Headlines

RCB ತಂಡದ ಮುಂದಿನ ಮ್ಯಾಚ್ ಯಾವಾಗ? ಯಾರ ವಿರುದ್ಧ? ಇಲ್ಲಿದೆ ಡಿಟೇಲ್ಸ್ – Kannada News | IPL 2026: RCB Next Match Full Details

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಗೆಲುವಿನ ಓಟಕ್ಕೆ ಡೆಲ್ಲಿ ಕ್ಯಾಪಿಟಲ್ಸ್ ತಂಡ ಬ್ರೇಕ್ ಹಾಕಿದೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಐಪಿಎಲ್​ನ 26ನೇ ಪಂದ್ಯದಲ್ಲಿ ಆರ್​ಸಿಬಿ ವಿರುದ್ಧ ಡಿಸಿ ಪಡೆ 6 ವಿಕೆಟ್​ಗಳ ಗೆಲುವು ದಾಖಲಿಸಿದೆ.

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 20 ಓವರ್​ಗಳಲ್ಲಿ 175 ರನ್​ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು 19.5 ಓವರ್​ಗಳಲ್ಲಿ 179 ರನ್ ಬಾರಿಸಿ 6 ವಿಕೆಟ್​ಗಳ ಜಯ ಸಾಧಿಸಿದೆ.

ಈ ಸೋಲಿನ ಹೊರತಾಗಿಯೂ ಅಂಕ ಪಟ್ಟಿಯಲ್ಲಿ ಆರ್​ಸಿಬಿ ತಂಡದ ಸ್ಥಾನ ಬದಲಾಗಿಲ್ಲ. ಏಕೆಂದರೆ 6 ಮ್ಯಾಚ್​ಗಳಲ್ಲಿ 4 ಗೆಲುವು ದಾಖಲಿಸಿರುವ ರಾಯಲ್ ಪಡೆಯು ಉತ್ತಮ ನೆಟ್ ರನ್ ರೇಟ್ ಹೊಂದಿದ್ದು, ಈ ಮೂಲಕ ದ್ವಿತೀಯ ಸ್ಥಾನವನ್ನು ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಇದಾಗ್ಯೂ ಆರ್​ಸಿಬಿ ತಂಡ ತನ್ನ ಮುಂದಿನ ಮ್ಯಾಚ್​ಗಳಲ್ಲಿ ಸೋತರೆ ಟಾಪ್-4 ರಿಂದ ಕೆಳಗಿಳಿಯಲಿದೆ. ಇಲ್ಲಿ ಆರ್​ಸಿಬಿ ತಂಡದ ಮುಂದಿನ ಎದುರಾಳಿ ಯಾರೆಂದು ನೋಡುವುದಾದರೆ…

ಟೈಟಾನ್ಸ್ ಪಡೆಯ ಸವಾಲು:

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ತನ್ನ ಮುಂದಿನ ಪಂದ್ಯವನ್ನು ಏಪ್ರಿಲ್ 24, ಶುಕ್ರವಾರದಂದು ಗುಜರಾತ್ ಟೈಟನ್ಸ್ (GT) ವಿರುದ್ಧ ಆಡಲಿದೆ. ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಪಂದ್ಯವು ತವರಿನಲ್ಲಿ ಆರ್​ಸಿಬಿ ತಂಡದ ಕೊನೆಯ ಮ್ಯಾಚ್. ಹೀಗಾಗಿ ಈ ಪಂದ್ಯದ ಮೂಲಕ ಆರ್​ಸಿಬಿ ಮತ್ತೆ ಗೆಲುವಿನ ಲಯ ಕಂಡುಕೊಳ್ಳಬೇಕಿದೆ.

RCB ತಂಡದ ಮುಂಬರುವ ಪಂದ್ಯಗಳ ವೇಳಾಪಟ್ಟಿ:

ದಿನಾಂಕ ಎದುರಾಳಿ ತಂಡ ಸ್ಥಳ ಸಮಯ (IST)
ಏಪ್ರಿಲ್ 24  ಗುಜರಾತ್ ಟೈಟಾನ್ಸ್ ಬೆಂಗಳೂರು (ತವರು) ರಾತ್ರಿ 7:30
ಏಪ್ರಿಲ್ 27 ಡೆಲ್ಲಿ ಕ್ಯಾಪಿಟಲ್ಸ್ ದೆಹಲಿ ರಾತ್ರಿ 7:30
ಏಪ್ರಿಲ್ 30 ಗುಜರಾತ್ ಟೈಟಾನ್ಸ್ ಅಹಮದಾಬಾದ್ ರಾತ್ರಿ 7:30
ಮೇ 07 ಲಕ್ನೋ ಸೂಪರ್ ಜೈಂಟ್ಸ್ ಲಕ್ನೋ ರಾತ್ರಿ 7:30
ಮೇ 10 ಮುಂಬೈ ಇಂಡಿಯನ್ಸ್ ರಾಯ್‌ಪುರ (ತವರು) ರಾತ್ರಿ 7:30
ಮೇ 13 ಕೋಲ್ಕತ್ತಾ ನೈಟ್ ರೈಡರ್ಸ್ ರಾಯ್‌ಪುರ (ತವರು) ರಾತ್ರಿ 7:30
ಮೇ 17 ಪಂಜಾಬ್ ಕಿಂಗ್ಸ್ ಧರ್ಮಶಾಲಾ ಮಧ್ಯಾಹ್ನ 3:30
ಮೇ 22 ಸನ್‌ರೈಸರ್ಸ್ ಹೈದರಾಬಾದ್ ಹೈದರಾಬಾದ್ ರಾತ್ರಿ 7:30

ಇದನ್ನೂ ಓದಿ: IPL 2026: CSK ತಂಡಕ್ಕೆ ಮತ್ತೊಂದು ಆಘಾತ..!

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ: ರಜತ್ ಪಾಟಿದಾರ್ (ನಾಯಕ), ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ಫಿಲ್ ಸಾಲ್ಟ್, ಜಿತೇಶ್ ಶರ್ಮಾ, ಕೃನಾಲ್ ಪಾಂಡ್ಯ, ಸ್ವಪ್ನಿಲ್ ಸಿಂಗ್, ಟಿಮ್ ಡೇವಿಡ್, ರೊಮಾರಿಯೊ ಶೆಫರ್ಡ್, ಜೇಕಬ್ ಬೆಥೆಲ್, ಜೋಶ್ ಹೇಝಲ್​ವುಡ್, ಯಶ್ ದಯಾಲ್, ಭುವನೇಶ್ವರ್ ಕುಮಾರ್, ನುವಾನ್ ತುಷಾರ, ಯಶ್ ದಯಾಳ್, ರಾಸಿಖ್ ಸಲಾಂ, ವೆಂಕಟೇಶ್ ಅಯ್ಯರ್, ಅಭಿನಂದನ್ ಸಿಂಗ್, ಸುಯಶ್ ಶರ್ಮಾ, ಜೇಕಬ್ ಡಫಿ, ಸಾತ್ವಿಕ್ ದೇಸ್ವಾಲ್, ಮಂಗೇಶ್ ಯಾದವ್, ಜೋರ್ಡನ್ ಕಾಕ್ಸ್, ವಿಕಿ ಓಸ್ತ್ವಾಲ್, ವಿಹಾನ್ ಮಲ್ಹೋತ್ರಾ, ಕಾನಿಷ್ಕ್ ಚೌಹಾನ್.

Source link

Leave a Reply

Your email address will not be published. Required fields are marked *