Video: ಎತ್ತಿನ ಕಾಲು ಒತ್ತಿ ಸೇವೆ ಮಾಡಿದ ಮುದ್ದು ಮಕ್ಕಳು, ವೈರಲ್‌ ಆಯ್ತು ದೃಶ್ಯ – Kannada News | The adorable children who served by pressing the ox’s leg

ಪುಟಾಣಿಗಳು (little kids) ಏನು ಮಾಡಿದ್ರೂ ಕೂಡ ಚಂದನೇ. ಮುದ್ದು ಮಕ್ಕಳು ಮನೆಯ ಸಾಕು ಪ್ರಾಣಿಗಳ ಜತೆಗೆ ತುಂಟಾಟ ಆಡುವುದನ್ನು ನೋಡುವಾಗ ಖುಷಿಯೆನಿಸುತ್ತದೆ. ತನ್ನಮೇಲೆ  ಪ್ರೀತಿ ಕಾಳಜಿ ತೋರುವ ಮುದ್ದು ಮನಸ್ಸಿನ ಮಕ್ಕಳಿಗೆ ಕಾವಲಾಗಿ ನಿಲ್ಲುತ್ತವೆ. ಈ ದೃಶ್ಯ ನೋಡಿದರಂತೂ ಮುಗ್ಧ ಮನಸ್ಸುಗಳ ಶುದ್ಧ ಪ್ರೀತಿಗೆ ನೀವು ಕರಗುವುದು ಖಂಡಿತ. ಪುಟಾಣಿಗಳಿಬ್ಬರೂ ಎತ್ತಿನ ಕಾಲು ಒತ್ತಿ ಸೇವೆ ಮಾಡುವ ವಿಡಿಯೋ ವೈರಲ್ ಆಗಿದೆ. ಈ ದೃಶ್ಯ ನೋಡಿದ ನೆಟ್ಟಿಗರು ಮುದ್ದು ಮಕ್ಕಳು ಮೂಕ ಪ್ರಾಣಿಗಳ ಮೇಲೆ ಪ್ರೀತಿ ತೋರುವ ರೀತಿಯನ್ನು ಮೆಚ್ಚಿಕೊಂಡಿದ್ದಾರೆ.

Hallikar2022 ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ ಪುಟಾಣಿಗಳಿಬ್ಬರೂ ಎತ್ತಿನ ಪಕ್ಕದಲ್ಲಿ ಕುಳಿತಿಕೊಂಡಿದ್ದು, ಎತ್ತಿನ ಕಾಲುಗಳನ್ನು ಒತ್ತಿ ಸೇವೆ ಮಾಡುತ್ತಿರುವುದನ್ನು ನೀವು ನೋಡಬಹುದು.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ಶಾಲೆ ಬಿಟ್ಟೊಡನೆ ಪುಸ್ತಕವನ್ನು ಚರಂಡಿಗೆ ಎಸೆದು ಹೋದ ಪುಟಾಣಿ

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ, ಈ ಸನ್ನಿವೇಶ ನೋಡಿ ನನ್ನ ಕಣ್ಣಂಚಲಿ ನೀರು ತುಂಬಿ ಬಂದವು. ಎಂತ ನಿಷ್ಕಲ್ಮಶವಾದ ಪ್ರೀತಿ. ಈ ಮುಗ್ಧ ಮಕ್ಕಳು ಮತ್ತೆ ಬಸವಣ್ಣನ ಪ್ರೀತಿ ಬಾಂಧವ್ಯಗಳು ಹೇಳಲು ಎರಡು ಪದಗಳು ಸಾಲದು. ಈ ಸನ್ನಿವೇಶದ ಕ್ಷಣಗಳಿಗೆ ನಾನು ಎಂದೆಂದಿಗೂ ಚಿರಋಣಿ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಬಸವನ ಸೇವೆ ಮಾಡಿದ ಮುದ್ದು ಪುಟಾಣಿಗಳಿಗೆ ನನ್ನ ನಮಸ್ಕಾರಗಳು ಎಂದಿದ್ದಾರೆ. ಮತ್ತೊಬ್ಬರು, ಆಹಾ ಎಷ್ಟು ಸೊಗಸಾಗಿದೆ ಈ ದೃಶ್ಯ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 11:32 am, Thu, 26 February 26

Source link

Leave a Reply

Your email address will not be published. Required fields are marked *