Valentine’s Week 2026: ರೋಸ್‌ ಡೇಯಂದು ನಿಮ್ಮ ಲೈಫ್‌ ಪಾರ್ಟ್ನರ್‌ಗಾಗಿ ತಯಾರಿಸಿ ಈ ಸ್ವಾದಿಷ್ಟ ಗುಲಾಬಿ ತಿನಿಸು; ಇಲ್ಲಿದೆ ರೆಸಿಪಿ – Kannada News | Valentine’s Week 2026: Prepare these special desserts made from roses for your partner on Rose Day

ಪ್ರೇಮಿಗಳ ದಿನಕ್ಕೆ ಇನ್ನೇನೂ ಕೆಲವೇ ದಿನಗಳು ಬಾಕಿ ಉಳಿದಿವೆ. ಪ್ರೇಮಿಗಳ ದಿನಕ್ಕೂ ಮುಂಚಿತವಾಗಿ ಫೆಬ್ರವರಿ 7 ರಿಂದ 13 ರವರೆಗೆ ಪ್ರೇಮಿಗಳ ವಾರವನ್ನು ಸಹ ಆಚರಿಸಲಾಗುತ್ತದೆ. ಈ ವ್ಯಾಲೆಂಟೈನ್‌ ವೀಕ್‌ ರೋಸ್‌ ಡೇ (Rose Day) ದಿನದೊಂದಿಗೆ ಆರಂಭವಾಗುತ್ತದೆ. ಈ ವಿಶೇಷ ದಿನದಂದು  ಪ್ರೇಮಿಗಳು ಪರಸ್ಪರ ಕೆಂಪು ಗುಲಾಬಿಗಳನ್ನು ನೀಡುವ ಮೂಲಕ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ. ಕೆಲವರು ವಿಶೇಷ ಉಡುಗೊರೆಗಳನ್ನು ಸಹ ಪ್ರೇಮಿಗೆ ನೀಡುತ್ತಾರೆ. ನೀವು ಸಹ ಈ ಬಾರಿಯ ರೋಸ್‌ ಡೇಯನ್ನು ಸ್ಪೆಷಲ್‌ ಆಗಿ ಆಚರಿಸಲು ಬಯಸಿದರೆ ರೆಡ್‌ ರೋಸ್‌ ನೀಡುವುದರ ಜೊತೆಗೆ ನಿಮ್ಮ ಸಂಗಾತಿಗೆ ನಿಮ್ಮ ಕೈಯಾರೇ ಪ್ರೀತಿಯಿಂದ ಗುಲಾಬಿ ಹೂವಿನ ಖಾದ್ಯಗಳನ್ನು ತಯಾರಿಸಬಹುದು. ಇಲ್ಲಿದೆ ನಿಮಗಾಗಿ ಈಸಿ ರೆಸಿಪಿ.

ರೋಸ್‌ ಡೇ ಯ ಸ್ಪೆಷಲ್‌ ರೆಸಿಪಿ ಲಿಸ್ಟ್:‌

ರೋಸ್ ಪುಡಿಂಗ್:

ಬೇಕಾಗುವ ಸಾಮಾಗ್ರಿಗಳು: ಹಾಲು – 100 ಮಿಲಿ, ಸಕ್ಕರೆ – 2 ಚಮಚ, ಚೈನಾ ಗ್ರಾಸ್‌ (ಅಗರ್‌ ಅಗರ್) – 2 ಗ್ರಾಂ, ಗುಲಾಬಿ ಸಿರಪ್ – 1 ಚಮಚ, ನೀರು.

ರೋಸ್ ಪುಡ್ಡಿಂಗ್ ತಯಾರಿಸುವ ವಿಧಾನ: ಮೊದಲು ಚೈನಾಗ್ರಾಸ್ ತೆಗೆದುಕೊಂಡು ಅದನ್ನು 10 ನಿಮಿಷಗಳ ಕಾಲ ನೀರಿನಲ್ಲಿ ನೆನೆಸಿಡಿ. ನಂತರ, ಒಂದು ಪಾತ್ರೆಯನ್ನು ತೆಗೆದುಕೊಂಡು ಅದನ್ನು ಕಡಿಮೆ ಉರಿಯಲ್ಲಿ ಒಲೆಯ ಮೇಲೆ ಇರಿಸಿ. ಚೈನಾಗ್ರಾಸ್ ಮತ್ತು ನೀರನ್ನು ಸೇರಿಸಿ. ಚೈನಾಗ್ರಾಸ್ ಸಂಪೂರ್ಣವಾಗಿ ಕರಗುವವರೆಗೆ ಕುದಿಸಿ. ಈಗ, ಇನ್ನೊಂದು ಪಾತ್ರೆಯನ್ನು ತೆಗೆದುಕೊಂಡು, ಹಾಲು ಮತ್ತು ಸಕ್ಕರೆಯನ್ನು ಸೇರಿಸಿ, ಬಿಸಿ ಮಾಡಿ. ಹಾಲು ಕುದಿಯಲು ಪ್ರಾರಂಭಿಸಿದಾಗ, ಅದಕ್ಕೆ ಚೈನಾಗ್ರಾಸ್ ನೀರು ಮತ್ತು ರೋಸ್ ಸಿರಪ್ ಸೇರಿಸಿ ಮತ್ತು ಮಿಶ್ರಣವನ್ನು ತಯಾರಿಸಿ. ಈ ಮಿಶ್ರಣವನ್ನು 2-3 ನಿಮಿಷಗಳ ಕಾಲ ಕಡಿಮೆ ಉರಿಯಲ್ಲಿ ಕುದಿಯಲು ಬಿಡಿ. ನಂತರ ಸ್ಟವ್‌ ಆಫ್‌ ಮಾಡಿ ಅದನ್ನು ಒಂದು ಬೌಲ್‌ಗೆ ಸರ್ವ್‌ ಮಾಡಿ ಅದರ ಮೇಲೆ ಗುಲಾಬಿ ದಳಗಳನ್ನು ಇಟ್ಟು ಅಲಂಕರಿಸಿ, ಎರಡರಿಂದ ಮೂರು ಗಂಟೆಗಳ ಕಾಲ ಫ್ರಿಡ್ಜ್‌ನಲ್ಲಿಟ್ಟರೆ ರೋಸ್‌ ಪುಡ್ಡಿಂಗ್‌ ರೆಡಿ.

ರೋಸ್ ಖೀರ್:

ಬೇಕಾಗುವ ಸಾಮಾಗ್ರಿಗಳು: ಹಾಲು, ಗುಲಾಬಿ ದಳ, ಏಲಕ್ಕಿ ಪುಡಿ, ಸಕ್ಕರೆ, ಪಿಸ್ತಾ, ಬಾದಾಮಿ.

ರೋಸ್‌ ಖೀರ್‌ ತಯಾರಿಸುವ ವಿಧಾನ:  ರೋಸ್ ಖೀರ್ ಮಾಡಲು, ಮೊದಲು ಹಾಲನ್ನು ಕುದಿಸಿ, ಅದಕ್ಕೆ ಸ್ವಚ್ಛಗೊಳಿಸಿದ ಗುಲಾಬಿ ದಳಗಳನ್ನು ಸೇರಿಸಿ.  ನಂತರ ಅದಕ್ಕೆ ಏಲಕ್ಕಿ ಪುಡಿ ಮತ್ತು ಸಕ್ಕರೆ ಸೇರಿಸಿ ಕಡಿಮೆ ಉರಿಯಲ್ಲಿ ಬೇಯಿಸಿ. ಈ ಮಿಶ್ರಣ ಹಾಲು ದಪ್ಪಗಾದ ನಂತರ ಗ್ಯಾಸ್‌ ಆಫ್‌ ಮಾಡಿ ತಣ್ಣಗಾದ ನಂತರ ಅದರ ಮೇಲೆ ಪಿಸ್ತಾ, ಬಾದಾಮಿ ಚೂರಗಳನ್ನು ಹಾಕಿ ಅಲಂಕರಿಸಿ.

ಇದನ್ನೂ ಓದಿ: ಪ್ರೇಮಿಗಳ ವಾರದಲ್ಲಿ ಯಾವೆಲ್ಲಾ ವಿಶೇಷ ದಿನಗಳನ್ನು ಆಚರಿಸಲಾಗುತ್ತದೆ; ಇಲ್ಲಿದೆ ಲಿಸ್ಟ್

ರೋಸ್‌ ಲಡ್ಡು:

ಬೇಕಾಗುವ ಸಾಮಾಗ್ರಿಗಳು: ಒಣ ಗುಲಾಬಿ ದಳ,ಖೋವಾ, ತೆಂಗಿನಕಾಯಿ ಪುಡಿ, ಜೇನು ತುಪ್ಪ

ರೋಸ್‌ ಲಡ್ಡು ತಯಾರಿಸುವ ವಿಧಾನ:  ಮೊದಲಿಗೆ ಒಣಗಿದ ಗುಲಾಬಿ ದಳಗಳನ್ನು ನುಣ್ಣಗೆ ಪುಡಿಮಾಡಿ ಇಟ್ಟುಕೊಳ್ಳಿ. ಈಗ ಖೋವಾವನ್ನು ಒಂದು ಪಾತ್ರೆಯಲ್ಲಿ ಲಘುವಾಗಿ ಹುರಿಯಿರಿ, ಅದಕ್ಕೆ ಗುಲಾಬಿ ಪುಡಿ, ತೆಂಗಿನಕಾಯಿ ಪುಡಿ ಮತ್ತು ಸ್ವಲ್ಪ ಜೇನುತುಪ್ಪ ಸೇರಿಸಿ. ಈ ಮಿಶ್ರಣವನ್ನು ಚೆನ್ನಾಗಿ ಕಲಸಿ ಈ ಮಿಶ್ರಣ ದಪ್ಪಗಾದ ಬಳಿಕ ಸಣ್ಣ ಉಂಡೆಗಳನ್ನು ಕಟ್ಟಿದರೆ, ರೋಸ್‌ ಲಡ್ಡು ರೆಡಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *