Video: ತನ್ನ ತಾಯಿ ಕೆಲಸ ಮಾಡುತ್ತಿದ್ದ ಮನೆಯನ್ನೇ ಖರೀದಿಸಿ ಸರ್ಪ್ರೈಸ್ ಕೊಟ್ಟ ಮಗ – Kannada News | Son given surprises mother by buying the house where she worked as a maid

ತಾಯಿ ಪ್ರೀತಿ (mother love), ತ್ಯಾಗಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ತನ್ನ ಮಕ್ಕಳಿಗಾಗಿ ತಾಯಿ ತನ್ನ ಜೀವನವನ್ನೇ ಮುಡಿಪಾಗಿಡುತ್ತಾಳೆ. ಕೂಲಿ ಕೆಲಸ ಮಾಡಿ ಮಕ್ಕಳಿಗೆ ಭವಿಷ್ಯ ಕಟ್ಟುವ ತಾಯಿಯ ತ್ಯಾಗಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಇದೀಗ ತನ್ನ ತಾಯಿಗೆ ಹತ್ತು ವರ್ಷಗಳಿಂದ ಮನೆ ಕೆಲಸದಾಕೆ ದುಡಿಯುತ್ತಿದ್ದ  ಮನೆಯನ್ನೇ ಖರೀದಿಸಿ ಉಡುಗೊರೆಯಾಗಿ ಮಗ ನೀಡಿದ್ದಾನೆ.  ಮಗನ ಈ ಸರ್ಪ್ರೈಸ್ ನೋಡಿ ತಾಯಿ ಭಾವುಕಳಾಗಿದ್ದಾಳೆ. ಈ ವಿಡಿಯೋ ಸದ್ಯ ನೆಟ್ಟಿಗರ ಹೃದಯ ಗೆದ್ದಿದೆ.

ದೇಸಿ ಸೊಸೈಟಿ (_desisociety) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ಕ್ಲಿಪಿಂಗ್‌ನಲ್ಲಿ ಮನೆ ಕೆಲಸ ಮಾಡಿ ತನನ್ನು ಬೆಳೆಸಿದ ತಾಯಿಗೆ ಉಡುಗೊರೆ ನೀಡಿದ್ದಾನೆ. ಮಗನೊಬ್ಬ ತನ್ನ ಕಳೆದ ಹತ್ತು ವರ್ಷಗಳಲ್ಲಿ  ಮನೆ ಕೆಲಸದಾಕೆಯಾಗಿ ದುಡಿಯುತ್ತಿದ್ದ  ಮನೆಯನ್ನೇ ಖರೀದಿಸಿ ಸರ್ಪ್ರೈಸ್ ನೀಡಿರುವುದನ್ನು ನೋಡಬಹುದು. ಅಮ್ಮನನ್ನು ಕೆಲಸ ಮಾಡುತ್ತಿದ್ದ ಮನೆಗೆ ಕರೆದುಕೊಂಡು ಹೋಗಿ ಹೊಸ ಮನೆಯನ್ನು ತೋರಿಸಿದ್ದಾನೆ.  ಇದು ನಿನ್ನ ಮನೆ ಎನ್ನುತ್ತಿದ್ದಂತೆ ನಿನಗೇನೂ ಹುಚ್ಚ ಎಂದು ಬೈದಿದ್ದಾಳೆ.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ತಾಯಿಯನ್ನು ಮೊದಲ ಬಾರಿಗೆ ವಿಮಾನ ಹತ್ತಿಸಿದ ಯುವಕ, ವೈರಲ್‌ ಆಯ್ತು ದೃಶ್ಯ

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಅದ್ಭುತ ಎಂದು ಹೇಳಿದ್ದಾರೆ. ಮತ್ತೊಬ್ಬರು, ಇದಕ್ಕಿಂತ ಸಕ್ಸಸ್ ಬೇರೊಂದಿಲ್ಲ ಎಂದಿದ್ದಾರೆ. ಇನ್ನೊಬ್ಬರು, ತಾಯೇ, ಇಂತಹ ಮಗನನ್ನು ಪಡೆದ ನೀವೇ ಧನ್ಯರು ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪುತ್ರಿಗಾಗಿ ಮಂತ್ರಿ ತ್ಯಾಗ: ಅಂತೆ ಕಂತೆಗಳಿಗೆ ಸ್ಪಷ್ಟನೆ ನಿಡಿದ ಸಚಿವ ಕೆ.ಹೆಚ್. ಮುನಿಯಪ್ಪ – Kannada News | KH Muniyappa Clarify about Sacrifice His minister Post To daughter roopakala shashidhar

ಬೆಂಗಳೂರು, (ಆಗಸ್ಟ್ 07): ಸಂಪುಟ ಪುನಾರಚನೆ (karnataka Cabinet Expansion) ಬೆನ್ನಲ್ಲೇ ಕರ್ನಾಟಕ ಕಾಂಗ್ರೆಸ್​​​ನಲ್ಲಿ (Karnataka Congress) ಗೊಂದಲಗಳು ಉದ್ಭವಿಸಿವೆ. ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಸಚಿವ ಸಂಪುಟದಲ್ಲಿ ಪ್ರಾತಿನಿಧ್ಯ ಕಲ್ಪಿಸುವ ಉದ್ದೇಶದಿಂದ ಸಚಿವ ಕೆ.ಎಚ್. ಮುನಿಯಪ್ಪ (KH Muniyappa) ಅವರ ಪುತ್ರಿ, ಕೆಜಿಎಫ್ ಶಾಸಕಿ ರೂಪಕಲಾ ಶಶಿಧರ್ ಅವರಿಗೆ ಸಚಿವ ಸ್ಥಾನ ನೀಡುವ ಪ್ರಯತ್ನವೂ ನಡೆದಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಇದರ ಬೆನ್ನಲ್ಲೇ ಖುದ್ದು ಸಚಿವ ಕೆಎಚ್​​​ ಮುನಿಯಪ್ಪ ಅವರು ಪ್ರತಿಕ್ರಿಯಿಸಿದ್ದು, ರೂಪಕಲಾ ಶಶಿಧರ್‌ ರವರಿಗೆ ಸಚಿವ ಸ್ಥಾನವನ್ನು ತ್ಯಾಗ ಮಾಡಲಿದ್ದಾರೆ ಎಂಬ ಸುದ್ದಿಗಳು ಕೆಲವು ದೃಶ್ಯ ಮಾಧ್ಯಮಗಳಲ್ಲಿ ಬರುತ್ತಿದೆ.ಈ ವರದಿಯು ಸತ್ಯಕ್ಕೆ ದೂರವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಈ ಬಗ್ಗೆ ಮಾಧ್ಯಮ ಪ್ರಕಟಣೆ ಹೊರಡಿಸಿರುವ ಸಚಿವ ಕೆಎಚ್​​ ಮುನಿಯಪ್ಪ ಕಚೇರಿ, ದಲಿತ ಎಡ ಸಮುದಾಯದ ಹಿರಿಯ ಹಾಗೂ ಮುಂಚೂಣಿ ನಾಯಕರಾದ ಕೆ.ಹೆಚ್.‌ ಮುನಿಯಪ್ಪ, ಕಳೆದ 50 ವರ್ಷಗಳ ಸುದೀರ್ಘ ಕಾಲದ ಕಾಂಗ್ರೆಸ್‌ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿದ್ದಾರೆ. ನಾಯಕರಾಗಿ ಪಕ್ಷವನ್ನು ಬಲವರ್ಧನೆಗೊಳಿಸುತ್ತಾ ಬಂದಿದ್ದಾರೆ. ರೂಪಕಲಾ ಶಶಿಧರ್‌ ರವರಿಗೆ ಸಚಿವ ಸ್ಥಾನವನ್ನು ತ್ಯಾಗ ಮಾಡಲಿದ್ದಾರೆ ಎಂಬ ಸುದ್ದಿಗಳು ಕೆಲವು ದೃಶ್ಯ ಮಾಧ್ಯಮಗಳಲ್ಲಿ ಬರುತ್ತಿದೆ.ಈ ವರದಿಯು ಸತ್ಯಕ್ಕೆ ದೂರವಾಗಿದೆ ಎಂದು ತಿಳಿಸಿದ್ದಾರೆ. ಈ ಮೂಲಕ ಅಂತ್ಯ ಕಂತೆಗಳಿಗೆ ತೆರೆ ಎಳೆದಿದ್ದಾರೆ.

ಇದನ್ನೂ ನೋಡಿ: ಸಂಪುಟ ವಿಸ್ತರಣೆ ಬೆನ್ನಲ್ಲೇ ಇದೀಗ ಖಾತೆ ಕ್ಯಾತೆ, ಮತ್ತೆ ದಿಲ್ಲಿಯತ್ತ ಡಿಕೆ ಶಿವಕುಮಾರ್

ಇಂದಿರಾ ಗಾಂಧಿಯವರ ಕಾಲದಿಂದ ಇಲ್ಲಿಯವರೆಗೂ ಕಾಂಗ್ರೆಸ್‌ ಪಕ್ಷದ ನಿಷ್ಠಾವಂತ ನಾಯಕರಾಗಿ ಪಕ್ಷವನ್ನು ಕಟ್ಟುತ್ತಾ ಬಂದಿದ್ದಾರೆ. ಇಲ್ಲಿಯವರೆಗೂ ಕಾಂಗ್ರೆಸ್‌ ಪಕ್ಷಕ್ಕೆ ತಮ್ಮ ಕುಟುಂಬ ಸಮೇತ ನಿಷ್ಠೆಯನ್ನು ತೋರಿ, ಪಕ್ಷದ ಸಿದ್ಧಾಂತಗಳಿಗೆ ಬದ್ಧರಾಗಿದ್ದಾರೆ. ಕೋಲಾರ ಲೋಕಸಭಾ ಕ್ಷೇತ್ರದಿಂದ ಸತತವಾಗಿ 7 ಬಾರಿ ಸಂಸದರಾಗಿ ಆಯ್ಕೆಯಾಗಿದ್ದಾರೆ. ಕೇಂದ್ರದಲ್ಲಿ ಮೂರು ಬಾರಿ ಸಚಿವರಾಗಿ ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ. ಶಂಕರಾನಂದ ಹಾಗೂ ಜಾಫರ್‌ ಶರೀಫ್‌ ರವರ ನಂತರ ಮಾನ್ಯ ಕೆ.ಹೆಚ್.‌ ಮುನಿಯಪ್ಪ ರವರ ದಾಖಲೆ ಜಯ ಐತಿಹಾಸಿಕವಾಗಿದೆ.

ದಕ್ಷಿಣ ಭಾರತದ ಬಾಬು ಜಗಜೀವನರಾಮ್‌ ಎಂದೇ ಖ್ಯಾತರಾಗಿರುವ ಕೆ.ಹೆಚ್.‌ ಮುನಿಯಪ್ಪ ,ಪ್ರಸ್ತುತ ಆಹಾರ ಇಲಾಖೆಯನ್ನು ಉತ್ತಮವಾಗಿ ಮುನ್ನೆಡೆಸುತ್ತಿದ್ದು, ಸಮಾಜ ಕಲ್ಯಾಣ ಇಲಾಖೆ ಖಾತೆಯೊಂದಿಗೆ ಪರಿಶಿಷ್ಟ ಜಾತಿಯ ಸಮುದಾಯದ ಸರ್ವತೋಮುಖ ಅಭಿವೃದ್ಧಿಗೆ ಖಾತೆ ಬದಲಾವಣೆಗಾಗಿ ಮಾನ್ಯ ಲೋಕಸಭಾ ವಿರೋಧ ಪಕ್ಷದ ನಾಯಕರಾದ ಶ್ರೀ ರಾಹುಲ್‌ ಗಾಂಧಿಯವರಿಗೆ ಬೇಡಿಕೆ ಇಟ್ಟಿದ್ದಾರೆ. ಸಕರಾತ್ಮ ಸ್ಪಂದನೆಯೊಂದಿಗೆ ಸಮಾಜ ಕಲ್ಯಾಣ ಖಾತೆ ನೀಡುವುದು ಬಹುತೇಕ ಖಚಿತವಾಗಿದೆ. ಮಾಧ್ಯಮಗಳಲ್ಲಿ ಇತ್ತಿಚೀಗೆ ಹರಿದಾಡುತ್ತಿರುವ ಸುದ್ಧಿಗಳು ನೈಜಕ್ಕೆ ದೂರವಾಗಿದ್ದು, ಅವುಗಳನ್ನು ಪರಿಗಣಿಸಿದಿರಲು ಈ ಮೂಲಕ ಕೋರುತ್ತೇವೆ ಎಂದು ಮಾಧ್ಯಮ ಪ್ರಕಟಣೆ ಮೂಲಕ ಸ್ಪಷ್ಟಪಡಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

70% ಕೋಕೋ ಇರುವ ಡಾರ್ಕ್ ಚಾಕೊಲೇಟ್ ಏಕೆ ಒಳ್ಳೆಯದು? ವೈದ್ಯರು ಹೇಳಿರುವ ಮಾಹಿತಿ ಇಲ್ಲಿದೆ – Kannada News | Health Benefits of Dark Chocolate You Should Know

ಚಾಕೊಲೇಟ್ ಎಂದರೆ ಮಕ್ಕಳಿಂದ ಹಿಡಿದು ಹಿರಿಯರವರೆಗೂ ಎಲ್ಲರಿಗೂ ಇಷ್ಟ. ಆದರೆ ಎಲ್ಲಾ ಚಾಕೊಲೇಟ್‌ಗಳು ಆರೋಗ್ಯಕ್ಕೆ ಒಂದೇ ರೀತಿಯ ಪ್ರಯೋಜನ ನೀಡುವುದಿಲ್ಲ. ವಿಶೇಷವಾಗಿ ಡಾರ್ಕ್ ಚಾಕೊಲೇಟ್ (Dark Chocolate) ಅನ್ನು ಸಾಮಾನ್ಯ ಮಿಲ್ಕ್ ಚಾಕೊಲೇಟ್‌ಗಿಂತ ಹೆಚ್ಚು ಆರೋಗ್ಯಕರ ಆಯ್ಕೆ ಎಂದು ಪರಿಗಣಿಸಲಾಗುತ್ತದೆ. ಇದರಲ್ಲಿ ಐರನ್, ಮ್ಯಾಗ್ನೀಶಿಯಂ, ಕಾಪರ್, ಮ್ಯಾಂಗನೀಸ್, ಫೈಬರ್ ಹಾಗೂ ಫ್ಲೇವನಾಯ್ಡ್ಸ್ (Flavonoids) ಎಂಬ ಶಕ್ತಿಶಾಲಿ ಆಂಟಿಆಕ್ಸಿಡೆಂಟ್‌ಗಳು ಸಮೃದ್ಧವಾಗಿವೆ. ಇವು ಹೃದಯದ ಆರೋಗ್ಯ, ರಕ್ತನಾಳಗಳ ಕಾರ್ಯಕ್ಷಮತೆ ಹಾಗೂ ದೇಹದ ಕೋಶಗಳನ್ನು ರಕ್ಷಿಸಲು ಸಹಕಾರಿ ಎಂದು ಹಲವು ಅಧ್ಯಯನಗಳು ಸೂಚಿಸಿವೆ. ಆದರೆ ಡಾರ್ಕ್ ಚಾಕೊಲೇಟ್‌ನ ಪ್ರಯೋಜನ ಪಡೆಯಲು ಸರಿಯಾದ ಪ್ರಮಾಣದಲ್ಲಿ ಸೇವಿಸುವುದು ಹಾಗೂ ಸರಿಯಾದ ಉತ್ಪನ್ನವನ್ನು ಆಯ್ಕೆ ಮಾಡುವುದು ಅತ್ಯಗತ್ಯ. ಹಾಗಾದರೆ ಡಾರ್ಕ್ ಚಾಕೊಲೇಟ್ ಆರೋಗ್ಯಕ್ಕೆ ಹೇಗೆ ಸಹಕಾರಿ ಮತ್ತು ಯಾರಿಗೆ ಇದು ಸೂಕ್ತವಲ್ಲ ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಡಾರ್ಕ್ ಚಾಕೊಲೇಟ್ ಸೇವನೆಯಿಂದ ಆರೋಗ್ಯಕ್ಕೆ ಸಿಗುವ ಪ್ರಯೋಜನಗಳು:

ಹೃದಯದ ಆರೋಗ್ಯಕ್ಕೆ ಸಹಕಾರಿ: ಡಾರ್ಕ್ ಚಾಕೊಲೇಟ್‌ನಲ್ಲಿರುವ ಫ್ಲೇವನಾಯ್ಡ್ಸ್ ರಕ್ತನಾಳಗಳ ಕಾರ್ಯಕ್ಷಮತೆಯನ್ನು ಸುಧಾರಿಸಲು ನೆರವಾಗಬಹುದು. ಕೆಲವು ಅಧ್ಯಯನಗಳ ಪ್ರಕಾರ ಇದು ರಕ್ತದ ಹರಿವು ಉತ್ತಮಗೊಳಿಸುವುದರ ಜೊತೆಗೆ ರಕ್ತದೊತ್ತಡವನ್ನು ನಿಯಂತ್ರಿಸಲು ಸಹಕಾರಿ ಆಗಬಹುದು.

ಶಕ್ತಿಶಾಲಿ ಆಂಟಿಆಕ್ಸಿಡೆಂಟ್‌ಗಳ ಮೂಲ: ಡಾರ್ಕ್ ಚಾಕೊಲೇಟ್‌ನಲ್ಲಿರುವ ಆಂಟಿಆಕ್ಸಿಡೆಂಟ್‌ಗಳು ದೇಹದ ಕೋಶಗಳನ್ನು ಫ್ರೀ ರ್ಯಾಡಿಕಲ್‌ಗಳ ಹಾನಿಯಿಂದ ರಕ್ಷಿಸಲು ನೆರವಾಗುತ್ತವೆ. ಇದರಿಂದ ದೀರ್ಘಕಾಲಿಕ ಆರೋಗ್ಯ ಕಾಪಾಡಲು ಸಹಾಯವಾಗಬಹುದು.

ಇದನ್ನೂ ಓದಿ: ಬ್ಲೂಬೆರಿ, ಸ್ಟ್ರಾಬೆರಿ, ಬ್ಲ್ಯಾಕ್‌ಬೆರಿ… ಯಾವ ಬೆರ್ರಿ ಹಣ್ಣು ಯಾವ ಆರೋಗ್ಯ ಸಮಸ್ಯೆಗೆ ಉತ್ತಮ ತಿಳಿದುಕೊಳ್ಳಿ

ಮೆದುಳಿನ ಕಾರ್ಯಕ್ಷಮತೆಗೆ ನೆರವು: ಡಾರ್ಕ್ ಚಾಕೊಲೇಟ್ ಸೇವನೆಯಿಂದ ಮೆದುಳಿಗೆ ರಕ್ತ ಸಂಚಾರ ಸುಧಾರಿಸಬಹುದು ಎಂದು ಕೆಲವು ಅಧ್ಯಯನಗಳು ಸೂಚಿಸುತ್ತವೆ. ಇದರಿಂದ ಏಕಾಗ್ರತೆ ಮತ್ತು ಮೆದುಳಿನ ಕಾರ್ಯಕ್ಷಮತೆಗೆ ನೆರವಾಗುವ ಸಾಧ್ಯತೆಯಿದೆ.

ದೇಹಕ್ಕೆ ಅಗತ್ಯ ಖನಿಜಗಳ ಪೂರೈಕೆ: ಡಾರ್ಕ್ ಚಾಕೊಲೇಟ್‌ನಲ್ಲಿರುವ ಐರನ್ ಕೆಂಪು ರಕ್ತಕಣಗಳು ಹೆಚ್ಚಾಗಲು ಸಹಕಾರಿ ಮತ್ತು ಮ್ಯಾಗ್ನೀಶಿಯಂ ನರಗಳು ಮತ್ತು ಸ್ನಾಯುಗಳ ಆರೋಗ್ಯಕ್ಕೆ ಅಗತ್ಯ ಜೊತೆಗೆ ಕಾಪರ್ ಮತ್ತು ಮ್ಯಾಂಗನೀಸ್ ದೇಹದ ಅನೇಕ ಚಯಾಪಚಯ ಕ್ರಿಯೆಗಳಿಗೆ ನೆರವಾಗುತ್ತದೆ.

ಜೀರ್ಣಕ್ರಿಯೆಗೆ ಸಹಾಯಕಾರಿ: ಡಾರ್ಕ್ ಚಾಕೊಲೇಟ್‌ನಲ್ಲಿ ಸ್ವಲ್ಪ ಪ್ರಮಾಣದ ಫೈಬರ್ ಇರುವುದರಿಂದ ಜೀರ್ಣಕ್ರಿಯೆ ಸುಧಾರಿಸಲು ನೆರವಾಗಬಹುದು.

ಡಾರ್ಕ್ ಚಾಕೊಲೇಟ್ ಖರೀದಿಸುವಾಗ ಗಮನಿಸಬೇಕಾದ ಅಂಶಗಳು

  • ಕನಿಷ್ಠ 70% ಅಥವಾ ಅದಕ್ಕಿಂತ ಹೆಚ್ಚು ಕೋಕೋ (Cocoa) ಇರುವ ಚಾಕೊಲೇಟ್ ಆಯ್ಕೆ ಮಾಡಿ.
  • ಕಡಿಮೆ ಸಕ್ಕರೆ ಹೊಂದಿರುವ ಉತ್ಪನ್ನವನ್ನು ಆರಿಸಿ.
  • ಕೃತಕ ಸಿಹಿಪದಾರ್ಥಗಳು ಮತ್ತು ಹೆಚ್ಚು ಸೇರ್ಪಡೆಗಳಿರುವ ಚಾಕೊಲೇಟ್‌ಗಳನ್ನು ತಪ್ಪಿಸಿ.
  • ಪೌಷ್ಟಿಕಾಂಶದ ಲೇಬಲ್ ಓದುವುದು ಅಭ್ಯಾಸವಾಗಲಿ.

ಯಾರು ಎಚ್ಚರ ವಹಿಸಬೇಕು?

ಈ ಕೆಳಗಿನವರು ಡಾರ್ಕ್ ಚಾಕೊಲೇಟ್ ಸೇವಿಸುವ ಮೊದಲು ವೈದ್ಯರ ಸಲಹೆ ಪಡೆಯುವುದು ಉತ್ತಮ:

  • ಮಧುಮೇಹ ಇರುವವರು
  • ಮೈಗ್ರೇನ್ ಸಮಸ್ಯೆ ಇರುವವರು
  • ಕ್ಯಾಫಿನ್‌ಗೆ ಅತಿಸೂಕ್ಷ್ಮತೆ ಇರುವವರು
  • ಚಾಕೊಲೇಟ್‌ಗೆ ಅಲರ್ಜಿ ಇರುವವರು
  • ವೈದ್ಯರು ಚಾಕೊಲೇಟ್ ಸೇವಿಸಬೇಡಿ ಎಂದು ಸೂಚಿಸಿರುವವರು

ಡಾರ್ಕ್ ಚಾಕೊಲೇಟ್ ಆರೋಗ್ಯಕ್ಕೆ ಹಲವು ಪ್ರಯೋಜನಗಳನ್ನು ನೀಡಬಹುದು. ಆದರೆ ಇದು ಔಷಧಿಯಲ್ಲ. ಆರೋಗ್ಯಕರ ಆಹಾರ ಪದ್ಧತಿ, ನಿಯಮಿತ ವ್ಯಾಯಾಮ ಮತ್ತು ಸಮತೋಲನ ಜೀವನಶೈಲಿಯೊಂದಿಗೆ ಮಿತ ಪ್ರಮಾಣದಲ್ಲಿ ಸೇವಿಸಿದಾಗ ಮಾತ್ರ ಇದರ ಲಾಭವನ್ನು ಪಡೆಯಬಹುದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Jupiter in Pushya Nakshatra: ಗುರು ಪುಷ್ಯ ಯೋಗ; ಈ 4 ರಾಶಿಯವರಿಗೆ ಷೇರು ಮಾರುಕಟ್ಟೆಯಲ್ಲಿ ಭಾರಿ ಧನಲಾಭ! – Kannada News | Jupiter in Pushya Nakshatra: Boosts Economy, Stock Market and Fortune for 4 Zodiacs

ಜ್ಯೋತಿಷ್ಯ ಶಾಸ್ತ್ರದಲ್ಲಿ ದೇವತೆಗಳ ಅಧಿಪತಿಯಾದ ಗುರುವಿನ ಸಂಚಾರಕ್ಕೆ ವಿಶೇಷ ಪ್ರಾಮುಖ್ಯತೆಯಿದೆ. ಪ್ರಸ್ತುತ ಗ್ರಹಗಳ ಅಧಿಪತಿಯಾದ ಗುರುವು “ನಕ್ಷತ್ರಗಳ ರಾಜ” ಎಂದೇ ಪ್ರಸಿದ್ಧವಾಗಿರುವ ಪುಷ್ಯ ನಕ್ಷತ್ರಕ್ಕೆ ಪ್ರವೇಶಿಸಿದ್ದು, ಇದರ ಪ್ರಭಾವವು ಕೇವಲ ವ್ಯಕ್ತಿಗಳ ಮೇಲಷ್ಟೇ ಅಲ್ಲದೆ ದೇಶದ ಆರ್ಥಿಕತೆ ಮತ್ತು ಷೇರು ಮಾರುಕಟ್ಟೆಯ ಮೇಲೂ ಸ್ಪಷ್ಟವಾಗಿ ಗೋಚರಿಸಲಿದೆ. ಜ್ಯೋತಿಷ್ಯದ ಪ್ರಕಾರ ಗುರು ಸಂಪತ್ತು, ಜ್ಞಾನ, ಉನ್ನತಿ ಹಾಗೂ ಬ್ಯಾಂಕಿಂಗ್ ವಲಯದ ಸಂಕೇತವಾಗಿದ್ದು, ಈ ಸಂಚಾರವು ಮಾರುಕಟ್ಟೆಯಲ್ಲಿ ಹೂಡಿಕೆದಾರರ ವಿಶ್ವಾಸವನ್ನು ಹೆಚ್ಚಿಸಲಿದೆ.

ಷೇರು ಮಾರುಕಟ್ಟೆಯಲ್ಲಿ ಸೃಷ್ಟಿಯಾಗಲಿದೆ ಸುವರ್ಣ ಅವಕಾಶ:

ಗುರು ಪುಷ್ಯ ನಕ್ಷತ್ರದಲ್ಲಿದ್ದಾಗ ಮಾರುಕಟ್ಟೆಗೆ ಹಣದ ಹರಿವು ಹೆಚ್ಚಾಗುತ್ತದೆ. ವಿಶೇಷವಾಗಿ ಬ್ಯಾಂಕಿಂಗ್, ಹಣಕಾಸು, ಬೆಳ್ಳಿ, ರಿಯಲ್ ಎಸ್ಟೇಟ್ ಹಾಗೂ ಐಟಿ ವಲಯದ ಷೇರುಗಳು ಬಲವಾದ ರ್ಯಾಲಿಯನ್ನು ಕಾಣುವ ಸಾಧ್ಯತೆಯಿದೆ. ಷೇರು ಮಾರುಕಟ್ಟೆ ತಜ್ಞ ಜ್ಯೋತಿಷಿಗಳ ಪ್ರಕಾರ, ಈ ಅವಧಿಯು ಅಲ್ಪಾವಧಿ ಮತ್ತು ದೀರ್ಘಾವಧಿಯ ಹೂಡಿಕೆದಾರರಿಬ್ಬರಿಗೂ ಅತ್ಯುತ್ತಮ ವಾತಾವರಣವನ್ನು ಸೃಷ್ಟಿಸಲಿದೆ.

ಈ 4 ರಾಶಿಗಳಿಗೆ ಕಾದಿದೆ ಅದೃಷ್ಟ ಮತ್ತು ಭಾರಿ ಲಾಭ:

ಗುರುವಿನ ಈ ಶುಭ ಸಂಚಾರದಿಂದಾಗಿ ನಾಲ್ಕು ನಿರ್ದಿಷ್ಟ ರಾಶಿಚಕ್ರದವರಿಗೆ ಷೇರು ಮಾರುಕಟ್ಟೆ ಹಾಗೂ ಮ್ಯೂಚುವಲ್ ಫಂಡ್‌ಗಳಿಂದ ಭಾರಿ ಆರ್ಥಿಕ ಲಾಭವಾಗುವ ಬಲವಾದ ಸೂಚನೆಗಳಿವೆ:

ಕರ್ಕಾಟಕ ರಾಶಿ:

ಗುರುವಿನ ಈ ನಕ್ಷತ್ರ ಪರಿವರ್ತನೆಯು ನಿಮ್ಮ ಆದಾಯವನ್ನು ಹೆಚ್ಚಿಸಲು ನೂತನ ಮಾರ್ಗಗಳನ್ನು ತೆರೆಯುತ್ತದೆ. ಹಿಂದೆ ಷೇರು ಮಾರುಕಟ್ಟೆ ಅಥವಾ ರಿಯಲ್ ಎಸ್ಟೇಟ್‌ನಲ್ಲಿ ಮಾಡಿದ ಹೂಡಿಕೆಗಳಿಂದ ಈಗ ಗಮನಾರ್ಹ ಲಾಭ ಸಿಗಲಿದೆ. ಕಳೆದುಹೋದ ಹಣ ಮರಳಿ ಸಿಗುವುದರಿಂದ ಬ್ಯಾಂಕ್ ಬ್ಯಾಲೆನ್ಸ್ ಗಣನೀಯವಾಗಿ ಹೆಚ್ಚಾಗಲಿದೆ.

ವೃಶ್ಚಿಕ ರಾಶಿ:

ಈ ಅವಧಿಯಲ್ಲಿ ಅದೃಷ್ಟವು ಸಂಪೂರ್ಣವಾಗಿ ನಿಮ್ಮ ಪರವಾಗಿರಲಿದೆ. ಷೇರು ಮಾರುಕಟ್ಟೆಯಲ್ಲಿ ನೀವು ಸಮಯಕ್ಕೆ ಸರಿಯಾಗಿ ತೆಗೆದುಕೊಳ್ಳುವ ಸಣ್ಣ ನಿರ್ಧಾರವೂ ದೊಡ್ಡ ಪ್ರಮಾಣದ ಲಾಭವನ್ನು ತಂದುಕೊಡಬಲ್ಲದು. ಹೊಸ ಉದ್ಯಮ ಹಾಗೂ ವ್ಯಾಪಾರ ಒಪ್ಪಂದಗಳಿಂದ ಅನಿರೀಕ್ಷಿತ ಆರ್ಥಿಕ ಪ್ರಗತಿ ನಿಮ್ಮದಾಗಲಿದೆ.

ಇದನ್ನೂ ಓದಿ: ಈ ರಾಶಿಗೆ ಸೂರ್ಯನ ಆಗಮನ, ಈ ರಾಶಿಗಳಿಗೆ ಸೂರ್ಯನ ಬೆಳಕು…?

