RCB vs SRH: ಅಂಕಿ ಅಂಶಗಳ ಪ್ರಕಾರ ಯಾರು ಬಲಿಷ್ಠ?

RCB vs SRH: ಅಂಕಿ ಅಂಶಗಳ ಪ್ರಕಾರ ಯಾರು ಬಲಿಷ್ಠ?

ಒಂದೆಡೆ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು… ಮತ್ತೊಂದೆಡೆ ಬಲಿಷ್ಠ ದಾಂಡಿಗರ ಸನ್​ರೈಸರ್ಸ್ ಹೈದರಾಬಾದ್… ಎರಡು ಮದಗಜಗಳ ಕಾಳಗದೊಂದಿಗೆ ಐಪಿಎಲ್ ಸೀಸನ್​-19 ಗೆ ಚಾಲನೆ ದೊರೆಯಲಿದೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಇಂದು (ಮಾ.28) ನಡೆಯಲಿರುವ ಐಪಿಎಲ್​ನ ಉದ್ಘಾಟನಾ ಪಂದ್ಯದಲ್ಲಿ ಭರ್ಜರಿ ಪೈಪೋಟಿ ನಿರೀಕ್ಷಿಸಬಹುದು. ಇಂತಹದೊಂದು ನಿರೀಕ್ಷೆಗೆ ಕಾರಣ ಉಭಯ ತಂಡಗಳಲ್ಲಿರುವ ಸ್ಟಾರ್ ಆಟಗಾರರ ದಂಡು.

ಏಕೆಂದರೆ ಆರ್​ಸಿಬಿ ತಂಡದಲ್ಲಿ ಸ್ಟಾರ್ ಬ್ಯಾಟರ್​ಗಳಿದ್ದರೆ, ಎಸ್​ಆರ್​ಹೆಚ್ ತಂಡದಲ್ಲಿ ಹೊಡಿಬಡಿ ದಾಂಡಿಗರ ದಂಡೇ ಕಾಣಿಸಿಕೊಂಡಿದೆ. ಹೀಗಾಗಿ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಇಂದು ರನ್ ಮಳೆಯನ್ನು ನಿರೀಕ್ಷಿಸಬಹುದು.

  • RCB ಬ್ಯಾಟಿಂಗ್ ಬಲ: ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್, ರಜತ್ ಪಾಟಿದಾರ್, ಟಿಮ್ ಡೇವಿಡ್, ರೊಮಾರಿಯೊ ಶೆರ್ಫಡ್, ಜಿತೇಶ್ ಶರ್ಮಾ
  • SRH ಬ್ಯಾಟಿಂಗ್ ಬಲ: ಅಭಿಷೇಕ್ ಶರ್ಮಾ, ಟ್ರಾವಿಸ್ ಹೆಡ್, ಇಶಾನ್ ಕಿಶನ್, ಹೆನ್ರಿಕ್ ಕ್ಲಾಸೆನ್, ಲಿಯಾಮ್ ಲಿವಿಂಗ್​ಸ್ಟೋನ್

ಕಳೆದ ಸೀಸನ್​ನಲ್ಲಿ ಆರ್​ಸಿಬಿ ತಂಡಕ್ಕೆ ವಿರಾಟ್ ಕೊಹ್ಲಿ ಹಾಗೂ ಫಿಲ್ ಸಾಲ್ಟ್ ಅತ್ಯುತ್ತಮ ಆರಂಭ ಒದಗಿಸಿದ್ದರು. ಈ ಆರಂಭವನ್ನು ಬೃಹತ್ ಮೊತ್ತವನ್ನಾಗಿ ಪರಿವರ್ತಿಸುವಲ್ಲಿ ರಜತ್ ಪಾಟಿದಾರ್, ಟಿಮ್ ಡೇವಿಡ್, ರೊಮಾರಿಯೊ ಶೆರ್ಫಡ್ ಹಾಗೂ ಜಿತೇಶ್ ಶರ್ಮಾ ಯಶಸ್ವಿಯಾಗಿದ್ದರು.

ಇತ್ತ ಎಸ್​ಆರ್​ಹೆಚ್​ ತಂಡದ ಶಕ್ತಿ ಬಿರುಸಿನ ಬ್ಯಾಟಿಂಗ್. ಅಭಿಷೇಕ್ ಶರ್ಮಾ, ಟ್ರಾವಿಸ್ ಹೆಡ್, ಇಶಾನ್ ಕಿಶನ್ ಮತ್ತು ಹೆನ್ರಿಕ್ ಕ್ಲಾಸೆನ್ ಹೊಡಿಬಡಿ ಬ್ಯಾಟಿಂಗ್​ಗೆ ಹೆಸರುವಾಸಿ. ಇದೀಗ ಲಿಯಾಮ್ ಲಿವಿಂಗ್​ಸ್ಟೋನ್ ಕೂಡ ತಂಡಕ್ಕೆ ಸೇರ್ಪಡೆಯಾಗಿರುವುದರಿಂದ ಬೃಹತ್ ಮೊತ್ತವನ್ನು ನಿರೀಕ್ಷಿಸಬಹುದು.

ದುರ್ಬಲ ಬೌಲಿಂಗ್ ಪಡೆ:

ಉಭಯ ತಂಡಗಳಲ್ಲಿ ಸ್ಟಾರ್ ಬ್ಯಾಟರ್​ಗಳಿದ್ದರೂ ಬೌಲಿಂಗ್ ವಿಭಾಗವು ದುರ್ಬಲವಾಗಿದೆ. ಅಂದರೆ ಆರ್​ಸಿಬಿ ಪರ ಭುವನೇಶ್ವರ್ ಕುಮಾರ್ ಬಿಟ್ಟರೆ, ಅತ್ಯುತ್ತಮ ಎನಿಸಿಕೊಳ್ಳುವಂತಹ ಮತ್ತೋರ್ವ ವೇಗಿ ಇಲ್ಲ. ಇನ್ನು ಸ್ಪಿನ್ನರ್ ಆಗಿ ಕೃನಾಲ್ ಪಾಂಡ್ಯ ಅವರನ್ನೇ ಆರ್​ಸಿಬಿ ನೆಚ್ಚಿಕೊಂಡಿದೆ.

ಅತ್ತ ಸನ್​ರೈಸರ್ಸ್ ಹೈದರಾಬಾದ್ ಕಥೆ ಕೂಡ ಬೇರೆಯಲ್ಲ. ಎಸ್​ಆರ್​ಹೆಚ್ ತಂಡದ ಪ್ರಮುಖ ವೇಗಿಯಾಗಿ ಕಾಣಿಸಿಕೊಳ್ಳುತ್ತಿರುವುದು ಮಾಜಿ ಆರ್​ಸಿಬಿ ಬೌಲರ್ ಹರ್ಷಲ್ ಪಟೇಲ್. ಇನ್ನು ಸ್ಪಿನ್ನರ್ ಜವಾಬ್ದಾರಿ ಲಿಯಾಮ್ ಲಿವಿಂಗ್​ಸ್ಟೋನ್ ಹೆಗಲೇರಲಿದೆ.

ಇಬ್ಬರು ಪ್ರಮುಖರು ಅಲಭ್ಯ:

ಆರ್​ಸಿಬಿ ತಂಡದ ಪ್ರಮುಖ ವೇಗಿ ಜೋಶ್ ಹೇಝಲ್​ವುಡ್ ಫಿಟ್​ನೆಸ್ ಕಾರಣದಿಂದಾಗಿ ಮೊದಲ ಪಂದ್ಯದಿಂದ ಹೊರಗುಳಿಯುತ್ತಿದ್ದಾರೆ. ಇದೇ ಕಾರಣದಿಂದಾಗಿ ಆರ್​ಸಿಬಿ ತಂಡದ ಬೌಲಿಂಗ್ ವಿಭಾಗ ದುರ್ಬಲವಾಗಿದೆ ಎನ್ನಬಹುದು.

ಅತ್ತ ಸನ್​ರೈಸರ್ಸ್ ಹೈದರಾಬಾದ್ ತಂಡದಲ್ಲಿರುವ ಏಕೈಕ ಅನುಭವಿ ವೇಗಿ ಪ್ಯಾಟ್ ಕಮಿನ್ಸ್ ಕೂಡ ಫಿಟ್​ನೆಸ್ ಸಮಸ್ಯೆ ಕಾರಣ ಆರಂಭಿಕ ಪಂದ್ಯಗಳಿಗೆ ಅಲಭ್ಯರಾಗುತ್ತಿದ್ದಾರೆ. ಹೀಗಾಗಿ ಆರ್​ಸಿಬಿ ತಂಡಕ್ಕಿಂತ ಎಸ್​ಆರ್​ಹೆಚ್ ತಂಡದ ಬೌಲಿಂಗ್ ವಿಭಾಗ ಅತ್ಯಂತ ದುರ್ಬಲವಾಗಿದೆ ಎನ್ನಬಹುದು.

ಮುಖಾಮುಖಿ ದಾಖಲೆ:

ಆರ್​ಸಿಬಿ ಮತ್ತು ಎಸ್​ಆರ್​ಹೆಚ್ ತಂಡಗಳು ಈವರೆಗೆ 26 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಈ ವೇಳೆ ಸನ್​ರೈಸರ್ಸ್ ಹೈದರಾಬಾದ್ ತಂಡವು 13 ಮ್ಯಾಚ್​ಗಳಲ್ಲಿ ಜಯ ಸಾಧಿಸಿದೆ. ಇನ್ನು ಆರ್​ಸಿಬಿ ಗೆದ್ದಿರುವುದು 11 ಪಂದ್ಯಗಳಲ್ಲಿ ಮಾತ್ರ. ಈ ಅಂಕ ಅಂಶಗಳನ್ನು ಗಮನಿಸಿದರೆ ಆರ್​ಸಿಬಿಗಿಂತ ಸನ್​ರೈಸರ್ಸ್ ಹೈದರಾಬಾದ್ ತಂಡವು ಮೇಲುಗೈ ಹೊಂದಿದೆ.

ಇದಾಗ್ಯೂ ಕಳೆದ 5 ಪಂದ್ಯಗಳ ಮುಖಾಮುಖಿಯಲ್ಲಿ ಆರ್​ಸಿಬಿ 3 ಬಾರಿ ಎಸ್​ಆರ್​ಹೆಚ್ ತಂಡಕ್ಕೆ ಸೋಲುಣಿಸಿದೆ. ಹೀಗಾಗಿ ಪ್ರಸ್ತುತ ಆರ್​ಸಿಬಿ ತಂಡ ಸನ್​ರೈಸರ್ಸ್ ತಂಡಕ್ಕಿಂತ ಬಲಿಷ್ಠವಾಗಿದೆ ಎನ್ನಬಹುದು.

ಇನ್ನು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಉಭಯ ತಂಡಗಳು 8 ಬಾರಿ ಮುಖಾಮುಖಿಯಾಗಿದ್ದಾರೆ. ಈ ವೇಳೆ ಆರ್​ಸಿಬಿ ತಂಡವು 5 ಮ್ಯಾಚ್​ಗಳಲ್ಲಿ ಗೆಲುವು ದಾಖಲಿಸಿದೆ. ಅಂದರೆ ತವರು ಮೈದಾನದಲ್ಲಿ ಎಸ್​ಆರ್​ಹೆಚ್ ವಿರುದ್ಧ ಆರ್​ಸಿಬಿ ಉತ್ತಮ ದಾಖಲೆ ಹೊಂದಿದೆ.

ಹೀಗಾಗಿ ಇಂದಿನ ಪಂದ್ಯದಲ್ಲೂ ಸನ್​ರೈಸರ್ಸ್ ಹೈದರಾಬಾದ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವೇ ಗೆಲ್ಲುವ ಫೇವರೇಟ್ ತಂಡವಾಗಿ ಗುರುತಿಸಿಕೊಂಡಿದೆ.

