿಹಾಸ ನಿರ್ಮಿಸಿರುವ ಭಾರತೀಯ ಜನತಾ ಪಕ್ಷದ (BJP) ಕಾರ್ಯಕರ್ತರ ನಡುವೆ ರಾಜ್ಯದ ಹಲವೆಡೆ ತೀವ್ರ ಘರ್ಷಣೆಗಳು ಸಂಭವಿಸಿವೆ. ಗೆಲುವಿನ ಸಂಭ್ರಮಾಚರಣೆ ಮತ್ತು ಸೋಲಿನ ಹತಾಶೆಯ ನಡುವೆ ಆರಂಭವಾದ ಈ ಸಂಘರ್ಷವು ಈಗ ಹಿಂಸಾಚಾರಕ್ಕೆ ತಿರುಗಿದ್ದು, ರಾಜ್ಯಾದ್ಯಂತ ಹೈ ಅಲರ್ಟ್ ಘೋಷಿಸಲಾಗಿದೆ.

ಚುನಾವಣಾ ಫಲಿತಾಂಶದಲ್ಲಿ ಬಿಜೆಪಿ 206 ಸ್ಥಾನಗಳನ್ನು ಗೆದ್ದು ಅಭೂತಪೂರ್ವ ಜಯ ಸಾಧಿಸಿದ್ದರೆ, ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ 80 ಸ್ಥಾನಗಳಿಗೆ ಕುಸಿದಿದೆ. ಈ ಫಲಿತಾಂಶದ ಬೆನ್ನಲ್ಲೇ ಹಲವು ಜಿಲ್ಲೆಗಳಲ್ಲಿ ಉಭಯ ಪಕ್ಷಗಳ ಬೆಂಬಲಿಗರ ನಡುವೆ ಮಾತಿನ ಚಕಮಕಿ ನಡೆದು ಅದು ಭೌತಿಕ ಹಲ್ಲೆಯ ಹಂತಕ್ಕೆ ತಲುಪಿದೆ. ಚುನಾವಣಾ ಆಯೋಗವು 100 ಸ್ಥಾನಗಳಲ್ಲಿ ಅಕ್ರಮ ನಡೆಸಿದೆ ಎಂದು ಮಮತಾ ಬ್ಯಾನರ್ಜಿ ಗಂಭೀರ ಆರೋಪ ಮಾಡಿದ್ದು, ಇದು ಕಾರ್ಯಕರ್ತರ ನಡುವಿನ ಆಕ್ರೋಶಕ್ಕೆ ತುಪ್ಪ ಸುರಿದಂತಾಗಿದೆ.

ಕೋಲ್ಕತ್ತಾದ ಕೆಲ ವಾರ್ಡ್‌ಗಳಲ್ಲಿ ಮತ್ತು ನಗರದ ಭಾಗಗಳಲ್ಲಿ ನೇರ ಗಲಾಟೆಗಳು ನಡೆದಿವೆ. ಮೆರವಣಿಗೆ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ಮತ್ತು ಟಿಎಂಸಿ ಕಾರ್ಯಕರ್ತರ ನಡುವೆ ಮುಖಾಮುಖಿ ಸಂಘರ್ಷಗಳಾಗಿವೆ. ಆಂಚೋಲ್ ಪ್ರದೇಶದಲ್ಲೂ ದೊಡ್ಡ ಪ್ರಮಾಣದ ಗಲಾಟೆ ನಡೆದಿದ್ದು, ಟಿಎಂಸಿ ಕಚೇರಿಗಳ ಮೇಲೆ ಬಿಜೆಪಿ ಕಾರ್ಯಕರ್ತರು ದಾಳಿ ಮಾಡಿದ್ದಾರೆ ಎಂಬ ಆರೋಪಗಳಿವೆ. ಹುಗ್ಲಿ ಪ್ರದೇಶದಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ನಡೆದು, ಒಬ್ಬರು ಮೃತಪಟ್ಟಿದ್ದಾರೆ ಎಂಬ ಮಾಹಿತಿ ಬಂದಿದೆ. ಈವರೆಗೂ ಒಟ್ಟು ನಾಲ್ಕು ಮಂದಿ ಮೃತಪಟ್ಟಿರುವ ಕುರಿತು ಮಾಹಿತಿ ಲಭ್ಯವಾಗಿದೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಪ್ಯಾನ್ ಕಾರ್ಡ್‌ನಿಂದ ಶುರುವಾದ ಪ್ರೀತಿ ಈಗ ಬೀದಿಗೆ: ಪತ್ನಿ ಗರ್ಭಿಣಿಯಾಗುತ್ತಿದ್ದಂತೆ ಪತಿಗೆ ಮತ್ತೊಂದು ಮದುವೆಗೆ ಸಿದ್ಧತೆ – Kannada News | Tumakuru Police Probe Husband Abandoning Pregnant Wife for Second Marriage

ಗರ್ಭಿಣಿ ಪತ್ನಿ ನ್ಯಾಯಕ್ಕಾಗಿ ಹೋರಾಟ

ತುಮಕೂರು, ಮೇ.6: ಪ್ರೀತಿಯ ಹೆಸರಿನಲ್ಲಿ ಏಳು ವರ್ಷಗಳ ಕಾಲ ಜೊತೆಗಿದ್ದು, ಮದುವೆಯಾದ ಒಂದೂವರೆ ವರ್ಷಕ್ಕೆ ಗರ್ಭಿಣಿ ಪತ್ನಿಯನ್ನು ಕೈಬಿಟ್ಟು ಮತ್ತೊಂದು ಮದುವೆಗೆ ಸಿದ್ಧನಾಗಿರುವ ಪತಿಯ ವಿರುದ್ಧ ಯುವತಿಯೊಬ್ಬಳು ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿದ್ದಾಳೆ. ಇದೀಗ ಈ ಪ್ರಕರಣದ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದೇನೆ ಎಂದು ಯುವತಿ ಹೇಳಿದ್ದಾಳೆ.

ಪಾವಗಡ ತಾಲ್ಲೂಕಿನ ವೈ.ಎನ್. ಹೊಸಕೋಟೆಯ ಸಂತ್ರಸ್ತೆ ಏಳು ವರ್ಷಗಳ ಹಿಂದೆ ಕಾಲೇಜಿನಲ್ಲಿ ಓದುತ್ತಿದ್ದಾಗ, ಜೆರಾಕ್ಸ್ ಶಾಪ್‌ನಲ್ಲಿ ಕೆಲಸ ಮಾಡುತ್ತಿದ್ದ ಬೊಮ್ಮಾನಾಯಕ್ ಎಂಬಾತನ ಪರಿಚಯವಾಗಿತ್ತು. ಪ್ಯಾನ್ ಕಾರ್ಡ್ ಮಾಡಿಸಲು ಹೋದಾಗ ಶುರುವಾದ ಸ್ನೇಹ ಬಳಿಕ ಪ್ರೀತಿಯಾಗಿ ಬದಲಾಗಿತ್ತು. ಪೋಷಕರ ವಿರೋಧದ ನಡುವೆಯೂ ಈ ಜೋಡಿ ಪಾವಗಡದ ದೇವಸ್ಥಾನದಲ್ಲಿ ಮದುವೆಯಾಗಿತ್ತು.

ಮದುವೆಯಾಗಿ ಒಂದೂವರೆ ವರ್ಷ ಸುಖ ಸಂಸಾರ ನಡೆಸಿದ ಬಳಿಕ, ಬೊಮ್ಮಾನಾಯಕ್ ತನ್ನ ಪೋಷಕರ ಮಾತಿಗೆ ಮರುಳಾಗಿ ಗರ್ಭಿಣಿ ಪತ್ನಿಯನ್ನು ದೂರ ಮಾಡಿದ್ದಾನೆ ಎಂದು ಯುವತಿ ಆರೋಪಿಸಿದ್ದಾಳೆ. ಬೊಮ್ಮಾನಾಯಕ್ ಕುಟುಂಬದವರು ಆತನಿಗೆ ಮತ್ತೊಂದು ಮದುವೆ ಮಾಡಲು ಸಿದ್ಧತೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ಇದನ್ನು ಪ್ರಶ್ನಿಸಿದಾಗ ಜಾತಿ ನಿಂದನೆ, ವರದಕ್ಷಿಣೆ ಕಿರುಕುಳ ಮತ್ತು ಕೊಲೆ ಬೆದರಿಕೆ ಹಾಕಲಾಗಿದೆ ಎಂದು ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾಳೆ.

ಇದನ್ನೂ ಓದಿ: ಬೆಂಗಳೂರು: ಸ್ನಾನ ಮಾಡುತ್ತಿದ್ದ ಯುವತಿಯ ವಿಡಿಯೋ ಚಿತ್ರೀಕರಣ; ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ಆತಂಕದಲ್ಲಿ ಟೆಕ್ಕಿ!

ಆರು ತಿಂಗಳ ಗರ್ಭಿಣಿಯಾಗಿರುವ ಯುವತಿಯು ತನ್ನ ಹಾಗೂ ಮಗುವಿನ ಭವಿಷ್ಯಕ್ಕಾಗಿ “ನನಗೆ ನನ್ನ ಗಂಡ ಬೇಕು” ಎಂದು ನ್ಯಾಯಕ್ಕಾಗಿ ಅಲೆದಾಡುತ್ತಿದ್ದಾರೆ. ಸದ್ಯ ಗಂಡ ಬೊಮ್ಮಾನಾಯಕ್, ಆತನ ತಾಯಿ ಕರಿಯಮ್ಮ ಸೇರಿದಂತೆ ನಾಲ್ವರ ವಿರುದ್ಧ ತುಮಕೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Orange Cap: ವೈಭವ್-ಅಭಿಷೇಕ್​ಗೆ ಶಾಕ್: ಆರೆಂಜ್ ಕ್ಯಾಪ್ ಕಿತ್ತುಕೊಂಡ ಡೆಲ್ಲಿ ಕ್ಯಾಪಿಟಲ್ಸ್ ಆಟಗಾರ ಕೆಎಲ್ ರಾಹುಲ್ – Kannada News | IPL 2026 Shock for Vaibhav Abhishek Sharma Delhi Capitals player KL Rahul tops orange cap

ಬೆಂಗಳೂರು (ಮೇ. 06): ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ದೆಹಲಿ ಕ್ಯಾಪಿಟಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ನಡೆದ ಪಂದ್ಯದಲ್ಲಿ ಕೆಎಲ್ ರಾಹುಲ್ (KL Rahul) ಇತಿಹಾಸ ನಿರ್ಮಿಸಿದ್ದಾರೆ. ಪಂದ್ಯ ಆರಂಭವಾಗುವ ಮೊದಲೇ ಎಲ್ಲರ ಕಣ್ಣು ರಾಹುಲ್ ಮೇಲೆ ಇತ್ತು, ಅವರು ಕೇವಲ 8 ರನ್ ಗಳಿಸುವ ಮೂಲಕ ಆರೆಂಜ್ ಕ್ಯಾಪ್ ತಮ್ಮದಾಗಿದ್ದಾರೆ. ರಾಹುಲ್ 12 ರನ್ ಗಳಿಸಿ ಔಟಾದರೂ, ಈ ಸಣ್ಣ ಇನ್ನಿಂಗ್ಸ್ ಅವರನ್ನು ಈ ಋತುವಿನ ಅತ್ಯಂತ ಯಶಸ್ವಿ ಬ್ಯಾಟ್ಸ್‌ಮನ್ ಆಗಿ ಮಾಡಿದೆ. ರಾಹುಲ್ ಇದುವರೆಗೆ 10 ಪಂದ್ಯಗಳಲ್ಲಿ 180.89 ಸ್ಟ್ರೈಕ್ ರೇಟ್‌ನಲ್ಲಿ 445 ರನ್ ಗಳಿಸಿದ್ದಾರೆ, ಇದರಲ್ಲಿ ಅದ್ಭುತ ಶತಕ ಮತ್ತು ಮೂರು ಅರ್ಧಶತಕಗಳು ಸೇರಿವೆ.

ಅಭಿಷೇಕ್ ಶರ್ಮಾ ಮತ್ತು ಕ್ಲಾಸೆನ್ ನಡುವೆ ಕಠಿಣ ಸ್ಪರ್ಧೆ

ಈ ಹಿಂದೆ ನಂಬರ್ 1 ಸ್ಥಾನದಲ್ಲಿದ್ದ ಸನ್‌ರೈಸರ್ಸ್ ಹೈದರಾಬಾದ್‌ನ ಅಭಿಷೇಕ್ ಶರ್ಮಾ ಈಗ ಎರಡನೇ ಸ್ಥಾನಕ್ಕೆ ಕುಸಿದಿದ್ದಾರೆ. ಅಭಿಷೇಕ್ 10 ಪಂದ್ಯಗಳಲ್ಲಿ 206.57 ರ ಅದ್ಭುತ ಸ್ಟ್ರೈಕ್ ರೇಟ್‌ನಲ್ಲಿ 440 ರನ್ ಗಳಿಸಿದ್ದಾರೆ. ಅವರ ನಂತರ ಹೈದರಾಬಾದ್‌ನ ಹೆನ್ರಿಕ್ ಕ್ಲಾಸೆನ್ 425 ರನ್‌ಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ. ಈ ಪಟ್ಟಿಯಲ್ಲಿ ಅಗ್ರ ಐದು ಸ್ಥಾನಗಳಲ್ಲಿ ತಮ್ಮ ಸ್ಥಾನವನ್ನು ಕಾಯ್ದುಕೊಂಡಿರುವ ಏಕೈಕ ವಿದೇಶಿ ಆಟಗಾರ ಕ್ಲಾಸೆನ್. ಈ ಮೂರರ ನಡುವಿನ ರನ್‌ಗಳ ಅಂತರವು ತುಂಬಾ ಚಿಕ್ಕದಾಗಿದ್ದು, ಪ್ರತಿ ಪಂದ್ಯದಿಂದ ಪಂದ್ಯಕ್ಕೆ ಆರೆಂಜ್ ಕ್ಯಾಪ್ ಬದಲಾಗಲಿದೆ.

15 ವರ್ಷದ ವೈಭವ್ ಸೂರ್ಯವಂಶಿ ಅವರ ಐತಿಹಾಸಿಕ ಪ್ರದರ್ಶನ

ಈ ಋತುವಿನ ಅತಿದೊಡ್ಡ ವಿಶೇಷ ಎಂದರೆ, 15 ವರ್ಷದ ವೈಭವ್ ಸೂರ್ಯವಂಶಿ, ನಾಲ್ಕನೇ ಸ್ಥಾನದಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ. ಅವರು 10 ಇನ್ನಿಂಗ್ಸ್‌ಗಳಲ್ಲಿ 237.64 ಸ್ಟ್ರೈಕ್ ರೇಟ್‌ನಲ್ಲಿ 404 ರನ್ ಗಳಿಸಿದ್ದಾರೆ. ಗಮನಾರ್ಹವಾಗಿ, ವೈಭವ್ ಈ ಋತುವಿನಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು (37) ಹೊಡೆದ ಬ್ಯಾಟ್ಸ್‌ಮನ್ ಕೂಡ ಆಗಿದ್ದಾರೆ. ಅವರ ನಂತರ ಐದನೇ ಸ್ಥಾನದಲ್ಲಿ ಗುಜರಾತ್‌ನ ಸಾಯಿ ಸುದರ್ಶನ್ ಇದ್ದಾರೆ, ಅವರು 385 ರನ್ ಗಳಿದ್ದಾರೆ. ಈ ನಾಲ್ವರು ಯುವ ಮತ್ತು ಅನುಭವಿ ಭಾರತೀಯ ಆಟಗಾರರು ಅಗ್ರ ಐದರಲ್ಲಿ ಇರುವುದು ಭಾರತೀಯ ಕ್ರಿಕೆಟ್‌ನ ಭವಿಷ್ಯಕ್ಕೆ ಸಕಾರಾತ್ಮಕ ಸಂಕೇತವಾಗಿದೆ.

Delhi Capitlas: ಪವರ್ ಪ್ಲೇನಲ್ಲಿ ನೋ ಪವರ್: ಮೊದಲ ಆರು ಓವರ್‌ಗಳಲ್ಲೇ ಪಂದ್ಯ ಸೋಲುತ್ತಿರುವ ಡೆಲ್ಲಿ ಕ್ಯಾಪಿಟಲ್ಸ್‌

ಐಪಿಎಲ್ 2026 ಲೀಗ್ ಪಂದ್ಯಗಳು ಅಂತಿಮ ಹಂತಕ್ಕೆ ತಲುಪುತ್ತಿದ್ದಂತೆ, ಬ್ಯಾಟ್ಸ್‌ಮನ್‌ಗಳಲ್ಲಿ ರನ್‌ಗಳ ಹಸಿವು ಹೆಚ್ಚುತ್ತಿದೆ. ಕೆಎಲ್ ರಾಹುಲ್ ಅವರ ಆರೆಂಜ್ ಕ್ಯಾಪ್ ಎಷ್ಟು ಕಾಲ ಉಳಿಯುತ್ತದೆ ಎಂಬುದು ಅಭಿಷೇಕ್ ಶರ್ಮಾ ಮತ್ತು ಕ್ಲಾಸೆನ್ ಅವರ ಮುಂದಿನ ಪಂದ್ಯಗಳ ಮೇಲೆ ಅವಲಂಬಿತವಾಗಿರುತ್ತದೆ. 44 ಬೌಂಡರಿಗಳು ಮತ್ತು 24 ಸಿಕ್ಸರ್‌ಗಳೊಂದಿಗೆ, ರಾಹುಲ್ ರನ್ ಗಳಿಸುವುದು ಮಾತ್ರವಲ್ಲದೆ ಡೆಲ್ಲಿ ಕ್ಯಾಪಿಟಲ್ಸ್‌ನ ಬ್ಯಾಟಿಂಗ್‌ನ ಬೆನ್ನೆಲುಬಾಗಿಯೂ ಇದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನಿತೀಶ್ ರಾಣಾ ‘ಔಟ್’ ಗೊಂದಲ: ಐಪಿಎಲ್ ನಿಯಮ ಏನು ಹೇಳುತ್ತೆ? – Kannada News | IPL 2026: Nitish rana out controversy

IPL 2026: ಮೇ 5 ರಂದು ನಡೆದ ಡೆಲ್ಲಿ ಕ್ಯಾಪಿಟಲ್ಸ್​ ಮತ್ತು ಚೆನ್ನೈ ಸೂಪರ್ ಕಿಂಗ್ಸ್​ ನಡುವಿನ ರೋಚಕ ಹಣಾಹಣಿ ಕೇವಲ ಆಟದಿಂದ ಮಾತ್ರವಲ್ಲದೆ, ಮೈದಾನದಲ್ಲಿ ನಡೆದ ಅನಿರೀಕ್ಷಿತ ಘಟನೆಗಳಿಂದಲೂ ಸುದ್ದಿಯಲ್ಲಿದೆ. ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ಈ ಮ್ಯಾಚ್​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಆಟಗಾರ ನಿತೀಶ್ ರಾಣಾ ಅವರ ‘ವಿಚಿತ್ರ ಔಟ್’ ಪ್ರಮುಖ ಚರ್ಚೆಯ ವಿಷಯವಾಯಿತು.

ನಿತೀಶ್ ರಾಣಾ ಔಟ್ ಗೊಂದಲ:

ಡೆಲ್ಲಿ ಕ್ಯಾಪಿಟಲ್ಸ್ ಬ್ಯಾಟಿಂಗ್ ಮಾಡುತ್ತಿದ್ದಾಗ 10ನೇ ಓವರ್‌ನಲ್ಲಿ ನಿತೀಶ್ ರಾಣಾ ಅವರ ವಿಕೆಟ್ ದೊಡ್ಡ ಗೊಂದಲಕ್ಕೆ ಕಾರಣವಾಯಿತು. ನೂರ್ ಅಹಮದ್ ಅವರ ಎಸೆತವನ್ನು ಸ್ವೀಪ್ ಮಾಡಲು ಪ್ರಯತ್ನಿಸಿದ ರಾಣಾ ಫೈನ್ ಲೆಗ್‌ನಲ್ಲಿ ಕ್ಯಾಚ್ ನೀಡಿದರು. ಆದರೆ ಅದೇ ಸಮಯದಲ್ಲಿ ಸ್ಟಂಪ್ ಮೇಲಿನ ಬೇಲ್ಸ್ ಕೆಳಗೆ ಬಿದ್ದಿದ್ದವು.

  •  ಗೊಂದಲವೇನು?: ನಿತೀಶ್ ರಾಣಾ ಅವರು ‘ಹಿಟ್ ವಿಕೆಟ್’ ಆಗಿದ್ದಾರೆಯೇ ಅಥವಾ ವಿಕೆಟ್ ಕೀಪರ್ ಸಂಜು ಸ್ಯಾಮ್ಸನ್ ಅವರ ಗ್ಲೌಸ್ ತಾಗಿ ಬೇಲ್ಸ್ ಬಿದ್ದಿದೆಯೇ ಎಂಬ ಪ್ರಶ್ನೆ ಎದ್ದಿತು.
  • ನಿಯಮ ಏನು ಹೇಳುತ್ತದೆ?: ಎಂಸಿಸಿ ಕ್ರಿಕೆಟ್ ನಿಯಮಗಳ ಪ್ರಕಾರ, ಬ್ಯಾಟರ್ ಅಥವಾ ಕೀಪರ್ ಸ್ಟಂಪ್‌ಗೆ ತಾಗದಿದ್ದರೂ ಬೇಲ್ಸ್ ಬಿದ್ದರೆ ಅದನ್ನು ‘ಬಾಹ್ಯ ಕಾರಣ’ (ಗಾಳಿ ಅಥವಾ ಕಂಪನ) ಎಂದು ಪರಿಗಣಿಸಲಾಗುತ್ತದೆ.

ಈ ಪಂದ್ಯದ ವೇಳೆ ದೆಹಲಿಯಲ್ಲಿ ಬಲವಾದ ಗಾಳಿ ಬೀಸುತ್ತಿದ್ದರಿಂದ, ಬೇಲ್ಸ್ ಬಿದ್ದಿರುವುದು ಸ್ಪಷ್ಟವಾಗಿತ್ತು. ಇದನ್ನು  ಪರಿಗಣಿಸಿ ಅಂಪೈರ್‌ಗಳು ನಿತೀಶ್ ರಾಣಾ ಅವರಿಗೆ ‘ಔಟ್’ ನೀಡಿದರು.