ಧನು ರಾಶಿ:

ನಿಮ್ಮ ರಾಶ್ಯಾಧಿಪತಿಯಾದ ಗುರುವಿನ ಈ ಪ್ರಬಲ ಸ್ಥಾನವು ನಿಮ್ಮ ಆರ್ಥಿಕ ಸ್ಥಿತಿಯನ್ನು ಮತ್ತಷ್ಟು ಬಲಪಡಿಸಲಿದೆ. ನೀವು ಷೇರು ಮಾರುಕಟ್ಟೆ ಅಥವಾ ಸರಕು ಮಾರುಕಟ್ಟೆಯಲ್ಲಿ (Commodity Market) ಹೊಸ ಹೂಡಿಕೆಗಳನ್ನು ಮಾಡಲು ಯೋಜಿಸುತ್ತಿದ್ದರೆ, ಇದು ಅತ್ಯಂತ ಸೂಕ್ತವಾದ ಸಮಯವಾಗಿದೆ.

ಮೀನ ರಾಶಿ:

ಮೀನ ರಾಶಿಯವರಿಗೆ ನೂತನ ಆದಾಯದ ಮೂಲಗಳು ತೆರೆದುಕೊಳ್ಳಲಿವೆ. ಮ್ಯೂಚುವಲ್ ಫಂಡ್‌ಗಳು, ಷೇರುಗಳು ಹಾಗೂ ಗೋಲ್ಡ್ ಬಾಂಡ್‌ಗಳಲ್ಲಿ ಮಾಡುವ ಹೂಡಿಕೆಗಳು ಅತ್ಯುತ್ತಮ ರಿಟರ್ನ್ಸ್ ನೀಡಲಿವೆ. ನಿಮ್ಮ ವ್ಯಾಪಾರ ಯೋಜನೆಗಳು ಯಶಸ್ವಿಯಾಗಿ ಕಾರ್ಯರೂಪಕ್ಕೆ ಬರಲಿವೆ.

ಆಶ್ಲೇಷ ನಕ್ಷತ್ರಕ್ಕೆ ಚಲಿಸುವ ಮುನ್ನ ಬಳಸಿಕೊಳ್ಳಿ ಅವಕಾಶ:

ಆಗಸ್ಟ್ 5 ರಿಂದ ಪುಷ್ಯಮಿ ನಕ್ಷತ್ರದಲ್ಲಿ ಸಂಚರಿಸುತ್ತಿರುವ ಗುರುವು, ಈ ನಕ್ಷತ್ರದಲ್ಲಿ ಸುಮಾರು ಎರಡು ವಾರಗಳ ಕಾಲ ಇರಲಿದ್ದಾನೆ. ತದನಂತರ ಅದು ಆಶ್ಲೇಷ ನಕ್ಷತ್ರಕ್ಕೆ ಪ್ರವೇಶಿಸಲಿದ್ದಾನೆ. ಗುರುವು ಪ್ರಸ್ತುತ ಉಚ್ಚ ಸ್ಥಾನದಲ್ಲಿರುವುದರಿಂದ ಈ ಅವಧಿಯನ್ನು ಜ್ಯೋತಿಷಿಗಳು ಅತ್ಯಂತ ಶುಭವೆಂದು ಪರಿಗಣಿಸಿದ್ದಾರೆ. ಈ ಅವಧಿಯು ಮೇಲ್ಕಂಡ ರಾಶಿಯವರಿಗೆ ಅತ್ಯುತ್ತಮ ಲಾಭ ತಂದರೆ, ಇತರ ರಾಶಿಯವರಿಗೆ ಮಿಶ್ರ ಫಲಿತಾಂಶಗಳನ್ನು ನೀಡಲಿದೆ.

ಜ್ಯೋತಿಷ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕುಜನ ಬಲ ಹೇಗಿದೆ? ನಿಮಗೆ ಆ ಗ್ರಹದಿಂದ ಏನೆಲ್ಲ ಸಿಗಲಿದೆ ಎಂದರೆ ಅಚ್ಚರಿಯಾಗದೇ ಇರದು – Kannada News | Kuja Transit in Mithuna Rashi: Mars’ Astrological Impact on All 12 Zodiac Signs and Remedies

ಗ್ರಹ ಮಂಡಲದ ಸ್ಥಿತಿಯಂತೆ, ನವಗ್ರಹಗಳಲ್ಲಿ ಸೇನಾಧಿಪತಿಯಾದ ಮಂಗಳ ಗ್ರಹವು ಮಿಥುನ ರಾಶಿಯಲ್ಲಿದ್ದು ಆರ್ದ್ರಾ ನಕ್ಷತ್ರದ 4ನೇ ಪಾದದಲ್ಲಿ ಸಂಚರಿಸುತ್ತಿದ್ದಾನೆ. ಜಾತಕದ ಪ್ರಮುಖ ಕೇಂದ್ರ ಹಾಗೂ ತ್ರಿಕೋಣ ಸ್ಥಾನಗಳ ಮೇಲೆ ಕುಜನ ಪ್ರಭಾವ, ಆತನ ವಿಶೇಷ ದೃಷ್ಟಿಗಳು ಅಂದರೆ 4, 7 ಹಾಗೂ 8ನೇ ದೃಷ್ಟಿ ಮತ್ತು ದಿಗ್ದಿಕ್ಕಿನ ಬಲದ ಆಧಾರದ ಮೇಲೆ ದ್ವಾದಶ ರಾಶಿಗಳ ಮೇಲೆ ಉಂಟಾಗುವ ಶುಭಾಶುಭ ಫಲಗಳು ಉಂಟಾಗಲಿದೆ.

​ದಿಗ್ಬಲ ಹಾಗೂ ಯೋಗಗಳ ಪ್ರಭಾವ :

​ಜ್ಯೋತಿಷ್ಯ ಶಾಸ್ತ್ರದ ನಿಯಮದಂತೆ ಕುಜನು ದಶಮ ಭಾವದಲ್ಲಿ ಅತ್ಯಂತ ಶಕ್ತಿಶಾಲಿ ದಿಗ್ದಿಕ್ಕಿನ ಬಲವನ್ನು ಪಡೆಯುತ್ತಾನೆ. ಮಿಥುನದಲ್ಲಿರುವ ಕುಜನು ಕನ್ಯಾ ರಾಶಿಯ ಮೇಲೆ ತನ್ನ 4ನೇ ದೃಷ್ಟಿಯನ್ನು ಬೀರಿದಾಗ, ವೃತ್ತಿ ಸ್ಥಾನವಾದ 10ನೇ ಭಾವಕ್ಕೆ ಅಪಾರವಾದ ಚೈತನ್ಯ ಸಿಗುತ್ತದೆ. ಇದಲ್ಲದೆ ಕರ್ಕಾಟಕದಲ್ಲಿ ಸ್ವಕ್ಷೇತ್ರೀಯವಾಗಿ ಉಚ್ಚ ಸ್ಥಿತಿಯಲ್ಲಿರುವ ಗುರು ಮತ್ತು ಸಿಂಹ ರಾಶಿಯಲ್ಲಿ ಸೂರ್ಯ-ಬುಧರ ಸಮ್ಮಿಲನದಿಂದ ಸೃಷ್ಟಿಯಾಗಿರುವ ಬುಧಾದಿತ್ಯ ಯೋಗಗಳು ಕುಜನ ಪ್ರಭಾವವನ್ನು ಮತ್ತಷ್ಟು ತೀಕ್ಷ್ಣಗೊಳಿಸಿವೆ.

​ರಾಶಿಯ ಪ್ರಕಾರ ಶುಭಾಶುಭ ಫಲ :

​ಮಂಗಳನ ಸಂಚಾರವು ಮುಖ್ಯವಾಗಿ ಮೇಷ, ಸಿಂಹ, ಕನ್ಯಾ ಹಾಗೂ ಮಕರ ರಾಶಿಯವರಿಗೆ ಅತ್ಯಂತ ಸಾತ್ವಿಕ ಹಾಗೂ ಯಶಸ್ವಿ ಫಲಗಳನ್ನು ತರಲಿದೆ. ಮೇಷ ರಾಶಿಗೆ 3ನೇ ಭಾವದಲ್ಲಿ ಬಲಶಾಲಿ ಕುಜನ ಸಂಚಾರವಿರುವುದರಿಂದ ಸಾಹಸ, ಪರಾಕ್ರಮ ಮತ್ತು ಆಸ್ತಿ ವ್ಯವಹಾರಗಳಲ್ಲಿ ಅಪ್ರತಿಮ ಯಶಸ್ಸು ಸಿಗಲಿದೆ. 11ನೇ ಲಾಭ ಭಾವದಲ್ಲಿ ಕುಜನಿದ್ದು, ಲಗ್ನದಲ್ಲಿ ಬುಧಾದಿತ್ಯ ಯೋಗ ಹೊಂದಿರುವ ಸಿಂಹ ರಾಶಿಯವರಿಗೆ ಹಳೆಯ ಹೂಡಿಕೆಗಳಿಂದ ಪ್ರಚಂಡ ಧನಲಾಭ ಹಾಗೂ ಸಮಾಜದಲ್ಲಿ ಉನ್ನತ ಗೌರವ ಪ್ರಾಪ್ತಿಯಾಗಲಿದೆ.

​ದಶಮ ಭಾವದಲ್ಲಿ ಕುಜನ ಪ್ರಭಾವ ಹಾಗೂ ದಿಗ್ಬಲದ ಬೆಂಬಲ ಪಡೆಯುವ ಕನ್ಯಾ ರಾಶಿಯ ಉದ್ಯೋಗಿಗಳಿಗೆ ಬಡ್ತಿ, ಸರ್ಕಾರಿ ಕೆಲಸಗಳಲ್ಲಿ ಯಶಸ್ಸು ಮತ್ತು ನಾಯಕತ್ವದ ಜವಾಬ್ದಾರಿಗಳು ಒದಗಿಬರಲಿವೆ. ಇನ್ನು 6ನೇ ಭಾವದಲ್ಲಿ ಕುಜನ ಶತ್ರುಘ್ನ ಯೋಗವನ್ನು ಎದುರಿಸಲಿರುವ ಮಕರ ರಾಶಿಯವರು ಶತ್ರುಗಳ ಮೇಲೆ ಸಂಪೂರ್ಣ ಜಯ ಸಾಧಿಸಲಿದ್ದು, ಹಳೆಯ ಸಾಲ ಹಾಗೂ ಕೋರ್ಟ್-ಕಚೇರಿ ಪ್ರಕರಣಗಳಿಂದ ಮುಕ್ತಿ ಪಡೆಯಲಿದ್ದಾರೆ.

​ಮತ್ತೊಂದೆಡೆ, ಮಿಥುನ, ಧನು, ವೃಶ್ಚಿಕ ಹಾಗೂ ಮೀನ ರಾಶಿಯವರು ಈ ಅವಧಿಯಲ್ಲಿ ತುಸು ಎಚ್ಚರಿಕೆ ವಹಿಸುವುದು ಲೇಸು. ಲಗ್ನದಲ್ಲೇ ಕುಜನ ಸಂಚಾರವಿರುವ ಮಿಥುನ ರಾಶಿಯವರು ತೀವ್ರ ಕೋಪ, ರಕ್ತದೊತ್ತಡ ಮತ್ತು ಆತುರದ ನಿರ್ಧಾರಗಳಿಂದ ನಷ್ಟ ಅನುಭವಿಸುವ ಸಾಧ್ಯತೆಯಿದೆ. 7ನೇ ಭಾವಕ್ಕೆ ಕುಜನ ಸಂಪೂರ್ಣ ದೃಷ್ಟಿ ಬೀಳುವ ಧನು ರಾಶಿಯವರಿಗೆ ವೈವಾಹಿಕ ಜೀವನದಲ್ಲಿ ಮನಸ್ತಾಪ ಹಾಗೂ ಪಾಲುದಾರಿಕೆ ಉದ್ಯಮದಲ್ಲಿ ಭಿನ್ನಾಭಿಪ್ರಾಯಗಳು ಎದುರಾಗಬಹುದು.

​ಅಷ್ಟಮ ಭಾವದಲ್ಲಿ ರಾಶ್ಯಾಧಿಪತಿ ಕುಜನಿರುವ ವೃಶ್ಚಿಕ ರಾಶಿಯವರು ವಾಹನ ಚಾಲನೆ ಹಾಗೂ ಯಂತ್ರೋಪಕರಣಗಳನ್ನು ಬಳಸುವಾಗ ಅತ್ಯಂತ ಜಾಗರೂಕರಾಗಿರಬೇಕು. ಗಾಯ ಅಥವಾ ಶಸ್ತ್ರಚಿಕಿತ್ಸೆಯ ಯೋಗವಿರುತ್ತದೆ. 4ನೇ ಭಾವದಲ್ಲಿ ಕುಜನ ಪ್ರಮುಖ ಪ್ರಭಾವವಿರುವ ಮೀನ ರಾಶಿಯವರಿಗೆ ಮನೆಯಲ್ಲಿ ಶಾಂತಿಯ ಕೊರತೆ ಹಾಗೂ ಮಾತೃವರ್ಗದ ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆಯಿದೆ.

ಇದನ್ನೂ ಓದಿ: ನಿಮ್ಮ ರಾಶಿಗನುಗುಣವಾಗಿ ಆ.9ರಿಂದ 15ರ ವರೆಗಿನ ವಾರದ ಪ್ರೇಮ – ಪ್ರೀತಿ ಭವಿಷ್ಯ ಇಲ್ಲಿ ತಿಳಿಯಿರಿ

​ಉಳಿದಂತೆ 2ನೇ ಭಾವದ ಕುಜದಿಂದ ವೃಷಭ ರಾಶಿಯವರಿಗೆ ಆರ್ಥಿಕ ಹರಿವಿದ್ದರೂ ಕುಟುಂಬದಲ್ಲಿ ವಾಗ್ವಾದ ಹೆಚ್ಚಾಗಬಹುದು. 12ನೇ ಭಾವದ ಕುಜನಿಂದ ಕರ್ಕಾಟಕ ರಾಶಿಯವರಿಗೆ ವಿದೇಶಿ ಅವಕಾಶಗಳು ಸಿಕ್ಕರೂ ವೈದ್ಯಕೀಯ ವೆಚ್ಚಗಳು ಏರಲಿವೆ. 9ನೇ ಭಾಗ್ಯ ಭಾವದಲ್ಲಿ ಕುಜನಿರುವ ತುಲಾ ರಾಶಿಯವರಿಗೆ ತಂದೆಯವರ ಆರೋಗ್ಯದ ಕಾಳಜಿ ಅಗತ್ಯವಿದ್ದು, 5ನೇ ಭಾವದಲ್ಲಿ ಕುಜನಿರುವ ಕುಂಭ ರಾಶಿಯವರು ಮಕ್ಕಳ ಶಿಕ್ಷಣ ಮತ್ತು ಆರೋಗ್ಯದ ಕಡೆಗೆ ವಿಶೇಷ ನಿಗಾ ಇಡಬೇಕಾಗುತ್ತದೆ.

​ಪರಿಹಾರ :

​ಮಿಥುನ ರಾಶಿಯು ವಾಯು ತತ್ತ್ವದ್ದಾಗಿದ್ದು, ಕುಜನ ಅಗ್ನಿ ತತ್ತ್ವದೊಂದಿಗೆ ಸೇರಿದಾಗ ಮನಸ್ಸಿನಲ್ಲಿ ಆತುರ ಮತ್ತು ಉಗ್ರತೆಯನ್ನು ಹೆಚ್ಚಿಸುತ್ತದೆ. ಈ ದೋಷಗಳ ನಿವಾರಣೆಗೆ ಮಂಗಳವಾರದಂದು ಶ್ರೀ ಸುಬ್ರಹ್ಮಣ್ಯ ಸ್ವಾಮಿ ಅಥವಾ ಹನುಮಂತನ ಉಪಾಸನೆ ಮಾಡುವುದು, ಚಾಲೀಸಾ ಪಠಿಸುವುದು ಹಾಗೂ ನಿತ್ಯವೂ ಧ್ಯಾನವನ್ನು ಅಭ್ಯಾಸ ಮಾಡುವುದು ಮಂಗಳಕರ.

– ಲೋಹಿತ್ ಹೆಬ್ಬಾರ್

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಜೋಗ ಜಲಪಾತ ವೀಕ್ಷಣೆಗೆ KSRTCಯಿಂದ ವೀಕೆಂಡ್ ಪ್ಯಾಕೇಜ್: ದರ ಎಷ್ಟು? ಸೇವೆ ಎಲ್ಲಿಂದ?; ಇಲ್ಲಿದೆ ಮಾಹಿತಿ – Kannada News | KSRTC Launches Shivamogga Jog Falls Weekend Package: Fares, Route, and Timings Detailed

ಶಿವಮೊಗ್ಗ, ಆಗಸ್ಟ್​​ 07: ಪಶ್ಚಿಮ ಘಟ್ಟಗಳಲ್ಲಿ ಹುಟ್ಟುವ ಶರಾವತಿ ನದಿಯಿಂದ ಸೃಷ್ಟಿಯಾಗಿ ಉತ್ತರ ಕನ್ನಡ ಮತ್ತು ಶಿವಮೊಗ್ಗ ಜಿಲ್ಲೆಗಳ ಗಡಿ ಭಾಗದಲ್ಲಿ ಧುಮ್ಮಿಕ್ಕುವ ವಿಶ್ವ ವಿಖ್ಯಾತ ಜೋಗ ಜಲಪಾತ, ಜುಲೈನಿಂದ ಅಕ್ಟೋಬರ್ ಅವಧಿಯಲ್ಲಿ ಮೈಂದುಂಬಿ ಹರಿಯುತ್ತದೆ. ಹೀಗಾಗಿ ಸುಮಾರು 830 ಅಡಿ (253 ಮೀಟರ್) ಎತ್ತರ ಹೊಂದಿರುವ ಈ ಫಾಲ್ಸ್​ ನೋಡಲು ಮಳೆಗಾಲದಲ್ಲಿ ಲಕ್ಷಾಂತರ ಮಂದಿ ಆಗಮಿಸುತ್ತಾರೆ. ಇದೇ ಕಾರಣಕ್ಕೆ ಪ್ರವಾಸಿಗರು ಹಾಗೂ ಪ್ರಯಾಣಿಕರ ಅನುಕೂಲಕ್ಕಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ಶಿವಮೊಗ್ಗ ವಿಭಾಗವು ವಿಶೇಷ ವೀಕೆಂಡ್ ಪ್ಯಾಕೇಜ್ ಬಸ್ ಸೇವೆ ಆರಂಭಿಸಿದೆ.

ಬೆಳಿಗ್ಗೆ 8 ಗಂಟೆಗೆ ಶಿವಮೊಗ್ಗ ಮುಖ್ಯ ಬಸ್ ನಿಲ್ದಾಣದಿಂದ ಹೊರಡುವ ಬಸ್, ಸಿಗಂದೂರು, ವರದಾಮೂಲ, ಇಕ್ಕೇರಿ ಹಾಗೂ ಕೇಳದಿ ಮಾರ್ಗವಾಗಿ ಮಧ್ಯಾಹ್ನ 2 ಗಂಟೆಗೆ ಜೋಗ ಜಲಪಾತ ತಲುಪಲಿದೆ. ಜೋಗ ಜಲಪಾತದಿಂದ ಸಂಜೆ 5 ಗಂಟೆಗೆ ಹೊರಡುವ ಬಸ್, ರಾತ್ರಿ 7.30ಕ್ಕೆ ಶಿವಮೊಗ್ಗ ಬಸ್ ನಿಲ್ದಾಣ ತಲುಪಲಿ

ಇದನ್ನೂ ಓದಿ: ಕರ್ನಾಟಕದಲ್ಲಿ ಅಡಿಕೆ ಉತ್ಪಾದನೆ, ಉತ್ಪಾದಕತೆ ಭಾರೀ ಕುಸಿತ! ಕಾರಣವೇನು?

ಈ ವಿಶೇಷ ಪ್ಯಾಕೇಜ್‌ಗೆ ವಯಸ್ಕರಿಗೆ 450 ರೂ. ಹಾಗೂ ಮಕ್ಕಳಿಗೆ 250 ರೂ. ದರ ನಿಗದಿಪಡಿಸಲಾಗಿದೆ. ಪ್ರಯಾಣಿಕರು ಕೆಎಸ್‌ಆರ್‌ಟಿಸಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಮುಂಗಡ ಬುಕ್ಕಿಂಗ್ ಮಾಡಬಹುದು. ಈ ವಿಶೇಷ ಸೇವೆ ಈ ವಾರಾಂತ್ಯದಿಂದ ಆರಂಭವಾಗಲಿದೆ ಎಂದು ಕೆಎಸ್‌ಆರ್‌ಟಿಸಿ ವಿಭಾಗೀಯ ಸಂಚಾರಾಧಿಕಾರಿ (DTO) ದಿನೇಶ್ ಚನ್ನಗಿರಿ ತಿಳಿಸಿರೋದಾಗಿ ದಿ ಟೈಮ್ಸ್​​ ಆಫ್​​ ಇಂಡಿಯಾ ವರದಿ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಅಗ್ಗಿಪೆಟ್ಟಿಗೆಯಲ್ಲಿ ಹಿಡಿಯುತ್ತೆ ಈ ಪಟ್ಟು ಸೀರೆ: ಸಿರಿಸಿಲ್ಲಾ ನೇಕಾರರ ವಿಸ್ಮಯಕಾರಿ ಕಲೆಗೆ ಒಬಾಮಾ, ಮೋದಿ ಫಿದಾ – Kannada News | Matchbox Saree: Sircilla’s Iconic Handloom Craft, Nalla Vijay Kumar’s Legacy and Global Recognition

ಹೈದರಾಬಾದ್, ಆ.7: ತೆಲಂಗಾಣದ ಪ್ರಸಿದ್ಧ ‘ಸಿರಿಸಿಲ್ಲಾ’ (Sircilla) ಪ್ರದೇಶದ ಹಸ್ತಚಾಲಿತ ಮಗ್ಗದ (Handloom) ನೇಕಾರರು ತಮ್ಮ ಅಪ್ರತಿಮ ಕೌಶಲದ ಮೂಲಕ ವಿಶ್ವದ ಗಮನ ಸೆಳೆದಿದ್ದಾರೆ. ಅತ್ಯಂತ ಸೂಕ್ಷ್ಮವಾದ, ಬೆಂಕಿಕಡ್ಡಿ ಪೆಟ್ಟಿಗೆಯಲ್ಲಿ (Matchbox) ಮಡಚಿಡಬಹುದಾದ ವಿಶೇಷ ‘ಮ್ಯಾಚ್‌ಬಾಕ್ಸ್ ಪಟ್ಟು ಸೀರೆ’ಯನ್ನು ತಯಾರಿಸುವ ಮೂಲಕ ನೇಯ್ಗೆ ಕಲೆಗೆ ಹೊಸ ಮೆರಗು ನೀಡಿದ್ದಾರೆ.

ಈ ಸೀರೆಯನ್ನು ಶುದ್ಧ ರೇಷ್ಮೆ ದಾರಗಳು ಹಾಗೂ ನೈಸರ್ಗಿಕ ತರಕಾರಿ ಬಣ್ಣಗಳನ್ನು ಬಳಸಿ ಸಾಂಪ್ರದಾಯಿಕ ಇಕ್ಕತ್ ಶೈಲಿಯಲ್ಲಿ ಕೈಮಗ್ಗದಲ್ಲಿ ನೇಯ್ಯಲಾಗುತ್ತದೆ. ಅಗ್ಗಿಪೆಟ್ಟಿಗೆಯಲ್ಲಿ ಇಡುವಷ್ಟು ಸಣ್ಣದಾಗಿ ಮಡಚಬಹುದಾದರೂ, ಇದನ್ನು ಸಾಮಾನ್ಯ ರೇಷ್ಮೆ ಸೀರೆಯಂತೆಯೇ ಸುಲಭವಾಗಿ ಉಡಬಹುದಾಗಿದೆ. ಒಂದು ಸೀರೆಯನ್ನು ಸಂಪೂರ್ಣವಾಗಿ ಸಿದ್ಧಪಡಿಸಲು ಕನಿಷ್ಠ 6 ದಿನಗಳ ಶ್ರಮ ಬೇಕಾಗುತ್ತದೆ.

ಸಿರಿಸಿಲ್ಲಾದ ಪ್ರಸಿದ್ಧ ನೇಯ್ಗೆ ಕಲಾವಿದರಾದ ನಲ್ಲ ವಿಜಯ್ ಕುಮಾರ್ ಹಾಗೂ ವೆಲ್ದಿ ಹರಿಪ್ರಸಾದ್ ಈ ಅಪರೂಪದ ಸೀರೆಗಳನ್ನು ತಯಾರಿಸುವಲ್ಲಿ ಜಾಗತಿಕ ಗುರುತಿಸಿಕೊಂಡಿದ್ದಾರೆ. ನಲ್ಲ ವಿಜಯ್ ಅವರ ತಂದೆ ನಲ್ಲ ಪರಂಧಾಮುಲು ಅವರು 1987ರಲ್ಲಿ ಪ್ರಥಮ ಬಾರಿಗೆ ಇಂತಹ ಬೆಂಕಿಕಡ್ಡಿ ಪೆಟ್ಟಿಗೆಯಲ್ಲಿ ಹಿಡಿಯುವ ಸೀರೆಯನ್ನು ರೂಪಿಸಿ ‘ಸಿರಿಸಿಲ್ಲಾ ನೇಕಾರಿಕೆಗೆ’ ವಿಶ್ವಮಟ್ಟದಲ್ಲಿ ಮನ್ನಣೆ ತಂದುಕೊಟ್ಟಿದ್ದರು. ಅವರ ಮಗ ವಿಜಯ್ ಕುಮಾರ್ ಪ್ರಸ್ತುತ ಈ ಪರಂಪರೆಯನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ.

ಸಿರಿಸಿಲ್ಲಾದ ಈ ಮ್ಯಾಚ್‌ಬಾಕ್ಸ್ ಸೀರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಪಾರ ಪ್ರಶಂಸೆ ಪಡೆದುಕೊಂಡಿದೆ. ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಹಾಗೂ ಮಿಶೆಲ್ ಒಬಾಮಾ ಅವರಿಗೆ ಈ ವಿಶೇಷ ಸೀರೆಯನ್ನು ಉಡುಗೊರೆಯಾಗಿ ನೀಡುವ ಮೂಲಕ ಸಿರಿಸಿಲ್ಲಾ ನೇಕಾರರ ಕೀರ್ತಿ ಜಗತ್ತಿನಾದ್ಯಂತ ಪಸರಿಸಿತ್ತು. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೂ ಸಹ ಈ ವಿಶೇಷ ಕೈಮಗ್ಗ ಶೈಲಿಯಲ್ಲಿ ತಯಾರಿಸಿದ ಶಾಲು ನೀಡಿ ಗೌರವಿಸಲಾಗಿತ್ತು.

ಇದನ್ನೂ ಓದಿ: ದುಬಾರೆ ದುರಂತಕ್ಕೆ 2.5 ತಿಂಗಳು: ಇಂದಿಗೂ ಜಾರಿಯಾಗದ ಎಸ್‌ಒಪಿ, ಲಕ್ಷಾಂತರ ರೂ. ನಷ್ಟದಲ್ಲಿ ರಾಫ್ಟಿಂಗ್ ಉದ್ಯಮಿಗಳು

ತಮ್ಮ ಕಲಾ ನೈಪುಣ್ಯತೆಯನ್ನು ಭಕ್ತಿಯೊಂದಿಗೆ ಸಮ್ಮಿಳನಗೊಳಿಸಿರುವ ನಲ್ಲ ವಿಜಯ್ ಕುಮಾರ್ ಅವರು, ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಾದ ತಿರುಮಲ ತಿರುಪತಿ ದೇವಸ್ಥಾನದ ಶ್ರೀ ಪದ್ಮಾವತಿ ಅಮ್ಮನವರಿಗೆ, ಶ್ರೀಶೈಲದ ಭ್ರಮರಾಂಬಿಕಾ ದೇವಿಗೆ ಹಾಗೂ ವಿಜಯವಾಡದ ಕನಕದುರ್ಗಮ್ಮನಿಗೆ ಬೆಂಕಿಕಡ್ಡಿ ಪೆಟ್ಟಿಗೆಯಲ್ಲಿ ಹಿಡಿಯುವ ಈ ವಿಶೇಷ ಪಟ್ಟು ಸೀರೆಗಳನ್ನು ಸಮರ್ಪಿಸಿ ಭಕ್ತಿ ಮೆರೆದಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಟರ್ಮ್ ಲೋನ್ ಮಾತ್ರ ಕೊಡಿ, ರಿವಾಲ್ವಿಂಗ್ ಕ್ರೆಡಿಟ್ ಬೇಡ: NBFCಗಳಿಗೆ ಬರಲಿದೆ ಹೊಸ ಮಾರ್ಗಸೂಚಿ – Kannada News | Rbi drafts guidelines to nbfcs proposing ban on revolving credit

ನವದೆಹಲಿ, ಆಗಸ್ಟ್ 7: ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಬ್ಯಾಂಕಿಂಗೇತರ ಹಣಕಾಸು ಸಂಸ್ಥೆಗಳಿಗೆ (NBFC) ಸಂಬಂಧಿಸಿದಂತೆ ಮಹತ್ವದ ಕರಡು ಮಾರ್ಗಸೂಚಿಯನ್ನು (Draft Guidelines) ಹೊರಡಿಸಿದ್ದು, NBFCಗಳು ತಮ್ಮ ಗ್ರಾಹಕರಿಗೆ ರಿವಾಲ್ವಿಂಗ್ ಕ್ರೆಡಿಟ್ (Revolving Credit) ಸೌಲಭ್ಯಗಳನ್ನು ನೀಡುವುದನ್ನು ನಿಷೇಧಿಸಲು ಮತ್ತು ಕೇವಲ ಟರ್ಮ್ ಲೋನ್ (Term Loans) ನೀಡಲು ಮಾತ್ರವೇ ಅನುಮತಿ ನೀಡಲು ಪ್ರಸ್ತಾವಿಸಿದೆ.

ರಿವಾಲ್ವಿಂಗ್ ಕ್ರೆಡಿಟ್‌ಗೆ ನಿಷೇಧ

ಫ್ಲೆಕ್ಸಿ ಲೋನ್, ಡಿಜಿಟಲ್ ಕ್ರೆಡಿಟ್ ಲೈನ್ ಅಥವಾ ಓವರ್‌ಡ್ರಾಫ್ಟ್ ಮಾದರಿಯ ಸಾಲಗಳಲ್ಲಿ ಗ್ರಾಹಕರು ಪಡೆದ ಸಾಲವನ್ನು ಮರುಪಾವತಿಸಿದ ನಂತರ ಮತ್ತೆ ಅಷ್ಟೇ ಹಣವನ್ನು ಮರು-ಬಳಕೆ ಮಾಡಿಕೊಳ್ಳುವ (reusable credit) ಸೌಲಭ್ಯಕ್ಕೆ ರಿವಾಲ್ವಿಂಗ್ ಕ್ರೆಡಿಟ್ ಎನ್ನುತ್ತಾರೆ. NBFCಗಳು ಇಂಥ ಸಾಲ ನೀಡುವಂತಿಲ್ಲ ಎಂದು ಆರ್​ಬಿಐನ ಪ್ರಸ್ತಾವಿತ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: ಆರ್ಥಿಕ ಸಂಕಷ್ಟದಲ್ಲೂ ವಿದೇಶಿಗರ ನೆರವಿನ ಹಸ್ತಕ್ಕೆ ಕೈಚಾಚದ ಬೆಂಗಳೂರು ಸ್ಟಾರ್ಟಪ್; ಭಾರತದ ಮೊದಲ ಎಂಆರ್​ಐ ನಿರ್ಮಿಸಿದವನ ಕಥೆ

ಟರ್ಮ್ ಲೋನ್‌ಗಳಿಗೆ ಮಾತ್ರ ಅವಕಾಶ

NBFCಗಳು ನೀಡುವ ಸಾಲಗಳು ನಿರ್ದಿಷ್ಟ ಮೊತ್ತ (fixed principal) ಹಾಗೂ ಮುಂಚಿತವಾಗಿ ನಿಗದಿಯಾದ ಕಂತುಗಳ ಮರುಪಾವತಿ ವೇಳಾಪಟ್ಟಿಯನ್ನು (predetermined amortisation schedule) ಹೊಂದಿರಬೇಕು. ಒಮ್ಮೆ ಸಾಲದ ಕಂತು ಮರುಪಾವತಿಯಾದರೆ, ಆ ಸಾಲದ ಮಿತಿಯು ಮತ್ತೆ ಸಕ್ರಿಯಗೊಳ್ಳುವಂತಿಲ್ಲ ಎಂದು ಈ ಕರಡು ಮಾರ್ಗಸೂಚಿಯಲ್ಲಿ ಹೇಳಲಾಗಿದೆ.

ಕ್ರೆಡಿಟ್ ಕಾರ್ಡ್ ನೀಡುವ NBFCಗಳಿಗೆ ವಿನಾಯಿತಿ

ಆರ್‌ಬಿಐನಿಂದ ಕ್ರೆಡಿಟ್ ಕಾರ್ಡ್ ವಿತರಿಸಲು ಅಧಿಕೃತ ಅನುಮತಿ ಪಡೆದಿರುವ NBFCಗಳಿಗೆ (ಉದಾಹರಣೆಗೆ ಎಸ್‌ಬಿಐ ಕಾರ್ಡ್ಸ್) ಈ ನಿಯಮ ಅನ್ವಯಿಸುವುದಿಲ್ಲ, ಏಕೆಂದರೆ ಕ್ರೆಡಿಟ್ ಕಾರ್ಡ್ ವ್ಯವಸ್ಥೆಯು ಸ್ವಾಭಾವಿಕವಾಗಿಯೇ ರಿವಾಲ್ವಿಂಗ್ ಕ್ರೆಡಿಟ್ ಸ್ವರೂಪದ್ದಾಗಿದೆ.

ಇದನ್ನೂ ಓದಿ: ಬಿಎಸ್ಸೆನ್ನೆಲ್ ವೈಫೈ ಯೋಜನೆ ನೀರಲ್ಲಿ ಹೋಮ; ಸಾವಿರಾರು ಕೋಟಿ ರೂ ವೆಚ್ಚಕ್ಕೆ ಬದಲಾಗಿ ಸಿಕ್ಕ ಆದಾಯ ಸೊನ್ನೆ?

ಗ್ರಾಹಕರು ಮತ್ತು ಹಣಕಾಸು ವಲಯದ ಮೇಲಾಗುವ ಪರಿಣಾಮ

  • ಗ್ರಾಹಕರ ಮೇಲಿನ ಪರಿಣಾಮ: ಫಿನ್‌ಟೆಕ್ ಆ್ಯಪ್‌ಗಳು ಹಾಗೂ NBFCಗಳ ಮೂಲಕ ಕ್ರೆಡಿಟ್ ಲೈನ್ ಬಳಸಿ ಅಗತ್ಯವಿದ್ದಾಗ ಹಣ ಪಡೆದು, ತೀರಿಸಿ ಮತ್ತೆ ಬಳಸುತ್ತಿದ್ದ ಗ್ರಾಹಕರು ಇನ್ಮುಂದೆ ಪ್ರತಿ ಬಾರಿ ಹೊಸ ಸಾಲಕ್ಕಾಗಿ ಪ್ರತ್ಯೇಕವಾಗಿ ಅರ್ಜಿ ಸಲ್ಲಿಸಬೇಕಾಗುತ್ತದೆ.
  • NBFC ಮತ್ತು ಫಿನ್‌ಟೆಕ್ ಸಂಸ್ಥೆಗಳ ಮೇಲೆ: ಬಜಾಜ್ ಫಿನ್‌ಸರ್ವ್ ಸೇರಿದಂತೆ ಹಲವು ರೀಟೇಲ್ ಲೋನ್ ನೀಡುವ NBFCಗಳು ಹಾಗೂ ಫಿನ್‌ಟೆಕ್ ಪಾರ್ಟ್ನರ್ ಸಂಸ್ಥೆಗಳು ತಮ್ಮ ‘ಫ್ಲೆಕ್ಸಿ ಲೋನ್’ ಮತ್ತು ‘ಕ್ರೆಡಿಟ್ ಲೈನ್’ ಉತ್ಪನ್ನಗಳ ಸ್ವರೂಪವನ್ನು ಮರುರೂಪಿಸಬೇಕಾಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Bengaluru South Recruitment 2026: ಬೆಂಗಳೂರು ದಕ್ಷಿಣ ಜಿಲ್ಲೆ;102 ಪೌರಕಾರ್ಮಿಕ ಹುದ್ದೆಗಳಿಗೆ ಅರ್ಜಿ ಆಹ್ವಾನ – Kannada News | Bengaluru South Recruitment 2026: Apply Offline for 102 Pourakarmika or Civic Worker Posts

ಉದ್ಯೋಗಾಕಾಂಕ್ಷಿಗಳಿಗೆ ಕರ್ನಾಟಕ ಸರ್ಕಾರದಿಂದ ಮತ್ತೊಂದು ಸಿಹಿ ಸುದ್ದಿ ಹೊರಬಿದ್ದಿದೆ. ಬೆಂಗಳೂರು ದಕ್ಷಿಣ ಜಿಲ್ಲೆಯ (ರಾಮನಗರ) ವಿವಿಧ ನಗರಸಭೆಗಳಲ್ಲಿ ಖಾಲಿ ಇರುವ ನಾಗರಿಕ ಸೇವಕ (ನೇರ ಪಾವತಿ ಪೌರಕಾರ್ಮಿಕ) ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆ ಬಿಡುಗಡೆಯಾಗಿದೆ. ಸರ್ಕಾರಿ ವಲಯದಲ್ಲಿ ಸ್ಥಿರ ಉದ್ಯೋಗವನ್ನು ಹುಡುಕುತ್ತಿರುವ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಗೆ ಇದೊಂದು ಸುವರ್ಣ ಅವಕಾಶವಾಗಿದ್ದು, ಒಟ್ಟು 102 ಹುದ್ದೆಗಳನ್ನು ಭರ್ತಿ ಮಾಡಲು ಅರ್ಹರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಉದ್ಯೋಗದ ಸಂಕ್ಷಿಪ್ತ ವಿವರಗಳು:

ಈ ನೇಮಕಾತಿ ಪ್ರಕ್ರಿಯೆಯನ್ನು ಜಿಲ್ಲಾ ನಗರಾಭಿವೃದ್ಧಿ ಕೋಶವು ನಿರ್ವಹಿಸುತ್ತಿದೆ. ಒಟ್ಟು 102 ನಾಗರಿಕ ಸೇವಕ (ಪೌರಕಾರ್ಮಿಕ) ಹುದ್ದೆಗಳನ್ನು ನೇರ ಆಯ್ಕೆ ಪ್ರಕ್ರಿಯೆಯ ಮೂಲಕ ಭರ್ತಿ ಮಾಡಲಾಗುತ್ತಿದ್ದು, ಆಯ್ಕೆಯಾದ ಅಭ್ಯರ್ಥಿಗಳಿಗೆ ರಾಮನಗರ, ಚನ್ನಪಟ್ಟಣ ಹಾಗೂ ಕನಕಪುರ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುವ ಅವಕಾಶ ಸಿಗಲಿದೆ. ಅರ್ಜಿಗಳನ್ನು ಆಫ್‌ಲೈನ್ (ಮಾನ್ಯ ಪೋಸ್ಟ್ ಅಥವಾ ನೇರ ಸಲ್ಲಿಕೆ) ಮೂಲಕ ಸಲ್ಲಿಸಬೇಕಾಗಿದೆ.

ನಗರಸಭೆವಾರು ಹುದ್ದೆಗಳ ವಿವರ:

ಒಟ್ಟು ಲಭ್ಯವಿರುವ 102 ಹುದ್ದೆಗಳನ್ನು ಜಿಲ್ಲೆಯ ಮೂರು ಪ್ರಮುಖ ನಗರಸಭೆಗಳಿಗೆ ಹಂಚಿಕೆ ಮಾಡಲಾಗಿದೆ. ರಾಮನಗರ ನಗರಸಭೆಗೆ 45 ಹುದ್ದೆಗಳು, ಚನ್ನಪಟ್ಟಣ ನಗರಸಭೆಗೆ 36 ಹುದ್ದೆಗಳು ಹಾಗೂ ಕನಕಪುರ ನಗರಸಭೆಗೆ 21 ಹುದ್ದೆಗಳನ್ನು ಕಾಯ್ದಿರಿಸಲಾಗಿದೆ. ಆಸಕ್ತರು ತಮ್ಮ ವ್ಯಾಪ್ತಿಗೆ ಒಳಪಡುವ ನಗರಸಭೆಗೆ ಅರ್ಜಿಯನ್ನು ಸಲ್ಲಿಸಬಹುದು.

ಅರ್ಹತಾ ಮಾನದಂಡ ಮತ್ತು ವಯೋಮಿತಿ:

ಈ ಹುದ್ದೆಗಳಿಗೆ ಯಾವುದೇ ನಿರ್ದಿಷ್ಟ ಶೈಕ್ಷಣಿಕ ಅರ್ಹತೆಯ (ಫಾರ್ಮಲ್ ಶಿಕ್ಷಣ) ಅಗತ್ಯವಿರುವುದಿಲ್ಲ, ಆದರೆ ಅಭ್ಯರ್ಥಿಗೆ ಕನ್ನಡ ಭಾಷೆ ಮಾತನಾಡಲು ಬರಬೇಕು. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ತುಂಬಿರಬೇಕು ಮತ್ತು ಗರಿಷ್ಠ 50 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ. ನಿಯಮಾವಳಿಗಳ ಪ್ರಕಾರ ವೇತನದ ಜೊತೆಗೆ ಪಿ.ಎಫ್ ಹಾಗೂ ಇ.ಎಸ್.ಐ ಸೌಲಭ್ಯಗಳು ದೊರೆಯಲಿವೆ.

ಇದನ್ನೂ ಓದಿ: ಜಾಬ್ ಇಂಟರ್‌ವ್ಯೂಗೆ ಹೋಗುವ ಮುನ್ನ ಈ ತಪ್ಪು ಮಾಡಬೇಡಿ; ಸಿಂಪಲ್​ ಟಿಪ್ಸ್​ ಇಲ್ಲಿದೆ

ಅರ್ಜಿ ಸಲ್ಲಿಸುವ ಹಂತಗಳು:

ಆಸಕ್ತ ಅಭ್ಯರ್ಥಿಗಳು ಮೊದಲು ಅಧಿಕೃತ ವೆಬ್‌ಸೈಟ್‌ bengalurusouth.nic.in ಮೂಲಕ ನೇಮಕಾತಿ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿಕೊಳ್ಳಬೇಕು. ನಂತರ ರಾಮನಗರ, ಚನ್ನಪಟ್ಟಣ ಅಥವಾ ಕನಕಪುರ ನಗರಸಭೆ ಕಚೇರಿಯಿಂದ ನಿಗದಿತ ಅರ್ಜಿ ನಮೂನೆಯನ್ನು ಪಡೆದು, ಅಗತ್ಯ ವಿವರಗಳನ್ನು ಭರ್ತಿ ಮಾಡಬೇಕು. ಭರ್ತಿ ಮಾಡಿದ ಅರ್ಜಿಯೊಂದಿಗೆ ಆಧಾರ್ ಕಾರ್ಡ್, ವಯಸ್ಸಿನ ಪುರಾವೆ, ಭಾವಚಿತ್ರ ಮತ್ತು ಅಗತ್ಯ ಧೃಢೀಕರಣ ಪತ್ರಗಳನ್ನು ಲಗತ್ತಿಸಿ ಸಂಬಂಧಪಟ್ಟ ನಗರಸಭೆ ಕಚೇರಿಗೆ ತಲುಪಿಸಬೇಕು.

ಪ್ರಮುಖ ದಿನಾಂಕಗಳು:

ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಲುಆಗಸ್ಟ್ 03 ರಿಂದ ಅವಕಾಶ ಕಲ್ಪಿಸಲಾಗಿದೆ. ಅರ್ಜಿಗಳನ್ನು ಸಲ್ಲಿಸಲು ಸೆಪ್ಟೆಂಬರ್ 05 ಕೊನೆಯ ದಿನಾಂಕವಾಗಿದ್ದು, ಅಭ್ಯರ್ಥಿಗಳು ನಿಗದಿತ ದಿನಾಂಕದೊಳಗೆ ತಮ್ಮ ಅರ್ಜಿ ನಮೂನೆಯನ್ನು ಸಂಬಂಧಪಟ್ಟ ಕಚೇರಿಗೆ ಸಲ್ಲಿಸಬೇಕಾಗುತ್ತದೆ.

ಅಧಿಸೂಚನೆ ಲಿಂಕ್​ ಇಲ್ಲಿದೆ: Bengaluru-South-Municipal-Corporation-Recruitment-2026-Apply-for-102-Civil-Servant-Pourakarmika-Posts-Notification-and-Application-Form

ಉದ್ಯೋಗಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Source link

ನೌಕರಿ ಮಾಡೋ ಕನಸು: ಆಪರೇಷನ್ ಆಗಿದ್ರೂ ಆಸ್ಪತೆಯಿಂದ ನೇರವಾಗಿ ಸಂದರ್ಶನಕ್ಕೆ ಬಂದ ವ್ಯಕ್ತಿ – Kannada News | A Person Who Came Straight to the Interview from the Hospital After Undergoing Surgery

ಕೊಪ್ಪಳದಲ್ಲಿ ಉದ್ಯೋಗಕ್ಕಾಗಿ ಹರಸಾಹಸ Image Credit source: tv9 kannada

ಕೊಪ್ಪಳ, ಆಗಸ್ಟ್​​ 07: ಒಂದು ಉದ್ಯೋಗ (job) ಮನುಷ್ಯನ ಜೀವನಕ್ಕೆ ಎಷ್ಟು ದೊಡ್ಡ ಆಸರೆ ಮತ್ತು ಭರವಸೆಯನ್ನು ನೀಡುತ್ತದೆ ಎನ್ನುವುದಕ್ಕೆ ಕೊಪ್ಪಳ (koppal) ಜಿಲ್ಲೆಯಲ್ಲಿ ನಡೆದ ಘಟನೆಯೇ ಜೀವಂತ ಸಾಕ್ಷಿ. ಬದುಕಿನ ನಿರ್ವಹಣೆಗಾಗಿ ಹುದ್ದೆಯೊಂದನ್ನು ಪಡೆಯಲು ಯುವಕರು ಎಂತಹ ಕಷ್ಟಗಳನ್ನ ಎದುರಿಸಲೂ ಸಿದ್ಧರಿದ್ದಾರೆ ಎಂಬುದನ್ನು ಈ ಘಟನೆ ಸ್ಪಷ್ಟವಾಗಿ ಬಿಂಬಿಸುತ್ತದೆ. ಆಪರೇಷನ್​ ಆದರೂ ಓರ್ವ ಯುವಕ ನೇಮಕಾತಿ ಪ್ರಕ್ರಿಯೆಗೆ ಆಗಮಿಸಿದ ಮನಕಲಕುವ ಘಟನೆಯೊಂದು ನಡೆದಿದೆ.

ನಡೆದಿದ್ದೇನು?

ಕೊಪ್ಪಳ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಖಾಲಿ ಇರುವ ಕೇವಲ 26 ಗುತ್ತಿಗೆ ಆಧಾರಿತ ಹುದ್ದೆಗಳ ನೇಮಕಾತಿಗಾಗಿ ಕರೆ ನೀಡಿತ್ತು. ಹಾಗಾಗಿ ಇಂದು ದಾಖಲೆಗಳ ಪರಿಶೀಲನೆಗೆ, ಸಾವಿರಾರು ಆಕಾಂಕ್ಷಿಗಳು ಬೆಳಗ್ಗೆಯಿಂದಲೇ ಸರತಿ ಸಾಲಿನಲ್ಲಿ ನಿಂತು ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿದ್ದರು.

ಇದನ್ನೂ ಓದಿ: ಕೈಯಲ್ಲಿ ಕೂಸು, ಕಣ್ಣಲ್ಲಿ ಸರ್ಕಾರಿ ಉದ್ಯೋಗದ ಕನಸು: ಅಮ್ಮನ ಜತೆ ಪರೀಕ್ಷೆಗೆ ಬಂದ ಕಂದನಿಗೆ ಲಾಲಿ ಹಾಡಿದ ಪೊಲೀಸ್ರು

ಕಿರಿಯ ಪ್ರಯೋಗಶಾಲಾ ತಾಂತ್ರಿಕ ಅಧಿಕಾರಿ (11 ಹುದ್ದೆ), ಫಾರ್ಮಸಿ ಅಧಿಕಾರಿ (4 ಹುದ್ದೆ) ಹಾಗೂ ಶುಶ್ರೂಷಾಧಿಕಾರಿ (11 ಹುದ್ದೆ) ಸೇರಿದಂತೆ ಒಟ್ಟು 26 ಹುದ್ದೆಗಳಿಗೆ ಒಂದು ವರ್ಷದ ಗುತ್ತಿಗೆ ಒಪ್ಪಂದವಿದ್ದರೂ, ಸುಮಾರು 2,000ಕ್ಕೂ ಹೆಚ್ಚು ಆಕಾಂಕ್ಷಿಗಳು ಆಗಮಿಸಿದ್ದರು.

ನೇರವಾಗಿ ಆಸ್ಪತ್ರೆಯಿಂದಲೇ ಬಂದ ಉದ್ಯೋಗ ಆಕಾಂಕ್ಷಿ

ಇತ್ತೀಚೆಗೆ ಬೈಕ್ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಬಾಗಲಕೋಟೆ ಮೂಲದ ಗೋವಿಂದ ಎಂಬ ಉದ್ಯೋಗ ಆಕಾಂಕ್ಷಿ, ಆಪರೇಷನ್ ಆಗಿದ್ದರೂ ಅದನ್ನು ಲೆಕ್ಕಿಸದೆ ನೇರವಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಿಂದ ಕಾರಿನಲ್ಲಿಯೇ ಕೊಪ್ಪಳದ ಕಚೇರಿಗೆ ಆಗಮಿಸಿದ್ದರು. ಲ್ಯಾಬ್ ಟೆಕ್ನಿಷಿಯನ್ ಹುದ್ದೆಯ ಕನಸು ಹೊತ್ತಿದ್ದ ಅವರು, ತಮ್ಮ ತಾಯಿ ಹಾಗೂ ಸಂಬಂಧಿಕರ ನೆರವಿನಿಂದ ಈ ದಾಖಲಾತಿ ಪರಿಶೀಲನೆಯ ಪ್ರಕ್ರಿಯೆಯಲ್ಲಿ ಭಾಗವಹಿಸಿ ಎಲ್ಲರ ಗಮನ ಸೆಳೆದರು.

ಮಕ್ಕಳಿಗಾಗಿ ಆವರಣದಲ್ಲಿ ಜೋಳಿಗೆ ಕಟ್ಟಿದ ಕುಟುಂಬಸ್ಥರು

ಮತ್ತೊಂದೆಡೆ, ಕೊಪ್ಪಳದ ಜಿಲ್ಲಾ ಆರೋಗ್ಯ ಇಲಾಖೆಯ ಆವರಣದಲ್ಲಿ ಉದ್ಯೋಗಾಕಾಂಕ್ಷಿಗಳ ಆತಂಕ ಮತ್ತು ಬದುಕಿನ ಹೋರಾಟದ ಮತ್ತೊಂದು ಹತಾಶ ಚಿತ್ರಣ ಕಂಡುಬಂತು. ದೂರದೂರುಗಳಿಂದ ಬಂದಿದ್ದ ಮಹಿಳಾ ಆಕಾಂಕ್ಷಿಗಳು ತಮ್ಮ ಸಣ್ಣ ಸಣ್ಣ ಮಕ್ಕಳೊಂದಿಗೆ ಆಗಮಿಸಿದ್ದು, ಮಕ್ಕಳನ್ನು ನಿಭಾಯಿಸಲು ಇಲಾಖೆಯ ಆವರಣದಲ್ಲೇ ಕುಟುಂಬಸ್ಥರು ಜೋಳಿಗೆಯನ್ನು ಕಟ್ಟಿ ಮಲಗಿಸಿದ್ದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Exit mobile version