RCB ಫೈನಲ್ ಮ್ಯಾಚ್: ಇಂದು ರಾತ್ರಿಯಿಂದಲೇ ಬೆಂಗಳೂರಿನ ಈ ಪ್ರಮುಖ ಫ್ಲೈಓವರ್‌ಗಳು ಬಂದ್!

ಬೆಂಗಳೂರು, ಮೇ 31: ಐಪಿಎಲ್​ನ (IPL) ಮಹಾಯುದ್ಧ ಫೈನಲ್ ಹಂತ ತಲುಪಿದೆ. ಇಂದು ಗುಜರಾತ್​ನ ಅಹಮದಾಬಾದ್ ಕ್ರೀಡಾಂಗಣದಲ್ಲಿ ಹಾಲಿ ಚಾಂಪಿಯನ್ ಆರ್​​ಸಿಬಿ ಹಾಗೂ ಗುಜರಾತ್ ಟೈಟನ್ಸ್ ನಡುವೆ 2ನೇ ಟ್ರೋಫಿಗಾಗಿ ಜಿದ್ದಾಜಿದ್ದಿನ ಕಾದಾಟ ನಡೆಯಲಿದೆ. ಸದ್ಯ ನಗರದಲ್ಲಿ ಜನರ ಕ್ರೇಜ್​ ಜೋರಾಗಿದೆ. ಪೊಲೀಸರು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ಫೈನಲ್ ಪಂದ್ಯಾವಳಿ ಹಿನ್ನೆಲೆ ಸಂಭ್ರಮಾಚರಣೆ ಮಾಡುವ ಸಾಧ್ಯತೆ ಇರುವುದರಿಂದ ಬೆಂಗಳೂರು ಸಂಚಾರ ಪೊಲೀಸರು ನಗರದ ಕೆಲ ಫ್ಲೈಓವರ್​ಗಳಲ್ಲಿ ವಾಹನ ಸಂಚಾರ (Traffic advisory) ನಿರ್ಬಂಧಿಸಿದ್ದಾರೆ.

ಮುಖ್ಯಾಂಶಗಳು

  • ಐಪಿಎಲ್ ಫೈನಲ್ ಪಂದ್ಯ ಹಿನ್ನೆಲೆ ಬೆಂಗಳೂರಿನಲ್ಲಿ ವಾಹನ ಸಂಚಾರ ನಿರ್ಬಂಧ
  • ನಗರದ ಪ್ರಮುಖ ಫ್ಲೈಓವರ್‌ಗಳಲ್ಲಿ ಸಂಚಾರ ನಿಷೇಧ
  • ಬೆಂಗಳೂರು ಸಂಚಾರ ಪೊಲೀಸರಿಂದ ಸೂಚನೆ

ಬೆಂಗಳೂರು ಸಂಚಾರ ಪೊಲೀಸ್​ ಟ್ವೀಟ್​

“ಸಂಚಾರ ಸಲಹೆ / Traffic advisory” pic.twitter.com/dkcuEvJOfr

— DCP SOUTH TRAFFIC (@DCPSouthTrBCP) May 31, 2026

ಈ ಕುರಿತಾಗಿ ಬೆಂಗಳೂರು ಸಂಚಾರ ಪೊಲೀಸರು ಟ್ವೀಟ್ ಮಾಡಿದ್ದು, ಇಂದು ನಡೆಯಲಿರುವ ಐಪಿಎಲ್​​​ 19ನೇ ಆವೃತ್ತಿಯ ಫೈನಲ್​ ಪಂದ್ಯದ ಸಮಯದಲ್ಲಿ ಹಾಗೂ ಪಂದ್ಯದ ನಂತರ ಬೆಂಗಳೂರು ನಗರದೆಲ್ಲೆಡೆ ವಿಜಯೋತ್ಸವ ಆಚರಣೆ ಮಾಡುವ ಸಾಧ್ಯತೆಗಳಿರುವುದರಿಂದ ಸಾರ್ವಜನಿಕರ ಸುರಕ್ಷತೆ ಹಾಗೂ ಸುಗಮ ಸಂಚಾರದ ಹಿತದೃಷ್ಟಿಯಿಂದ ಸಂಚಾರ ದಕ್ಷಿಣ ವಿಭಾಗ ವ್ಯಾಪ್ತಿಯ ಎಲಿವೇಟೆಡ್ ಫ್ಲೈಓವರ್​ ಮತ್ತು ಡಬಲ್ ಡೆಕ್ಕರ್​ ಫ್ಲೈಓವರ್​ಗಳಲ್ಲಿ ಇಂದು ರಾತ್ರಿ 11 ಗಂಟೆಯಿಂದ ಜೂನ್​​ 01ರ ಬೆಳಿಗ್ಗೆ 5 ಗಂಟೆವರೆಗೆ ವಾಹನ ಸಂಚಾರವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ ಎಂದು ತಿಳಿಸಲಾಗಿದೆ.

ಯಾವೆಲ್ಲಾ ಫ್ಲೈಓವರ್​ನಲ್ಲಿ ಸಂಚಾರ ನಿಷೇಧ?

ಎಲಿವೇಟೆಡ್ ಫ್ಲೈಓವರ್​: ರೂಪೇನ ಆಗ್ರಹಾರದಿಂದ ಎಲೆಕ್ಟ್ರಾನಿಕ್ ಸಿಟಿ ಹಾಗೂ ಎಲೆಕ್ಟ್ರಾನಿಕ್ ಸಿಟಿಯಿಂದ ರೂಪೇನ ಅಗ್ರಹಾರವರೆಗೆ ಎರಡೂ ಕಡೆ ಮಾರ್ಗದಲ್ಲಿ ಸಂಚಾರ ನಿಷೇಧಿಸಲಾಗಿದೆ.

ಡಬಲ್​ ಡೆಕ್ಕರ್​​ ಫ್ಲೈಓವರ್​: ರಾಗಿಗುಡ್ಡ ಕಡೆಯಿಂದ 5ನೇ ಮೈನ್ ಹೊರವರ್ತುಲ ರಸ್ತೆ ಹಾಗೂ ಹೊಸೂರು ರಸ್ತೆ ಕಡೆಗೆ ತೆರಳುವ ಮತ್ತು 5ನೇ ಮೈನ್ ಹೊರವರ್ತುಲ ರಸ್ತೆಯಿಂದ ರಾಗಿಗುಡ್ಡ ಕಡೆಗೆ ಹೋಗುವ ಎರಡೂ ಕಡೆ ಮಾರ್ಗದಲ್ಲಿ ಸಂಚಾರ ನಿಷೇಧಿಸಲಾಗಿದೆ.

ಇದನ್ನೂ ಓದಿ: IPL Final 2026: ಬೆಂಗಳೂರಲ್ಲಿ ಸಂಭ್ರಮಾಚರಣೆಗೆ ಬ್ರೇಕ್​​, ಅಭಿಮಾನಿಗಳಿಗೆ ಪೊಲೀಸರಿಂದ ಖಡಕ್​​ ಎಚ್ಚರಿಕೆ

ಇನ್ನು ಫ್ಲೈಓವರ್ ಕೆಳಗಿನ ಮುಖ್ಯರಸ್ತೆಗಳು ಸಾರ್ವಜನಿಕ ವಾಹನಗಳ ಸಂಚಾರಕ್ಕೆ ಮುಕ್ತವಾಗಿದ್ದು, ಉಪಯೋಗಿಸಿಕೊಳ್ಳುವಂತೆ ಕೊರಲಾಗಿದೆ. ಸಾರ್ವಜನಿಕರು ಸಹಕರಿಸುವಂತೆ ಕೋರಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Leave a Reply

Your email address will not be published. Required fields are marked *