Renuka Swamy case: ಹೆಡ್​​ಫೋನ್ ಧರಿಸಿ ಬಂದ ಪವಿತ್ರಾ ಗೌಡ, ಜಡ್ಜ್ ತರಾಟೆ – Kannada News | Renuka Swamy case: Pavithra Gowda used Headphones during court trail

ರೇಣುಕಾ ಸ್ವಾಮಿ (Renuka Swamy) ಕೊಲೆ ಪ್ರಕರಣದ ವಿಚಾರಣೆ ಭರದಿಂದ ಸಾಗಿದೆ. ಪ್ರತಿದಿನ ಮಹತ್ವದ ಸಾಕ್ಷಿಗಳ ವಿಚಾರಣೆ ಮಾಡುವ ಜೊತೆಗೆ, ಹೊಸ-ಹೊಸ ಅರ್ಜಿಗಳ ಕುರಿತಾಗಿಯೂ ವಿಚಾರಣೆ ನಡೆಯುತ್ತಿದೆ. ಆರೋಪಿಗಳೆಲ್ಲ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾಗಲು ಅನುಮತಿ ನೀಡಿದ್ದು, ವಿಚಾರಣೆ ವೇಳೆ ಪ್ರತಿಯೊಬ್ಬ ಆರೋಪಿಯೂ ತಾವಿರುವ ಜೈಲಿನಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾಗುತ್ತಿದ್ದಾರೆ. ಇಂದೂ ಸಹ ಎಲ್ಲರೂ ವಿಚಾರಣೆಗೆ ಹಾಜರಾಗಿದ್ದರು. ಆದರೆ ಪವಿತ್ರಾ ಗೌಡ ಮಾಡಿದ ಕಾರ್ಯಕ್ಕೆ ಜಡ್ಜ್ ಸಿಟ್ಟಾದರು.

ಎಲ್ಲರೂ ಸಮಯಕ್ಕೆ ಸರಿಯಾಗಿ ವಿಚಾರಣೆಗೆ ಹಾಜರಾದರು. ಆದರೆ ಪವಿತ್ರಾ ಗೌಡ ಮಾತ್ರ ತುಸು ತಡವಾಗಿ ವಿಚಾರಣೆಗೆ ಬಂದರು. ಆದರೆ ಈ ವೇಳೆ ಅವರು ಹೆಡ್​ಫೋನ್ ಧರಿಸಿದ್ದನ್ನು ಜಡ್ಜ್ ಗಮನಿಸಿದರು. ಇದು ಅವರ ಸಿಟ್ಟಿಗೆ ಕಾರಣವಾಯ್ತು? ‘ಯಾಕೆ ತಡವಾಗಿ ಬಂದಿರಿ? ಹೆಡ್​ಫೋನ್ಸ್ ಕೊಟ್ಟವರು ಯಾರು?, ಕಾನ್ಫರೆನ್ಸ್ ಸಮಯದಲ್ಲಿ ಹೆಡ್​​ಫೋನ್ಸ್ ಬಳಕೆಗೆ ಅವಕಾಶ ಇಲ್ಲ ಎಂಬುದು ಗೊತ್ತಿಲ್ಲವೆ?’ ಎಂದು ಸಿಟ್ಟಾದರು. ಆದರೆ ಪವಿತ್ರಾ ಗೌಡ, ತಾವು ಹೆಡ್​​ಫೋನ್ಸ್ ಬಳಸಿಲ್ಲ ಎಂದರು ಆದರೆ ಜಡ್ಜ್, ತಾವು ಖುದ್ದು, ಪವಿತ್ರಾ, ಹೆಡ್​​ಫೋನ್ಸ್ ಬಳಸಿದ್ದನ್ನು ಗಮನಿಸಿದ್ದೇನೆ’ ಎಂದರು.

ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಜಡ್ಜ್, ‘ಹೆಡ್​​ಫೋನ್ಸ್ ಕೊಟ್ಟವರು ಯಾರು? ಮಹಿಳಾ ಸೆಲ್​​ನಲ್ಲಿ ಆರೋಪಿಗಳಿಗೆ ಅಧಿಕಾರಿಗಳು ಹೆಡ್​​ಫೋನ್ಸ್ ಕೊಡುತ್ತಿದ್ದಾರೆಯೇ?’ ಎಂದು ಪ್ರಶ್ನಿಸಿದ ಜಡ್ಜ್, ಈ ಬಗ್ಗೆ ವಿವರಣೆ ನೀಡುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಇದನ್ನೂ ಓದಿ:ರೇಣುಕಾ ಸ್ವಾಮಿ ಪ್ರಕರಣ: ಆರೋಪಿ ಪವನ್ ವಕೀಲರಿಗೆ ದಂಡ

ಬಳಿಕ ನಡೆದ ವಿಚಾರಣೆಯಲ್ಲಿ ದರ್ಶನ್ ಪರ ವಕೀಲರು ಇದನ್ನೇ ತಮ್ಮ ವಾದಕ್ಕೆ ಬಳಸಿಕೊಂಡರು. ದರ್ಶನ್, ಖುದ್ದು ನ್ಯಾಯಾಲಯದಲ್ಲಿ ಹಾಜರಿರಬೇಕು ಎಂದು ಸಲ್ಲಿಸಲಾಗಿದ್ದ ಅರ್ಜಿಯ ಕುರಿತು ವಾದ ಮಂಡಿಸಿದ ದರ್ಶನ್ ಪರ ವಕೀಲರು, ‘ಸಾಕ್ಷಿಗಳ ವಿಚಾರಣೆ ವೇಳೆ ಮಾಹಿತಿ ಪಡೆಯಲು, ಚರ್ಚಿಸಲು ದರ್ಶನ್​​ರ ನ್ಯಾಯಾಲಯಕ್ಕೆ ಹಾಜರಾಗಬೇಕಿದೆ. ವಿಡಿಯೋ ಕಾನ್ಫರೆನ್ಸ್​​ನಲ್ಲಿ ಹೆಡ್ ಫೋನ್ಸ್​​ಗೆ ಅವಕಾಶ ಇಲ್ಲದೇ ಇರುವ ಕಾರಣ, ಚರ್ಚೆ ನಡೆಸಲು ಸಾಧ್ಯವಾಗುವುದಿಲ್ಲ’ ಎಂದು ವಾದಿಸಿದರು. ಆದೇಶವನ್ನು ನ್ಯಾಯಾಲಯವು ಆಗಸ್ಟ್ 17ಕ್ಕೆ ಕಾಯ್ದಿರಿಸಿದೆ.

ರೇಣುಕಾ ಸ್ವಾಮಿ ಕೊಲೆ ಪ್ರಕರಣದ ವಿಚಾರಣೆ 59ನೇ ಸಿಸಿಎಚ್ ನ್ಯಾಯಾಲಯದಲ್ಲಿ ಚಾಲ್ತಿಯಲ್ಲಿದೆ. 14ನೇ ಆರೋಪಿ ಆಗಿರುವ ಪ್ರದೋಶ್, ತಮ್ಮನ್ನು ಮಾಫಿ ಸಾಕ್ಷಿಯಾಗಿ ಪರಿಗಣಿಸುವಂತೆ ನ್ಯಾಯಾಲಯಕ್ಕೆ ಅರ್ಜಿ ಹಾಕಿದ್ದಾರೆ. ಆದರೆ ಅವರ ಸಾಕ್ಷ್ಯವನ್ನು ಪರಿಗಣನೆ ಮಾಡದಂತೆ ದರ್ಶನ್ ಪರ ವಕೀಲರು ಮನವಿ ಸಲ್ಲಿಸಿದ್ದು, ಇದೀಗ ಹೈಕೋರ್ಟ್​​ಗೆ ಸಹ ಅರ್ಜಿ ಹಾಕಿದ್ದಾರೆ. ಪ್ರದೋಶ್, ಹೇಳಿಕೆ ಈ ಪ್ರಕರಣದಲ್ಲಿ ಭಾರಿ ಮಹತ್ವವನ್ನು ಪಡೆದುಕೊಂಡಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 4:50 pm, Thu, 13 August 26

Source link

Leave a Reply

Your email address will not be published. Required fields are marked *