ಗುಂಡಿನ ದಾಳಿ Image Credit source: X Account-World in last 24 hrs
ನ್ಯೂಯಾರ್ಕ್, ಜೂನ್ 19: ಅಮೆರಿಕದ ಅತ್ಯಂತ ಜನನಿಬಿಡ ಸ್ಥಳವಾದ ನ್ಯೂಯಾರ್ಕ್‌ನ ‘ಟೈಮ್ಸ್ ಸ್ಕ್ವೇರ್’ನಲ್ಲಿ ಗುಂಡಿನ ದಾಳಿ(Firing) ನಡೆದಿದ್ದು, ಇಡೀ ನಗರದಲ್ಲಿ ಭೀತಿಯ ವಾತಾವರಣ ನಿರ್ಮಾಣವಾಗಿದೆ. ಘಟನೆ ನಡೆದ ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಶಂಕಿತ ಬಂದೂಕುಧಾರಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ರಾಷ್ಟ್ರೀಯ ಬ್ಯಾಸ್ಕೆಟ್‌ಬಾಲ್ ಅಸೋಸಿಯೇಷನ್ (NBA) ಚಾಂಪಿಯನ್‌ಶಿಪ್‌ನಲ್ಲಿ ‘ನ್ಯೂಯಾರ್ಕ್ ನಿಕ್ಸ್’ ತಂಡ ಐತಿಹಾಸಿಕ ಜಯಗಳಿಸಿತ್ತು. ಇದನ್ನು ಆಚರಿಸಲು ಲೋವರ್ ಮ್ಯಾನ್‌ಹ್ಯಾಟನ್‌ನ ಬೀದಿಗಳಲ್ಲಿ ಸಾವಿರಾರು ಜನರು ಜಮಾಯಿಸಿದ್ದರು. ಗುರುವಾರ ಮಧ್ಯಾಹ್ನ 3.40 ರ ಸುಮಾರಿಗೆ ನಿಲ್ಲಿಸಲಾಗಿದ್ದ ಪೊಲೀಸ್ ವಾಹನದಿಂದ ಕೇವಲ ಕೆಲವು ಮೀಟರ್‌ಗಳ ದೂರದಲ್ಲೇ ಶಂಕಿತ ವ್ಯಕ್ತಿ ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾನೆ.
ಗುಂಡಿನ ಶಬ್ದ ಕೇಳುತ್ತಿದ್ದಂತೆ ಟೈಮ್ಸ್ ಸ್ಕ್ವೇರ್‌ನಲ್ಲಿದ್ದ ನೂರಾರು ಪ್ರವಾಸಿಗರು ಮತ್ತು ಸ್ಥಳೀಯರು ಪ್ರಾಣಭಯದಿಂದ ದಿಕ್ಕಾಪಾಲಾಗಿ ಓಡಿದ್ದಾರೆ. ಪೊಲೀಸರು ತಕ್ಷಣವೇ ಶಂಕಿತನನ್ನು ಬೆನ್ನಟ್ಟಿ ಹಿಡಿದಿದ್ದಾರೆ. ಈ ದಾಳಿಯಲ್ಲಿ ಗಾಯಗೊಂಡ ಒಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಮತ್ತಷ್ಟು ಓದಿ: ನೈಜರ್ನ ಅಂತಾರಾಷ್ಟ್ರೀಯ ಏರ್ಪೋರ್ಟ್ನಲ್ಲಿ ಗುಂಡಿನ ದಾಳಿ, 13 ಮಂದಿ ಸಾವು
ಆಘಾತಕಾರಿ ವಿಷಯವೆಂದರೆ, ಇದಕ್ಕೂ ಮುನ್ನ ಜೂನ್ 16 ರ ಶನಿವಾರ ರಾತ್ರಿ ಕೂಡ ಇದೇ ಟೈಮ್ಸ್ ಸ್ಕ್ವೇರ್‌ನ 42ನೇ ಬೀದಿ ಮತ್ತು ಬ್ರಾಡ್‌ವೇ ಛೇದಕದ ಬಳಿ ಕನಿಷ್ಠ ಏಳು ಸುತ್ತು ಗುಂಡು ಹಾರಿಸಲಾಗಿತ್ತು. 53 ವರ್ಷಗಳ ನಂತರ ನ್ಯೂಯಾರ್ಕ್ ನಿಕ್ಸ್ ತಂಡ ಗೆದ್ದಿದ್ದ ಸವಿನೆನಪಿನಲ್ಲಿ ಜನರು ಗಂಟೆಗಟ್ಟಲೆ ಆಚರಣೆ ಮಾಡುತ್ತಿದ್ದಾಗ ಈ ದಾಳಿ ನಡೆದಿತ್ತು. ಅಂದಿನ ಘಟನೆಯಲ್ಲಿ 17 ವರ್ಷದ ಬಾಲಕನೊಬ್ಬ ಗಾಯಗೊಂಡಿದ್ದ.
ವಿಡಿಯೋ
🇺🇸: Shots fired near 42nd Street and Broadway in Times Square, New York City
According to NYPD reports and eyewitness accounts, gunfire caused panic with crowds scattering. A suspect was quickly arrested, and a firearm was recovered at the scene. No injuries have been confirmed… pic.twitter.com/3Pbgnybtx1
— World In Last 24hr (@world24x7hr) June 18, 2026
ಕೇವಲ ನಾಲ್ಕು ದಿನಗಳ ಅಂತರದಲ್ಲಿ ಟೈಮ್ಸ್ ಸ್ಕ್ವೇರ್‌ನಲ್ಲಿ ಎರಡು ಬಾರಿ ಶೂಟೌಟ್ ನಡೆದಿರುವುದು ನ್ಯೂಯಾರ್ಕ್ ನಿವಾಸಿಗಳಲ್ಲಿ ಭದ್ರತೆಯ ಆತಂಕವನ್ನು ಹೆಚ್ಚಿಸಿದೆ. ಸದ್ಯ ವಿಜಯೋತ್ಸವದ ಮೆರವಣಿಗೆಗಾಗಿ ನಗರದಲ್ಲಿ ಸುಮಾರು 10,000 ಕ್ಕೂ ಹೆಚ್ಚು ಪೊಲೀಸ್ ಅಧಿಕಾರಿಗಳನ್ನು ಭದ್ರತೆಗೆ ನಿಯೋಜಿಸಲಾಗಿದೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On – 9:24 am, Fri, 19 June 26
