ಎಲ್ಲಾ ಊಹಾಪೋಹಗಳ ನಡುವೆ 2026 ರ ಟಿ20 ವಿಶ್ವಕಪ್‌ಗಾಗಿ ಪಾಕಿಸ್ತಾನ ತನ್ನ ತಂಡವನ್ನು ಪ್ರಕಟಿಸಿದೆ. ನಿನ್ನೆಯಷ್ಟೇ ಪಿಸಿಬಿ ಅಧ್ಯಕ್ಷರು ಪಾಕ್ ತಂಡ ಟಿ20 ವಿಶ್ವಕಪ್ನಲ್ಲಿ ಭಾಗವಹಿಸುವುದು ಇನ್ನು ಖಚಿತವಾಗಿಲ್ಲ ಎಂದಿದ್ದರು. ಆದರೆ ಇಂದು ಈ ಟೂರ್ನಿಗೆ ತಂಡವನ್ನು ಪ್ರಕಟಿಸಿದ್ದಾರೆ. ಫೆಬ್ರವರಿ 9 ರಿಂದ ಆರಂಭವಾಗಲಿರುವ ಈ ಟೂರ್ನಿಯಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಫೆಬ್ರವರಿ 15 ರಂದು ಮುಖಾಮುಖಿಯಾಗಲಿವೆ. ಆದರೆ ಇದಕ್ಕೂ ಮುನ್ನ, ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಕಮ್ರಾನ್ ಅಕ್ಮಲ್ ಮಹತ್ವದ ಹೇಳಿಕೆ ನೀಡಿದ್ದಾರೆ. ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ, ಭಾರತ ತಂಡ ಪಾಕಿಸ್ತಾನ ತಂಡಕ್ಕಿಂತ ಉತ್ತಮವಾಗಿದೆ ಎಂದಿದ್ದಾರೆ.
ಭಾರತ ತಂಡ ಬಲಿಷ್ಠವಾಗಿದೆ; ಕಮ್ರಾನ್ ಅಕ್ಮಲ್
ಸಾಜಿಯಾ ಅಬ್ಬಾಸ್ ಅವರ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿರುವ ಕಮ್ರಾನ್ ಅಕ್ಮಲ್, ‘ಟೀಂ ಇಂಡಿಯಾವನ್ನು ಪಾಕಿಸ್ತಾನಕ್ಕಿಂತ ಬಲಿಷ್ಠ ಮತ್ತು ಅಪಾಯಕಾರಿಯಾಗಿದೆ. ಹೀಗಾಗಿ ಪಾಕಿಸ್ತಾನ ತಂಡ, ಭಾರತವನ್ನು ಸೋಲಿಸಲು ಉತ್ತಮ ಆಟ ಮಾತ್ರವಲ್ಲದೆ ಉತ್ತಮ ಯೋಜನೆಯನ್ನು ಮಾಡಬೇಕಾಗುತ್ತದೆ. ಅಲ್ಲದೆ ಪಾಕಿಸ್ತಾನ ತಂಡವು ಅಭಿಷೇಕ್ ಶರ್ಮಾಗಾಗಿ ಮಾತ್ರವಲ್ಲದೆ ಟೀಂ ಇಂಡಿಯಾದ ಪ್ರತಿಯೊಬ್ಬ ಆಟಗಾರನಿಗಾಗಿಯೂ ಯೋಜನೆ ರೂಪಿಸಬೇಕಾಗುತ್ತದೆ.
ಹೀಗಾದ್ರೆ ಮಾತ್ರ ಭಾರತವನ್ನು ಸೋಲಿಸಲು ಸಾಧ್ಯ
ಕಾಗದದ ಮೇಲೆ ಭಾರತ ತಂಡ ಪಾಕಿಸ್ತಾನಕ್ಕಿಂತ ಉತ್ತಮ ಮತ್ತು ಬಲಿಷ್ಠವಾಗಿ ಕಾಣುತ್ತದೆ. ಭಾರತ ಖಂಡಿತವಾಗಿಯೂ ಮೇಲುಗೈ ಸಾಧಿಸಿದೆ, ಆದರೆ ಪಾಕಿಸ್ತಾನವು ತನ್ನ ದಿನದಂದು ಪಂದ್ಯವನ್ನು ಬದಲಾಯಿಸುವ ಸಾಮರ್ಥ್ಯವನ್ನು ಹೊಂದಿದೆ. ಪಾಕಿಸ್ತಾನವು ಉತ್ತಮವಾಗಿ ಯೋಜಿತ ತಂತ್ರದೊಂದಿಗೆ ಮೈದಾನಕ್ಕೆ ಇಳಿದರೆ ಮಾತ್ರ ಭಾರತದ ವಿರುದ್ಧ ಗೆಲ್ಲಲು ಸಾಧ್ಯ ಎಂದು ಕಮ್ರಾನ್ ಅಕ್ಮಲ್ ಹೇಳಿದ್ದಾರೆ.
ನ್ಯೂಜಿಲೆಂಡ್ ವಿರುದ್ಧದ ಎರಡನೇ ಟಿ20ಪಂದ್ಯದಲ್ಲಿ ಇಶಾನ್ ಮತ್ತು ಸೂರ್ಯ ಅವರ ಪ್ರದರ್ಶನವನ್ನು ಕಮ್ರಾನ್ ಶ್ಲಾಘಿಸಿದ್ದಾರೆ. ಟೀಂ ಇಂಡಿಯಾದ ದೃಷ್ಟಿಕೋನದಿಂದ, ನಾಯಕ ಸೂರ್ಯಕುಮಾರ್ ಯಾದವ್ ಅವರ ದೊಡ್ಡ ಸ್ಕೋರ್ ಟಿ20 ವಿಶ್ವಕಪ್‌ಗೆ ಮುಂಚಿತವಾಗಿ ಉತ್ತಮ ಸಂಕೇತವಾಗಿದೆ. ಇದಲ್ಲದೆ, ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ಎರಡು ವರ್ಷಗಳ ಅನುಪಸ್ಥಿತಿಯ ನಂತರ ಇಶಾನ್ ಕಿಶನ್ ಅವರ ಪುನರಾಗಮನವು ಸಹ ಗಮನಾರ್ಹವಾಗಿದೆ ಎಂದಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
