ನವದೆಹಲಿ, ಮೇ 13: ಭಾರತದ ಚಿಲ್ಲರೆ ಹಣದುಬ್ಬರ (Retail Inflation) 2026ರ ಏಪ್ರಿಲ್‌ನಲ್ಲಿ ಏರಿಕೆಯಾಗಿದ್ದು, ಜನಸಾಮಾನ್ಯರ ಜೇಬಿಗೆ ಸ್ವಲ್ಪ ಹೆಚ್ಚಿನ ಹೊರೆಯಾಗಿದೆ. ಕೇಂದ್ರ ಸಾಂಖ್ಯಿಕ ಮತ್ತು ಯೋಜನಾ ಅನುಷ್ಠಾನ (Ministry of Statistics and Programme Implementation) ಸಚಿವಾಲಯ ನಿನ್ನೆ ಮಂಗಳವಾರ (ಮೇ 12) ಬಿಡುಗಡೆ ಮಾಡಿದ ಅಂಕಿಅಂಶಗಳ ಪ್ರಕಾರ, ಮಾರ್ಚ್‌ನಲ್ಲಿ ಶೇ. 3.40 ರಷ್ಟಿದ್ದ ಹಣದುಬ್ಬರವು ಏಪ್ರಿಲ್‌ನಲ್ಲಿ ಶೇ. 3.48 ಕ್ಕೆ ತಲುಪಿದೆ.
ಆಹಾರ ಪದಾರ್ಥಗಳ ಬೆಲೆ ಏರಿಕೆ ದರವು ಶೇ. 3.87 ರಿಂದ ಶೇ. 4.20 ಕ್ಕೆ ಹೆಚ್ಚಿದೆ. ಟೊಮೆಟೊ ಹಣದುಬ್ಬರವು ಶೇ. 35.28 ರಷ್ಟು ದಾಖಲಾಗಿದ್ದು, ಅಡುಗೆ ಮನೆಯ ಬಜೆಟ್ ಮೇಲೆ ಪರಿಣಾಮ ಬೀರಿದೆ. ಬೆಳ್ಳಿ ಆಭರಣಗಳ ಬೆಲೆಯಲ್ಲಿ ಶೇ. 144.34 ರಷ್ಟು ಭಾರಿ ಏರಿಕೆಯಾಗಿದೆ. ಚಿನ್ನ, ವಜ್ರ ಮತ್ತು ಪ್ಲಾಟಿನಂ ಆಭರಣಗಳ ಬೆಲೆ ಕೂಡ ಶೇ. 40.72 ರಷ್ಟು ಹೆಚ್ಚಾಗಿದೆ. ಕೊಬ್ಬರಿ (ಶೇ. 44.55) ಮತ್ತು ಹೂಕೋಸು (ಶೇ. 25.58) ಬೆಲೆಗಳೂ ಗಣನೀಯವಾಗಿ ಏರಿವೆ.
ಇದನ್ನೂ ಓದಿ: ಈವರೆಗೆ ಇದ್ದದ್ದು ಕಷ್ಟ ಅಲ್ಲ, ಮುಂದೆ ಕಾದೈತಾ ದೊಡ್ಡ ಸಂಕಷ್ಟ? ಉದಯ್ ಕೋಟಕ್ ಕೊಟ್ಟಿದ್ದಾರೆ ದೊಡ್ಡ ಎಚ್ಚರಿಕೆ
ಬೆಲೆ ಇಳಿಕೆಯಾದ ವಸ್ತುಗಳು: ಆಲೂಗಡ್ಡೆ (-23.69%) ಮತ್ತು ಈರುಳ್ಳಿ (-17.67%) ಬೆಲೆಗಳಲ್ಲಿ ಇಳಿಕೆ ಕಂಡುಬಂದಿರುವುದು ಗ್ರಾಹಕರಿಗೆ ಸ್ವಲ್ಪ ಸಮಾಧಾನ ತಂದಿದೆ. ಅಲ್ಲದೆ ಮೋಟಾರ್ ಕಾರ್, ಜೀಪ್ ಮತ್ತು ಏರ್ ಕಂಡೀಷನರ್ ಬೆಲೆಗಳೂ ತುಸು ಕಡಿಮೆಯಾಗಿವೆ. ಇದರಿಂದ ಒಟ್ಟಾರೆ ಹಣದುಬ್ಬರ ತೀರಾ ಹೆಚ್ಚದಂತೆ ನಿಯಂತ್ರಣದಲ್ಲಿರಲು ಸಾಧ್ಯವಾಗಿದೆ.
ಗ್ರಾಮೀಣ vs ನಗರ: ಗ್ರಾಮೀಣ ಭಾಗದಲ್ಲಿ ಹಣದುಬ್ಬರ ಶೇ. 3.74 ರಷ್ಟಿದ್ದರೆ, ನಗರ ಪ್ರದೇಶಗಳಲ್ಲಿ ಇದು ಶೇ. 3.16 ರಷ್ಟಿದೆ.
ತರಕಾರಿಗಳಲ್ಲಿ ಟೊಮೆಟೊ ಮತ್ತು ಹೂಕೋಸು ಹಾಗೂ ಅಮೂಲ್ಯ ಲೋಹಗಳ ಬೆಲೆ ಏರಿಕೆಯು ಏಪ್ರಿಲ್ ತಿಂಗಳ ಹಣದುಬ್ಬರ ಹೆಚ್ಚಾಗಲು ಮುಖ್ಯ ಕಾರಣಗಳಾಗಿವೆ.
ಇದನ್ನೂ ಓದಿ: I4C ಮತ್ತು RBIH ಮಧ್ಯೆ ಒಪ್ಪಂದ; ಭಾರತೀಯರಿಗೆ ಅತ್ಯಾಧುನಿಕ ಸೈಬರ್ ರಕ್ಷಾ ಕವಚ: ಅಮಿತ್ ಶಾ ಘೋಷಣೆ
ಆರ್ಬಿಐ ಗುರಿಯೊಳಗೆಯೇ ಇರುವ ಹಣದುಬ್ಬರ
ಹಣದುಬ್ಬರವು ಶೇ. 4ರಷ್ಟು ಇರಬೇಕೆಂದು ಸರ್ಕಾರವು ಆರ್ಬಿಐಗೆ ಗುರಿ ನೀಡಿದೆ. ಈ ಗುರಿ ಈಡೇರಿಸುವ ನಿಟ್ಟಿನಲ್ಲಿ ಆರ್ಬಿಐ ಹಣದುಬ್ಬರ ತಾಳಿಕೆ ಮಿಡಿಯಾಗಿ ಶೇ. 2ರಿಂದ 4 ಅನ್ನು ನಿಗದಿ ಮಾಡಿದೆ. ಹಣದುಬ್ಬರವು ಈ ವ್ಯಾಪ್ತಿಯೊಳಗೆ ಇರಿಸುವ ಗುರಿ ಆರ್ಬಿಐನದ್ದು. ಈಗ್ಗೆ ಹಲವು ತಿಂಗಳುಗಳಿಂದ ಹಣದುಬ್ಬರು ಆರ್ಬಿಐನ ತಾಳಿಕೆ ವ್ಯಾಪ್ತಿಯೊಳಗೆಯೇ ಇರುವುದು ಗಮನಾರ್ಹ.
ಆದರೆ, ಮೇ ತಿಂಗಳಲ್ಲಿ ಚಿನ್ನ, ಇಂಧನ ಇತ್ಯಾದಿ ಬೆಲೆಗಳು ಅಧಿಕಗೊಳ್ಳುವುದರಿಂದ ಹಣದುಬ್ಬರ ಶೇ. 4 ಅನ್ನು ದಾಟಿ ಹೋಗುವ ಸಾಧ್ಯತೆ ಇದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
