“ನೀನು ತುಂಬಾ ಸಣ್ಣಗಿದ್ದೀಯ, ಜಿಮ್‌ಗೆ ಹೋದ್ರೆ ಸೆಕ್ಸಿಯಾಗಿ ಕಾಣ್ತೀಯ”: ಟಿಸಿಎಸ್ ಸಹೋದ್ಯೋಗಿ ಬಗ್ಗೆ ಯುವತಿ ಸ್ಫೋಟಕ ಹೇಳಿಕೆ – Kannada News | Shocking Harassment and Conversion Plot at TCS Nashik: Female Employee Recalls Trauma

ನಾಸಿಕ್, ಏ.24: ದೇಶದ ಪ್ರತಿಷ್ಠಿತ ಐಟಿ ಕಂಪನಿ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (TCS) ನ ನಾಸಿಕ್ ಘಟಕದಲ್ಲಿ ಮನುಕುಲವೇ ಬೆಚ್ಚಿಬೀಳುವಂತಹ ಘಟನೆ ಬೆಳಕಿಗೆ ಬಂದಿತ್ತು. ಕೆಲಸದ ಸ್ಥಳದಲ್ಲಿ ಮಹಿಳಾ ಉದ್ಯೋಗಿಗಳಿಗೆ ಲೈಂಗಿಕ ಕಿರುಕುಳ ನೀಡುವುದರ ಜೊತೆಗೆ, ಬಲವಂತದ ಧಾರ್ಮಿಕ ಮತಾಂತರಕ್ಕೆ ಸಂಚು ರೂಪಿಸಿರುವ ಗಂಭೀರ ಆರೋಪ ಕೇಳಿಬಂದಿದೆ. ಈ ಘಟನೆಯನ್ನು ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವಿಸ್ ‘ಕಾರ್ಪೊರೇಟ್ ಜಿಹಾದ್’ ಎಂದು ಬಣ್ಣಿಸಿದ್ದರು. ಇದೀಗ ಈ ಪ್ರಕರಣದ ಬಗ್ಗೆ ತನಿಖೆ ನಡೆಯುತ್ತಿದೆ. ಈ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದ ಯುವತಿಯರು ಸ್ಫೋಟಕ ಹೇಳಿಕೆಗಳನ್ನು ನೀಡಿದ್ದಾರೆ. ಅಲ್ಲಿ ತಮ್ಮನ್ನು ನಡೆಸುಕೊಳ್ಳುತ್ತಿದ್ದ ಬಗ್ಗೆ ಹಾಗೂ ಅಸಭ್ಯ ಮಾತುಗಳ ಬಗ್ಗೆ ಹೇಳಿಕೆ ನೀಡಿದ್ದಾರೆ.

ಪ್ರಕರಣದ ತನಿಖೆ ಚುರುಕುಗೊಂಡಂತೆ ಒಬ್ಬೊಬ್ಬರೇ ಸಂತ್ರಸ್ತೆಯರು ತಮಗಾದ ಕಹಿ ಅನುಭವವನ್ನು ಹಂಚಿಕೊಳ್ಳುತ್ತಿದ್ದಾರೆ. ಟಿಸಿಎಸ್‌ನ ಮಹಿಳಾ ಉದ್ಯೋಗಿಯೊಬ್ಬರು ನೀಡಿರುವ ದೂರಿನ ಬಗ್ಗೆ ಇಲ್ಲಿ ನೋಡಿ ಮಾಹಿತಿ. ಆರೋಪಿಗಳಾದ ಶಾರುಖ್ ಖುರೇಷಿ ಮತ್ತು ರಜಾ ಮೆಮನ್ ಕೆಲಸದ ನೆಪದಲ್ಲಿ ಮಹಿಳೆಯನ್ನು ಪೀಡಿಸುತ್ತಿದ್ದರು. “ನಿನಗೆ ಬಾಯ್ ಫ್ರೆಂಡ್ ಇದ್ದಾನಾ?”, “ಯಾರನ್ನಾದರೂ ಇಷ್ಟಪಡುತ್ತೀಯಾ?” ಎಂದು ಕೇಳುತ್ತಾ ಮುಜುಗರ ಉಂಟುಮಾಡುತ್ತಿದ್ದರು.

“ನೀನು ತುಂಬಾ ಸಣ್ಣಗಿದ್ದೀಯಾ, ಜಿಮ್‌ಗೆ ಹೋದರೆ ಆಕರ್ಷಕವಾಗಿ ಕಾಣುತ್ತೀಯಾ” ಎಂದು ರಜಾ ಮೆಮನ್ ಅಶ್ಲೀಲವಾಗಿ ಕಾಮೆಂಟ್ ಮಾಡುತ್ತಿದ್ದ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ.ಯುಗಾದಿ (ಗುಡಿ ಪಾಡ್ವ) ದಿನದಂದು ಹೊಸ ಬಟ್ಟೆ ಧರಿಸಿ ಬಂದಿದ್ದ ಸಂತ್ರಸ್ತೆಯನ್ನು ಪದೇ ಪದೇ ಹತ್ತಿರ ಕರೆದು, ಅಸಭ್ಯವಾಗಿ ದಿಟ್ಟಿಸುತ್ತಾ ಮಾನಸಿಕ ಕಿರುಕುಳ ನೀಡಲಾಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಶೌಚಾಲಯದಲ್ಲೇ ಮಗುವಿಗೆ ಜನ್ಮ ನೀಡಿ, ಕತ್ತು ಸೀಳಿ ಫ್ಲಶ್ ಮಾಡಲು ಯತ್ನಿಸಿದ 19 ವರ್ಷದ ಯುವತಿಯ ಬಂಧನ

ಆರೋಪಿಗಳು ಕೇವಲ ಕಿರುಕುಳಕ್ಕೆ ಸೀಮಿತವಾಗದೆ, ಉದ್ಯೋಗಿಗಳನ್ನು ಮತಾಂತರಗೊಳಿಸಲು ಪ್ರಯತ್ನಿಸುತ್ತಿದ್ದರು ಎಂಬ ಅಂಶ ತನಿಖೆಯಲ್ಲಿ ಬಹಿರಂಗವಾಗಿದೆ. ಕಂಪನಿಯಲ್ಲಿ ಈ ಆರೋಪಿಗಳ ಪ್ರಭಾವ ಹೆಚ್ಚಿದ್ದರಿಂದ ದೂರು ನೀಡಲು ಸಂತ್ರಸ್ತೆಯರು ಭಯಬಿದ್ದಿದ್ದರು. ಸದ್ಯ ಪೊಲೀಸರು ಏಳು ಮಂದಿ ಆರೋಪಿಗಳನ್ನು ಬಂಧಿಸಿದ್ದು, ಅವರ ಮೊಬೈಲ್​​​ ಸಾಧನಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಗಂಭೀರ ಪ್ರಕರಣವನ್ನು ಪರಿಗಣಿಸಿರುವ TCS ಸಂಸ್ಥೆಯು, ಆರೋಪಿಗಳನ್ನು ಕೆಲಸದಿಂದ ಅಮಾನತುಗೊಳಿಸಿದೆ. “ನಮ್ಮ ಸಂಸ್ಥೆಯಲ್ಲಿ ಕಿರುಕುಳಕ್ಕೆ ಯಾವುದೇ ಸ್ಥಾನವಿಲ್ಲ” ಎಂದು ಕಂಪನಿ ಸ್ಪಷ್ಟಪಡಿಸಿದೆ.

ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಎಷ್ಟೇ ಇಷ್ಟವಾದರೂ ಕೂಡ ಈ ಆರೋಗ್ಯ ಸಮಸ್ಯೆ ಇದ್ದಲ್ಲಿ ಕಬ್ಬಿನ ಜ್ಯೂಸ್ ಕುಡಿಯಬೇಡಿ! – Kannada News | Is Sugarcane Juice Bad for You? When to Skip This Summer Drink

Is Sugarcane Juice Bad for You? When to Skip This Summer DrinkImage Credit source: Getty Images

ಬೇಸಿಗೆ ಕಾಲದಲ್ಲಿ ನಾನಾ ರೀತಿಯ ಭಕ್ಷ್ಯಗಳ ಸೇವನೆಗಿಂತ ದ್ರವರೂಪದ ಆಹಾರವೇ ಬೆಸ್ಟ್ ಎನಿಸುತ್ತದೆ. ಹಾಗಾಗಿ ಎಳನೀರು, ಕಬ್ಬಿನ ಜ್ಯೂಸ್ (Sugarcane Juice) ಹೀಗೆ ವಿವಿಧ ರೀತಿಯ ಆರೋಗ್ಯಕ್ಕೆ ಉತ್ತಮವಾದ ಪಾನೀಯಗಳನ್ನು ಸೇವನೆ ಮಾಡುವುದು ಸಾಮಾನ್ಯ. ಇವು ದೇಹಕ್ಕೆ ತಂಪು ನೀಡುವುದರಿಂದ ಜನ ಹೆಚ್ಚೆಚ್ಚು ಸೇವನೆ ಮಾಡುತ್ತಾರೆ. ಆದರೆ ನಿಮಗೆ ಗೊತ್ತಾ… ಶುಗರ್ ಕೆನ್ ಜ್ಯೂಸ್ ಎಲ್ಲರಿಗೂ ಒಳ್ಳೆಯದಲ್ಲ. ಹೌದು, ಆರೋಗ್ಯ ತಜ್ಞರು ಹೇಳುವ ಪ್ರಕಾರ, ಕೆಲವು ಆರೋಗ್ಯ ಸಮಸ್ಯೆಗಳಿರುವವರು ಇದನ್ನು ಮಿತವಾಗಿ ಅಥವಾ ಸಂಪೂರ್ಣವಾಗಿ ತಪ್ಪಿಸುವುದು ಉತ್ತಮ ಎನ್ನುತ್ತಾರೆ. ಹಾಗಾದರೆ ಕಬ್ಬಿನ ರಸ ಯಾರಿಗೆ ಒಳ್ಳೆಯದಲ್ಲ, ಯಾವ ರೀತಿಯ ಆರೋಗ್ಯ ಸಮಸ್ಯೆ ಉಲ್ಬಣಕ್ಕೆ ಕಾರಣವಾಗುತ್ತದೆ ಎಂಬುದನ್ನು ತಿಳಿದುಕೊಳ್ಳಿ. ಸಂಪೂರ್ಣ ಮಾಹಿತಿ ಸ್ಟೋರಿಯಲ್ಲಿದೆ.

ಡಯಾಬಿಟೀಸ್ ಇರುವವರು ಎಚ್ಚರ ವಹಿಸಿ;

ವೈದ್ಯರ ಪ್ರಕಾರ, ಮಧುಮೇಹ (ಡಯಾಬಿಟೀಸ್) ಇರುವವರು ಕಬ್ಬಿನ ಜ್ಯೂಸ್ ಕುಡಿಯುವುದು ಬಹಳ ಅಪಾಯಕಾರಿ ಆಗಬಹುದು. ಇದರಲ್ಲಿ ನೈಸರ್ಗಿಕ ಸಕ್ಕರೆ ಪ್ರಮಾಣ ಹೆಚ್ಚು ಇರುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ತಕ್ಷಣ ಹೆಚ್ಚಿಸುವ ಸಾಧ್ಯತೆ ಇದೆ. ಆದ್ದರಿಂದ ಶುಗರ್ ಲೆವೆಲ್ ನಿಯಂತ್ರಣದಲ್ಲಿ ಇಲ್ಲದವರು ಇದನ್ನು ಕುಡಿಯದಿರುವುದೇ ಒಳ್ಳೆಯದು.

ಅತಿಯಾಗಿ ತೂಕ ಹೊಂದಿರುವವರು;

ತೂಕ ಹೆಚ್ಚಿರುವವರು (ಒಬಿಸಿಟಿ) ಕೂಡ ಕಬ್ಬಿನ ಜ್ಯೂಸ್ ಸೇವನೆ ಮಾಡುವಾಗ ಎಚ್ಚರಿಕೆ ವಹಿಸಬೇಕು. ಈ ಪಾನೀಯದಲ್ಲಿ ಹೆಚ್ಚಿನ ಕ್ಯಾಲೊರಿ ಇರುವುದರಿಂದ ತೂಕ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ವೈದ್ಯರ ಸಲಹೆಯೊಂದಿಗೆ ಮಾತ್ರ ವಾರಕ್ಕೆ ಒಂದು ಬಾರಿ ಮಿತ ಪ್ರಮಾಣದಲ್ಲಿ ಸೇವಿಸುವುದು ಸೂಕ್ತ.

ಇದನ್ನೂ ಓದಿ: ಬಿಸಿಲಿನಲ್ಲಿ ತಣ್ಣಗಿರುವ ಕಬ್ಬಿನ ರಸ ಕುಡಿಯುವವರು ಈ ವಿಷಯಗಳನ್ನು ಮರೆಯಬೇಡಿ

ಜೀರ್ಣಕ್ರಿಯೆ ಸಮಸ್ಯೆಯಿರುವವರು;

ಅಜೀರ್ಣ, ಗ್ಯಾಸ್ಟ್ರಿಕ್ ಅಥವಾ ಹೊಟ್ಟೆ ನೋವಿನ ಸಮಸ್ಯೆ ಇರುವವರು ಶುಗರ್ ಕೆನ್ ಜ್ಯೂಸ್ ತಪ್ಪಿಸುವುದು ಉತ್ತಮ. ಕೆಲವೊಮ್ಮೆ ಇದು ಪಾಚಕ ಸಮಸ್ಯೆಗಳನ್ನು ಹೆಚ್ಚಿಸಬಹುದು ಮತ್ತು ಹೊಟ್ಟೆಯಲ್ಲಿ ಅಸೌಕರ್ಯ ಉಂಟುಮಾಡಬಹುದು.

ಸೇವನೆ ವೇಳೆ ಗಮನಿಸಬೇಕಾದ ವಿಷಯಗಳು:

ಶುಗರ್ ಕೆನ್ ಜ್ಯೂಸ್ ಯಾವಾಗಲೂ ತಾಜಾ ಮತ್ತು ಸ್ವಚ್ಛವಾಗಿ ತಯಾರಿಸಿದದ್ದನ್ನೇ ಸೇವಿಸಬೇಕು. ಖಾಲಿ ಹೊಟ್ಟೆಯಲ್ಲಿ ಕುಡಿಯುವುದನ್ನು ತಪ್ಪಿಸಬೇಕು. ಹೆಚ್ಚಿನ ಪ್ರಮಾಣದಲ್ಲಿ ಕುಡಿಯುವುದು ಆರೋಗ್ಯಕ್ಕೆ ಹಾನಿಕಾರಕವಾಗಬಹುದು. ಆದರೆ ಅದು ಎಲ್ಲರಿಗೂ ಸಮಾನವಾಗಿ ಲಾಭ ನೀಡುವುದಿಲ್ಲ. ವಿಶೇಷವಾಗಿ ಮಧುಮೇಹ, ಅತಿಯಾದ ತೂಕ ಅಥವಾ ಜೀರ್ಣಕ್ರಿಯೆ ಸಮಸ್ಯೆಗಳಿರುವವರು ವೈದ್ಯರ ಸಲಹೆಯೊಂದಿಗೆ ಮಾತ್ರ ಇದನ್ನು ಸೇವಿಸಬೇಕು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಏಕಾಏಕಿ ಕುಸಿದ ಹೋಟೆಲ್​​ ಲಿಫ್ಟ್​​: ಶ್ರೀನಗರದಲ್ಲಿ ಬೆಂಗಳೂರಿನ ಪ್ರವಾಸಿಗರು ಬದುಕಿದ್ದೇ ಪವಾಡ! – Kannada News | 6 Bengaluru Tourists Injured in Srinagar Hotel Lift Mishap

ಬೆಂಗಳೂರು, ಏಪ್ರಿಲ್​​ 24: ಜಮ್ಮು-ಕಾಶ್ಮೀರದ ಶ್ರೀನಗರದ ಹೈದರ್ಪೋರ ಪ್ರದೇಶದಲ್ಲಿರುವ ಹೊಸದಾಗಿ ನಿರ್ಮಿತ ಹೋಟೆಲ್‌ನಲ್ಲಿ ಲಿಫ್ಟ್ ಕುಸಿದು ಬಿದ್ದ ಪರಿಣಾಮ ಬೆಂಗಳೂರಿನ ಆರು ಮಂದಿ ಪ್ರವಾಸಿಗರು ಗಂಭೀರವಾಗಿ ಗಾಯಗೊಂಡಿದ್ದಾರೆ. ಪ್ರವಾಸಿಗರು ವಾಸ್ತವ್ಯ ಹೂಡಿದ್ದ ಹೋಟೆಲ್ ಅರಿಸನ್ ಲಕ್ಷುರಿಯಲ್ಲಿ ಘಟನೆ ನಡೆದಿದ್ದು, ಲಿಫ್ಟ್ ಕುಸಿದ ತಕ್ಷಣ ಗಾಯಾಳುಗಳನ್ನು ಬರ್ಜುಲ್ಲಾದ ಬೋನ್ ಆ್ಯಂಡ್​ ಜಾಯಿಂಟ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳುಗಳ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂಬ ಮಾಹಿತಿ ಇದೆ.

ಗಾಯಗೊಂಡವರನ್ನು ವೆಂಕಟೇಶ್ (65), ಡಿ. ಮಂಗಲಾ (54), ಕುಶಲ್ಲಾ (18), ಪಂಕಜಾ (16), ವೆಂಕಟಲಕ್ಷ್ಮಮ್ಮ (60), ಸೌಭಾಗ್ಯ (60) ಎಂದು ಗುರುತಿಸಲಾಗಿದೆ. ಇವರು ಎಲ್ಲರೂ ಬೆಂಗಳೂರಿನ ನಿವಾಸಿಗಳಾಗಿದ್ದಾರೆ. ಇನ್ನು ಘಟನೆಗೆ ಹೇಗಾಯಿತು ಎಂಬ ಬಗ್ಗೆ ನಿಖರ ಮಾಹಿತಿ ಲಭ್ಯವಾಗಿಲ್ಲ. ಲಿಫ್ಟ್ ಏಕೆ ಕುಸಿದು ಬಿದ್ದಿತು ಎಂಬುದರ ಕುರಿತಾಗಿ ಹೋಟೆಲ್ ಆಡಳಿತ ಇದುವರೆಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ ಎನ್ನಲಾಗಿದೆ. ಆದರೆ ಈ ಘಟನೆ ಪ್ರವಾಸಿಗರಿಗೆ ಸೇವೆ ನೀಡುವ ಹೋಟೆಲ್‌ಗಳಲ್ಲಿನ ಸುರಕ್ಷತಾ ಮಾನದಂಡಗಳ ಬಗ್ಗೆ ಆತಂಕ ಉಂಟುಮಾಡಿದೆ. ಈ ಕುರಿತು ತನಿಖೆ ಆರಂಭಗೊಂಡಿದ್ದು, ತಾಂತ್ರಿಕ ದೋಷ ಅಥವಾ ನಿರ್ಲಕ್ಷ್ಯವೇ ಲಿಫ್ಟ್ ಕುಸಿಯಲು ಕಾರಣವಾ ಎಂಬ ಬಗ್ಗೆ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿರೋದಾಗಿ ಬೆಂಗಳೂರು ನೌ ವರದಿ ಮಾಡಿದೆ.

ಇದನ್ನೂ ಓದಿ: ಸಿನಿಮಾ ಸ್ಟೈಲ್​​ ಕೊಲೆ ಕೇಸ್​ ಭೇದಿಸಿದ ಖಾಕಿ; ಆಸ್ತಿ ವಿವಾದಕ್ಕೆ ನಡೆದಿದ್ದು ಡೆಡ್ಲಿ ಮರ್ಡರ್​!

ವಿದ್ಯುತ್ ಪ್ರವಹಿಸಿ ವ್ಯಕ್ತಿ ಸಾವು

ಮರದಲ್ಲಿ ಮಾವಿನ ಕಾಯಿ ಕೀಳುವಾಗ ವಿದ್ಯುತ್ ಪ್ರವಹಿಸಿ ವ್ಯಕ್ತಿಯೋರ್ವ ದಾರುಣವಾಗಿ ಮೃತಪಟ್ಟಿರುವ ಘಟನೆ ಉಡುಪಿಯ ಜಿಲ್ಲಾಧಿಕಾರಿ ಕಚೇರಿ ಹಿಂಭಾಗದ ಪ್ರದೇಶದಲ್ಲಿ ನಡೆದಿದೆ. ಅಲೆವೂರು ನಿವಾಸಿ ಸದಾನಂದ ದೇವಾಡಿಗ(55) ಮೃತ ದುರ್ದೈವಿಯಾಗಿದ್ದು, ಗ್ರಾಮ ಸಹಾಯಕನಾಗಿ ಇವರು ಕೆಲಸ ಮಾಡುತ್ತಿದ್ದರು ಎಂಬುದು ಗೊತ್ತಾಗಿದೆ. ಘಟನೆ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಮದ್ವೆಯಾದ ಏಳೇ ತಿಂಗಳಿಗೆ ನವವಧು ಇದ್ದಕ್ಕಿದ್ದಂತೆ ಸಾವು: ಸಾವಿನ ಸುತ್ತ ಅನುಮಾನದ ಹುತ್ತ – Kannada News | Newlywed Dies Suddenly 7 Months After Love Marriage; Death Raises Suspicion

ಚಿತ್ರದುರ್ಗ, ಏಪ್ರಿಲ್​ 24: ಅತ್ತಿಗೆಯ ತಂಗಿ ಹಾಗೂ ಭಾವನ ತಮ್ಮನ ನಡುವೆ ಪ್ರೇಮಾಂಕುರವಾಗಿತ್ತು. ಪೋಷಕರ ವಿರೋಧದ ನಡುವೆ ಏಳು ತಿಂಗಳ ಹಿಂದಷ್ಟೇ ಮದುವೆ ಕೂಡ ಆಗಿದ್ದರು. ಆದರೆ ಪ್ರೀತಿಸಿ ಮದುವೆ ಆಗಿದ್ದ ನವವಿವಾಹಿತೆ ಅಸಹಜವಾಗಿ ಸಾವಿಗೀಡಾಗಿದ್ದಾಳೆ (death). ಹೀಗಾಗಿ ಇತ್ತ ಪತಿ ಮತ್ತು ಕುಟುಂಬಸ್ಥರ ವಿರುದ್ಧ ಕೊಲೆ ಆರೋಪ ಕೇಳಿ ಬಂದಿದೆ. ಕೋಟೆನಾಡು ಚಿತ್ರದುರ್ಗ (Chitradurga) ತಾಲೂಕಿನ ಹಾಯ್ಕಲ್ ಗ್ರಾಮದಲ್ಲಿ ಘಟನೆ ನಡೆದಿದೆ.

ಚಿತ್ರದುರ್ಗದ ಕಾಮನಬಾವಿ ಬಡಾವಣೆಯ ಮೀನಾಕ್ಷಿ ಮತ್ತು ಹೊನ್ನೂರಪ್ಪ ದಂಪತಿಯ ಮೊದಲ ಪುತ್ರಿ ಅನು ಹಾಯ್ಕಲ್ ಗ್ರಾಮದ ಮೈಲಾರಿಗೆ ಮದುವೆ ಮಾಡಿಕೊಟ್ಟಿದ್ದರು. ಮೈಲಾರಿ ಸಹೋದರ ವೆಂಕಟೇಶ್, ಅತ್ತಿಗೆಯ ಸಹೋದರಿ ತನುಜಾಳ ಮೇಲೆ ಕಣ್ಣುಹಾಕಿದ್ದ. ಕಾಡಿ-ಬೇಡಿ ಪ್ರೀತಿಸಿ ಸೈ ಎನ್ನಿಸಿಕೊಂಡಿದ್ದ. ತನುಜಾ ಸಹ ಭಾವನ ತಮ್ಮ ವೆಂಕಟೇಶನನ್ನು ಪ್ರೀತಿಸಿದ್ದು, ಪೋಷಕರ ವಿರೋಧದ ನಡುವೆ ಏಳು ತಿಂಗಳ ಹಿಂದೆ ಲವ್​ ಮ್ಯಾರೇಜ್​ ಆಗಿದ್ದರು.

ನಡೆದಿದ್ದೇನು?

ಏಪ್ರಿಲ್ 21 ರಂದು ತನುಜಾ ಬೈಕಿನಿಂದ ಬಿದ್ದು ಗಾಯಗೊಂಡಿದ್ದಾಳೆ ಎಂದು ವೆಂಕಟೇಶ್ ಆಕೆಯ ಪೋಷಕರಿಗೆ ಮಾಹಿತಿ ನೀಡಿದ್ದ. ಚಿತ್ರದುರ್ಗ, ದಾವಣಗೆರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಕೊನೆಗೂ ಚಿಕಿತ್ಸೆ ಫಲಿಸದೆ ತನುಜಾ ಮೃತಪಟ್ಟಿದ್ದಾಳೆ. ಆದರೆ ಮರಣೋತ್ತರ ಪರೀಕ್ಷೆಯ ವರದಿ ನೋಡಿದರೆ ಪೆಟ್ಟು ಬಿದ್ದು ಸಾವು ಎಂಬುದು ತಿಳಿಯುತ್ತಿದೆ. ಹೀಗಾಗಿ ಪತಿ ವೆಂಕಟೇಶ್ ಮತ್ತು ಆತನ ಕುಟುಂಬಸ್ಥರೇ ಹೊಡೆದು ಕೊಂದಿದ್ದಾರೆ. ಬೈಕಿನಿಂದ ಬಿದ್ದಿದ್ದಾಳೆಂದು ಕಥೆ ಕಟ್ಟುತ್ತಿದ್ದಾರೆ ಎಂದು ಮೃತಳ ಸಂಬಂಧಿಕರು ಗಂಭೀರ ಆರೋಪ ಮಾಡಿದ್ದಾರೆ.

