T20 World Cup 2026: ಸೆಮಿಫೈನಲ್​ನಲ್ಲಿ 10 ಓವರ್​ಗಳ ನಿಯಮ ಜಾರಿ – Kannada News | T20 World Cup 2026 Semi Final: 10 overs per side must be completed for a result

T20 World Cup 2026: ಟಿ20 ವಿಶ್ವಕಪ್​ನ ಸೆಮಿಫೈನಲ್ ಪಂದ್ಯವು ಬುಧವಾರದಿಂದ (ಮಾ.4) ಶುರುವಾಗಲಿದೆ. ಮಾರ್ಚ್ 4 ರಂದು ನಡೆಯಲಿರುವ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಸೌತ್ ಆಫ್ರಿಕಾ ಹಾಗೂ ನ್ಯೂಝಿಲೆಂಡ್ ತಂಡಗಳು ಮುಕಾಮುಖಿಯಾಗಲಿದೆ. ಇನ್ನು ಮಾರ್ಚ್ 5 ರಂದು ನಡೆಯಲಿರುವ  ದ್ವಿತೀಯ ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ಮತ್ತು ಭಾರತ ಸೆಣಸಲಿದೆ. ಈ ಪಂದ್ಯಗಳಿಗಾಗಿ 10 ಓವರ್​ಗಳ ನಿಯಮವನ್ನು ಪರಿಚಯಿಸಲಾಗಿದೆ.

ಅಂದರೆ ಸೆಮಿಫೈನಲ್ ಪಂದ್ಯಕ್ಕೆ ಮಳೆ ಅಡಚಣೆ ಉಂಟು ಮಾಡಿದರೆ ಅಥವಾ ಕಾರಣಾಂತರಗಳಿಂದ 20 ಓವರ್​ಗಳನ್ನು ಆಡಲು ಸಾಧ್ಯವಾಗದೇ ಇದ್ದರೆ ಡಕ್​ವರ್ತ್ ಲೂಯಿಸ್ ನಿಯಮದ ಪ್ರಕಾರ ಫಲಿತಾಂಶ ನಿರ್ಧರಿಸಲು ಕನಿಷ್ಠ 10 ಓವರ್​ಗಳನ್ನು ಆಡಲೇಬೇಕು.

ಇದಕ್ಕೂ ಮುನ್ನ ಸೂಪರ್-8 ಸುತ್ತಿನಲ್ಲಿ 5 ಓವರ್​ಗಳನ್ನು ನಿಗದಿ ಮಾಡಲಾಗಿತ್ತು. ಅಂದರೆ ಕಾರಣಾಂತರಗಳಿಂದ ಪಂದ್ಯಕ್ಕೆ ಸ್ಥಗಿತಗೊಂಡರೆ ಅಥವಾ ರದ್ದಾದರೆ ಉಭಯ ತಂಡಗಳು ಕನಿಷ್ಠ 5 ಓವರ್​ಗಳನ್ನು ಆಡಿದ್ದರೆ ಮಾತ್ರ ಡಕ್​ವರ್ತ್ ಲೂಯಿಸ್ ನಿಯಮದ ಪ್ರಕಾರ ಫಲಿತಾಂಶ ನಿರ್ಧರಿಸಲಾಗುತ್ತದೆ ಎಂದು ಐಸಿಸಿ ತಿಳಿಸಿತ್ತು.  ಇದೀಗ ಸೆಮಿಫೈನಲ್ ಪಂದ್ಯಗಳಿಗೆ ಈ ನಿಯಮವನ್ನು 10 ಓವರ್​ಗೆ ಏರಿಸಲಾಗಿದೆ.

ಸೆಮಿಫೈನಲ್ ನಿಯಮಗಳ ವಿವರಗಳು:

