ದೆಹಲಿ, ಫೆ. 6: ಪ್ರಧಾನಿ ನರೇಂದ್ರ ಮೋದಿ ಅವರು ‘ಪರೀಕ್ಷಾ ಪೇ ಚರ್ಚಾ’ (Pariksha Pe Charcha 2026) ಕಾರ್ಯಕ್ರಮದ 9ನೇ ಆವೃತ್ತಿಯಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುತ್ತಾ, ಕೇವಲ ಪರೀಕ್ಷೆ ಮಾತ್ರವಲ್ಲದೆ ಸುಸ್ಥಿರ ಭವಿಷ್ಯದ ನಿರ್ಮಾಣದ ಬಗ್ಗೆಯೂ ಮಹತ್ವದ ಕರೆ ನೀಡಿದ್ದಾರೆ. ವಿದ್ಯಾರ್ಥಿಗಳನ್ನು “ಜವಾಬ್ದಾರಿಯುತ ನಾಗರಿಕರು” ಆಗುವಂತೆ ಕರೆ ನೀಡಿದರು. ‘ವಿಕಸಿತ ಭಾರತ’ದ ಗುರಿಯನ್ನು ತಲುಪಲು ಸ್ವಚ್ಛತೆ (Cleanliness) ಮೂಲಭೂತ ಅವಶ್ಯಕತೆ ಎಂದು ಅವರು ತಿಳಿಸಿದರು. ವಿದ್ಯಾರ್ಥಿಗಳು ಕೇವಲ ತಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಮಾತ್ರವಲ್ಲದೆ, ಸಮಾಜದಲ್ಲಿ ಈ ಬಗ್ಗೆ ಅರಿವು ಮೂಡಿಸುವ ಕೆಲಸವನ್ನೂ ಮಾಡಬೇಕು ಎಂದು ಆಶಿಸಿದರು. ತಂತ್ರಜ್ಞಾನವನ್ನು ಶಾಪ ಎಂದು ಭಾವಿಸುವ ಬದಲು ಅದನ್ನು “ವರದಾನ” ಎಂದು ಸ್ವೀಕರಿಸಬೇಕು ಎಂದು ಮೋದಿ ಹೇಳಿದರು. ಆಧುನಿಕ ಜಗತ್ತಿನಲ್ಲಿ ತಂತ್ರಜ್ಞಾನದಿಂದ ದೂರವಿರುವುದು ಸಾಧ್ಯವಿಲ್ಲ, ಬದಲಿಗೆ ಅದನ್ನು ನಮ್ಮ ಬೆಳವಣಿಗೆಗೆ ಹೇಗೆ ಬಳಸಿಕೊಳ್ಳಬೇಕು ಎಂಬ ಕಲೆ ನಮಗೆ ತಿಳಿದಿರಬೇಕು ಎಂದರು.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