
ಭಾರತ ಟಿ20 ತಂಡದ ಬೌಲಿಂಗ್ ವಿಭಾಗದ ಪ್ರಮುಖ ಬೌಲರ್ ಎನಿಸಿಕೊಂಡಿರುವ ಅರ್ಷದೀಪ್ ಸಿಂಗ್ಗೆ ಈ ಬಾರಿಯ ಐಪಿಎಲ್ ದುಃಸ್ವಪ್ನದಂತೆ ಕಾಡುತ್ತಿದೆ. ಐಪಿಎಲ್ನಲ್ಲಿ ಪಂಜಾಬ್ ಕಿಂಗ್ಸ್ ತಂಡದ ಪರ ಆಡುತ್ತಿರುವ ಅರ್ಷದೀಪ್ಗೆ ಮೊದಲ ಮೂರು ಪಂದ್ಯಗಳಲ್ಲಿ ಯಾವುದೇ ವಿಕೆಟ್ ಸಿಕ್ಕಿರಲಿಲ್ಲ. ಇತ್ತ ಅರ್ಷದೀಪ್ ರನ್ಗೂ ಕಡಿವಾಣ ಹಾಕುತ್ತಿರಲಿಲ್ಲ. ಇದು ಪಂಜಾಬ್ಗೆ ದೊಡ್ಡ ತಲೆನೋವಾಗಿತ್ತು. ಇಂದು ನಡೆದ ಸನ್ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲೂ ಅರ್ಷದೀಪ್ ತುಂಬಾ ದುಬಾರಿಯಾದರು. ಆದರೆ ಕೊನೆಗೂ ತಮ್ಮ ವಿಕೆಟ್ಗಳ ಖಾತೆ ತೆರೆಯುವಲ್ಲಿ ಯಶಸ್ವಿಯಾದರು.
ಈ ಪಂದ್ಯದಲ್ಲಿ 4 ಓವರ್ಗಳನ್ನು ಬೌಲ್ ಮಾಡಿದ ಅರ್ಷದೀಪ್ ಬರೋಬ್ಬರಿ 50 ರನ್ ಬಿಟ್ಟುಕೊಟ್ಟು 2 ವಿಕೆಟ್ ಪಡೆದರು. ಅಂದರೆ ಅರ್ಷದೀಪ್ ವಿಕೆಟ್ ಪಡೆದರೂ ರನ್ಗೆ ಕಡಿವಾಣ ಹಾಕುವಲ್ಲಿ ವಿಫಲರಾದರು. ಈ ಆವೃತ್ತಿಯಲ್ಲಿ ಅರ್ಷದೀಪ್ ಅವರ ಮೊದಲ ವಿಕೆಟ್ ಇಶಾನ್ ಕಿಶನ್ ಅವರ ರೂಪದಲ್ಲಿ ಬಂತು. ಅರ್ಷದೀಪ್ ಅವರ ಎಸೆತವನ್ನು ಕಿಶನ್ ಸಿಕ್ಸರ್ಗಟ್ಟಲು ಯತ್ನಿಸಿದರು. ಆದರೆ ಬೌಂಡರಿ ಗೆರೆ ಬಳಿ ನಿಂತಿದ್ದ ಮಾರ್ಕೋ ಯಾನ್ಸನ್ 15 ಮೀಟರ್ ಓಡಿ ಬಂದು ಕೇವಲ ಒಂದೇ ಒಂದು ಕೈನಲ್ಲಿ ಅದ್ಭುತ ಕ್ಯಾಚ್ ತೆಗೆದುಕೊಂಡರು.
ಯಾನ್ಸನ್ ಹಿಡಿದ ಈ ಕ್ಯಾಚ್ ಅರ್ಷದೀಪ್ ಅವರಿಗೂ ಅಚ್ಚರಿಯನ್ನುಂಟು ಮಾಡಿತು. ಅರ್ಷದೀಪ್ ತಮ್ಮ ಎರಡನೇ ವಿಕೆಟ್ ರೂಪದಲ್ಲಿ ಸಲೀಲ್ ಅರೋರಾ ಅವರ ಭೇಟೆಯಾಡಿದರು. ಆದಾಗ್ಯೂ ಇದೇ ಪಂದ್ಯದಲ್ಲಿ ಅರ್ಷದೀಪ್ ಒಂದೇ ಓವರ್ನಲ್ಲಿ ಬರೋಬ್ಬರಿ 24 ರನ್ಗಳನ್ನು ಬಿಟ್ಟುಕೊಟ್ಟರು. ಇದರಲ್ಲಿ ಅಭಿಷೇಕ್ ಶರ್ಮಾ ಬೌಂಡರಿ ಸಿಕ್ಸರ್ಗಳಿಂದ 20ರನ್ ಕಲೆಹಾಕಿದರೆ, ಮಿಕ್ಕ 4 ರನ್ಗಳು ವೈಡ್ನಿಂದ ಬಂದವು.