ಇದನ್ನೂ ಓದಿ: IPL 2026: ಪ್ಲೇಆಫ್​ಗೇರಲು ಯಾವ ತಂಡ ಎಷ್ಟು ಪಂದ್ಯ ಗೆಲ್ಲಬೇಕು? ಇಲ್ಲಿದೆ ಮಾಹಿತಿ

ಐಪಿಎಲ್ ನಿಯಮ ಹೇಳುವುದೇನು?

  • ಕ್ಯಾಚ್‌ಗೆ ಮೊದಲ ಆದ್ಯತೆ: ಬ್ಯಾಟರ್ ಹೊಡೆದ ಚೆಂಡು ಫೀಲ್ಡರ್ ಕೈ ಸೇರುವ ಮೊದಲು ವಿಕೆಟ್ ಕೀಪರ್ ಅಥವಾ ಬೇರೆ ಯಾವುದೋ ಕಾರಣಕ್ಕೆ (ಗಾಳಿ ಇತ್ಯಾದಿ) ಬೇಲ್ಸ್ ಕೆಳಗೆ ಬಿದ್ದರೂ, ಅದು ಕ್ಯಾಚ್ ಹಿಡಿಯುವ ಪ್ರಕ್ರಿಯೆಗೆ ಅಡ್ಡಿಯಾಗುವುದಿಲ್ಲ. ಬ್ಯಾಟರ್ ಚೆಂಡನ್ನು ಹೊಡೆದಾಗ ಅದು ನೇರವಾಗಿ ಫೀಲ್ಡರ್ ಕೈ ಸೇರಿದರೆ ಅದು ‘ಕ್ಯಾಚ್ ಔಟ್’ ಎಂದೇ ಪರಿಗಣಿಸಲ್ಪಡುತ್ತದೆ.
  • ವಿಕೆಟ್ ಬೀಳುವುದು ಮತ್ತು ಔಟ್: ವಿಕೆಟ್ ಕೀಪರ್ ಬೇಲ್ಸ್ ಬೀಳಿಸುವುದು ಕೇವಲ ‘ಸ್ಟಂಪಿಂಗ್’ ಅಥವಾ ‘ರನ್ ಔಟ್’ಗೆ ಮಾತ್ರ ಅನ್ವಯಿಸುತ್ತದೆ. ಆದರೆ ಕ್ಯಾಚ್ ಎಂಬುದು ಬ್ಯಾಟರ್ ಮತ್ತು ಫೀಲ್ಡರ್ ನಡುವಿನ ಕ್ರಿಯೆ. ಹಾಗಾಗಿ ವಿಕೆಟ್ ಬಿದ್ದಿದ್ದರೂ ಕ್ಯಾಚ್ ಹಿಡಿದರೆ ಬ್ಯಾಟರ್ ಔಟ್ ಎಂದು ಪರಿಗಣಿಸಲಾಗುತ್ತದೆ.
  •  ಒಂದು ವಿನಾಯಿತಿ: ಒಂದು ವೇಳೆ ವಿಕೆಟ್ ಕೀಪರ್ ಬೇಲ್ಸ್ ಬೀಳಿಸಿದ ನಂತರ, ಆ ಚೆಂಡು ವಿಕೆಟ್ ಅಥವಾ ಬಿದ್ದಿರುವ ಬೇಲ್ಸ್‌ಗೆ ತಗುಲಿ ನಂತರ ಫೀಲ್ಡರ್ ಕೈ ಸೇರಿದರೆ, ಅದನ್ನು ‘ನಾಟ್ ಔಟ್’ ಎಂದು ಘೋಷಿಸಲಾಗುತ್ತದೆ. ಏಕೆಂದರೆ ಚೆಂಡು ನೆಲಕ್ಕೆ ಅಥವಾ ಬೇರೆ ವಸ್ತುವಿಗೆ ತಗುಲಿದೆ ಎಂದು ಪರಿಗಣಿಸಬಹುದು. ಆದರೆ ಬೇಲ್ಸ್ ಅಥವಾ ಸ್ಟಂಪ್ ಬಿದ್ದಾಗ, ಚೆಂಡು ನೇರವಾಗಿ ಫೀಲ್ಡರ್ ಕೈ ಸೇರಿದರೆ ಅದು ಖಂಡಿತ ಔಟ್.

ನಿತೀಶ್ ರಾಣಾ ಪ್ರಕರಣದಲ್ಲಿ ಸಂಜು ಸ್ಯಾಮ್ಸನ್ ಗ್ಲೌಸ್ ತಗುಲಿ ಬೇಲ್ಸ್ ಬಿದ್ದಿದ್ದರೂ ಸಹ, ರಾಣಾ ಹೊಡೆದ ಚೆಂಡು ನೇರವಾಗಿ ಫೀಲ್ಡರ್ ಕೈ ಸೇರಿದ ಕಾರಣ ಅವರು ‘ಕ್ಯಾಚ್ ಔಟ್’ ಆಗಿದ್ದಾರೆ. ಬೇಲ್ಸ್​ ಬಿದ್ದಿರುವುದು ಇಲ್ಲಿ ಯಾವುದೇ ಪರಿಣಾಮ ಬೀರದು.

Source link

ಚುನಾವಣೆ ಮುಗಿದಿದೆ, ಶೀಘ್ರದಲ್ಲೇ ನಾಯಕತ್ವ ಗೊಂದಲಕ್ಕೆ ತೆರೆ ಎಳೆಯಬೇಕು: ಪರಮೇಶ್ವರ್ ಖಡಕ್ ಮಾತು – Kannada News | End Leadership Confusion Soon, Focus on Governance: Minister G Parameshwara to Congress High Command

ಬೆಂಗಳೂರು, ಮೇ 6: ಕರ್ನಾಟಕದ ನಾಯಕತ್ವ ಗೊಂದಲಕ್ಕೆ ಸಂಬಂಧಿಸಿದಂತೆ ಸಚಿವ ಡಾ. ಜಿ ಪರಮೇಶ್ವರ್ ಮಾತನಾಡಿದ್ದು, ಚುನಾವಣೆಗಳು ಮುಗಿದಿರುವುದರಿಂದ ಈ ವಿಷಯಕ್ಕೆ ಶೀಘ್ರದಲ್ಲೇ ತೆರೆ ಬೀಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಸಮರ್ಪಕ ಆಡಳಿತ ನೀಡುವುದು ಮುಖ್ಯವಾಗಿದ್ದು, ಜನಪರ ಕಾರ್ಯಕ್ರಮಗಳಿಗೆ ಆದ್ಯತೆ ನೀಡಬೇಕು ಎಂದರು. ಹಲವಾರು ನಾಯಕರು ಮುಂಚೂಣಿಯಲ್ಲಿ ಇರುವಾಗ ತೀರ್ಮಾನ ಕೈಗೊಳ್ಳುವುದು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಆದರೆ, ಈಗ ಚುನಾವಣೆಗಳ ಗಜಿಬಿಜಿ ಇಲ್ಲದಿರುವುದರಿಂದ ಹೈಕಮಾಂಡ್ ಶೀಘ್ರದಲ್ಲೇ ಈ ಬಗ್ಗೆ ನಿರ್ಧಾರ ಕೈಗೊಳ್ಳುತ್ತದೆ ಮತ್ತು ಕೈಗೊಳ್ಳಬೇಕು ಎಂದು ಪರಮೇಶ್ವರ್ ಹೇಳಿದರು.

ಆಂತರಿಕ ಭಿನ್ನಾಭಿಪ್ರಾಯಗಳು ಆಡಳಿತದ ಮೇಲೆ ದುಷ್ಪರಿಣಾಮ ಬೀರಬಾರದು ಎಂಬುದನ್ನು ಗಮನದಲ್ಲಿಟ್ಟುಕೊಂಡು ನಿರ್ಧಾರ ಕೈಗೊಳ್ಳಬೇಕಿದೆ. ಕಳೆದ 40 ವರ್ಷಗಳಲ್ಲಿ ಇಂತಹ ಅನೇಕ ಸಂದರ್ಭಗಳನ್ನು ನೋಡಿದ್ದೇನೆ ಎಂದು ಅವರು ಸ್ಮರಿಸಿದರು. ಸಂಪುಟ ಪುನಾರಚನೆ ಸೇರಿದಂತೆ ಯಾವುದೇ ನಿರ್ಧಾರಗಳನ್ನು ಮುಖ್ಯಮಂತ್ರಿಗಳು, ಪಕ್ಷದ ಅಧ್ಯಕ್ಷರು ಮತ್ತು ಹೈಕಮಾಂಡ್ ಸಭೆ ಸೇರಿ ತೆಗೆದುಕೊಳ್ಳುತ್ತಾದೆ ಎಂದು ಪರಮೇಶ್ವರ್ ಸ್ಪಷ್ಟಪಡಿಸಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ತಂದೆ ಸಾವಿನ ಸುದ್ದಿಗೆ ಮಗ ಜೀವಾ ಶಾಕ್; ಬಿಗಿದಪ್ಪಿ ಅತ್ತ ನಟ – Kannada News | Jiiva’s Father R.B. Choudary Dies in Accident; Actor Shocked by Sudden Loss

ಸೂಪರ್ ಗುಡ್ ಫಿಲ್ಮ್ಸ್ ನಿರ್ಮಾಣ ಸಂಸ್ಥೆಯ ಮುಖ್ಯಸ್ಥ ಆರ್.ಬಿ. ಚೌಧರಿ (RB Choudary) ಅವರು ರಾಜಸ್ಥಾನದ ಉದಯಪುರದಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ನಿಧನರಾಗಿದ್ದಾರೆ. ತಮಿಳಿನಲ್ಲಿ ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ ಖ್ಯಾತಿ ಅವರಿಗೆ ಇದೆ. ಅವರ ಸಾವಿನ ಸುದ್ದಿ ಕೇಳಿ ಇಡೀ ದಕ್ಷಿಣ ಭಾರತದ ಚಿತ್ರರಂಗ ಆಘಾತಕ್ಕೊಳಗಾಗಿದೆ. ಅವರ ಪುತ್ರ, ನಟ ಜೀವಾ ತಂದೆಯ ಸಾವಿನ ಸುದ್ದಿ ಕೇಳಿ ಶಾಕ್​​ಗೆ ಒಳಗಾದರು.

1. ತಮಿಳು ಚಿತ್ರರಂಗದ ಖ್ಯಾತ ನಿರ್ಮಾಪಕ ಆರ್​​ಬಿ ಚೌಧರಿ ನಿಧನ
2. ರಾಜಸ್ಥಾನದ ಉದಯಪುರದಲ್ಲಿ ನಡೆದ ರಸ್ತೆ ಅಪಘಾತ 
3. ತಂದೆ ಸಾವಿನಿಂದ ಮಗ, ನಟ ಜೀವಾಗೆ ಶಾಕ್ 

ಚೌಧರಿ ಅವರು ಈ ರೀತಿ ನಿಧನ ಹೊಂದುತ್ತಾರೆ ಎಂದು ಯಾರೆಂದರೆ ಯಾರೂ ಊಹಿಸರಲಿಲ್ಲ. ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಜೀವಾ ಅವರು ದುಃಖ ತಡೆಯಲಾಗದೆ ಕಣ್ಣೀರು ಹಾಕಿದ್ದಾರೆ. ಆಪ್ತ ಬಳಗದವರು ಜೀವ ಅವರಿಗೆ ಸಾಂತ್ವನ ಹೇಳಲು ಬಂದರು. ಆಗ ಅವರನ್ನು ಜೀವಾ ಅಪ್ಪಿಬಿಕ್ಕಿ ಬಿಕ್ಕಿ ಅತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವಿಡಿಯೋ ನೋಡಿದ ಅಭಿಮಾನಿಗಳು ಕೂಡ ಭಾವುಕರಾಗಿದ್ದಾರೆ. ತಂದೆಯ ಮಾರ್ಗದರ್ಶನದಲ್ಲೇ ಬೆಳೆದಿದ್ದ ಜೀವ ಅವರಿಗೆ ಈ ಸಾವು ದೊಡ್ಡ ಸಾಕಷ್ಟು ನೋವನ್ನು ನೀಡಿದೆ.

ಚೌಧರಿ ಕೇವಲ ನಿರ್ಮಾಪಕ ಮಾತ್ರ ಆಗಿರಲಿಲ್ಲ. ಜೀವಾ ಹಾಗೂ ಜಿತನ್ ರಮೇಶ್ ಅವರ ವೃತ್ತಿಜೀವನಕ್ಕೆ ಭದ್ರ ಬುನಾದಿ ಹಾಕಿಕೊಟ್ಟು ತಂದೆಯಾಗಿ ತಮ್ಮ ಕರ್ತವ್ಯ ಮಾಡಿದ್ದರು. ಸೂಪರ್ ಗುಡ್ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಜೀವಾ ಅವರಿಗೆ ಹಲವು ಹಿಟ್ ಸಿನಿಮಾಗಳನ್ನು ನೀಡಿ, ಚಿತ್ರರಂಗದಲ್ಲಿ ಅವರೊಂದು ಸ್ಥಾನ ಕಂಡುಕೊಳ್ಳುವಂತೆ ಮಾಡಿದ್ದರು. ವೃತ್ತಿಪರತೆಯ ಜೊತೆಗೆ ಮಗನ ಪ್ರತಿಭೆಯ ಮೇಲೆ ಅವರು ಅಪಾರ ನಂಬಿಕೆ ಇಟ್ಟಿದ್ದರು. ತಂದೆಯನ್ನು ಕಳೆದುಕೊಂಡ ಜೀವಾ ಈಗ ಅನಾಥಪ್ರಜ್ಞೆಯಲ್ಲಿ ಮುಳುಗಿದ್ದಾರೆ.

1988ರಿಂದಲೂ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದ ಆರ್.ಬಿ. ಚೌಧರಿ, ಕನ್ನಡ ಸೇರಿದಂತೆ ದಕ್ಷಿಣದ ಎಲ್ಲಾ ಭಾಷೆಗಳಲ್ಲಿಚಿತ್ರಗಳನ್ನು ನೀಡಿದವರು. ಹೊಸ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುತ್ತಿದ್ದ ಅವರು, ಹಲವು ತಾಂತ್ರಿಕ ವರ್ಗದವರನ್ನು ಚಿತ್ರರಂಗಕ್ಕೆ ಪರಿಚಯಿಸಿದ ಶ್ರೇಯಸ್ಸಿಗೆ ಪಾತ್ರರಾಗಿದ್ದರು. ಏಳು ಬಾರಿ ತಮಿಳುನಾಡು ರಾಜ್ಯ ಚಲನಚಿತ್ರ ಪ್ರಶಸ್ತಿ ಪಡೆದಿದ್ದ ಅವರ ಹೆಚ್ಚುಗಾರಿಗೆ.

ಇದನ್ನೂ ಓದಿ: ಖ್ಯಾತ ನಿರ್ಮಾಪಕ ಆರ್.ಬಿ. ಚೌಧರಿ ನಿಧನ; ರಾಜಸ್ಥಾನದಲ್ಲಿ ಭೀಕರ ರಸ್ತೆ ಅಪಘಾತ

ಚೌಧರಿ ಅವರ ಪತ್ನಿ ಮಹಜಬೀನ್ ಹಾಗೂ ನಾಲ್ವರು ಗಂಡು ಮಕ್ಕಳಾದ ಸುರೇಶ್, ಜೀವನ್, ಜೀವಾಮತ್ತು ಜಿತನ್ ರಮೇಶ್ ಅವರನ್ನು ಅಗಲಿದ್ದಾರೆ. ಈ ಶೋಕದ ಸಮಯದಲ್ಲಿ ದಕ್ಷಿಣ ಭಾರತದ ಖ್ಯಾತ ನಟ-ನಟಿಯರು ಜೀವಾ ಅವರ ಕುಟುಂಬಕ್ಕೆ ಧೈರ್ಯ ತುಂಬುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ವಿಜಯ್ ರೀತಿ ಕರ್ನಾಟಕದಲ್ಲಿ ಗೆಲ್ಲೋದು ಯಾರು? ಉತ್ತರ ಕೊಟ್ಟ ರಾಗಿಣಿ ದ್ವಿವೇದಿ – Kannada News | Ragini Dwivedi talks about Thalapathy Vijay election win and Darshan Kichcha Sudeep Yash

ತಮಿಳುನಾಡಿನಲ್ಲಿ ದಳಪತಿ ವಿಜಯ್ (Thalapathy Vijay) ಅವರು ಚುನಾವಣೆ ಗೆದ್ದು ಸರ್ಕಾರ ರಚಿಸುತ್ತಿದ್ದಾರೆ. ಅವರ ಈ ಗೆಲುವು ಹಲವರಿಗೆ ಸ್ಫೂರ್ತಿ ಆಗಿದೆ. ಈ ಬಗ್ಗೆ ನಟಿ ರಾಗಿಣಿ ದ್ವಿವೇದಿ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಕರ್ನಾಟಕದಲ್ಲಿ ಕೂಡ ವಿಜಯ್ ರೀತಿ ಬೇರೆ ಯಾವ ನಟರು ಚುನಾವಣೆಯಲ್ಲಿ ನಿಲ್ಲಬಹುದು ಎಂಬ ಪ್ರಶ್ನೆಗೆ ಅವರು ಉತ್ತರಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ದರ್ಶನ್ (Darshan), ಸುದೀಪ್, ಯಶ್ ಮುಂತಾದವರ ಹೆಸರು ಹೇಳಿಬರುತ್ತಿದೆ. ‘ಮನಸ್ಸು ಮಾಡಿದರೆ ಯಾರು ಏನು ಬೇಕಾದರೂ ಮಾಡಬಹುದು. ಈ ಎಲ್ಲ ನಟರಿಗೂ ಸಾಮರ್ಥ್ಯ ಇದೆ. ಒಳ್ಳೆಯ ಮನಸ್ಸಿನಿಂದ ಮಾಡಿದರೆ ಸಾಧ್ಯ ಆಗುತ್ತದೆ’ ಎಂದು ರಾಗಿಣಿ ದ್ವಿವೇದಿ (Ragini Dwivedi) ಹೇಳಿದ್ದಾರೆ. ರಾಜಕೀಯದ ಬಗ್ಗೆ ತಮ್ಮ ನಿಲುವು ಏನು ಎಂಬುದನ್ನು ಕೂಡ ಅವರು ತಿಳಿಸಿದ್ದಾರೆ. ರಾಗಿಣಿ ಅವರು ಮಾತನಾಡಿದ ವಿಡಿಯೋ ಇಲ್ಲಿದೆ..

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Hindu Rituals: ಆರತಿಯ ಸಮಯದಲ್ಲಿ ಕರ್ಪೂರ ಆರಿಹೋದರೆ ಅಶುಭವೇ? ಜ್ಯೋತಿಷ್ಯ ತಜ್ಞರು ಹೇಳುವುದೇನು? – Kannada News | Aarti’s Deep Spiritual Meaning: Hindu Rituals, Camphor, and Pooja Significance

ಪೂಜೆಯಲ್ಲಿ ಆರತಿಯ ಮಹತ್ವImage Credit source: Pinterest

ಹಿಂದೂ ಧರ್ಮದ ಪ್ರತಿಯೊಂದು ಸಂಪ್ರದಾಯದ ಹಿಂದೆ ಒಂದು ವಿಶೇಷವಾದ ಅರ್ಥ ಮತ್ತು ಉದ್ದೇಶವಿರುತ್ತದೆ. ಪೂಜೆಯ ವಿವಿಧ ಹಂತಗಳಾದ ಧೂಪ, ದೀಪ ಮತ್ತು ನೈವೇದ್ಯಗಳ ನಂತರ ಸಮರ್ಪಿಸುವ ಆರತಿಯು ಅತ್ಯಂತ ಪ್ರಮುಖವಾದುದು. ಈ ಆರತಿಯ ಬೆಳಕು ಕೇವಲ ದೃಶ್ಯವಲ್ಲ, ಅದು ಭಕ್ತರ ಪಾಲಿಗೆ ದೇವರ ದಿವ್ಯ ಸಾನ್ನಿಧ್ಯದ ಸಂಕೇತವಾಗಿದೆ. ಆಧ್ಯಾತ್ಮಿಕ ನಂಬಿಕೆಯ ಪ್ರಕಾರ, ಆರತಿಯ ಜ್ಯೋತಿಯು ಮನುಷ್ಯನಲ್ಲಿರುವ ಅಜ್ಞಾನವೆಂಬ ಕತ್ತಲೆಯನ್ನು ಹೋಗಲಾಡಿಸಿ ಜ್ಞಾನದ ಬೆಳಕನ್ನು ಮೂಡಿಸುತ್ತದೆ. ಅಲ್ಲದೆ, ಇದು ಮನಸ್ಸಿನಲ್ಲಿರುವ ನಕಾರಾತ್ಮಕ ಆಲೋಚನೆಗಳನ್ನು ಕಡಿಮೆ ಮಾಡಿ, ಸಕಾರಾತ್ಮಕ ಮನೋಭಾವವನ್ನು ಮೂಡಿಸಲು ನೆರವಾಗುತ್ತದೆ.

ಆರತಿಯಲ್ಲಿ ಕರ್ಪೂರದ ಬಳಕೆ:

ಆರತಿಯಲ್ಲಿ ವಿಶೇಷವಾಗಿ ಕರ್ಪೂರದ ಬಳಕೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗಿದೆ. ಕರ್ಪೂರವು ಉರಿದಾಗ ಸಂಪೂರ್ಣವಾಗಿ ಕರಗಿ ಹೋಗುತ್ತದೆ ಮತ್ತು ಯಾವುದೇ ಬೂದಿಯನ್ನು ಉಳಿಸುವುದಿಲ್ಲ. ಇದು ಮನುಷ್ಯನ ಅಹಂಕಾರ ಮತ್ತು ಲೌಕಿಕ ಆಸೆಗಳ ವಿನಾಶವನ್ನು ಸೂಚಿಸುತ್ತದೆ. ಅಂದರೆ, ಮನುಷ್ಯ ತನ್ನ ಅಹಂಕಾರವನ್ನು ಬಿಟ್ಟು ದೇವರಲ್ಲಿ ಲೀನವಾಗಬೇಕು ಎಂಬುದು ಇದರ ಹಿಂದಿನ ತತ್ವ. ವೈಜ್ಞಾನಿಕ ದೃಷ್ಟಿಯಿಂದಲೂ ಕರ್ಪೂರದ ಪರಿಮಳವು ವಾತಾವರಣದಲ್ಲಿರುವ ಕ್ರಿಮಿಕೀಟಗಳನ್ನು ನಾಶಪಡಿಸಿ, ಪರಿಸರವನ್ನು ಶುದ್ಧೀಕರಿಸಲು ಸಹಾಯ ಮಾಡುತ್ತದೆ.

