T20 World Cup: 43 ವರ್ಷಗಳಲ್ಲಿ 3ನೇ ಬಾರಿಗೆ; ಭಾರತವೇ ಚಾಂಪಿಯನ್ ಎನ್ನುತ್ತಿದೆ ಇತಿಹಾಸ – Kannada News | Team India’s 2026 T20 World Cup Hopes Soar: The Zimbabwe Australia Connection

2026 ರ ಟಿ20 ವಿಶ್ವಕಪ್ (T20 World Cup 2026) ಗೆಲ್ಲುವ ತಂಡಗಳಲ್ಲಿ ಎಲ್ಲರ ನೆಚ್ಚಿನ ತಂಡವೆಂದರೆ ಅದು ಟೀಂ ಇಂಡಿಯಾ. ಇದೇ ಕಾರಣ, ಕಳೆದ ಕೆಲವು ವರ್ಷಗಳಿಂದ ವೈಟ್ ಬಾಲ್ ಕ್ರಿಕೆಟ್​ನಲ್ಲಿ ಟೀಂ ಇಂಡಿಯಾ ನೀಡುತ್ತಿರುವ ಪ್ರದರ್ಶನ. ಇದರ ಜೊತೆಗೆ ಈ ಬಾರಿಯ ಟಿ20 ವಿಶ್ವಕಪ್ ಭಾರತದಲ್ಲಿ ನಡೆಯುತ್ತಿರುವುದರಿಂದ ತವರಿನ ಲಾಭವೂ ಸೂರ್ಯಕುಮಾರ್ ಪಡೆಗೆ ಸಿಗಲಿದೆ. ಆದ್ದರಿಂದ, ಟೀಂ ಇಂಡಿಯಾ ಸತತ 2ನೇ ಬಾರಿಗೆ ಟಿ20 ವಿಶ್ವಕಪ್ ಗೆಲ್ಲುವ ಅವಕಾಶವನ್ನು ಹೊಂದಿದೆ. ಇದೆಲ್ಲವುಗಳ ಜೊತೆಗೆ ಕಾಕತಾಳೀಯವೆಂಬಂತೆ ಕೆಲವು ಘಟನೆಗಳು ಕೂಡ ಟೀಂ ಇಂಡಿಯಾವೇ ಈ ಬಾರಿ ಚಾಂಪಿಯನ್ ಎಂಬ ಭವಿಷ್ಯವನ್ನು ನುಡಿಯುತ್ತಿದೆ.

3 ಬಾರಿ ಆಸ್ಟ್ರೇಲಿಯಾವನ್ನು ಸೋಲಿಸಿರುವ ಜಿಂಬಾಬ್ವೆ

ವಾಸ್ತವವಾಗಿ ಇಂದು ನಡೆದ ಪಂದ್ಯದಲ್ಲಿ ಬಲಿಷ್ಠ ಆಸ್ಟ್ರೇಲಿಯಾವನ್ನು ಜಿಂಬಾಬ್ವೆ ತಂಡ ಮಣಿಸಿತು. ಜಿಂಬಾಬ್ವೆಯ ಈ ಜಯ ಭಾರತ ತಂಡಕ್ಕೆ ಶುಭ ಶಕುನ ಎಂಬುದು ಈ ಹಿಂದೆ ಸಾಕಷ್ಟು ಭಾರಿ ಸಾಭೀತಾಗಿದೆ. ವಾಸ್ತವವಾಗಿ ಕ್ರಿಕೆಟ್ ಇತಿಹಾಸದಲ್ಲಿ ಜಿಂಬಾಬ್ವೆ ತಂಡ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾವನ್ನು ಮೂರನೇ ಬಾರಿಗೆ ಸೋಲಿಸಿದ ಸಾಧನೆ ಮಾಡಿದೆ. 1983 ರ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾವನ್ನು ಮಣಿಸಿದ್ದ ಜಿಂಬಾಬ್ವೆ ಅದರ ನಂತರ, 2007 ರ ಟಿ20 ವಿಶ್ವಕಪ್‌ನಲ್ಲಿಯೂ ಆಸ್ಟ್ರೇಲಿಯಾವನ್ನು ಸೋಲಿಸಿತ್ತು. ಇದೀಗ ಹತ್ತೊಂಬತ್ತು ವರ್ಷಗಳ ನಂತರ ಜಿಂಬಾಬ್ವೆ, ಆಸ್ಟ್ರೇಲಿಯಾಕ್ಕೆ ಸೋಲುಣಿಸಿದೆ. ವಿಶೇಷವೆಂದರೆ ಟಿ20 ವಿಶ್ವಕಪ್ ಇತಿಹಾಸದಲ್ಲಿ, ಈ ಎರಡೂ ತಂಡಗಳು ಕೇವಲ ಎರಡು ಬಾರಿ ಮುಖಾಮುಖಿಯಾಗಿದ್ದು, ಎರಡೂ ಬಾರಿಯೂ ಜಿಂಬಾಬ್ವೆ ಗೆದ್ದಿದೆ.

