ಜ್ಯೋತಿಷ್ಯ ಶಾಸ್ತ್ರದಲ್ಲಿ ಶನಿ ದೇವನನ್ನು ನ್ಯಾಯದ ದೇವತೆ ಮತ್ತು ಕರ್ಮಫಲ ದಾತ ಎಂದು ಕರೆಯಲಾಗುತ್ತದೆ. ಶನಿಯು ಅತ್ಯಂತ ನಿಧಾನವಾಗಿ ಚಲಿಸುವ ಗ್ರಹವಾಗಿರುವುದರಿಂದ, ಆತನ ಚಲನೆ ಅಥವಾ ನಕ್ಷತ್ರ ಬದಲಾವಣೆಯು ಮಾನವ ಜೀವನದ ಮೇಲೆ ದೀರ್ಘಕಾಲೀನ ಹಾಗೂ ಆಳವಾದ ಪರಿಣಾಮವನ್ನು ಬೀರುತ್ತದೆ. ದೃಕ್ ಪಂಚಾಂಗದ ಲೆಕ್ಕಾಚಾರಗಳ ಪ್ರಕಾರ, ಜುಲೈ 2, 2026 ರಂದು ಶನಿ ದೇವನು ತನ್ನ ನಕ್ಷತ್ರ ಬದಲಾವಣೆಯ ಮೂಲಕ ಬ್ರಹ್ಮಾಂಡದಲ್ಲಿ ದೊಡ್ಡ ಕ್ರಾಂತಿಯನ್ನು ಸೃಷ್ಟಿಸಲಿದ್ದಾನೆ. ಈ ದಿನ ಶನಿಯು ರೇವತಿ ನಕ್ಷತ್ರದ ಎರಡನೇ ಪಾದಕ್ಕೆ (ಹಂತಕ್ಕೆ) ಪ್ರವೇಶಿಸಲಿದ್ದಾನೆ. ಜ್ಯೋತಿಷಿಗಳ ಪ್ರಕಾರ, ಶನಿಯ ಈ ಸೂಕ್ಷ್ಮ ನಕ್ಷತ್ರ ಪರಿವರ್ತನೆಯು ಮುಖ್ಯವಾಗಿ ಮೇಷ, ವೃಷಭ, ಸಿಂಹ ಮತ್ತು ತುಲಾ ರಾಶಿಯವರಿಗೆ ತೀವ್ರ ಸವಾಲುಗಳನ್ನು ತರಲಿದ್ದು, ಒಂದು ರೀತಿಯ ಅಗ್ನಿ ಪರೀಕ್ಷೆಯ ಅವಧಿಯಾಗಲಿದೆ.
ಏನಿದು ಶನಿಯ ನಕ್ಷತ್ರ ಪಾದ ಬದಲಾವಣೆ?
ಜ್ಯೋತಿಷ್ಯ ಶಾಸ್ತ್ರದಲ್ಲಿ ಪ್ರತಿಯೊಂದು ನಕ್ಷತ್ರವನ್ನು ನಾಲ್ಕು ಹಂತಗಳಾಗಿ ಅಥವಾ ‘ಪಾದ’ಗಳಾಗಿ ವಿಂಗಡಿಸಲಾಗುತ್ತದೆ. ಒಂದು ಗ್ರಹವು ಒಂದು ಪಾದದಿಂದ ಮತ್ತೊಂದು ಪಾದಕ್ಕೆ ಚಲಿಸಿದಾಗ ಅದರ ಶಕ್ತಿ ಮತ್ತು ಪ್ರಭಾವದ ಶೈಲಿಯಲ್ಲಿ ಮಹತ್ವದ ಬದಲಾವಣೆಯಾಗುತ್ತದೆ. ರೇವತಿ ನಕ್ಷತ್ರವು ಭೌತಿಕ ಜಗತ್ತಿನ ಪೂರ್ಣಗೊಳಿಸುವಿಕೆ, ಆಧ್ಯಾತ್ಮಿಕ ಪ್ರಯಾಣ, ಪ್ರಮುಖ ಬದಲಾವಣೆ ಹಾಗೂ ಹೊಸ ಆರಂಭವನ್ನು ಸೂಚಿಸುತ್ತದೆ. ಇಂತಹ ರೇವತಿ ನಕ್ಷತ್ರದ ಎರಡನೇ ಪಾದಕ್ಕೆ ಶನಿಯು ಪ್ರವೇಶಿಸುತ್ತಿರುವುದರಿಂದ, ಇದು ಅನೇಕ ಜನರ ಜೀವನದಲ್ಲಿ ಹಳೆಯ ಕರ್ಮಗಳ ಫಲವನ್ನು ನೀಡುವ ಮತ್ತು ಕಠಿಣ ಜವಾಬ್ದಾರಿಗಳನ್ನು ಹೆಗಲಿಗೇರಿಸುವ ಅವಧಿಯಾಗಿದೆ.
ಮೇಷ ರಾಶಿ:
ಮೇಷ ರಾಶಿಯ ಜನರಿಗೆ ಈ ನಕ್ಷತ್ರ ಪರಿವರ್ತನೆಯು ಪ್ರಮುಖವಾಗಿ ತಾಳ್ಮೆಯನ್ನು ಪರೀಕ್ಷಿಸಲಿದೆ. ಉದ್ಯೋಗ ಕ್ಷೇತ್ರದಲ್ಲಿ ಜವಾಬ್ದಾರಿಗಳು ದಿಢೀರನೆ ಹೆಚ್ಚಾಗಬಹುದು. ನೀವು ಎಷ್ಟೇ ಕಷ್ಟಪಟ್ಟು ದುಡಿದರೂ, ನಿರೀಕ್ಷಿತ ಯಶಸ್ಸು ಅಥವಾ ಫಲಿತಾಂಶಗಳು ಕೈಸೇರಲು ವಿಳಂಬವಾಗಬಹುದು. ಕಚೇರಿಯಲ್ಲಿ ಮೇಲಧಿಕಾರಿಗಳೊಂದಿಗೆ ಮಾತನಾಡುವಾಗ ಸಂಯಮ ಕಳೆದುಕೊಳ್ಳಬೇಡಿ. ಆರ್ಥಿಕ ವಿಷಯಗಳಲ್ಲಿ ಯಾವುದೇ ರೀತಿಯ ದುಡುಕಿನ ಅಥವಾ ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳದಂತೆ ಶನಿ ದೇವನು ಎಚ್ಚರಿಸುತ್ತಿದ್ದಾನೆ.
ವೃಷಭ ರಾಶಿ:
ವೃಷಭ ರಾಶಿಯವರಿಗೆ ಈ ಅವಧಿಯಲ್ಲಿ ಹಠಾತ್ ಖರ್ಚುಗಳು ದುಪ್ಪಟ್ಟಾಗುವ ಸಾಧ್ಯತೆಯಿದೆ. ಅನಗತ್ಯ ವೆಚ್ಚಗಳು ನಿಮ್ಮ ಬಜೆಟ್ ಅನ್ನು ಏರುಪೇರು ಮಾಡಬಹುದು. ಯಾವುದೇ ಹೊಸ ಹೂಡಿಕೆಗಳನ್ನು (Investments) ಮಾಡುವ ಮುನ್ನ ಅಥವಾ ಹಣಕಾಸಿನ ವಹಿವಾಟು ನಡೆಸುವ ಮುನ್ನ ನುರಿತರ ಸಲಹೆ ಪಡೆಯುವುದು ಉತ್ತಮ. ಕೌಟುಂಬಿಕ ವಾತಾವರಣದಲ್ಲಿ ಸಣ್ಣಪುಟ್ಟ ವಿಷಯಗಳಿಗೆ ಭಿನ್ನಾಭಿಪ್ರಾಯಗಳು ಮೂಡಬಹುದು. ಸಣ್ಣ ಸಮಸ್ಯೆಗಳನ್ನು ನಿರ್ಲಕ್ಷಿಸದೆ ಪ್ರೀತಿಯಿಂದ ಬಗೆಹರಿಸಿಕೊಳ್ಳಿ.
ಇದನ್ನೂ ಓದಿ: ಫ್ಯಾಶನ್ಗಾಗಿ ವಜ್ರ ಧರಿಸುವ ಮುನ್ನ ಎಚ್ಚರ! ಈ ರಾಶಿಯವರು ವಜ್ರ ಧರಿಸಿದರೆ ಕಷ್ಟ ತಪ್ಪಿದ್ದಲ್ಲ!
ಸಿಂಹ ರಾಶಿ:
ಸಿಂಹ ರಾಶಿಯವರು ತಮ್ಮ ಉದ್ಯೋಗ ಮತ್ತು ವ್ಯಾಪಾರ-ವ್ಯವಹಾರಗಳಲ್ಲಿ ಅತ್ಯಂತ ಎಚ್ಚರಿಕೆಯಿಂದ ಇರಬೇಕಾದ ಸಮಯವಿದು. ಯಾವುದೇ ಹೊಸ ಉದ್ಯಮ ಅಥವಾ ಯೋಜನೆಗಳನ್ನು ಕೈಗೆತ್ತಿಕೊಳ್ಳುವ ಮುನ್ನ ಅದರ ಸಾಧಕ-ಬಾಧಕಗಳನ್ನು ಕೂಲಂಕಷವಾಗಿ ಪರಿಶೀಲಿಸಿ. ಆತುರದಲ್ಲಿ ತೆಗೆದುಕೊಳ್ಳುವ ತಪ್ಪು ನಿರ್ಧಾರಗಳು ಭವಿಷ್ಯದಲ್ಲಿ ದೊಡ್ಡ ನಷ್ಟಕ್ಕೆ ಕಾರಣವಾಗಬಹುದು. ಕೆಲಸದ ಸ್ಥಳದಲ್ಲಿ ಸಹೋದ್ಯೋಗಿಗಳೊಂದಿಗೆ ವಾದ-ವಿವಾದಗಳಿಂದ ದೂರವಿರುವುದು ನಿಮ್ಮ ನೆಮ್ಮದಿಗೆ ಒಳ್ಳೆಯದು.
ತುಲಾ ರಾಶಿ:
ತುಲಾ ರಾಶಿಯವರಿಗೆ ಈ ನಕ್ಷತ್ರ ಬದಲಾವಣೆಯು ವೈಯಕ್ತಿಕ ಸಂಬಂಧಗಳಲ್ಲಿ ತಾಳ್ಮೆಯನ್ನು ರೂಡಿಸಿಕೊಳ್ಳಿ. ನಿಮ್ಮ ಜೀವನ ಸಂಗಾತಿ ಅಥವಾ ಕುಟುಂಬದ ಸದಸ್ಯರೊಂದಿಗೆ ಸೌಹಾರ್ದಯುತ ಸಂವಹನ ನಡೆಸಿ, ಅಹಂಕಾರದ ಮಾತುಗಳನ್ನು ತಪ್ಪಿಸಿ. ಇದರೊಂದಿಗೆ, ನಿಮ್ಮ ಆರೋಗ್ಯದ ವಿಷಯದಲ್ಲಿ ಯಾವುದೇ ಕಾರಣಕ್ಕೂ ಬೇಜವಾಬ್ದಾರಿತನ ಬೇಡ. ಸೂಕ್ತ ಸಮಯಕ್ಕೆ ವಿಶ್ರಾಂತಿ ಮತ್ತು ಸಮತೋಲಿತ ಆಹಾರ ಕ್ರಮವನ್ನು ರೂಢಿಸಿಕೊಳ್ಳುವುದು ಈ ಅಗ್ನಿ ಪರೀಕ್ಷೆಯಿಂದ ನಿಮ್ಮನ್ನು ರಕ್ಷಿಸುತ್ತದೆ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
