‘ನಿಮ್ಮ ಕಾಲುಗಳು ಎಷ್ಟು ಸುಂದರ‘: ಚಿಕಿತ್ಸೆಗೆ ದಾಖಲಾಗಿದ್ದ ಮಹಿಳೆಯೊಂದಿಗೆ ಆಸ್ಪತ್ರೆ ಸಿಬ್ಬಂದಿ ಅಸಭ್ಯ ವರ್ತನೆ – Kannada News | Hospital Staff Assault Patient; Sister Fights Back, Accused Arrested

ಆಸ್ಪತ್ರೆ ಸಿಬ್ಬಂದಿಗೆ ಸಂತ್ರಸ್ತೆ ಸಹೋದರಿಯಿಂದ ಥಳಿತImage Credit source: tv9 kannada

ರಾಯಚೂರು, ಏಪ್ರಿಲ್​ 24: ಚಿಕಿತ್ಸೆಗೆ ಅಂತ ಆಸ್ಪತ್ರೆಗೆ ಬಂದಿದ್ದ ಮಹಿಳೆ ಜೊತೆ ಆಸ್ಪತ್ರೆ ಸಿಬ್ಬಂದಿ ಕಾಲು ಮುಟ್ಟಿ ಅಸಭ್ಯವಾಗಿ ವರ್ತಿಸಿದ್ದ (physical assault) ಘಟನೆ ರಾಯಚೂರು (Raichur) ನಗರದಲ್ಲಿ ಇತ್ತೀಚೆಗೆ ನಡೆದಿತ್ತು. ಇದೇ ಕಾರಣಕ್ಕೆ ಸಂತ್ರಸ್ತೆ ಕಡೆಯವರು ಸಿಬ್ಬಂದಿಗೆ ಸಾರ್ವಜನಿಕವಾಗಿ ಥಳಿಸಿದ್ದು, ವಿಡಿಯೋ ವೈರಲ್ ಆಗಿದೆ. ಸದ್ಯ ಆರೋಪಿಯನ್ನು ಪೊಲೀಸರು ಖೆಡ್ಡಾಗೆ ಬಿದ್ದಿದ್ದಾರೆ.

ರಾಯಚೂರು ನಗರದಲ್ಲಿ ಇತ್ತೀಚೆಗೆ ವಿಚಿತ್ರ ಘಟನೆಯೊಂದು ನಡೆದಿತ್ತು. ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಮೆಹಬೂಬ್ ಎನ್ನುವ ಸಿಬ್ಬಂದಿ ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆ ಜೊತೆ ತೀರಾ ಅಸಭ್ಯವಾಗಿ ವರ್ತಿಸಿದ್ದನಂತೆ. ಆಗ ಕಣ್ಣೀರಿಡುತ್ತಾ ಆ ಸಂತ್ರಸ್ತೆ ಅಲ್ಲಿಂದ ಹೊರಟು ಹೋಗಿದ್ದರು. ಈ ವಿಚಾರ ತಿಳಿದ ಸಂತ್ರಸ್ತೆ ಸಹೋದರಿ, ಮೆಹಬೂಬ್​​ನನ್ನು ಪ್ರಶ್ನಿಸಿದ್ದಾರೆ. ಈ ವೇಳೆ ಹಾರಿಕೆ ಉತ್ತರ ಕೊಡುತ್ತಿದ್ದಂತೆ ಕೆರಳಿದ್ದ ಸಂತ್ರಸ್ತೆ ಸಹೋದರಿ ಆತನಿಗೆ ಸರಿಯಾಗಿ ಥಳಿಸಿದ್ದಾರೆ.

ಇದನ್ನೂ ಓದಿ: ಮದುವೆಯಾಗುತ್ತೇನೆಂದು ನಂಬಿಸಿ ಕೈಕೊಟ್ಟ ಇಂಜಿನಿಯರ್; ಫೋಟೋ, ವೀಡಿಯೋ ಸಮೇತ ಪೊಲೀಸ್ ಠಾಣೆ ಮೆಟ್ಟಿಲೇರಿದ ಮಹಿಳೆ!

ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಸಂತ್ರಸ್ತೆ ಘಟನೆ ಬಗ್ಗೆ ಎಳೆಎಳೆಯಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕುವ ಮೂಲಕ ಮಾಹಿತಿ ಬಿಚ್ಚಿಟ್ಟಿದ್ದಾಳೆ. ಆತನಿಗೆ ಥಳಿಸಿದ್ದರ ಹಿಂದಿನ ಅಸಲಿ ಕಾರಣವನ್ನ ರಿವೀಲ್ ಮಾಡಿದ್ದಾರೆ.

ಸಂತ್ರಸ್ತೆ ಬಿಚ್ಚಿಟ್ಟ ಅಸಲಿ ಕಥೆ ಏನು?

ರಾಯಚೂರಿನ ಪ್ರತಿಯೊಬ್ಬರಿಗೂ ನಾನು ಈ ವಿಷಯವನ್ನು ತಿಳಿಸಲು ಬಯಸುತ್ತೇನೆ. ಆತನ ಹೆಸರು ಮೆಹಬೂಬ್. ಈತ ಸುರಕ್ಷಾ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ. ನಾನು ತೀವ್ರವಾದ ಡಿವಿಟಿ (DVT) ಸಮಸ್ಯೆಯಿಂದ ಬಳಲುತ್ತಿದ್ದೆ, ಹಾಗಾಗಿ ನನ್ನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಅಲ್ಲಿ ವೈದ್ಯರು ನನ್ನನ್ನು ಅಡ್ಮಿಟ್ ಆಗಲು ಹೇಳಿದರು. ಆಗ ಮೆಹಬೂಬ್ ಬಂದು ಪರದೆಯನ್ನು ಎಳೆದು, ನನ್ನ ಕಾಲನ್ನು ಮುಟ್ಟುತ್ತಾ, “ನಿಮ್ಮ ಕಾಲುಗಳು ಎಷ್ಟು ಸುಂದರ ಮತ್ತು ಮೃದುವಾಗಿವೆ, ನಿಮಗೆ ಮದುವೆಯಾಗಿದೆ ಅಲ್ವಾ, ಗಂಡನ ಜೊತೆ ನಿಮಗೆ ಆಪ್ತವಾಗಲು ಅನಿಸುವುದಿಲ್ಲವೇ?” ಎಂದು ಅಸಭ್ಯವಾಗಿ ಮಾತನಾಡಲಾರಂಭಿಸಿದ.

ನಾನು ಈಗಾಗಲೇ ನೋವಿನಲ್ಲಿದ್ದೆ, ಇದನ್ನು ಕೇಳಿ ಅಳಲು ಪ್ರಾರಂಭಿಸಿದೆ. ಸುರಕ್ಷಾ ಆಸ್ಪತ್ರೆಯವರು ಆತನನ್ನು ಕೆಲಸದಿಂದ ತೆಗೆದುಹಾಕುವ ಮೂಲಕ ಅಗತ್ಯ ಕ್ರಮಕೈಗೊಂಡರು. ಪೊಲೀಸರು ಸ್ಥಳಕ್ಕೆ ಬಂದರು, ಆದರೆ ಆತನನ್ನು ಕೆಲಸದಿಂದ ತೆಗೆದುಹಾಕಿದ್ದರಿಂದ ಆತ ಬುದ್ದಿ ಕಲಿತಿರಬಹುದು ಎಂದು ನಾವು ಭಾವಿಸಿದೆವು. ಆದರೆ ನಂತರ ನನ್ನ ಅಕ್ಕ ಆತನಿಗೆ ಎಚ್ಚರಿಕೆ ನೀಡಲು ಫೋನ್ ಮಾಡಿದಾಗ, ಆತ “ನಾನು ನಿಮಗೆ ಯಾರಿಗೂ ಹೆದರುವುದಿಲ್ಲ, ನೀವು ಏನು ಬೇಕಾದರೂ ಮಾಡಿಕೊಳ್ಳಿ” ಎಂದು ಉದ್ಧಟತನದಿಂದ ಉತ್ತರಿಸಿದ್ದಾನೆ. ಇದು ನನ್ನ ಕುಟುಂಬದವರನ್ನು ಮತ್ತೆ ಕೆರಳಿಸಿತು. ನಾನು ಸಹಾಯಕ್ಕಾಗಿ ಬಜರಂಜದಳ, ಬಿಜೆಪಿ ನಾಯಕರು ಮತ್ತು ಎಲ್ಲರನ್ನೂ ವಿನಂತಿಸಿದೆ. ಎಲ್ಲರಿಗೂ ಕರೆ ಮಾಡಿದೆ. ಆದರೆ ನಮಗೆ ಸಹಾಯ ಮಾಡಲು ಯಾರೂ ಬರಲಿಲ್ಲ. ಆದ್ದರಿಂದಲೇ ಈ ಕ್ರಮವನ್ನು ತೆಗೆದುಕೊಳ್ಳಬೇಕಾಯಿತು ಎಂದಿದ್ದಾರೆ.

ಮೆಹಬೂಬ್​​ಗೆ ಪೊಲೀಸರಿಂದ ಖಡಕ್​ ಎಚ್ಚರಿಕೆ

ಇತ್ತ ಘಟನೆ ತೀವ್ರ ಸ್ವರೂಪ ಪಡೆಯುತ್ತಿದ್ದಂತೆ ಸದರ ಬಜಾರ್ ಪೊಲೀಸರು ಆರೋಪಿ ಮೆಹಬೂಬ್ ನನ್ನ ಬಂಧಿಸಿ ದಂಡಾಧಿಕಾರಿಗಳ ಎದುರು ಹಾಜರುಪಡಿಸಿದ್ದಾರೆ. ಇನ್ನೊಮ್ಮೆ ಹೆಣ್ಣು ಮಕ್ಕಳ ತಂಟೆಗೆ ಹೋಗದಂತೆ, ಚುಡಾಯಿಸಿದಂತೆ ಎಚ್ಚರಿಕೆ ನೀಡಿದ್ದಾರೆ. ಆದರೆ ಸಂತ್ರಸ್ತೆ ಈ ಬಗ್ಗೆ ಖುದ್ದು ದೂರು ನೀಡಿಲ್ಲ. ಹೀಗಾಗಿ ಪೊಲೀಸರು ಘಟನೆ ಖಾಸಗಿ ಆಸ್ಪತ್ರೆಯಲ್ಲಿ ನಡೆದಿರುವುದರಿಂದ ನೀವೇ ದೂರು ದಾಖಲಿಸಿ ಅಂತ ಆ ಖಾಸಗಿ ಆಸ್ಪತ್ರೆ ಆಡಳಿತ ವರ್ಗದವರಿಗೆ ಸೂಚಿಸಿದ್ದಾರೆ.

ಇದನ್ನೂ ಓದಿ: ಹಸುಗೂಸಿಗೆ ಹಾಲುಣಿಸಿದ ಕೆಲವೇ ಕ್ಷಣದಲ್ಲಿ ತಾಯಿ ಸಾವು: ಮಹಿಳಾ ಉದ್ಯೋಗಿ ಸಾವಿನ ಸುತ್ತ ಅನುಮಾನದ ಹುತ್ತ

ಇತ್ತ ಸಂತ್ರಸ್ತೆ ಧೈರ್ಯವಾಗಿ ನಡೆದ ಘಟನೆಯನ್ನ ಪೋಸ್ಟ್ ಮಾಡಿರುವ ಹಿನ್ನೆಲೆ ನೆಟ್ಟಿಗರು ಆಕೆಯ ಧೈರ್ಯಕ್ಕೆ ಮೆಚ್ಚಿ ಕಮೆಂಟ್ ಮಾಡುತ್ತಿದ್ದಾರೆ. ನ್ಯಾಯಕ್ಕಾಗಿ ಧ್ವನಿ ಎತ್ತಿರುವ ಸಂತ್ರಸ್ತೆ ಪರ ನೆಟ್ಟಿಗರು ವಾದ ಮಾಡ್ತಿದ್ದು, ಆರೋಪಿಗೆ ತಕ್ಕ ಶಿಕ್ಷೆ ಆಗಬೇಕು ಅಂತ ಒತ್ತಾಯಿಸುತ್ತಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Jerax Review: ಜನರನ್ನೇ ಜೆರಾಕ್ಸ್ ಮಾಡುವ ಯಂತ್ರದೊಳಗೆ ಇದೆ ಸಖತ್ ಸಸ್ಪೆನ್ಸ್ – Kannada News | Jerax web series review: Srinidhi Bengaluru gives first of its kind story to Kannada OTT

ನಟ ನಾಗಭೂಷಣ (Nagabhushana) ಅವರು ಕನ್ನಡ ಚಿತ್ರರಂಗದಲ್ಲಿ ತಮ್ಮದೇ ರೀತಿಯಲ್ಲಿ ಗುರುತಿಸಿಕೊಂಡಿದ್ದಾರೆ. ಸಿನಿಮಾ ಮತ್ತು ವೆಬ್ ಸಿರೀಸ್​ ಮೂಲಕ ಅವರು ಜನರನ್ನು ರಂಜಿಸಿದ್ದಾರೆ. ಹೆಚ್ಚಾಗಿ ಅವರು ಸಾಮಾನ್ಯ ಹುಡುಗನ ಪಾತ್ರವನ್ನೇ ಮಾಡುತ್ತಾರೆ. ನಮ್ಮ-ನಿಮ್ಮ ನಡುವೆ ಇರುವ ಸಾಮಾನ್ಯ ವ್ಯಕ್ತಿಯಾಗಿ ಕಾಣಿಸಿಕೊಂಡು ಮನರಂಜನೆ ನೀಡುತ್ತಾರೆ. ಆದರೆ ‘ಜೆರಾಕ್ಸ್’ (Jerax Web Series) ವೆಬ್ ಸರಣಿಯಲ್ಲಿ ಒಂದು ಟ್ವಿಸ್ಟ್ ಇದೆ. ಈ ವೆಬ್ ಸಿರೀಸ್​ನಲ್ಲಿ ಕೂಡ ಅವರು ಸಾಮಾನ್ಯ ವ್ಯಕ್ತಿಯ ಪಾತ್ರ ಮಾಡಿದ್ದರೂ ಸಹ, ಆ ಪಾತ್ರಕ್ಕೆ ಅಸಮಾನ್ಯ ಶಕ್ತಿ ಇರುತ್ತದೆ! ‘ಜೀ5’ (Zee5) ಒಟಿಟಿ ಮೂಲಕ ಈ ವೆಬ್ ಸಿರೀಸ್ ಬಿಡುಗಡೆ ಆಗಿದೆ.