ಅಕ್ಕಪಕ್ಕದ ಮನೆಯವರ ಮಧ್ಯೆ ಗಲಾಟೆ: ಹಲ್ಲೆ

ತುರವನೂರು ಪೊಲೀಸ್ ಠಾಣೆಗೆ ಈ ಬಗ್ಗೆ ಪೋಷಕರು ದೂರು ಸಲ್ಲಿಸಿದ್ದಾರೆ. ತುರುವನೂರು ಠಾಣೆಯ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ. ಈ ವೇಳೆ ಅಕ್ಕಪಕ್ಕದ ಮನೆಯವರ ಮಧ್ಯೆ ಕ್ಷುಲ್ಲಕ ಕಾರಣಕ್ಕೆ ಗಲಾಟೆ ನಡೆದಿತ್ತು. ಆಗ ಕೆಲ ಮಹಿಳೆಯರು ತನುಜಾಳ ಮೇಲೆ ಹಲ್ಲೆ ನಡೆಸಿದ್ದರು. ಬಳಿಕ ವೆಂಕಟೇಶ್ ಚಿಕಿತ್ಸೆಗೆಂದು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದನೆಂಬ ಮಾತು ಕೇಳಿಬಂದಿದೆ. ಹಾಗಾದರೆ ತನುಜಾ ಮೇಲೆ ಹಲ್ಲೆ ಮಾಡಿದವರು ಯಾರು, ಯಾವ ಕಾರಣಕ್ಕೆ ಹಲ್ಲೆ ನಡೆದಿದೆ ಎಂಬುದು ಸ್ಪಷ್ಟವಾಗಬೇಕಿದೆ. ಈ ಬಗ್ಗೆ ತನಿಖೆ ನಡೆಸಿ ಕ್ರಮಕೈಗೊಳ್ಳಬೇಕು, ಅಲ್ಲಿಯವರೆಗೆ ಶವ ಸಂಸ್ಕಾರ ಮಾಡಲು ಬಿಡುವುದಿಲ್ಲ ಎಂದು ಮೃತಳ ಅತ್ತೆ ಗಂಗಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಪ್ರೇಮ ವಿವಾಹಕ್ಕೆ ಪೋಷಕರ ವಿರೋಧ! ರಾಜಿ ಆಗೋಣವೆಂದು ಕರೆಸಿ ಕುಟುಂಬದವರ ಮೇಲೆ ಹಲ್ಲೆ

ಚಿತ್ರದುರ್ಗ ತಾಲೂಕಿನ ಹಾಯ್ಕಲ್ ಗ್ರಾಮದಲ್ಲಿ ತನುಜಾ ಅಸಹಜ ಸಾವಿನ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ. ಪತಿ ವೆಂಕಟೇಶ್ ಮತ್ತು ಕುಟುಂಬಸ್ಥರ ವಿರುದ್ಧ ತುರುವನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರ ತನಿಖೆಯಿಂದ ಅಸಲಿಯತ್ತು ಬಯಲಾಗಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಬಿಜೆಪಿಗೆ ಸೇರ್ಪಡೆಯಾದ ರಾಘವ್ ಚಡ್ಡಾ, ಸಂದೀಪ್ ಪಾಠಕ್, ಅಶೋಕ್ ಮಿತ್ತಲ್; ಸಿಹಿ ತಿನ್ನಿಸಿದ ನಿತಿನ್ ನಬಿನ್ – Kannada News | Raghav Chadha, Sandeep Pathak, Ashok Mittal joins BJP after quitting AAP Aam Aadmi Party

ನವದೆಹಲಿ, ಏಪ್ರಿಲ್ 24: ಆಮ್ ಆದ್ಮಿ ಪಕ್ಷಕ್ಕೆ ದೊಡ್ಡ ಹೊಡೆತ ನೀಡಿರುವ ಆಮ್ ಆದ್ಮಿ ಪಕ್ಷದ ಮೂವರು ರಾಜ್ಯಸಭಾ ಸಂಸದರಾದ ರಾಘವ್ ಚಡ್ಡಾ (Raghav Chadha), ಸಂದೀಪ್ ಪಾಠಕ್ ಮತ್ತು ಅಶೋಕ್ ಮಿತ್ತಲ್ ಅಧಿಕೃತವಾಗಿ ಬಿಜೆಪಿ ಸೇರಿದ್ದಾರೆ. ದೆಹಲಿಯ ಪಕ್ಷದ ಪ್ರಧಾನ ಕಚೇರಿಯಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ನಿತಿನ್ ನಬಿನ್ ಸಮ್ಮುಖದಲ್ಲಿ ಅವರು ಬಿಜೆಪಿಗೆ ಸೇರಿದರು. ಈ ವೇಳೆ ನಿತಿನ್ ನಬಿನ್ ಸಿಹಿ ತಿನ್ನಿಸಿ ಮೂರೂ ರಾಜ್ಯಸಭಾ ಸದಸ್ಯರನ್ನು ಬರಮಾಡಿಕೊಂಡರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ರುಪಾಯಿ ಮೌಲ್ಯ ಕುಸಿತ; ಆತಂಕ ಪಡಬೇಕಿಲ್ಲ; ದೀರ್ಘಾವಧಿ ಹೂಡಿಕೆಗೆ ಒಳ್ಳೆಯ ಅವಕಾಶ: ಸಿಇಎ ಅನಂತನಾಗೇಶ್ವರನ್ – Kannada News | Indian Rupee Depreciation: No Worries, Strong Fundamentals & Investment Opportunity CEA

ನವದೆಹಲಿ, ಏಪ್ರಿಲ್ 24: ಭಾರತದ ರೂಪಾಯಿ ಮೌಲ್ಯ ಕುಸಿಯುತ್ತಿರುವ ಬಗ್ಗೆ ಆತಂಕಪಡುವ ಅಗತ್ಯವಿಲ್ಲ ಎಂದು ಭಾರತ ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರ ವಿ. ಅನಂತ ನಾಗೇಶ್ವರನ್ (CEA Anantha Nageswaran) ಅವರು ತಿಳಿಸಿದ್ದಾರೆ. ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯವು 94ರ ಗಡಿ ದಾಟಿದ್ದರೂ, ಈ ಬಗ್ಗೆ ನಾವು ನಿದ್ದೆಗೆಡಬೇಕಿಲ್ಲ ಎಂದು ನಾಗೇಶ್ವರನ್ ಹೇಳಿದ್ದಾರೆ. ಭಾರತದ ಆರ್ಥಿಕತೆಯ ಮೂಲಭೂತ ಅಂಶಗಳು (Fundamentals) ಸದೃಢವಾಗಿದ್ದು, ಪ್ರಸ್ತುತ ಮೌಲ್ಯವು ರೂಪಾಯಿಯ ನೈಜ ಶಕ್ತಿಯನ್ನು ಪ್ರತಿಬಿಂಬಿಸುತ್ತಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ರೂಪಾಯಿಯು ಪ್ರಸ್ತುತ ತನ್ನ ನಿಜವಾದ ಸಾಮರ್ಥ್ಯಕ್ಕಿಂತ ಕಡಿಮೆ ಮೌಲ್ಯವನ್ನು ಹೊಂದಿದೆ (Fundamentally Undervalued). ಇದು ವಿದೇಶಿ ಹೂಡಿಕೆದಾರರಿಗೆ ಭಾರತದಲ್ಲಿ ಹೂಡಿಕೆ ಮಾಡಲು ಒಂದು ಉತ್ತಮ ಅವಕಾಶವಾಗಿದೆ ಎಂದು ಅವರು ಹೇಳಿದ್ದಾರೆ. ಹೂಡಿಕೆದಾರರು ಈಗ ಭಾರತದ ಮಾರುಕಟ್ಟೆ ಪ್ರವೇಶಿಸಲು ಇದು ಸರಿಯಾದ ಸಮಯ ಎಂಬುದು ಅವರ ವಾದ.

ಇದನ್ನೂ ಓದಿ: ಕ್ರೆಡಿಟ್ ಕಾರ್ಡ್ ಇದ್ದೂ ಅದನ್ನು ಬಳಸದೇ ಇದ್ದರೆ ಏನಾಗುತ್ತೆ? ಕ್ರೆಡಿಟ್ ಸ್ಕೋರ್ ಕಡಿಮೆ ಆಗುತ್ತಾ?

ರುಪಾಯಿ ಕುಸಿತಕ್ಕೆ ಪ್ರಮುಖ ಕಾರಣಗಳನ್ನು ಗುರುತಿಸುವುದಾದರೆ ಈ ಕೆಳಗಿನವು ಮೊದಲು ಕಣ್ಮುಂದೆ ಬರುತ್ತವೆ:

1. ಜಾಗತಿಕ ಭೌಗೋಳಿಕ ರಾಜಕೀಯ (Geopolitics)

ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷ ಮತ್ತು ಯುದ್ಧದ ಪರಿಸ್ಥಿತಿಯಿಂದಾಗಿ ಜಾಗತಿಕವಾಗಿ ಅನಿಶ್ಚಿತತೆ ಮೂಡಿದೆ.

2. ತೈಲ ಬೆಲೆ ಏರಿಕೆ

ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರೆಲ್‌ಗೆ 100 ಡಾಲರ್ ದಾಟುತ್ತಿರುವುದು ಭಾರತದಂತಹ ಆಮದು ಅವಲಂಬಿತ ದೇಶದ ಮೇಲೆ ಒತ್ತಡ ಹೇರುತ್ತಿದೆ.

3. ವಿದೇಶಿ ಹೂಡಿಕೆ ಹಿಂತೆಗೆತ

ವಿದೇಶಿ ಸಾಂಸ್ಥಿಕ ಹೂಡಿಕೆದಾರರು (FPI) ಭಾರತೀಯ ಷೇರು ಮಾರುಕಟ್ಟೆಯಿಂದ ಹಣವನ್ನು ಹಿಂತೆಗೆದುಕೊಳ್ಳುತ್ತಿರುವುದು ರೂಪಾಯಿ ಕುಸಿತಕ್ಕೆ ಕಾರಣವಾಗಿದೆ.

ರುಪಾಯಿ ಕುಸಿತದ ನಡುವೆಯೂ ಸಕಾರಾತ್ಮಕವಾಗಿರುವ ಅಂಶಗಳು

ರೂಪಾಯಿ ಮೌಲ್ಯ ಕಡಿಮೆಯಿರುವುದರಿಂದ ಭಾರತದ ರಫ್ತುದಾರರಿಗೆ (Exporters) ಲಾಭವಾಗಲಿದೆ. ಏಕೆಂದರೆ ಅವರ ಉತ್ಪನ್ನಗಳು ಜಾಗತಿಕ ಮಾರುಕಟ್ಟೆಯಲ್ಲಿ ಅಗ್ಗವಾಗುತ್ತವೆ. ಭಾರತವು ಬಲಿಷ್ಠ ವಿದೇಶಿ ವಿನಿಮಯ ಮೀಸಲು ನಿಧಿ (Forex Reserves) ಹೊಂದಿದ್ದು, ಯಾವುದೇ ಆರ್ಥಿಕ ಸಂಕಷ್ಟ ಎದುರಿಸಲು ಸನ್ನದ್ಧವಾಗಿದೆ. ಮುಂದಿನ ವರ್ಷದ ವೇಳೆಗೆ ರೂಪಾಯಿ ಮೌಲ್ಯವು ಮತ್ತೆ ಸ್ಥಿರವಾಗುವ ನಿರೀಕ್ಷೆಯನ್ನು ವಿ ಅನಂತ ನಾಗೇಶ್ವರನ್ ಅವರು ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಲಕ್ಷ ರೂ ಹೂಡಿಕೆಯಿಂದ 5,000 ರೂ ಪಿಂಚಣಿ; ಜನಪ್ರಿಯವಾಗುತ್ತಿದೆ ಎಪಿವೈ ಪೆನ್ಷನ್ ಸ್ಕೀಮ್

ತೈಲ ಮತ್ತು ರಸಗೊಬ್ಬರಗಳ ಆಮದು ತುಟ್ಟಿಯಾಗಬಹುದಾದರೂ, ಚಿನ್ನದಂತಹ ಅನಗತ್ಯ ಆಮದುಗಳನ್ನು ಇದು ನಿಯಂತ್ರಿಸಲು ಸಹಾಯ ಮಾಡುತ್ತದೆ. ಒಟ್ಟಾರೆಯಾಗಿ, ಜಾಗತಿಕವಾಗಿ ಡಾಲರ್ ಬಲಗೊಳ್ಳುತ್ತಿರುವುದರಿಂದ ಏಷ್ಯಾದ ಇತರ ಕರೆನ್ಸಿಗಳಂತೆ ರೂಪಾಯಿ ಕೂಡ ಕುಸಿತ ಕಂಡಿದೆ, ಇದು ಕೇವಲ ಭಾರತಕ್ಕೆ ಸೀಮಿತವಾದ ಸಮಸ್ಯೆಯಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

May Festival List 2026: ಮೇ ತಿಂಗಳಲ್ಲಿ ಆಚರಿಸುವ ಹಬ್ಬಗಳು ಯಾವುವು? ಇಲ್ಲಿದೆ ಸಂಪೂರ್ಣ ಮಾಹಿತಿ – Kannada News | May Festival List 2026: Important festivals celebrated in may month

ಹಿಂದೂಗಳಿಗೆ ಪ್ರತಿ ತಿಂಗಳು ಬಹಳ ವಿಶೇಷ. ನಾವೀಗ ಏಪ್ರಿಲ್ ಮಾಸ ಕಳೆದು ವರ್ಷದ ಐದನೇ ತಿಂಗಳಿಗೆ ಕಾಲಿಡುತ್ತಿದ್ದೇವೆ. ಪ್ರತಿ  ತಿಂಗಳಲ್ಲೂ ವಿಶೇಷ ಹಬ್ಬಗಳು (festivals) , ವ್ರತಾಚರಣೆಗಳು ಇದ್ದೇ ಇರುತ್ತದೆ. ಹಾಗಾದ್ರೆ  ಮೇ ತಿಂಗಳಲ್ಲಿ ಯಾವೆಲ್ಲಾ ಹಬ್ಬ ಹರಿದಿನಗಳು, ಆಚರಣೆಗಳಿವೆ ಎಂಬ ಮಾಹಿತಿ ಈ ಕೆಳಗಿದೆ.

ಮೇ ತಿಂಗಳಲ್ಲಿ ಆಚರಿಸಲಾಗುವ ಹಬ್ಬಗಳ ಪಟ್ಟಿ ಇಲ್ಲಿದೆ:

  • ಮೇ 01: ಕಾರ್ಮಿಕರ ದಿನಾಚರಣೆ
  • ಮೇ 01: ಕೂರ್ಮ ಜಯಂತಿ
  • ಮೇ 01: ಬುದ್ಧ ಪೂರ್ಣಿಮಾ
  • ಮೇ 02: ವೈಶಾಖ ಮಾಸ ಕೃಷ್ಣ ಪಕ್ಷ ಆರಂಭ
  • ಮೇ 05: ಸಂಕಷ್ಟಹರ ಚತುರ್ಥಿ
  • ಮೇ 11: ಮಹಾ ನಕ್ಷತ್ರ ಕೃತ್ತಿಕಾ
  • ಮೇ 13: ಸರ್ವಕಾದಶಿ ಅಪರಾ
  • ಮೇ 14: ಪ್ರದೋಷ
  • ಮೇ 15: ವೃಷಭ ಸಂಕ್ರಮಣ
  • ಮೇ 15: ಮಾಸ ಶಿವರಾತ್ರಿ
  • ಮೇ 16: ಶನಿ ಜಯಂತಿ
  • ಮೇ 16: ವೈಶಾಖ ಸ್ನಾನಸಮಾಪ್ತಿ
  • ಮೇ 16: ಅಮಾವಾಸ್ಯಾ
  • ಮೇ 17: ಅಧಿಕ ಜ್ಯೇಷ್ಠ ಶುಕ್ಲ ಪಕ್ಷ ಆರಂಭ
  • ಮೇ 18: ಆರಂಭ
  • ಮೇ 25: ಭಾಗೀರಥ ಜಯಂತಿ
  • ಮೇ 25: ಮಹಾನಕ್ಷತ್ರ ರೋಹಿಣಿ
  • ಮೇ 27: ಏಕಾದಶಿ ಪದ್ಮಿನಿ
  • ಮೇ 28: ಬಕ್ರೀದ್
  • ಮೇ 28: ಪ್ರದೋಷ
  • ಮೇ 31: ಹುಣ್ಣಿಮೆ

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಡಾ. ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ ಪುನೀತ್ – Kannada News | Ashwini Puneeth Rajkumar offers pooja at Dr Rajkumar Samadhi on his Birthday

ಏಪ್ರಿಲ್ 24 ಎಂದರೆ ಡಾ. ರಾಜ್​ಕುಮಾರ್ (Dr. Rajkumar) ಅಭಿಮಾನಿಗಳಿಗೆ ಹಬ್ಬ. ಈ ದಿನ ಅಣ್ಣಾವ್ರ ಜನ್ಮದಿನವನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ. ಇಂದು ಇಡೀ ಕುಟುಂಬದವರು ಡಾ. ರಾಜ್ ಸಮಾಧಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ರಾಘವೇಂದ್ರ ರಾಜ್​ಕುಮಾರ್, ಯುವ ರಾಜ್​ಕುಮಾರ್, ಅಶ್ವಿನಿ ಪುನೀತ್ ರಾಜ್​ಕುಮಾರ್ (Ashwini Puneeth Rajkumar) ಮುಂತಾದವರು ಬಂದು ಪೂಜೆ ಮಾಡಿದ್ದಾರೆ. ಅಪಾರ ಸಂಖ್ಯೆಯ ಅಭಿಮಾನಿಗಳು ಕೂಡ ಆಗಮಿಸಿ ಅಣ್ಣಾವ್ರ ಸಮಾಧಿಗೆ ನಮಿಸಿದ್ದಾರೆ. ಈ ವೇಳೆ ರಾಘವೇಂದ್ರ ರಾಜ್​ಕುಮಾರ್ ಅವರು ಮಾತನಾಡಿದರು. ‘ಪ್ರತಿ ವರ್ಷದಂತೆ ಈ ವರ್ಷ ಕೂಡ ಸಾಕಷ್ಟು ಜನರು ಬಂದಿದ್ದಾರೆ. ಇವರಿಗೆ ಅಭಿಮಾನಿ ದೇವರುಗಳು ಅಂತ ಹೇಳದೇ ಇನ್ನೇನು ಹೇಳೋದು. ಅಭಿಮಾನಿಗಳಿಗೆ ಒಳ್ಳೆಯದಾಗಲಿ’ ಎಂದು ರಾಘವೇಂದ್ರ ರಾಜ್​ಕುಮಾರ್ ಹೇಳಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಪ್ರಭಾಸ್ ವಿರುದ್ಧ ಸಲ್ಮಾನ್ ಖಾನ್​​ನ ಎತ್ತಿಕಟ್ಟಿದ ಟಾಲಿವುಡ್ ಮಂದಿ – Kannada News | Eid 2027 Showdown: Prabhas’ Spirit and Salman Khan’s SVC 63 Clash – Is Tollywood Behind It?