ಆರತಿ ಬೆಳಗುವ ಕ್ರಮ:

ಆರತಿ ಬೆಳಗುವ ಕ್ರಮಕ್ಕೂ ಅದರದ್ದೇ ಆದ ಶಾಸ್ತ್ರವಿದೆ. ಸಾಮಾನ್ಯವಾಗಿ ಶುದ್ಧವಾದ ಪಾತ್ರೆಯಲ್ಲಿ ಕರ್ಪೂರವನ್ನು ಬೆಳಗಿ, ದೇವರ ಪಾದಗಳು, ಹೊಕ್ಕುಳಿನ ಭಾಗ ಮತ್ತು ಮುಖದ ಬಳಿ ಚಲಿಸುವ ಮೂಲಕ ಇಡೀ ವಿಗ್ರಹಕ್ಕೆ ಬೆಳಗಲಾಗುತ್ತದೆ. ಅಗತ್ಯವಿದ್ದರೆ ಮಧ್ಯದಲ್ಲಿ ಜ್ಯೋತಿ ಆರಿಹೋಗದಂತೆ ಹೆಚ್ಚುವರಿ ಕರ್ಪೂರವನ್ನು ಸಿದ್ಧವಾಗಿಟ್ಟುಕೊಳ್ಳುವುದು ರೂಢಿ. ಪೂಜೆಯ ಕೊನೆಯಲ್ಲಿ ಈ ದಿವ್ಯ ಜ್ಯೋತಿಯನ್ನು ಕಣ್ಣುಗಳಿಗೆ ಹಚ್ಚಿಕೊಳ್ಳುವ ಮೂಲಕ ದೇವರ ಆಶೀರ್ವಾದವನ್ನು ಪಡೆದುಕೊಳ್ಳಲಾಗುತ್ತದೆ. ಸಂಪ್ರದಾಯಗಳಲ್ಲಿ ಏಕ ಆರತಿ ಮತ್ತು ಪಂಚ ಆರತಿ ಎಂಬ ವಿಧಗಳಿದ್ದು, ಪಂಚ ಆರತಿಯು ಪಂಚಭೂತಗಳ ಸಂಕೇತವೆಂದು ನಂಬಲಾಗಿದೆ.

ಇದನ್ನೂ ಓದಿ: ದೇವರಿಗೆ ದೀಪ ಹಚ್ಚುವಾಗ ಈ ವಿಷ್ಯ ತಿಳಿದಿರಲಿ; ಇದು ನಿಮ್ಮ ಅದೃಷ್ಟವನ್ನೇ ಬದಲಿಸಲಿದೆ

ಆರತಿಯ ಸಮಯದಲ್ಲಿ ಕರ್ಪೂರ ಆರಿಹೋದರೆ ಅಶುಭವೇ?

ಅನೇಕ ಭಕ್ತರು ಆರತಿಯ ಸಮಯದಲ್ಲಿ ಕರ್ಪೂರವು ಮಧ್ಯದಲ್ಲೇ ಆರಿಹೋದರೆ ಅಥವಾ ತಟ್ಟೆಯಿಂದ ಕೆಳಗೆ ಬಿದ್ದರೆ ಅದು ಅಶುಭವೆಂದು ಆತಂಕಕ್ಕೊಳಗಾಗುತ್ತಾರೆ. ಆದರೆ, ವಾಸ್ತವದಲ್ಲಿ ಇದು ಕೇವಲ ಗಾಳಿಯ ವೇಗ, ಕರ್ಪೂರದ ಗುಣಮಟ್ಟ ಅಥವಾ ತಾಂತ್ರಿಕ ಕಾರಣಗಳಿಂದ ಸಂಭವಿಸುವ ಘಟನೆಯೇ ಹೊರತು ದೈವಿಕ ಕೋಪವಲ್ಲ. ಅಂತಹ ಸಂದರ್ಭಗಳಲ್ಲಿ ಗಾಬರಿಗೊಳ್ಳದೆ, ಮತ್ತೆ ಭಕ್ತಿಯಿಂದ ಕರ್ಪೂರವನ್ನು ಹಚ್ಚಿ ಆರತಿಯನ್ನು ಪೂರ್ಣಗೊಳಿಸುವುದು ಸೂಕ್ತ. ದೇವರಿಗೆ ಬೇಕಿರುವುದು ಭಕ್ತನ ಭಕ್ತಿಯೇ ಹೊರತು ಆಕಸ್ಮಿಕವಾಗಿ ನಡೆಯುವ ಇಂತಹ ಘಟನೆಗಳಲ್ಲ ಎಂಬುದು ನೆನಪಿರಲಿ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 10:01 am, Wed, 6 May 26

Source link

ಸಂಜು ಸ್ಯಾಮ್ಸನ್ ಸ್ವಾರ್ಥಿನಾ? ಇಲ್ಲಿದೆ ಉತ್ತರ

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನ 48ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್​ ಜಯ ಸಾಧಿಸಿದೆ. ಈ ಗೆಲುವಿನ ರೂವಾರಿ ಸಂಜು ಸ್ಯಾಮ್ಸನ್. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು 20 ಓವರ್​ಗಳಲ್ಲಿ 155 ರನ್ ಕಲೆಹಾಕಿದ್ದರು. ಈ ಗುರಿಯನ್ನು ಬೆನ್ನತ್ತಿದ ಸಿಎಸ್​ಕೆ ಪರ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ ಸಂಜು ಸ್ಯಾಮ್ಸನ್ 52 ಎಸೆತಗಳಲ್ಲಿ 6 ಸಿಕ್ಸರ್ ಹಾಗೂ 7 ಫೋರ್​ಗಳೊಂದಿಗೆ ಅಜೇಯ 87 ರನ್ ಬಾರಿಸಿದರು. ಈ ಮೂಲಕ ಸಿಎಸ್​ಕೆ ತಂಡವನ್ನು 17.3 ಓವರ್​ಗಳಲ್ಲಿ ಗೆಲುವಿ ಗುರಿ ಮುಟ್ಟಿಸಿದರು. ಈ ಭರ್ಜರಿ ಬ್ಯಾಟಿಂಗ್​ಗೆ ಸಂಜು ಸ್ಯಾಮ್ಸನ್​​​ಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಕೂಡ ಒಲಿಯಿತು.

ಈ ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾತನಾಡಿದ ಸಂಜು ಸ್ಯಾಮ್ಸನ್, ಉತ್ತಮ ವಾಗಿ ಬ್ಯಾಟಿಂಗ್ ಮಾಡಿರುವುದು ಖುಷಿ ನೀಡಿದೆ. ಅದರಲ್ಲೂ ಸಿಎಸ್​ಕೆ ತಂಡ ಗೆದ್ದಿರುವುದು ಸಂತಸ ತಂದಿದೆ ಎಂದರು. ಇತ್ತ ಸಂಜು ಮಾತನಾಡುತ್ತಿದ್ದಂತೆ ಅತ್ತ ಸ್ಟೇಡಿಯಂನಲ್ಲಿ ಚೇಟ್ಟಾ ಘೋಷವಾಕ್ಯ ಮೊಳಗಲಾರಂಭಿಸಿತು.

ಇದಕ್ಕೆ ಪ್ರತಿಕ್ರಿಯಿಸಿದ ಸಂಜು ಸ್ಯಾಮ್ಸನ್, ಜನರು ನನ್ನನ್ನು ಪ್ರೀತಿಯಿಂದ ಚೇಟ್ಟಾ ಎಂದು ಕರೆಯುತ್ತಿದ್ದಾರೆ. ಆದರೆ ವೈಯಕ್ತಿಕವಾಗಿ ನನಗೆ ‘ಸಂಜು’ ಎಂದು ಕರೆಸಿಕೊಳ್ಳುವುದೇ ಹೆಚ್ಚು ಇಷ್ಟ ಎಂದರು.

