ತನ್ನ ಯೂಟ್ಯೂಬ್ ಆದಾಯದ ಮೊದಲ ಸಂಪಾದನೆಯಿಂದ ತಂದೆಗೆ ಚಿನ್ನದ ಉಂಗುರವನ್ನು ಉಡುಗೊರೆಯಾಗಿ ನೀಡಿದ ಪುಟ್ಟ ಬಾಲಕಿಯ ಹೃದಯಸ್ಪರ್ಶಿ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ನೆಟ್ಟಿಗರ ಮನ ಗೆದ್ದಿದೆ. ವಿಡಿಯೊದಲ್ಲಿ ಮುದ್ದಾದ ಬಾಲಕಿ ತಂದೆಯ ಮುಂದೆ ಮಂಡಿಯೂರಿ ಪ್ರೀತಿಯಿಂದ ಉಂಗುರ ತೊಡಿಸುತ್ತಿರುವ ದೃಶ್ಯ ಎಲ್ಲರ ಗಮನ ಸೆಳೆಯುತ್ತದೆ. ಮಗಳ ಮುಖದಲ್ಲಿನ ಹೆಮ್ಮೆ ಮತ್ತು ಸಂತೋಷ ಸ್ಪಷ್ಟವಾಗಿ ಕಾಣುತ್ತಿದ್ದರೆ, ಆಕೆಯ ಈ ಅಮೂಲ್ಯ ಉಡುಗೊರೆಯನ್ನು ಕಂಡ ತಂದೆ ಭಾವುಕರಾಗಿ ಮಗಳ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆಯುವ ಕ್ಷಣ ನೋಡುಗರ ಕಣ್ಣೀರನ್ನು ತರಿಸುತ್ತದೆ. ಬಳಿಕ ತಂದೆಯ ಆಶೀರ್ವಾದ ಪಡೆದುಕೊಂಡ ಬಾಲಕಿ ಸಂತೋಷದಿಂದ ಸಣ್ಣದಾಗಿ ನೃತ್ಯ ಮಾಡುವ ದೃಶ್ಯ ವಿಡಿಯೊಗೆ ಇನ್ನಷ್ಟು ಮಧುರತೆಯನ್ನು ತುಂಬಿದೆ. ಮಗಳು-ತಂದೆಯ ನಡುವಿನ ಅಪಾರ ಪ್ರೀತಿ, ಕೃತಜ್ಞತೆ ಮತ್ತು ಬಾಂಧವ್ಯದ ಈ ಅಪೂರ್ವ ಕ್ಷಣವನ್ನು ಕಂಡ ನೆಟ್ಟಿಗರು ಭಾವುಕರಾಗಿ ಮೆಚ್ಚುಗೆಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
