Video: ಎದ್ದು ನಿಂತು ನಡೆಯಲು ಪ್ರಯತ್ನಿಸುತ್ತಿದ್ದ ಕಂದಮ್ಮನನ್ನು ಬೀಳದಂತೆ ತಡೆದ ತಾಯಾನೆ – Kannada News | The mother elephant prevented the calf, which was trying to stand up, from falling.

ತಾಯಿಯ (mother) ಪ್ರೀತಿಯೇ ಹಾಗೆ, ಸದಾ ಮಕ್ಕಳ ಕಾಳಜಿ ವಹಿಸುವ, ತೊಂದರೆಯಾಗದಂತೆ ನೋಡಿಕೊಳ್ಳುತ್ತಾಳೆ. ಈ ವಿಚಾರದಲ್ಲಿ ಪ್ರಾಣಿಗಳು ಕೂಡ ಹೊರತಾಗಿಲ್ಲ. ಮೂಕ ಪ್ರಾಣಿಗಳು ಕೂಡ ತನ್ನ ಕಂದಮ್ಮನ ಮೇಲೆ ವಿಶೇಷವಾದ ಪ್ರೀತಿ ಹಾಗೂ ಕಾಳಜಿ ತೋರುತ್ತವೆ. ಇದಕ್ಕೆ ಸಾಕ್ಷಿಯಾಗಿದೆ ಈ ದೃಶ್ಯ. ಎದ್ದು ನಿಲ್ಲಲು ಪ್ರಯತ್ನಿಸುತ್ತಿದ್ದ ಮರಿಯಾನೆಯನ್ನು (baby elephant) ಬೀಳದಂತೆ ತಾಯಾನೆ ತಡೆದಿದೆ. ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

ಫ್ಯೂಚರ್ ಫಾರ್ ಎಲಿಫೆಂಟ್ (futureforelephants)ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ಕ್ಲಿಪಿಂಗ್ ನಲ್ಲಿ ಆಗ ತಾನೇ ಹುಟ್ಟಿದ ಮರಿಯಾನೆಯೊಂದು ಎದ್ದು ನಿಲ್ಲಲು ಪ್ರಯತ್ನಿಸುತ್ತಿದೆ. ಇತ್ತ ತಾಯಾನೆ ತನ್ನ ಕಂದಮ್ಮ ತನ್ನ ಸೊಂಡಿಲಿನಿಂದ ಮರಿಯಾನೆ ಬೀಳದಂತೆ ತಡೆದು ನಿಲ್ಲಿಸುತ್ತಿರುವುದನ್ನು ನೋಡಬಹುದು.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ಗಾಯಗೊಂಡು ಕುಂಟುತ್ತಾ ನಡೆಯುತ್ತಿದ್ದ ಮಾಲಕಿಯನ್ನೇ ಅನುಕರಣೆ ಮಾಡಿದ ಗಜರಾಜ

ಈ ವಿಡಿಯೋ 2 ಮಿಲಿಯನ್ ಗೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಈ ಪುಟ್ಟ ಕಂದಮ್ಮ ನಡೆಯುತ್ತದೆ, ದೇವರು ಆ ಆತ್ಮವಿಶ್ವಾಸ ಕೊಟ್ಟಿದ್ದಾನೆ ಎಂದು ಹೇಳಿದ್ದಾರೆ. ಇನ್ನೊಬ್ಬರು, ಅಮ್ಮನಿಗಿಂತ ಮಿಗಿಲಾದದ್ದು ಯಾವುದು ಇಲ್ಲ ಎಂದಿದ್ದಾರೆ. ಮತ್ತೊಬ್ಬರು, ತಾಯಿ ಮಕ್ಕಳ ಬಾಂಧವ್ಯ ಹಾಗೆ, ನೋಡಲು ಎರಡು ಕಣ್ಣು ಸಾಲದು ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 11:28 am, Fri, 10 July 26

Source link

Leave a Reply

Your email address will not be published. Required fields are marked *