ಸನ್‌ರೈಸರ್ಸ್ ಹೈದರಾಬಾದ್ ತಂಡ: ಪ್ಯಾಟ್ ಕಮ್ಮಿನ್ಸ್ (ನಾಯಕ), ಟ್ರಾವಿಸ್ ಹೆಡ್, ಅಭಿಷೇಕ್ ಶರ್ಮಾ, ಅನಿಕೇತ್ ವರ್ಮಾ, ಸ್ಮರಣ್ ರವಿಚಂದ್ರನ್, ಇಶಾನ್ ಕಿಶನ್ (ಹಂಗಾಮಿ ನಾಯಕ), ಹೆನ್ರಿಕ್ ಕ್ಲಾಸೆನ್, ನಿತೀಶ್ ಕುಮಾರ್ ರೆಡ್ಡಿ, ಹರ್ಷ್ ದುಬೆ, ಕಮಿಂದು ಮೆಂಡಿಸ್, ಹರ್ಷಲ್ ಪಟೇಲ್, ಬ್ರೈಡನ್ ಕಾರ್ಸ್​, ಜಯದೇವ್ ಉನದ್ಕತ್, ಎಶಾನ್ ಮಾಲಿಂಗ, ಝೀಶಾನ್ ಅನ್ಸಾರಿ, ಶಿವಾಂಗ್ ಕುಮಾರ್, ಸಲೀಲ್ ಅರೋರ, ಸಾಕಿಬ್ ಹುಸೈನ್, ಓಂಕಾರ್ ತರ್ಮಲೆ, ಅಮಿತ್ ಕುಮಾರ್, ಪ್ರಫುಲ್ ಹಿಂಗೆ, ಕ್ರೇನ್ಸ್ ಫುಲೆಟ್ರಾ, ಲಿಯಾಮ್ ಲಿವಿಂಗ್​ಸ್ಟೋನ್ಸ್, ಶಿವಂ ಮಾವಿ, ಡೇವಿಡ್ ಪೇನ್.

ಇದನ್ನೂ ಓದಿ: PSLನ ಬಿಗ್ ಆಫರ್ ತ್ಯಜಿಸಿ IPLಗೆ ಬಂದ ಆಸ್ಟ್ರೇಲಿಯನ್ ವೇಗಿ..!

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ: ರಜತ್ ಪಾಟಿದಾರ್ (ನಾಯಕ), ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ಫಿಲ್ ಸಾಲ್ಟ್, ಜಿತೇಶ್ ಶರ್ಮಾ, ಕೃನಾಲ್ ಪಾಂಡ್ಯ, ಸ್ವಪ್ನಿಲ್ ಸಿಂಗ್, ಟಿಮ್ ಡೇವಿಡ್, ರೊಮಾರಿಯೊ ಶೆಫರ್ಡ್, ಜೇಕಬ್ ಬೆಥೆಲ್, ಜೋಶ್ ಹೇಝಲ್​ವುಡ್, ಯಶ್ ದಯಾಲ್, ಭುವನೇಶ್ವರ್ ಕುಮಾರ್, ನುವಾನ್ ತುಷಾರ, ಯಶ್ ದಯಾಳ್, ರಾಸಿಖ್ ಸಲಾಂ, ವೆಂಕಟೇಶ್ ಅಯ್ಯರ್, ಅಭಿನಂದನ್ ಸಿಂಗ್, ಸುಯಶ್ ಶರ್ಮಾ, ಜೇಕಬ್ ಡಫಿ, ಸಾತ್ವಿಕ್ ದೇಸ್ವಾಲ್, ಮಂಗೇಶ್ ಯಾದವ್, ಜೋರ್ಡನ್ ಕಾಕ್ಸ್, ವಿಕಿ ಓಸ್ತ್ವಾಲ್, ವಿಹಾನ್ ಮಲ್ಹೋತ್ರಾ, ಕಾನಿಷ್ಕ್ ಚೌಹಾನ್.

 

Source link

Leave a Reply

Your email address will not be published. Required fields are marked *