‘ಜೆರಾಕ್ಸ್’ ವೆಬ್ ಸರಣಿಯಲ್ಲಿ ಒಂದು ವಿಶೇಷವಾದ ಕಥೆ ಇದೆ. ರಾಜಕೀಯ, ಪ್ರೀತಿ-ಪ್ರೇಮ, ಕಾಮಿಡಿ ಜೊತೆಗೆ ಒಂದು ಫ್ಯಾಂಟಸಿ ಕಹಾನಿಯನ್ನು ತೋರಿಸಲಾಗಿದೆ. ‘ಬ್ಲಿಂಕ್’ ಖ್ಯಾತಿಯ ನಿರ್ದೇಶಕ ಶ್ರೀನಿಧಿ ಬೆಂಗಳೂರು ಅವರು ಈ ವೆಬ್ ಸರಣಿಗೆ ಆ್ಯಕ್ಷನ್-ಕಟ್ ಹೇಳಿದ್ದಾರೆ. ಬಹಳ ಥ್ರಿಲ್ಲಿಂಗ್ ಆಗಿ ‘ಜೆರಾಕ್ಸ್’ ವೆಬ್ ಸಿರೀಸ್ ಮೂಡಿಬಂದಿದೆ. ಪಟಪಟನೆ ಸಾಗುವ 6 ಎಪಿಸೋಡ್​ಗಳು ಈ ಸೀರಿಸ್​​ನಲ್ಲಿವೆ.

ನಾಗಭೂಷಣ ಮಾತ್ರವಲ್ಲದೇ ‘ಜೆರಾಕ್ಸ್​’ ವೆಬ್ ಸರಣಿಯಲ್ಲಿ ಹಲವು ಕಲಾವಿದರು ನಟಿಸಿದ್ದಾರೆ. ಪಾಯಲ್ ಚಂಗಪ್ಪ, ಮಂಜು ಪಾವಗಡ, ತುಕಾಲಿ ಸಂತೋಷ್, ಓಂ ಪ್ರಕಾಶ್ ರಾವ್, ವಿಜಯ್ ಪ್ರಸಾದ್, ಉಷಾ ಭಂಡಾರಿ, ಯಶ್ವಂತ್ ಶೆಟ್ಟಿ, ಸುಧಾಕರ್ ಗೌಡ, ಜಗಪ್ಪ, ರಿಚರ್ಡ್ ಲೂಯಿಸ್ ಸೇರಿದಂತೆ ಹಲವರು ನಟಿಸಿದ್ದಾರೆ. ಎಲ್ಲ ಪಾತ್ರಕ್ಕೂ ಅದರದ್ದೇ ಆದ ತೂಕ ಇದೆ. ಮೊದಲ ಸಂಚಿಕೆಯಿಂದ ಕೊನೆ ಸಂಚಿಕೆ ತನಕ ಸಸ್ಪೆನ್ಸ್ ತುಂಬಿದೆ.

ಇದರ ಶೀರ್ಷಿಕೆಯೇ ಸೂಚಿಸುವಂತೆ ಜೀವಂತ ಮನುಷ್ಯರನ್ನು ನಕಲು ಮಾಡುವ ಕಥೆ ಇದರಲ್ಲಿದೆ. ಇದರ ಕಥಾನಾಯಕ ಪ್ರಕಾಶ. ಆತನ (ನಾಗಭೂಷಣ) ಬದುಕಿನಲ್ಲಿ ಒಂದು ಪವಾಡ ನಡೆಯುತ್ತದೆ. ಅವನ ಅಂಗಡಿಯಲ್ಲಿ ಇರುವ ಜೆರಾಕ್ಸ್ ಯಂತ್ರದ ಮೂಲಕ ಮನುಷ್ಯರನ್ನೇ ನಕಲು ಮಾಡುವ ಶಕ್ತಿ ಅವನಿಗೆ ಸಿದ್ಧಿಸುತ್ತದೆ. ಆ ಶಕ್ತಿಯನ್ನು ಬಳಸಿಕೊಂಡು ಶ್ರೀಮಂತನಾಗಬೇಕು ಎಂಬುದು ಅವನ ಆಸೆ. ಆದರೆ ನಂತರ ಆಗುವುದೇ ಬೇರೆ.

ಬೇರೆ ವ್ಯಕ್ತಿಗಳನ್ನು ನಕಲು ಮಾಡಿ, ಅವರ ದೇಹದ ಒಳಗೆ ತಾನೇ ಸೇರಿಸಿಕೊಂಡು ತನ್ನ ಎಲ್ಲ ಆಸೆಯನ್ನು ಈಡೇರಿಸಿಕೊಳ್ಳಲು ಪ್ರಕಾಶ ಮುಂದಾಗುತ್ತಾನೆ. ಆದರೆ ಅವನ ಈ ಕೆಲಸದಲ್ಲಿ ಹತ್ತು ಹಲವು ವಿಘ್ನಗಳು ಎದುರಾಗುತ್ತವೆ. ಅದರಿಂದ ಅವನ ಜೀವನವೇ ಬದಲಾಗುತ್ತದೆ. ಅವನು ಜೆರಾಕ್ಸ್ ಯಂತ್ರದ ನಕಲು ಮಾಡಿದ ವ್ಯಕ್ತಿಗಳಿಂದ ಅವನಿಗೇ ತೊಂದರೆ ಶುರುವಾಗುತ್ತದೆ. ಪ್ರೀತಿಸಿದ ಹುಡುಗಿಯೂ ಕೈತಪ್ಪಿ ಹೋಗಬಹುದಾದ ಸಂದರ್ಭ ಬರುತ್ತದೆ.

ಇದನ್ನೂ ಓದಿ: ‘ಅಣ್ಣ ಫ್ರಮ್ ಮೆಕ್ಸಿಕೋ’ ಸಿನಿಮಾ ಟೀಸರ್ ನೋಡಿ ಮೆಚ್ಚಿಕೊಂಡ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಮನುಷ್ಯರನ್ನೇ ನಕಲು ಮಾಡುವ ಜೆರಾಕ್ಸ್ ಯಂತ್ರದ ಹಾವಳಿ ಇಡೀ ಊರಿನಲ್ಲಿ ಅವಾಂತರ ಸೃಷ್ಟಿಸುತ್ತದೆ. ಎಲ್ಲರ ಬದುಕು ಉಲ್ಟಾ ಪಲ್ಟಾ ಆಗುತ್ತದೆ. ಅಂತಿಮವಾಗಿ ಅದನ್ನೆಲ್ಲ ಪ್ರಕಾಶ ಹೇಗೆ ಸರಿ ಮಾಡುತ್ತಾನೆ ಎಂಬುದೇ ಇಂಟರೆಸ್ಟಿಂಗ್ ಕಹಾನಿ. ಈ ರೀತಿಯ ಒಂದು ಡಿಫರೆಂಟ್ ಕಥೆಯನ್ನು ಇಟ್ಟುಕೊಂಡು ನಿರ್ದೇಶಕ ಶ್ರೀನಿಧಿ ಬೆಂಗಳೂರು ಅವರು ವೆಬ್ ಸಿರೀಸ್ ಮಾಡಿದ್ದಾರೆ.

ಸೂಪರ್ ಹೀರೋ ರೀತಿಯ ಕಥೆಗಳೇ ಅಪರೂಪ ಆಗಿರುವ ಕನ್ನಡದ ಮಟ್ಟಿಗೆ ಇದು ಒಂದು ಡಿಫರೆಂಟ್ ಪ್ರಯತ್ನವಾಗಿದೆ. ಚಿಕ್ಕದಾದ ಚೊಕ್ಕದಾದ ಒಂದು ಫ್ಯಾಂಟಸಿ ವೆಬ್ ಸಿರೀಸ್ ನೋಡಬೇಕು ಎಂದು ಬಯಸುವ ಪ್ರೇಕ್ಷಕರಿಗೆ ‘ಜೆರಾಕ್ಸ್’ ಉತ್ತಮ ಆಯ್ಕೆ ಆಗಿದೆ. ಇದರಲ್ಲಿ ಯಾವುದೇ ಅನಗತ್ಯ ಅಂಶಗಳನ್ನು ತುರುಕಿಲ್ಲ. ಕಥೆಗೆ ಎಷ್ಟು ಬೇಕೋ ಅಷ್ಟನ್ನು ಅಚ್ಚುಕಟ್ಟಾಗಿ ತೋರಿಸಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಅತ್ತೆಯ ಸಪೋರ್ಟ್ ಜತೆಗೆ ಎರಡು ಮಕ್ಕಳನ್ನ ಕಟ್ಟಿಕೊಂಡು ಚಿನ್ನದ ಪದಕ ಗೆದ್ದ ಅಯಿಷಾ – Kannada News | Bagalkot University first Convocation: ayesha Wins Gold Medal In English

ಬಾಗಲಕೋಟೆ, (ಏಪ್ರಿಲ್ 24): ಬಾಗಲಕೋಟೆ ವಿಶ್ವವಿದ್ಯಾಲಯದ ಮೊದಲ ಘಟಿಕೋತ್ಸವ (Bagalkot University Convocation) ಅದ್ಧೂರಿಯಾಗಿ ಜರುಗಿತು. ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಪ್ರಧಾನ, ಸಾಧಕರಿಗೆ ಗೌರವ ಡಾಕ್ಟರೇಟ್ ಪ್ರಧಾನ ಮಾಡಿ ಗೌರವಿಸಲಾಯ್ತು. ಇನ್ನು ಮಕ್ಕಳ ತಾಯಿ ಆಗಿರುವ ಅಯಿಷಾ ಇಂಗ್ಲೀಷ್‌ನಲ್ಲಿ ಚಿನ್ನದ ಪದಕ ಪಡೆಯುವ ಮೂಲಕ ಎಲ್ಲರ ಗಮನಸೆಳೆದಿದರು.

ಹೌದು..ನಾಲ್ಕು ತಿಂಗಳ ಹಾಗೂ ಎರಡು ವರ್ಷದ ಮಕ್ಕಳನ್ನು ಕಟ್ಟಿಕೊಂಡು ಆಯಿಷಾ ಚಿನ್ನದ ಪದಕ‌ ಗಳಿಸಿದ್ದು ವಿಶೇಷವಾಗಿದೆ. ಪತಿ ಹಾಗೂ ಅತ್ತೆಯ ಸಹಕಾರದಿಂದ ಇಂಗ್ಲೀಷ್‌ನಲ್ಲಿ ಚಿನ್ನದ ಪದಕ ಪಡೆಯಲು ಸಾಧ್ಯವಾಯಿತು ಎಂದು ನಗೆ ಬೀರಿದರು.

Source link

ಗುರುಕುಲದಲ್ಲಿ 11 ವರ್ಷದ ವಿದ್ಯಾರ್ಥಿಯ ಬರ್ಬರ ಹತ್ಯೆ; ಮೈಮೇಲಿತ್ತು 42 ಗಾಯ – Kannada News | Lucknow Gurukul student beaten to death body found with 42 injuries and cigarette burns

ಲಕ್ನೋ, ಏಪ್ರಿಲ್ 24: ಲಕ್ನೋದ (Lucknow) ಗುರುಕುಲವೊಂದರಲ್ಲಿ ವಿದ್ಯಾರ್ಥಿಯಾಗಿದ್ದ 11 ವರ್ಷದ ಬಾಲಕನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಗಂಭೀರವಾಗಿ ಗಾಯಗೊಂಡಿದ್ದ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗುರುಕುಲಕ್ಕೆ ಸೇರಿಸಿ 7 ದಿನಗಳಲ್ಲೇ ಆತ ಶವವಾಗಿ ಪತ್ತೆಯಾಗಿದ್ದಾನೆ. ಮನೆಗೆ ತರುವಾಗ ಆತನ ದೇಹದಲ್ಲಿ ಹಲವಾರು ಗಾಯದ ಗುರುತುಗಳಿತ್ತು ಎಂದು ಆತನ ಕುಟುಂಬ ಆರೋಪಿಸಿದೆ.

11 ವರ್ಷದ ದಿವ್ಯಾಂಶ್ ಅವರನ್ನು ಏಪ್ರಿಲ್ 15ರಂದು ಲಕ್ನೋದ ರಾಮಾನುಜ್ ಭಾಗವತ್ ವೇದ ವಿದ್ಯಾಪೀಠ ಗುರುಕುಲಕ್ಕೆ ದಾಖಲಿಸಲಾಗಿತ್ತು. ಏಪ್ರಿಲ್ 22ರಂದು ಆತನ ಕುಟುಂಬಕ್ಕೆ ಆತನ ಸಾವಿನ ಸುದ್ದಿ ಬಂದಿತ್ತು. ಪೊಲೀಸ್ ಮೂಲಗಳ ಪ್ರಕಾರ, ಗುರುಕುಲದ ಮ್ಯಾನೇಜರ್ ಕನ್ಹಯ್ಯಾ ಲಾಲ್ ಮಿಶ್ರಾ ಮನಸಿಗೆ ಬಂದಂತೆ ಹೊಡೆದಿದ್ದರಿಂದ ಆ ಬಾಲಕ ಸಾವನ್ನಪ್ಪಿದ್ದಾನೆ. ಗುರುವಾರ ತಡರಾತ್ರಿ ಮ್ಯಾನೇಜರ್ ಹಾಗೂ ಆತನ ಗೆಳತಿ ಹರ್ಷಿತಾ ಸೋನಿಯಾಳನ್ನು ಬಂಧಿಸಲಾಯಿತು. ಸಾಕ್ಷ್ಯ ನಾಶಪಡಿಸಿದ ಮತ್ತು ಇತರ ಶಿಷ್ಯರನ್ನು ಮನೆಗೆ ಕಳುಹಿಸಿದ ಆರೋಪ ಹರ್ಷಿತಾ ಮೇಲಿದೆ.

ಮಹಾರಾಜ್‌ಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯ ಗೌರೈಯಾ ಗ್ರಾಮದ ನಿವಾಸಿ ದಿವ್ಯಾಂಶ್ ಅವರ ತಂದೆ ನರೇಂದ್ರ ಕುಮಾರ್ ದ್ವಿವೇದಿ ಅವರು ತಮ್ಮ ಮಗನನ್ನು ಗುರುಕುಲದಲ್ಲಿ ಉಚಿತ ವೇದ ಶಿಕ್ಷಣ ನೀಡಲಾಗುತ್ತಿದೆ ಎಂದು ತಿಳಿಸಿದ ನಂತರ ಅಲ್ಲಿಗೆ ಸೇರಿಸಿದ್ದರು. ದಿವ್ಯಾಂಶ್ ಮಂಗಳವಾರ ರಾತ್ರಿ ತನ್ನ ಅಕ್ಕನೊಂದಿಗೆ ಫೋನ್​ನಲ್ಲಿ ಮಾತನಾಡಿದ್ದ. ಆದರೆ, ಮರುದಿನ ಬೆಳಿಗ್ಗೆ ಆತ ಮೃತಪಟ್ಟಿದ್ದಾನೆ ಎಂದು ಕುಟುಂಬಕ್ಕೆ ತಿಳಿಸಲಾಯಿತು.

ಇದನ್ನೂ ಓದಿ: 41 ನಿಮಿಷದಲ್ಲಿ ಅತ್ಯಾಚಾರ, ಕೊಲೆ, ದರೋಡೆ; ಐಆರ್​ಎಸ್​ ಅಧಿಕಾರಿ ಮನೆಯಲ್ಲಿ ನಡೆದಿದ್ದೇನು? ಆರೋಪಿ ಸಿಕ್ಕಿದ್ದು ಹೇಗೆ?

