ಸಂಚಯ ಕನ್ವರ್ಟರ್Image Credit source: Screenshot @ converter.sanchaya.net
ಬೆಂಗಳೂರು, ಜುಲೈ 23: ಕನ್ನಡದ ಮುದ್ರಣ ಕ್ಷೇತ್ರದ ದಶಕಗಳ ಸಮಸ್ಯೆಗೆ ಮತ್ತೊಂದು ಪರಿಹಾರ ಲಭ್ಯವಾಗುತ್ತಿದೆ. ಶ್ರೀಲಿಪಿ, ನುಡಿ, ಬರಹ ಇತ್ಯಾದಿ ಆಸ್ಕಿ (ASCII) ಫಾಂಟ್ಗಳಿಂದ ಯೂನಿಕೋಡ್ಗೆ ಪರಿವರ್ತಿಸಬಲ್ಲ, ಮತ್ತು ಯೂನಿಕೋಡ್ನಿಂದ ವಿವಿಧ ಆಸ್ಕಿ ಫಾಂಟ್ಗಳಿಗೆ ಪರಿವರ್ತಿಸಬಲ್ಲ ಸಮಗ್ರ ಕನ್ವರ್ಟರ್ವೊಂದನ್ನು ಕನ್ನಡದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಸಂಚಿ ಫೌಂಡೇಶನ್ನ ಸಂಚಯ ಸಂಸ್ಥೆಯು ಈ ಕನ್ವರ್ಟ್ ಅಭಿವೃದ್ಧಿಪಡಿಸುತ್ತಿರುವುದು.
ಈಗಾಗಲೇ ಕನ್ನಡದಲ್ಲಿ ಕೆಲವು ಕನ್ವರ್ಟರ್ಗಳು ಲಭ್ಯ ಇದ್ದರೂ ಯಾವುದೂ ಕೂಡ ಸಮಗ್ರ ಫಾಂಟ್ ಪರಿವರ್ತನೆ ಕೊಡುವುದಿಲ್ಲ. ಸಂಚಯ ಕನ್ವರ್ಟರ್ನಲ್ಲಿ ಯಾವುದೇ ASCII ಫಾಂಟ್ಗಳ ಪಠ್ಯವನ್ನು ಯೂನಿಕೋಡ್ ಪಠ್ಯವಾಗಿ ಪರಿವರ್ತಿಸಬಹುದು. ಯೂನಿಕೋಡ್ ಪಠ್ಯವನ್ನು ಯಾವುದೇ ASCII ಪಠ್ಯಗಳಿಗೆ ಕನ್ವರ್ಟ್ ಮಾಡಬಹುದು.
ಇದನ್ನೂ ಓದಿ: ಸೈಲೆಂಟಾಗಿ ನಿಮ್ಮ ಕ್ರೆಡಿಟ್ ಲಿಮಿಟ್ಗೆ ಕತ್ತರಿ ಬೀಳಬಹುದು; ಬ್ಯಾಂಕುಗಳು ಯಾಕೆ ಈ ಕೆಲಸ ಮಾಡುತ್ತವೆ ಗೊತ್ತಾ?
ಸಂಚಯ ಕನ್ವರ್ಟರ್ ಸದ್ಯ ಅಭಿವೃದ್ಧಿ ಹಂತದಲ್ಲಿದೆ. ಶ್ರೀಲಿಪಿ, ನುಡಿ, ಬರಹ, ಆಕೃತಿ, ಪ್ರಕಾಶಕ್ ಫಾಂಟ್ಗಳನ್ನು ಯುನಿಕೋಡ್ಗೆ, ಹಾಗೂ ಯುನಿಕೋಡ್ನಿಂದ ಆ ಫಾಂಟ್ಗಳಿಗೆ ಪರಿವರ್ತನೆ ಮಾಡುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ. ಸದ್ಯಕ್ಕೆ ಟಿವಿ9 ಪರಿಶೀಲನೆ ನಡೆಸಿದಾಗ ಯೂನಿಕೋಡ್ನಿಂದ ನುಡಿಗೆ ಕನ್ವರ್ಶನ್ ಸರಿಯಾಗಿ ಆಗುತ್ತಿದೆ. ಮುಂದಿ ದಿನಗಳಲ್ಲಿ ಎಲ್ಲಾ ASCII ಫಾಂಟ್ಗಳ ಪರಿವರ್ತನೆ ಸಾಧ್ಯವಾಗಬಹುದು.
ಈ ಕನ್ವರ್ಟರ್ ಲಿಂಕ್ ಇಲ್ಲಿದೆ: converter.sanchaya.net
ಯಾರಿಗೆ ಉಪಯೋಗ ಈ ಕನ್ವರ್ಟರ್?
ಮುದ್ರಣ ಕ್ಷೇತ್ರಕ್ಕೆ ಈ ಕನ್ವರ್ಟರ್ ನೆರವಾಗುತ್ತದೆ. ಇಂಟರ್ನೆಟ್ನಲ್ಲಿ ಕನ್ನಡ ಅಕ್ಷರಗಳೆಲ್ಲವೂ ಯೂನಿಕೋಡ್ ಆಗಿ ಹೋಗಿವೆಯಾದರೂ, ಹೆಚ್ಚಿನ ಮುದ್ರಣ ಸಂಸ್ಥೆಗಳು ಮತ್ತು ಡಿಟಿಪಿ ಸೆಂಟರ್ಗಳು ಬೇರೆ ಬೇರೆ ಕಾರಣಗಳಿಗೆ ಈಗಲೂ ಕೂಡ ASCII ಫಾಂಟ್ಗಳನ್ನೇ ಬಳಸುತ್ತಿರುವುದುಂಟು. ಹೀಗಾಗಿ, ಕನ್ವರ್ಟರ್ ಅಗತ್ಯತೆ ಇನ್ನೂ ಇದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
