PBKS vs SRH: ಯಾನ್ಸನ್ ಹಿಡಿದ ಕ್ಯಾಚ್​ಗೆ ಬೆಚ್ಚಿ ಬೆರಗಾದ ಅರ್ಷದೀಪ್; ವಿಡಿಯೋ

PBKS vs SRH: ಯಾನ್ಸನ್ ಹಿಡಿದ ಕ್ಯಾಚ್​ಗೆ ಬೆಚ್ಚಿ ಬೆರಗಾದ ಅರ್ಷದೀಪ್; ವಿಡಿಯೋ

ಭಾರತ ಟಿ20 ತಂಡದ ಬೌಲಿಂಗ್ ವಿಭಾಗದ ಪ್ರಮುಖ ಬೌಲರ್ ಎನಿಸಿಕೊಂಡಿರುವ ಅರ್ಷದೀಪ್ ಸಿಂಗ್​ಗೆ ಈ ಬಾರಿಯ ಐಪಿಎಲ್ ದುಃಸ್ವಪ್ನದಂತೆ ಕಾಡುತ್ತಿದೆ. ಐಪಿಎಲ್‌ನಲ್ಲಿ ಪಂಜಾಬ್ ಕಿಂಗ್ಸ್ ತಂಡದ ಪರ ಆಡುತ್ತಿರುವ ಅರ್ಷದೀಪ್​ಗೆ ಮೊದಲ ಮೂರು ಪಂದ್ಯಗಳಲ್ಲಿ ಯಾವುದೇ ವಿಕೆಟ್ ಸಿಕ್ಕಿರಲಿಲ್ಲ. ಇತ್ತ ಅರ್ಷದೀಪ್​ ರನ್​ಗೂ ಕಡಿವಾಣ ಹಾಕುತ್ತಿರಲಿಲ್ಲ. ಇದು ಪಂಜಾಬ್​ಗೆ ದೊಡ್ಡ ತಲೆನೋವಾಗಿತ್ತು. ಇಂದು ನಡೆದ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲೂ ಅರ್ಷದೀಪ್ ತುಂಬಾ ದುಬಾರಿಯಾದರು. ಆದರೆ ಕೊನೆಗೂ ತಮ್ಮ ವಿಕೆಟ್​ಗಳ ಖಾತೆ ತೆರೆಯುವಲ್ಲಿ ಯಶಸ್ವಿಯಾದರು.

ಈ ಪಂದ್ಯದಲ್ಲಿ 4 ಓವರ್​ಗಳನ್ನು ಬೌಲ್ ಮಾಡಿದ ಅರ್ಷದೀಪ್ ಬರೋಬ್ಬರಿ 50 ರನ್ ಬಿಟ್ಟುಕೊಟ್ಟು 2 ವಿಕೆಟ್ ಪಡೆದರು. ಅಂದರೆ ಅರ್ಷದೀಪ್ ವಿಕೆಟ್ ಪಡೆದರೂ ರನ್​ಗೆ ಕಡಿವಾಣ ಹಾಕುವಲ್ಲಿ ವಿಫಲರಾದರು. ಈ ಆವೃತ್ತಿಯಲ್ಲಿ ಅರ್ಷದೀಪ್ ಅವರ ಮೊದಲ ವಿಕೆಟ್ ಇಶಾನ್ ಕಿಶನ್ ಅವರ ರೂಪದಲ್ಲಿ ಬಂತು. ಅರ್ಷದೀಪ್ ಅವರ ಎಸೆತವನ್ನು ಕಿಶನ್ ಸಿಕ್ಸರ್​ಗಟ್ಟಲು ಯತ್ನಿಸಿದರು. ಆದರೆ ಬೌಂಡರಿ ಗೆರೆ ಬಳಿ ನಿಂತಿದ್ದ ಮಾರ್ಕೋ ಯಾನ್ಸನ್ 15 ಮೀಟರ್ ಓಡಿ ಬಂದು ಕೇವಲ ಒಂದೇ ಒಂದು ಕೈನಲ್ಲಿ ಅದ್ಭುತ ಕ್ಯಾಚ್ ತೆಗೆದುಕೊಂಡರು.

ಯಾನ್ಸನ್ ಹಿಡಿದ ಈ ಕ್ಯಾಚ್ ಅರ್ಷದೀಪ್ ಅವರಿಗೂ ಅಚ್ಚರಿಯನ್ನುಂಟು ಮಾಡಿತು. ಅರ್ಷದೀಪ್ ತಮ್ಮ ಎರಡನೇ ವಿಕೆಟ್ ರೂಪದಲ್ಲಿ ಸಲೀಲ್ ಅರೋರಾ ಅವರ ಭೇಟೆಯಾಡಿದರು. ಆದಾಗ್ಯೂ ಇದೇ ಪಂದ್ಯದಲ್ಲಿ ಅರ್ಷದೀಪ್ ಒಂದೇ ಓವರ್​ನಲ್ಲಿ ಬರೋಬ್ಬರಿ 24 ರನ್​ಗಳನ್ನು ಬಿಟ್ಟುಕೊಟ್ಟರು. ಇದರಲ್ಲಿ ಅಭಿಷೇಕ್ ಶರ್ಮಾ ಬೌಂಡರಿ ಸಿಕ್ಸರ್​ಗಳಿಂದ 20ರನ್ ಕಲೆಹಾಕಿದರೆ, ಮಿಕ್ಕ 4 ರನ್​ಗಳು ವೈಡ್​ನಿಂದ ಬಂದವು.

Source link

Leave a Reply

Your email address will not be published. Required fields are marked *