Headlines

T20 World Cup 2026: ಟಿ20 ವಿಶ್ವಕಪ್​ಗೆ ಸ್ಕಾಟ್ಲೆಂಡ್ ಎಂಟ್ರಿ; ಯಾವ ಗುಂಪಿನಲ್ಲಿ ಸ್ಥಾನ? – Kannada News | Scotland Joins 2026 T20 World Cup as Bangladesh Exits Over Match Relocation Row

2026 ರ ಟಿ20 ವಿಶ್ವಕಪ್‌ (T20 World Cup 2026) ಆರಂಭಕ್ಕೆ ಇನ್ನು ಕೆಲವೇ ಕೆಲವು ದಿನಗಳು ಬಾಕಿ ಉಳಿದಿವೆ. ಆದರೆ ಅದಕ್ಕೂ ಮುನ್ನ ಈ ಟೂರ್ನಿಯಲ್ಲಿ ಮಹತ್ತರ ಬದಲಾವಣೆಯೊಂದಾಗಿದ್ದು, ಬಾಂಗ್ಲಾದೇಶ ತಂಡ ಟಿ20 ವಿಶ್ವಕಪ್​ನಿಂದ ಹಿಂದೆ ಸರಿದಿದೆ. ಭಾರತದಿಂದ ತನ್ನ ತಂಡದ ಪಂದ್ಯಗಳನ್ನು ಶ್ರೀಲಂಕಾಕ್ಕೆ ಸ್ಥಳಾಂತರಿಸದಿರುವುದರಿಂದ ಅಸಮಾಧಾನಗೊಂಡಿರುವ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ತನ್ನ ತಂಡದ ಹೆಸರನ್ನು ಟೂರ್ನಿಯಿಂದ ಹಿಂಪಡೆದಿದೆ. ಬಾಂಗ್ಲಾದೇಶ ತನ್ನ ತಂಡವನ್ನು ಭಾರತಕ್ಕೆ ಕಳುಹಿಸದಿದ್ದರೆ, ಅದರ ಸ್ಥಾನದಲ್ಲಿ ಸ್ಕಾಟ್ಲೆಂಡ್​ಗೆ ಟಿ20 ವಿಶ್ವಕಪ್ ಆಡುವ ಅವಕಾಶ ನೀಡಲಾಗುವುದು ಎಂದು ಐಸಿಸಿ ಎಚ್ಚರಿಕೆ ನೀಡಿತ್ತು. ಆ ಪ್ರಕಾರ, ಸ್ಕಾಟಿಷ್ ತಂಡ ಮಿನಿ ವಿಶ್ವಕಪ್ ಸಮರದಲ್ಲಿ ಕಾಣಿಸಿಕೊಳ್ಳಲಿದೆ.

ಈ ಮೊದಲು ಐಸಿಸಿ ಪ್ರಕಟಿಸಿದ ವೇಳಾಪಟ್ಟಿಯ ಪ್ರಕಾರ, ಬಾಂಗ್ಲಾದೇಶ ತಂಡವನ್ನು ಸಿ ಗುಂಪಿನಲ್ಲಿ ಇರಿಸಲಾಗಿತ್ತು. ಈ ಗುಂಪಿನಲ್ಲಿ ಬಾಂಗ್ಲಾದೇಶ ತಂಡವನ್ನು ಹೊರತುಪಡಿಸಿ ಇಂಗ್ಲೆಂಡ್, ಇಟಲಿ, ನೇಪಾಳ ಹಾಗೂ ವೆಸ್ಟ್ ಇಂಡೀಸ್ ತಂಡಗಳು ಇದ್ದವು. ಇದೀಗ ಬಾಂಗ್ಲಾದೇಶ ಹೊರಬಿದ್ದಿರುವುದರಿಂದ ಅದರ ಜಾಗದಲ್ಲಿ ಸ್ಕಾಟ್ಲೆಂಡ್ ಆಡಲಿದೆ. ವೇಳಾಪಟ್ಟಿಯ ಪ್ರಕಾರ ಸ್ಕಾಟ್ಲೆಂಡ್ ತನ್ನ ಮೊದಲ ಪಂದ್ಯವನ್ನು ಫೆಬ್ರವರಿ 7 ರಂದು ವೆಸ್ಟ್ ಇಂಡೀಸ್ ವಿರುದ್ಧ ಆಡಲಿದೆ.

ಟಿ20 ವಿಶ್ವಕಪ್‌ನಲ್ಲಿ ಸ್ಕಾಟ್ಲೆಂಡ್‌ ದಾಖಲೆ ಹೇಗಿದೆ?

ಈ ವರ್ಷದ ಟಿ20 ವಿಶ್ವಕಪ್‌ಗೆ ಅರ್ಹತೆ ಪಡೆಯುವಲ್ಲಿ ಸ್ಕಾಟ್ಲೆಂಡ್ ವಿಫಲವಾಯಿತು. ಯುರೋಪಿಯನ್ ಅರ್ಹತಾ ಸುತ್ತಿನಲ್ಲಿ ಸ್ಕಾಟ್ಲೆಂಡ್ ನಾಲ್ಕನೇ ಸ್ಥಾನ ಗಳಿಸಿತು, ಆದರೆ ಈಗ ಸ್ಕಾಟ್ಲೆಂಡ್​ಗೆ ಪಂದ್ಯಾವಳಿಯಲ್ಲಿ ಆಡಲು ಅವಕಾಶ ಸಿಕ್ಕಿದೆ. ಐಸಿಸಿ ಇನ್ನೂ ಯಾವುದೇ ಘೋಷಣೆ ಮಾಡದಿದ್ದರೂ, ನಿಯಮಗಳ ಪ್ರಕಾರ ಸ್ಕಾಟ್ಲೆಂಡ್‌ನ ಸ್ಥಾನ ಖಚಿತವೆಂದು ಪರಿಗಣಿಸಲಾಗಿದೆ. ಇದು ಸಂಭವಿಸಿದಲ್ಲಿ, ಸ್ಕಾಟ್ಲೆಂಡ್ ತಂಡ ಸತತ ಐದನೇ ಬಾರಿಗೆ ಟಿ20 ವಿಶ್ವಕಪ್‌ನಲ್ಲಿ ಆಡಲಿದೆ.

ಟಿ20 ವಿಶ್ವಕಪ್‌ನಲ್ಲಿ ಸ್ಕಾಟ್ಲೆಂಡ್‌ನ ದಾಖಲೆ ಅಷ್ಟೊಂದು ಉತ್ತಮವಾಗಿಲ್ಲ. ಆರು ಬಾರಿ ಟೂರ್ನಮೆಂಟ್‌ನಲ್ಲಿ ಭಾಗವಹಿಸಿರುವ ಸ್ಕಾಟ್ಲೆಂಡ್, 22 ಪಂದ್ಯಗಳನ್ನು ಆಡಿದ್ದು, ಕೇವಲ ಏಳರಲ್ಲಿ ಗೆಲುವು ಮತ್ತು 13 ಪಂದ್ಯಗಳಲ್ಲಿ ಸೋಲು ಕಂಡಿದೆ. 2021 ರಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಸ್ಕಾಟ್ಲೆಂಡ್, ಸೂಪರ್ 12 ಸುತ್ತಿಗೆ ಅರ್ಹತೆ ಪಡೆದಿತ್ತು. ಸ್ಕಾಟ್ಲೆಂಡ್ ಎಂದಿಗೂ ಗುಂಪು ಹಂತವನ್ನು ಮೀರಿ ಮುಂದಕ್ಕೆ ಸಾಗಿಲ್ಲ (ಸೂಪರ್ 12 ಗಳನ್ನು ಹೊರತುಪಡಿಸಿ). ಆದಾಗ್ಯೂ ಸ್ಕಾಟ್ಲೆಂಡ್ ತಂಡವನ್ನು ಸುಲಭವಾಗಿ ಪರಿಗಣಿಸುವಂತಿಲ್ಲ.

T20 World Cup 2026: ಟಿ20 ವಿಶ್ವಕಪ್​ ಬಹಿಷ್ಕರಿಸಿದ ಬಾಂಗ್ಲಾದೇಶ

ಈ ಮೊದಲು ಸ್ಕಾಟ್ಲೆಂಡ್​ಗೆ ಅದೃಷ್ಟ ಒಲಿದಿತ್ತು

2009 ರಲ್ಲಿ ಇಂಗ್ಲೆಂಡ್​ನಲ್ಲಿ ಟಿ20 ವಿಶ್ವಕಪ್​ ಅನ್ನು ಆಯೋಜಿಸಿದ್ದಾಗ ಇದೇ ರೀತಿಯ ಪರಿಸ್ಥಿತಿ ಕಂಡುಬಂದಿತ್ತು. ಆ ಸಮಯದಲ್ಲಿ ಜಿಂಬಾಬ್ವೆ ಮತ್ತು ಯುಕೆ ಸರ್ಕಾರದ ನಡುವಿನ ಸಂಬಂಧಗಳು ಹದಗೆಟ್ಟಿದ್ದವು. ಅಂತಿಮವಾಗಿ ಕ್ರಿಕೆಟ್‌ನ ಹಿತಾಸಕ್ತಿಯಿಂದ ಜಿಂಬಾಬ್ವೆ ಪಂದ್ಯಾವಳಿಯಿಂದ ಹಿಂದೆ ಸರಿದಿತ್ತು. ಇದರ ಪರಿಣಾಮವಾಗಿ ಸ್ಕಾಟ್ಲೆಂಡ್ ಅಸೋಸಿಯೇಟ್ ತಂಡವಾಗಿ ಅರ್ಹತೆ ಪಡೆದಿತ್ತು. ಆದರೆ ಈ ಪಂದ್ಯಾವಳಿಯಲ್ಲಿ ಜಿಂಬಾಬ್ವೆ ಭಾಗವಹಿಸದಿದ್ದರೂ ಸಹ ಪಂದ್ಯಾವಳಿಯಿಂದ ಸಿಗಬೇಕಿದ್ದ ಆದಾಯವನ್ನು ಪರಿಹಾರವಾಗಿ ಪಡೆದುಕೊಂಡಿತ್ತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *