RBI MPC: ರೆಪೋ ದರ ಶೇ. 5.25, ಜಿಡಿಪಿ ದರ ಶೇ. 6.6, ಹಣದುಬ್ಬರ ಶೇ. 5.1 ಸಾಧ್ಯತೆ; ಆರ್​ಬಿಐ ಎಂಪಿಸಿ ಪ್ರಕಟಣೆ – Kannada News

ಆರ್​ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾImage Credit source: RBI Youtube

ನವದೆಹಲಿ, ಜೂನ್ 5: ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ರೆಪೋ ದರವನ್ನು ಯಥಾಸ್ಥಿತಿಯಲ್ಲಿ ಮುಂದುವರಿಸಲು ನಿರ್ಧರಿಸಿದೆ. ಮೊನ್ನೆಯಿಂದ ನಡೆದ ಎಂಪಿಸಿ ಸಭೆಯ ನಂತರ ಇವತ್ತು ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಆರ್​ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ, ರೆಪೋ ದರವನ್ನು ಶೇ. 5.25ರಲ್ಲಿ ಮುಂದುವರಿಸಲು ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ. ಎಸ್​ಟಿಎಫ್ ದರ ಶೇ. 5, ಎಂಎಸ್​ಎಫ್ ಮತ್ತು ಬ್ಯಾಂಕ್ ರೇಟ್ ಶೇ. 5.5 ನಲ್ಲಿ ಮುಂದುವರಿಯಲಿವೆ. ಹಾಗೆಯೇ, ಆರ್​ಬಿಐನ ಪಾಲಿಸಿ ತಟಸ್ಥ ನೀತಿಯಲ್ಲಿ ಮುಂದುವರಿಯಲಿದೆ. ಅಂದರೆ, ಅಗತ್ಯಬಿದ್ದಾಗ ರೆಪೋ ದರ ಏರಿಸಬಹುದು, ಅಥವಾ ಇಳಿಸಬಹುದು.

(ಇನ್ನಷ್ಟು ವಿವರಗಳನ್ನು ನಿರೀಕ್ಷಿಸಿ..)

Source link

Leave a Reply

Your email address will not be published. Required fields are marked *