Headlines

SIM Card: ಸಿಮ್ ಕಾರ್ಡ್ ನಿಮ್ಮ ಹೆಸರಿನಲ್ಲಿ ಇಲ್ಲವೇ, ಹಾಗಾದ್ರೆ ಹೀಗೆ ಮಾಡಿ – Kannada News | SIM Card: Here is an easy way to register a SIM card in your name.

ಸಾಂದರ್ಭಿಕ ಚಿತ್ರImage Credit source: Firdous Nazir/NurPhoto via Getty Images

ಕೆಲವರ ಬಳಿ ಒಂದಲ್ಲ ಎರಡು ಮೂರು ಸಿಮ್ ಕಾರ್ಡ್ (SIM Card) ಇರುತ್ತವೆ. ಆದರೆ ಕೆಲವರ ಸಿಮ್ ಕಾರ್ಡ್ ತಂದೆ ತಾಯಿ ಅಥವಾ ಮನೆಯವರ ಹೆಸರಿನಲ್ಲಿರುತ್ತದೆ. ಸಿಮ್ ಕಾರ್ಡ್ ನಿಮ್ಮ ಹೆಸರಿನಲ್ಲಿ ಇಲ್ಲದೆ ಹೋದರೆ, ನೀವು ದೊಡ್ಡ ಕಾನೂನು ಹಾಗೂ ಭದ್ರತಾ ಅಪಾಯಗಳನ್ನು ಎದುರಿಸಬೇಕಾಗುತ್ತದೆ. ನಿಮ್ಮ ಹೆಸರಿನಲ್ಲಿ ಇಲ್ಲದ ಸಿಮ್‌ ಕಾರ್ಡ್ ಅನ್ನು ಅಪರಾಧಿಗಳು ದುರುಪಯೋಗಪಡಿಸಿಕೊಂಡರೆ,  ಆದರಿಂದ ನಿಮಗೆ ಸಮಸ್ಯೆಯಾಗುತ್ತದೆ. ಹೀಗಾಗಿ ನಿಮ್ಮ ಮೊಬೈಲ್ ಸಂಖ್ಯೆಯನ್ನು ಸ್ವಂತ ದಾಖಲೆಗಳನ್ನು ನೀಡಿ ಹೆಸರಿಗೆ ನೋಂದಾಯಿಸಿ ಕೊಳ್ಳಬೇಕು.

ಮೊಬೈಲ್ ಸಂಖ್ಯೆಯನ್ನು ನಿಮ್ಮ ಹೆಸರಿಗೆ ಬದಲಾಯಿಸಲು ಹೀಗೆ ಮಾಡಿ

ಹಂತ 1: ಪ್ರಸ್ತುತ ಸಿಮ್ ಕಾರ್ಡ್ ಯಾವ ನೆಟ್‌ವರ್ಕ್ ಗೆ ಸೇರಿದೆ ಎಂಬುದನ್ನು ಗಮನಿಸಿಕೊಳ್ಳಿ.

ಹಂತ 2: ಮೊಬೈಲ್ ಸಂಖ್ಯೆ ಯಾರ ಹೆಸರಿನಲ್ಲಿದೆಯೋ ಅವರ ಜತೆಗೆ ನಿಮ್ಮ ಹತ್ತಿರದ ಅಧಿಕೃತ ಟೆಲಿಕಾಂ ಸ್ಟೋರ್‌ಗೆ ಭೇಟಿ ನೀಡಿ.

ಹಂತ 3: ಸ್ಟೋರ್‌ನಲ್ಲಿ ಓನರಿಶಿಪ್ ಟ್ರಾನ್ಸ್ಫರ್ ಫಾರ್ಮ್ ಭರ್ತಿ ಮಾಡಿ ಸಹಿ ಮಾಡುವುದನ್ನು ಮರೆಯದಿರಿ.

ಹಂತ 4: ಫಾರ್ಮ್ ಜತೆಗೆ ಗುರುತಿನ ಚೀಟಿ ಹಾಗೂ ಪಾಸ್‌ಪೋರ್ಟ್ ಅಳತೆಯ ಫೋಟೋಗಳನ್ನು ಸಲ್ಲಿಸಿ.

ಇದನ್ನೂ ಓದಿ: ಬಿಎಸ್ಸೆನ್ನೆಲ್​ನಿಂದ ಸೆಟಿಲೈಟ್ ಫೋನ್; ಬೆಲೆ 1.34 ಲಕ್ಷ ರೂ; ಮಾಸಿಕ ಸಬ್​ಸ್ಕ್ರಿಪ್ಷನ್ ಪ್ಲಾನ್ 3,500 ರೂನಿಂದ ಆರಂಭ

ಸಾಮಾನ್ಯವಾಗಿ ಕೇಳುವ ಪ್ರಶ್ನೆ ಮತ್ತು ಉತ್ತರ (FAQs)

ಪ್ರಶ್ನೆ: ಸಿಮ್ ಕಾರ್ಡ್ ಹೆಸರಿನಲ್ಲಿ ಇಲ್ಲದೇ ಹೋದರೆ ಏನಾಗುತ್ತದೆ?

ಉತ್ತರ: ಸಿಮ್ ಕಾರ್ಡ್ ಕಳೆದು ಹೋದರೆ ಹೊಸ ಸಿಮ್ ಕಾರ್ಡ್ ಪಡೆಯಲು ತೊಂದರೆಯಾಗುತ್ತದೆ.

ಪ್ರಶ್ನೆ: ಸಿಮ್ ಕಾರ್ಡ್ ನಿಮ್ಮ ಹೆಸರಿಗೆ ನೋಂದಾಯಿಸಿಕೊಳ್ಳುವುದು ಹೇಗೆ?

ಉತ್ತರ: ನಿಮ್ಮ ಮೊಬೈಲ್ ಸಂಖ್ಯೆಯನ್ನು ಸ್ವಂತ ದಾಖಲೆಗಳನ್ನು ನೀಡಿ ಹೆಸರಿಗೆ ನೋಂದಾಯಿಸಿಕೊಳ್ಳಬಹುದು.

ಪ್ರಶ್ನೆ: ಸಿಮ್ ಕಾರ್ಡ್ ನಿಮ್ಮ ಹೆಸರಿಗೆ ಎಲ್ಲಿಗೆ ಹೋಗಬೇಕು?

ಉತ್ತರ: ನಿಮ್ಮ ಹತ್ತಿರದ ಅಧಿಕೃತ ಟೆಲಿಕಾಂ ಸ್ಟೋರ್‌ಗೆ ಭೇಟಿ ನೀಡಿ.

ಇನ್ನಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *