ಮೇಲೆ ಹೇಳಿದಂತೆ ಫೆಬ್ರವರಿ 12, ಗುರುವಾರ, ಟೀಂ ಇಂಡಿಯಾ ವಿಶ್ವಕಪ್‌ನ ಎರಡನೇ ಗುಂಪು ಹಂತದ ಪಂದ್ಯವನ್ನು ಆಡಲಿದೆ. ಈ ಪಂದ್ಯಕ್ಕೂ ಮುನ್ನ ಅಭಿಷೇಕ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದು ತಂಡದ ತಲೆನೋವು ಕಡಿಮೆ ಮಾಡಿದೆ. ಆದರೆ ಅವರು ಈ ಪಂದ್ಯದಲ್ಲಿ ಆಡುವ ಸಾಧ್ಯತೆಗಳಿಲ್ಲ. ಏಕೆಂದರೆ ಮುಂಬರುವ ಪಂದ್ಯಗಳನ್ನು ಗಮನದಲ್ಲಿಟ್ಟುಕೊಂಡು ಅವರಿಗೆ ವಿಶ್ರಾಂತಿ ನೀಡಬಹುದು.