ಸಲ್ಮಾನ್ ಖಾನ್ ನಟನೆಯ ಹೊಸ ಸಿನಿಮಾ ರಿಲೀಸ್ ದಿನಾಂಕ ಘೋಷಣೆ ಆಗಿದೆ. ಈ ಚಿತ್ರಕ್ಕೆ ತಾತ್ಕಾಲಿಕವಾಗಿ ‘ಎಸ್​​ವಿಸಿ 63’ ಎಂದು ಹೆಸರು ಇಡಲಾಗಿದೆ. 2027ರ ಈದ್ ಪ್ರಯುಕ್ತ ಅವರ ಈ ಚಿತ್ರ ರಿಲೀಸ್ ಆಗಲಿದೆ. ಈ ವಿಷಯ ಪ್ರಭಾಸ್ ಅಭಿಮಾನಿಗಳಲ್ಲಿ ಆತಂಕ ತಂದಿದೆ. ಏಕೆಂದರೆ ಈಗಾಗಲೇ ಪ್ರಭಾಸ್ ನಟನೆಯ ‘ಸ್ಪಿರಿಟ್’ ಸಿನಿಮಾದ ರಿಲೀಸ್ ದಿನಾಂಕ ಘೋಷಣೆ ಆಗಿದ್ದು, ಎರಡೂ ಚಿತ್ರಗಳ ನಡುವೆ ಕ್ಲ್ಯಾಶ್ ಆಗಲಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಿದೆ.

ಪ್ರಭಾಸ್ ಅವರು ‘ಸ್ಪಿರಿಟ್’ ಸಿನಿಮಾ ರಿಲೀಸ್ ದಿನಾಂಕವನ್ನು ಈ ಮೊದಲೇ ಘೋಷಣೆ ಮಾಡಿದ್ದಾರೆ. ಈದ್ ಪ್ರಯುಕ್ತ ಮಾರ್ಚ್ 5ರಂದು ಸಿನಿಮಾ ತೆರೆಗೆ ಬರಲಿದೆ. ಇದಕ್ಕೆ ‘ಅನಿಮಲ್’ ಖ್ಯಾತಿಯ ಸಂದೀಪ್ ರೆಡ್ಡಿ ವಂಗ ನಿರ್ದೇಶನ ಮಾಡುತ್ತಿದ್ದಾರೆ. ಹೀಗಾಗಿ, ತೆಲುಗು ಜೊತೆಗೆ ಚಿತ್ರವನ್ನು ಹಿಂದಿಯಲ್ಲೂ ರಿಲೀಸ್ ಮಾಡುವ ಪ್ಲ್ಯಾನ್ ಇದೆ. ಆದರೆ, ಈ ಚಿತ್ರಕ್ಕೆ ಸಲ್ಮಾನ್ ಖಾನ್ ಅವರ ಹೊಸ ಸಿನಿಮಾ ಸ್ಪರ್ಧೆ ನೀಡುತ್ತಿದೆ. ಸಲ್ಲು ಚಿತ್ರದ ನಿರ್ದೇಶಕ ಹಾಗೂ ನಿರ್ಮಾಪಕರು ತೆಲುಗಿನವರು ಎಂಬುದು ಇಲ್ಲಿ ಗಮನಿಸಬೇಕಾದ ವಿಷಯ. ಪ್ರಭಾಸ್ ಚಿತ್ರದ ವಿರುದ್ಧ ಸಲ್ಮಾನ್ ಖಾನ್ ಅವರನ್ನು ಎತ್ತಿಕಟ್ಟುವ ಕೆಲಸ ಆಗಿದೆ ಎಂಬ ಮಾತು ಕೇಳಿ ಬಂದಿದೆ.

ವಂಶಿ ಪೈಡಿಪಲ್ಲಿ ನಿರ್ದೇಶನ ಮಾಡಿದ ಮೊದಲ ಸಿನಿಮಾ ಮುನ್ನ. ಈ ಚಿತ್ರದಲ್ಲಿ ಪ್ರಭಾಸ್ ಜೊತೆ ಕೆಲಸ ಮಾಡಿದ್ದರು. ವಂಶಿ ಈಗ ಸಲ್ಮಾನ್ ಖಾನ್ ಜೊತೆ ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರವನ್ನು ತೆಲುಗು ನಿರ್ಮಾಪಕ ದಿಲ್ ರಾಜು ಪ್ರೆಸೆಂಟ್ ಮಾಡುತ್ತಿದ್ದಾರೆ. ಅವರು ಕೂಡ ಟಾಲಿವುಡ್​​ನವರೇ. ಈ ಹೊಸ ಸಿನಿಮಾ 2027ರ ಮಾರ್ಚ್ 9-1ರಂದು ಈದ್ ಪ್ರಯುಕ್ತ ರಿಲೀಸ್ ಆಗಲಿದೆ. ಈದ್ ಬಾಲಿವುಡ್ ಪಾಲಿಗೆ ವಿಶೇಷ ಎನಿಸಿಕೊಂಡಿದೆ. ಸಲ್ಮಾನ್ ಖಾನ್ ಈ ದಿನಾಂಕ ಮಿಸ್ ಮಾಡುವುದೇ ಇಲ್ಲ. ಇನ್ನು, ಉಳಿದ ಕೆಲ ಸಿನಿಮಾಗಳು ಇದೇ ಸಂದರ್ಭದಲ್ಲಿ ತೆರೆಗೆ ಬರಹುದು.

ಇದನ್ನೂ ಓದಿ: ಪ್ರಭಾಸ್ ನಟನೆಯ ‘ಸ್ಪಿರಿಟ್’ ಸಿನಿಮಾ ಸೆಟ್​​ನಲ್ಲಿ ಬೆಂಕಿ: ಹಲವರಿಗೆ ಗಾಯ

ಇನ್ನು, ‘ಸ್ಪಿರಿಟ್’ ಚಿತ್ರಕ್ಕೆ ದಕ್ಷಿಣದ ಹೆಚ್ಚು ಬೇಡಿಕೆ, ಸಲ್ಮಾನ್ ಸಿನಿಮಾಗೆ ಉತ್ತರ ಭಾರತದಲ್ಲಿ ಹೆಚ್ಚು ಬೇಡಿಕೆ ಇರುವುದರಿಂದ ಈ ಕ್ಲ್ಯಾಶ್ ಅನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿಲ್ಲ ಎಂಬ ಮಾತು ಕೇಳಿ ಬಂದಿದೆ. ಇಷ್ಟೇ ಅಲ್ಲದೆ, ಸಲ್ಮಾನ್ ಅಥವಾ ಪ್ರಭಾಸ್ ಸಿನಿಮಾ ಪೈಕಿ ಯಾವುದಾದರೂ ಒಂದು ಸಿನಿಮಾ ಶೂಟಿಂಗ್ ವಿಳಂಬ ಕಾರಣಕ್ಕೆ ಮುಂದಕ್ಕೆ ಹೋದರೆ ದೊಡ್ಡ ಕ್ಲ್ಯಾಶ್ ಮಿಸ್ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಆಮ್ ಆದ್ಮಿ ಪಕ್ಷದ ಸಿಎಂ ಅಭ್ಯರ್ಥಿ ಎನಿಸಿಕೊಂಡಿದ್ದ ರಾಘವ್ ಚಡ್ಡಾ ರೆಬೆಲ್ ಆಗಿದ್ದು ಹೇಗೆ? – Kannada News | From Arvind Kejriwals blue eyed boy to a rebel Leader Timeline Of Raghav Chadha Political Career in AAP

ನವದೆಹಲಿ, ಏಪ್ರಿಲ್ 24: ಆಮ್ ಆದ್ಮಿ ಪಕ್ಷದಲ್ಲಿ ಆರಂಭದ ದಿನಗಳಿಂದಲೂ ಪಕ್ಷ ಕಟ್ಟಲು ಮುಖ್ಯ ಪಾತ್ರ ವಹಿಸಿದ್ದ ರಾಘವ್ ಚಡ್ಡಾ (Raghav Chadha) ಇಂದು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಲಂಡನ್​​ನಲ್ಲಿ ಸಿಎ ಪದವಿ ಪಡೆದ ರಾಘವ್ ಚಡ್ಡಾ ತಮ್ಮ 23ನೇ ವಯಸ್ಸಿನಲ್ಲಿಯೇ ಅರವಿಂದ್ ಕೇಜ್ರಿವಾಲ್ ಅವರ ಪಕ್ಷ ಸೇರಿಕೊಂಡು ರಾಜಕೀಯಕ್ಕೆ ಎಂಟ್ರಿಯಾದರು. ಅಂದಿನಿಂದ 15 ವರ್ಷ ಆಪ್​​ನಲ್ಲಿಯೇ ಹಲವು ಜವಾಬ್ದಾರಿಗಳನ್ನು ನಿರ್ವಹಿಸಿದ ರಾಘವ್ ಚಡ್ಡಾ ದೆಹಲಿಯ ಬಳಿಕ ಪಂಜಾಬ್​​ನಲ್ಲಿ ಆಮ್ ಆದ್ಮಿ ಪಕ್ಷ ನೆಲೆಯೂರಲು ಮುಖ್ಯ ಪಾತ್ರ ವಹಿಸಿದ್ದರು.

ಅರವಿಂದ್ ಕೇಜ್ರಿವಾಲ್ ಅವರ ಅತ್ಯಾಪ್ತ ಬಣದಲ್ಲಿ ಗುರುತಿಸಿಕೊಂಡಿದ್ದ ರಾಘವ್ ಚಡ್ಡಾ ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿಯಾಗುತ್ತಾರೆ ಎಂಬ ನಿರೀಕ್ಷೆ ಹಲವರಿಗಿತ್ತು. ಆದರೆ, ರಾಘವ್ ಚಡ್ಡಾ ಅವರನ್ನು ಪಕ್ಷದಲ್ಲಿ ಮೂಲೆಗುಂಪು ಮಾಡಲಾಯಿತು. ರಾಜ್ಯಸಭಾ ಉಪನಾಯಕನ ಸ್ಥಾನದಿಂದಲೂ ಅವರನ್ನು ವಜಾಗೊಳಿಸಲಾಯಿತು. ಅರವಿಂದ್ ಕೇಜ್ರಿವಾಲ್ ಜೈಲಿಗೆ ಹೋದ ನಂತರ ಪಕ್ಷದೊಳಗೆ ನಾನಾ ಬದಲಾವಣೆಗಳಾದವು. ಇದರಿಂದ ಬೇಸರಗೊಂಡಿದ್ದ ರಾಘವ್ ಚಡ್ಡಾ ಪಕ್ಷದೊಳಗೇ ಇದ್ದರೂ ಪಕ್ಷದಿಂದ ಕೊಂಚ ಅಂತರ ಕಾಯ್ದುಕೊಂಡಿದ್ದರು. ಕೇವಲ 23 ವಯಸ್ಸಿನಲ್ಲಿ ಆಮ್ ಆದ್ಮಿ ಪಕ್ಷಕ್ಕೆ ಸೇರಿ ಗುರುತರ ಜವಾಬ್ದಾರಿಗಳನ್ನು ವಹಿಸಿಕೊಂಡ ರಾಘವ್ ಚಡ್ಡಾ ರಾಜ್ಯಸಭೆಯ ಅಧಿವೇಶನದಲ್ಲಿ ತಮ್ಮ ಭಾಷಣದ ವೇಳೆ ಹೇಳುತ್ತಿದ್ದ ವಿಷಯಗಳಿಗೆ, ಅದಕ್ಕಾಗಿ ಅವರು ಸಂಶೋಧನೆ ಮಾಡುತ್ತಿದ್ದ ರೀತಿಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿತ್ತು. ಅದೇ ಕಾರಣಕ್ಕೆ ರಾಘವ್ ಚಡ್ಡಾ ಅವರನ್ನು ತಪ್ಪಾದ ಪಕ್ಷದಲ್ಲಿರುವ ಸರಿಯಾದ ನಾಯಕ ಎಂದು ಕರೆಯುತ್ತಿದ್ದುದೂ ಉಂಟು. ಇದೀಗ ರಾಘವ್ ಚಡ್ಡಾ ತನಗೆ ಗೌರವ ಸಿಗದ ಪಕ್ಷದಿಂದ ದೂರವಾಗಿದ್ದಾರೆ.

ಕೇಜ್ರಿವಾಲ್ ಅವರೊಂದಿಗಿನ ಆಪ್ತ ಸಂಬಂಧದ ಕಾರಣಕ್ಕೆ ರಾಘವ್ ಚಡ್ಡಾ ಅವರನ್ನು ಕೇಜ್ರಿವಾಲ್​ರ “ನೀಲಿ ಕಣ್ಣಿನ ಹುಡುಗ” ಎಂದು ಕರೆಯಲಾಗುತ್ತಿತ್ತು. 2022ರಲ್ಲಿ ರಾಘವ್ ಪಂಜಾಬ್‌ನಿಂದ ರಾಜ್ಯಸಭಾ ಸಂಸದರಾದರು. 33ನೇ ವಯಸ್ಸಿನಲ್ಲಿ ಅವರು ರಾಜ್ಯಸಭೆಯ ಕಿರಿಯ ಸದಸ್ಯರಾಗಿ ಸಂಸತ್ ಪ್ರವೇಶಿಸಿದರು. 2023ರಲ್ಲಿ ಅವರನ್ನು ಸಂಜಯ್ ಸಿಂಗ್ ಬದಲಿಗೆ ರಾಜ್ಯಸಭೆಯಲ್ಲಿ ಎಎಪಿಯ ನಾಯಕರನ್ನಾಗಿ ನೇಮಿಸಲಾಯಿತು.

ಇದನ್ನೂ ಓದಿ: ಬಿಜೆಪಿಯಿಂದ ಮತ್ತೊಮ್ಮೆ ಪಂಜಾಬಿಗಳಿಗೆ ದ್ರೋಹ; ರಾಘವ್ ಚಡ್ಡಾ ಸೇರಿ 7 ಸಂಸದರ ರಾಜೀನಾಮೆಗೆ ಕೇಜ್ರಿವಾಲ್ ಪ್ರತಿಕ್ರಿಯೆ

ಚಾರ್ಟರ್ಡ್ ಅಕೌಂಟೆಂಟ್ ಆಗಿರುವ ರಾಘವ್ ಚಡ್ಡಾ, ಭ್ರಷ್ಟಾಚಾರದ ವಿರುದ್ಧ ಮಾತನಾಡಿದರು ಮತ್ತು ದೆಹಲಿ ಮತ್ತು ಪಂಜಾಬ್ ಸೇರಿದಂತೆ ಎಲ್ಲಾ ಎಎಪಿ ಪ್ರಚಾರಗಳಲ್ಲಿ ಪ್ರಮುಖ ವ್ಯಕ್ತಿಯಾಗಿದ್ದರು. ಅವರು ಆರಂಭದಿಂದಲೂ ಪಕ್ಷದಲ್ಲಿದ್ದರು. 2012ರಲ್ಲಿ ದೆಹಲಿ ಲೋಕಪಾಲ್ ಮಸೂದೆಯಲ್ಲಿ ಕೇಜ್ರಿವಾಲ್ ಅವರೊಂದಿಗೆ ಕೆಲಸ ಮಾಡುವ ಮೂಲಕ ತಮ್ಮ ರಾಜಕೀಯ ವೃತ್ತಿಜೀವನವನ್ನು ಪ್ರಾರಂಭಿಸಿದರು.

ಅರವಿಂದ್ ಕೇಜ್ರಿವಾಲ್ ಜಾಮೀನಿನ ಮೇಲೆ ಬಿಡುಗಡೆಯಾಗಿ ಬಂದ ನಂತರವೂ ಆಮ್ ಆದ್ಮಿ ಪಕ್ಷದಲ್ಲಿ ರಾಘವ್ ಚಡ್ಡಾ ಅವರನ್ನು ನಿರ್ಲಕ್ಷ್ಯ ಮಾಡಲಾಯಿತು. ರಾಜ್ಯಸಭಾ ಉಪನಾಯಕನ ಹುದ್ದೆಯಿಂದ ಅವರನ್ನು ವಜಾಗೊಳಿಸಿದ ನಂತರ ಪಕ್ಷದೊಳಗಿನ ಆಂತರಿಕ ಸಮರ ಎಲ್ಲರ ಎದುರು ಬಯಲಾಗಿತ್ತು. ಅದಕ್ಕೂ ಮೊದಲಿನಿಂದಲೂ ರಾಘವ್ ಚಡ್ಡಾ ಪಕ್ಷದ ಪ್ರಮುಖ ಕಾರ್ಯಕ್ರಮಗಳು ಮತ್ತು ಪ್ರಚಾರದಿಂದ ಗೈರುಹಾಜರಾಗಿದ್ದರು. ಪಂಜಾಬ್‌ನ ಉಸ್ತುವಾರಿ ಸ್ಥಾನದಿಂದಲೂ ಅವರನ್ನು ತೆಗೆದುಹಾಕಲಾಯಿತು. ಮದ್ಯ ನೀತಿ ಪ್ರಕರಣದಲ್ಲಿ ಅರವಿಂದ್ ಕೇಜ್ರಿವಾಲ್ ಬಂಧನದಂತಹ ನಿರ್ಣಾಯಕ ಸಮಯದಲ್ಲಿ ರಾಘವ್ ಪಕ್ಷವನ್ನು ಬೆಂಬಲಿಸಲಿಲ್ಲ ಎಂದು ಎಎಪಿ ನಾಯಕರು ಆರೋಪಿಸಿದರು. ಪಂಜಾಬ್ ಸರ್ಕಾರದ ವ್ಯವಹಾರಗಳಲ್ಲಿ ಅವರು ಅತಿಕ್ರಮಣ ಮಾಡಿದ್ದಾರೆ ಎಂಬ ಆರೋಪವೂ ಇತ್ತು.

ಇದನ್ನೂ ಓದಿ: ಕೇಜ್ರಿವಾಲ್​ಗೆ ಭಾರೀ ಹೊಡೆತ; 6 ಸಂಸದರೊಂದಿಗೆ ಆಮ್ ಆದ್ಮಿಗೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ ರಾಘವ್ ಚಡ್ಡಾ

ರಾಘವ್ ಚಡ್ಡಾ ರಾಜಕೀಯ ಜೀವನದ ಟೈಮ್​ಲೈನ್ ಇಲ್ಲಿದೆ:

2012: ರಾಘವ್ ಚಡ್ಡಾ ಅವರ ರಾಜಕೀಯ ಪ್ರಯಾಣವು ಆಮ್ ಆದ್ಮಿ ಪಕ್ಷ (ಎಎಪಿ) ಸ್ಥಾಪನೆಯಾದಾಗಿನಿಂದ ಪ್ರಾರಂಭವಾಯಿತು. 23ನೇ ವಯಸ್ಸಿನಲ್ಲಿ ಅವರು 2012ರಲ್ಲಿ ದೆಹಲಿ ಲೋಕಪಾಲ್ ಮಸೂದೆಯನ್ನು ಕರಡು ಮಾಡಲು ಅರವಿಂದ್ ಕೇಜ್ರಿವಾಲ್ ಅವರ ಅಡಿಯಲ್ಲಿ ಕೆಲಸ ಮಾಡಿದರು. ಇದು ಶಾಸಕಾಂಗ ಕೆಲಸಕ್ಕೆ ಅವರ ಮೊದಲ ಪ್ರವೇಶವನ್ನು ಗುರುತಿಸಿತು. ನಂತರ ಅವರು ಅತ್ಯಂತ ಕಿರಿಯ ರಾಷ್ಟ್ರೀಯ ವಕ್ತಾರರಾದರು.

2015-2018: 2015ರ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷವು ಭರ್ಜರಿ ಜಯ ಸಾಧಿಸಿದಾಗ ರಾಘವ್ ಚಡ್ಡಾ ಅವರನ್ನು ಪಕ್ಷದ ರಾಷ್ಟ್ರೀಯ ಖಜಾಂಚಿಯಾಗಿ ನೇಮಿಸಲಾಯಿತು. ಅವರು ದೆಹಲಿಯ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ಸಲಹೆಗಾರರಾಗಿ ಸೇವೆ ಸಲ್ಲಿಸಿದರು. 2018ರಲ್ಲಿ ಕೇಂದ್ರ ಗೃಹ ಸಚಿವಾಲಯವು ಅವರ ಅಧಿಕಾರಾವಧಿಯನ್ನು ಕೊನೆಗೊಳಿಸಿತು.

2019-2020: ಅವರು ದಕ್ಷಿಣ ದೆಹಲಿ ಲೋಕಸಭಾ ಸ್ಥಾನದಿಂದ ಸ್ಪರ್ಧಿಸಿದರು. ಆದರೆ, ಅವರು ಬಿಜೆಪಿ ಅಭ್ಯರ್ಥಿ ರಮೇಶ್ ಬಿಧುರಿ ವಿರುದ್ಧ ಸೋತರು. 2020ರಲ್ಲಿ ಅವರು ರಾಜೇಂದ್ರ ನಗರದಿಂದ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ, 20,000ಕ್ಕೂ ಹೆಚ್ಚು ಮತಗಳ ಅಂತರದಿಂದ ಗೆದ್ದರು. ಅವರ ಗೆಲುವಿನ ನಂತರ ಅವರನ್ನು ದೆಹಲಿ ಜಲ ಮಂಡಳಿಯ ಉಪಾಧ್ಯಕ್ಷರನ್ನಾಗಿ ನೇಮಿಸಲಾಯಿತು.

2022: ಪಂಜಾಬ್ ವಿಧಾನಸಭೆಯಿಂದ ರಾಜ್ಯಸಭೆಗೆ ಆಯ್ಕೆಯಾದರು. ಅವರನ್ನು ಹಣಕಾಸು ಕುರಿತ ಸಂಸದೀಯ ಸ್ಥಾಯಿ ಸಮಿತಿಗೆ ನೇಮಿಸಲಾಯಿತು. ಇದು ಹಲವಾರು ಕೇಂದ್ರ ಸಚಿವಾಲಯಗಳು ಮತ್ತು ನೀತಿ ಆಯೋಗ ರಚಿಸಿದ ನೀತಿಗಳನ್ನು ಮೇಲ್ವಿಚಾರಣೆ ಮಾಡುತ್ತದೆ. 2022ರ ಪಂಜಾಬ್ ವಿಧಾನಸಭಾ ಚುನಾವಣೆಗಳು ಸೇರಿದಂತೆ ದೆಹಲಿಯನ್ನು ಮೀರಿದ ಎಎಪಿಯ ಚುನಾವಣಾ ಯಶಸ್ಸಿಗೆ ಅವರು ಕೊಡುಗೆ ನೀಡಿದ್ದಾರೆ. ಅಲ್ಲಿ ಪಕ್ಷವು ಅಗಾಧ ಬಹುಮತವನ್ನು ಗಳಿಸಿತು. ನಂತರ ಅವರನ್ನು 2022ರ ಗುಜರಾತ್ ವಿಧಾನಸಭಾ ಚುನಾವಣೆಗಳಿಗೆ ಸಹ-ಉಸ್ತುವಾರಿಯಾಗಿ ನೇಮಿಸಲಾಯಿತು. ನಂತರ ರಾಜ್ಯಸಭೆಯಲ್ಲಿ ಎಎಪಿಯ ನಾಯಕರಾಗಿ ಸೇವೆ ಸಲ್ಲಿಸಿದರು.

2023: ಪಕ್ಷದ ಸದನದ ನಾಯಕ ಸಂಜಯ್ ಸಿಂಗ್ ನ್ಯಾಯಾಂಗ ಬಂಧನದಿಂದಾಗಿ ತಮ್ಮ ಕರ್ತವ್ಯಗಳನ್ನು ನಿರ್ವಹಿಸಲು ಸಾಧ್ಯವಾಗದಿದ್ದಾಗ, ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ರಾಘವ್ ಚಡ್ಡಾ ಅವರನ್ನು ಸದನದ ಮಧ್ಯಂತರ ನಾಯಕರನ್ನಾಗಿ ನೇಮಿಸುವಂತೆ ವಿನಂತಿಸಿದರು. ಆದರೆ ಕಾರ್ಯವಿಧಾನದ ನಿಯಮಗಳಿಂದಾಗಿ ಆ ವಿನಂತಿಯನ್ನು ತಿರಸ್ಕರಿಸಲಾಯಿತು. ಪಂಜಾಬ್‌ನಲ್ಲಿ ಮುಖ್ಯಮಂತ್ರಿ ಭಗವಂತ್ ಮಾನ್ ಅವರನ್ನು ಸಲಹಾ ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಿದರು. ಈ ಕ್ರಮವನ್ನು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಎತ್ತಿಹಿಡಿದಿದೆ.

2024- 2026: ರಾಜ್ಯಸಭೆಯಲ್ಲಿದ್ದ ಸಮಯದಲ್ಲಿ ರಾಘವ್ ಚಡ್ಡಾ ವಿದ್ಯಾರ್ಥಿಗಳು ಮತ್ತು ಗಿಗ್ ಕೆಲಸಗಾರರು ಎದುರಿಸುತ್ತಿರುವ ಸಮಸ್ಯೆಗಳನ್ನು ಎತ್ತಿ ಹಿಡಿದರು. ವಿದ್ಯಾರ್ಥಿಗಳ ಸಾಲದ ಕುರಿತು ಅವರ ಸಂಸದೀಯ ಭಾಷಣಗಳು ವೈರಲ್ ಆದವು. ಸಾಮಾಜಿಕ ಮಾಧ್ಯಮದಲ್ಲಿ ಜೆನ್-ಝಡ್‌ನಿಂದ ಪ್ರಶಂಸಿಸಲ್ಪಟ್ಟವು. ಮಧ್ಯಮ ವರ್ಗದವರು ಎದುರಿಸುತ್ತಿರುವ ಸಮಸ್ಯೆಗಳನ್ನು ಎತ್ತಿದ್ದಕ್ಕಾಗಿ ಕೆಲವರು ಅವರನ್ನು ದೇಶದ ಅತ್ಯುತ್ತಮ ಸಂಸದ ಎಂದು ಕರೆದರು.

2026: ಏಪ್ರಿಲ್ 2026ರಲ್ಲಿ ಎಎಪಿ ಮತ್ತು ಅದರ ಉನ್ನತ ನಾಯಕತ್ವವನ್ನು ಒಳಗೊಂಡ ಪ್ರಮುಖ ಬೆಳವಣಿಗೆಗಳ ಬಗ್ಗೆ ರಾಘವ್ ಚಡ್ಡಾ ಅವರ ನಿರಂತರ ಮೌನದ ನಡುವೆ ಪಕ್ಷವು ಅವರನ್ನು ಮೇಲ್ಮನೆಯ ಪ್ರಮುಖ ಹುದ್ದೆಯಿಂದ ತೆಗೆದುಹಾಕಲು ಶಿಫಾರಸು ಮಾಡಿತು. ಇಂದು ಅವರು ಆಮ್ ಆದ್ಮಿ ಪಕ್ಷಕ್ಕೆ ರಾಜೀನಾಮೆ ನೀಡಿ ಬಿಜೆಪಿಗೆ ಸೇರುವುದಾಗಿ ಘೋಷಿಸಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version