  • ಕನಿಷ್ಠ ಓವರ್‌ಗಳು: ಮಳೆಯಿಂದಾಗಿ ಪಂದ್ಯಕ್ಕೆ ಅಡಚಣೆಯಾದರೆ ಅಥವಾ ಇನ್ನಿತರೆ ಕಾರಣಗಳಿಂದ ಪಂದ್ಯ ಅರ್ಧದಲ್ಲೇ ಸ್ಥಗಿತಗೊಂಡರೆ ಡಕ್ವರ್ತ್-ಲೂಯಿಸ್ (DLS) ನಿಯಮದಡಿ ಫಲಿತಾಂಶ ನಿರ್ಧರಿಸಲು ಎರಡೂ ತಂಡಗಳು ತಲಾ 10 ಓವರ್‌ಗಳನ್ನು ಆಡಿರಲೇಬೇಕು.
  • ಮೊದಲ ಇನಿಂಗ್ಸ್ 10 ಓವರ್​: ಮೊದಲು ಬ್ಯಾಟ್ ಮಾಡುವ ತಂಡವು 10 ಓವರ್​ ಪೂರ್ಣಗೊಳಿಸದೇ, ಎರಡನೇ ತಂಡಕ್ಕೆ ಬ್ಯಾಟಿಂಗ್​ಗೆ ಅವಕಾಶ ಇರುವುದಿಲ್ಲ. ಅಂದರೆ 10 ಕ್ಕಿಂತ ಕಡಿಮೆ ಓವರ್​ನ ಪಂದ್ಯವನ್ನು ಆಯೋಜಿಸಲಾಗುವುದಿಲ್ಲ. ಎರಡೂ ತಂಡಗಳು ಕನಿಷ್ಠ 10 ಓವರ್​ಗಳನ್ನು ಆಡಿದ್ರೆ ಮಾತ್ರ ಡಕ್​ವರ್ತ್​ ಲೂಯಿಸ್ ನಿಯಮದ ಪ್ರಕಾರ ಫಲಿತಾಂಶ ನಿರ್ಧರಿಸಲಾಗುತ್ತದೆ.
  • ಮೀಸಲು ದಿನ: ಎರಡೂ ಸೆಮಿಫೈನಲ್ ಮತ್ತು ಫೈನಲ್ ಪಂದ್ಯಗಳಿಗೆ ಮೀಸಲು ದಿನದ ವ್ಯವಸ್ಥೆ ಇದೆ. ನಿಗದಿತ ದಿನದಂದು ಪಂದ್ಯ ನಡೆಸಲು ಸಾಧ್ಯವಾಗದಿದ್ದರೆ, ಮೀಸಲು ದಿನದಂದು ಪಂದ್ಯವನ್ನು ಮುಂದುವರೆಸಲಾಗುತ್ತದೆ.
  • ಹೆಚ್ಚುವರಿ ಸಮಯ: ಪಂದ್ಯವನ್ನು ಪೂರ್ಣಗೊಳಿಸಲು ನಿಗದಿತ ದಿನದಂದು 90 ನಿಮಿಷಗಳನ್ನು ಹೆಚ್ಚುವರಿಯಾಗಿ ನೀಡಲಾಗುತ್ತದೆ. ಅಂದರೆ ಇಲ್ಲಿ ಮಳೆಯಿಂದಾಗಿ ಪಂದ್ಯ ವಿಳಂಬವಾದರೂ ತಕ್ಷಣವೇ ಓವರ್ ಕಡಿತವಾಗುವುದಿಲ್ಲ. ಬದಲಾಗಿ ಹೆಚ್ಚುವರಿ 90 ನಿಮಿಷಗಳ ಮೂಲಕ 20 ಓವರ್​ಗಳನ್ನು ಆಡಿಸಲಿದ್ದಾರೆ.
  • ಪಂದ್ಯ ರದ್ದು: ಮೀಸಲು ದಿನದಂದು ಕೂಡ 10 ಓವರ್‌ಗಳ ಪಂದ್ಯ ನಡೆಸಲು ಸಾಧ್ಯವಾಗದೇ ಇದ್ದರೆ ಮಾತ್ರ ಪಂದ್ಯವನ್ನು ರದ್ದು ಮಾಡಲಾಗುತ್ತದೆ.
  • ಯಾರು ಫೈನಲ್​ಗೆ: ಸೆಮಿಫೈನಲ್ ಪಂದ್ಯವು ರದ್ದಾದರೆ ಸೂಪರ್ 8 ಹಂತದ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದ ತಂಡವು ನೇರವಾಗಿ ಫೈನಲ್‌ಗೆ ಅರ್ಹತೆ ಪಡೆಯುತ್ತದೆ.

ಇದನ್ನೂ ಓದಿ: ಕೊಹ್ಲಿ-ರೋಹಿತ್ ರಿಟರ್ನ್ಸ್​: 15 ಪಂದ್ಯಗಳ ವೇಳಾಪಟ್ಟಿ ಪ್ರಕಟ

ಸೆಮಿಫೈನಲ್ ವೇಳಾಪಟ್ಟಿ:

  • ಸೆಮಿಫೈನಲ್ 1 ಮಾರ್ಚ್ 4, 2026: ಸೌತ್ ಆಫ್ರಿಕಾ vs ನ್ಯೂಝಿಲೆಂಡ್ (ಈಡನ್ ಗಾರ್ಡನ್ಸ್, ಕೋಲ್ಕತ್ತಾ)
  • ಸೆಮಿಫೈನಲ್ 2 ಮಾರ್ಚ್ 5, 2026: ಭಾರತ vs ಇಂಗ್ಲೆಂಡ್ (ವಾಂಖೆಡೆ ಸ್ಟೇಡಿಯಂ, ಮುಂಬೈ)

Source link

Leave a Reply

Your email address will not be published. Required fields are marked *