ಐಪಿಎಲ್ 2026 ರ 29ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಹಾಗೂ ಲಕ್ನೋ ಸೂಪರ್ಜೈಂಟ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ದಾಖಲೆಯ 254 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಲಕ್ನೋ ತಂಡ 200 ರನ್ ಕಲೆಹಾಕಲಷ್ಟೇ ಶಕ್ತವಾಗಿ 54 ರನ್ಗಳಿಂದ ಪಂದ್ಯ ಸೋತಿತು. ಆದಾಗ್ಯೂ ಲಕ್ನೋ ತಂಡದ ಪರ ಏಕಾಂಗಿ ಹೋರಾಟ ನೀಡಿದ ನಾಯಕ ರಿಷಭ್ ಪಂತ್ 23 ಎಸೆತಗಳಲ್ಲಿ 4 ಸಿಕ್ಸರ್ ಸಹಿತ 43 ರನ್ ಬಾರಿಸಿ ಔಟಾದರು.
ಇನ್ನಿಂಗ್ಸ್ನ 7ನೇ ಓವರ್ನಲ್ಲಿ ಬ್ಯಾಟಿಂಗ್ಗೆ ಬಂದ ರಿಷಭ್ ಪಂತ್, ಮಾರ್ಕೋ ಯಾನ್ಸನ್ ಬೌಲ್ ಮಾಡಿದ ಈ ಓವರ್ನ 4ನೇ ಎಸೆತವನ್ನು ಪಂತ್ ಸಿಕ್ಸರ್ಗಟ್ಟಿದರು. ಆ ನಂತರದ ಅಂದರೆ ಐದನೇ ಎಸೆತವನ್ನು ಪಂತ್ ಲಾಂಗ್ ಆಫ್ನಲ್ಲಿ ಭರ್ಜರಿ ಸಿಕ್ಸರ್ಗಟ್ಟಿದರು. ಪಂತ್ ಬಾರಿಸಿದ ಈ ಸಿಕ್ಸರ್ ಪ್ರೇಕ್ಷಕರು ಹುಚ್ಚೆದ್ದು ಕುಣಿಯುವಂತೆ ಮಾಡಿತು. ಏಕೆಂದರೆ ಪಂತ್ ಈ ಸಿಕ್ಸರ್ ಅನ್ನು ಕೇವಲ ಒಂದು ಕೈನಿಂದ ಬಾರಿಸಿದರು.