ಇನ್ನು ಮೈದಾನದಲ್ಲಿ ಸಂಜು ಸ್ಯಾಮ್ಸನ್ ಅವರ ಶಾಂತ ಸ್ವಭಾವದ ಬಗ್ಗೆ ಕೇಳಿದಾಗ, “ನಾನು ಯಾವಾಗಲೂ ಹೀಗೆಯೇ ಇರುತ್ತೇನೆ. ಈಗ ನಾನು ಹೆಚ್ಚು ಸಮಯ ಕ್ರೀಸ್‌ನಲ್ಲಿ ಇರುವುದರಿಂದ ಜನರಿಗೆ ನಾನು ತುಂಬಾ ಶಾಂತವಾಗಿ ಕಾಣಿಸುತ್ತಿದ್ದೇನೆ. ಪಂದ್ಯ ಆಡದೆ ಹೊರಗಿದ್ದಾಗಲೂ ನಾನು ಅಷ್ಟೇ ಶಾಂತವಾಗಿರುತ್ತೇನೆ” ಎಂದು ನಗೆ ಬೀರಿದರು.

ಅಲ್ಲದೆ, ಕಳೆದ 3-5 ವರ್ಷಗಳಿಂದ ತಮ್ಮ ಬ್ಯಾಟಿಂಗ್ ಶೈಲಿಯಲ್ಲಿ ಸಣ್ಣ ತಾಂತ್ರಿಕ ಬದಲಾವಣೆಗಳನ್ನು ಮಾಡಿಕೊಂಡಿರುವುದು ರನ್ ಗಳಿಸಲು ಸಹಕಾರಿಯಾಗಿದೆ ಎಂದು ಇದೇ ವೇಳೆ ಸಂಜು ಸ್ಯಾಮ್ಸನ್ ತಿಳಿಸಿದ್ದಾರೆ.

ಸಂಜು ಸ್ಯಾಮ್ಸನ್ ಸ್ವಾರ್ಥಿನಾ?

ಈ ಪಂದ್ಯದಲ್ಲಿ ಸಂಜು ಸ್ಯಾಮ್ಸನ್​ಗೆ ಶತಕ ಬಾರಿಸುವ ಎಲ್ಲಾ ಅವಕಾಶಗಳಿದ್ದವು. ಆದರೆ ಅವರು ವೈಯಕ್ತಿಕ ಮೈಲಿಗಲ್ಲಿಗೆ ಆಸೆ ಪಡಲಿಲ್ಲ. “ಶತಕಗಳು ಯಾವಾಗಲೂ ವಿಶೇಷವೇ. ಆದರೆ ಅದನ್ನು ಪಡೆಯಲು ನಾನು ನಿಸ್ವಾರ್ಥ ಆಟವನ್ನು ಬಿಟ್ಟು ಸ್ವಾರ್ಥಿಯಾಗಬೇಕಿತ್ತು. ನನ್ನ ಜೊತೆಗಾರ ಕಾರ್ತಿಕ್ ಶರ್ಮಾ ಉತ್ತಮವಾಗಿ ಬ್ಯಾಟಿಂಗ್ ಮಾಡುತ್ತಿದ್ದರು.

‘ನನಗೆ ಒಂದು ಸಿಂಗಲ್ ಕೊಡು, ನಾನು ಶತಕ ಪೂರೈಸುತ್ತೇನೆ’ ಎಂದು ಅವರಿಗೆ ಹೇಳಲು ನನ್ನ ಮನಸ್ಸು ಒಪ್ಪಲಿಲ್ಲ. ಪಂದ್ಯವನ್ನು ಗೆಲ್ಲಿಸುವುದು ಮತ್ತು ಅಜೇಯನಾಗಿ ಉಳಿಯುವುದು ಶತಕಕ್ಕಿಂತ ಹೆಚ್ಚಿನ ತೃಪ್ತಿ ನೀಡುತ್ತದೆ” ಎಂದು ಹೇಳುವ ಮೂಲಕ ಸಂಜು ಸ್ಯಾಮ್ಸನ್ ತಾನೆಂತಹ ನಿಸ್ವಾರ್ಥಿ ಎಂಬುದನ್ನು ತೆರೆದಿಟ್ಟಿದ್ದಾರೆ.

ಈ ಪಂದ್ಯದಲ್ಲಿ ಅಜೇಯ 87 ರನ್ ಬಾರಿಸಿದ್ದ ಸಂಜು ಸ್ಯಾಮ್ಸನ್ ಮನಸ್ಸು ಮಾಡಿದ್ದರೆ ಶತಕ ಪೂರೈಸಬಹುದಿತ್ತು. ಆದರೆ ಶತಕದತ್ತ ಮುಖ ಮಾಡದೇ ಸಂಜು ಕೊನೆಯ ಹಂತದಲ್ಲಿ ಕಾರ್ತಿಕ್ ಶರ್ಮಾಗೆ ಹೆಚ್ಚಿನ ಸ್ಟ್ರೈಕ್ ನೀಡಿದ್ದರು. ಅವರ ಈ ನಡೆಗೆ ಇದೀಗ ಭಾರೀ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ.

ಇನ್ನು ಈ  ಪಂದ್ಯದ ಪರಿಸ್ಥಿತಿಯ ಬಗ್ಗೆ ಮಾತನಾಡಿದ ಸಂಜು, “ಪವರ್‌ಪ್ಲೇನಲ್ಲಿ ವಿಕೆಟ್ ಕಳೆದುಕೊಳ್ಳದೆ ನಿಧಾನವಾಗಿ ಆಡಿದರೂ ಪರವಾಗಿಲ್ಲ, ಮಧ್ಯಮ ಓವರ್‌ಗಳಲ್ಲಿ ಸ್ಪಿನ್ನರ್‌ಗಳ ವಿರುದ್ಧ ಅಬ್ಬರಿಸಿ ಪಂದ್ಯವನ್ನು ನಮ್ಮತ್ತ ತಿರುಗಿಸಬಹುದು ಎಂಬ ನಂಬಿಕೆ ನನಗಿತ್ತು. ನನ್ನ ಆಟದ ಯೋಜನೆ ಸ್ಪಷ್ಟವಾಗಿತ್ತು ಮತ್ತು ಅದು ಇಂದು ಕೈಹಿಡಿಯಿತು” ಎಂದರು.

ಇದನ್ನೂ ಓದಿ: IPL 2026: ಪ್ಲೇಆಫ್​ಗೇರಲು ಯಾವ ತಂಡ ಎಷ್ಟು ಪಂದ್ಯ ಗೆಲ್ಲಬೇಕು? ಇಲ್ಲಿದೆ ಮಾಹಿತಿ

ಸಂಜು ಸ್ಯಾಮ್ಸನ್ ಅವರ ಈ ಯೋಜಿತ ಬ್ಯಾಟಿಂಗ್​ ನೆರವಿನೊಂದಿಗೆ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ 8 ವಿಕೆಟ್​ಗಳ ಭರ್ಜರಿ ಗೆಲುವು ದಾಖಲಿಸಿದೆ. ಈ ಗೆಲುವಿನೊಂದಿಗೆ ಸಿಎಸ್​ಕೆ ತಂಡದ ಪ್ಲೇಆಫ್ ಆಸೆ ಕೂಡ ಜೀವಂತವಾಗಿದೆ. ಅಂದರೆ ಮುಂದಿನ 4 ಪಂದ್ಯಗಳಲ್ಲಿ ಜಯ ಸಾಧಿಸಿದರೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ಪ್ಲೇಆಫ್​ ಆಡುವುದು ಬಹುತೇಕ ಖಚಿತ.

Source link

Exit mobile version