Ration Card: ಕಳೆದುಹೋದ ರೇಷನ್ ಕಾರ್ಡ್ ಸಂಖ್ಯೆಯನ್ನು ಮೊಬೈಲ್‌ನಲ್ಲಿ ಹೀಗೆ ಕಂಡು ಹಿಡಿಯಿರಿ – Kannada News | Here is how to find your lost ration card number on your mobile.

ಸಾಂದರ್ಭಿಕ ಚಿತ್ರImage Credit source: Getty Images/ Pixabledemo

ಅತ್ಯಂತ ಪ್ರಮುಖವಾದ ಸರ್ಕಾರಿ ದಾಖಲೆಯಲ್ಲಿ ರೇಷನ್ ಕಾರ್ಡ್ (Ration Card) ಕೂಡ ಒಂದು. ಸಬ್ಸಿಡಿ ದರದ ಆಹಾರ ಧಾನ್ಯಗಳನ್ನು ಪಡೆಯುವುದರ ಜತೆಗೆ ಬ್ಯಾಂಕ್ ಖಾತೆ ತೆರೆಯಲು, ಪಾಸ್‌ಪೋರ್ಟ್, ವೋಟರ್ ಐಡಿ, ಮತ್ತು ಡ್ರೈವಿಂಗ್ ಲೈಸೆನ್ಸ್ ಪಡೆಯಲು ಈ  ಗುರುತಿನ ಪುರಾವೆ ಬೇಕೇ ಬೇಕು. ಒಂದು ವೇಳೆ ನಿಮ್ಮ ಬಳಿಯಿದ್ದ ರೇಷನ್ ಕಾರ್ಡ್ ಕಳೆದು ಹೋಗಿದ್ದರೆ ಆನ್ಲೈನ್ ನಲ್ಲಿ ಡೌನ್ಲೋಡ್ ಮಾಡಿಕೊಳ್ಳಬಹುದು. ಕಳೆದು ಹೋದ ರೇಷನ್ ಕಾರ್ಡ್ ನಂಬರನ್ನು ಮೊಬೈಲ್ ನಲ್ಲೇ (mobile) ಈ ಕೆಳಗಿನ ಮೂರು ವಿಧಾನಗಳ ಮೂಲಕ ಕಂಡು ಹಿಡಿಯಬಹುದು.

ಕಳೆದುಹೋದ ರೇಷನ್ ಕಾರ್ಡ್ ಸಂಖ್ಯೆಯನ್ನು ಆನ್‌ಲೈನ್‌ನಲ್ಲಿ ಹುಡುಕುವುದು ಹೇಗೆ?

ವಿಧಾನ 1 :

ಹಂತ 1:  ಮೇರಾ ರೇಷನ್ ಆಪ್‌ನ್ನು ನಿಮ್ಮ ಮೊಬೈಲ್‌ನ ಗೂಗಲ್ ಪ್ಲೇ ಸ್ಟೋರ್ ಅಥವಾ ಆಪ್ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ.

ಹಂತ 2: ಆಪ್ ತೆರೆದು ಆಧಾರ್ ಸೆಂಡಿಂಗ್ ಆಯ್ಕೆಯನ್ನು ಆರಿಸಿ. ನಿಮ್ಮ ಆಧಾರ್ ಕಾರ್ಡ್ ಸಂಖ್ಯೆಯನ್ನು ನಮೂದಿಸಿ ಹಾಗೂ ಸಬ್ಮಿಟ್‌ ಮಾಡಿ.


ಹಂತ 3:
ಸ್ಕ್ರೀನ್‌ ಮೇಲೆ ನಿಮಗೆ ನಿಮ್ಮ ರೇಷನ್ ಕಾರ್ಡ್ ಸಂಖ್ಯೆ ಹಾಗೂ ಕುಟುಂಬದ ಸದಸ್ಯರ ವಿವರಗಳು ಕಾಣಿಸುತ್ತದೆ.

ವಿಧಾನ 2:

ಹಂತ 1: ನಿಮ್ಮ ಮೊಬೈಲ್ ಬ್ರೌಸರ್‌ನಲ್ಲಿ ಕರ್ನಾಟಕ ಸರ್ಕಾರದ ಅಧಿಕೃತ ಆಹಾರ ಇಲಾಖೆ ವೆಬ್‌ಸೈಟ್‌ಗೆ ನೀಡಿ.


ಹಂತ 2:
ಈ ಸೈಟ್ ನಲ್ಲಿ ಇ – ಸರ್ವಿಸಸ್ ಮೆನು ಆಯ್ಕೆ ಮಾಡಿದರೆ, ಅದರಲ್ಲಿ ಕಾಣಿಸುವ ಸ್ಟೇಟಸ್ ಆಫ್ ರೇಷನ್ ಕಾರ್ಡ್ ಅಥವಾ ಶೋ ರೇಷನ್ ಕಾರ್ಡ್ ಮೇಲೆ ಕ್ಲಿಕ್ ಮಾಡಿ.


ಹಂತ 3:
ನಿಮ್ಮ ಆಧಾರ್ ಕಾರ್ಡ್ ಸಂಖ್ಯೆಯನ್ನು ನಮೂದಿಸಿದರೆ ರೇಷನ್ ಕಾರ್ಡ್ ಸಂಖ್ಯೆ ಹಾಗೂ ವಿವರವಾದ ಮಾಹಿತಿ ದೊರೆಯುತ್ತದೆ.

ವಿಧಾನ 3:

ಹಂತ 1: ನಿಮ್ಮ ಮೊಬೈಲ್‌ನಲ್ಲಿ ಡಿಜಿಲಾಕರ್ ಆಪ್ ತೆರೆಯಿರಿ. ಈ ಆಪ್ ನಲ್ಲಿ ನಿಮ್ಮ ಆಧಾರ್ ಸಂಖ್ಯೆ ಬಳಸಿ ಲಾಗಿನ್ ಆಗಿ.


ಹಂತ 2:
ಇಶ್ಯೂಡ್ ಡಾಕ್ಯುಮೆಂಟ್ಸ್ ವಿಭಾಗದಲ್ಲಿ ಸರ್ಚ್ ಡಾಕ್ಯುಮೆಂಟ್ಸ್ ಗೆ ಹೋಗಿ ರೇಷನ್ ಕಾರ್ಡ್ ಎಂದು ಸರ್ಚ್ ಮಾಡಿ.


ಹಂತ 3:
ನಿಮ್ಮ ರಾಜ್ಯ ಆಯ್ಕೆ ಮಾಡಿಕೊಂಡು, ನಿಮ್ಮ ಆಧಾರ್ ಕಾರ್ಡ್ ಸಂಖ್ಯೆ ನಮೂದಿಸಿದರೆ ನಿಮ್ಮ ಡಿಜಿಟಲ್ ರೇಷನ್ ಕಾರ್ಡ್ ನೊಂದಿಗೆ ನಂಬರ್ ದೊರೆಯುತ್ತದೆ.

ಸಾಮಾನ್ಯವಾಗಿ ಕೇಳುವ ಪ್ರಶ್ನೆ ಮತ್ತು ಉತ್ತರ (FAQs)

ಪ್ರಶ್ನೆ: ರೇಷನ್ ಕಾರ್ಡ್ ಕಳೆದು ಹೋದರೆ ಮೊದಲು ಏನು ಮಾಡಬೇಕು?

ಉತ್ತರ: ರೇಷನ್ ಕಾರ್ಡ್ ಕಳೆದುಹೋದರೆ, ಮೊದಲು ಹತ್ತಿರದ ಪೊಲೀಸ್ ಠಾಣೆಗೆ ತೆರಳಿ ಎಫ್‌ಐಆರ್ ದಾಖಲಿಸಬೇಕು.

ಪ್ರಶ್ನೆ: ಕಳೆದು ಹೋದ ರೇಷನ್ ಕಾರ್ಡ್ ಸಂಖ್ಯೆಯನ್ನು ಹುಡುಕುವುದು ಹೇಗೆ?

ಮೇರಾ ರೇಷನ್ ಆಪ್, ಕರ್ನಾಟಕ ಆಹಾರ ಇಲಾಖೆಯ ಅಧಿಕೃತ ವೆಬ್ ಸೈಟ್ ಅಥವಾ ಡಿಜಿಲಾಕರ್ ಆಪ್ ಮೂಲಕ ರೇಷನ್ ಕಾರ್ಡ್ ನಂಬರ್ ಪಡೆಯಬಹುದು.

ಪ್ರಶ್ನೆ: ಕಳೆದು ಹೋದ ರೇಷನ್ ಕಾರ್ಡ್ ಸಂಖ್ಯೆ ಪಡೆಯಬೇಕೆಂದರೆ ಯಾವ ಕೆಲಸ ಮಾಡಿರಲೇಬೇಕು?

ರೇಷನ್ ಕಾರ್ಡ್‌ಗೆ ನಿಮ್ಮ ಮೊಬೈಲ್ ಸಂಖ್ಯೆ ಅಥವಾ ಆಧಾರ್ ಕಾರ್ಡ್ ಗೆ ಲಿಂಕ್ ಆಗಿದ್ದರೆ ಮಾತ್ರ ಕಳೆದು ಹೋದ ರೇಷನ್ ಕಾರ್ಡ್ ಸಂಖ್ಯೆ ಪಡೆಯಲು ಸಾಧ್ಯ.

Published On – 2:12 pm, Thu, 9 July 26

Source link

Leave a Reply

Your email address will not be published. Required fields are marked *