The Wedding of VIROSH: ವಿವಾಹಕ್ಕೂ ಮೊದಲು ಸಖತ್ ಎಂಜಾಯ್​​ ಮಾಡಿದ ವಿಜಯ್-ರಶ್ಮಿಕಾ – Kannada News | Virosh Wedding Confirmed: Vijay Deverakonda and Rashmika Mandanna’s Udaipur Pre Wedding Fun

ನಟಿ ರಶ್ಮಿಕಾ ಮಂದಣ್ಣ (Rashmika Mandanna) ಹಾಗೂ ವಿಜಯ್ ದೇವರಕೊಂಡ ವಿವಾಹ ಆಗೋದು ಅಧಿಕೃತ ಆಗಿದೆ. ಸ್ವತಃ ರಶ್ಮಿಕಾ ಮಂದಣ್ಣ ಅವರೇ ಈ ವಿಷಯವನ್ನು ಖಚಿತಪಡಿಸಿದ್ದಾರೆ. ಈ ಮಧ್ಯೆ ದಂಪತಿಗಳು ಪ್ರೀ ವೆಡ್ಡಿಂಗ್ ಸೆಲಬ್ರೇಷನ್ ಅಲ್ಲಿ ತೊಡಗಿಕೊಂಡಿದ್ದಾರೆ. ಈ ಸಂದರ್ಭದ ವಿಡಿಯೋ ಹಾಗೂ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗುತ್ತಾ ಇದೆ. ಇದು ಅಭಿಮಾನಿಗಳ ಖುಷಿಯನ್ನು ಹೆಚ್ಚಿಸಿದೆ.

ತಮ್ಮ ಜೋಡಿಯನ್ನು ವಿರೋಶ್ ಎಂದು ಕರೆದುಕೊಂಡಿದ್ದಾರೆ ರಶ್ಮಿಕಾ ಹಾಗೂ ವಿಜಯ್. ಇದು ಅಭಿಮಾನಿಗಳೇ ಇಟ್ಟ ಹೆಸರು ಎಂದು ಅವರು ಹೇಳಿದ್ದಾರೆ. ಈಗಾಗಲೇ ಭಾವಿ ದಂಪತಿಗಳು ಉದಯಪುರ ಸೇರಿದ್ದು, ಅಲ್ಲಿ ವಿವಾಹ ಪೂರ್ವ ಕಾರ್ಯಕ್ರಮಗಳನ್ನು ಎಂಜಾಯ್ ಮಾಡುತ್ತಿದ್ದಾರೆ. ಇಡೀ ಕುಟುಂಬ ಈಗಾಗಲೇ ಅಲ್ಲಿ ನೆಲೆಯೂರಿದೆ. ನೀರಿನಲ್ಲಿ ನೆಟ್ ಕಟ್ಟಿ ಕುಟುಂಬದವರ ಜೊತೆ ವಿಜಯ್ ದೇವರಕೊಂಡ ವಾಲಿಬಾಲ್ ಆಡಿದ್ದಾರೆ. ಈ ಸಂದರ್ಭದ ಫೋಟೋನ ಇನ್​​ಸ್ಟಾಗ್ರಾಮ್ ಸ್ಟೇಟಸ್​​ನ್ಲಿ ಹಂಚಿಕೊಂಡಿದ್ದಾರೆ.

ರಶ್ಮಿಕಾ ಮಂದಣ್ಣ ಅವರು ಜಾಪನೀಸ್ ಡಿನ್ನರ್ ಆಯೋಜನೆ ಮಾಡಿದ್ದರು. ಈ ಸಂದರ್ಭದ ಫೋಟೋನ ಹಂಚಿಕೊಳ್ಳಲಾಗಿದೆ. ಇದರಲ್ಲಿ ಜಾಪನೀಸ್ ಅಡುಗೆ ಊಟ ಇರುವ ಮೆನ್ಯು ಸಾಕಷ್ಟು ಗಮನ ಸೆಳೆದಿದೆ. ರಶ್ಮಿಕಾ ಮಂದಣ್ಣ ಅವರ ಮೆನ್ಯು ಕಾರ್ಡ್ ಬಳಿ ಗ್ರೀನ್ ಆ್ಯಪಲ್ ಹಾಗೂ ದ್ರಾಕ್ಷಿಗಳನ್ನು ಇಡಲಾಗಿದೆ.

ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಫೆಬ್ರವರಿ 26ರಂದು ವಿವಾಹ ಆಗಲಿದ್ದಾರೆ. ಉದಯಪುರದ ಐಟಿಸಿ ಹೋಟೆಲ್​ ಅಲ್ಲಿ ಈ ವಿವಾಹ ನಡೆಯುತ್ತಿದೆ. ಡೆಸ್ಟಿನೇಷನ್ ವಿವಾಹಗಳನ್ನು ಆಯೋಜನೆ ಮಾಡಲು ಉದಯಪುರ ಮುಂಚೂಣಿಯಲ್ಲಿ ಇದೆ. ಈ ಕಾರಣದಿಂದಲೇ ಈ ಜಾಗವನ್ನು ಆಯ್ಕೆ ಮಾಡಿಕೊಂಡಿರಬಹುದು ಎಂದು ಹೇಳಲಾಗುತ್ತಾ ಇದೆ.

ಇದನ್ನೂ ಓದಿ: The Wedding of VIROSH: ವಿಜಯ್ ದೇವರಕೊಂಡ, ರಶ್ಮಿಕಾ ಮಂದಣ್ಣ ವಯಸ್ಸಿನ ಅಂತರ ಎಷ್ಟು?

ವಿಜಯ್ ದೇವರಕೊಂಡ ಹಾಗು ರಶ್ಮಿಕಾ ಮಂದಣ್ಣ ಅವರು ‘ಗೀತ ಗೋವಿಂದಂ’ ಸಿನಿಮಾದಲ್ಲಿ ಒಟ್ಟಾಗಿ ನಟಿಸಿದರು. ಈ ಸಿನಿಮಾ ಗಮನ ಸೆಳೆಯಿತು. ಈ ಚಿತ್ರದ ಬಳಿಕ ಇವರ ಲವ್​​ಸ್ಟೋರಿ ಶುರುವಾಯಿತು ಎಂದು ಹೇಳಲಾಗುತ್ತಾ ಇದೆ. ಈಗ ಇವರು ಮದುವೆ ಆಗುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 7:01 am, Tue, 24 February 26

Source link

Leave a Reply

Your email address will not be published. Required fields are marked *