Video: ಆತುರದಿಂದ ಹಳಿ ದಾಟುವಾಗ ಬಂದೇ ಬಿಡ್ತು ರೈಲು, ಮಕ್ಕಳನ್ನು ಎದೆಗಪ್ಪಿ ಕುಳಿತ ಮಹಿಳೆ – Kannada News | Mother Shields Child on Railway Tracks as Train Passes Overhead

ಸಮಷ್ಟಿಪುರ, ಮೇ 19: ಬಿಹಾರದ ಸಮಷ್ಟಿಪುರದ ರೈಲ್ವೆ ನಿಲ್ದಾಣದಲ್ಲಿ ಮಹಿಳೆಯೊಬ್ಬರು ತಮ್ಮ ಮಕ್ಕಳೊಂದಿಗೆ ಆತುರದಿಂದ ಹಳಿ ದಾಟುವಾಗ ರೈಲು ಬಂದಿರುವ ವಿಡಿಯೋ ವೈರಲ್ ಆಗಿದೆ. ಶಹಪುರ್ ಪಟೋರಿ ರೈಲ್ವೆ ನಿಲ್ದಾಣದ ಬಳಿ ಈ ಘಟನೆ ನಡೆದಿದ್ದು, ತಾಯಿಯೊಬ್ಬರು ತನ್ನ ಪ್ರಾಣವನ್ನು ಪಣಕ್ಕಿಟ್ಟು ಇಬ್ಬರು ಮಕ್ಕಳನ್ನು ರಕ್ಷಿಸಿದ್ದಾರೆ. ಮಹಿಳೆಯ ಧೈರ್ಯ ಮತ್ತು ಸಹಾನುಭೂತಿಗೆ ಜನರಿಂದ ಪ್ರಶಂಸೆ ಗಳಿಸಿದೆ.

ವರದಿಗಳ ಪ್ರಕಾರ, ಮೂವರು ಮಹಿಳೆಯರು ಇಬ್ಬರು ಚಿಕ್ಕ ಮಕ್ಕಳೊಂದಿಗೆ ರೈಲ್ವೆ ಹಳಿಗಳನ್ನು ದಾಟುತ್ತಿದ್ದರು. ಅವರು ಆತುರದಿಂದ ಹಳಿಗಳನ್ನು ದಾಟಲು ಪ್ರಯತ್ನಿಸುತ್ತಿದ್ದಾಗ ಇದ್ದಕ್ಕಿದ್ದಂತೆ ಅತಿ ವೇಗದ ರೈಲು ಬಂದಿತ್ತು. ರೈಲು ತುಂಬಾ ಹತ್ತಿರದಲ್ಲಿ ಬಂದದ್ದನ್ನು ನೋಡಿ, ಅವರೆಲ್ಲರೂ ಭಯಭೀತರಾಗಿದ್ದರು ಮತ್ತು ಏನು ಮಾಡಬೇಕೆಂದು ತಿಳಿಯಲಿಲ್ಲ. ಇಂತಹ ಕಷ್ಟದ ಸಮಯದಲ್ಲಿ, ಒಬ್ಬ ತಾಯಿಯ ನಿರ್ಧಾರ ಎಲ್ಲರನ್ನೂ ಅಚ್ಚರಿಗೊಳಿಸಿತು. ತಡಮಾಡದೆ, ಆ ಮಹಿಳೆ ತನ್ನ ಇಬ್ಬರು ಮಕ್ಕಳನ್ನು ಹಳಿಯಿಂದ ತಳ್ಳಿ ಪ್ಲಾಟ್​ಫಾರಂ ಕಡೆ ಮಲಗಿಸಿದ್ದಾರೆ. ಯಾವುದೇ ಗಾಯಗಳಾಗದಂತೆ ತಡೆಯಲು ಮಕ್ಕಳಿಗೆ ಅಡ್ಡಲಾಗಿ ತಾಯಿ ಇದ್ದರು. ಮಹಿಳೆ ಗಾಯಗೊಂಡಿದ್ದರೂ ಕೂಡ ಮಕ್ಕಳಿಗೆ ಏನೂ ಆಗದಂತೆ ನೋಡಿಕೊಂಡಿದ್ದರು.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

 

Source link

Leave a Reply

Your email address will not be published. Required fields are marked *