ಆತನನ್ನು ಕೋಲಿನಿಂದ ಹೊಡೆದ ಕಾರಣದಿಂದ ದೇಹದ ಮೇಲೆ ಸುಮಾರು 42 ಆಳವಾದ ಗಾಯದ ಗುರುತುಗಳಿತ್ತು. ಆತನ ಕೈ ಮತ್ತು ಕಾಲುಗಳನ್ನು ಹಗ್ಗಗಳಿಂದ ಕಟ್ಟಲಾಗಿತ್ತು. ಆತನಿಗೆ ತೀವ್ರ ಚಿತ್ರಹಿಂಸೆ ನೀಡಲಾಗಿತ್ತು ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಗುರುಕುಲದ ಮ್ಯಾನೇಜರ್ ಮಿಶ್ರಾ ಅವರು ಆ ಬಾಲಕ ಮೆಟ್ಟಿಲುಗಳಿಂದ ಕೆಳಗೆ ಬಿದ್ದಿದ್ದಾನೆ ಎಂದು ಕುಟುಂಬಕ್ಕೆ ದೂರವಾಣಿ ಮೂಲಕ ತಿಳಿಸಿದ ನಂತರ ಅನುಮಾನ ಮತ್ತಷ್ಟು ಹೆಚ್ಚಾಯಿತು.

ಮಗುವಿನ ತಂದೆ ನೀಡಿದ ದೂರಿನ ಮೇರೆಗೆ, ಮಿಶ್ರಾ ಮತ್ತು ಚಾಲಕನ ವಿರುದ್ಧ ಕೊಲೆ ಮತ್ತು ಸಾಕ್ಷ್ಯ ನಾಶದ ಆರೋಪದ ಮೇಲೆ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಈ ಪ್ರಕರಣದ ತನಿಖೆಗಾಗಿ ವಿಶೇಷ ತಂಡವನ್ನು ರಚಿಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತರಾದ (ಪೂರ್ವ) ಅಂಜಲಿ ವಿಶ್ವಕರ್ಮ ಹೇಳಿದ್ದಾರೆ. ಗುರುಕುಲವನ್ನು ಪರೀಕ್ಷಿಸಲು ಮತ್ತು ಸಾಕ್ಷ್ಯಗಳನ್ನು ಸಂಗ್ರಹಿಸಲು ತಂಡವು ಲಕ್ನೋಗೆ ಭೇಟಿ ನೀಡಲಿದೆ.

ಇದನ್ನೂ ಓದಿ: ರಸ್ತೆ ಬದಿ ನಡೆದು ಹೋಗುತ್ತಿದ್ದ ಯುವತಿಗೆ ಲೈಂಗಿಕ ಕಿರುಕುಳ: ಇಬ್ಬರು ಡೆಲಿವರಿ ಬಾಯ್ಸ್ ಅರೆಸ್ಟ್​​

ವಿಡಿಯೋಗ್ರಫಿ ಅಡಿಯಲ್ಲಿ ವೈದ್ಯರು ನಡೆಸಿದ ಶವಪರೀಕ್ಷೆಯಲ್ಲಿ ಕೋಲು ಮತ್ತು ಬೆಲ್ಟ್‌ನಿಂದ ಉಂಟಾದ ಗಾಯದ ಗುರುತುಗಳು ದೃಢಪಟ್ಟವು. ಆದರೆ ಮಗುವಿನ ಮೇಲೆ ಯಾವುದೇ ಲೈಂಗಿಕ ದೌರ್ಜನ್ಯ ಕಂಡುಬಂದಿಲ್ಲ. ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಮಗುವಿನ ದೇಹದ ಮೇಲೆ 42 ಗಾಯಗಳಿರುವುದು ಕಂಡುಬಂದಿದೆ. ಇವುಗಳಲ್ಲಿ ಬೆನ್ನು, ತೋಳುಗಳು, ಕಾಲುಗಳು ಮತ್ತು ಎದೆಯ ಮೇಲೆ ಆಳವಾದ ಏಟುಗಳು ಸೇರಿವೆ. ವೈದ್ಯರು 11 ಕಡೆ ಸಿಗರೇಟ್​ನಿಂದ ಸುಟ್ಟ ಗುರುತುಗಳನ್ನು ಸಹ ಪತ್ತೆಹಚ್ಚಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

RCB vs GT; ಆರ್​​ಸಿಬಿ ವಿರುದ್ಧ ಶತಕ ಬಾರಿಸಿ ದಾಖಲೆ ನಿರ್ಮಿಸಿದ ಸಾಯಿ ಸುದರ್ಶನ್ – Kannada News | Sai Sudharsan’s IPL 2026 Century: GT Opener Smashes Records vs RCB at Chinnaswamy

ಆರ್​​ಸಿಬಿ (RCB) ವಿರುದ್ಧ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2026 (IPL 2026) ರ 34ನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ (GT) ತಂಡದ ಆರಂಭಿಕ ಆಟಗಾರ ಸಾಯಿ ಸುದರ್ಶನ್ (Sai Sudharsan) ಅದ್ಭುತ ಶತಕ ಬಾರಿಸಿದರು. 57 ಎಸೆತಗಳಲ್ಲಿ ಶತಕ ಪೂರೈಸಿದ ಸುದರ್ಶನ್​ಗೆ ಇದು ಮೂರನೇ ಐಪಿಎಲ್ ಶತಕವಾಗಿದೆ. ಅಂತಿಮವಾಗಿ ಸುದರ್ಶನ್ 58 ಎಸೆತಗಳಲ್ಲಿ 100 ರನ್ ಗಳಿಸಿ ಹೇಜಲ್​​ವುಡ್​ಗೆ ಬಲಿಯಾದರು. ಈ ಶತಕದೊಂದಿಗೆ, ಸಾಯಿ ಸುದರ್ಶನ್ ಅತಿ ಕಡಿಮೆ ಇನ್ನಿಂಗ್ಸ್‌ಗಳಲ್ಲಿ 2000 ಐಪಿಎಲ್ ರನ್‌ಗಳನ್ನು ಪೂರೈಸಿದ ದಾಖಲೆಯನ್ನು ನಿರ್ಮಿಸಿದರು.

ಹ್ಯಾಟ್ರಿಕ್ ಶತಕ ಬಾರಿಸಿದ ಸುದರ್ಶನ್

ಸಾಯಿ ಸುದರ್ಶನ್ ಕಳೆದ ಮೂರು ಸೀಸನ್​ಗಳಲ್ಲಿ ತಲಾ ಒಂದೊಂದು ಶತಕದಂತೆ ಮೂರು ಶತಕಗಳನ್ನು ಬಾರಿಸಿದ್ದಾರೆ. ಅಂದರೆ 2024 ರ ಐಪಿಎಲ್‌ನಲ್ಲಿ ತಮ್ಮ ಮೊದಲ ಶತಕ ಬಾರಿಸಿದ್ದ ಸುದರ್ಶನ್, ಆ ನಂತರ 2025 ರ ಐಪಿಎಲ್‌ನಲ್ಲಿ ತಮ್ಮ ಎರಡನೇ ಶತಕ ಬಾರಿಸಿದ್ದರು. ಇದೀಗ ಅವರು ಐಪಿಎಲ್ 2026 ರಲ್ಲಿ ಆರ್​​ಸಿಬಿ ವಿರುದ್ಧ ತಮ್ಮ ಮೂರನೇ ಶತಕವನ್ನು ಕಲೆಹಾಕಿದ್ದಾರೆ.

3ನೇ ಐಪಿಎಲ್ ಶತಕ

ಆರಂಭಿಕರಾಗಿ ಕಣಕ್ಕಿಳಿದಿದ್ದ ಸಾಯಿ ಸುದರ್ಶನ್, ಭುವನೇಶ್ವರ್ ಕುಮಾರ್ ಮತ್ತು ಹೇಜಲ್‌ವುಡ್ ಮೇಲೆ ದಾಳಿ ನಡೆಸಿ ಪವರ್​​ ಪ್ಲೇನಲ್ಲಿ ಭಾಗಶಃ ಎಸೆತಗಳನ್ನು ತಾವೇ ಎದುರಿಸಿ ಅರ್ಧಶತಕದ ಸಮೀಪಕ್ಕೆ ಬಂದರು. ಆದರೆ ಇತ್ತ ನಾಯಕ ಗಿಲ್ ಆ ವೇಳೆಗೆ ಎದುರಿಸಿದ್ದು ಕೇವಲ ನಾಲ್ಕೈದು ಎಸೆತಗಳನ್ನು ಮಾತ್ರ. 33 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಸುದರ್ಶನ್, ನಾಯಕ ಗಿಲ್ ಜೊತೆಗೆ ಅರ್ಧಶತಕದ ಜೊತೆಯಾಟವನ್ನು ನಡೆಸಿದರು. ಸುದರ್ಶನ್ ಎರಡು ಸಿಕ್ಸರ್ ಮತ್ತು ಎಂಟು ಬೌಂಡರಿಗಳ ಸಹಾಯದಿಂದ ಅರ್ಧಶತಕ ಪೂರೈಸಿದರು. ನಂತರ ಸುದರ್ಶನ್ 59 ಎಸೆತಗಳಲ್ಲಿ ಗಿಲ್ ಜೊತೆ ಶತಕದ ಜೊತೆಯಾಟ ನಡೆಸಿದರು. ಸುದರ್ಶನ್ ಕೇವಲ 57 ಎಸೆತಗಳಲ್ಲಿ ಶತಕ ಪೂರೈಸಿದ ಬೆನ್ನಲ್ಲೇ ವಿಕೆಟ್ ಒಪ್ಪಿಸಿದರು.

RCB vs GT IPL 2026 Live Score: 3ನೇ ಶತಕ ಬಾರಿಸಿದ ಸುದರ್ಶನ್

ಅತಿ ಕಡಿಮೆ ಇನ್ನಿಂಗ್ಸ್​ಗಳಲ್ಲಿ 2000 ರನ್

ಸಾಯಿ ಸುದರ್ಶನ್ ತಮ್ಮ ಶತಕದ ಇನ್ನಿಂಗ್ಸ್‌ನಲ್ಲಿ ಕ್ರಿಸ್ ಗೇಲ್ ಅವರ ದಾಖಲೆಯನ್ನು ಸಹ ಮುರಿದರು. ಸಾಯಿ ಸುದರ್ಶನ್ ಐಪಿಎಲ್‌ನಲ್ಲಿ ಅತಿ ಕಡಿಮೆ ಇನ್ನಿಂಗ್ಸ್‌ಗಳಲ್ಲಿ 2000 ರನ್ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅವರು 47 ಇನ್ನಿಂಗ್ಸ್‌ಗಳಲ್ಲಿ 2000 ಐಪಿಎಲ್ ರನ್‌ಗಳನ್ನು ಪೂರ್ಣಗೊಳಿಸಿದರು. ಈ ಮೂಲಕ 48 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದ ಗೇಲ್ ದಾಖಲೆಯನ್ನು ಮುರಿದರು. ಸಾಯಿ ಸುದರ್ಶನ್ 1361 ಎಸೆತಗಳಲ್ಲಿ ಐಪಿಎಲ್‌ನಲ್ಲಿ 2000 ರನ್‌ಗಳನ್ನು ಪೂರ್ಣಗೊಳಿಸಿದ್ದಾರೆ. ಕಡಿಮೆ ಎಸೆತಗಳ ವಿಚಾರದಲ್ಲಿ ಅಭಿಷೇಕ್ ಶರ್ಮಾ ಅಗ್ರಸ್ಥಾನದಲ್ಲಿದ್ದು, 1193 ಎಸೆತಗಳಲ್ಲಿ 2000 ರನ್‌ಗಳನ್ನು ಪೂರ್ಣಗೊಳಿಸಿದ್ದಾರೆ. ಸೆಹ್ವಾಗ್ 1211 ಎಸೆತಗಳಲ್ಲಿ 2000 ರನ್‌ಗಳನ್ನು ಪೂರ್ಣಗೊಳಿಸಿದ್ದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಒಳಮೀಸಲಾತಿ ಯಾರಿಗೆ ಎಷ್ಟು? ಹೇಗೆ ಜಾರಿಯಾಗುತ್ತೆ? ವಿವರಿಸಿದ ಸಚಿವ ಮಹದೇವಪ್ಪ – Kannada News | Minister HC Mahadevappa Talks about SC Internal Reservation

ಬೆಂಗಳೂರು, (ಏಪ್ರಿಲ್ 24): ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ (SC Internal Reservation) ಕುರಿತು ಸಿದ್ದರಾಮಯ್ಯ ಸರ್ಕಾರ ನಿರ್ಣಾಯಕ ತೀರ್ಮಾನ ಕೈಗೊಂಡಿದೆ. ಪರಿಶಿಷ್ಟ ಜಾತಿಗಳಿಗೆ ಲಭ್ಯವಿರುವ ಶೇ.15 ರಷ್ಟು ಮೀಸಲಾತಿಯಲ್ಲಿ ದಲಿತ ಎಡಗೈ ಸಮುದಾಯಕ್ಕೆ ಶೇ. 5.25, ಬಲಗೈ ಸಮುದಾಯಕ್ಕೆ ಶೇ. 5.25 ಮತ್ತು ಇತರರಿಗೆ ಶೇ. 4.5ರಷ್ಟು ಹಂಚಿಕೆಗೆ ನಿರ್ಧರಿಸಲಾಗಿದೆ. ಇನ್ನು ಒಳಮೀಸಲಾತಿ ಹೇಗೆ ಜಾತಿಯಾಗುತ್ತೆ ಎನ್ನುವುದನ್ನು ಸ್ವತಃ ಸಮಾಜ ಕಲ್ಯಾಣ ಸಚಿವ ಎಚ್​​ಸಿ ಮಹದೇವಪ್ಪ ವಿವರಿಸಿದ್ದಾರೆ.

ಇದನ್ನೂ ಓದಿ: ವಿಶೇಷ ಸಂಪುಟ ಸಭೆ ಅಂತ್ಯ: ಒಳ ಮೀಸಲಾತಿ ಹಂಚಿಕೆಗೆ ಕ್ರಾಂತಿಕಾರಿ ನಿರ್ಣಯ, ಯಾರಿಗೆ ಎಷ್ಟು?

Source link

ಕಾಣಿಸುತ್ತಿಲ್ಲ ‘ಕೆಡಿ’ ಸಿನಿಮಾ ಟ್ರೇಲರ್; ‘ಕೆವಿಎನ್ ಪ್ರೊಡಕ್ಷನ್ಸ್’ ಸಂಸ್ಥೆಗೆ ಇನ್ನೊಂದು ವಿಘ್ನ – Kannada News | KD Movie Trailer taken down days after its release due to this reason Says KVN Productions

ಧ್ರುವ ಸರ್ಜಾ ನಟನೆಯ ‘ಕೆಡಿ’ ಸಿನಿಮಾ (KD Movie) ಬಿಡುಗಡೆಗೆ ಸಜ್ಜಾಗಿದೆ. ಈ ಸಿನಿಮಾದ ಟ್ರೇಲರ್ ಇತ್ತೀಚೆಗೆ ಬಿಡುಗಡೆ ಆಗಿತ್ತು. ಬೆಂಗಳೂರಿನ ಸ್ಟಾರ್ ಹೋಟೆಲ್​​ನಲ್ಲಿ ಚಿತ್ರತಂಡದ ಕಲಾವಿದರು ಮತ್ತು ತಂತ್ರಜ್ಞರ ಸಮ್ಮುಖದಲ್ಲಿ ಟ್ರೇಲರ್ (KD Trailer) ಅನಾವರಣ ಮಾಡಲಾಗಿತ್ತು. ಟ್ರೇಲರ್ ನೋಡಿದ ಪ್ರೇಕ್ಷಕರು ಮಿಶ್ರ ಪ್ರತಿಕ್ರಿಯೆ ನೀಡಿದ್ದರು. ಆದರೆ ಈಗ ಒಂದು ಅನಿರೀಕ್ಷಿತ ಸಂಗತಿ ಎದುರಾಗಿದೆ. ಎರಡು ದಿನದ ಹಿಂದೆ ಬಿಡುಗಡೆ ಆಗಿದ್ದ ‘ಕೆಡಿ’ ಚಿತ್ರದ ಟ್ರೇಲರ್ ಈಗ ಕಾಣಿಸುತ್ತಿಲ್ಲ! ಆ ಮೂಲಕ ‘ಕೆವಿಎನ್ ಪ್ರೊಡಕ್ಷನ್ಸ್’ (KVN Productions) ಸಂಸ್ಥೆಗೆ ಮತ್ತೊಂದು ವಿಘ್ನ ಎದುರಾದಂತೆ ಆಗಿದೆ.

ಕಾಕತಾಳೀಯವೂ ಎಂಬಂತೆ ‘ಕೆವಿಎನ್ ಪ್ರೊಡಕ್ಷನ್ಸ್’ ನಿರ್ಮಾಣ ಮಾಡಿದ ಸಿನಿಮಾಗಳಿಗೆ ಒಂದಲ್ಲಾ ಒಂದು ಸಮಸ್ಯೆ ಉಂಟಾಗುತ್ತಿದೆ. ದಳಪತಿ ವಿಜಯ್ ನಟನೆಯ ‘ಜನ ನಾಯಗನ್’ ಸಿನಿಮಾ ಅನಿರ್ಧಿಷ್ಟಾವಧಿಗೆ ಮುಂದೂಡಿಕೆ ಆಯಿತು. ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾದ ಬಿಡುಗಡೆಯನ್ನು ಕೂಡ ಯುದ್ಧದ ಕಾರಣಕ್ಕೆ ಮುಂದೂಡುವುದು ಅನಿವಾರ್ಯ ಆಯಿತು. ಈಗ ‘ಕೆಡಿ’ ಸಿನಿಮಾಗೂ ಸಮಸ್ಯೆ ಆಗಿದೆ.

ಈ ಮೊದಲು ಬಿಡುಗಡೆ ಆಗಿದ್ದ ‘ಸರ್ಸೆ ನಿನ್ನ ಸೆರಗ..’ ಹಾಡಿಗೆ ವಿರೋಧ ವ್ಯಕ್ತವಾದ ಕಾರಣಕ್ಕೆ ಡಿಲೀಟ್ ಮಾಡಬೇಕಾಯಿತು. ಕೆಲವೇ ದಿನಗಳ ಹಿಂದೆ ‘ಕೆಡಿ’ ಸಿನಿಮಾಗೆ ಸೆನ್ಸಾರ್ ಸಮಸ್ಯೆ ಆಗುತ್ತಿದೆ ಎಂದು ನಿರ್ದೇಶಕ ಪ್ರೇಮ್ ಅವರು ಅಸಮಾಧಾನ ವ್ಯಕ್ತಪಡಿಸಿದ್ದರು. ಅದರ ಬೆನ್ನಲ್ಲೇ ಚಿತ್ರತಂಡದವರು ಟ್ರೇಲರ್ ಬಿಡುಗಡೆ ಮಾಡಿದರು. ಆದರೆ ಈಗ ಆ ಟ್ರೇಲರ್ ಅನ್ನು ಪ್ರೈವೇಟ್ ಮಾಡಬೇಕಾದ ಪರಿಸ್ಥಿತಿ ಬಂದಿದೆ.

ಈ ಬಗ್ಗೆ ನಿರ್ಮಾಣ ಸಂಸ್ಥೆಯೇ ಅಧಿಕೃತವಾಗಿ ಮಾಹಿತಿ ಹಂಚಿಕೊಂಡಿದೆ. ‘ಇತ್ತೀಚೆಗೆ ಯೂಟ್ಯೂಬ್‌ನಲ್ಲಿ ಬಿಡುಗಡೆಯಾದ ‘ಕೆಡಿ: ದಿ ಡೆವಿಲ್’ ಟ್ರೇಲರ್‌ನಲ್ಲಿ ಪ್ರಮಾಣೀಕರಣ ಪ್ರಕ್ರಿಯೆಯ ಸಮಯದಲ್ಲಿ ಅಚಾತುರ್ಯದಿಂದ ಕೆಲವು ಅಪ್ರಮಾಣಿತ ಅಂಶಗಳು ಸೇರ್ಪಡೆಯಾಗಿದ್ದವು. ಆದ್ದರಿಂದ ನಾವು ಈ ಟ್ರೇಲರ್ ತೆಗೆದುಹಾಕಿದ್ದೇವೆ ಮತ್ತು ಪ್ರಮಾಣೀಕರಣದ ಮಾರ್ಗಸೂಚಿಗಳಿಗೆ ಅನುಗುಣವಾಗಿ ಪರಿಷ್ಕರಿಸಿದ ಆವೃತ್ತಿಯನ್ನು ಶೀಘ್ರದಲ್ಲೇ ಅಪ್‌ಲೋಡ್ ಮಾಡಲಿದ್ದೇವೆ. ಈ ಅಚಾತುರ್ಯಕ್ಕೆ ನಾವು ಪ್ರಾಮಾಣಿಕವಾಗಿ ವಿಷಾದಿಸುತ್ತೇವೆ ಮತ್ತು ಎಲ್ಲಾ ಪ್ರಮಾಣೀಕರಣ ನಿಯಮಗಳನ್ನು ಪಾಲಿಸಲು ನಾವು ಸಂಪೂರ್ಣವಾಗಿ ಬದ್ಧರಾಗಿದ್ದೇವೆ’ ಎಂದು ಎಕ್ಸ್ (ಟ್ವಿಟರ್) ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ.

ಇದನ್ನೂ ಓದಿ: ‘ಕೆಡಿ’ ಸಿನಿಮಾದಲ್ಲಿ ಇರುವ ಕೆಡಿಗಳು ಎಷ್ಟು ಜನ? ಪೂರ್ತಿ ಪಟ್ಟಿ ನೀಡಿದ ರಮೇಶ್ ಅರವಿಂದ್

ಏಪ್ರಿಲ್ 30ರಂದು ‘ಕೆಡಿ’ ಸಿನಿಮಾ ಬಿಡುಗಡೆ ಆಗಬೇಕಿದೆ. ಅದಕ್ಕಾಗಿ ಚಿತ್ರತಂಡ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದೆ. ಆದರೆ ಟ್ರೇಲರ್ ತೆಗೆದು ಹಾಕಿರುವುದರಿಂದ ಅಭಿಮಾನಿಗಳಿಗೆ ರಿಲೀಸ್ ದಿನಾಂಕದ ಬಗ್ಗೆ ಅನುಮಾನ ಮೂಡುವಂತಾಗಿದೆ. ಈ ಸಿನಿಮಾದಲ್ಲಿ ಧ್ರುವ ಸರ್ಜಾ ಜೊತೆ ರೀಷ್ಮಾ ನಾಣಯ್ಯ, ರಮೇಶ್ ಅರವಿಂದ್, ಸಂಜಯ್ ದತ್, ಶಿಲ್ಪಾ ಶೆಟ್ಟಿ, ರವಿಚಂದ್ರನ್, ಪಿ. ರವಿಶಂಕರ್ ಮುಂತಾದವರು ಅಭಿನಯಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಬೆಂಗಳೂರು: ನಡುರಸ್ತೆಯಲ್ಲೇ ಪೊಲೀಸರೆದುರೇ ಯುವಕನಿಗೆ ಯದ್ವಾತದ್ವ ಹೊಡೆದ ಹುಡುಗಿಯರು! ವಿಡಿಯೋ ವೈರಲ್ – Kannada News | Viral Video: Two Young Women Thrash Youth in the Middle of Koramangala Road Over Pub Dispute

ಬೆಂಗಳೂರು, ಏಪ್ರಿಲ್ 24: ಸಿಲಿಕಾನ್ ಸಿಟಿ ಬೆಂಗಳೂರಿನ ಕೋರಮಂಗಲದಲ್ಲಿ ಹೈಡ್ರಾಮಾವೊಂದು ನಡೆದಿದೆ. ಯುವಕನೊಬ್ಬ ತಮಗೆ ಕಿರಿಕಿರಿ ನೀಡಿದ್ದಾನೆ ಎಂದು ಆರೋಪಿಸಿ ಇಬ್ಬರು ಯುವತಿಯರು ಆತನಿಗೆ ನಡುರಸ್ತೆಯಲ್ಲೇ ಪೊಲೀಸರೆದುರೇ ಮನಬಂದಂತೆ ಹೊಡೆದ ಘಟನೆ ಬೆಳಕಿಗೆ ಬಂದಿದೆ. ಪಬ್‌ವೊಂದರ ಒಳಗೆ ಯುವಕ ತಮಗೆ ತೊಂದರೆ ನೀಡಿದ್ದಾನೆ ಎಂದು ಆಕ್ರೋಶಗೊಂಡ ಯುವತಿಯರು, ಆತನನ್ನು ರಸ್ತೆಗೆ ಎಳೆದು ತಂದು ಹಲ್ಲೆ ಮಾಡಿದ್ದಾರೆ. ಸ್ಥಳದಲ್ಲಿದ್ದ ಪೊಲೀಸರು ಯುವತಿಯರನ್ನು ತಡೆಯಲು ಪ್ರಯತ್ನಿಸಿ, ‘ಹೊಡೆಯಬೇಡಿ, ಠಾಣೆಗೆ ಬಂದು ದೂರು ನೀಡಿ’ ಎಂದು ಎಷ್ಟೇ ಮನವಿ ಮಾಡಿದರೂ ಕೇಳದ ಯುವತಿಯರು ಪೊಲೀಸರ ಎದುರಲ್ಲೇ ಯುವಕನಿಗೆ ಹೊಡೆದಿದ್ದಾರೆ.

ಈ ಘಟನೆಯ ದೃಶ್ಯಗಳನ್ನು ಸ್ಥಳೀಯರು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದು, ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿದೆ. ರಸ್ತೆಯಲ್ಲಿ ಸಂಚರಿಸುತ್ತಿದ್ದ ಸಾರ್ವಜನಿಕರು ಈ ಹೈಡ್ರಾಮಾವನ್ನು ಕಂಡು ಬೆಚ್ಚಿಬಿದ್ದಿದ್ದಾರೆ. ಎರಡೂ ಕಡೆಯವರಿಗೂ ಪೊಲೀಸರು ದೂರು ನೀಡುವಂತೆ ಸೂಚಿಸಿದರೂ, ಈವರೆಗೆ ದೂರು ನೀಡಲು ಮುಂದೆ ಬಂದಿಲ್ಲ ಎಂದು ತಿಳಿದುಬಂದಿದೆ. ಸದ್ಯ ವೈರಲ್ ವಿಡಿಯೋ ಆಧಾರದ ಮೇಲೆ ಕೋರಮಂಗಲ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

MI vs CSK: ಮುಂಬೈ ವಿರುದ್ಧ ಈ ಸಾಧನೆ ಮಾಡಿದ ಮೊದಲ ಸಿಎಸ್​ಕೆ ಬ್ಯಾಟರ್ ಸಂಜು ಸ್ಯಾಮ್ಸನ್ – Kannada News | IPL 2026: Sanju Samson’s 101* Powers CSK Past MI, Sets Multiple Records

ಐಪಿಎಲ್ ಇತಿಹಾಸದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಟಗಾರನೊಬ್ಬ ಮುಂಬೈ ಇಂಡಿಯನ್ಸ್ ವಿರುದ್ಧ ಶತಕ ಗಳಿಸಿದ್ದು ಇದೇ ಮೊದಲು. ಇದಕ್ಕೂ ಮೊದಲು, ಸಿಎಸ್‌ಕೆ ಬ್ಯಾಟ್ಸ್‌ಮನ್ ರುತುರಾಜ್ ಗಾಯಕ್ವಾಡ್ ಮುಂಬೈ ವಿರುದ್ಧ ಅತಿ ಹೆಚ್ಚು ಅಂದರೆ ಅಜೇಯ 88 ರನ್​ ಬಾರಿಸಿದ್ದು, ಈವರೆಗಿನ ದಾಖಲೆಯಾಗಿತ್ತು. ಇದೀಗ ಅವರ ದಾಖಲೆಯನ್ನು ಸಂಜು ಸ್ಯಾಮ್ಸನ್ ಮುರಿದಿದ್ದಾರೆ.

Source link

ಸಿಮೆಂಟ್ ಟ್ಯಾಂಕರ್, ಬಸ್ ಹಾಗೂ ಆಟೋ ನಡುವೆ ಸರಣಿ ಅಪಘಾತ: 10 ಜನರಿಗೆ ಗಾಯ – Kannada News | Kalaburagi serial Accident: Auto Driver Critical, 9 Others Injured in Chincholi Highway Crash

ಕಲಬುರಗಿ, ಏಪ್ರಿಲ್​ 24: ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ಚಿಂಚೋಳಿ-ತೆಲಂಗಾಣ ರಾಜ್ಯ ಹೆದ್ದಾರಿಯಲ್ಲಿ ಇಂದು ಭೀಕರ ಸರಣಿ ಅಪಘಾತ ಸಂಭವಿಸಿದೆ. ಸಿಮೆಂಟ್ ಟ್ಯಾಂಕರ್, ಖಾಸಗಿ ಬಸ್ ಹಾಗೂ ಆಟೋ ನಡುವೆ ನಡೆದ ಈ ಅಪಘಾತದಲ್ಲಿ ಹತ್ತು ಜನರು ಗಾಯಗೊಂಡಿದ್ದು, ಓರ್ವನ ಸ್ಥಿತಿ ಗಂಭೀರವಾಗಿದೆ. ತೆಲಂಗಾಣದ ತಾಂಡೂರು ಕಡೆಯಿಂದ ಚಿಂಚೋಳಿ ಕಡೆಗೆ ಬರುತ್ತಿದ್ದ ಸಿಮೆಂಟ್ ಟ್ಯಾಂಕರ್, ಎದುರಿಗಿದ್ದ ಆಟೋಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿದೆ. ಈ ವೇಳೆ ನಿಯಂತ್ರಣ ತಪ್ಪಿದ ಟ್ಯಾಂಕರ್, ಚಿಂಚೋಳಿಯಿಂದ ವೆಂಕಟಾಪುರಕ್ಕೆ ಹೊರಟಿದ್ದ ಬಸ್ಸಿಗೆ ಮುಖಾಮುಖಿ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಆಟೋ ಕೂಡ ಜಖಂಗೊಂಡಿದೆ. ಸದ್ಯ ಗಾಯಾಳುಗಳನ್ನ ಚಿಂಚೋಳಿಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

Exit mobile version