U19 World Cup: ಸೆಮಿಫೈನಲ್​ನಲ್ಲಿ ಸಿಡಿಲಬ್ಬರದ ಅರ್ಧಶತಕ ಬಾರಿಸಿದ ವೈಭವ್ ಸೂರ್ಯವಂಶಿ – Kannada News | U19 World Cup Semifinal: Vaibhav Suryavanshi’s Blazing Fifty Powers India’s 311 Run Chase

ಹರಾರೆ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ಭಾರತ ಮತ್ತು ಅಫ್ಘಾನಿಸ್ತಾನ (India U19 vs Afghanistan U19) ನಡುವೆ 2026 ರ ಅಂಡರ್-19 ಏಕದಿನ ವಿಶ್ವಕಪ್‌ನ ಎರಡನೇ ಸೆಮಿಫೈನಲ್‌ (U19 World Cup Semifinal) ಪಂದ್ಯ ನಡೆಯುತ್ತಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ ಭಾರತಕ್ಕೆ 311 ರನ್‌ಗಳ ಬೃಹತ್ ಗುರಿ ನೀಡಿದೆ. ಇದೀಗ ಈ ಗುರಿ ಬೆನ್ನಟ್ಟಿರುವ ಟೀಂ ಇಂಡಿಯಾಕ್ಕೆ ಆರಂಭಿಕ ಜೋಡಿ ಅಬ್ಬರದ ಪ್ರಾರಂಭ ನೀಡಿದೆ. ಆರಂಭಿಕರಾದ ಆರನ್ ಜಾರ್ಜ್​ ಹಾಗೂ ವೈಭವ್ ಸೂರ್ಯವಂಶಿ ಮೊದಲ ವಿಕೆಟ್​ಗೆ 90 ರನ್​ಗಳ ಜೊತೆಯಾಟ ನೀಡಿದರು. ವೈಭವ್ ವಿಕೆಟ್ ಪತನದೊಂದಿಗೆ ಈ ಜೊತೆಯಾಟ ಮುರಿದುಬಿತ್ತು. ಆದಾಗ್ಯೂ ಔಟಾಗುವುದಕ್ಕೂ ಮುನ್ನ ವೈಭವ್ ತಂಡಕ್ಕೆ ತನ್ನಿಂದ ಬೇಕಾಗಿದ್ದುದ್ದನ್ನು ನೀಡಿ ಪೆವಿಲಿಯನ್​ಗೆ ಮರಳಿದರು.

24 ಎಸೆತಗಳಲ್ಲಿ ಅರ್ಧಶತಕ

ಬ್ಯಾಟಿಂಗ್‌ ಆರಂಭಿಸಿದ ಜಾರ್ಜ್​ ಎದುರಿಸಿದ ಮೊದಲ ಎಸೆತದಲ್ಲೇ ಬೌಂಡರಿ ಬಾರಿಸುವ ಮೂಲಕ ತಂಡಕ್ಕೆ ಉತ್ತಮ ಆರಂಭ ಒದಗಿಸಿಕೊಟ್ಟರು. ಆ ಬಳಿಕ ಸ್ಟ್ರೈಕ್​ಗೆ ಬಂದ ವೈಭವ್ ಕೂಡ ಎಂದಿನಂತೆ ಎದುರಿಸಿದ ಮೊದಲ ಎಸೆತದಿಂದಲೇ ಆಕ್ರಮಣಕಾರಿ ಆಟ ಪ್ರದರ್ಶಿಸಿ ಅಫ್ಘಾನಿಸ್ತಾನದ ಬೌಲರ್‌ಗಳನ್ನು ಹೈರಾಣಾಗಿಸಿದರು. ಇದರ ಪರಿಣಾಮವಾಗಿ ವೈಭವ್ ಕೇವಲ 24 ಎಸೆತಗಳಲ್ಲಿ ಏಳು ಬೌಂಡರಿ ಮತ್ತು ಮೂರು ಸಿಕ್ಸರ್‌ಗಳ ಸಹಾಯದಿಂದ ಅರ್ಧಶತದ ಗಡಿ ಮುಟ್ಟಿದರು. 216.66 ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಬೀಸಿದ ವೈಭವ್ ತಂಡಕ್ಕೆ ಬೇಕಾದ ಆರಂಭ ಒದಗಿಸಿಕೊಟ್ಟರು. ಆದಾಗ್ಯೂ, ಇನ್ನಿಂಗ್ಸ್‌ನ ಆರಂಭದಲ್ಲಿಯೇ ವೈಭವ್​ಗೆ ಜೀವದಾನ ಸಿಕ್ಕಿತು. ಆಫ್ಘನ್ ತಂಡ ನೀಡಿದ ಜೀವದಾನವನ್ನು ವೈಭವ್ ಸೂರ್ಯವಂಶಿ ಸಂಪೂರ್ಣವಾಗಿ ಬಳಸಿಕೊಂಡರು.

33 ಎಸೆತಗಳಲ್ಲಿ 68 ರನ್

ಆದರೆ ಅರ್ಧಶತಕ ಬಾರಿಸಿದ ನಂತರ ವೈಭವ್ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ಉಳಿಯಲಿಲ್ಲ. 33 ಎಸೆತಗಳಲ್ಲಿ ಒಂಬತ್ತು ಬೌಂಡರಿ ಮತ್ತು ನಾಲ್ಕು ಸಿಕ್ಸರ್‌ಗಳೊಂದಿಗೆ 68 ರನ್ ಕಲೆಹಾಕಿ ವೈಭವ್ ಔಟಾದರು. ಔಟಾಗುವುದಕ್ಕೂ ಮುನ್ನ ಸೂರ್ಯವಂಶಿ, ಆರನ್ ಜಾರ್ಜ್ ಅವರೊಂದಿಗೆ 90 ರನ್‌ಗಳ ಆರಂಭಿಕ ಪಾಲುದಾರಿಕೆಯನ್ನು ಹಂಚಿಕೊಂಡರು. ಗಮನಾರ್ಹ ವಿಷಯವೆಂದರೆ ಈ ಇಬ್ಬರು ಆಟಗಾರರು ಕೇವಲ 9.3 ಓವರ್‌ಗಳಲ್ಲಿ ತಂಡವನ್ನು 90 ರನ್‌ಗಳಿಗೆ ಕೊಂಡೊಯ್ದರು.

ಸತತ 2 ಜೀವದಾನ ಸಿಕ್ಕರೂ ಪಾಕ್ ವಿರುದ್ಧ ಮುಗ್ಗರಿಸಿದ ವೈಭವ್ ಸೂರ್ಯವಂಶಿ

ಭಾರತಕ್ಕೆ 311 ರನ್​ಗಳ ಗುರಿ

ಇದಕ್ಕೂ ಮೊದಲು ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ 50 ಓವರ್‌ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 310 ರನ್ ಗಳಿಸಿತು. ಅಫ್ಘಾನಿಸ್ತಾನದ ಪರ ಉಜೈರುಲ್ಲಾ ನಿಯಾಜೈ ಮತ್ತು ಫೈಸಲ್ ಶಿನೋಜಾಡಾ ಶತಕದ ಇನ್ನಿಂಗ್ಸ್ ಆಡಿದರು. ನಿಯಾಜೈ 86 ಎಸೆತಗಳಲ್ಲಿ 12 ಬೌಂಡರಿ ಮತ್ತು 2 ಸಿಕ್ಸರ್‌ಗಳ ಸಹಾಯದಿಂದ ಅಜೇಯ 101 ರನ್ ಬಾರಿಸಿದರೆ, ಫೈಸಲ್ 93 ಎಸೆತಗಳಲ್ಲಿ 15 ಬೌಂಡರಿಗಳ ಸಹಾಯದಿಂದ 110 ರನ್ ಕಲೆಹಾಕಿದರು. ಭಾರತದ ಪರ ದೀಪೇಶ್ ದೇವೇಂದ್ರನ್ ಮತ್ತು ಕನಿಷ್ಕ್ ಚೌಹಾಣ್ ತಲಾ ಎರಡು ವಿಕೆಟ್ ಪಡೆದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 6:21 pm, Wed, 4 February 26

Source link

Leave a Reply

Your email address will not be published. Required fields are marked *