ಜಿಂಬಾಬ್ವೆ ಗೆದ್ದಾಗ ಭಾರತ ಚಾಂಪಿಯನ್

ಜಿಂಬಾಬ್ವೆ, ಆಸ್ಟ್ರೇಲಿಯಾವನ್ನು ಸೋಲಿಸುವುದಕ್ಕೂ ಟೀಂ ಇಂಡಿಯಾ ಚಾಂಪಿಯನ್ ಆಗುವುದಕ್ಕೂ ಎನ್ನು ಸಂಬಂಧ ಎಂದು ನೀವೇಲ್ಲ ಅಂದುಕೊಳ್ಳುತ್ತಿರಬಹುದು. ಅದಕ್ಕೆ ಉತ್ತರ ಜಿಂಬಾಬ್ವೆ, ವಿಶ್ವಕಪ್​ನಲ್ಲಿ ಆಸ್ಟ್ರೇಲಿಯಾವನ್ನು ಸೋಲಿಸಿದಾಗಲೆಲ್ಲ ಭಾರತ ತಂಡ ಚಾಂಪಿಯನ್ ಪಟ್ಟಕ್ಕೇರಿದೆ. 1983 ರಲ್ಲಿ ಜಿಂಬಾಬ್ವೆ ಮೊದಲ ಬಾರಿಗೆ ಆಸ್ಟ್ರೇಲಿಯಾವನ್ನು ಸೋಲಿಸಿತ್ತು. ಆಗ ಭಾರತ ತಂಡ ತನ್ನ ಮೊದಲ ವಿಶ್ವಕಪ್ ಗೆದ್ದಿತ್ತು. ಇದಾದ ಇಪ್ಪತ್ನಾಲ್ಕು ವರ್ಷಗಳ ನಂತರ, 2007 ರಲ್ಲಿ ಎಂಎಸ್ ಧೋನಿ ನಾಯಕತ್ವದಲ್ಲಿ ಭಾರತವು ತನ್ನ ಮೊದಲ ಟಿ20 ವಿಶ್ವಕಪ್ ಟ್ರೋಫಿಯನ್ನು ಎತ್ತಿಹಿಡಿದಿತ್ತು. ಆಗಲೂ ಜಿಂಬಾಬ್ವೆ, ಆಸ್ಟ್ರೇಲಿಯಾವನ್ನು ಸೋಲಿಸಿತ್ತು. ಈಗ, ಜಿಂಬಾಬ್ವೆ ಆಸ್ಟ್ರೇಲಿಯಾವನ್ನು ಮೂರನೇ ಬಾರಿಗೆ ಸೋಲಿಸಿದ್ದು, ಟೀಂ ಇಂಡಿಯಾ ಸತತ ಎರಡನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸುತ್ತದೆ ಎಂಬ ಭರವಸೆಯನ್ನು ಹುಟ್ಟುಹಾಕಿದೆ.

T20 World Cup: ಭಾರತವನ್ನು ದುಃಸ್ವಪ್ನದಂತೆ ಕಾಡಿದ ಪಾಕ್ ವಿರುದ್ಧದ ಸೋಲು ಯಾವುದು ಗೊತ್ತಾ?

ಹಿಂದಿನ ಇತಿಹಾಸ ಏನನ್ನೇ ಹೇಳಿದರೂ ಭಾರತ ತಂಡ ಚಾಂಪಿಯನ್ ಆಗಬೇಕೆಂದರೆ ಉತ್ತಮ ಪ್ರದರ್ಶನ ನೀಡುವುದು ಅಗತ್ಯ. ಇದಕ್ಕೆ ಪೂರಕವಾಗಿ ಭಾರತ ಈ ಪಂದ್ಯಾವಳಿಯಲ್ಲಿ ಉತ್ತಮ ಆರಂಭವನ್ನು ಮಾಡಿದೆ. ಮೊದಲ ಪಂದ್ಯದಲ್ಲಿ ಅಮೆರಿಕವನ್ನು ಮತ್ತು ಎರಡನೇ ಪಂದ್ಯದಲ್ಲಿ ನಮೀಬಿಯಾವನ್ನು ಸೋಲಿಸಿದೆ. ಇದೀಗ ಭಾರತ ಪಾಕಿಸ್ತಾನವನ್ನು ಎದುರಿಸಲಿದ್ದು, ಈ ಪಂದ್ಯವನ್ನು ಗೆದ್ದರೆ ಸೂಪರ್ 8 ಸುತ್ತಿನ ಹಾದಿ ಸ್ಪಷ್ಟವಾಗುತ್ತದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *